Author: Nammur Express Admin

5 ವರ್ಷ ಕಳೆಯಿತು.ಸಿದ್ದಾರ್ಥ ಅವರಿಗೆ ನಮ್ಮೆಲ್ಲರ ನಮನ! – ಜುಲೈ 29ರಂದು ವಿಧಿವಶರಾಗಿದ್ದ ಕಾಫಿ ನಾಡ ಖ್ಯಾತ ಉದ್ಯಮಿ – ಸಾವಿರಾರು ಜನರಿಗೆ ಬದುಕು ಕೊಟ್ಟ ಪುಣ್ಯಾತ್ಮನಿಗೆ ನುಡಿ ನಮನ NAMMUR EXPRESS ಕಾಫಿ ಡೇ ಸಂಸ್ಥೆಯೊಂದನ್ನು ಕಟ್ಟಿ ಸೊನ್ನೆಯಿಂದ ಹೆಮ್ಮರವಾಗಿ ಬೆಳೆದು, ಕಾಫಿನಾಡಿನ ಖ್ಯಾತಿಯನ್ನು ಕಾಫಿಯ ಸವಿಯೊಂದಿಗೆ ಜಗದಗಲ ಪಸರಿಸಿದ ಕಾಫಿನಾಡಿನ ಹೆಮ್ಮೆಯ ಮಗ ವಿ.ಜಿ. ಸಿದ್ದಾರ್ಥ್ ಅವರು ನಮ್ಮನ್ನಗಲಿ 5 ವರ್ಷ ಕಳೆದಿದೆ.ಸಿದ್ದಾರ್ಥ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಮೂಲಕ ಸದಾ ನಮ್ಮೊಡನೆ ಜೀವಂತವಾಗಿದೆ. ಸಾವಿರಾರು ಜನರಿಗೆ ಬದುಕು ಕೊಟ್ಟ ಪುಣ್ಯಾತ್ಮ ಮರೆಯಾಗಿದ್ದಾರೆ. ಆದ್ರೆ ಅವರ ನೆನಪುಗಳು ಮಾಸಿಲ್ಲ. ಹೌದು. ಮಲೆನಾಡಿನ ಪುಟ್ಟ ಹಳ್ಳಿಯಿಂದ ದೇಶ ವಿದೇಶದಲ್ಲೂ ಕಾಫಿ ಬೇಡಿಕೆ ಹೆಚ್ಚಿಸಿದ, ಮಲೆನಾಡಿನ ನೂರಾರು ಯುವಕರಿಗೆ ಗೂಡು ಕಟ್ಟಿ ಬದುಕು ನೀಡಿದ ಸಿದ್ದಾರ್ಥ ಅವರು ಜುಲೈ 29 2019ರಲ್ಲಿ ಮಂಗಳೂರು ಬಳಿ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರು ನೆನಪು ಮಾತ್ರ. ಆದರೆ ಅವರ ಸಾಧನೆ ಎಲ್ಲರಿಗೂ…

Read More

ಡಿಗ್ರಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ! – ರಾಜ್ಯದ ಖಾಸಗಿ ವಿವಿಗಳಲ್ಲಿ ಹೊಸ ನಿಯಮ – ಉನ್ನತ ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ – ಮುಂದಿನ ವರ್ಷದಿಂದಲೇ ಜಾರಿ NAMMUR EXPRESS NEWS ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಪದವಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಮುಂದಾಗಿದೆ. ಹೌದು, ವೃತ್ತಿಪರ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತಿರುವ ಮಾದರಿಯಲ್ಲಿಯೇ ಖಾಸಗಿ ವಿವಿಗಳಲ್ಲಿ ಪದವಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಖಾಸಗಿ ಕಾಲೇಜುಗಳಲ್ಲಿ ಪದವಿ ಸೀಟುಗಳಲ್ಲಿ ಶೇ.40 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದ್ದು, ಇದಕ್ಕೆ ಒಪ್ಪಿಗೆ ನೀಡಿರುವ ಖಾಸಗಿ ವಿವಿಗಳು, ಕೇಂದ್ರ ಮಟ್ಟದಲ್ಲಿ ಐಐಟಿಗಳಿಗೆ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಮಾದರಿ ಅನುಸರಿಸಿ ಸೀಟು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿವೆ. ರಾಜ್ಯದ…

Read More

ತುಂಬಿದ ಹಳ್ಳದಲ್ಲಿ ಕೃಷಿಕ ತೇಲಿ ಹೋಗಿ ಸಾವು! – ಹಳ್ಳದಲ್ಲಿ ತೇಲಿ ಹೋಗಿ ಸಾವು: ಇಂದು ಶವ ಪತ್ತೆ – ತೀರ್ಥಹಳ್ಳಿ ತಾಲೂಕಿನ ದೇವಂಗಿ ಬಳಿ ಘಟನೆ – ಖ್ಯಾತ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಮಳೆಗೆ ನಾಲ್ಕನೇ ಬಲಿಯಾಗಿದೆ. ದೇವಂಗಿ ಬಳಿ ಉಂಟೂರು ಹಳ್ಳ ದಾಟುವಾಗ ತೇಲಿ ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ತೋಟದಲ್ಲಿ ಶವ ಸಿಕ್ಕಿದೆ. ಕೃಷ್ಣಮೂರ್ತಿ ನಾಯ್ಕ್ (55) ಮೃತರು. ಇವರು ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ. ಮೃತರು ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಆಗಲಿದ್ದಾರೆ. ಹಳ್ಳದಲ್ಲಿ ತೇಲಿ ಹೋಗಿದ್ದರು! ಉಂಟೂರು ಹಳ್ಳ ಭಾರೀ ನೀರು ಹರಿಯುತ್ತಿದ್ದು ಮಂಗಳವಾರ ಸಂಜೆ ಕೆಲಸಕ್ಕೆ ಹೋಗಿ ಬರುವಾಗ ನಾಪತ್ತೆಯಾಗಿದ್ದರು. ಮನೆಯವರೆಲ್ಲ ರಾತ್ರಿ ಇಡೀ ಹುಡುಕಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಸುರಿದ ಮಳೆಗೆ ಹಳ್ಳದಲ್ಲಿ ನೆರೆ ಬಂದಿತ್ತು. ಕಾಲು ಜಾರಿ ಹಳ್ಳಕ್ಕೆ ಬಿದ್ದು ತೇಲಿ…

Read More

ತುಂಬಿದ ಹಳ್ಳದಲ್ಲಿ ಕೃಷಿಕ ತೇಲಿ ಹೋಗಿ ಸಾವು! – ಹಳ್ಳದಲ್ಲಿ ತೇಲಿ ಹೋಗಿ ಸಾವು: ಇಂದು ಶವ ಪತ್ತೆ – ತೀರ್ಥಹಳ್ಳಿ ತಾಲೂಕಿನ ದೇವಂಗಿ ಬಳಿ ಘಟನೆ – ಖ್ಯಾತ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಮಳೆಗೆ ನಾಲ್ಕನೇ ಬಲಿಯಾಗಿದೆ. ದೇವಂಗಿ ಬಳಿ ಉಂಟೂರು ಹಳ್ಳ ದಾಟುವಾಗ ತೇಲಿ ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ತೋಟದಲ್ಲಿ ಶವ ಸಿಕ್ಕಿದೆ  ಕೃಷ್ಣಮೂರ್ತಿ ನಾಯ್ಕ್ (55) ಮೃತರು. ಇವರು ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ. ಮೃತರು ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಆಗಲಿದ್ದಾರೆ. ಹಳ್ಳದಲ್ಲಿ ತೇಲಿ ಹೋಗಿದ್ದರು! ಉಂಟೂರು ಹಳ್ಳ ಭಾರೀ ನೀರು ಹರಿಯುತ್ತಿದ್ದು ಮಂಗಳವಾರ ಸಂಜೆ ಕೆಲಸಕ್ಕೆ ಹೋಗಿ ಬರುವಾಗ ನಾಪತ್ತೆಯಾಗಿದ್ದರು. ಮನೆಯವರೆಲ್ಲ ರಾತ್ರಿ ಇಡೀ ಹುಡುಕಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಸುರಿದ ಮಳೆಗೆ ಹಳ್ಳದಲ್ಲಿ ನೆರೆ ಬಂದಿತ್ತು. ಕಾಲು ಜಾರಿ ಹಳ್ಳಕ್ಕೆ ಬಿದ್ದು ತೇಲಿ…

