- ಹಳೆ ಕೃಷಿಗೆ ತಂತ್ರಜ್ಞಾನದ ತಳಕು…ರೈತರಿಗೆ ಹೊಸ ಬೆಳಕು!
- ಚಿತ್ರದುರ್ಗ, ರಾಯಚೂರು, ವಿಜಯಪುರದಲ್ಲಿ ಹೊಸ ಪ್ರಯತ್ನ
ವಿಶೇಷ ವರದಿ: ಗುರುರಾಜ ಮಠ( ಉತ್ತರ ಕರ್ನಾಟಕ)
ತಾಳಿಕೋಟೆ(ವಿಜಯಪುರ): ಟೆಕ್ನಾಲಜಿ ಬರೀ ಐಟಿಬಿಟಿ ಕಂಪನಿಗಳಿಗೆ ಅಷ್ಟೆ ಸೀಮಿತ ಅಲ್ಲ. ಅದೇ ತರಹ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡನೆ ಮಾಡುವ ಮೂಲಕ ಹೊಸ ಪ್ರಯೋಗ ಮಾಡಲಾಯಿತು.
ಡ್ರೋನ್ ಮೂಲಕ ತಾಳಿಕೋಟಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಕೃಷಿ ಇಲಾಖೆ ವಿಜಯಪುರ, ವರ್ಷ ಅಸೋಶಿಯೇಶನ್ ಚಿತ್ರದುರ್ಗ ಹಾಗೂ ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರ ಸಹಯೋಗದಲ್ಲಿ ಡ್ರೋನ್ ಮೂಲಕ ಜಮೀನಿಗೆ ಔಷಧಿ ಸಿಂಪಡಿಸುವ ವಿಧಾನದ ಮಾಹಿತಿ ಮತ್ತು ಪ್ರಾತ್ಯಕ್ಷಿಕತೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಗ್ರಾಮದ ರೈತರಿಗೆ ತಿಳಿಸಿದರು. ಈ ಮೂಲಕ ತಂತ್ರಜ್ಞಾನದ ಬಳಕೆ ಜಾಗೃತಿ ಮೂಡಿಸಿದರು.
ಡ್ರೋನ್ ಮೂಲಕ ಔಷದ ಸಿಂಪಡಣೆ ವಿಧಾನ ಹೇಗೆ?: ಒಂದು ಡ್ರೋನ್ 10, 15&20 ಲೀಟರ್ ಸಾಮಥ್ರ್ಯ ಹೊಂದಿದ್ದು, ಸಣ್ಣ ಕಣದಲ್ಲಿ ಸಿಂಪಡಣೆ ಆಗುತ್ತದೆ, 1 ಎಕರೆ ಜಮೀನಿಗೆ ಸುಮಾರು 10 ಲೀಟರ್ಗಳಷ್ಟು ಮಿಶ್ರಣವನ್ನು ಸಿಂಪಡಿಸಬಹುದು, ಒಂದು ನಿರ್ದಿಷ್ಟ ಮಾರ್ಗದಲ್ಲಿ ಮಾತ್ರ ಮಿಶ್ರಣವನ್ನು ಸಿಂಪಡಿಸಬಹುದು. ಮುಂದಿನ ದಿನಗಳಲ್ಲಿ ಇದರ ಖರೀದಿ ಮತ್ತು ಉಪಯೋಗದ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸುತ್ತೇವೆ ಎಂದು ಅಧಿಕಾರಿಗಳು ಹೇಳಿದರು.
ವಿಜಯಪುರ ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ ಪ್ರಕಾಶ ಚವ್ಹಾಣ, ತಾಳಿಕೋಟೆಯ ಕೃಷಿ ಅಧಿಕಾರಿಗಳಾದ ಮಹೇಶ ಜೋಷಿ, ಕಟ್ಟಿಮನಿ, ಸಹಾಯಕ ಕೃಷಿ ಅಧಿಕಾರಿಗಳಾದ ಬಿರಾದಾರ, ಪಾಲ್ಕಿ, ಸಿಬ್ಬಂದಿಯಾದ ಸಂಗಮೇಶ್ ಪಾಟೀಲ್, ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ರಾಮನಗೌಡ ಪಾಟೀಲ, ಪುರಸಭೆಯ ಸದಸ್ಯರಾದ ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪೂರ, ಮತ್ತು ಗ್ರಾಮಸ್ಥರಾದ ಶಶಿಧರ ಬೆನ್ನುರ, ಸಂಗಣ್ಣ ಧನ್ನೂರ, ಬಾಪುರಾವ್ ಹಡಲಗಿ ಮುಂತಾದವರು ಉಪಸ್ಥಿತರಿದ್ದರು. ಹೊಸ ಹೊಸ ತಂತ್ರಜ್ಞಾನ ದೊಂದಿಗೆ ಕೃಷಿಯನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡಯ್ಯುತ್ತಿರುವ ಕೃಷಿ ಇಲಾಖೆಯ ಈ ಕಾರ್ಯ ಶ್ಲಾಘನೀಯ ಹಾಗೂ ಮೆಚ್ಚುಗೆ ಪಡೆಯಿತು. ನಮ್ಮೂರ್ ಎಕ್ಸ್ಪ್ರೆಸ್ ಇಂತಹ ಕೃಷಿ ಸಾಧಕರಿಗೆ ಸಾಥ್ ನೀಡಲಿದೆ.