Author: Nammur Express Admin

ಅರಣ್ಯ ಒತ್ತುವರಿ ಇನ್ಮುಂದೆ ಕಠಿಣ ಕಾನೂನು!? – ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ -ಮರಗಳ ಕಡಿತಲೆ,ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಹೆಚ್ಚಿದ ಅನಾಹುತ – ಒತ್ತುವರಿ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಖುಲ್ಲಾ? NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಲಿದೆ. ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ ಇದೀಗ ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಲು ಮುಂದಾಗಿದೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ದುರಂತಗಳು ಎಚ್ಚರಿಕೆಯ ಗಂಟೆಯಾಗಿದೆ. ಗುಡ್ಡ ಕುಸಿತಕ್ಕೆ ಮೂಲ ಕಾರಣ ಮರಗಳ ಕಡಿತಲೆ, ಜೊತೆಗೆ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ. ಇದರಿಂದ ಎಚ್ಚೆತ್ತ ಸರ್ಕಾರ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಕುರಿತು…

Read More

ಕುಸಿಯೋ ಹಂತದಲ್ಲಿರೋ ಮನೆಗಳು: ಶಾಸಕರ ಭೇಟಿಗೆ ಪಟ್ಟು! – ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ – ಕೊಪ್ಪ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ! – ಅಪಾಯ ಆಗುವ ಮುನ್ನ ಅಧಿಕಾರಿಗಳ ಭೇಟಿಗೆ ಮನವಿ NAMMUR EXPRESS NEWS ಶೃಂಗೇರಿ: ಚಿಕ್ಟಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ ಉಂಟಾಗಿದೆ. ಪರಿಣಾಮ ಗ್ರಾಮದ ಹಲವು ಮನೆಗಳು ಹಾಗೂ ಮನೆಗಳ ಸಂಪರ್ಕಕ್ಕಿರುವ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಈ ಘಟನೆ ಸಂಭವಿಸಲು ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಏನಿದು ಘಟನೆ..?? ರಾಷ್ಟ್ರೀಯ ಹೆದ್ದಾರಿ 169 ರ ಪಕ್ಕದಲ್ಲಿರುವ ಜಾಗದ ಮಾಲೀಕರು ಕಳೆದ ಡಿಸೆಂಬರ್‌ನಲ್ಲಿ ಜಾಗದ ಮಣ್ಣನ್ನು ತೆಗೆದಿರುತ್ತಾರೆ. ಇದರಿಂದ ಮೇಲಿರುವ ಮನೆಗಳಿಗೆ ಹಾನಿಯಾಗುವ ಎಲ್ಲಾ ಮುನ್ಸೂಚನೆಯಿದ್ದರೂ ಯಾವುದೇ ಮುಂಜಾಗ್ರತೆ ವಹಿಸದೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುತ್ತಾರೆ.ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು ತನಗಿರುವ ರಾಜಕೀಯ ಪ್ರಾಬಲ್ಯದಿಂದ…

Read More

ವಿಷ ಬೇರೆತ ಮಟನ್ ತಿಂದು ಕುಟುಂಬದ ನಾಲ್ವರ ಸಾವು! – ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಘಟನೆ.. ಆಕಸ್ಮಿಕವೋ…? ಆತ್ಮಹತ್ಯೆಯೋ..? – ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು – ಸಾವಿನಲ್ಲೂ ಒಂದಾದ ಅಣ್ಣ ತಂಗಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ – ಯುವತಿಯನ್ನು ಬೆತ್ತಲೆ ಮಾಡಿ ಖಾರದ ಪುಡಿ ಹಾಕಿ ಹಲ್ಲೆ: ಐವರು ಮಂಗಳಮುಖಿಯರು ಅರೆಸ್ಟ್! – ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದ 4 ವರ್ಷದ ಮಗು! NAMMUR EXPRESS NEWS ರಾಯಚೂರು: ವಿಷ ಬೆರೆತ ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘೋರ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ. ಇನ್ನೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಫುಡ್ ಪಾಯಿಸನ್‌ನಿಂದ ಹೀಗಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಭೀಮಣ್ಣ (60),…

Read More

ಎನ್.ಆರ್.ಪುರ ತಾಲೂಕಲ್ಲಿ ಹಲವೆಡೆ ಅವಾಂತರ: ದುರಂತ! – ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಹೂತು ಹೋದ ಬಸ್ – ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ – ಮಳೆಗೆ ಮರ ಕೊಳೆಯುತ್ತಿದೆ!: ಎನ್.ಆರ್.ಪುರ ಆಸ್ಪತ್ರೆಯ ಅವ್ಯವಸ್ಥೆ NAMMUR EXPRESS NEWS ಎನ್.ಆರ್.ಪುರ: ಎನ್.ಆರ್.ಪುರತಾಲೂಕಿನ ಕುದುರೆಗುಂಡಿ- ಕಟ್ಟಿನಮನೆ ಮಾರ್ಗದ ಮೂಲಕ ಚಿಕ್ಕಗ್ರಹಾರಕ್ಕೆ ಹೋಗುವ ಪ್ರಮುಖ ರಸ್ತೆಯ ಪಕ್ಕ ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗಿದ್ದು ಇದರಿಂದ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಮುತ್ತಿನಕೊಪ್ಪ ಗ್ರಾ ಪಂ ವ್ಯಾಪ್ತಿಯ ಬೈರಾಪುರ ಗ್ರಾಮದ ಜಮೀನಿಗೆ ನೀರು ನುಗ್ಗಿದೆ,ಇದೇ ಗ್ರಾಮದ ಮೋರಿ ಹಾಗೂ ರಸ್ತೆಗೆ ಹಾನಿಗಿದೆ. ಪಟ್ಟಣದ ವಾರ್ಡ್ ನಂ.04 ಮತ್ತು ವಾರ್ಡ್ ನಂ.05ರಲ್ಲಿ ಒಂದೊಂದು ಒಟ್ಟು ಎರಡು ಮನೆಯ ಗೋಡೆ ಕುಸಿದಿದ್ದು, ವಾರ್ಡ್ ನಂ.03 ರ ಪೌರ ಕಾರ್ಮಿಕರ ಕಾಲೋನಿಯಲ್ಲಿ ಕುರಿಗಳನ್ನು ಕಟ್ಟಿದ್ದ ಕಟ್ಟಡ ಕುಸಿದು ಒಂದು ಕುರಿ ಮೃತಪಟ್ಟಿದೆ. ಗುರುವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣ ಕಡಿಮೆಯಿತ್ತಾದರೂ ಹಾನಿಯ ಪ್ರಮಾಣ ಎಲ್ಲೆಡೆ…

Read More

ಉಡುಪಿಯಲ್ಲಿ ಮಾಸ್ಕ್ ಗ್ಯಾಂಗ್ ಕಳ್ಳತನ ಪ್ಲಾನ್! – ನಾಲ್ಕು ಮಂದಿ ಮುಸುಕುಧಾರಿಗಳಿಂದ ಪ್ಲಾಟ್ಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಮಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಗೋಲ್ಮಾಲ್ NAMMUR EXPRESS NEWS ಉಡುಪಿ: ಮಂಗಳೂರಲ್ಲಿ ಚಡ್ಡಿ ಗ್ಯಾಂಗ್ ಬಂಧನ ಬಳಿಕ ಕುಂದಾಪುರದಲ್ಲಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಕಳ್ಳರ ತಂಡ ಆತಂಕ ಸೃಷ್ಟಿ ಮಾಡಿದೆ. ಉಡುಪಿ ನಗರದ ಬ್ರಹ್ಮಗಿರಿಯ ಭಾಗದ ಅಪಾರ್ಟ್ ಮೆಂಟ್ ನ ಪ್ಲಾಟ್ ವೊಂದಕ್ಕೆ ನಾಲ್ಕು ಮಂದಿ ಮುಸುಕುಧಾರಿಗಳು ನುಗ್ಗುಲು ಯತ್ನಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಆ. 1 ರಂದು ಮುಂಜಾನೆ ನಡೆದಿದೆ. ಮುಸುಕುಧಾರಿ ಆಗಂತುಕರು ರಾಡ್‌ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್‌ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್‌ ಮೆಂಟ್‌ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ…

Read More

ಕರ್ನಾಟಕ ಟಾಪ್ ನ್ಯೂಸ್ ಲೈಂಗಿಕ ದೌರ್ಜನ್ಯ: ಪ್ರಜ್ವಲ್ ರೇವಣ್ಣ ವಿಡಿಯೋಗಳು ಅಸಲಿ! – ಎಫ್ ಎಸ್ ಎಲ್ ವರದಿ ಬಹಿರಂಗ: ಮುಂದೇನು ಎಂಬ ಕುತೂಹಲ – ಬೆಂಗಳೂರು: ಇಬ್ಬರು ಯುವಕರ ಹೆಸರು ಬರೆದಿಟ್ಟು ಮಹಿಳೆ ಆತ್ಮಹತ್ಯೆ! – ಮೈಸೂರು: ನೇಣು ಬಿಗಿದುಕೊಂಡು 11 ವರ್ಷದ ಬಾಲಕ ಆತ್ಮಹತ್ಯೆ! – ಹಾಸನ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಅರ್ಚಕನ ಬಂಧನ! NAMMUR EXPRESS NEWS ಬೆಂಗಳೂರು : ಅತ್ಯಾಚಾರ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಕೇಸ್ ಸಂಬಂಧ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದ ವಿಡಿಯೋಗಳೆಲ್ಲವೂ ಅಸಲಿ. ಯಾವ ವಿಡಿಯೋಗಳನ್ನು ತಿರುಚಲಾಗಿಲ್ಲ ಎಂದು ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳಲ್ಲಿ ಪುರಷನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಹೀಗಾಗಿ…

Read More

ಅಯ್ಯೋ ದೇವ್ರೇ…ಮುಗಿಯಲಿಲ್ಲ ಮಳೆ ಆರ್ಭಟ! – 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ – ರಾಜ್ಯದಲ್ಲಿ ಮುಂದುವರಿದ ಮಳೆ ಹಾನಿ – ಮಲೆನಾಡು -ಕರಾವಳಿಯಲ್ಲಿ ಮಳೆ ಡೇಂಜರ್ NAMMUR EXPRESS NEWS ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಎಲ್ಲೆಡೆ ಹಾನಿ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಇನ್ನು ಒಂದು ವಾರ ಮಳೆ ಆರ್ಭಟ ಇದೆ. ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು ಸುತ್ತಮುತ್ತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಮೈಸೂರು, ಮಂಡ್ಯ ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮಧ್ಯಮ ಮಳೆಯಾಗಲಿದ್ದು ಬೆಳಗಾವಿ, ಬೀದ‌ರ್, ಕಲಬುರಗಿ, ಧಾರವಾಡ ಮತ್ತು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ವ್ಯವಹಾರದಲ್ಲಿ ಹೆಚ್ಚಿನ ಜಂಜಾಟ ಇರುತ್ತದೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಕುಟುಂಬದಲ್ಲಿ ಶಾಂತಿಗಾಗಿ ಪ್ರಯತ್ನಗಳನ್ನು ಮಾಡಿ. ನಿಮ್ಮ ತಂದೆಯ ಸಹಾಯದಿಂದ ನೀವು ಸ್ವಲ್ಪ ಪೂರ್ವಜರ ಆಸ್ತಿಯನ್ನು ಪಡೆಯಬಹುದು. ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆ ಇರುತ್ತದೆ. ಸೋಮಾರಿತನ ಹೆಚ್ಚಾಗಲಿದೆ. ನಿಮ್ಮ ತಾಯಿ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ** ವೃಷಭ ರಾಶಿ : ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ಆದರೆ ಇಂದು ನೀವು ಮಾಡುವ ಒಳ್ಳೆಯ ಕೆಲಸದಿಂದ ಗೌರವವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಪ್ರಗತಿಯೊಂದಿಗೆ,…

