Author: Nammur Express Admin

ಇನ್ಮುಂದೆ ಚೆಕ್ ಕ್ಲಿಯರೆನ್ಸ್ ಸಖತ್ ಫಾಸ್ಟ್! – ಯಾವುದೇ ಅಕೌಂಟ್ ಆದ್ರೂ ಒಂದೇ ದಿನದಲ್ಲಿ ಹಣ ಸಿಗುತ್ತೆ – ಆರ್‌ಬಿಐ ಘೋಷಣೆ: ಗ್ರಾಹಕರಿಗೆ ಅನುಕೂಲ – ನೆಫ್ಟ್ ಹಣದ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ NAMMUR EXPRESS NEWS ಇನ್ನು ಮುಂದೆ ಚೆಕ್ ಹಾಕಿ ದಿನಗಟ್ಟಲೆ ಹಣಕ್ಕೆ ಕಾಯುವ ಅಗತ್ಯ ಇಲ್ಲ. ಚೆಕ್ ಕ್ಲಿಯರೆನ್ಸ್ ಅನ್ನು ಕೆಲವೇ ಗಂಟೆಗಳಲ್ಲಿ ತ್ವರಿತಗೊಳಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ತ್ವರಿತ ಚೆಕ್ ಪಾವತಿ ವಿಧಾನವು ಪಾವತಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಪ್ರಸ್ತುತ ಚೆಕ್ ಕ್ಲಿಯರೆನ್ಸ್ ಗೆ ಸುಮಾರು ಎರಡು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಬದಲಾವಣೆಯು ಚೆಕ್ ಕ್ಲಿಯರೆನ್ಸ್‌ಗೆ ತೆಗೆದುಕೊಳ್ಳುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗೆಯೇ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ಮತ್ತು ರಿಯಲ್ ಟೈಮ್ ಗ್ರಾಸ್‌ ಸೆಟಲ್‌ಮೆಂಟ್ (RTGS) ನೀಡುವ…

Read More

ಸಂಗೀತ ಕೇಳುತ್ತೆ ಈ ದನ! – ಯುವತಿಯ ಭಜನೆ ಹಾಡನ್ನು ಕೇಳಿ ಕಣ್ಣೀರು ಹಾಕಿದ ಗೂಳಿ – ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್ NAMMUR EXPRESS NEWS ಸಂಗೀತ ಕೇಳಿದರೆ ಕಲ್ಲು ಕೂಡಾ ಕರಗುತ್ತದೆ ಎಂಬ ಮಾತಿದೆ. ಸಂಗೀತದ ಶಕ್ತಿಯೇ ಅಂತಹದ್ದು, ಇದು ಮನಸ್ಸಿಗೆ ತಂಪು ನೀಡಿ, ದುಃಖ ದುಮ್ಮಾನಗಳಿಂದ ಭಾರವಾದ ಮನಸ್ಸನ್ನು ತಿಳಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಪ್ರಾಣಿಗಳು ಕೂಡಾ ಸಂಗೀತಕ್ಕೆ ಮನಸೋಲುತ್ತವೆ. ಇದಕ್ಕೆ ಉತ್ತಮ ನಿದರ್ಶನದಿಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯುವತಿಯ ಭಜನೆ ಹಾಡನ್ನು ಕೇಳಿ ಈಶಾ ಫೌಂಡೇಶನ್‌ ಗೋಶಾಲೆಯಲ್ಲಿರುವ ಬಲಾಢ್ಯ ಗೂಳಿಯಾದ ಭೋಲಾ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ. ಈಶಾ ಫೌಂಡೇಶನ್‌ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಗೋಶಾಲೆಯನ್ನು ಕೂಡಾ ನಡೆಸಲಾಗುತ್ತದೆ. ಈ ಗೋಶಾಲೆಯಲ್ಲಿ 630ಕ್ಕೂ ಹೆಚ್ಚು ಸ್ಥಳೀಯ ತಳಿಯ ಹಸುಗಳು ಮತ್ತು ಗೂಳಿಗಳಿವೆ. ಅವುಗಳಲ್ಲಿ ಭೋಲಾ ಹೆಸರಿನ ವಿಶೇಷ ಗೂಳಿಯೂ ಒಂದು. ಈ ಬಲಾಢ್ಯ ಗೂಳಿಯನ್ನು…

Read More

ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ.. ಹುಷಾರ್! – ವಯನಾಡು, ಶಿರೂರು, ಕೊಡಗು ಇನ್ನೆಷ್ಟು ಅನಾಹುತ ಬೇಕು? – ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಟ – ಮನುಷ್ಯನ ಅತೀ ದುರಾಸೆ ಅಂತ್ಯಕ್ಕೆ ಕಾರಣ ಆಗುತ್ತಾ? NAMMUR EXPRESS NEWS ಪ್ರಕೃತಿಯ ಸೌಂದರ್ಯವು ವರವೋ ಶಾಪವೋ ಎನ್ನುವ ಮಾತು ಇದೀಗ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಗ್ರಾಸವಾಗಿದೆ. ಮನುಷ್ಯನಿಗೆ ಏನೂ ಬೇಕೋ ಎಲ್ಲವನ್ನೂ ಪ್ರಕೃತಿ ಮಾತೆ ನೀಡಿದ್ದಾಳೆ. ಆದರೆ ಮನುಷ್ಯ ತನ್ನ ಸ್ವಾರ್ಥ ಹಾಗೂ ದುರಾಸೆಗಾಗಿ ಇಡೀ ನೈಸರ್ಗಿಕ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಡುತ್ತಿರುವ ಈ ಸಂದರ್ಭವೂ ಮನುಷ್ಯನನ್ನೇ ಬಲಿ ಪಡೆಯುತ್ತಾ ಇಡೀ ಮಾನವ ಸಂಕುಲವನ್ನೇ ಅಲುಗಾಡಿಸುತ್ತಿದೆ. ಬೆಟ್ಟ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು,ಭೂಮಿಯ ಸ್ಥಿರತೆಯನ್ನು ನಾಶ ಮಾಡುತ್ತಾ ಸಂಪೂರ್ಣ ಭೂಮಂಡಲವನ್ನೇ ಕಾಂಕ್ರೇಟ್ ಕಾಡನ್ನಾಗಿ ಪರಿವರ್ತಿಸುತ್ತಿರುವುದರಿಂದ ಪರಿಸರಮಾತೆಯೇ ತನ್ನಲ್ಲಿ ಉಳಿದ ಕೆಲವೇ ಮರಗಳನ್ನು  ಹಿಡಿದಿಟ್ಟುಕೊಳ್ಳುವ ಪ್ರಯತ್ನ ಪಡುತ್ತಿರುವದರ ಹಿನ್ನೆಲೆಯಲ್ಲಿ…

