Author: Nammur Express Admin

ಕಾರ್ಕಳದ ಮರ್ಣೆಯಲ್ಲಿ ಕೆಸರುಡು ಒಂಜಿ ದಿನ ಸಂಭ್ರಮ! – ವಿಷ್ಣು ಪ್ರೆಂಡ್ಸ್ ಅಜೆಕಾರು, ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಸಹಯೋಗ – ಕೆಸರಲ್ಲಿ ಆಟ ಆಡಿ ಸಂಭ್ರಮಿಸಿದ ಜನ NAMMUR EXPRESS NEWS ಕಾರ್ಕಳ: ಶ್ರೀ ವಿಷ್ಣು ಪ್ರೆಂಡ್ಸ್ ಅಜೆಕಾರು ಮತ್ತು ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ “ಕೆಸರುಡು ಒಂಜಿ ದಿನ” ಕಾರ್ಯಕ್ರಮ ನಡೆಯಿತು. ಅಜೆಕಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆಯಲ್ಲಿ ನಡೆದಿದ್ದು, ಈ ವೇದಿಕೆಯಲ್ಲಿ ವೇದಮೂರ್ತಿ ಕೃಷ್ಣ ಮೂರ್ತಿ ಭಟ್ ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾಯದರ್ಶಿ ಬಾಸ್ಕರ ಶೆಟ್ಟಿ ಕುಂಠಿನಿ, ತುಳುನಾಡ ತುಡರ್ ನಮ್ಮ ತುಳುನಾಡ್ ಟ್ರೆಸ್ಟ್ ರಾಜ್ಯ ಸಂಚಾಲಕರು ಕೀತಿ೯ ಕಾಕ೯ಳ ,ಪ್ರಶಾಂತ್ ಶೆಟ್ಟಿ ಕುಂಠಿನಿ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರೀಶ್ ನಾಯಕ್, ಮಹಿಳಾ ಪ್ರಮುಖರಾದ ಶ್ರೀಮತಿ ವಿದ್ಯಾ ಪೈ, ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ…

Read More

ಭದ್ರಾ ನದಿಗೆ ಹಾರಿದ ಇಬ್ಬರು ಯುವಕರು.! – ಭದ್ರಾವತಿಯ ಹಳೆ ಸೇತುವೆ ಬಳಿ ನಡೆದ ದುರಂತ – ಓರ್ವನ ಮೃತದೇಹಪತ್ತೆ, ಮತ್ತೋರ್ವನಿಗಾಗಿ ತೀವ್ರಶೋಧ NAMMUR EXPRESS NEWS ಶಿವಮೊಗ್ಗ: ಭದ್ರಾ ನದಿಗೆ ಹಾರಿ ಇಬ್ಬರಲ್ಲಿ ಒಬ್ಬರ ಮೃತ ದೇಹ ಪತ್ತೆಯಾದರೆ ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಭದ್ರ ನದಿಗೆ ಭಾನುವಾರ ಇಬ್ಬರು ಹಾರಿದ್ದು ಇದರಲ್ಲಿ ರಾಜು ಎಂಬುವರಿಗಾಗಿ ತೀವ್ರಶೋಧ ನಡೆದಿದೆ. ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ನಗರ ಸಭೆಯ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು ಆತನನ್ನ ಕುಣಿಗಲ್ ಮೂಲದವನು ಎಂದು ಹೇಳಲಾಗುತ್ತಿದೆ. ಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಹಳೆ ಸೇತುವೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆ ನಿವಾಸಿ ಹಾಗೂ ಮೆಸ್ಕಾಂ ಸಿಬ್ಬಂದಿ ರಾಜು (34) ಎಂದು ಗುರುತಿಸಲಾಗಿದೆ. ಅಣ್ಣನ ಮಗನ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ಮೆಸೇಜ್ ಬರೆದಿಟ್ಟು, ನದಿಗೆ ಹಾರಿ…

Read More

ಪತ್ನಿಯ ಕುತ್ತಿಗೆ ಕಡಿದು ಕುಣಿಯುತ್ತಿದ್ದ ಗಂಡ ಅರೆಸ್ಟ್! – ಕುಂದಾಪುರದ ಬನ್ನೂರಿನಲ್ಲಿ ನಡೆದ ವಿಚಿತ್ರ ಘಟನೆ: ದೆವ್ವ ಬಂದಂತೆ ನರ್ತನ: ಅಶ್ರುವಾಯು ಪ್ರಯೋಗ ಮಾಡಿ ಬಂಧನ – ಮಣಿಪಾಲ ಲಾಡ್ಜ್‌ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್‌ ದಾಳಿ – ಕುಂದಾಪುರ, ಮೂಡಬಿದಿರೆಯಲ್ಲಿ ನೆರೆ ಹಾನಿ ಪರಿಶೀಲನೆ NAMMUR EXPRESS NEWS ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬನ್ನೂರಿನಲ್ಲಿ ನಡೆದಿದೆ. ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ. ಈ ಕುಟುಂಬವು ಇಲ್ಲಿನ ಬಸೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು. ಶನಿವಾರ ರಾತ್ರಿ ಸುಮಾರು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮೊದಲ ಶ್ರಾವಣ ಸೋಮವಾರ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕುಟುಂಬ ಸದಸ್ಯರ ಸಲಹೆಯಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಇಂದು ಅನಿರೀಕ್ಷಿತ ಆದಾಯದ ಮೂಲಗಳಿಂದ ಧನಲಾಭವಿದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ** ವೃಷಭ ರಾಶಿ : ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ.…

