Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಅಪಾಯಗಳು ಸಹ ಎದುರಾಗಬಹುದು. ಆದರೆ ಹೆದರಬೇಡಿ, ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮಗೆ ಇಂದು ಸಿಗುವ ಹೊಸ ಅವಕಾಶಗಳಿಂದ ಖಂಡಿತ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ** ವೃಷಭ ರಾಶಿ : ನಿಮ್ಮ ಪರಿಶ್ರಮದ ಫಲವನ್ನು ಪಡೆಯಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಮೆಚ್ಚಿ ಹೋಗಳಬಹುದು. ** ಮಿಥುನ…

Read More

ಶೃಂಗೇರಿಯಲ್ಲಿ ನಾಪತ್ತೆಯಾಗಿದ್ದ ಜ್ಯೋತಿಷಿ ಉಡುಪಿಯಲ್ಲಿ ಪತ್ತೆ..! – ಕಾರಿನ ಬಳಿ ಹೋಗಿದ್ದ ಜ್ಯೋತಿಷಿ ನಾಪತ್ತೆ ಆಗಿದ್ದು ಹೇಗೆ? – ಕಾಣೆಯಾದ ಕಥೆಯೇ ರೋಚಕ: ಮಾಯ ಆಗಿದ್ರಾ? NAMMUR EXPRESS NEWS ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಸನ್ಮಾನ ಸ್ವೀಕರಿಸಲು ಬಂದಿದ್ದ ಆಂಧ್ರ ಪ್ರದೇಶದ ಖ್ಯಾತ ಜ್ಯೋತಿಷಿಗಳೊಬ್ಬರು ಕೆಲವು ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದರು. ಈ ಘಟನೆ ಅವರ ಕುಟುಂಬಸ್ಥರಲ್ಲಿ ಹಾಗೂ ಶೃಂಗೇರಿ ಜನತೆಯಲ್ಲಿ ತೀವ್ರ ಆತಂಕವನ್ನುಂಟು ಮಾಡಿತ್ತು. ಜ್ಯೋತಿಷಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೋಲೀಸರು ಅವರನ್ನು ಉಡುಪಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕಾಣೆಯಾದ ದಿನದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇದರಿಂದ ಪೋಲೀಸರಿಗೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನಂತರ ಉಡುಪಿಗೆ ಬಂದಾಗ ಮೊಬೈಲ್ ಆನ್ ಆಗಿದ್ದು ಆಗ ಅವರನ್ನು ಸಂಪರ್ಕಿಸಿ ಕರೆತರಲಾಗಿದೆ. ಶೃಂಗೇರಿಗೆ ಬಂದವರು ಉಡುಪಿಗೆ ಹೋಗಿದ್ದು ಯಾಕೆ ಅವರಿಗೆ ಗೊತ್ತಿಲ್ಲ., ಶೃಂಗೇರಿಯಲ್ಲಿ ತನ್ನ ಕಾರಿನ ಬಳಿ ಹೋದ ಜ್ಯೋತಿಷಿಗಳು ದಿಢೀರ್ ನಾಪತ್ತೆಯಾಗಿ ಉಡುಪಿಯಲ್ಲಿ ಪತ್ತೆಯಾಗಿದ್ದು ರೋಚಕ ಸಂಗತಿಯಾಗಿದೆ. ಸಿಕ್ಕ ಜ್ಯೋತಿಷಿಗಳನ್ನ…

