ಕರಾವಳಿ ಟಾಪ್ ನ್ಯೂಸ್ – ಮಂಗಳೂರು ವಿಮಾನ ನಿಲ್ದಾಣದ ಬಳಿಯೇ ಚಿರತೆ ಪ್ರತ್ಯಕ್ಷ! – ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ! – ಸುಳ್ಯ: ವಾಹನ ನಡುವೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು NAMMUR EXPRESS NEWS ಮಂಗಳೂರು: ಬಜ್ಪೆಯ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪತ್ತೆಯಾದ ಘಟನೆ ನಡೆದಿದೆ.ಈ ಚಿರತೆಯನ್ನು ಖುದ್ದು ವಿಮಾನ ನಿಲ್ದಾಣದ ಅಧಿಕಾರಿಯೇ ನೋಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಬೆಳ್ಳಂಬೆಳಗ್ಗೆ ವೇಳೆ ಕಾರಿನಲ್ಲಿ ಕರ್ತವ್ಯಕ್ಕೆ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗವಾಗಿ ಚಿರತೆಯೊಂದು ರಸ್ತೆ ದಾಟಿದೆ. ತಕ್ಷಣ ಅಧಿಕಾರಿ ತಮ್ಮ ಮೊಬೈಲ್‌ನಿಂದ ಚಿರತೆಯ ಫೋಟೊ ಕ್ಲಿಕ್ಕಿಸಿ, ಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. * ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ! ಪುತ್ತೂರು:…
Author: Nammur Express Admin
ಯಕ್ಷಗಾನ ಮೇಳಗಳ ತಿರುಗಾಟ ಶುರು! – ಕರಾವಳಿ, ಮಲೆನಾಡಲ್ಲಿ ಇನ್ನು ಚಂಡೆ ಸದ್ದು – ಚಳಿ ನಡುವೆ ಯಕ್ಷಗಾನ ಪ್ರಿಯರಿಗೆ ಸಂಭ್ರಮ NAMMUR EXPRESS NEWS ಮಂಗಳೂರು/ ಉಡುಪಿ: ಕರಾವಳಿ ಮತ್ತು ಮಲೆನಾಡಿನ ಮೆಚ್ಚಿನ ಕಲೆ ಯಕ್ಷಗಾನದ ಸಂಭ್ರಮ ಇದೀಗ ಶುರುವಾಗಿದೆ. ಈಗಾಗಲೇ ಕೆಲವು ಮೇಳಗಳು ತಿರುಗಾಟ ಆರಂಭಿಸಿದ್ದರೆ, ನವೆಂಬರ್ 13ರಿಂದ 29ರ ನಡುವೆ ಇನ್ನಷ್ಟು ಮೇಳಗಳು ಸಂಚಾರ ಹೊರಡಲಿವೆ. ಹೊಸ ಪ್ರಸಂಗ, ಹೊಸ ಕಲಾವಿದರು ಮೇಳದಲ್ಲಿ ಸ್ಥಾನ ಪಡೆಯು ವುದು, ಈಗಾಗಲೇ ಮೇಳದಲ್ಲಿ ಇದ್ದವರಿಗೆ ವೇಷದ ಸ್ಥಾನದಲ್ಲಿ ಭಡ್ತಿ ದೊರೆಯುವುದು, ಭಾಗವತರು ಹಾಗೂ ಹಿಮ್ಮೇಳ ಕಲಾ ವಿದರ ಬದಲಾವಣೆ, ಕಟೀಲಿನ 6 ಮೇಳಗಳಲ್ಲಿ ನಡೆಯುವ ಆಂತರಿಕ ವರ್ಗಾವಣೆ, ಆರಂಭವಾಗುವ ಹೊಸ ಮೇಳಗಳು, ಅದಕ್ಕೆ ಸೇರ್ಪಡೆಯಾಗುವ ಕಲಾವಿದರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಧರ್ಮಸ್ಥಳ ಮೇಳದ ತಿರುಗಾಟ ಆರಂಭ ಧರ್ಮಸ್ಥಳ ಮೇಳ ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.21ರಿಂದ ಕ್ಷೇತ್ರದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಮಲಶಿಲೆ ಮೇಳ ನ.5ರಂದು ಸೇವೆಯಾಟ…
ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ ಸಾಧನೆ – ಶ್ರೇಷ್ಠ ಕೆ.ಆರ್ ಪ್ರಥಮ ಸ್ಥಾನ: ನಾಭಿಹ ಫಾತಿಮಾ, ಅಕ್ಷರ ಕೆ ಆರ್ ತೃತೀಯ, – ಅದಿತಿ ಎ ಗೌಡ, ಅಕ್ಷಯ್, ಅಭಯ್ ಪ್ರಸಾದ್, ಎಂ.ಪಿ ಅಭಿರುಧ್, ಸಮರ್ಥ್, ಆಯುಷ್ ಚತುರ್ಥ ಸ್ಥಾನ – ಪ್ರವೀಣ್ಯ ಮತ್ತು ವೈಭವ್ ಪಂಚಮ ಸ್ಥಾನದ ಸಾಧನೆ NAMMUR EXPRESS NEWS ತೀರ್ಥಹಳ್ಳಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 19 ರಾಜ್ಯ ಮಟ್ಟದ ಅಬಾಕಸ್ ಮತ್ತು 7ನೇ ರಾಜ್ಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಚಿತ್ರದುರ್ಗದ ಮುರುಘಾಮಠದಲ್ಲಿ ತೀರ್ಥಹಳ್ಳಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ 11 ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಕೆ.ಆರ್ 6ನೇ ವಿಭಾಗದಲ್ಲಿ 100 ಕ್ಕೆ 100 ಲೆಕ್ಕ ಐದು ನಿಮಿಷದಲ್ಲಿ ಮಾಡಿ ಪ್ರಥಮ ಸ್ಥಾನ ಪಡೆದಿದ್ದಾಳೆ. ನಾಭಿಹ ಫಾತಿಮಾ ಮತ್ತು ಅಕ್ಷರ ಕೆ ಆರ್ ತೃತೀಯ, ಅದಿತಿ ಎ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶನಿ ದೇವನ ಆಶೀರ್ವಾದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಗೆ ಸೇರಿದ ಜನರಿಗೆ ಈ ದಿನ ಸಾಮಾನ್ಯವಾಗಿರಲಿದೆ. ಈ ದಿನ ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವುದರಿಂದ ಮನಸ್ಸು ಸಂತೋಷವಾಗಿರುವುದು. ಮನೆಯ ಸದಸ್ಯರೊಂದಿಗೆ ಯಾವುದಾದರೂ ವಿಷಯಕ್ಕಾಗಿ ವಿವಾದ ಉಂಟಾಗಿದ್ದರೆ ಅದು ಈ ದಿನ ಕೊನೆಗೊಳ್ಳಲಿದೆ. ಇಂದು ನೀವು ಎಲ್ಲಾ ಸದಸ್ಯರು ಸೇರಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸುವಿರಿ. ಇಂದು ನೀವು ನಿಮ್ಮ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ನಿರಾಶೆಯನ್ನು ಹೊಂದುವ ಕಾರಣದಿಂದಾಗಿ ಸ್ವಲ್ಪ ಒತ್ತಡಕ್ಕೆ ಒಳಗಾಗುವಿರಿ. ** ವೃಷಭ ರಾಶಿ : ಇಂದು ರಾಜಕೀಯಕ್ಕೆ ಸಂಬಂಧಿಸಿದ ವೃಷಭ ರಾಶಿಗೆ ಸೇರಿದ…
