ಹಣಗೆರೆ ದೇವಸ್ಥಾನದಲ್ಲಿ ಹುಂಡಿ ಗೋಲ್ಮಾಲ್?! * ದೇವಸ್ಥಾನದ ಹುಂಡಿ ಹಣ ಎಣಿಕೆಯಲ್ಲಿ ಹಣ ವ್ಯತ್ಯಾಸ * ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ನೇತೃತ್ವದಲ್ಲಿ ಹದ್ದಿನಗಣ್ಣು * ಕೋಟಿ ಕೋಟಿ ಹಣ ಬರುತ್ತೆ ಕಾಣಿಕೆ: ಅಭಿವೃದ್ಧಿ ಮಾತ್ರ ಇಲ್ಲ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಧಾರ್ಮಿಕ ಸೌಹಾರ್ದ ಕೇಂದ್ರ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಹಣ ಎಣಿಕೆಯಲ್ಲಿ ಮೋಸ ಆಗುತ್ತಿದೆ ಎಂಬ ದೂರಿನ ನಡುವೆ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಹದ್ದಿನಗಣ್ಣಿಟ್ಟಿದ್ದಾರೆ. ದೇವಸ್ಥಾನದ ಹುಂಡಿಯಲ್ಲೂ ಹಣ ಎಣಿಕೆಯಲ್ಲಿ ಭಾರಿ ಪ್ರಮಾಣದ ಮೋಸ ನಡೆಯುತ್ತಿದ್ದು, ಬ್ಯಾಂಕ್ ಸಿಬ್ಬಂದಿಗಳ, ಅಧಿಕಾರಿಗಳ, ಸಮಿತಿ ವರ್ಗದವರ ಮೇಲೆ ಗ್ರಾಮಸ್ಥರಲ್ಲಿ ಶಂಕೆ ಮೂಡಿದೆ. ಈ ಹಿನ್ನೆಲೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಹಣಗೆರೆ ಮುಜರಾಯಿ ದೇವಸ್ಥಾನದಲ್ಲಿ ಸಂಗ್ರಹವಾಗುತ್ತಿದ್ದು, ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ…
Author: Nammur Express Admin
ಶುರುವಾಯ್ತು ಕಂಬಳ ರಂಗು! – ರಾಜಧಾನಿಯಲ್ಲಿಲ್ಲ ಈ ಬಾರಿ ಕಂಬಳ, ಮೊದಲ ಬಾರಿಗೆ ಶಿವಮೊಗ್ಗದಲ್ಲಿ – ಕಂಬಳ ಓಟ: ಎಲ್ಲೆಲ್ಲಿ ಯಾವಾಗ ಕಂಬಳ? ಕರಾವಳಿಯ ಸಂಪ್ರದಾಯಿಕ ಕ್ರೀಡೆ ಕಂಬಳ ರಂಗು ಶುರುವಾಗಲಿದೆ. ಮೊದಲ ಕಂಬಳ ಈ ಬಾರಿ ನವೆಂಬರ್ 9ರಂದು ಮಂಗಳೂರಿನ ಪಣಪಿಲದಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು 25 ಕಂಬಳಗಳು ಆಯೋಜಿಸಲಾಗಿದ್ದು, ಈಗ ಸಿದ್ಧತೆ ಜೋರಾಗಿದೆ. ಬೆಂಗಳೂರಿನಲ್ಲಿ ಕೋರ್ಟ್ ಆದೇಶ ಹಿನ್ನೆಲೆ ಈ ಬಾರಿ ಕಂಬಳ ಇಲ್ಲ. ಆದರೆ ಮೊದಲ ಬಾರಿಗೆ ಮಲೆನಾಡ ಮಡಿಲು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ. ಯಾವತ್ತು ಎಲ್ಲೆಲ್ಲಿ ಕಂಬಳ. ನವೆಂಬರ್ 17 ಪಿಲಿಕುಳದಲ್ಲಿ, ನವೆಂಬರ್ 23 ಕೊಡಂಗೆಯಲ್ಲಿ, ನವೆಂಬರ್ 30 ಕಕ್ಕೆಪದವು, ಡಿಸೆಂಬರ್ 07 ಹೊಕ್ಕಾಡಿ, ಡಿಸೆಂಬರ್ 14 ಬಾರಾಡಿ, ಡಿಸೆಂಬರ್ 22 ಮೂಲ್ಕಿ, ಡಿಸೆಂಬರ್ 28 ಮಂಗಳೂರು, ಡಿಸೆಂಬರ್ 29 ಬಳ್ಳಮಂಜ, ಜನವರಿ 04 ಮಿಯಾರು, ಜನವರಿ 11, 2025ರಂದು ನರಿಂಗಾನ, ಜನವರಿ 18 ಅಡ್ಡೆ, ಜನವರಿ 25 ಮೂಡುಬಿದಿರೆ, ಫೆಬ್ರವರಿ 01…
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕ್ ನಂಟು!? – ಬೆಚ್ಚಿ ಬೀಳಿಸೋ ಮಾಹಿತಿ ಬಹಿರಂಗ ಪಡಿಸಿದ ಎನ್. ಐ. ಎ – ಕರ್ನಾಟಕದ ಯುವಕರನ್ನು ಉಗ್ರ ಚಟುವಟಿಕೆಗೆ ಬಳಕೆ! NAMMUR EXPRESS NEWS ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಪಾಕಿಸ್ತಾನ ಪಿತೂರಿ ನಡೆಸಿರುವ ಮಹತ್ವದ ವಿಚಾರ ಬಹಿರಂಗವಾಗಿದೆ. ಪ್ರಕರಣದ ತನಿಖೆ ನಡೆಸಿರುವ NIA, ಇತ್ತೀಚೆಗೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಪಾಕಿಸ್ತಾನದ ನಂಟಿದ್ದು, ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಸದ್ಯ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ. ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು. ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್…
ಹೊಸ ವರ್ಷದಂದೇ ತೀರ್ಥಹಳ್ಳಿ ರಾಮೇಶ್ವರನ ತೆಪ್ಪೋತ್ಸವ – ರಾಜ್ಯದ ವಿವಿಧ ಭಾಗದಿಂದ ಲಕ್ಷ ಲಕ್ಷ ಜನ ಭೇಟಿ – ಡಿ. 30ಕ್ಕೆ ಸ್ನಾನ, ಡಿ.31ಕ್ಕೆ ರಥೋತ್ಸವ, ಜ.1ಕ್ಕೆ ತೆಪ್ಪೋತ್ಸವ ಮಲೆನಾಡಿಗರ ಹೆಮ್ಮೆಯ ಪ್ರತೀಕವಾಗಿರುವ ತೀರ್ಥಹಳ್ಳಿ ರಾಮೇಶ್ವರ ದೇವರ ತೆಪ್ಪೋತ್ಸವ ಈ ಬಾರಿ ಹೊಸ ವರ್ಷದಂದು ಆಗಮಿಸುತ್ತಿದೆ. ಮಲೆನಾಡ ತೀರ್ಥಹಳ್ಳಿ ರಾಮೇಶ್ವರ ದೇವರ ಜಾತ್ರೆ ಎಂದರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಲಿದ್ದು, ಮಲೆನಾಡಿಗರು ವಿಶೇಷವಾಗಿ ಸಜ್ಜುಗೊಳ್ಳುತ್ತಾರೆ. ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನ ಆಗಮಿಸುತ್ತಾರೆ. ಪರಶುರಾಮನಿಗೆ ದೋಷ ಮುಕ್ತಿ ಕೊಟ್ಟ ತೀರ್ಥಹಳ್ಳಿ ಮಾತೃ ಹತ್ಯೆ ಪಾಪ ಪರಿಹಾರ ದೋಷದಿಂದ,ಮುಕ್ತಿ ಕಂಡ ಸಂತಸದಲ್ಲಿ ಪರಶುರಾಮನಿಂದ ತೀರ್ಥಹಳ್ಳಿ ತುಂಗಾ ನದಿ ತೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಮೇಶ್ವರ ದೇವಸ್ಥಾನ,ಮಲೆನಾಡಿನ ಭಾಗದ ಜನರಿಗೆ ಆರಾಧ್ಯ ದೈವವಾಗಿದೆ. ನದಿಯ ದಡದಲ್ಲಿ ಕಲ್ಲಿನಿಂದ ಕಟ್ಟಲ್ಪಟ್ಟ ರಾಮೇಶ್ವರ ದೇವಾಲಯವಿದೆ. ಎಳ್ಳಮಾವಾಸ್ಯೆ ಜಾತ್ರೆ ಯಾವತ್ತು ಏನೇನು? ಕೊಡಲಿಯನ್ನು ತೊಳೆದ ದಿನ ಮಾರ್ಗಶಿರ ಅಮಾವಾಸ್ಯೆಯಾದ ಕಾರಣ ಎಳ್ಳಮಾವಾಸ್ಯೆ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿ ತೀರ್ಥಹಳ್ಳಿ ಎಳ್ಳಮವಾಸ್ಯೆ…
ಕರಾವಳಿ ನ್ಯೂಸ್ – ಆರಂತೋಡು: ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ – ಪುತ್ತೂರು: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ! – ಕಾರ್ಕಳ: ಮಾನಸಿಕ ಖಿನ್ನತೆಯಿಂದ ಅತಿಥಿ ಶಿಕ್ಷಕಿ ಆತ್ಮಹತ್ಯೆ – ಕಾವೂರು: ಇಬ್ಬರು ದನಗಳ್ಳರು ಅರೆಸ್ಟ್ NAMMUR EXPRESS NEWS ಅರಂತೋಡು: ಆಲೆಟ್ಟಿ ಗ್ರಾಮದ ಕಲ್ಲೆಂಬಿಯಲ್ಲಿ ಕಾನೂನು ವಿದ್ಯಾರ್ಥಿಯೋರ್ವ ನ. 7ರಂದು ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಲ್ಲೆಂಬಿ ಸಾನದ ಮನೆಯ ರಾಘವ ಬೆಳ್ಳಪ್ಪಾಡ ಅವರ ಪುತ್ರ ಮಿಥುನ್ ರಾಜ್ (26) ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಸುಳ್ಯಕ್ಕೆ ಮದುವೆಗೆಂದು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯುವಕ ಸುಳ್ಯದ ಖಾಸಗಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಪುತ್ತೂರು: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ!! ಪುತ್ತೂರು: ಲಕ್ಕಿ ಡ್ರಾ ಎಂಬ ಮಾತು ನಂಬಿ ಪುಣಚದ ಕೂಲಿ ಕಾರ್ಮಿಕರೋರ್ವರು ಹಣ ಕಳೆದುಕೊಂಡ ಘಟನೆ…
ಸರ್ಕಾರಿ ಕಚೇರಿ, ಆವರಣದಲ್ಲಿ ತಂಬಾಕು ಸೇವನೆಗೆ ನಿಷೇಧ – ರಾಜ್ಯ ಸರ್ಕಾರದ ಮಹತ್ವದ ಆದೇಶ – ಸೇವಿಸುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ NAMMUR EXPRESS NEWS ಬೆಂಗಳೂರು: ಸರ್ಕಾರಿ ಕಛೇರಿಗಳಲ್ಲಿ ಹಾಗೂ ಕಛೇರಿ ಆವರಣಗಳಲ್ಲಿ ಧೂಮಪಾನ ಇತರೆ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧೂಮಪಾನ ಹಾಗೂ ತಂಬಾಕಿನ ಇತರೆ ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ. ಶಾಸನಾತ್ಮಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಕಛೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿ೦ದ ಹಾಗೂ ಪರೋಕ್ಷ ಧೂಮಪಾನದಿ೦ದ ಸಾರ್ವಜನಿಕರನ್ನು ಹಾಗೂ ಸರ್ಕಾರಿ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಜೀವನದಲ್ಲಿ ಏರಿಳಿತಗಳಿರುತ್ತವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭವಿದೆ, ಆದರೆ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ತಾಳ್ಮೆಯ ಕೊರತೆ ಇರುತ್ತದೆ. ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ** ವೃಷಭ ರಾಶಿ : ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ…
ತೀರ್ಥಹಳ್ಳಿ ಬರಲಿದೆ ನಿರ್ಮಲ ತುಂಗಭದ್ರಾ ಅಭಿಯಾನ – ಶೃಂಗೇರಿ, ಕೊಪ್ಪ ಮೂಲಕ ಬಸವಾನಿ ತಲುಪಿದ ಅಭಿಯಾನ – ಆರಗ, ತಹಸೀಲ್ದಾರ್ ಸೇರಿ ಅನೇಕ ನಾಯಕರ ಸಾಥ್ NAMMUR EXPRESS NEWS ತೀರ್ಥಹಳ್ಳಿ: ನಿರ್ಮಲ ತುಂಗಭದ್ರಾ ಅಭಿಯಾನ ತೀರ್ಥಹಳ್ಳಿಗೆ ಆಗಮಿಸಿದ್ದು ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆ ಶೃಂಗೇರಿಯಿಂದ ಪೂರ್ಣ ಕುಂಭ ಸ್ವಾಗತದಿಂದ ಬಸವಾನಿಯ ಗ್ರಾಮ ಗ್ರಾಮಸ್ಥರು ಮತ್ತು ಗಣ್ಯರು ಅತ್ಯಂತ ಅದ್ದೂರಿಯಿಂದ ಬರಮಾಡಿಕೊಂಡು ನಂತರ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಏರ್ಪಡಿಸಿ ನಂತರ ಸರಳವಾದ ವೇದಿಕೆ ಕಾರ್ಯಕ್ರಮ ನಡೆಸಿ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತ್ತು ತಾಲೂಕು ದಂಡಾಧಿಕಾರಿ ಮತ್ತು ಗಣ್ಯರು ಅಭಿಯಾನದ ಬಗ್ಗೆ ಮಾತನಾಡಿ ಜನರಲ್ಲಿ ನದಿಯ ಪ್ರಾಮುಖ್ಯತೆ ಬಗ್ಗೆ,ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸಿದರು. ಎಲ್ಲಿಂದ ಎಲ್ಲಿಗೆ ಅಭಿಯಾನ? ಬಸವಾನಿಯಿಂದ ಹೊಸ ಆಗ್ರಹಾರ ತನಕ ಅಭಿಯಾನ ಬಂದಿದ್ದು ರಂಜದ ಕಟ್ಟೆಯ ಭೀಮೇಶ್ವರ ದೇವಸ್ಥಾನದಿಂದ ತೀರ್ಥಹಳ್ಳಿಗೆ ತಲುಪಲಿದೆ.