Read More

ನೋಡ ನೋಡುತ್ತಾ ಸರ್ಕಾರಿ ಬಸ್ ಭಸ್ಮ! – ಸಾಗರದಲ್ಲಿ ನಡೆದ ಘಟನೆ: 12 ಪ್ರಯಾಣಿಕರು ಪಾರು – ಶಿವಮೊಗ್ಗ: ಮಹಿಳೆಗೆ ವಂಚನೆ: ಬಿಜೆಪಿ ಯುವ ನಾಯಕ ಅರೆಸ್ಟ್! – ಗೋಬಿ ಮಂಚೂರಿಗೆ ಹಾನಿಕಾರಕ ಕಲರ್: ಎಚ್ಚರಿಕೆ NAMMUR EXPRESS NEWS ಸಾಗರ: ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ ಬೆಂಕಿಗಾಹುತಿಯಾಗಿದ್ದು ದುರಂತ ತಪ್ಪಿದೆ. ಪ್ರಯಾಣಿಕರನ್ನು ಹೊತ್ತು ಸಾಗುತಿದ್ದ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಮಂಗಳವಾರ ಬೆಳಿಗ್ಗೆ ಬೆಂಕಿಗೆ ಆಹುತಿ ಆಗಿದೆ. ಭಟ್ಕಳದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಬರುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಬಸ್ಸಿನಲ್ಲಿ ಸುಮಾರು 12 ಜನ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್ ಎಲ್ಲರೂ…

Read More

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಸಜ್ಜು! – ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಆರಗ ಜ್ಞಾನೇಂದ್ರ ಅವರಿಗೆ ಮನವಿ – ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಹೋರಾಟ NAMMUR EXPRESS NEWS ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಬಹುದಿನಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳು ಸಿದ್ಧಗೊಳ್ಳುತ್ತಿವೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡುವ ಕುರಿತು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಈಗಾಗಲೇ ಶಿಕ್ಷಕ ಸಂಘ ಹೋರಾಟಕ್ಕೆ ಸಜ್ಜುಗೊಂಡಿದೆ.…

Read More

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು ಹೊದಲ ಶಾಲೆ ಹಳೆ ವಿದ್ಯಾರ್ಥಿ, ಉದ್ಯಮಿ ಎಚ್.ಜಿ. ಚಂದ್ರಶೇಖರ್ ಅವರಿಗೆ ಡಾಕ್ಟರೇಟ್ – ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ – ತೀರ್ಥಹಳ್ಳಿ ವಿದ್ಯಾರ್ಥಿನಿ ನಿಶಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ ಹೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರೋಟರಿ, ರೆಡ್ ಕ್ರಾಸ್ ಹಾಗೂ ಟೂಡ ಮಾಜಿ ಅಧ್ಯಕ್ಷರು , ಪ್ರಸಿದ್ಧ ಕೈಗಾರಿಕೋದ್ಯಮಿಗಳೂ, ಕೊಡುಗೈದಾನಿಗಳೂ ಆದ ಎಚ್.ಜಿ. ಚಂದ್ರಶೇಖರ್ ಅವರಿಗೆ ತುಮಕೂರು ವಿಶ್ವವಿಧ್ಯಾಲಯವು, ಆಗಸ್ಟ್ ಏಳರಂದು ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುವುದಾಗಿ ಘೋಷಿಸಿದೆ. ಹೆಚ್.ಜಿ. ಚಂದ್ರಶೇಖರ್ ಅವರಿಗೆ ತೀರ್ಥಹಳ್ಳಿ ಜನತೆಯ ಪರವಾಗಿ ಅಭಿನಂದನೆಗಳು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿ ಮಕ್ಕಳ ಸಾಧನೆ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ನಡೆದ ವಿದ್ಯಾಭಾರತಿಯ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸೇವಾಭಾರತಿಯ ವಿದ್ಯಾರ್ಥಿಗಳು 2 ಸ್ಪರ್ಧೆಗಳಲ್ಲಿ ಪ್ರಥಮ, ಎರಡು ಸ್ಪರ್ಧೆಗಳಲ್ಲಿ ದ್ವಿತೀಯ ಹಾಗೂ ನಾಲ್ಕು ಸ್ಪರ್ಧೆಗಳಲ್ಲಿ…