Read More

ಕರಾವಳಿ ನ್ಯೂಸ್ ವಿದ್ಯಾರ್ಥಿಗೆ ಎದೆನೋವು: ಆಸ್ಪತ್ರೆಗೆ ಬಸ್! – ಪ್ರಯಾಣಿಕರ ಸಮೇತ ಆಸ್ಪತ್ರೆಗೆ ತೆರಳಿದ ಬಸ್ ಸಿಬ್ಬಂದಿ – ವಿದ್ಯಾರ್ಥಿಗೆ ಚಿಕಿತ್ಸೆ: ಸಾರ್ವಜನಿಕರ ಮೆಚ್ಚುಗೆ – ಉಡುಪಿ ಜಿಲ್ಲೆಯಲ್ಲಿ ಶಾಲೆ ಕಾಲೇಜಿಗೆ ರಜೆ – ಕಾಪು, ಹೆಬ್ರಿ, ಕಾರ್ಕಳ ಮತ್ತು ಉಡುಪಿ ತಾಲ್ಲೂಕು ರಜೆ NAMMUR EXPRESS NEWS ಮಂಗಳೂರು: 13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿ ತಟ್ಟನೆ ಎದೆ ನೋವೆಂದು ಹಾರ್ಟ್ ಅಟ್ಯಾಕ್ ಸೂಚನೆ ನೀಡುತ್ತಿದ್ದಂತೆ ಎಚೆತ್ತು ಗೊಂಡ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗೂ ಮಹೇಶ್ ಪೂಜಾರಿ, ಸುರೇಶ್ ವಿದ್ಯಾರ್ಥಿ ಅರೋಗ್ಯ ದೃಷ್ಟಿಯಿಂದ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 ಕಿಮೀ ದೂರವನ್ನು 6ನಿಮಿಷಗಳಲ್ಲಿ ಪ್ರಯಾಣಿಸಿ ನಗರದ ಕಂಕನಾಡಿ ಆಸ್ಪತ್ರೆಯ ಹೊರಗಣವನ್ನು ಯಾರ ಅಪ್ಪಣೆಯನ್ನು ಕೇಳದೆ ಪ್ರಾಮುಖ್ಯತೆ ಯನ್ನು ಅರಿತು ಒಳ ಪ್ರವೇಶಿಸಿ ವಿದ್ಯಾರ್ಥಿ ಯನ್ನು ತುರ್ತು ನಿಗಾ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಸರ್ವಾರ್ಥ ಸಿದ್ಧಿ ಯೋಗದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನೀವು ಜೀವನದಲ್ಲಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹೊಸ ಜನರನ್ನು ಭೇಟಿ ಮಾಡಿ. ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವ ಅವಕಾಶವನ್ನು ಪಡೆಯುತ್ತೀರಿ. ಕೆಲವು ಜನರು ಹೊಸ ವಾಹನವನ್ನು ಖರೀದಿಸಲು ಯೋಜಿಸಬಹುದು. ** ವೃಷಭ ರಾಶಿ : ಆಧ್ಯಾತ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ರಜೆಯ ಮೇಲೆ ಹೋಗಬಹುದು. ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಕೆಲವರು…