ತೀರ್ಥಹಳ್ಳಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ – ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ – ವಿದ್ಯಾರ್ಥಿಗಳಿಗೆ ಡ್ರಗ್ಸ್ ವಿರೋಧಿ ಹೋರಾಟಕ್ಕೆ ಕರೆ NAMMUR EXPRESS NEWS ತೀರ್ಥಹಳ್ಳಿ: ನೆಹರು ಯುವಕೇಂದ್ರ, ಶಿವಮೊಗ್ಗ, ಯುವಮಿತ್ರರು (ರಿ.) ತೀರ್ಥಹಳ್ಳಿ, ಹಳೆಯ ವಿದ್ಯಾರ್ಥಿಗಳ ಸಂಘ(ರಿ.) ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ತೀರ್ಥಹಳ್ಳಿ ಜಂಟಿ ಸಹಭಾಗಿತ್ವದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಕುರಿತು ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಕನ್ನಡ ರಾಜ್ಯೋತ್ಸವ-ಸುವರ್ಣ ಕರ್ನಾಟಕ – 50 ಪ್ರಶಸ್ತಿ ಪುರಸ್ಕೃತ ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಎಸ್.ಕೃಷ್ಣಪ್ಪ ಮಾದಕ ವಸ್ತುಗಳ ಕುರಿತು ಜಾಗೃತಿ ಭಿತ್ತಿ ಚಿತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ಜನಿಕರಿಗೆ ಬಹು ಮುಖ್ಯವಾದದ್ದು ಆರೋಗ್ಯ, ವಿದ್ಯಾರ್ಥಿಗಳು ಈ ದೆಸೆಯಲ್ಲಿ ಬಹುಮುಖ್ಯವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಮಾದಕ ವಸ್ತುಗಳು ಹಾಗೂ ದುಷ್ಚಟಗಳಿಂದ ವಿಮುಖರಾಗಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು…
ಕರಾವಳಿ ಟಾಪ್ ನ್ಯೂಸ್ – ಉಡುಪಿ: ಅಪರಿಚಿತ ಕೊಳೆತ ಶವ ಪತ್ತೆ! – ಮಣಿಪಾಲ: ಸರಣಿ ಅಂಗಡಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್! – ಪುತ್ತೂರು: ಚಡ್ಡಿ ಗ್ಯಾಂಗ್ ಹೆಸರಿನಲ್ಲಿ ದರೋಡೆಯ ಕಥೆ ಕಟ್ಟಿದ ಮಹಿಳೆ NAMMUR EXPRESS NEWS ಉಡುಪಿ : ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಾಣಿ ತೋಡಿನಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ನ. 7ರಂದು ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಸುನೀಲ್ ಬೈಲಕೆರೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ತೋಡಿನಲ್ಲಿ ಬಿದ್ದಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಿದ್ದರು. ನಗರ ಠಾಣೆಯ ಎ ಎಸ್ ಐ ನವೀನ್ ದೇವಾಡಿಗ, ಹೆಡ್ ಕಾನ್ಸಟೇಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದರು. ಉಮೇಶ ಬೈಲಕೆರೆ ಸಹಕರಿಸಿದರು ಕೊಳೆತ ಶವವನ್ನು ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು. ಸಂಭಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು…