Author: Nammur Express Admin

ಟಾಪ್ ನ್ಯೂಸ್ ಕರಾವಳಿ – ಮನೆಯ ಅಂಗಳದಲ್ಲೇ ಚಿರತೆ: ಸ್ಥಳೀಯರಲ್ಲಿ ಭಯ! – ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದು – ಮೂಡುಬಿದಿರೆ: ಅಪಘಾತಕ್ಕೆ ಚಕ್ಕುಲಿ ರಮೇಶಣ್ಣ ಇನ್ನಿಲ್ಲ! NAMMUR EXPRESS NEWS ಮಣಿಪಾಲ: ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆ ಕಾಣಿಸಿಕೊಂಡ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಮನೆಯೊಂದರ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಮನೆಯ ಹೊರಭಾಗದಲ್ಲಿ ನಾಯಿ ಬೊಗಳುತ್ತಿದ್ದುದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆಗೆದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದವೂ ಕೇಳಿರಲಿಲ್ಲ. ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟವಿರುವುದು ಕೇಳಿ ತಿಳಿದಿದ್ದ ಮನೆಯವರು ಮನೆಯಿಂದ ಹೊರಗೆ ಬರದೆ ಸುಮ್ಮನಿದ್ದರು. ಆದರೆ ಬೆಳಿಗ್ಗೆ ಎದ್ದು ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವುದು ಕಂಡುಬ೦ದಿದೆ. ಚಿರತೆ ಬಂದು ಹೋದ ಬಳಿಕ ಸದ್ದಿಲ್ಲದೆ ಕಣ್ಮರೆಯಾಗಿದ್ದ ನಾಯಿ ಚಿರತೆ ಬಾಯಿಯಿ೦ದ ತಪ್ಪಿಸಿಕೊಂಡು ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಿತರಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು…

Read More

ಅಡಿಕೆ,ಕಾಫಿ ಬೆಳೆ ಹಾನಿ: ಮಳೆ ಹೀಗೆ ಬಂದ್ರೆ ಗೋವಿಂದ! – ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಅವಾಂತರ – ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲಿ ಅತೀ ಹೆಚ್ಚು ನಷ್ಟ – ಎನ್ ಆರ್ ಪುರದಲ್ಲಿ 3 ಮನೆ ಕುಸಿತ: ಅಪಾರ ನಷ್ಟ NAMMUR EXPRESS NEWS ಚಿಕ್ಕಮಗಳೂರು: ಪುನರ್ವಸು ಆಯ್ತು ಈಗ ಪುಷ್ಯ ಸರದಿ ಜಿಲ್ಲೆಯಾದ್ಯಂತ ಭಾರೀ ಮಳೆ,ಗಾಳಿ ಧರೆಗುರುಳಿದ ಮರಗಳು,ಕುಸಿದ ಗುಡ್ಡ,ಮುರಿದ ವಿದ್ಯುತ್ ಕಂಬಗಳು,ಹತ್ತು ದಿನ ಕಳೆದರು ಬಾರದ ಕರೆಂಟ್. ಜನಜೀವನ ಸಂಪೂರ್ಣ ಅಸ್ಥವ್ಯಸ್ಥ. ಭಾರೀ ಗಾಳಿಗೆ ಅಡಿಕೆ, ಕಾಳುಮೆಣಸು ಉದುರುತ್ತಿದ್ದ ತಲೆಮೇಲೆ ಕೈಹೊತ್ತು ಕೂತ ರೈತ ಬಾಂಧವರು. ಹೌದು. ಇದು ಕಾಫಿ ನಾಡು ಚಿಕ್ಕಮಗಳೂರಿನ ಕಥೆ. ಶೃಂಗೇರಿಯಲ್ಲಿ ಉಕ್ಕಿ ಹರಿಯುತ್ತಿರುವ ತುಂಗಾ ನದಿ! ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ,ಗಾಳಿಗೆ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.ತುಂಗಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗಿ ಅನೇಕ ಕಡೆಗಳಲ್ಲಿ ತೋಟ,ಗದ್ದೆಗಳಿಗೆ ನೀರು ನುಗ್ಗಿದೆ. ಶೃಂಗೇರಿ ಕುರಬಗೇರಿ ಶ್ರೀಮಠ ಸಂಪರ್ಕಿಸುವ ಪ್ಯಾರಲಲ್ ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು…

Read More

ತಡರಾತ್ರಿಗೆ ಪ್ರತ್ಯಕ್ಷ ಗೊಂಡ ಹೆಬ್ಬಾವು ಸೆರೆ! – ತೀರ್ಥಹಳ್ಳಿಯ ಮುಳುಬಾಗಿಲಿನಲ್ಲಿ ಘಟನೆ – ಮಳೆ ಹೆಚ್ಚಾದಂತೆ ಮನೆಗಳತ್ತ ಹಾವುಗಳು! NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮನಕಟ್ಟೆಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಅದನ್ನು ತಡ ರಾತ್ರಿ ಹಿಡಿದ ಘಟನೆ ನಡೆದಿದೆ.ತಡರಾತ್ರಿ 11 ಗಂಟೆಯಲ್ಲಿ ಕಂಡು ಬಂದ ಹೆಬ್ಬಾವನ್ನು ಕೂಡಲೇ ಸ್ಥಳೀಯರು ಉರಗ ಪ್ರೇಮಿ ಸ್ನೇಕ್ ಚಂದ್ರು ಅವರನ್ನು ಸಂಪರ್ಕಿಸಿದ್ದು, ನಂತರ ಹೆಬ್ಬಾವನ್ನು ಸೆರೆ ಹಿಡಿಯುವುದರ ಮೂಲಕ ಸ್ಥಳೀಯರ ಆತಂಕ ದೂರ ಮಾಡಲಾಯಿತು. ಚಿಕ್ಕ ಪುಟ್ಟ ಮಕ್ಕಳು ಆಟ ಆಡಿಕೊಂಡಿರುವ ಪ್ರದೇಶದಲ್ಲಿ ಈ ಹೆಬ್ಬಾವಿನಿಂದ ಅಪಾಯದ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ಹೊರ ಹಾಕಿದರು. ನಂತರ ಹೆಬ್ಬಾವನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಮಳೆ ಹೆಚ್ಚು: ಹಾವುಗಳು ಮನೆ ಕಡೆಗೆ..! ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಮಳೆ ಹೆಚ್ಚಾಗಿದೆ. ಭಾರೀ ಮಳೆ ಕಾರಣ ನೀರಲ್ಲಿ ತೇಲಿ ಬಂದ ಹಾವುಗಳು ಮನೆ ಕಡೆಗೆ ಬರುತ್ತಿವೆ. ಈ…

Read More

ತೀರ್ಥಹಳ್ಳಿಯಲ್ಲಿ ಮಳೆಗೆ ಯುವಕ ಬಲಿ! – ಬೈಕ್ ಮೇಲೆ ಮರ ಬಿದ್ದು ಯುವಕ ಸಾವು – ಹಾದಿಗಲ್ಲಿನ ಮೀನ್ಮನೆಕೊಪ್ಪದಲ್ಲಿ ಘಟನೆ – ಹಲವೆಡೆ ಅಪಾಯಕ್ಕೆ ಕಾದಿದೆ ಮರ: ಹುಷಾರ್ – ಹತ್ತಾರು ಮನೆಗಳ ಗೋಡೆ ಕುಸಿತ – ಇಂದು ಮಳೆ ಹಾನಿ ಕುರಿತು ಅಧಿಕಾರಿಗಳ ಸಭೆ – ಹೊಸ ಸೇತುವೆ ಬಳಿ ಮತ್ತೆ ಗುಡ್ಡ ಕುಸಿತ – ಶಾಲಾ ಕಾಲೇಜುಗಳಿಗೆ 15 ದಿನ ಪಾಠ ಇಲ್ಲ! NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಲ್ಲಿ ಸುರಿಯುತ್ತಿವ ಭಾರಿ ಮಳೆ ಇದೀಗ ತೀರ್ಥಹಳ್ಳಿಯಲ್ಲಿ ಯುವಕನ ಬಲಿ ಪಡೆದಿದೆ. ಬೈಕ್ ಮೇಲೆ ಅಕೇಶಿಯಾ ಮರಬಿದ್ದು ಸ್ಥಳದಲ್ಲೇ ರಾಮಪ್ಪ(27) ಎಂಬ ಯುವಕ ಮೃತಪಟ್ಟ ಧಾರುಣ ಘಟನೆ ಶುಕ್ರವಾರ ತಡರಾತ್ರಿ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಗ್ರಾಮದಲ್ಲಿ ನಡೆದಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೋಣಂದೂರಿಗೆ ಕೆಲಸದ ನಿಮಿತ್ತ ರಾಮಪ್ಪ ತೆರಳಿದ್ದರು. ವಾಪಾಸ್ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ರಾಮಪ್ಪ ಸಕಾಲಕ್ಕೆ ಮನೆಗೆ ಬಾರದೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? – ಯಾವ ರಾಶಿಯವರಿಗೆ ಕೆಡುಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಹಣಕಾಸು ಯೋಜನೆ ಮಾಡಲು ಇಂದು ಉತ್ತಮ ದಿನ. ವೃತ್ತಿ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಆಸ್ತಿ ಸಂಬಂಧಿತ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ** ವೃಷಭ ರಾಶಿ : ಇಂದು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಿರುತ್ತದೆ. ಇಂದು ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲವರಿಗೆ ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ…

Read More

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ರಜೆ! – ಶೃಂಗೇರಿ, ಎನ್. ಆರ್. ಪುರ, ಕೊಪ್ಪ, ಮೂಡಿಗೆರೆ, ಕಳಸ, ಚಿಕ್ಕಮಗಳೂರು ತಾಲೂಕಲ್ಲಿ ಜು.27ಕ್ಕೆ ರಜೆ ಘೋಷಣೆ – ಶಾಲೆ, ಡಿಗ್ರಿ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯ ಎನ್‌.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ, ಚಿಕ್ಕಮಗಳೂರು ತಾಲೂಕಿನಲ್ಲಿ ಜು. 27ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಪ ವಿಭಾಗಾಧಿಕಾರಿಗಳು, ಚಿಕ್ಕಮಗಳೂರು ಕಂದಾಯ ವಿಭಾಗ, ಚಿಕ್ಕಮಗಳೂರು ಇವರ ಆದೇಶದಂತೆ ಇಂದು ಅತೀ ಹೆಚ್ಚು ಮಳೆ ಮತ್ತು ಗಾಳಿ ಇರುವುದರಿಂದ ಈ ದಿನ ದಿನಾಂಕ 27.06:2024 ರಂದು ಶನಿವಾರ ಒಂದು ದಿನ ಶಾಲೆಗೆ ರಜೆ ಘೋಷಿಸಿದೆ. ವಿಪರೀತ ಗುಡುಗು ಸಹಿತ ಗಾಳಿ ಮಳೆ ಇರುವುದರಿಂದ ಎಲ್ಲಾ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

