- ಮಳೆಯೋ..ಕರೋನಾವೋ..ಕೃತಕ ಅಭಾವವೋ..?
- ಈರುಳ್ಳಿ ಬಳಕೆಗೆ ಜನರ ಬ್ರೇಕ್..?
ಬೆಂಗಳೂರು: ಕರೋನಾ, ಮಳೆ, ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಇದೀಗ ಈರುಳ್ಳಿ ಬೆಲೆ ಕಣ್ಣೀರು ತರಿಸಲಿದೆ.
ರಾಜ್ಯದ ಬಹುತೇಕ ಕಡೆ ಈಗಾಗಲೇ ಬೆಲೆ 100-150ಕ್ಕೆ ಜಿಗಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ದರ ದುಬಾರಿಯಾಗಿದೆ.
ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಳೆದ ಕೆಲ ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. 150 ರೂ.ನತ್ತ ಈರುಳ್ಳಿ ಕೆಜಿ ಇದೆ. ಆದರೆ ರೈತರಿಗೆ 60-80 ರೂ ಸಿಕ್ಕರೆ ಹೆಚ್ಚು!. ಈರುಳ್ಳಿ ದರ ಹೆಚ್ಚಳದಿಂದ ಕರೋನಾ ಕಾರಣ ಹೋಟೆಲ್ ಮತ್ತು ಆಹಾರ ಪದಾರ್ಥ ತಯಾರಿಕಾ ಸಂಸ್ಥೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಕೈಯಲ್ಲಿಮೊದಲೇ ದುಡ್ಡಿಲ್ಲ. ಹೀಗಾಗಿ ಈರುಳ್ಳಿ ಬಳಕೆಯನ್ನೇ ಬಿಡುವ ಯೋಚನೆಯಲ್ಲಿದ್ದಾರೆ.