ಮಂಗಳೂರು: ಕಾರುಗಳು ಪುಡಿ ಪುಡಿ! – ಕರಾವಳಿ ಮಳೆ ಅಬ್ಬರಕ್ಕೆ ಹಲವೆಡೆ ಅವಘಡ – ಎಲ್ಲೆಲ್ಲಿ ಏನಾಗಿದೆ… ಇಲ್ಲಿದೆ ವರದಿ NAMMUR EXPRESS NEWS ಮಂಗಳೂರು: ಬಾರಿ ಬಿರುಗಾಳಿ ಮಳೆಗೆ ಶೀಟ್ ಉರುಳಿಬಿದ್ದು ಕಾರುಗಳು ಜಖಂಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ನಲಪಾಡ್ ಕುಣಿಲ್ ಟವರ್ ನಲ್ಲಿ ನಡೆದಿದೆ. ಭಾರಿ ಬಿರುಗಾಳಿ ಮಳೆ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಅವಾಂತರ ಸೃಷ್ಟಿಸಿದೆ. ಅಲ್ಲದೆ ಭಾರಿ ಗಾತ್ರದ ಶೀಟ್ ಕಾರುಗಳ ಮೇಲೆ ಉರುಳಿ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದೆ. ಕಾರುಗಳನ್ನು ವಸತಿ ಸಮುಚ್ಚಯದ ಪಾರ್ಕಿಂಗ್ ಬಳಿ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ. ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣ ಹೆಚ್ಚಳ ಬಂಟ್ವಾಳ: ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮೊಯಿದಿನ್ ಬಿನ್ ಎಫ್ ಎಚ್ ಇಸ್ಮಾಯಿಲ್…
Author: Nammur Express Admin
ವೀರ ಯೋಧರಿಗೆ ನಮ್ಮ ಸಲಾಂ – ಹೊಸದುರ್ಗದಲ್ಲಿ ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಸ್ಮರಣೆ – ತಮ್ಮ ಸೇವಾ ಅನುಭವ ಹಂಚಿಕೊಂಡ ಯೋಧರು NAMMUR EXPRESS NEWS ಹೊಸದುರ್ಗ: ಸೈನಿಕ ವೃತ್ತಿಯಲ್ಲಿ ಸೇವೆ ಮಾಡಲು ನನಗೆ 39 ವರ್ಷ ಅವಕಾಶ ಸಿಕ್ಕಿತು. ಭಾರತೀಯ ಆರ್ಮಿ ಜಗತ್ತಿನ ವಿಶಿಷ್ಟವಾದ ಆರ್ಮಿ. ಎಂತಹ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡುವ ಸೈನಿಕರು ನಮ್ಮಲ್ಲಿದ್ದಾರೆ ಜುಲೈ 26 ರಂದು ಪ್ರಾರಂಭವಾಗಿ ಮೂರು ತಿಂಗಳುಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 527 ಯೋಧರು ವೀರ ಮರಣ ಹೊಂದಿದರು ಇದರಲ್ಲಿ ನಾಲ್ಕು ಜನ ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಪರಮ ವೀರಚಕ್ರ ನೀಡಿದ್ದಾರೆ ಎಂದು ಇಂಡಿಯನ್ ಆರ್ಮಿಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ತಿಳಿಸಿದರು. ನಗರದ ವಾಕರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರ ಸ್ಮರಣೆ ಡೆಂಗ್ಯೂ ಮಹಾಮಾರಿಯ ನಿಯಂತ್ರಣ ಜಾಗೃತಿ ಅಂಗವಾಗಿ ನಗರದ ವೀರಭದ್ರ ಸ್ವಾಮಿ ಮಾಧ್ಯಮಿಕ ಶಾಲಾ…
ತೀರ್ಥಹಳ್ಳಿ ತಾಲೂಕಲ್ಲಿ ಏನಾಗಿದೆ ಮಳೆ ಪ್ರಾಬ್ಲಮ್? – ಶಾಸಕರ ನೇತೃತ್ವದಲ್ಲಿ ಸಭೆ: ಅಧಿಕಾರಿಗಳಿಗೆ ವಾರ್ನಿಂಗ್ – ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ: ಆಕ್ರೋಶ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಅತಿವೃಷ್ಟಿಯಿಂದಾಗಿ ಆದ ಹಾನಿಗಳ ಕುರಿತಾಗಿ ಪರಿಶೀಲನಾ ಸಭೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಿದ್ದು ಸಭೆಗೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಾಸಕ ಅರಗ ಜ್ಞಾನೇಂದ್ರ, ಎಲ್ಲಾ ಅಧಿಕಾರಿಗಳಿಂದ, ತಾಲೂಕಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳು ಮತ್ತು ಕೃಷಿ ಭೂಮಿ ಮತ್ತು ಪ್ರಾಣ ಹಾನಿಯ ಬಗ್ಗೆ, ಪೂರ್ಣ ಪ್ರಮಾಣದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ಹಾನಿಯಾದ ಮನೆಗಳಿಗೆ ಮತ್ತು ಮಳೆಯಿಂದ ಹಾನಿಯಾಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರದ ಬಗ್ಗೆ ಮಾಹಿತಿಯನ್ನು ಪಡೆದರು. ಬಳಿಕ ಅರಣ್ಯ ಇಲಾಖೆಯಿಂದ ರಸ್ತೆ ಪಕ್ಕದಲ್ಲಿದ್ದ ಮರಗಳ ತೆರವಿನ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒಗಳು ಶಾಸಕರ ಮತ್ತು ತಾಲೂಕು ದಂಡಾಧಿಕಾರಿಗಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ! ಅರಣ್ಯ…
ಗುಡುಗಿನ ಶಬ್ದ ಕೇಳಿ ಏಳುವ ಹೆಗ್ಗಲು ಅಣಬೆ..! – ಅಣಬೆಯ ಉಪಯೋಗ ತಿಳಿದ್ರೆ ದಿನ ತಿಂತೀರಾ – ಅಣಬೆ ಸಸ್ಯಹಾರವೋ? ಮಾಂಸಾಹಾರವೋ…? – ಮಳೆಗಾಲದ ಫೇವರಿಟ್ ತಿನಿಸಲ್ಲಿ ಅಣಬೆಯೂ ಒಂದು NAMMUR EXPRESS NEWS ಮಳೆಗಾಲದಲ್ಲಿ ಮಲೆನಾಡಿಗರಿಗಂತೂ ಹಬ್ಬ ಅಣಬೆ, ಕೆಸ, ಮರಗೆಸ ಕಳಲೆ ,ಅರಶಿಣದೆಲೆ ಇದನ್ನೆಲ್ಲ ವರ್ಷಕ್ಕೊಂದು ಸಲನಾದ್ರು ತಿನ್ನಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದಿದ್ದೇ…!. ಅಣಬೆ ಮಳೆಗಾಲದಲ್ಲಿ ಆಕರ್ಷಕವಾಗಿ ಅಲ್ಲಲ್ಲಿ ಕಂಡುಬರುತ್ತದೆ. ಇದು ಸಸ್ಯವೋ ಅಲ್ಲ ಪ್ರಾಣಿಯೂ ಅಲ್ಲ ಇದೊಂದು ಶಿಲೀಂದ್ರ. ಇದರ ವೈಜ್ಞಾನಿಕ ಹೆಸರು ಅಗಾರಿಕಸ್ ಬಿಸ್ಪೂರಸ್ ಇದರಲ್ಲಿ ಸುಮಾರು 700ಕ್ಕೂ ಹೆಚ್ಚು ವಿಧದ ಅಣಬೆಗಳಿವೆ. ಅದರಲ್ಲಿ ಆಹಾರಕ್ಕೆ ಬಳಕೆ ಮಾಡೋದು ಬೆರಳೆಣಿಕೆಯಷ್ಟು ಮಾತ್ರ ಕೆಲವು ವಿಷಕಾರಿ ಅಣಬೆಗಳು ಸಹ ಇವೆ. ವಿಷಪೂರಿತ ಅಣಬೆ ಸೇವನೆ ಅಪಾಯಕಾರಿ,ಅಣಬೆ ತಿನ್ನುವಾಗ ಅವುಗಳ ಬಗ್ಗೆ ತಿಳಿದುಕೊಂಡು ಜಾಗ್ರತೆ ವಹಿಸಬೇಕು. ಅಣಬೆ ಪ್ರೋಟೀನ ವಿಟಮಿನ್ ,ಫೈಬರ್,ಖನಿಜ,ತಾಮ್ರ ಸೆಲೆನಿಯಮ್,ಪೊಟ್ಯಾಷಿಯಂ ಕೂಲೀನ್ ಮುಂತಾದ ಸೂಕ್ಮ ಪೋಷಕಾಂಶಗಳ ಆಗರ ಅಣಬೆಯ ವಿಶೇಷ ರುಚಿಯು ಆಹಾರ ಪದಾರ್ಥದ…
ಕೆ. ಆರ್. ಎಸ್ ಪಾರ್ಟಿಯಿಂದ ಲಂಚಮುಕ್ತ ಅಭಿಯಾನ! – ಬೆಂಗಳೂರು ಅತ್ತಿಬೆಲೆ ಆರ್. ಟಿ. ಓ ಚೆಕ್ ಪೋಸ್ಟಲ್ಲಿ ಲಂಚಾವಾತಾರ – ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ NAMMUR EXPRESS NEWS ಬೆಂಗಳೂರು: ಲಂಚಾವತಾರಕ್ಕೆ ಕುಖ್ಯಾತಿ ಪಡೆದಿರುವ ಬೆಂಗಳೂರಿನ ಅತ್ತಿಬೆಲೆ ಆರ್.ಟಿ.ಓ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಶನಿವಾರ ಲಂಚಮುಕ್ತ ಅಭಿಯಾನ ನಡೆಸಲಾಯಿತು. ಅಭಿಯಾನದಲ್ಲಿ ಕಚೇರಿಯ ಲೋಪದೋಷಗಳನ್ನು ಪಟ್ಟಿಮಾಡಿ ಅಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸುವಂತೆ ಆಗ್ರಹಿಸಲಾಯಿತು. ಈಗಾಗಲೇ ರಾಜ್ಯದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಭ್ರಷ್ಟಾಚಾರ ಮುಕ್ತ ಅಭಿಯಾನ ಉತ್ತಮ ಸದ್ದು ಮಾಡುತ್ತಿದೆ.
ಕರಾವಳಿ ಟಾಪ್ 4 ನ್ಯೂಸ್..! – ಕಂಬಳ ಕ್ಷೇತ್ರದಲ್ಲಿ ಹಲವು ಪದಕ ಗೆದ್ದಿದ್ದ ನಾಗು ಕೋಣ ಇನ್ನಿಲ್ಲ! – ಸುರತ್ಕಲ್ : ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ – ಅಲೂರು: ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ – 6ನೇ ದಿನಕ್ಕೆ ಕಾಲಿಟ್ಟ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ NAMMUR EXPRESS NEWS ಮಣಿಪಾಲ: ವಾರದ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಲಕ್ಕಿಯ ಅಗಲುವಿಕೆಯಿಂದ ಬೇಸರಗೊಂಡಿದ್ದ ಕಂಬಳಾಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಶನಿವಾರ ಅಸುನೀಗಿದೆ. ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ನಾಗು ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಹಲಗೆ ಸೀನಿಯರ್ ವಿಭಾಗಕ್ಕೆ ಎಂಟ್ರಿ ನೀಡಿದ್ದ ನಾಗು ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಬೈಂದೂರಿನಿಂದ ಎಲ್ಲರೂ ಬಂಢಾರಮನೆ ಸೇರಿದ್ದ ನಾಗು, ಬಳಿಕ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ…
ಬಾಳಗಾರು ಸಮೀಪ ರಸ್ತೆ ಮೇಲೆ ನೀರು! – ಆತಂಕದಲ್ಲೇ ಸಾಗುತ್ತಿರುವ ವಾಹನ ಸವಾರರು – ತೀರ್ಥಹಳ್ಳಿಯ ಹಲವೆಡೆ ಮರ ಬಿದ್ದು ಅಪಾರ ಹಾನಿ: ಎಲ್ಲೆಲ್ಲಿ? NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮಹಿಷಿ ಬಾಳಗಾರು ಸೇತುವೆ ಸಮೀಪ ರಸ್ತೆಯ ಮೇಲೆ ಮಳೆ ನೀರು ಹರಿದಿದೆ. ಈ ಮಾರ್ಗದಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಬೈಕ್ ಸವಾರರು ಸಂಚರಿಸುವಾಗ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದಾಗಿದೆ. ಅಕ್ಲಾಪುರ ಬಾಳಗಾರು ಗ್ರಾಮದಲ್ಲಿ ಮರ ಧರೆಗೆ ತೀರ್ಥಹಳ್ಳಿ ತಾಲ್ಲೂಕು ಅಗ್ರಹಾರ ಹೋಬಳಿ ತ್ರಿಯಂಬಕಪುರ ಗ್ರಾಮ ಪಂಚಾಯತ್ ಅಕ್ಲಾಪುರ ಗ್ರಾಮದ ಮಜರೆ ಬಾಳಗಾರು,, ಜನರು ಸಂಚರಿಸುವ ರಸ್ತೆಯಲ್ಲಿ ಮರ ಬಿದ್ದಿದೆ. ಮಳೆಗಾಲದಲ್ಲಿ 1000 ಕೊಟ್ಟರೂ ಆಟೋ ಕೂಡ ಬರದ ಸ್ಥಿತಿ ಇದೆ. ಇತ್ತೀಚಿಗಸ್ಟೇ ಈ ಭಾಗದಲ್ಲಿ ರಸ್ತೆಯಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮರಣ ಹೊಂದಿದರೂ ಎಚ್ಚೆತ್ತು ಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಇದೀಗ ಆಕ್ರೋಶ ಕೇಳಿ ಬಂದಿದೆ. ನೆರಟೂರು ಬೊಬ್ಬಿ ರಸ್ತೆಯಲ್ಲಿ ಬಿದ್ದ…
ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ 14 ದಿನ ಬ್ಯಾಂಕ್ ಬಂದ್! – ಬ್ಯಾಂಕ್ ರಜೆಯಲ್ಲಿದ್ದರೂ ಗ್ರಾಹಕರಿಗೆ ತೆರೆದಿರಲಿದೆ ಎಟಿಎಂ ಸೇವೆ – ಯಾವ ಯಾವ ದಿನ ರಜೆ…? ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಬೆಂಗಳೂರು: ಇಂದು ಕೇವಲ ಹಣ ಜಮೆ ಅಥವಾ ಹಿಂತೆಗೆತಕ್ಕೆ ಮಾತ್ರ ಜನರು ಬ್ಯಾಂಕ್‌ಗಳಿಗೆ ಹೋಗಲ್ಲ. ಇದನ್ನು ಹೊರತುಪಡಿಸಿ ಹಲವು ಹಣಕಾಸಿನ ಸೇವೆಗಳನ್ನು ಬ್ಯಾಂಕ್‌ಗಳು ಒದಗಿಸುತ್ತವೆ. ಹಾಗಾಗಿ ಬ್ಯಾಂಕ್ ರಜಾದಿನಗಳ ಬಗ್ಗೆ ತಿಳಿದುಕೊಂಡಿರಬೇಕು. ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಈ ರಜೆಗಳನ್ನು ಹೊರತುಪಡಿಸಿಯೂ ಹಲವು ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿವೆ. ಬ್ಯಾಂಕ್‌ಗಳಿಗೆ ರಜೆ ಇದ್ರೂ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ವ್ಯತಿತರಿಕ್ತ ಪರಿಣಾಮ ಬೀರಲ್ಲ. ಆನ್‌ಲೈನ್ ಸೇವೆಗಳು 24*7 ಕಾರ್ಯನಿರ್ವಹಿಸುತ್ತಿರುತ್ತವೆ. ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಹಬ್ಬಗಳು ಬರುತ್ತವೆ. ರಕ್ಷಾ ಬಂಧನ, ಜನ್ಮಾಷ್ಠಮಿ ಮತ್ತು…
ಹೊರ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ! – ರೈಲಿನಲ್ಲಿ ಬರುತ್ತಿತ್ತಾ ನಾಯಿ ಮಾಂಸ: ಹೋಟೆಲಿಗೆ ಸರಬರಾಜು? – ಅರೆಸ್ಟ್ ಆಗಿದ್ದ ಹಿಂದೂ ಕಾರ್ಯಕರ್ತ ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು NAMMUR EXPRESS NEWS ಬೆಂಗಳೂರು: ಹೊರ ರಾಜ್ಯದಿಂದ ರೈಲಿನಲ್ಲಿ ಪ್ರತಿದಿನ ಸಾವಿರಾರು ಕೆಜಿ ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿ ಇದನ್ನ ನಗರದಲ್ಲಿರುವ ಬಹುತೇಕ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಲ ತಿಂಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್, ಸಾಕ್ಷಿ ಸಮೇತ ಬಿಬಿಎಂಪಿ, ಪೊಲೀಸರಿಗೆ ಮತ್ತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ. ಈ ಸಂಬಂಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಶುಕ್ರವಾರ (ಜೂನ್ 26) ಸಂಜೆ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿ ಮಾಂಸ ತುಂಬಿದ್ದ ಚೀಲಗಳನ್ನು ತೆಗೆದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ…
ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಜೀವನದಿ ಕಾವೇರಿ.! – ಸ್ನಾನಘಟ್ಟ ಮುಳುಗಡೆ, ದೇವಸ್ಥಾನಕ್ಕೆ ಜಲದಿಗ್ಬಂಧನ ನೋಡುಗರ ಕಣ್ಣಿಗೆ ಮದ ನೀಡುತ್ತಿರುವ ನದಿಯ ರುದ್ರ ರಮಣೀಯ ದೃಶ್ಯ NAMMUR EXPRESS NEWS ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದೆ. ಇನ್ನು ಡ್ಯಾಂನಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಇದರಿಂದ ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ನದಿಯ ರುದ್ರ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಮುದ ನೀಡುವಂತಿದೆ. ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ! ಒಂದು ಕಡೆ ಕಾವೇರಿ ಪ್ರಕೃತಿಯ ಮಡಿಲಲ್ಲಿ ಸೌಂದರ್ಯ ದೇವತೆ ಹಾಗೆ ಕಾಣುತ್ತಿದ್ದರೆ, ಇನ್ನೊಂದೆಡೆ ಇದೇ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿದು ನದಿ ಪಾತ್ರದಲ್ಲಿ ಪ್ರವಾಹದ ಆತಂಕವನ್ನು ತಂದಿದೆ. ಕೆಆರ್‌ಎಸ್ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ…