Author: Nammur Express Admin

ಆ.5 ರಿಂದ ಶ್ರಾವಣ ಮಾಸ…! – ಇನ್ನು ಸಾಲು ಸಾಲು ಹಬ್ಬಕ್ಕೆ ಸಿದ್ಧತೆ – ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ NAMMUR EXPRESS NEWS ಆಗಸ್ಟ್‌ 5 ರಿಂದ ಶಿವನಿಗೆ ಸಮರ್ಪಿತವಾದ ಶ್ರಾವಣ ಮಾಸ ಪ್ರಾರಂಭವಾಗುವುದು. ಶಿವಭಕ್ತರು ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ವರ್ಷ ಶ್ರಾವಣ ಮಾಸವು ಸೋಮವಾರದಿಂದ ಆರಂಭವಾಗುತ್ತಿರುವುದರಿಂದ ಶ್ರಾವಣ ಮಾಸದ ಮಹತ್ವ ಮತ್ತಷ್ಟು ಹೆಚ್ಚಿದೆ. ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ! ಇನ್ನು ಆ.5 ರಿಂದ ಶ್ರಾವಣ ಮಾಸ ಕಾಲಿಡಲಿದ್ದು, ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಹಾಗೂ ಆಭರಣದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದು ಈ ವರ್ಷ ಭರ್ಜರಿ ವಹಿವಾಟು ಕಾಣುವ ನಿರೀಕ್ಷೆ ಇದೆ.

Read More

ರಾಜ್ಯದಲ್ಲಿ ಅದ್ದೂರಿ ಗಣೇಶ ಹಬ್ಬಕ್ಕೆ ಸಜ್ಜು! – ಮಳೆ ಕಡಿಮೆಯಾಗಲು ಗಣೇಶನಲ್ಲಿ ಮೊರೆ – ವಿಗ್ರಹ ತಯಾರಕರು, ವ್ಯಾಪಾರಿಗಳಲ್ಲಿ ಲಾಭದ ನಿರೀಕ್ಷೆ – ಯುವಕರಲ್ಲಿ ಗರಿಗೆದರಿದ ಉತ್ಸಾಹ: ಗಣೇಶ ಮತ್ತೆ ಬಂದ NAMMUR EXPRESS NEWS ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಕೋಟ್ಯಂತರ ರೂಪಾಯಿ ವಹಿವಾಟಿಗೆ ಕಾರಣವಾಗುವ ಗಣೇಶ ಚತುರ್ಥಿ ಈ ಬಾರಿ ಗಣೇಶ ವಿಗ್ರಹ ತಯಾರಕರು, ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ವ್ಯಾಪಾರಿಗಳು ಹಾಗೂ ಮಾರಾಟಗಾರರು ಆದಾಯದ ನಿರೀಕ್ಷೆಯಲ್ಲಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಗೌರಿ ಗಣೇಶ ವಿಗ್ರಹಗಳ ಮಾರಾಟ ಮಳಿಗೆಗೆಳನ್ನು ಹಾಕಲು ವಿಗ್ರಹ ತಯಾರಕರು ಸಿದ್ಧತೆಯಲ್ಲಿದ್ದಾರೆ. ಗಣೇಶೋತ್ಸವ ಸಂಘಟಕರು ನೇರವಾಗಿ ತಯಾರಕರನ್ನು ಭೇಟಿ ಮಾಡಿ ಖರೀದಿ ಮಾಡಲಿದ್ದು ಮುಂಗಡ ಬುಕಿಂಗ್ ಗೆ ಆರ್ಡರ್ ನೀಡುತ್ತಿದ್ದಾರೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಣ್ಣದ ಗಣಪತಿಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ನಿರ್ಬಂಧಿಸಲಾಗಿದೆ. ಜಲಮೂಲಗಳು ಹಾಳಾಗುವುದನ್ನು ತಪ್ಪಿಸಬೇಕು. ಹಾಗಾಗಿ ಪರಿಸರ…