Read More

ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಕುಬ್ಜ ನದಿ ಸ್ಪರ್ಶ – ಏನಿದು ಸ್ಥಳ ಪುರಾಣ?: ಭಕ್ತರಲ್ಲಿ ಪುಳಕ – ಎರಡನೇ ಬಾರಿಗೆ ದೇಗುಲ ಸಸ್ಪರ್ಶ ಮಾಡಿದ ನದಿ NAMMUR EXPRESS NEWS ಕಮಲಶಿಲೆ: ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಕುಬ್ಜ ನದಿ ಸ್ಪರ್ಶಸಿತು. ಇದು ನದಿಯ ಶಾಪ ವಿಮೋಚನೆ ಕಥೆಯನ್ನು ಹೇಳುತ್ತಿದೆ. ಕೈಲಾಸದಲ್ಲಿ ಶಿವ ಪಾರ್ವತಿಯ ಮುಂದೆ ಪಿಂಗಳೆ ಎಂಬ ಅಪ್ಸರೆ ಕೊಬ್ಬಿನಿಂದ ನರ್ತಿಸಲು ಹಿಂಜರುಗಿದಾಗ ದೇವಿಯು ನಿನ್ನನು ನೋಡಿ ಎಲ್ಲರು ಅಸಹ್ಯ ಪಡುವಂತೆ ಕುಬ್ಜೆಯಾಗು ನಿನ್ನ ಮೈ ಬೆನ್ನು ಎಲ್ಲ ಅಂಕುಡೊಂಕು ಆಗಲಿ ಎಂದು ಶಾಪ ಕೊಡುತ್ತಾಳೆ, ಆಗ ಅಪ್ಸರೆಗೆ ತನ್ನ ತಪ್ಪಿನ ಅರಿವಾಗಿ ದೇವೀಯ ಹತ್ತಿರ ಕಣ್ಣೀರು ಇಡುತ್ತಾಳೆ .ಅಮ್ಮ ಏಕೆ ನಿನ್ನ ಮಗಳ ಮೇಲೆ ಇಷ್ಟೊಂದು ನಿಷ್ಕರುಣಿ ಇದೇ , ಕ್ಷಮಿಸು ಎಂದು ಬೇಡಿದಾಗ ತಾಯಿ ಆಯಿತು ಎಂದು ತನ್ನ ಶಾಪಕ್ಕೆ ವಿಮೋಚನೆಯ ದಾರಿ ನೀಡುತ್ತಾರೆ. ಮುಂದೆ ದುಷ್ಟರಾದ ಖರಾಸುರ ಮತ್ತು ರಟ್ಟಾಸುರ ರನ್ನು ಸಂಹಾರ ಮಾಡಲು ನಾನು…

Read More

ಇಂದಿನಿಂದ ಹೊಸ ನಿಯಮ ಜಾರಿ! – ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್‌ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ – ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ NAMMUR EXPRESS NEWS ಆಗಸ್ಟ್​​​ ಒಂದರಿಂದ ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಈ ಬಗ್ಗೆ ಬಜೆಟ್​​ ಮಂಡನೆ ವೇಳೆಯೇ ಹೇಳಲಾಗಿತ್ತು. ಹಲವು ವಹಿವಾಟುಗಳ ಬೆಲೆಗಳಲ್ಲಿ ಬದಲಾವಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್​​​ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ತಿಂಗಳು ಅಂದರೆ ಜುಲೈನಲ್ಲಿ ಬಜೆಟ್​​​ ಮಂಡನೆಯ ನಂತರ ಹಲವು ವಿಚಾರಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಇದು ಆಸಗ್ಟ್​​​ ಒಂದರಿಂದ ಜಾರಿಗೆ ಬರಲಿದೆ. ಈ ಬದಲಾವಣೆ ನಿಮ್ಮ ಜೇಬಿಗೆ ಕತ್ತರಿ ಕೂಡ ಹಾಕಬಹುದು. ಇದು ನಿಮ್ಮ ದಿನನಿತ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಾಗೂ ವಸ್ತುಗಳ ಬೆಲೆಯಲ್ಲಿ ಬದಲಾವಣೆಯನ್ನು ತರಲಿದೆ. HDFC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳು ಮತ್ತು LPG ಸಿಲಿಂಡರ್‌ನ ಬೆಲೆಗೆ ಸಂಬಂಧಿಸಿದ ನಿಯಮಗಳನ್ನು ಇದು…

Read More