Read More

ವಿದ್ಯಾರ್ಥಿಗಳಿಗಾಗಿ 114 ಕೋಟಿ ಹಣ ಮೀಸಲಿಟ್ಟ ಡಾ.ವೀರೇಂದ್ರ ಹೆಗ್ಗಡೆ – 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನ – ಹೊಸದುರ್ಗದಲ್ಲಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣೆ NAMMUR EXPRESS NEWS ಹೊಸದುರ್ಗ: ಹೊಸದುರ್ಗ ಈ ಬಾರಿಯ ವೃತ್ತಿಪರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದಾದ್ಯಂತ 97 ಸಾವಿರ ವಿದ್ಯಾರ್ಥಿಗಳಿಗೆ 114 ಕೋಟಿ ಹಣವನ್ನು ಸುಜ್ಞಾನನಿ ದೇವಿ ಶಿಷ್ಯವೇತನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮೀಸಲಿರಿಸಿದ್ದಾರೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಈ ಹಣವನ್ನು ವಿನಿಯೋಗಗಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಿರಿಯೂರು ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ತಿಳಿಸಿದರು.. ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಚೇರಿಯಲ್ಲಿ ನಡೆದ ಸುಜ್ಞಾನ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು ಪ್ರತಿ ತಿಂಗಳಿಗೆ ಒಂದು ಸಾವಿರದಂತೆ 12,000 ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ…

Read More

ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ಜಿಲ್ಲೆ ನಾಯಕರು! – ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಪಟ್ಟು – ವಿಜಯೇಂದ್ರ ಅವರ ನೇತೃತ್ವದಲ್ಲಿ ಪಾದಯಾತ್ರೆ NAMMUR EXPRESS NEWS ಬೆಂಗಳೂರು: ಭ್ರಷ್ಟ ಕಾಂಗ್ರೆಸ್‌ ಸರ್ಕಾರ ತೊಲಗಿಸಿ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಶನಿವಾರ ಬೆಳಗ್ಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು. ಪಾದಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ದೇವರಾಜ್ ಶೆಟ್ಟಿ ಮಾತನಾಡಿ, ನಮಗೆ 100 ಜನ ಬರಬೇಕು ಎಂದು ರಾಜ್ಯದಿಂದ ಆದೇಶ ಇತ್ತು, ಆದರೆ ನಾವು 150 ಕ್ಕೂ ಹೆಚ್ಚು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತಿದ್ದೇವೆ. ಇನ್ನು 8 ದಿನಗಳ ಕಾಲ ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ. ಈ ಪಾದಯಾತ್ರೆ ಸುಮಾರು 2 ವರೆ 3 ಕಿ. ಮೀ ವರೆಗೆ ಜನ ನಡೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರೆಯುತ್ತದೆ. ಇಂದು 12ಕಿ.ಮೀ ವರೆಗೂ ಅಧಿಕ ಪಾದಯಾತ್ರೆ ನಡೆದಿದೆ .2-3 ಕಿ.ಮೀಗಳಷ್ಟು ಉದ್ದ ರಸ್ತೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಗಂಟೆಗಟ್ಟಲೆ ಟ್ರಾಫಿಕ್…

Read More

ಚಿಕ್ಕಮಗಳೂರು ಟಾಪ್ ನ್ಯೂಸ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲು!? – ಮೂಡಿಗೆರೆ: ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ – ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆ – ಕೊಪ್ಪ: ಮದ್ಯಪಾನ ಮಾಡಿ ಬೈಕ್‌ ಚಾಲನೆ ಮಾಡಿದ್ರೆ ಕೇಸ್ – ಕಡೂರು: ದನಗಳ್ಳರ ಬಂಧನ: ಜಾನುವಾರು ರಕ್ಷಣೆ – ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಮಳೆ ದುರಂತಗಳು ಇನ್ನು ಮುಂದುವರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲಾಗಿರುವ ಶಂಕೆ ಎದುರಾಗಿದೆ. ಮೂಡಿಗೆರೆಯಲ್ಲಿ ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ ನಾಪತ್ತೆಯಾದರೆ, ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆಯಾಗಿದ್ದಾರೆ. ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಬಂದವ ನಾಪತ್ತೆ ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿಯ ನಿವಾಸಿ ಶಿವಕುಮಾರ ಶರ್ಮ (41) ಆಗಸ್ಟ್ 1 ರಂದು 20 ರಿಂದ 25 ಖ್ಯಾತ ಜೋತಿಷ್ಯ ಪಂಡಿತರಿಗೆ…

Read More

ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳಿಗೆ ಅರ್ಜಿ – ಆಗಸ್ಟ್ 5 ಕೊನೆಯ ದಿನ: ಯಾವ ಹುದ್ದೆ? ಎಲ್ಲಿ? – ಏನು ಓದಿರಬೇಕು..? ಕೆಲಸದ ವಿವರ ಇಲ್ಲಿದೆ NAMMUR EXPRESS NEWS ನವದೆಹಲಿ: ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ . ಗ್ರಾಮೀಣ ಡಾಕ್ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 5. ಇನ್ನು ಎರಡೇ ದಿನ ಬಾಕಿ ಉಳಿದಿದ್ದು ಕೂಡಲೇ ಅಪ್ಲೈ ಮಾಡಿ. ವಿದ್ಯಾರ್ಹತೆ ಮತ್ತು ವಯೋಮಿತಿ : ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್‌ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ…

Read More

ಶಿವಮೊಗ್ಗ ಜಿಲ್ಲೆಯ ಟಾಪ್ ನ್ಯೂಸ್ – ಶಿವಮೊಗ್ಗ: ಒಂಟಿ ಮಹಿಳೆ ಕೊಲೆ: ಕತ್ತು ಹಿಸುಕಿ ಕೊಂದವರು ಯಾರು? – ಸೊರಬ: ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ – ಶಿವಮೊಗ್ಗ: ಬಿಜೆಪಿ ನಾಯಕನಿಂದ ಅತ್ಯಾಚಾರ: ಕೇಸ್ – ಬಿಜೆಪಿ ವಿರುದ್ಧ ಕತ್ತೆಗಳ ಮೆರವಣಿಗೆ ಮಾಡಿದ ಕಾಂಗ್ರೆಸ್ – ತೀರ್ಥಹಳ್ಳಿ: ಅಪಘಾತಕ್ಕೆ ಮನೆ ಬಳಿಯೇ ಯುವಕ ಬಲಿ! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗದಲ್ಲಿ ಒಂಟಿ ಮಹಿಳೆಯ ಕೊಲೆಯಾಗಿದೆ. ಕತ್ತು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ತಡರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಂಜರಿಕೊಪ್ಪದಲ್ಲಿ ಮಹಿಳೆಯ ಕೊಲೆಯಾಗಿದೆ. ಸಾವಿತ್ರಮ್ಮ (65) ಕೊಲೆಯಾದವರು. ಕುಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಕೊಲೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಂತಕರ ಹುಡುಕಾಟವನ್ನು ನಡೆಸುತ್ತಿದ್ದಾರೆ. ನಾಟಿ ಮಾಡಲು ಅಡ್ಡಿ;…

Read More

ಮಾದಕ ವಸ್ತು, ಅತಿಯಾದ ಮೊಬೈಲ್ ಬಳಕೆ ಹುಷಾರ್ – ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯಲ್ಲಿ ಮಕ್ಕಳಿಗೆ ಮಾಹಿತಿ – ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಶಾಲೆಗೆ ಭೇಟಿ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ ಶಾಲೆಗೆ ಭೇಟಿ ನೀಡಿದ ತೀರ್ಥಹಳ್ಳಿ ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಅವರು ಮಕ್ಕಳಿಗೆ, ಮಾದಕ ವಸ್ತುಗಳು ಕೆಟ್ಟ ಪರಿಣಾಮ, ಮೊಬೈಲ್ ಬಳಕೆ ಸಾಧಕ ಬಾಧಕಗಳು, ಫೇಸ್ ಬುಕ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಆ್ಯಪ್ ಅಂತಹ ಸಾಮಾಜಿಕ ಜಾಲ ತಾಣಗಳ ಬಳಕೆಯ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆಯ ಬಗ್ಗೆ, ಹಾಗೂ ಪೋಕ್ಸೋ ಕಾಯ್ದೆಯ ಮತ್ತು ಕಾನೂನು ಮಾಹಿತಿಯನ್ನು ಹಂಚಿಕೊಂಡು, ಮಕ್ಕಳು ಕಲಿಕೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು. ಕೊನೆಯಲ್ಲಿ ಶಾಲೆಗೆ ಅನೇಕ ಬಾರಿ ಸಹಕಾರ ನೀಡಿದ ಮಾನ್ಯರನ್ನು ಮಕ್ಕಳು, ಶಿಕ್ಷಕರು, ಮುಖ್ಯ ಶಿಕ್ಷಕರು ಗೌರವಿಸಿದರು. ಈ ಸಂದರ್ಭದಲ್ಲಿ, ಆಗುಂಬೆ ಆರಕ್ಷಕ ಉಪ…

Read More