Read More

ಭಾರತ ಒಲಂಪಿಕ್ ಸಾಧನೆ ಸಾಕಾಗಲಿಲ್ಲ! – ಅಮೇರಿಕ 94, ಚೀನಾ 65, ಆಸ್ಟ್ರೇಲಿಯಾ 42 ಪದಕಗಳೊಂದಿಗೆ ಟಾಪರ್ – ಭಾರತ 3 ಪದಕದೊಂದಿಗೆ ಪಟ್ಟಿಯಲ್ಲಿ 67ನೇ ಸ್ಥಾನ – ಭರವಸೆ ಮೂಡಿಸಿದ ಕ್ರೀಡಾಪಟುಗಳು ಯಾರು ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಜುಲೈ 26ರಂದು ಆರಂಭವಾಗಿ ಆಗಸ್ಟ್ 11ರ ತನಕ ನಡೆಯುತ್ತಿರುವ ಐತಿಹಾಸಿಕ ಪ್ಯಾರಿಸ್ ಒಲಂಪಿಕ್ಸ್ ರೋಮಾಂಚನಕಾರಿ ಹಂತ ತಲುಪಿದ್ದು, ಒಂದಾದ ಮೇಲೆ ಒಂದರಂತೆ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವ ಭರವಸೆ ಮೂಡಿಸುತ್ತಿದ್ದಾರೆ. ಪ್ರಸ್ತುತ ಒಲಂಪಿಕ್ಸ್ ನಲ್ಲಿ ಭಾರತದಿಂದ ಒಟ್ಟು 117 ಅಥ್ಲೆಟ್ ಗಳು ಭಾಗವಹಿಸಿದ್ದು, ಇಬ್ಬರು ಕ್ರೀಡಾಪಟುಗಳು ಶೂಟಿಂಗ್ ವಿಭಾಗದಲ್ಲಿ ಮೂರು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಭರವಸೆ ಮೂಡಿಸಿದ ಚೋಪ್ರಾ, ಅವಿನಾಶ್ ಸಾಬ್ಲೆ ಟೋಕಿಯಾ ಒಲಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪ್ರಸಕ್ತ ಸಾಲಿನಲ್ಲಿಯೂ ಫೈನಲ್ ತಲುಪುವ ಮೂಲಕ ಭಾರತಾಂಬೆಗೆ ಚಿನ್ನದ ಪದಕದ ಮಾಲೆಯನ್ನು ಮುಡಿಗೇರಿಸುವ ವಿಶ್ವಾಸ ಮೂಡಿಸಿದ್ದಾರೆ. ಜೊತೆಗೆ ಪುರುಷರ 3000…

Read More

ಚಿಕ್ಕಮಗಳೂರು ಟಾಪ್ 3 ನ್ಯೂಸ್ ತಂದೆಯಿಂದ ಹಾರೆಯಿಂದ ಹೊಡೆದು ಮಗನ ಕೊಲೆ! – ಮೂಡಿಗೆರೆಯ ಇಂದಿರಾನಗರ ಎಂಬಲ್ಲಿ ಘಟನೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ ಇನ್ನಿಲ್ಲ ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ವಿರುದ್ಧ ಕಾಫಿನಾಡಲ್ಲಿ ಪ್ರತಿಭಟನೆ NAMMUR EXPRESS NEWS ಮೂಡಿಗೆರೆ: ತಂದೆಯೇ ತನ್ನ ಮಗನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ, ತಾಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಎಂಬಲ್ಲಿ ಈ ಘಟನೆ ನಡೆದಿದೆ. ತಂದೆ ಗೋಪಾಲಗೌಡ ತನ್ನ ಮಗ ಪ್ರಸನ್ನ(38)ಎಂಬುವರನ್ನು ಮಂಗಳವಾರ ರಾತ್ರಿ ಮಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇಂದಿರಾ ನಗರದ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ತಂದೆ ಹಾಗೂ ಮಗ ರಾತ್ರಿ ಪರಸ್ಪರ ಜಗಳ ಮಾಡಿಕೊಂಡಿದ್ದು ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಹಾರೆಯಿಂದ ಮಗನ ತಲೆಗೆ ಹೊಡೆದಿದ್ದು ತೀವ್ರ ಗಾಯಗೊಂಡ ಮಗ ಪ್ರಸನ್ನ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಗೋಪಾಲಗೌಡನನ್ನು…

Read More

ಕರಾವಳಿ ಕ್ರೈಂ ಸುದ್ದಿಗಳು ವ್ಯಕ್ತಿಯ ಜೀವ ತೆಗೆದ ಎಳೆನೀರು! – ಶಿರ್ವ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ದುರ್ಮರಣ – ಕಾರ್ಕಳ: ಮದ್ಯದ ನಶೆಯಲ್ಲಿ ರಸ್ತೆ ಮಧ್ಯೆ ಮಲಗಿದ ವ್ಯಕ್ತಿ – ಬೆಳ್ತಂಗಡಿ, ಉಡುಪಿ: ಕೋಳಿ ಅಂಕ, ಗ್ಯಾಂಗ್ ಅರೆಸ್ಟ್ – ಬಂಟ್ವಾಳ: ಬೈಕ್ ನಡುವೆ ಅಪಘಾತದಲ್ಲಿ ನಾಲ್ವರು ಆಸ್ಪತ್ರೆಗೆ NAMMUR EXPRESS NEWS ಉಡುಪಿ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್‌ ತಗುಲಿ ಕೂಲಿಕಾರ್ಮಿಕರೋರ್ವರು ಮೃತಪಟ್ಟ ಘಟನೆ ಶಿರ್ವ ನಡೀಬೆಟ್ಟು ಎಂಬಲ್ಲಿ ಆ.8ರಂದು ಗುರುವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ನಡೀಬೆಟ್ಟು ಪನಿಮಾರ್‌ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಎಂದು ಗುರುತಿಸಲಾಗಿದೆ. ಇವರು ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದರು. ಈ ವೇಳೆ ತೋಟದಲ್ಲಿರುವ ಹೈ ಟೆನ್ನನ್ ವಯ‌ರ್ ಕಬ್ಬಿಣದ ಸಲಾಕೆಗೆ ತಗಲಿ ಈ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆಯ ಮಾಲೀಕ ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ. ಬೆಳ್ತಂಗಡಿ : ಅಕ್ರಮ ಕೋಳಿ ಅಂಕ: ಐವರು ಅರೆಸ್ಟ್! ಬೆಳ್ತಂಗಡಿ: ಅಕ್ರಮ…

Read More

ನಾಗರಪಂಚಮಿ ವಿಶೇಷ ಏನು? – ನಾಗರ ಪಂಚಮಿ ಆಚರಣೆ ಹೇಗೆ? – ನಾಗನ ಪೂಜೆಯಿಂದ ಏನೇನು ಲಾಭ? NAMMUR EXPRESS NEWS ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗತ್ತೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು (ಪಂಚಮಿ) ಈ ಬಾರಿ ಆಗಸ್ಟ್ 9, 2024 ರಂದು ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ವರಮಹಾಲಕ್ಷ್ಮಿ ಹಬ್ಬ, ಕೃಷ್ಣಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ. ಕರ್ನಾಟಕ ನಾಗಬನಗಳ ಪ್ರದೇಶವಾಗಿದ್ದು, ಕರ್ನಾಟಕದಲ್ಲಿ ನಾಗಬನಗಳ ಹತ್ತಿರ ನಾಗದೇವತೆಯ ಮೂರ್ತಿಯನ್ನು ಸ್ಥಾಪಿಸಿ ಅದರ ಪೂಜೆಯನ್ನು ಮಾಡುವ ಪರಂಪರೆಯಿದೆ. ಮನೆಗಳ ಹತ್ತಿರದಲ್ಲಿಯೇ ನಾಗಬನಗಳಿದ್ದರೂ, ಅವುಗಳಿಂದ ಯಾರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬುದೇ ವಿಶೇಷನೀಯ . ನಾಗರಪಂಚಮಿಯು ನಾಗದೇವತೆಯ ಮಹತ್ವಪೂರ್ಣ ಹಬ್ಬವಾಗಿದ್ದು ಈ ದಿನ ದೇಶದೆಲ್ಲೆಡೆ…

Read More

ರಾಜಧಾನಿಯಲ್ಲಿ ಮಧ್ಯರಾತ್ರಿಯೂ ಬ್ಯುಸಿನೆಸ್! – ಹೋಟೆಲ್,ರೆಸ್ಟೋರೆಂಟ್, ಬಾರ್ ಮಾಲೀಕರಿಗೆ ಗುಡ್ ನ್ಯೂಸ್ – ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ – ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತ ಆದೇಶ ಜಾರಿ NAMMUR EXPRESS NEWS ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇನ್ನು ಮುಂದೆ ಮಧ್ಯರಾತ್ರಿ ಒಂದು ಗಂಟೆಯವರೆಗೆ ಬಾರ್ ಹೋಟೆಲ್ ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶವನ್ನು ನೀಡಿ ಸರ್ಕಾರ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾರ್, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶ ಕೋರಿ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೆ ಬೆಂಗಳೂರಿನಲ್ಲಿ ಮಾತ್ರ ಸದ್ಯ ಅವಕಾಶವನ್ನು ನೀಡಲಾಗಿದ್ದು, ಮುಂಜಾನೆ 6 ರಿಂದ ತಡರಾತ್ರಿ 1 ಗಂಟೆಯವರೆಗೆ ತೆರೆಯಲು ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರಬಿದ್ದಿದೆ. ರಾತ್ರಿ ಒಂದು ಗಂಟೆಯವರೆಗೆ ಹೋಟೆಲ್ ಅವಕಾಶ ನೀಡಿರುವ ಹಿನ್ನೆಲೆ ರಾಜ್ಯ ಸರ್ಕಾರದ ಆದೇಶವನ್ನು ಹೋಟೆಲ್ ಅಸೋಸಿಯೇಷನ್ ಸ್ವಾಗತ ಸರ್ಕಾರದ ಆದೇಶವನ್ನು ನಾವು ಸ್ವಾಗತಿಸಿದ್ದು ಇದರಿಂದ ಜನಸಾಮಾನ್ಯರಿಗೆ…

Read More

ಒತ್ತುವರಿ ತೆರವು ವಿರುದ್ಧ ಇದೀಗ ಜನಾಂದೋಲನ! – ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಪತ್ರ? – ರೈತರು, ಬಡವರ ಬದುಕು ಬೀದಿಗೆ ತಳ್ಳದಿರಿ: ಒತ್ತಾಯ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತನ್ನ ಗ್ರಾಮದ ರೈತರ ಹಿತದೃಷ್ಟಿಯಿಂದ ಮಾಡದಿರುವಂತೆ ಗ್ರಾಮ ಪಂಚಾಯ್ತಿ ವತಿಯಿಂದ ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ ಸಲ್ಲಿಕೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪಂಚಾಯ್ತಿಗಳಿಂದ ಮನವಿ ಸಲ್ಲಿಕೆಯಾಗಿದ್ದು ಕ್ರಮೇಣ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳಿಗೆ ವಿಸ್ತರಣೆಗೊಂಡರೂ ಅಚ್ಚರಿಯಿಲ್ಲ. ಮನವಿಯಲ್ಲಿ ಏನಿದೆ..? ಸರ್ಕಾರದ ಆದೇಶದಂತೆ ಒತ್ತುವರಿ ತೆರವಿಗೆ ಮುಂದಾದಲ್ಲಿ ರೈತರ ಮತ್ತು ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಭೂಮಿಗೆ ಈವರೆಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದೆ 50,53,57,94C ಪಾರಂಪರಿಕ ಅರಣ್ಯ ಹಕ್ಕು ಅನ್ವಯ ಯಾವುದೇ ಹಕ್ಕುಪತ್ರ ಮಂಜೂರು ಮಾಡಿಲ್ಲ.…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮಗೆ ಮಾನಸಿಕ ನೆಮ್ಮದಿ ಸಿಗಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರೀತಿ ಪಾತ್ರರೊಂದಿಗಿನ ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಇಂದು ಮನೆಗೆ ಅತಿಥಿ ಬರಬಹುದು. ಆಸ್ತಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಇಂದು ಉತ್ತಮ ದಿನ. ಕೆಲವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಹುದು. ** ವೃಷಭ ರಾಶಿ : ಆರೋಗ್ಯದ ಬಗ್ಗೆ ಕಾಳಜಿ ಇರಬಹುದು, ಆದರೆ ಗಂಭೀರವಾದ ಸಮಸ್ಯೆ ಏನೂ ಇರುವುದಿಲ್ಲ. ಆದರೂ ಮನಸ್ಸು ಗೊಂದಲಮಯವಾಗಿರುತ್ತದೆ. ಅಜ್ಞಾತ ಭಯವು ನಿಮ್ಮನ್ನು ಕಾಡುತ್ತದೆ. ಹೂಡಿಕೆಯಿಂದ ಆರ್ಥಿಕ ನಷ್ಟದ ಲಕ್ಷಣಗಳಿವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯಂತರವಾಗಿ ನಡೆಯುತ್ತವೆ.…

Read More