Read More

ಮಲೆನಾಡಿನಲ್ಲಿ ಗಿಡ್ಡ ತಳಿ ಜಾನುವಾರು ಮಾಯ! – ವಿನಾಶದ ಅಂಚಿನಲ್ಲಿ ಗಿಡ್ಡತಳಿ ಹಸುಗಳು – ಜಾನುವಾರು ಸಾಕಣೆಗೆ ಬೇಕು ಪ್ರೋತ್ಸಾಹ NAMMUR EXPRESS NEWS ಮಲೆನಾಡು: ಮಲೆನಾಡಿನಾದ್ಯಂತ ಕಂಡು ಬರುತ್ತಿದ್ದ ಮಲೆನಾಡಿನ ಗಿಡ್ಡ ತಳಿಗಳ ಜಾನುವಾರುಗಳನ್ನು ಸಾಕಣೆ, ನಿರ್ವಹಣೆ ಮಾಡಲಾಗದೇ ಮಾರಾಟ ಮಾಡುತ್ತಿರುವುದರಿಂದ ಕಣ್ಮರೆಯಾಗುತ್ತಿವೆ. ಇದು ಮುಂದುವರಿದಲ್ಲಿ ಈ ತಳಿಯ ಜಾನುವಾರುಗಳು ಅವಸಾನದ ಅಂಚಿಗೆ ತಲುಪುವುದು ನಿಶ್ಚಿತ. ಮಲೆನಾಡಿನಲ್ಲಿ ಈ ಹಿಂದೆ ಪ್ರತೀ ಮನೆಗಳ ಕೊಟ್ಟಿಗೆಗಳಲ್ಲೂ ಜಾನುವಾರುಗಳು ತುಂಬಿಕೊಂಡಿದ್ದವು. ಜಾನುವಾರುಗಳನ್ನು ಗೋಮಾಳಗಳಿಗೆ ಬಿಟ್ಟು ಮೇಯಿಸಿಕೊಂಡು ಬರಲು ದನ ಕಾಯುವ ವ್ಯಕ್ತಿಯೊಬ್ಬ ಮೀಸಲಿರುತ್ತಿದ್ದ. ಊರಿನ ಎಲ್ಲ ಜಾನುವಾರುಗಳನ್ನು ಗೋಮಾಳದಲ್ಲಿ ಮೇಯಿಸಿಕೊಂಡು ಬರಲು ಈ ಹಿಂದೆ ಗೋಪಾಲಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಮಳೆಗಾಲ ಮುಗಿದು ಪೈರುಗಳ ಕೊಯ್ದು ಮುಗಿದ ಮೇಲೆ ಜಾನುವಾರುಗಳನ್ನು ಭತ್ತದ ಗದ್ದೆಗಳಲ್ಲಿ ಮೇಯಲು ಬಿಡಲಾಗುತ್ತಿತ್ತು. ಸದ್ಯ ಮಲೆನಾಡು ಭಾಗದಲ್ಲಿ ಗೋಮಾಳಗಳು ಒತ್ತುವರಿದಾರರು, ಪ್ರಭಾವಿಗಳ ಪಾಲಾಗಿದ್ದು, ಗೋಮಾಳಗಳಿಲ್ಲದೇ ದನ ಮೇಯಿಸುತ್ತಿದ್ದವರಿಗೂ ಕೆಲಸ ಇಲ್ಲದಂತಾಗಿದೆ. ಗದ್ದೆ, ಗೋಮಾಳ ಹೋಗಿ ತೋಟ ಬಂತು! ಮಲೆನಾಡಿನಲ್ಲಿ ಈ ಹಿಂದೆ ಗಿಡ್ಡ…

Read More

ಹೊಸನಗರ ಕೊಡಚಾದ್ರಿ ಕಾಲೇಜಲ್ಲಿ ಉದ್ಯೋಗ ಮೇಳ – ಆ.9ಕ್ಕೆ ಉದ್ಯೋಗ ಮೇಳ: 10ಕ್ಕೂ ಹೆಚ್ಚು ಕಂಪನಿಗಳು ಹಾಜರ್ – ಉದ್ಯೋಗಾಕಾಂಕ್ಷಿಗಳು ಏನೇನ್ ಮಾಡಬೇಕು ಇಲ್ಲಿದೆ ಮಾಹಿತಿ NAMMUR EXPRESS NEWS ಹೊಸನಗರ : ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ ಮತ್ತು ಐ.ಕ್ಯೂ.ಎ.ಸಿ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಈ ಉದ್ಯೋಗ ಮೇಳದಲ್ಲಿ 15 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಆಯಾ ಕಂಪನಿಗಳ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ, ನೇರ ಸಂದರ್ಶನದ ಮೂಲಕ ಪ್ರಯೋಜನ ಪಡೆಯಬಹುದಾಗಿದೆ. ಸೂಚನೆಗಳು: * ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ದಿನಾಂಕ: 08-08-2024 ರೊಳಗೆ ಈ ಕೆಳಗಿನ QR Code ಅಥವಾ ಗೂಗಲ್ ಲಿಂಕ್ ಮುಖಾಂತರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. Link: https://forms.gle/N9PqThNWBvVp1Xw98 . ಸ್ಥಳದಲ್ಲಿಯೇ ನೋಂದಣಿ ಸಹ ಇರುತ್ತದೆ. * ಅಭ್ಯರ್ಥಿಗಳು ಆಧಾರ್…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು. ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ. ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿರುವುದಿಲ್ಲ. ** ವೃಷಭ ರಾಶಿ : ಉತ್ತಮ ದಿನವಾಗಿರುತ್ತದೆ. ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಪ್ರೇಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ ಒತ್ತಡದ ಪರಿಸ್ಥಿತಿ…

Read More

ಕೊಲ್ಲೂರು ಅಭಿವೃದ್ಧಿಗೆ ಕೇಂದ್ರಕ್ಕೆ ನಿಯೋಗ – ಸಂಸದ ರಾಘವೇಂದ್ರ, ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಮನವಿ – ಮೂಕಾಂಬಿಕಾ ವಿಮಾನ ನಿಲ್ದಾಣ ಮಂಜೂರಾತಿಗೆ ಪತ್ರ NAMMUR EXPRESS NEWS ಬೈಂದೂರು: ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ.ರಾಘವೇಂದ್ರ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದ ನಿಯೋಗವು ಕೇಂದ್ರ ವಿಮಾನಯಾನ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಬೈಂದೂರಿನಲ್ಲಿ ಮೂಕಾಂಬಿಕಾ ಕಾರಿಡಾರ್ ನಿರ್ಮಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿತು. ಜೊತೆಗೆ ಬೈಂದೂರು ರೈಲ್ವೇ ನಿಲ್ದಾಣವನ್ನೂ ಮೇಲ್ದರ್ಜೆಗೆ ಏರಿಸಬೇಕು, ಮೂಕಾಂಬಿಕಾ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಬೇಕು, ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ಕಲ್ಪಿಸಬೇಕು ಎಂದು ವಿವಿಧ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಕೊಲ್ಲೂರು ದೇವಳದ ಮಾಜೀ ಧರ್ಮದರ್ಶಿಗಳಾದ ಕೃಷ್ಣಪ್ರಸಾದ್ ಅಡ್ಯಂತಾಯ, ವೆಂಕಟೇಶ್ ಕಿಣಿ, ಆದರ್ಶ ಮೊದಲಾದವರು ಇದ್ದರು.

Read More

ಗುಡ್ಡ ಕುಸಿತಕ್ಕೆ 200 ಮಂದಿ ಬಲಿ!? – 151 ಮಂದಿ ಶವ ಪತ್ತೆ: ಇನ್ನು 150ಕ್ಕೂ ಹೆಚ್ಚು ಮಂದಿ ನಾಪತ್ತೆ – ಎಲ್ಲೆಂದರಲ್ಲಿ ಹೆಣಗಳ ರಾಶಿ, ಕೊಚ್ಚಿ ಹೋದ ಬದುಕು.! – ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು – ಕರ್ನಾಟಕದ 10ಕ್ಕೂ ಹೆಚ್ಚು ಮಂದಿ ಸಾವು?! – ಮೃತ ಕನ್ನಡಿಗ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ NAMMUR EXPRESS NEWS ತಿರುವನಂತಪುರಂ: ಕೇರಳ-ಹೆಸರು ಕೇಳುತ್ತಿದ್ದರೆ ಸಾಕು ಹಚ್ಚ ಹಸಿರಿನ ಗುಡ್ಡ-ಬೆಟ್ಟ, ನದಿಯ ನಿನಾದ, ಪ್ರಕೃತಿ ಸೌಂದರ್ಯದಿಂದ ಕೂಡಿದ ಬಯಲು ಈ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಅದರಲ್ಲಿಯೂ ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ. ಆದರೆ ಇದೀಗ ಇಲ್ಲಿನ ಚಿತ್ರಣವೇ ಬದಲಾಗಿದೆ. ಮಳೆ, ಗುಡ್ಡ ಕುಸಿತ ವಯನಾಡು ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ ಊರನ್ನೇ ಅಪೋಶನ ತೆಗೆದುಕೊಂಡಿದ್ದು, ಇದೀಗ ಎಲ್ಲಡೆ ಆಕ್ರಂದನದ ಕೂಗು ಕೇಳಿ ಬರುತ್ತಿದೆ. ಸ್ವರ್ಗದಂತಿದ್ದ ಭೂಮಿ…

Read More

ತೀರ್ಥಹಳ್ಳಿಯಲ್ಲಿ ಹಲವು ದುರಂತ! – ಮೀನು ಹಿಡಿಯಲು ಹೋಗಿ ಅಪಘಾತ: ಯುವಕ ಸಾವು – ತೀರ್ಥಹಳ್ಳಿಯ ಶಂಕರಮನೆ ಬಳಿ ನಡೆದಿದ್ದ ಅಪಘಾತ: ಮಣಿಪಾಲ ಆಸ್ಪತ್ರೆಯಲ್ಲಿ ಸಾವು – ಓವರ್ ಸ್ಪೀಡ್ ಚಲಿಸುತ್ತಿದ್ದ ಕಾರ್ ಪಲ್ಟಿ: ಮೇಗರವಳ್ಳಿಯಲ್ಲಿ ಘಟನೆ – ಕೆಳಕೊಪ್ಪ: ವಿದ್ಯುತ್ ಶಾಕ್: ಜಾನುವಾರುಗಳು ಸಾವು – ನಂಟೂರು ಗ್ರಾಮದಲ್ಲಿ ಕುಸಿದಮನೆ: ಓರ್ವ ಪಾರು NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಜೂನ್ 26 ರಂದು ತೀರ್ಥಹಳ್ಳಿಯಿಂದ ಐವರು ಮೀನು ಹಿಡಿಯಲು ಕಾರಿನಲ್ಲಿ ಹೋಗಿದ್ದರು. ವಾಪಾಸ್‌ ಬರುವಾಗ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಪಘಾತ ಆದ ದಿನವೇ ಅತಿಶಯ (23) ಎಂಬ ಯುವಕ ಮೃತಪಟ್ಟಿದ್ದ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿತ್ತು. ಸಚಿನ್ (21 ) ಎಂಬ ಯುವಕನ ಬೆನ್ನು ಮೂಳೆ ಮುರಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನನ್ನು ಉಳಿಸಲು…

Read More

ಭಯಂಕರ ಮಳೆ ಮುನ್ಸೂಚನೆ..! – ಕರಾವಳಿ, ಮಲೆನಾಡು ಭಾಗಕ್ಕೆ ರೆಡ್ ಅಲರ್ಟ್ – ಎಲೆಲ್ಲಿ ವಿಪರೀತ ಮಳೆ? ಎಲ್ಲಿ ಹಗುರ ಮಳೆ? ಇಲ್ಲಿದೆ ವಿವರ NAMMUR EXPRESS NEWS ಬೆಂಗಳೂರು: ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಈ ದಿನ ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಸುತ್ತಮುತ್ತ ಚದುರಿದಂತೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಚಿಕ್ಕಬಳ್ಳಾಪುರ ಭಾರಿ ಮಳೆ! ದಕ್ಷಿಣಒಳನಾಡಿ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಬೆಳಗಾವಿಯಲ್ಲಿ ಮಧ್ಯಮ ಮಳೆ! ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ…

Read More

ಸುಳ್ಯ ಬಸ್ ನಿಲ್ದಾಣದಲ್ಲೇ ಬಸ್ಸಿಗೆ ಬೆಂಕಿ! – ಪ್ರಯಾಣಿಕರು ಪಾರು: ಏನಿದು ಘಟನೆ? – ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣು! – ಮಂಗಳೂರಿನಲ್ಲಿ ಮತ್ತೆ ಅಂಡ‌ರ್ ವರ್ಲ್ಡ್ ಸದ್ದು! – ಮಂಗಳೂರು: ಟ್ಯಾಂಕರ್‌ನಡಿ ಸಿಲುಕಿ ಸ್ಕೂಟ‌ರ್ ಸವಾರ ಸಾವು NAMMUR EXPRESS NEWS ಸುಳ್ಯ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಬಿದ್ದು ಭಾರೀ ಅವಘಡ ತಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೊಯನಾಡು ಭಾಗಕ್ಕೆ ತೆರಳಬೇಕಾಗಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ದಟ್ಟ ಹೊಗೆ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ದಟ್ಟ ಹೊಗೆ ಬರುತ್ತಿದ್ದಂತೆ ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಮೂಲಕ, ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ ಶರಣು! ಉಡುಪಿ: ಬಡಗುತಿಟ್ಟು ಯುವ ಯಕ್ಷಗಾನ ಕಲಾವಿದ ನೇಣಿಗೆ…

Read More