ಮೈಸೂರು ಚಲೋ ಪಾದಯಾತ್ರೆಯಲ್ಲಿ ಜೀವರಾಜ್ – ಸಿದ್ದರಾಮಯ್ಯ ರಾಜೀನಾಮೆಗೆ ಜೀವರಾಜ್ ಪಟ್ಟು – ಚಿಕ್ಕಮಗಳೂರು ಜಿಲ್ಲೆಯಿಂದ ಸಾವಿರಾರು ಜನ NAMMUR EXPRESS NEWS ಎನ್ ಆರ್ ಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಶೃಂಗೇರಿ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಶಾಸಕರಾದ ಡಿ.ಎನ್ ಜೀವರಾಜ್‌ರವರು ಪಾಲ್ಗೊಂಡು ಬಿಜೆಪಿ ಜೆಡಿಎಸ್ ನಾಯಕರೊಡನೆ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 3ರಿಂದ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡ ಜೀವರಾಜ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜತೆ ಮಾತನಾಡಿದ ಅವರು, ಜನರಿಗೆ ಬಿಟ್ಟಿ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಭ್ರಷ್ಟಾಚಾರ ಮಾಡಿ,ಜನರಿಗೆ ನೀಡಿದ ಭರವಸೆಯನ್ನೂ ಈಡೇರಿಸದೆ, ಜನರ ಹಣವನ್ನು ಲೂಟಿ ಮಾಡಿ ರಾಜ್ಯದ ಜನತೆಗೆ ಮೊಸ ಮಾಡಿದ್ದಾರೆ. ಮೂರು ದಿನಗಳಿಂದಲೂ ಪಾದಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಭಾಗವಹಿಸುತ್ತಿರುವ…
Author: Nammur Express Admin
ಕೊಪ್ಪಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ – ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಪರಿಶೀಲನೆ – ಶಾಸಕ ರಾಜೇಗೌಡ, ಅಧಿಕಾರಿಗಳಿಂದ ಹಾನಿ ಬಗ್ಗೆ ಮಾಹಿತಿ NAMMUR EXPRESS NEWS ಕೊಪ್ಪ: ಮಳೆ ಅಬ್ಬರಕ್ಕೆ ಈ ವರ್ಷ ಅತೀ ಹೆಚ್ಚು ನಷ್ಟವಾದ ತಾಲೂಕಿನ ಪೈಕಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಕೂಡ ಒಂದು. ಇದೀಗ ಕೊಪ್ಪ ತಾಲೂಕಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತದಿಂದ ಹಾನಿಕೊಂಡಿರುವ ಕೊಪ್ಪ-ಜಯಪುರ ಮುಖ್ಯರಸ್ತೆಯಲ್ಲಿ ಅವರು ಪರಿಶೀಲನೆ ಮಾಡಿದರು. ಕೊಪ್ಪ ತಾಲೂಕಿನ ಜಯಪುರ-ಕೊಪ್ಪ ಮುಖ್ಯ ರಸ್ತೆ ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಕೆ.ಆರ್.ಇ.ಡಿ.ಎಲ್ ಅಧ್ಯಕ್ಷರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು,ಕೊಪ್ಪ ತಹಶೀಲ್ದಾರ್, ಕಂದಾಯ…
ಟಾಪ್ ನ್ಯೂಸ್ ಕರಾವಳಿ ಪಬ್ಬಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ: ನಾಲ್ವರು ಅಂದರ್! – ಮಂಗಳೂರಿನ ಪಬ್ ಒಂದರಲ್ಲಿ ಘಟನೆ: ಪುತ್ತೂರು ಯುವಕರ ಬಂಧನ -ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು – ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ! – ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ! NAMMUR EXPRESS NEWS ಮಂಗಳೂರು: ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32) ಪ್ರೀತೀಶ್ (33) ಬಂಧನ ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ಗೆ ಜುಲೈ ೩ರಂದು ಮಹಿಳೆಯೊಬ್ಬರು ತನ್ನ ಗೆಳತಿಯೊಂದಿಗೆ ತೆರಳಿದ್ದರು. ಈ ವೇಳೆ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರ ತಂಡ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜೊತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ…
ರಾಜಧಾನಿಯಲ್ಲಿ ಕರಾವಳಿಗರ ಆಶಾಡಿ ಹಬ್ಬ! – ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಕಾರ್ಯಕ್ರಮ – ಕರಾವಳಿ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ – ಕೋಟಾ, ಗೋವಿಂದ ಬಾಬು ಪೂಜಾರಿ, ರಮೇಶ್ ಭಟ್ ಸೇರಿ ಗಣ್ಯರು ಹಾಜರ್ NAMMUR EXPRESS NEWS ಕರಾವಳಿ: ಟೀಮ್ ಕುಂದಾಪುರಿಯನ್ಸ್ ಆಯೋಜಿಸಿದ ಆಶಾಡಿ ಹಬ್ಬ 2024 ಬಸವೇಶ್ವರನಗರ ಬೆಂಗಳೂರಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದು, ಆಶಾಡಿ ಹಬ್ಬ ಜನರ ಮನ ಸೆಳೆದಿದೆ. ಕರಾವಳಿ ಸಿರಿ ಕ್ಲಬ್ ಬೆಂಗಳೂರು ಸದಸ್ಯರು ಮತ್ತು ಬೆಂಗಳೂರು ಕುಂದಗನ್ನಡಿಗರು ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಪಂಚಪರ್ವ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯುನೇತಾಜಿ ಗ್ರೌಂಡ್ ಅಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುಂದಾಪುರ ಬಯಲಾಟ ಪ್ರಶಸ್ತಿ ಪ್ರಧಾನ ಹಾಗೂ ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದಿಂದ ಮಾಡಿರುವ ಕಂಗೀಲು ನೃತ್ಯ ಪ್ರದರ್ಶನಕ್ಕೆ ಬೆಂಗಳೂರು ಕುಂದ ಕನ್ನಡಿಗರು ಮನ ಸೋತರು. ಇಡೀ ಕಾರ್ಯಕ್ರಮಕ್ಕೆ ಹೊಸ ಹುರುಪನ್ನು ತಂದ ತಂಡ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಕಾರ್ಯಕ್ರಮದಲ್ಲಿ…
ಮಲ್ನಾಡ್ ಪ್ರಮುಖ ಸುದ್ದಿ ಶೃಂಗೇರಿಯಲ್ಲಿ ಸರಣಿ ಕಳ್ಳತನ! – ಮೆಡಿಕಲ್, ಅಕ್ಕಪಕ್ಕ ದಿನಸಿ ಅಂಗಡಿಯಲ್ಲಿ ಕಳ್ಳತನ – ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ: ತನಿಖೆ – ಶಿವಮೊಗ್ಗ: ಹಲಗೆ ಕದಿಯಲು ಬಂದು ಅತ್ತೆಯ ಕೊಂದ! – 7 ಕೆಜಿ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್ NAMMUR EXPRESS NEWS ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸರಣಿ ಕಳ್ಳತನವಾಗಿದ್ದು ಕಳ್ಳರಿಗಾಗಿ ಪೋಲೀಸ್ ತಂಡ ಶೋಧ ನಡೆಸುತ್ತಿದ್ದಾರೆ. ಶೃಂಗೇರಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಇರುವ ಮೆಡಿಕಲ್ ಹಾಗೂ ಅಕ್ಕ ಪಕ್ಕದ ದಿನಸಿ ಅಂಗಡಿಯಲ್ಲಿ ತಡ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮೊನ್ನೆ ತಾಲೂಕಿನ ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಹಣ,ಚಿನ್ನ ದೊಚಿ ಪಪರರಾರಿಯಾಗಿದ್ದರು. ಈ ಎರಡು ಘಟನೆ ನಡೆದ ಸ್ಥಳಕ್ಕೆ ಶೃಂಗೇರಿ ಪೋಲೀಸ್ ಅಧಿಕಾರಿಗಳಾದ ಜಕ್ಕಣನವರ್ ತಂಡ ಭೇಟಿ ನೀಡಿ ಪರಿಶೀಲಿಸಿದೆ ಹಾಗೂ ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲಗೆ ಕದಿಯಲು ಬಂದು ಅತ್ತೆಯ ಕೊಂದ! ಶಿವಮೊಗ್ಗ: ಕೊಲೆ ಪ್ರಕರಣ ಆರೋಪಿಯನ್ನು…
ತೀರ್ಥಹಳ್ಳಿಯ ಭೂ ಬ್ಯಾಂಕ್ ಲಾಭದ ಸಾಧನೆ! – 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿ ಅನೇಕ ಹಿರಿಯ ಸಹಕಾರಿಗಳ ನೆರವಿಂದ ಶುರುವಾದ ಸಂಸ್ಥೆ – ತೀರ್ಥಹಳ್ಳಿ ರೈತರಿಗೆ ಆಸರೆಯಾದ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್ – ಸಂಸ್ಥೆ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್ ಮಾಹಿತಿ NAMMUR EXPRESS NEWS ತೀರ್ಥಹಳ್ಳಿ: 84 ವರ್ಷದ ಇತಿಹಾಸದಲ್ಲೇ ತೀರ್ಥಹಳ್ಳಿಯ ಭೂ ಬ್ಯಾಂಕ್ ಎರಡು ಬಾರಿ ಅತ್ಯಂತ ಹೆಚ್ಚು ಲಾಭಗಳಿಸಿದ್ದು,ತೀರ್ಥಹಳ್ಳಿ ಭೂ ಬ್ಯಾಂಕ್ 1 ಕೋಟಿ 1 ಲಕ್ಷ ಕ್ಕೂ ಹೆಚ್ಚು ಲಾಭ ಇದು ಈ ಅವಧಿಯ ಲಾಭ ಪಡೆದಿದೆ. ಸೋಮವಾರ ಪಿ ಎಲ್ ಡಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್, ಸುಮಾರು 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲ…
ಕಂದಾಯ ಜಾಗ ಒತ್ತುವರಿಯೂ ತೆರವು! – ಇಂದಿನಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ – ಹಳೆ ಕಾಯ್ದೆಯ ಪ್ರಕಾರವೇ ತೆರವು: ಅಧಿಕಾರಿಗಳಿಗೆ ಸೂಚನೆ NAMMUR EXPRESS NEWS ಶೃಂಗೇರಿ: ಶೃಂಗೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ ಭೇಟಿ ನೀಡಿದ್ದು, ಒತ್ತುವರಿ ತೆರವು ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಕ್ರಮ ಒತ್ತುವರಿ ಬಗ್ಗೆ ಸ್ಪಷ್ಟನೆ ನೀಡಿದ ಕಠಾರಿಯಾ ಜಿಲ್ಲೆಯಲ್ಲಿ ಬೇರೆ ಬೇರೆ ಕಾಯ್ದೆಗಳಿಂದ ಅಕ್ರಮ ಸಕ್ರಮ ಮಾಡಲಾಗಿದ್ದು ಕಂದಾಯ ಜಾಗದ ಒತ್ತುವರಿ ಕಂಡಲ್ಲಿ ತೆರವು ಮಾಡುತ್ತೇವೆ. ನಾವು ಜನ ಹಾಗೂ ಅರಣ್ಯ ಎರಡನ್ನೂ ಉಳಿಸಿಕೊಳ್ಳಬೇಕಾಗಿದೆ ಎಂದರು. ಫಾರಂ ನಂ.50,53,57 ಎಲ್ಲಾ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು ಹೊಸದಾಗಿ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಕಾಯ್ದೆಯ ಪ್ರಕಾರವೇ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವರು ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಇದರಿಂದ ಸರ್ಕಾರಿ ಕಟ್ಟಡ,ಶಾಲೆ,ಆಸ್ಪತ್ರೆ ನಿರ್ಮಿಸಲು ಕಂದಾಯ ಇಲಾಖೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಅಂತಹ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು. ಕಳೆದ ಹತ್ತು ವರ್ಷಗಳಿಂದ ಮಲೆನಾಡಿನಲ್ಲಿ…
ಶನೇಶ್ವರ ಸ್ವಾಮಿ ಸ್ವಾಮಿಗೆ ಉಘೇ ಉಘೇ..! – ಶ್ರದ್ಧಾ ಭಕ್ತಿಯ ವೈಭವದ ಶನೇಶ್ವರ ಸ್ವಾಮಿ ಮೆರವಣಿಗೆ – ಭಕ್ತರ ಗಮನ ಸೆಳೆದ ದೇವರುಗಳ ಮೆರವಣಿಗೆ NAMMUR EXPRESS NEWS ಹೊಸದುರ್ಗ: ಹೊಸದುರ್ಗ ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ಹುಳಿಯಾರು ರಸ್ತೆಯಲ್ಲಿನ ನೂತನವಾಗಿ ಲೋಕಾರ್ಪಣೆಗೆ ಸಿದ್ದಗೊಂಡಿರುವ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ದೇವರುಗಳ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು. ನಗರದ ಗ್ರಾಮದೇವತೆ ದುರ್ಗಾಂಬಿಕಾದೇವಿ, ಬನಶಂಕರಿ ದೇವಿ, ಪ್ಲೇಗದಮ್ಮದೇವಿ, ಅಂತರಘಟ್ಟಮ್ಮದೇವಿ, ಕಾಳಮ್ಮ, ಗೊರವಿನಕಲ್ಲು ಕಂಬದ ನರಸಿಂಹಸ್ವಾಮಿ, ಹೊಸದುರ್ಗದ ರಾಮದೇವರು, ಕುರುಬರಹಳ್ಳಿ ಕರಿಯಮ್ಮ, ಬುಕ್ಕಸಾಗರ ಆಂಜನೇಯ ಸ್ವಾಮಿ, ಹಟ್ಟಿ ದುರ್ಗಾಂಭ ದೇವಿ, ಪಟ್ಟಣದ ವೀರಭದ್ರೇಶ್ವರ ಸ್ವಾಮಿ, ಕುಕ್ಕುವಾಡೇಶ್ವರಿದೇವಿ, ಕಾಳಮ್ಮ, ಕರುಮಾರಿಮ್ಮದೇವಿ ಹಾಗೂ ಪುರದ ಲಕ್ಷ್ಮೀ ರಂಗನಾಥಸ್ವಾಮಿ ದೇವರು ಮೆರವಣಿಗೆ ಪಟ್ಟಣದಲ್ಲಿ ಸಾಗಿತು. ಭವ್ಯವಾದ ಅಲಂಕೃತಗೊಂಡ ದೇವರುಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆಯುವಂತಿತ್ತು. ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿ ಸನ್ನಿಧಿಯಲ್ಲಿ ಪೂಜೆ ಮಾಡಿಸಿ, ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ಹುಳಿಯಾರು ವೃತ್ತದ ಮೂಲಕ…
3 ಎಕರೆ ಒಳಗಿನ ಭೂಮಿ ಒತ್ತುವರಿ ತೆರವು ಇಲ್ಲ! – ಕೊಪ್ಪ ತಾಲೂಕಿನಲ್ಲಿ ಒತ್ತುವರಿ ತೆರವು ಶುರು – ಅರಣ್ಯ ಸಚಿವರು ಹೇಳಿದ್ದೇನು..? ಯಾವ ಭೂಮಿ ತೆರವು ಇಲ್ಲ? – ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ NAMMUR EXPRESS NEWS ಬೆಂಗಳೂರು: ರಾಜ್ಯ ಸರಕಾರ 2015ರಲ್ಲಿ ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾ ಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರಕಾರ ಈಗಲೂ ಅದಕ್ಕೆ ಬದ್ಧವಾಗಿದೆ. ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ಅನಂತರದ ಹೊಸ ಒತ್ತುವರಿ ವಿಚಾರದಲ್ಲಿ ಕ್ರಮ ಜರಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ವಯನಾಡು ಭೂ ಕುಸಿತದ ಬೆನ್ನಲ್ಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಆತಂಕದ ಛಾಯೆ ಮನೆ ಮಾಡಿದ್ದು,…
ನಿಮ್ಮ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ** ವೃಷಭ ರಾಶಿ : ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ…