Author: Nammur Express Admin

ಬೈಂದೂರಿನಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ..! – ಆ.4 ರ ಭಾನುವಾರ ಮಾರಸ್ವಾಮಿ ಕ್ಷೇತ್ರದಲ್ಲಿ ಜಾತ್ರೆ – ದೇವಸ್ಥಾನದಿಂದಲೇ ಹಣ್ಣು-ಕಾಯಿ ಖರೀದಿಸುವಂತೆ ವಿನಂತಿ NAMMUR EXPRESS NEWS ಬೈಂದೂರು: ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಮರವಂತೆ ಶ್ರೀ ಕ್ಷೇತ್ರ ಮಾರಸ್ವಾಮಿ ಬೈಂದೂರಿನಲ್ಲಿ ದಿನಾಂಕ : 04-08-2024 ರ ಭಾನುವಾರ ಕರ್ಕಾಟಕ ಅಮಾವಾಸ್ಯೆಯ ಜಾತ್ರೆ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಹಣ್ಣು – ಕಾಯಿ ಪ್ರಸಾದ ದೇವಸ್ಥಾನದಲ್ಲೆ ದೊರೆಯುತ್ತದೆ. ಹಾಗೂ ಹೊರಗಿನಿಂದ ತಂದ ಹಣ್ಣು – ಕಾಯಿಗಳನ್ನು ಹಬ್ಬದ ದಿನ ಒಡೆದುಕೊಡಲಾಗುವುದಿಲ್ಲ. ಭಗವದ್ ಭಕ್ತರಾದ ತಾವುಗಳು ದೇವಸ್ಥಾನದಿಂದಲೇ ಹಣ್ಣು – ಕಾಯಿ ಖರೀದಿಸಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೋಸ್ಕರ ನಮ್ಮ ಜೊತೆ ಕೈಜೋಡಿಸಿ ಶ್ರೀ ದೇವರ ಸಿರಿಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅರ್ಚಕರು, ಉಪಾದಿವಂತರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಿಬ್ಬಂದಿ ನೌಕರರ ವರ್ಗ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.

Read More

ಟಾಪ್ ನ್ಯೂಸ್ ಕರಾವಳಿ ನಾಯಿ ಉಳಿಸಲು ಹೋಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು! – ಬ್ರಹ್ಮಾವರದ ಕೋಟಾ ಉಪ್ಲಾಡಿ ಸೇತುವೆಯಿಂದ ಕೆಳಗೆ ಬಿದ್ದ ಕಾರು – ಕಾರ್ಕಳ: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ – ಮಂಗಳೂರು: ಗಾಂಜಾ ಸೇವಿಸುತ್ತಿದ್ದ ಯುವಕ ಅರೆಸ್ಟ್ – ಮಂಗಳೂರು: ನಡುರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಹೊಡೆದಾಟ! NAMMUR EXPRESS NEWS ಬ್ರಹ್ಮಾವರ: ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಉಪ್ಲಾಡಿ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಆ. 3 ರಂದು ಶನಿವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕಿನ ಕೋಟ ಮೂರು ಕೈ ಸಮೀಪ ಉಪ್ಲಾಡಿ ಸೇತುವೆ ಬಳಿ ನಡೆದಿದೆ. ಚಾಲಕನೋರ್ವ ಆಲ್ಲೊ ಕಾರುನ್ನು ಚಲಾಯಿಸಿಕೊಂಡು ಕೋಟ ಮೂರುಕೈ ಯಿಂದ ಮಧುವನ ಕಡೆಗೆ ಹೋಗುತ್ತಿದ್ದಾಗ ಉಪ್ಲಾಡಿ ಸೇತುವೆ ಸಮೀಪ ದಾರಿಗೆ ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಉಪ್ಲಾಡಿ ಸೇತುವೆ ಕೆಳಗೆ ಬಿದ್ದಿದೆ. ಸೇತುವೆಯಿಂದ ಕೆಳಗೆ ಬಿದ್ದ ಕಾರು…

Read More

ರಾಜ್ಯದಲ್ಲಿ ಹೆಚ್ಚಿದ ಕಲಬೆರಕೆ ಮಾಫಿಯಾ! – ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ವಿಷ? – ತಿನ್ನೋದೆಲ್ಲವೂ ವಿಷ ಇದ್ದಂತೆ.. ಜೋಪಾನ ಜೋಪಾನ – ಅತಿಯಾದ ಕೆಮಿಕಲ್, ಎಣ್ಣೆ, ಮಸಾಲಾ ಒಳ್ಳೆಯದಲ್ಲ – ಕಣ್ಣು ಮುಚ್ಚಿ ಕುಳಿತ ಸ್ಥಳೀಯ ಆಡಳಿತ, ಅಧಿಕಾರಿಗಳು NAMMUR EXPRESS NEWS ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಳಸುವ ಬಹುತೇಕ ವಸ್ತುಗಳು ಇತ್ತೀಚಿಗೆ ಕಲ ಬೆರಕೆ ಎಂಬುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಜನ ಜಾಗೃತಿ ವಹಿಸಬೇಕು. ಅಡುಗೆ ಎಣ್ಣೆಗೇ ವಿಷ ಬೆರೆಸಲಾಗುತ್ತಿದೆ. ರಕ್ಕಸ ರೂಪದಲ್ಲಿ ಬೆಳೆದಿರುವ ಕಲಬೆರಕೆ ಜಾಲವು ಅಧಿಕ ಲಾಭದಾಸೆಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಅತಿಯಾದ ಎಣ್ಣೆ ಹಾಗೂ ಕೆಮಿಕಲ್ ಹಾಗೂ ಅತಿಯಾಗಿ ಮಸಾಲೆ ಬೆಳೆಸುವ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಕಾಯಿಲೆಗಳು ಉಲ್ಬಣಿಸುತ್ತಿವೆ. ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ದುಡ್ಡಿನ ಆಸೆಗೆ ಇತರೆ ಪದಾರ್ಥ ಬೆರಕೆ ಮಾಡಲಾಗುತ್ತಿದೆ. ಆದರೆ ಆಡಳಿತ…

Read More

ಬಿಜೆಪಿ -ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಶುರು – ಹೈಕೋರ್ಟ್‌ನಿಂದಲೇ ಅನುಮತಿ ಪಡೆದ ಬಿಜೆಪಿ – ರಾಜ್ಯದಲ್ಲಿ ಭಾರೀ ಕಾವು ಮೂಡಿಸಿದ ಪಾದಯಾತ್ರೆ! NAMMUR EXPRESS NEWS ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ತೊಲಗಿಸಿ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ನೇರವಾಗಿ ಹೈಕೋರ್ಟ್‌ನಿಂದ ಅನುಮತಿ ಪಡೆಯಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹೋಗಿದ್ದ ಬಿಜೆಪಿ ಮುಖಂಡರು, ಪಾದಯಾತ್ರೆಗೆ ಅನುಮತಿ ಪಡೆದುಕೊಂಡಿದ್ದಾರೆ. ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ ಬೆನ್ನಲ್ಲೇ ಸರ್ಕಾರದಿಂದ ಸಮಸ್ಯೆ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿ ಉಚ್ಚ ನ್ಯಾಯಾಲಯಕ್ಕೆ ತೆರಳಿತ್ತು. ಶಾಸಕ ಪಿ. ರಾಜೀವ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದನ್ ಗೌಡರ್‌, ಅನುಮತಿ ನೀಡಿದ್ದು, ಪಾದಯಾತ್ರೆ ಸಾಗುವ ಜಾಗದಲ್ಲಿ ಭದ್ರತೆ ನೀಡುವಂತೆ ಡಿಸಿ, ಎಸ್ ಪಿ ಗೆ ಸೂಚನೆ ನೀಡಿದ್ದಾರೆ. ಚಾಮುಂಡೇಶ್ವರಿ ದರ್ಶನ..! ಮುಡಾ ಹಗರಣ ವಿರುದ್ದ ಇಂದಿನಿಂದ ನಡೆಯಲಿರುವ ಮೈಸೂರು ಚಲೋ ಪಾದಯಾತ್ರೆ ಪ್ರಾರಂಭಕ್ಕೂ…

Read More

ಡ್ಯಾಂಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ..! – ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಹೈಅಲರ್ಟ್ – ಕಬಿನಿ ಜಲಾಶಯಕ್ಕೆ 57,819 ಕ್ಯೂಸೆಕ್ ಒಳಹರಿವು NAMMUR EXPRESS NEWS ಮಂಡ್ಯ: ಕರ್ನಾಟಕದಾದ್ಯಂತ ವರುಣಾರ್ಭಟ ಹೆಚ್ಚಿದ್ದು, ಬಹುತೇಕ ಡ್ಯಾಂಗಳು ತುಂಬಿ ಹರಿಯುತ್ತಿದೆ. ಅದರಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ವಯನಾಡಿನಲ್ಲಿ ಮಳೆ ಅಬ್ಬರಕ್ಕೆ ರಾಜ್ಯದ ಡ್ಯಾಮ್‌ಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನಲೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಿದ್ದು, ಕಾವೇರಿ, ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಮಳೆಯ ಅಬ್ಬರಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಿಸಿದ್ದು, ಕೆಆರ್‌ಎಸ್‌ ಡ್ಯಾಂನಿಂದ 1,10,000 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟರೆ, ಕಬಿನಿ ಜಲಾಶಯದಿಂದ 80,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗಿದೆ. ಜೊತೆಗೆ ಯಾವಾಗ ಬೇಕಾದರೂ 2,00,000 ಕ್ಯೂಸೆಕ್‌ಗೂ ಹೆಚ್ಚಾಗಬಹುದು. ಹೀಗಾಗಿ ನದಿ ಪಾತ್ರದ ಜನರು ನದಿಯ ತಟಕ್ಕೆ ಹೋಗಬೇಡಿ, ಜನರು…

Read More

ಶಿಕ್ಷಕಿ ಕನಕಮ್ಮ 22 ವರ್ಷಗಳ ಅಮೋಘ ಸೇವೆ. – ತೀರ್ಥಹಳ್ಳಿ ಕುವೆಂಪು ಶಾಲೆ ಶಿಕ್ಷಕಿ ಕನಕಮ್ಮ ಅವರಿಗೆ ಬಿಳ್ಕೊಡುಗೆ – ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ಮಾದರಿ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ತೀರ್ಥಹಳ್ಳಿ ( ಕುವೆಂಪು ಶಾಲೆ)ಯಲ್ಲಿ ಇತ್ತೀಚಿಗೆ 22 ವರ್ಷಗಳ ಅಮೋಘ ಸೇವೆಯನ್ನು ಸಲ್ಲಿಸಿರುವ ಕನಕಮ್ಮ ಅವರಿಗೆ ಬಿಳ್ಕೊಡುಗೆ ಸಮಾರಂಭ ನಡೆಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಿ ಇ ಓ ಗಣೇಶ್, ಟಿಪಿಓ ಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಜಯಂತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಲತಾ, ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ ಹಾಗು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳು, ಎಲ್ಲ ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನಕಮ್ಮ ಅವರು ಕುವೆಂಪು ಶಾಲೆಯಲ್ಲಿ ದೈಹಿಕ ಶಿಕ್ಷಣ…

Read More

ಮಳೆ, ಗಾಳಿ, ಧರೆ ಕುಸಿತ: ವಿದ್ಯುತ್ ಬಗ್ಗೆ ಎಚ್ಚರ! – ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಲಿ – ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು! – ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..? NAMMUR EXPRESS NEWS ಅತಿಯಾದ ಗಾಳಿ ಮಳೆ ಇರುವ ಕಾರಣದಿಂದ ಸಾರ್ವಜನಿಕರು ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು. ಮಳೆ, ಗಾಳಿ, ಧರೆ ಕುಸಿತ ಕಾರಣಗಳಿಂದ ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು.ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಬೇಕು. ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು ಕಂಡಿದ್ದಾರೆ. ಇನ್ನು ಮಳೆ ಜೋರಾಗಲಿದೆ. ಎಲ್ಲಾ ಕಡೆ ಮಣ್ಣು ಸಡಿಲವಾಗಿದೆ. ತಂತಿ, ಕಂಬ ಬೀಳುವ ಸಾಧ್ಯತೆ ಇದೆ. ಗೋಡೆ ತಂಡಿಯಾಗಿ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಇದೆ. – ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..? – ಗಾಳಿ ಇರುವಾಗ ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬೇಡಿ, ಕಬ್ಬಿಣ ಕಂಬ, ಗೈವೈರ್‌ಗಳನ್ನು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶಶ ರಾಜಯೋಗದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಸಂಪತ್ತಿನ ಒಳಹರಿವಿಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ** ವೃಷಭ ರಾಶಿ : ನೀವು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಮಾತಿನ ಮೇಲೆ ಹಿಡಿತವಿರಲಿ. ಇಂದು ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು.…