Read More

ಕಾರ್ಗಿಲ್ ವಿಜಯೋತ್ಸವ ಜಾಥಾಕ್ಕೆ ಸ್ವಾಗತ – ಎನ್.ಆರ್.ಪುರದಿಂದ ಕಡೂರು, ಬೀರೂರು, ತರೀಕೆರೆ, ಅಜ್ಜ0ಪುರ, ಸಖರಾಯಪಟ್ಟಣದಲ್ಲಿ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ – ಮಾಜಿ ಶಾಸಕರಾದ ಸುರೇಶ್ ಸೇರಿ ಬಿಜೆಪಿ ನಾಯಕರು, ಕಾರ್ಯಕರ್ತರ ಸಾಥ್ NAMMUR EXPRESS NEWS ಚಿಕ್ಕಮಗಳೂರು: ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ʼಕಾರ್ಗಿಲ್‌ ವಿಜಯ್‌ ದಿವಸ್‌ʼ ಎಂದು ಆಚರಿಸಲಾಗುತ್ತದೆ. . ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ಚಿಕ್ಕಮಗಳೂರು ಹುತಾತ್ಮ ಯೋಧರ ನೆನಪಿಗಾಗಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಜಿಲ್ಲೆಯಾದ್ಯಂತ ಕಾರ್ಗಿಲ್ ವಿಜಯ ಜ್ಯೋತಿ ರಥ ಯಾತ್ರೆಯನ್ನು ಜಿಲಲ್ಲೆಯಲ್ಲಿ ಆಚರಿಸಲಾಯಿತು. ಮೂಡಿಗೆರೆಯಲ್ಲಿ ಯಾತ್ರೆ ಉದ್ಘಾಟನೆಗೊಂಡು ಅಲ್ದುರ್, ಬಾಳೆಹೊನ್ನೂರು, ಬಳಿಕ ಶೃಂಗೇರಿ ಮಠದ ಮುಖ್ಯ ದ್ವಾರದಿಂದ ಕಟ್ಟೆ ಬಾಗಿಲಿನವರೆಗೂ ಮೆರವಣಿಗೆ ನಡೆಸಿ ಬಳಿಕ ಕೊಪ್ಪ, ಎನ್.ಆರ್.ಪುರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಶುಕ್ರವಾರ ಬೀರೂರು, ಕಡೂರು, ತರೀಕೆರೆ, ಅಜ್ಜ0ಪುರ, ಸಖರಾಯಪಟ್ಟಣದಲ್ಲಿ ಜಾಥಾಕ್ಕೆ ಸ್ವಾಗತ ಕೋರಲಾಯಿತು.ಎಲ್ಲಾ ಕಡೆ ದೇಶ ಸೇವೆ ಸಲ್ಲಿಸಿದ ಯೋಧರನ್ನು ಸನ್ಮಾನಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

Read More

ಅಸ್ತಿ, ಪಾಸ್ತಿ ಹಾನಿ: ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ – ಶೃಂಗೇರಿ ಅತೀವೃಷ್ಟಿ ತಾಲೂಕೆಂದು ಘೋಷಣೆ ಮಾಡಲು ಪಟ್ಟು – ಬಿಜೆಪಿ ವತಿಯಿಂದ ಶೃಂಗೇರಿಯಲ್ಲಿ ಪ್ರತಿಭಟನೆ: ಸರ್ಕಾರಕ್ಕೆ ಮನವಿ NAMMUR EXPRESS NEWS ಶೃಂಗೇರಿ: ಶೃಂಗೇರಿ ತಾಲೂಕಿನದ್ಯಂತ ಹಲವು ದಿನಗಳಿಂದ ಭಾರೀ ಮಳೆಯಿಂದಾಗಿ ಅಪಾರ ಆಸ್ತಿ, ಮನೆಗಳು ಹಾನಿಯಾಗಿದ್ದು, ವಿದ್ಯುತ್ ಇಲ್ಲದೆ ಹತ್ತು ದಿನಗಳು ಕಳೆದರೂ ಇನ್ನೂ ವ್ಯವಸ್ಥೆ ಸರಿಯಾಗದೆ ಜನ ಪರದಾಡುತ್ತಿದ್ದಾರೆ. ಆದ್ರೆ ಈಗಿನ ಕಾಂಗ್ರೇಸ್ ಸರ್ಕಾರ ಮನೆ ಹಾನಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ 5 ಲಕ್ಷ ರೂ ಪರಿಹಾರವನ್ನು 1.5 ಲಕ್ಷಕ್ಕೆ ರೂಗಳಿಗೆ ಕಡಿಮೆಗೊಳಿಸಿದೆ. ಕೂಡಲೇ ಮನೆ, ಅಸ್ತಿ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಅಗ್ರಹಿಸಿ ಶೃಂಗೇರಿ ಬಿಜೆಪಿ ಶೃಂಗೇರಿಯಲ್ಲಿ ಪ್ರತಿಭಟನೆ ನಡೆಸಿತು. ಜತೆಗೆ ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಠಾರಿಯ ನೀಡಿದ ಹೇಳಿಕೆ ವಿರೋಧಿಸಿ ಮತ್ತು ಶೃಂಗೇರಿಯನ್ನು ಅತಿವೃಷ್ಟಿ ತಾಲೂಕೆಂದು ಘೋಷಣೆ ಮಾಡಬೇಕಿದ್ದು ಇಷ್ಟೆಲ್ಲಾ ಅನಾಹುತಗಳಾದರೂ ಕ್ಷೇತ್ರದ ಶಾಸಕರು ಭೇಟಿ ನೀಡದಿರುವುದು ದುರಂತ ಎಂದು…

Read More

ಮಳೆ ಅಬ್ಬರ: ತೀರ್ಥಹಳ್ಳಿ ಸಿಟಿಯಲ್ಲೇ ನೆಟ್ವರ್ಕ್ ಡಮಾರ್! – ಜಿಯೋ, ಬಿಎಸ್ಎನ್ಎಲ್ ಸೇರಿ ನೆಟ್ವರ್ಕ್ ಇಲ್ಲ – ಪಟ್ಟಣದಲ್ಲಿ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ NAMMUR EXPRESS NEWS ತೀರ್ಥಹಳ್ಳಿ: ಭೀಕರ ಮಳೆಗೆ ತೀರ್ಥಹಳ್ಳಿ ತಾಲೂಕು ಸೇರಿ ಮಲೆನಾಡಿನ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಈ ನಡುವೆ ತೀರ್ಥಹಳ್ಳಿ ಪಟ್ಟಣದಲ್ಲಿ ಕೂಡ ವಿದ್ಯುತ್, ನೆಟ್ವರ್ಕ್ ಕೈಕೊಟ್ಟಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಆಗ ಆಗ ಕಂಡು ಬಂದಿತ್ತು. ಆದರೆ ಈಗ ನೆಟ್ವರ್ಕ್ ಕೂಡ ಇಲ್ಲದಾಗಿದೆ. ಶುಕ್ರವಾರ ಸಂಜೆ ಪಟ್ಟಣದಲ್ಲಿ ವಿದ್ಯುತ್ ಇಲ್ಲ, ಕೆಲ ಕಾಲ ಜಿಯೋ, ಬಿಎಸ್ಎನ್ಎಲ್ ಸೇರಿ ನೆಟ್ವರ್ಕ್ ಇಲ್ಲದ ಕಾರಣ ಜನತೆ ಪರದಾಟ ನಡೆಸಿದರು. ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಸೇರಿ ಶಿವಮೊಗ್ಗ ಜಿಲ್ಲೆಯ ಅನೇಕ ಭಾಗಗಗಳು ನೆಟ್ವರ್ಕ್ ಇಲ್ಲದೆ ವಿದ್ಯುತ್ ಇಲ್ಲದೆ ಜನ ಕತ್ತಲಲ್ಲಿ ಕಳೆಯುವ ಸ್ಥಿತಿ ಇದೆ.

Read More

ಮೌಲ್ಯಯುತ ಶಿಕ್ಷಣ ಸಿಗದೆ ಮಾನವೀಯತೆ ಮಾಯ – ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ಬೇಸರ – ಹೊಸ ದುರ್ಗದಲ್ಲಿ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ NAMMUR EXPRESS NEWS ಹೊಸದುರ್ಗ: ಪ್ರಸ್ತುತ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗದೇ ಮಾನವೀಯತೆಯ ಹರಿವು ಕಡಿಮೆಯಾಗಿದೆ. ಶಾಲೆಯಲ್ಲಿಯೂ ಸಂಸೃತಿ, ಸಂಸ್ಕಾರ, ಗುರು ಹಿರಿಯರಿಗೆ ಗೌರವ ಆತ್ಮವಿಶ್ವಾಸ ಮಾಡಿಸುವ ಕೆಲಸ ಆಗಬೇಕಾಗಿದೆ. ಆಗ ಸಮಾಜದ ಕಡುಬಡವರನ್ನು ಶಿಕ್ಷಣದಿಂದ ಮೇಲೆತ್ತಲು ಸಾಧ್ಯವಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ತಿಳಿಸಿದ್ದಾರೆ. ನಗರದ ಯೋಜನಾ ಕಛೇರಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವತಿಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ 1000 ಶಿಕ್ಷಕರ ನೇಮಕಾತಿ ಮಾಡಿದ್ದು ಹೊಸದುರ್ಗ ತಾಲ್ಲೂಕಿನಲ್ಲಿ 5 ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಗಿದೆ. ಶಾಲೆಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವೆಂಗಳಾಪುರ ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಸಪ್ಪನಹಳ್ಳಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ…

Read More