ಕಿಮ್ಮನೆಗೆ ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ – ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಶಸ್ತಿ -ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕ ಕಿಮ್ಮನೆ ರತ್ನಾಕರ್ NAMMUR EXPRESS NEWS ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2024-25 ಸಾಲಿನ ಕರುನಾಡಿನ ಸಾಧಕರಿಗೆ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024 ಮಾಜಿ ಸಚಿವ, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರಿಗೆ ಅಹ್ವಾನವನ್ನು ಸಂಸ್ಥೆ ಕೋರಿದೆ. ನಾಡಿನ ರಾಜಕೀಯ ಕ್ಷೇತ್ರದಲ್ಲಿನ ನಿಮ್ಮ ಸಾಧನೆಯನ್ನು ಗುರುತಿಸಿ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024” ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು. ಆಗಸ್ಟ್ 09-2024 ರಂದು ಮಲೇಷ್ಯಾದಲ್ಲಿ ನಡೆಯಲಿದೆ. ತಾವು ದಯವಿಟ್ಟು ಈ ಪುರಸ್ಕಾರವನ್ನು ಸ್ವೀಕರಿಸಲು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಹಾಗೂ ಆಗಸ್ಟ್ 07 ರಿಂದ ಆಗಸ್ಟ್ 11ವರೆಗೆ ನಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸಬೇಕೆಂದು ಸಂಸ್ಥೆ ಪತ್ರದಲ್ಲಿ…
Author: Nammur Express Admin
ಕರ್ನಾಟಕದ ಬಿಜೆಪಿ ಸಂಸದರಿಗೆ ಕೋಟಾ ಲೀಡರ್! – ಸಂಸದೀಯ ಮಂಡಳಿ ಸಂಸತ್ತಿಗೆ 16 ಮುಖ್ಯಸಚೇತಕರಲ್ಲಿ ಕೋಟಾ ಒಬ್ಬರು – ಉಡುಪಿ ಚಿಕ್ಕಮಗಳೂರು ನಾಯಕರ ಶುಭಾಶಯ NAMMUR EXPRESS NEWS ಉಡುಪಿ/ಚಿಕ್ಕಮಗಳೂರು: ಕರ್ನಾಟಕದ ಬಿಜೆಪಿ ಸಂಸದರ ನಾಯಕತ್ವವನ್ನು ಸಿಂಪಲ್ ನಾಯಕ ಚಿಕ್ಕಮಗಳೂರು ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ವಹಿಸಲಿದ್ದಾರೆ.ಭಾರತೀಯ ಜನತಾ ಪಾರ್ಟಿ ಹೈಕಮಾಂಡ್‌ನಿಂದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮಹತ್ವದ ಜವಾಬ್ದಾರಿ ಘೋಷಣೆ ಮಾಡಿದೆ. ಬಿಜೆಪಿ ತನ್ನ ಸಂಸದೀಯ ಮಂಡಳಿಯ ಸಂಸತ್ತಿಗೆ 16 ಮುಖ್ಯಸಚೇತಕರನ್ನ ಘೋಷಿಸಿದ್ದು ಕರ್ನಾಟಕ ರಾಜ್ಯಕ್ಕೆ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ನಿಯೋಜಿಸಿದೆ. ಈ ಬಗ್ಗೆ ಅಧಿಕೃತ ಆದೇಶವನ್ನು ಬಿಜೆಪಿ ಸಂಸದೀಯ ಮಂಡಳಿ ಕಾರ್ಯದರ್ಶಿಯಾದ ಡಾ.ಶಿವಶಕ್ತಿನಾಥ ಬಾಕ್ಸಿ ಯವರು ಘೋಷಿಸಿದ್ದಾರೆ. ಒಟ್ಟು 16 ಸಂಸದರನ್ನು ಲೋಕಸಭೆಯ ಮುಖ್ಯಸಚೇತಕರನ್ನಾಗಿ ನೇಮಿಸಲಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರ ಆಯ್ಕೆಗೆ ಕರ್ನಾಟಕದ ಎಲ್ಲಾ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದು ಪ್ರಮಾಣಿಕತೆ ಮತ್ತು ಹಿರಿತನಕ್ಕೆ ಪಕ್ಷ ನೀಡಿದ ಗೌರವ ಇದಾಗಿದೆ ಎಂದಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೋಟಾ…
ಕರಾವಳಿ ನ್ಯೂಸ್ ಮಂಗಳೂರಲ್ಲಿ ಶಾಲೆ ಶೀಟ್ ಹಾರಿ ಹೋಯಿತು! – ಮಕ್ಕಳಿಲ್ಲದ ಕಾರಣ ತಪ್ಪಿದ ದುರಂತ: ಶಾಲೆಗಳೇ ಹುಷಾರ್ – ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ – ಮನೆಯ ಹಿಂಬದಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಮನೆ ಹಾನಿ – ಬೆಳ್ತಂಗಡಿ, ಚಾರ್ಮಾಡಿ ಘಾಟ್ ಮರ ಬಿದ್ದು ಸಂಚಾರ ಅಡಚಣೆ NAMMUR EXPRESS NEWS ಮಂಗಳೂರು: ಕಳೆದ ಎರಡು ದಿನಗಳಿಂದ ಹೆಚ್ಚಾಗಿರುವ ಮಳೆ ಕರಾವಳಿಯಲ್ಲಿ ಮತ್ತಷ್ಟು ಹಾನಿ ಮಾಡುತ್ತಿದೆ. ಈ ನಡುವೆ ಮಂಗಳೂರು ಕೊಟ್ಟಾರ ಸಮೃದ್ಧಿ ಇಂಟೆರ್ ನ್ಯಾಷನಲ್ ಶಾಲೆಯ ಶೀಟುಗಳು ಭಾರೀ ಗಾಳಿ ಮಳೆಗೆ ಹಾರಿ ಹೋಗಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ದುರಂತ ತಪ್ಪಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಶಾಲೆ ಆಡಳಿತ ಮಂಡಳಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಬೆಳ್ತಂಗಡಿ ಶಾಲೆಗಳಿಗೆ ರಜೆ : ನೇತ್ರಾವತಿ ನದಿಯಲ್ಲಿ ಗಂಗಾಪೂಜೆ ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳಲ್ಲಿ…
ಮದ್ಯಪ್ರಿಯರಿಗೆ ಮತ್ತೆ ಶಾಕ್…! – ಬಿಯರ್ ಪ್ರತಿ ಬಾಟಲ್ ಗೆ 5-20 ರೂ. ಹೆಚ್ಚಳ – ಒಂದೂವರೆ ವರ್ಷದಲ್ಲಿ 5ನೇ ಬಾರಿ ಬೆಲೆ ಏರಿಕೆ ಬರೆ NAMMUR EXPRESS NEWS ಬೆಂಗಳೂರು: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ ಬಾರಿಗೆ ಬಿಯರ್ ದರ ಹೆಚ್ಚಳವಾಗಿದೆ. ಪ್ರತಿ ಬಾಟಲ್ ಗೆ 5 -20 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಯಾಗಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಲಿದೆ. ಸರ್ಕಾರ ಬಿಯರ್ ಮೇಲಿನ ತೆರಿಗೆಯನ್ನು ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಪ್ರತಿ ಬಾಟಲ್ ಬಿಯರ್ ಬೆಲೆ ಕನಿಷ್ಠ 10…
ಮಲೆನಾಡು, ಕರಾವಳಿ ಅಡಿಕೆಗೆ ಈಗ ಆಮದು ಭೂತ! – 3 ತಿಂಗಳಲ್ಲಿ 3009 ಟನ್ ವಿದೇಶಿ ಅಡಿಕೆ ಅಕ್ರಮ ಆಮದು!? – ಅಕ್ರಮ ಅಡಿಕೆ ಆಮದಿಗೆ ಸಂಸದರ ಮೌನವೇಕೆ? – ಕರ್ನಾಟಕ ಸೇರಿ ಭಾರತದ ರೈತರಿಗೆ ಆತಂಕ – ಡಾ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ NAMMUR EXPRESS NEWS ಬೆಂಗಳೂರು: ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದ ರೈತರ ಉಸಿರು, ವಾಣಿಜ್ಯ ಬೆನ್ನೆಲುಬು ಆಗಿರುವ ಅಡಿಕೆ ಇದೀಗ ವಿದೇಶಿ ಅಡಿಕೆ ಆಮದು ಕಾರಣ ಆತಂಕದಲ್ಲಿದೆ.ಕರ್ನಾಟಕ ಸೇರಿ ಭಾರತದ ಪ್ರಮುಖ ಬೆಳೆ ಅಡಿಕೆ. ಭಾರತದಲ್ಲಿ ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವೃತ್ತಿ ಜೀವನದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಇಂದು ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ** ವೃಷಭ ರಾಶಿ : ಹೊಸ ಹೂಡಿಕೆ ಅವಕಾಶಗಳು ಸಿಗಲಿವೆ. ಹಳೆಯ ಆಸ್ತಿಯನ್ನು ಮಾರಾಟ ಮಾಡುವುದರಿಂದ ಅಥವಾ ಬಾಡಿಗೆಗೆ ನೀಡುವುದರಿಂದ ಆರ್ಥಿಕ ಲಾಭವಿದೆ. ಇಂದು ಕಚೇರಿಯಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ಆದರೆ ಉನ್ನತ ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು…
ಕುಂದಾಪ್ರ ಕನ್ನಡ ಹಬ್ಬಕ್ಕೆ ಬೆಂಗಳೂರಲ್ಲಿ ಸಜ್ಜು! – ಕರಾವಳಿ ಸಿರಿ ಕ್ಲಬ್ ಬೆಂಗಳೂರು ಇವರಿಂದ ಕುಂದಾಪ್ರ ಕನ್ನಡ ಹಬ್ಬ – ಆ.17ಹಾಗೂ18ರಂದು ಕಾರ್ಯಕ್ರಮ: ಹಲವರಿಗೆ ಸನ್ಮಾನ NAMMUR EXPRESS NEWS ಬೆಂಗಳೂರು: ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದ ವತಿಯಿಂದ ಕುಂದಾಪ್ರ ಕನ್ನಡ ಹಬ್ಬ ಆ.17ಹಾಗೂ18ರಂದು ನಡೆಯುವ ಕಾರ್ಯಕ್ರಮದ ವಲಯ ಮಟ್ಟದ ಪ್ರಥಮ ಪೂರ್ವಭಾವಿ ಸಭೆಯು ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಚೆಫ್ ಟಾಕ್ ಸಂಸ್ಥೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಮೊದಲಿಗೆ ಅಗಲಿದ ಕರಾವಳಿಯ ಡಾ.ಸತೀಶ್ ಪೂಜಾರಿ,ಅಶ್ವಿನಿ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಸಭೆಯಲ್ಲಿ ಮೌನಚಾರಣೆ ನಡೆಸಿ ನಂತರ ಕಾರ್ಯಕ್ರಮ ದಿಬ್ಬಣ ತಯಾರಿ ಬಗ್ಗೆ ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಲಾಯಿತು ಹಾಗೂ ಕರಾವಳಿ ಗಂಡುಕಲೆ ಯಕ್ಷಗಾನಕುರಿತಂತೆ ಅಧ್ಯಯನ ನಡೆಸಿ ಡಾಕ್ಟರೆಟ್ ಮೂಡಿಗೆರಿಸಿಕೊಂಡ ಡಾ.ದೀಪಕ್ ಶೆಟ್ಟಿ ಬಾರ್ಕೂರು ಇವರನ್ನ ಇದೆ ವೇದಿಕೆಯಲ್ಲಿ ಕರಾವಳಿ ಸಿರಿ ಕ್ಲಬ್ ಬೆಂಗಳೂರು ತಂಡದ ಆರ್ಯ ಕೃಷ್ಣ ಹಾಗೂ ರಕ್ಷಿತ್ ಶೆಟ್ಟಿ ನೇತೃತ್ವದಲ್ಲಿ…
ತುಳು ಭಾಷೆಗಾಗಿ ಶಾಸಕ ಅಶೋಕ್ ರೈ ಹೋರಾಟ – ಸದನದಲ್ಲಿ ತುಳುವಿಗಾಗಿ ಶಾಸಕರ ದನಿ – ತುಳು ಅಕಾಡೆಮಿಯಿಂದ ಶಾಸಕ ಅಶೋಕ್ ರೈಗೆ ಸನ್ಮಾನ NAMMUR EXPRESS NEWS ಪುತ್ತೂರು: ವಿಧಾನಸಭಾ ಅಧಿವೇಶನದಲ್ಲಿ ತುಳು ವಿನಲ್ಲೇ ಮಾತನಾಡುವ ಮೂಲಕ, ತಾನು ಶಾಸಕನಾಗಿ ಆಯ್ಕೆಯಾದ ಮೊದಲ ಅಧಿವೇಶನದಲ್ಲೂ ತುಳು ಬಗ್ಗೆ ಸದನಕ್ಕೆ ಪರಿಚಯಿಸುವ ಮೂಲಕ ತುಳುವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕರ್ನಾಟಕ ರಾಜ್ಯ ತುಳು ಅಕಾಡೆಮಿಯಿಂದ ಗೌರವ ನೀಡಲಾಯಿತು. ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕ್ಕಾಡ್ ರವರು ಶಾಸಕರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಶಾಸಕರಾದ ಬಳಿಕ ಪ್ರತೀ ಬಾರಿ ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡಿ, ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ತುಳು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಬೇಕೆಂದು ಕಳೆದ ವಿಧಾನ ಸಭೆಯಲ್ಲಿಆಗ್ರಹವನ್ನೂ ಮಾಡಿದ್ದಾರೆ. ತುಳು ನಾಡಿನ ಇತಿಹಾಸದಲ್ಲೇ ಓರ್ವ ಶಾಸಕ ಈ ಪರಿಯಾಗಿ ತುಳುವಿಗೆ ಹೋರಾಟ…
ಮಧ್ಯ ಕರ್ನಾಟಕದಲ್ಲಿ ಮಳೆಗೆ ಕೊರತೆ..! – ಇತ್ತ ಮಳೆ ಪ್ರವಾಹ, ಅತ್ತ ಮಳೆಗಾಗಿ ಪೂಜೆ – ಬಿತ್ತನೆಗೆ ಹಿನ್ನಡೆ, ಆತಂಕದಲ್ಲಿ ಕೃಷಿಕ NAMMUR EXPRESS NEWS ಚಿತ್ರದುರ್ಗ: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭೋರ್ಗರೆದು ಮಳೆ ಸುರಿದರೂ, ಮಧ್ಯ ಕರ್ನಾಟಕದಲ್ಲಿ ಮಳೆಯೇ ಇಲ್ಲ. ಇತ್ತ ಮಳೆಯ ಆರ್ಭಟಕ್ಕೆ ಮಲೆನಾಡು, ಉತ್ತರ ಕರ್ನಾಟಕ ತತ್ತರಿಸಿವೆ. ಜಲಾಶಯದಲ್ಲಿ ದಾಖಲೆ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಮಳೆ ಬಿಡುವು ನೀಡಿದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಆದರೆ ಬಯಲುಸೀಮೆಯಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ. ಬಯಲು ಸೀಮೆಯಲ್ಲಿ ಜನರು ಮಳೆಗಾಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದು, ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ರಾಜ್ಯದ ವಿವಿಧೆಡೆ ನದಿ, ಕಣಿವೆ, ಕೆರೆ- ಕಟ್ಟೆ ತುಂಬಿ ಜನರು ನೆರೆ ಹಾವಳಿ ಎದುರಿಸುತ್ತಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯೇ ಇಲ್ಲ. ಮುಂಗಾರು ಹಂಗಾಮಿನಲ್ಲಿ ಮೊದಲ ಹಂತದಲ್ಲಿ ಬಿತ್ತಿರುವ ಶೇಂಗಾ, ತೊಗರಿ, ಸಜ್ಜೆ, ಔಡಲ, ಸಿರಿಧಾನ್ಯ…
ಬಾರ್ಕೂರು ರೋಟರಿ ಕ್ಲಬ್ ಪರಿಸರ ಸೇವೆಯ ಹೆಜ್ಜೆ! – ವನ ಮಹೋತ್ಸವ, ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ – ಬಾರ್ಕೂರು ರೋಟರಿ ಕ್ಲಬ್ ಗಣೇಶ್ ಶೆಟ್ಟಿ ಸಾರಥ್ಯ – ರೋಟರಿ ಸದಸ್ಯರು, ಸ್ಥಳೀಯ ಜನರ ಸಾಥ್ NAMMUR EXPRESS NEWS ಬ್ರಹ್ಮಾವರ: ರೋಟರಿ ಕ್ಲಬ್ ಬಾರ್ಕೂರು ಇವರ ಆಶ್ರಯದಲ್ಲಿ ವನ ಮಹೋತ್ಸವ ಮತ್ತು ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ ಬಾರ್ಕೂರು ಅಂಚೆ ಕಛೇರಿ ಬಳಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ. ಬಿ (ಅಧ್ಯಕ್ಷರು ರೋಟರಿ ಕ್ಲಬ್ ಬಾರ್ಕೂರು ),ಪ್ರಸಾದ್ ಭಟ್ (ಅನ್ನ ಪೂರ್ಣ ನರ್ಸರಿ ಪೇತ್ರಿ )ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ. ಪಿ ಕಾಂಚನ್ (ಮಾಜಿ ಸಹಾಯಕ ಗವರ್ನರ್ ), ಅಶೋಕ್ ಶೆಟ್ಟಿ(ಸಹ ಸಂಪಾದಕರು RI ಜಿಲ್ಲೆ 3182), ಡಾ. ಬಿ ಧನಂಜಯ (ಮುಖ್ಯಸ್ಥರು ಕೆವಿಕೆ ಬ್ರಹ್ಮಾವರ, ಹರೀಶ್ ಕೆ. (ಉಪವಲಯ ಅರಣ್ಯಾಧಿಕಾರಿ),ಮೋಹನ್ ಭಟ್ (ಪ್ರಗತಿಪರ…