Read More

ಕೋಟೆನಾಡು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ..! – ರಾಶಿ ರಾಶಿ ಹೋಳಿಗೆ ನೈವೇದ್ಯ – ಏನಿದರ ವಿಶೇಷ? ಇಲ್ಲಿದೆ ನೋಡಿ NAMMUR EXPRESS NEWS ಚಿತ್ರದುರ್ಗ: ಹಬ್ಬ ಹುಣ್ಣಿಮೆಗಳ ಸಂದರ್ಭದಲ್ಲಿ ಹೋಳಿಗೆ ಮಾಡುವುದು ಸಹಜ. ವಿಶೇಷ ಸಂದರ್ಭಗಳಲ್ಲಿ ಆರಾಧ್ಯ ದೇವರಿಗೆ ನೈವೇದ್ಯ ಅರ್ಪಿಸುವ ಆಚರಣೆಗಳು ಜಾರಿಯಲ್ಲಿವೆ. ಆದರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಹೋಳಿಗೆ ಹಬ್ಬವನ್ನೇ ಆಚರಿಸಲಾಗುತ್ತದೆ. ದೇಗುಲದಲ್ಲಿ ರಾಶಿ ರಾಶಿ ಹೋಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಏನಿದರ ವಿಶೇಷ? ಇಲ್ಲಿದೆ ಮಾಹಿತಿ. ದೇವಿಯ ದೇಗುಲದ ಅಂಗಳದಲ್ಲಿ ರಾಶಿ ರಾಶಿ ಹೋಳಿಗೆ ನೈವೇದ್ಯ. ಆರಾಧ್ಯ ದೇವಿಯ ದರ್ಶನ ಪಡೆದ ಭಕ್ತರಲ್ಲಿ ಕೃತಾರ್ಥ ಭಾವ. ಇದು ದುರ್ಗದಲ್ಲಿ ಹೋಳಿಗೆ ಹಬ್ಬ ಆಚರಿಸುವ ವಿಶೇಷ ಝಲಕ್. ಕೋಟೆನಾಡು ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದ ಬಳಿಯ ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇಗುಲ ಬಳಿಯ ದೃಶ್ಯವಿದು. ಪ್ರತಿ ವರ್ಷ ಆಷಾಢ ಮಾಸದ ಕೊನೆಯಲ್ಲಿ ಹೋಳಿಗೆ ಹಬ್ಬ ಆಚರಣೆ ಆಚರಿಸಲಾಗುತ್ತದೆ. ಭಕ್ತರು ಪ್ರತಿ ಮನೆಗಳಲ್ಲಿ ಹೋಳಿಗೆ ಮಾಡಿ ದೇವಿಗೆ ನೈವೇದ್ಯ ತರುತ್ತಾರೆ.…

Read More

ಕರಾವಳಿ: ಮಳೆ ನಿಂತು ಹೋದ ಮೇಲೆ ಬದುಕು ಅಸ್ತವ್ಯಸ್ಥ! – ಪುತ್ತೂರು, ಬೆಳ್ತಂಗಡಿ ಸೇರಿ ಜಿಲ್ಲೆಯ ಹಲವೆಡೆ ಭಾರೀ ಹಾನಿ – ಜಿಲ್ಲೆಗೆ ಬಂದ್ರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ – ಕಾಪುವಿನಲ್ಲಿ ಬೋಟ್ ಅಲ್ಲಿ ತಹಸೀಲ್ದಾರ್ ಮೇಡಂ ಸುತ್ತಾಟ – ವಾಮಂಜೂರು ಅಮೃತೇಶ್ವರ ದೇವಾಲಯ ಮುಳುಗಡೆ – ಬಜ್ಪೆಯಲ್ಲಿ ಶಾಲಾ ಕಟ್ಟಡ ಕುಸಿಯುವ ಆತಂಕ ಮಂಗಳೂರು: ರಾಜ್ಯದಲ್ಲಿ ಮಳೆ ಕಾರಣದಿಂದ ಅತೀ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಇಲ್ಲಿ ಇಂದಿಗೂ ಅನಾಹುತ ಮುಂದುವರಿದಿದೆ. ಗೋಡೆ, ಮನೆ, ಗುಡ್ಡ, ರಸ್ತೆ ಕುಸಿಯುತ್ತಲೇ ಇವೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಭೇಟಿ ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಅಕ್ಕ ಪಕ್ಕಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ…

Read More