Author: Nammur Express Admin

ಟಾಪ್ ನ್ಯೂಸ್ ಕರ್ನಾಟಕ ಒಂದೂವರೆ ತಿಂಗಳಿಂದ ಕರೆಂಟ್ ಇಲ್ಲ.. ಮೊಬೈಲ್ ಚಾರ್ಜ್ ಇಲ್ಲ! – ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಸಮಸ್ಯೆ – ಬಳ್ಳಾರಿ: ಸಂಡೂರಿನ ರಾಮನಮಲೈನ ಅರಣ್ಯದಲ್ಲಿ ಗಣಿ ಸದ್ದು? – ಶಿವಮೊಗ್ಗ: ತ್ಯಾವರೆಕೊಪ್ಪ ಸಿಂಹಧಾಮದ ಸಿಂಹ ಆರ್ಯ ಸಾವು – ರಾಮನಗರ: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ! ಚಿಕ್ಕಮಗಳೂರು: ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನ ಜನತೆ ಈ ವರ್ಷ ಧಾರಾಕಾರ ಮಳೆಯಿಂದ ಕಂಗೆಟ್ಟು ಹೋಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಅತ್ತಿಗುಂಡಿ ಕುಗ್ರಾಮ ಕಳೆದ 45 ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಬದುಕುವಂತಾಗಿದೆ. ಇನ್ನು ಮೊಬೈಲ್ ಚಾರ್ಜ್ ಮಾಡಲಾಗದೆ ಇದೀಗ ಹತ್ತಾರು ಗ್ರಾಮಗಳು ಜನ ಸಂಪರ್ಕ ಕಳೆದುಕೊಂಡಿವೆ. ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇರುವ ಈ ಕುಗ್ರಾಮದ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅತ್ತಿಗುಂಡಿ ಮಾರ್ಗದಲ್ಲಿ ಹತ್ತಾರು…

Read More

ನಾಟಿ ಸೊಬಗು: ಹಸಿರಾದ ಗದ್ದೆಗಳು! – ಮಲೆನಾಡು, ಕರಾವಳಿಯಲ್ಲಿ ಭತ್ತದ ನಾಟಿ ವೈಭವ – ಮಳೆ ನಡುವೆ ಹಸಿರು ಹೊದ್ದಿರುವ ಗದ್ದೆಗಳು – ನಾಟಿ ಮಾಡುವ ಕೆಲಸ ಎಷ್ಟು ಖುಷಿ ಗೊತ್ತಾ? NAMMUR EXPRESS NEWS ಮಳೆ ಧರೆಗೆ ಉರುಳುತ್ತಿದಂತೆ ಹಸಿರ ಹೊದಿಕೆಯ ಪ್ರಾಕೃತಿಕ ಸೌಂದರ್ಯದಲ್ಲಿ ಮಲೆನಾಡು ಚಿಗುರಿ ಮೈದುಂಬಿಕೊಳ್ಳತ್ತೆ. ಮಲೆನಾಡ ಪ್ರಕೃತಿ ಸಿರಿಯು ಒತ್ತಡದ ಬದುಕಿನಲ್ಲಿ ಸಿಲುಕಿದ ಮನಸ್ಸಿಗೆ ಮುದ ನೀಡಿ,ಹೊಸ ಉತ್ಸಾಹ ನೀಡುತ್ತೆ. ಇದೀಗ ಮಳೆ ನಡುವೆ ಎಲ್ಲಾ ಕಡೆ ನಾಟಿ ಕೆಲಸ ನಡೆಯುತ್ತಿದೆ. ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಭತ್ತ ಬೆಳೆಯುವ ಭಾಗಗಳು. ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಕರಾವಳಿ,ಮಲೆನಾಡಿನ ನಿಸರ್ಗದ ರಮ್ಯತೆಯ ಮಧುರವಾದ ಮನೋಲ್ಲಾಸ ನೀಡುವುದು ಮಲೆನಾಡಿನ ನಾಟಿ ಮಾಡುವ ಕೃಷಿ ಪದ್ಧತಿ. ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ ಕೂಡ, ಅಂದಿನ ಸಂಪ್ರದಾಯದ ಚೌಕಟ್ಟುಗಳ ಬೇರು ಇನ್ನೂ ಜೀವಂತವಾಗಿದೆ . ಮೊದಲು ಪುರುಷ ಹಾಗೂ ಮಹಿಳೆಯರು…

Read More

ಚಿಕನ್ ದರ ಇಳಿಕೆ?! – ಶ್ರಾವಣ ಮಾಸ ಹಿನ್ನೆಲೆ ಇಳಿಕೆ – 150ರೂ. ಗೆ ಇಳಿಯುತ್ತಾ ಚಿಕನ್ ದರ? NAMMUR EXPRESS NEWS ಶ್ರಾವಣ ಮಾಸ ಆರಂಭವಾಗಿದ್ದರಿಂದ ಚಿಕನ್ ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ಕೆಲವು ಕಡೆ ಸೋಮವಾರ ಕೋಳಿ ಮಾಂಸದ ಬೆಲೆ 180 ರೂ.ಗೆ ಇಳಿದಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಒಂದು ಕೆಜಿ ಚಿಕನ್ ಬೆಲೆ ರೂ. ಇದನ್ನು 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚಿಕನ್ ಬೆಲೆ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಶ್ರಾವಣ ಮಾಸ. ಆಷಾಢ ಮಾಸವು ಭಾನುವಾರ ಕೊನೆಗೊಂಡು ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಿದೆ. ಇದರೊಂದಿಗೆ ಇಂದಿನಿಂದ ಶ್ರಾವಣ ಮಾಸ ವ್ರತಗಳು ಆರಂಭವಾಗುತ್ತಿವೆ. ಈ ಹಿನ್ನೆಲೆ ಕೆಲವರು ಶ್ರಾವಣ ಮಾಸ ಮುಗಿಯುವವರೆಗೆ ಮನೆಗಳಿಗೆ ಮಾಂಸವನ್ನು ತರುವುದನ್ನು ನಿಲ್ಲಿಸುತ್ತಾರೆ. ಇದರ ಭಾಗವಾಗಿ, ಕೋಳಿ ಮಾಂಸದ ಬೆಲೆ ತೀವ್ರವಾಗಿ ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೆಂಗಳೂರು ಸೇರಿದಂತೆ ಹಲವು ಕಡೆ ಚಿಕನ್ 180-200 ರೂಗೆ ಚಿಕನ್ ಮಾರಾಟವಾಗುತ್ತಿದೆ. 2-3 ದಿನಗಳಲ್ಲಿ ಎಲ್ಲಾ…

Read More

ತಿಂಗಳ ಬಳಿಕ ಬಿಸಿಲು ನೋಡಿದ ಕರಾವಳಿ, ಮಲೆನಾಡು..! – ಒಂದು ತಿಂಗಳ ಮಳೆ ಆರ್ಭಟಕ್ಕೆ ನಲುಗಿದ ಜನ – ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ – ಈಗ ಜನ ಜೀವನ ಸಹಜತೆಯತ್ತ: ಆದ್ರೂ ಮಳೆ ಅಲರ್ಟ್ NAMMUR EXPRESS NEWS ಮಲೆನಾಡು/ಕರಾವಳಿ: ತಿಂಗಳ ಬಳಿಕ ಕರಾವಳಿ, ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಸಿಲಿನ ಛಾಯೆ ಕಾಣಿಸುತ್ತಿದೆ. ಒಂದು ತಿಂಗಳಿಂದ ಸುರಿದ ಭಾರೀ ಮಳೆಗೆ ನಲುಗಿದ ಜನ ಇನ್ನು ಅದರ ಆರ್ಭಟದಿಂದ ಹೊರ ಬಂದಿಲ್ಲ. ಎಲ್ಲಾ ನದಿ ಹಳ್ಳಗಳು ತುಂಬಿವೆ. ಆಣೆಕಟ್ಟುಗಳು ತುಂಬಿವೆ. ಶಾಲೆ ಕಾಲೇಜುಗಳಿಗೆ ಸುಮಾರು 10-15 ದಿನ ರಜೆ ಘೋಷಣೆ ಆಗಿತ್ತು. ಮಲೆನಾಡು ಹಾಗೂ ಕರಾವಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ರಸ್ತೆ, ಸೇತುವೆಗಳು ಕುಸಿದಿವೆ. ಇದೀಗ ಬಿಸಿಲಿನ ಕಾರಣ ಎಲ್ಲಾ ಕೆಲಸಗಳು ಶುರುವಾಗಿದೆ. ಜನ ಜೀವನ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ. ಅಡಿಕೆ ಮರದಿಂದ ಉದುರುತ್ತಿರುವ ಅಡಿಕೆ ಕಾಯಿ ಮಲೆನಾಡು, ಕರಾವಳಿ ಭಾಗದ ಜೀವನ…

Read More

ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ! – ನೂರಾರು ದಂಪತಿಗಳಿಂದ ಭೀಮೇಶ್ವರನಿಗೆ ಪೂಜೆ ಆರಗ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮಹೇಂದ್ರ ನಿವೃತ್ತಿ – ಸೇವೆಯಿಂದ ನಿವೃತ್ತರಾದ ಸಂದರ್ಭದಲ್ಲಿ ಬೀಳ್ಕೊಡುಗೆ ಕಳಪೆ ಮಾಂಸ: ತಪ್ಪಿಸ್ಥರ ಮೇಲೆ ಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಹೋರಾಟ – ಹಿಂದೂ ಸಂಘಟನೆಗಳ ಪ್ರಮುಖರಿಂದ ತಹಸೀಲ್ದಾರ್ ಮನವಿ NAMMUR EXPRESS NEWS ತೀರ್ಥಹಳ್ಳಿ: ಆರಗದ ಯೂನಿಯನ್ ಬ್ಯಾಂಕ್ ನಲ್ಲಿ ಸುಮಾರು 34 ವರ್ಷಗಳ ಸುಧೀರ್ಘ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮಹೇಂದ್ರ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತರಾದರು. ಆರಗ ಯೂನಿಯನ್ ಬ್ಯಾಂಕ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು,ಆರಗ ಗ್ರಾಮಸ್ಥರುಗಳು ನಿವೃತ್ತರಾದ ಮಹೇಂದ್ರರವರಿಗೆ ದಂಪತಿ ಸಮೇತ ಶಾಲು ಹೊದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಿ ಶುಭ ಹಾರೈಸಿದರು. ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಮಸ್ಥರ ಗೌರವ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತಿ ಹೊಂದುತ್ತಿರುವ ತೃಪ್ತಿ ನನಗಿದ್ದು, ಬ್ಯಾಂಕ್ ಸೇವೆಯನ್ನು ಗ್ರಾಮದ ಪ್ರತಿಯೊಬ್ಬರಿಗೂ ತಲುಪಲು ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿದ್ದೇನೆ…

Read More

ಕಾರ್ಕಳದ ಮರ್ಣೆಯಲ್ಲಿ ಕೆಸರುಡು ಒಂಜಿ ದಿನ ಸಂಭ್ರಮ! – ವಿಷ್ಣು ಪ್ರೆಂಡ್ಸ್ ಅಜೆಕಾರು, ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಸಹಯೋಗ – ಕೆಸರಲ್ಲಿ ಆಟ ಆಡಿ ಸಂಭ್ರಮಿಸಿದ ಜನ NAMMUR EXPRESS NEWS ಕಾರ್ಕಳ: ಶ್ರೀ ವಿಷ್ಣು ಪ್ರೆಂಡ್ಸ್ ಅಜೆಕಾರು ಮತ್ತು ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ “ಕೆಸರುಡು ಒಂಜಿ ದಿನ” ಕಾರ್ಯಕ್ರಮ ನಡೆಯಿತು. ಅಜೆಕಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆಯಲ್ಲಿ ನಡೆದಿದ್ದು, ಈ ವೇದಿಕೆಯಲ್ಲಿ ವೇದಮೂರ್ತಿ ಕೃಷ್ಣ ಮೂರ್ತಿ ಭಟ್ ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾಯದರ್ಶಿ ಬಾಸ್ಕರ ಶೆಟ್ಟಿ ಕುಂಠಿನಿ, ತುಳುನಾಡ ತುಡರ್ ನಮ್ಮ ತುಳುನಾಡ್ ಟ್ರೆಸ್ಟ್ ರಾಜ್ಯ ಸಂಚಾಲಕರು ಕೀತಿ೯ ಕಾಕ೯ಳ ,ಪ್ರಶಾಂತ್ ಶೆಟ್ಟಿ ಕುಂಠಿನಿ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರೀಶ್ ನಾಯಕ್, ಮಹಿಳಾ ಪ್ರಮುಖರಾದ ಶ್ರೀಮತಿ ವಿದ್ಯಾ ಪೈ, ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ…

Read More

ಭದ್ರಾ ನದಿಗೆ ಹಾರಿದ ಇಬ್ಬರು ಯುವಕರು.! – ಭದ್ರಾವತಿಯ ಹಳೆ ಸೇತುವೆ ಬಳಿ ನಡೆದ ದುರಂತ – ಓರ್ವನ ಮೃತದೇಹಪತ್ತೆ, ಮತ್ತೋರ್ವನಿಗಾಗಿ ತೀವ್ರಶೋಧ NAMMUR EXPRESS NEWS ಶಿವಮೊಗ್ಗ: ಭದ್ರಾ ನದಿಗೆ ಹಾರಿ ಇಬ್ಬರಲ್ಲಿ ಒಬ್ಬರ ಮೃತ ದೇಹ ಪತ್ತೆಯಾದರೆ ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಭದ್ರ ನದಿಗೆ ಭಾನುವಾರ ಇಬ್ಬರು ಹಾರಿದ್ದು ಇದರಲ್ಲಿ ರಾಜು ಎಂಬುವರಿಗಾಗಿ ತೀವ್ರಶೋಧ ನಡೆದಿದೆ. ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ನಗರ ಸಭೆಯ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು ಆತನನ್ನ ಕುಣಿಗಲ್ ಮೂಲದವನು ಎಂದು ಹೇಳಲಾಗುತ್ತಿದೆ. ಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಹಳೆ ಸೇತುವೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆ ನಿವಾಸಿ ಹಾಗೂ ಮೆಸ್ಕಾಂ ಸಿಬ್ಬಂದಿ ರಾಜು (34) ಎಂದು ಗುರುತಿಸಲಾಗಿದೆ. ಅಣ್ಣನ ಮಗನ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ಮೆಸೇಜ್ ಬರೆದಿಟ್ಟು, ನದಿಗೆ ಹಾರಿ…

Read More

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್! – ಕುಂದಾಪುರದ ಬನ್ನೂರಿನಲ್ಲಿ ನಡೆದ ವಿಚಿತ್ರ ಘಟನೆ: ದೆವ್ವ ಬಂದಂತೆ ನರ್ತನ: ಅಶ್ರುವಾಯು ಪ್ರಯೋಗ ಮಾಡಿ ಬಂಧನ – ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ – ಕುಂದಾಪುರ, ಮೂಡಬಿದಿರೆಯಲ್ಲಿ ನೆರೆ ಹಾನಿ ಪರಿಶೀಲನೆ NAMMUR EXPRESS NEWS ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬನ್ನೂರಿನಲ್ಲಿ ನಡೆದಿದೆ. ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ. ಈ ಕುಟುಂಬವು ಇಲ್ಲಿನ ಬಸೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು. ಶನಿವಾರ ರಾತ್ರಿ ಸುಮಾರು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮೊದಲ ಶ್ರಾವಣ ಸೋಮವಾರ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕುಟುಂಬ ಸದಸ್ಯರ ಸಲಹೆಯಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಇಂದು ಅನಿರೀಕ್ಷಿತ ಆದಾಯದ ಮೂಲಗಳಿಂದ ಧನಲಾಭವಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ** ವೃಷಭ ರಾಶಿ : ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ.…

Read More

ವಿದ್ಯಾರ್ಥಿಗಳಿಗಾಗಿ 114 ಕೋಟಿ ಹಣ ಮೀಸಲಿಟ್ಟ ಡಾ.ವೀರೇಂದ್ರ ಹೆಗ್ಗಡೆ – 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನ – ಹೊಸದುರ್ಗದಲ್ಲಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣೆ NAMMUR EXPRESS NEWS ಹೊಸದುರ್ಗ: ಹೊಸದುರ್ಗ ಈ ಬಾರಿಯ ವೃತ್ತಿಪರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದಾದ್ಯಂತ 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮೀಸಲಿರಿಸಿದ್ದಾರೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಈ ಹಣವನ್ನು ವಿನಿಯೋಗಗಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿರಿಯೂರು ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ತಿಳಿಸಿದರು.. ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಚೇರಿಯಲ್ಲಿ ನಡೆದ ಸುಜ್ಞಾನ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು ಪ್ರತಿ ತಿಂಗಳಿಗೆ ಒಂದು ಸಾವಿರದಂತೆ 12,000 ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ…

Read More