ಹಾಸನ ಅಕ್ಷರ ಬುಕ್‌ಹೌಸ್‌ಗೆ ದಶಕದ ಸಂಭ್ರಮ! – ಓದುಗ ವಲಯದ ಮೆಚ್ಚುಗೆ ಪಡೆದ ಪುಸ್ತಕ ಮಳಿಗೆ – ಟೈಮ್ಸ್ ಗಂಗಾಧರ್, ಶಿವಕುಮಾರ್ ಸಾಹಸಕ್ಕೆ ಅಭಿನಂದನೆ NAMMUR EXPRESS NEWS ಹಾಸನ: ಸಾವಿರ ಉದ್ಯಮಗಳನ್ನು ಹುಟ್ಟು ಹಾಕುವುದು ಕಷ್ಟದ ಕೆಲಸವಲ್ಲ, ಆದರೆ ಪುಸ್ತಕ ಸಂಸ್ಕೃತಿ ಹುಟ್ಟು ಹಾಕುವುದು ಬಹಳ ಕಷ್ಟದ ಕೆಲಸ. ಆದರೂ ಓದುವ ಸಂಸ್ಕೃತಿ ಹುಟ್ಟು ಹಾಕಿದ ಅಕ್ಷರ ಬುಕ್ ಹೌಸ್ ಮಾಲೀಕರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಾಹಿತಿ ಬಾನು ಮುಸ್ತಾಕ್ ತಿಳಿಸಿದ್ದಾರೆ. ಹಾಸನದಲ್ಲಿ ನಡೆದ ಅಕ್ಷರಬುಕ್ ಹೌಸ್‌ನ ದಶಕದ ಸಂಭ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಲೋಕಕ್ಕೆ ಮುಕುಟ ಮಣಿ ಕೊಟ್ಟ ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಒಂದು ಉತ್ತಮ ಪುಸ್ತಕ ಮಳಿಗೆ ಇಲ್ಲವೆಂಬ ಕೊರಗು ಎಲ್ಲರನ್ನೂ ಕಾಡುತಿತ್ತು. ಸಾಹಿತ್ಯ ಪ್ರಿಯರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ದಶಕದ ಹಿಂದೆಯೇ ನಗರದಲ್ಲಿ ಪುಸ್ತಕ ಮಳಿಗೆ ಪ್ರಾರಂಭಿಸಿ ಸಾಹಿತ್ಯಾಸಕ್ತರನ್ನು…
ವಿರಕ್ತಮಠದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ – ನ.9ರ ಸಂಜೆ ಪಂದ್ಯಾವಳಿ: ಸರ್ವರಿಗೂ ಸ್ವಾಗತ – ಅರಗದ ಗೆಳೆಯರ ಬಳಗದ ವತಿಯಿಂದ ಆಯೋಜನೆ ತೀರ್ಥಹಳ್ಳಿ ತಾಲೂಕು ಆರಗ ಗ್ರಾ,ಪಂ ವ್ಯಾಪ್ತಿಯ ವಿರಕ್ತಮಠದಲ್ಲಿ ದಿ:9:11:24 ರ ಶನಿವಾರದಂದು ಸಂಜೆ 8 ಗಂಟೆಗೆ ಗೆಳೆಯರ ಬಳಗದ ವತಿಯಿಂದ ವಿರಕ್ತ ಮಠದ ಗುತ್ಯಮ್ಮ ದೇವಸ್ಥಾನದ ಆವರಣದಲ್ಲಿ ಐದನೇ ವರ್ಷದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪ್ರಥಮ ಬಹುಮಾನ ವಾಗಿ 20,000, ದ್ವಿತೀಯ ಬಹುಮಾನ 10,000, ತೃತೀಯ ಬಹುಮಾನ 5000 ಹಾಗೂ ಪಾರಿತೋಷಕವನ್ನು ನೀಡಲಾಗುವುದು. ಕ್ರೀಡಾಕೂಟಕ್ಕೆ ಕಬ್ಬಡಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಜುನಾಥ 94802 17889 .ಆನಂದ 9448026795 ಸಂಪರ್ಕಿಸಬಹುದಾಗಿದೆ.
ಮಲೆನಾಡು ಭಾಗದಲ್ಲಿ ನಿಲ್ಲದ ಗಜ ಗಲಾಟೆ! – ಕಷ್ಟಪಟ್ಟು ಬೆಳೆದಿದ್ದ ಭತ್ತ ಸೇರಿ ಅನೇಕ ಬೆಳೆ ಕಾಡಾನೆ ಪಾಲು – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಿವಿಧೆಡೆ ಕಾಡಾನೆ ಹಾವಳಿ ಮುಂದುವರಿದಿದ್ದು, ಕಷ್ಟಪಟ್ಟು ಬೆಳೆದಿದ್ದ ಭತ್ತ ಮೊದಲಾದ ಬೆಳೆ ಇನ್ನೇನು ದುಡಿದವನಿಗೆ ಅನ್ನ ಆಗಬೇಕು ಅನ್ನುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ. ಗಜಪಡೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿರುವುದು ನಿರಂತರವಾಗಿದೆ. ತಾಲ್ಲೂಕಿನ, ಬೊಬ್ಬನಹಳ್ಳಿ ಗ್ರಾಮದಲ್ಲಿ ಇನ್ನೇನು ಕಟಾವು ಮಾಡಬೇಕಿದ್ದ ಭತ್ತ, ಬೈನೆ ಮರ, ಬಾಳೆ, ಕಾಫಿ, ಅಡಕೆ ಬೆಳೆಗಳನ್ನು ಕಾಡಾನೆ ಹಿಂಡು ತುಳಿದು ನಾಶ ಮಾಡಿವೆ. ಮರಗಳನ್ನು ಬುಡಮೇಲು ಮಾಡಿವೆ. ಗ್ರಾಮದ ಬಿ.ಡಿ.ಮಲ್ಲೇಶ್ವರ ನಿಂಗೇಗೌಡ ಹಾಗೂ ಇತರೆ ರೈತರಿಗೆ ಸೇರಿದ ತೆನೆ ಕಟ್ಟಿದ್ದ ಭತ್ತದ ಬೆಳೆಯನ್ನು ಸಂಪೂರ್ಣ ತಿಂದು ತುಳಿದು ನಾಶ ಮಾಡಿವೆ. ಇದು ಅನ್ನದಾತನನ್ನು ಅಕ್ಷರಶಃ ಕಂಗೆಡಿಸಿದೆ. ಅರಣ್ಯ ಇಲಾಖೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕೈ ಚೆಲ್ಲಿ ಕುಳಿತಿದೆ. ನಿರಂತರ ಕಾಡಾನೆ…
ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ 15 ಪುಸ್ತಕಗಳ ಲೋಕಾರ್ಪಣೆ – ಸಾಹಿತಿ ಮಾಚೇನಹಳ್ಳಿ ರಾಮಕೃಷ್ಣ ಅವರಿಂದ ವಿನೂತನ ಕಾರ್ಯಕ್ರಮ – ಹೊಸದುರ್ಗ: ಡಾ.ರಾಜಕುಮಾರ್ ಸಂಘದ ನೂತನ ಅಧ್ಯಕ್ಷರಾಗಿ ಗೌಡ್ರ ತಿಪ್ಪೇಸ್ವಾಮಿ ಹೊಸದುರ್ಗ:ನವೆಂಬರ್ 9ರಂದು ಬೆಳಿಗ್ಗೆ 11:30ಕ್ಕೆ ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಸವಿ ನೆನಪಿಗಾಗಿ 15 ಪುಸ್ತಕಗಳನ್ನ ಲೋಕಾರ್ಪಣೆ ಮಾಡಲಾಗುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪ ಅವ್ವ ಪಬ್ಲಿಕೇಶನ್ಸ್ ಮುಖ್ಯಸ್ಥ ಮಾಚೇನಹಳ್ಳಿ ರಾಮಕೃಷ್ಣ ತಿಳಿಸಿದರು. ನಗರದಲ್ಲಿ ನಡೆದ ಪೂರ್ವಬಾವಿ ಸಬೆಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಬಿಜಿ ಗೋವಿಂದಪ್ಪನವರು ಉದ್ಘಾಟಿಸಲಿದ್ದು ಕನಕ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ ಎಚ್ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ಮಂಜುನಾಥ್ .ಡಿ ದೇವರಾಜ ಅರಸು ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ ಸಿ ರಘುಚಂದನ್ ಮಾಜಿ ಸಚಿವೆ ಬಿ ಟಿ ಲಲಿತಾ…
ಚನ್ನಪಟ್ಟಣದಲ್ಲಿ ಡಿಕೆಶಿ ಜತೆ ಆರ್. ಎಂ ಪ್ರಚಾರ..! – ಒಂದೇ ಕಾರಲ್ಲಿ ಪ್ರಯಾಣ: ಸಭೆ ಆಯೋಜನೆ ಬಗ್ಗೆ ಮೆಚ್ಚುಗೆ – ಚನ್ನಪಟ್ಟಣ ಉಸ್ತುವಾರಿಯಾಗಿ ಮಂಜುನಾಥ ಗೌಡ NAMMUR EXPRESS NEWS ಚನ್ನಪಟ್ಟಣ: ಚನ್ನಪಟ್ಟಣ ವಿಧಾನ ಸಭಾ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕ್ಷೇತ್ರದ ಮಳೂರು ಜಿಲ್ಲಾ ಪಂಚಾಯತ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಪರವಾಗಿ ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಸಭೆ ನಡೆಸಿ ಮತ ಕೇಳಿದ್ದಾರೆ. ರಾಜ್ಯ ಸಹಕಾರ ವಿಭಾಗದ ಸಂಚಾಲಕರಾದ ಡಾ ಆರ್ ಎಂ ಮಂಜುನಾಥ ಗೌಡ ಚನ್ನಪಟ್ಟಣ ಉಸ್ತುವಾರಿಯಾಗಿ ಅನೇಕ ಸಭೆಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವ ಬಗ್ಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಸಚಿವರಾದ ರಾಮಲಿಂಗ ರೆಡ್ಡಿ, ಮಾಂಕಳ ವೈದ್ಯ, ಶಾಸಕರಾದ ಮಾಗಡಿ ಬಾಲಕೃಷ್ಣ, ಸೋಮಶೇಖರ್, ಸಂಸದ ಶ್ರೇಯಸ್ ಪಟೇಲ್, ಉಮಾಪತಿ ಶ್ರೀನಿವಾಸ್ ಗೌಡ ಸೇರಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು…
ನಿಖಿಲ್ ಗೆಲುವಿಗಾಗಿ ಕೊಲ್ಲೂರಲ್ಲಿ ಪೂಜೆ! – ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡರು – ಚನ್ನಪಟ್ಟಣದಲ್ಲಿ ನಿಖಿಲ್, ಕುಮಾರಸ್ವಾಮಿ ಅವರಿಗೆ ಪ್ರಸಾದ ವಿತರಣೆ NAMMUR EXPRESS NEWS ತೀರ್ಥಹಳ್ಳಿ/ ಬೈಂದೂರು: ರಾಜ್ಯದ ಪ್ರತಿಷ್ಠಿತ ಉಪ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಕೊಲ್ಲೂರು ಮೂಕಾಂಬಿಕೆಗೆ ಜೆಡಿಎಸ್ ನಾಯಕರು ಪೂಜೆ ಸಲ್ಲಿಸಿ ಅವರಿಗೆ ಪ್ರಸಾದ ನೀಡಿದ್ದಾರೆ. ಜೆಡಿಎಸ್ ನಾಯಕರಾದ ಯಡೂರು ರಾಜಾರಾಂ, ಬೋಜೇಗೌಡರ ಆಪ್ತ ಸಹಾಯಕರಾದ ಪರುಶುರಾಮ್ ಮತ್ತು ಯುವ ಜೆಡಿಎಸ್ ಪ್ರಮುಖರಾದ ಬೇಳೂರು ಗಗನ್ ಗೌಡ ಅವರು ಗುರುವಾರ ಸಂಜೆ ಪೂಜೆ ಮಾಡಿಸಿ ಶುಕ್ರವಾರ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯವರಿಗೆ ದೇವಿಯ ಪ್ರಸಾದವನ್ನು ನೀಡಿದರು. ಕುಮಾರಸ್ವಾಮಿ ಮತ್ತು ನಿಖಿಲ್ ಸದಾ ಕೊಲ್ಲೂರು ಮುಕಾಂಬಿಕೆ ಭಕ್ತರಾಗಿದ್ದು ಅವರ ಸಲಹೆ ಮೇರೆಗೆ ದೇವಳದಲ್ಲಿ ವಿಶೇಷ ಪೂಜೆ ಮಾಡಿಸಲಾಗಿತ್ತು ಎಂದು ಯಡೂರು ರಾಜಾರಾಂ ತಿಳಿಸಿದ್ದಾರೆ.