Read More

ಅಯ್ಯೋ ದೇವರೇ ಕಾಪಾಡು… 5 ದಿನ ಭಾರೀ ಮಳೆ! – ಪ್ರವಾಹ, ನೆರೆ ಬಗ್ಗೆ ಗಮನ ಕೊಡದ ಸರ್ಕಾರಗಳು – ಭೂಕುಸಿತ, ಅಪಾಯದ ಸೂಚನೆ ನೀಡಿದ ವಿಪತ್ತು ಪ್ರಾಧಿಕಾರ NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ರೌದ್ರವತಾರ ತಾಳಿದೆ. ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯಲು ಕಾರಣವಾಗಿರುವ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯದ ತೀವ್ರ ಇಳಿಕೆ ಆದಂತಿಲ್ಲ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟಿಸುವ ಮುನ್ಸೂಚನೆ ದೊರೆತಿದೆ. ಆದ್ದರಿಂದ ಇನ್ನಷ್ಟು ಅಪಾಯಕಾರಿಯಾಗಲಿದೆ ಮಳೆ. ಹವಾಮಾನ ಇಲಾಖೆ ಪ್ರಕಾರ, ಕಳೆದ ಎರಡು ದಿನದಲ್ಲಿ ಮುಂಗಾರು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳಿಕೆ ಆದಂತೆ ಕಂಡು ಬಂದಿತ್ತು. ಆದರೆ ವೈಪರಿತ್ಯಗಳ ತೀವ್ರತೆ ಹೆಚ್ಚಾಗಿದ್ದು, ಮತ್ತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ದೊರಕಿದೆ. ನಿರಂತರ ಸುರಿದ ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯಲು, ಜಲಾಶಯಗಳು ಭರ್ತಿಯಾಗಿವೆ. ತಗ್ಗು ಪ್ರದೇಶಗಳಲ್ಲಿ…

Read More

ಶಿವಮೊಗ್ಗ, ಚಿಕ್ಕಮಗಳೂರು ಮಳೆ ಡೇಂಜರ್: ರಜೆ ಘೋಷಣೆ – ಕೆಲವು ತಾಲೂಕಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ -ಯಾವ ಯಾವ ತಾಲೂಕು ರಜೆ? ಇಲ್ಲಿದೆ ಡೀಟೇಲ್ಸ್ – ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿ NAMMUR EXPRESS NEWS ಶಿವಮೊಗ್ಗ /ಚಿಕ್ಕಮಗಳೂರು: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಅದರಲ್ಲೂ ಶೃಂಗೇರಿ, ಮೂಡಿಗೆರೆ, ತೀರ್ಥಹಳ್ಳಿ, ಹೊಸನಗರ ಭಾಗ ಜನಜೀವನ ಸಂಪೂರ್ಣ ಕಷ್ಟವಾಗಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್. ಆರ್. ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ತಾಲೂಕು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನದಿಗಳು, ಹಳ್ಳಗಳು ತುಂಬಿ, ಅಪಾಯಮಟ್ಟವನ್ನು ತಲುಪಿ ಹರಿಯುತ್ತಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಅಣೆಕಟ್ಟುಗಳು, ಜಲಪಾತಗಳು ಮತ್ತು ನದಿ ನೀರಿಗೆ ಇಳಿಯುವುದು, ಈಜಾಡುವುದು ಮತ್ತು ಸೆಲ್ಪಿಗಳನ್ನು ತೆಗೆದುಕೊಳ್ಳುವುದನ್ನು ಹಾಗೂ ಈ ರೀತಿಯ…

Read More

ತುಂಗಾ ನದಿ ತೀರಕ್ಕೆ ಹೋಗಬೇಡಿ ಹುಷಾರ್..! – ತೀರ್ಥಹಳ್ಳಿಯಲ್ಲಿ ಅಪಾಯಕಾರಿಯಾದ ನದಿ – ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಎಚ್ಚರಿಕೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತುಂಗಾ ನದಿ ರಾಮ ಮಂಟಪ ಮುಳುಗಿದ್ದು, ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ನದಿ ಸೇರಿದಂತೆ ಯಾವುದೇ ನದಿ ತೀರದಲ್ಲಿ ನದಿ ನೋಡುವುದು, ಸೆಲ್ಫಿ ತೆಗೆಯುವುದು ಅಪಾಯಕಾರಿ. ತೀರ್ಥಹಳ್ಳಿ ಜನ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಈಗಾಗಲೇ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಜನತೆ ನದಿ ಹಾಗೂ ಹಳ್ಳ, ಕೊಳ್ಳಗಳ ತೀರಗಳ ಬಳಿ ಜನ ಹೋಗಬಾರದು ಎಂದು ಗಜಾನನ ವಾಮನ ಸುತಾರ ಮನವಿ ಮಾಡಿದ್ದಾರೆ. ತೀರ್ಥಹಳ್ಳಿಯ ಎಲ್ಲಾ ನದಿಗಳು ಫುಲ್ ತೀರ್ಥಹಳ್ಳಿ ತಾಲೂಕಿನ ತುಂಗಾ ನದಿ ಸೇರಿದಂತೆ ಮಾಲತಿ, ಕುಶಾವತಿ, ಶರಾವತಿ ಸೇರಿ ಎಲ್ಲಾ ನದಿಗಳು ಹಳ್ಳಗಳು ಈ ಸಲ ಅತೀ ಹೆಚ್ಚು ಮಳೆ…

Read More

ಕರಾವಳಿ ಟಾಪ್ ನ್ಯೂಸ್ ಬೆಂಗಳೂರು -ಮಂಗಳೂರು ರೈಲು ಇನ್ನು 15 ದಿನ ಇಲ್ಲ! – ಭಾರೀ ಗುಡ್ಡ ಕುಸಿತ: ಕುಸಿದ ರೈಲು ಮಾರ್ಗ – ಮೂಡುಬಿದಿರೆ: ಗ್ಯಾಸ್ ಗೀಸರ್ ಸೋರಿಕೆ: ಸಾವು – ಕಾರ್ಕಳ: ಟಿಪ್ಪರ್-ಬೈಕ್‌ ಢಿಕ್ಕಿ ಯುವಕ ದುರ್ಮರಣ – ಮಂಗಳೂರು: ವಾಹನ ವೇಗವಾಗಿ ಚಲಿಸಿದ್ರೆ ಕೇಸ್! NAMMUR EXPRESS ನ್ಯೂಸ್ ಮಂಗಳೂರು: ಭಾರೀ ಭೂಕುಸಿತ ಸಂಭವಿಸಿರುವ ಶಿರಾಡಿ ಘಾಟ್‌ನ ಎಡಕುಮೇರಿ ಮತ್ತು ಕಡಗರಳ್ಳಿ ನಡುವಿನ ರೈಲ್ವೆ ಹಳಿ ದುರಸ್ತಿ ಕಾಮಗಾರಿಯು ಯುದ್ಧೋಪಾದಿಯಲ್ಲಿ ಪ್ರಗತಿಯಲ್ಲಿದೆ. ಶುಕ್ರವಾರ ಸಂಜೆ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ. ಹಲವು ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ರೈಲು ಹಳಿಗಳ ಪುನಶ್ಚೇತನಕ್ಕೆ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ರೈಲು ಹಳಿ ಮರುಸ್ಥಾಪನೆಗೆ ಇನ್ನೂ 15 ದಿನ ಬೇಕಾಗಬಹುದು.ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 30 ಮತ್ತು 31 ರಂದು ಬೆಂಗಳೂರಿಗೆ ಎರಡು ವಿಶೇಷ ರೈಲುಗಳು ಸಂಚರಿಸಲಿವೆ.…

Read More