Read More

ವಿಶ್ವ ಕುಂದಾಪುರ ದಿನ ಆಚರಿಸಿದ ಬಾರ್ಕೂರು ರೋಟರಿ ಕ್ಲಬ್! – ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮದಲ್ಲಿ ಗಮನ ಸೆಳೆದ ವೇದಿಕೆ – ಮನು ಹಂದಾಡಿ ಸೇರಿ ಅನೇಕ ಗಣ್ಯರ ಸಮಾಗಮ NAMMUR EXPRESS NEWS ಬ್ರಹ್ಮಾವರ: ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಬಾರ್ಕೂರು ರೋಟರಿ ಕ್ಲಬ್ ಇವರ ಆಶ್ರಯದಲ್ಲಿ ಬಾರ್ಕೂರು ರೋಟರಿ ಭವನದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗಿದ್ದು, ಸಿರಿ ಓಲೆ ತಳಿರು ತೋರಣಗಳಿಂದ ಕಲಾತ್ಮಕವಾಗಿ ರಚಿಸಲ್ಪಟ್ಟ ಸುಂದರ ವೇದಿಕೆಯಲ್ಲಿ ದೀಪ ಬೆಳಗಿಸಿ ತೆಂಗಿನ ಹೂ ಗೊನೆಯನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ವೇದಿಕೆಯ ಮುಂಭಾಗದಲ್ಲಿ ಬಾರ್ಕೂರಿನ ಪ್ರಸಿದ್ಧ ರಂಗವಲ್ಲಿ ಕಲಾವಿದೆ ವಿಶಾಲಮಹೇಶ್ ಪೂಜಾರಿ ಅವರು ರಂಗವಲ್ಲಿ ರಚಿಸಿದ ಕುಂದಾಪ್ರ ಕನ್ನಡದ ಲೋಗೋ ಹಾಗೂ ಕೂಡ್ಲಿ ಶ್ರೀ ಸುದರ್ಶನ ಉಡುಪರ ಸಂಗ್ರಹದಲ್ಲಿರುವ ಬಹಳ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗೃಹಬಳಕೆಯ ಹಾಗೂ ಕಲಾತ್ಮಕ ವಸ್ತುಗಳನ್ನು ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ಜೋಡಿಸಿದ್ದು ನೆರೆದವರ ಮನಸೆಳೆಯಿತು.…

Read More

ಮೈಸೂರು ಚಲೋ ಪಾದಯಾತ್ರೆಯಲ್ಲಿ ಜೀವರಾಜ್ – ಸಿದ್ದರಾಮಯ್ಯ ರಾಜೀನಾಮೆಗೆ ಜೀವರಾಜ್ ಪಟ್ಟು – ಚಿಕ್ಕಮಗಳೂರು ಜಿಲ್ಲೆಯಿಂದ ಸಾವಿರಾರು ಜನ NAMMUR EXPRESS NEWS ಎನ್ ಆರ್ ಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಶೃಂಗೇರಿ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್‌ರವರು ಪಾಲ್ಗೊಂಡು ಬಿಜೆಪಿ ಜೆಡಿಎಸ್ ನಾಯಕರೊಡನೆ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 3ರಿಂದ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜೀವರಾಜ್‌ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜತೆ ಮಾತನಾಡಿದ ಅವರು, ಜನರಿಗೆ ಬಿಟ್ಟಿ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಭ್ರಷ್ಟಾಚಾರ ಮಾಡಿ,ಜನರಿಗೆ ನೀಡಿದ ಭರವಸೆಯನ್ನೂ ಈಡೇರಿಸದೆ, ಜನರ ಹಣವನ್ನು ಲೂಟಿ ಮಾಡಿ ರಾಜ್ಯದ ಜನತೆಗೆ ಮೊಸ ಮಾಡಿದ್ದಾರೆ. ಮೂರು ದಿನಗಳಿಂದಲೂ ಪಾದಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಭಾಗವಹಿಸುತ್ತಿರುವ…

Read More

ಕೊಪ್ಪಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ – ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಪರಿಶೀಲನೆ – ಶಾಸಕ ರಾಜೇಗೌಡ, ಅಧಿಕಾರಿಗಳಿಂದ ಹಾನಿ ಬಗ್ಗೆ ಮಾಹಿತಿ NAMMUR EXPRESS NEWS ಕೊಪ್ಪ: ಮಳೆ ಅಬ್ಬರಕ್ಕೆ ಈ ವರ್ಷ ಅತೀ ಹೆಚ್ಚು ನಷ್ಟವಾದ ತಾಲೂಕಿನ ಪೈಕಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಕೂಡ ಒಂದು. ಇದೀಗ ಕೊಪ್ಪ ತಾಲೂಕಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತದಿಂದ ಹಾನಿಕೊಂಡಿರುವ ಕೊಪ್ಪ-ಜಯಪುರ ಮುಖ್ಯರಸ್ತೆಯಲ್ಲಿ ಅವರು ಪರಿಶೀಲನೆ ಮಾಡಿದರು. ಕೊಪ್ಪ ತಾಲೂಕಿನ ಜಯಪುರ-ಕೊಪ್ಪ ಮುಖ್ಯ ರಸ್ತೆ ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಕೆ.ಆರ್.ಇ.ಡಿ.ಎಲ್ ಅಧ್ಯಕ್ಷರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು,ಕೊಪ್ಪ ತಹಶೀಲ್ದಾರ್, ಕಂದಾಯ…

Read More

ಟಾಪ್ ನ್ಯೂಸ್ ಕರಾವಳಿ ಪಬ್ಬಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ: ನಾಲ್ವರು ಅಂದರ್‌! – ಮಂಗಳೂರಿನ ಪಬ್ ಒಂದರಲ್ಲಿ ಘಟನೆ: ಪುತ್ತೂರು ಯುವಕರ ಬಂಧನ -ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು – ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ! – ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ! NAMMUR EXPRESS NEWS ಮಂಗಳೂರು: ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32) ಪ್ರೀತೀಶ್ (33) ಬಂಧನ ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ಗೆ ಜುಲೈ ೩ರಂದು ಮಹಿಳೆಯೊಬ್ಬರು ತನ್ನ ಗೆಳತಿಯೊಂದಿಗೆ ತೆರಳಿದ್ದರು. ಈ ವೇಳೆ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರ ತಂಡ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜೊತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ…

Read More

ರಾಜಧಾನಿಯಲ್ಲಿ ಕರಾವಳಿಗರ ಆಶಾಡಿ ಹಬ್ಬ! – ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಕಾರ್ಯಕ್ರಮ – ಕರಾವಳಿ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ – ಕೋಟಾ, ಗೋವಿಂದ ಬಾಬು ಪೂಜಾರಿ, ರಮೇಶ್ ಭಟ್ ಸೇರಿ ಗಣ್ಯರು ಹಾಜರ್ NAMMUR EXPRESS NEWS ಕರಾವಳಿ: ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಆಶಾಡಿ ಹಬ್ಬ 2024 ಬಸವೇಶ್ವರನಗರ ಬೆಂಗಳೂರಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದು, ಆಶಾಡಿ ಹಬ್ಬ ಜನರ ಮನ ಸೆಳೆದಿದೆ. ಕರಾವಳಿ ಸಿರಿ ಕ್ಲಬ್ ಬೆಂಗಳೂರು ಸದಸ್ಯರು ಮತ್ತು ಬೆಂಗಳೂರು ಕುಂದಗನ್ನಡಿಗರು ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಪಂಚಪರ್ವ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯುನೇತಾಜಿ ಗ್ರೌಂಡ್ ಅಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುಂದಾಪುರ ಬಯಲಾಟ ಪ್ರಶಸ್ತಿ ಪ್ರಧಾನ ಹಾಗೂ ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದಿಂದ ಮಾಡಿರುವ ಕಂಗೀಲು ನೃತ್ಯ ಪ್ರದರ್ಶನಕ್ಕೆ ಬೆಂಗಳೂರು ಕುಂದ ಕನ್ನಡಿಗರು ಮನ ಸೋತರು. ಇಡೀ ಕಾರ್ಯಕ್ರಮಕ್ಕೆ ಹೊಸ ಹುರುಪನ್ನು ತಂದ ತಂಡ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಕಾರ್ಯಕ್ರಮದಲ್ಲಿ…

Read More