Author: Nammur Express Admin

ತೀರ್ಥಹಳ್ಳಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ – ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ – ವಿದ್ಯಾರ್ಥಿಗಳಿಗೆ ಡ್ರಗ್ಸ್ ವಿರೋಧಿ ಹೋರಾಟಕ್ಕೆ ಕರೆ NAMMUR EXPRESS NEWS ತೀರ್ಥಹಳ್ಳಿ: ನೆಹರು ಯುವಕೇಂದ್ರ, ಶಿವಮೊಗ್ಗ, ಯುವಮಿತ್ರರು (ರಿ.) ತೀರ್ಥಹಳ್ಳಿ, ಹಳೆಯ ವಿದ್ಯಾರ್ಥಿಗಳ ಸಂಘ(ರಿ.) ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ತೀರ್ಥಹಳ್ಳಿ ಜಂಟಿ ಸಹಭಾಗಿತ್ವದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಕುರಿತು ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಕನ್ನಡ ರಾಜ್ಯೋತ್ಸವ-ಸುವರ್ಣ ಕರ್ನಾಟಕ – 50 ಪ್ರಶಸ್ತಿ ಪುರಸ್ಕೃತ ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಎಸ್.ಕೃಷ್ಣಪ್ಪ ಮಾದಕ ವಸ್ತುಗಳ ಕುರಿತು ಜಾಗೃತಿ ಭಿತ್ತಿ ಚಿತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ಜನಿಕರಿಗೆ ಬಹು ಮುಖ್ಯವಾದದ್ದು ಆರೋಗ್ಯ, ವಿದ್ಯಾರ್ಥಿಗಳು ಈ ದೆಸೆಯಲ್ಲಿ ಬಹುಮುಖ್ಯವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಮಾದಕ ವಸ್ತುಗಳು ಹಾಗೂ ದುಷ್ಚಟಗಳಿಂದ ವಿಮುಖರಾಗಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು…

Read More

ಕರಾವಳಿ ಟಾಪ್ ನ್ಯೂಸ್ – ಉಡುಪಿ: ಅಪರಿಚಿತ ಕೊಳೆತ ಶವ ಪತ್ತೆ! – ಮಣಿಪಾಲ: ಸರಣಿ ಅಂಗಡಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್‌! – ಪುತ್ತೂರು: ಚಡ್ಡಿ ಗ್ಯಾಂಗ್‌ ಹೆಸರಿನಲ್ಲಿ ದರೋಡೆಯ ಕಥೆ ಕಟ್ಟಿದ ಮಹಿಳೆ NAMMUR EXPRESS NEWS ಉಡುಪಿ : ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಾಣಿ ತೋಡಿನಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ನ. 7ರಂದು ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಸುನೀಲ್‌ ಬೈಲಕೆರೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ತೋಡಿನಲ್ಲಿ ಬಿದ್ದಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಿದ್ದರು. ನಗರ ಠಾಣೆಯ ಎ ಎಸ್ ಐ ನವೀನ್ ದೇವಾಡಿಗ, ಹೆಡ್‌ ಕಾನ್ಸಟೇಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದರು. ಉಮೇಶ ಬೈಲಕೆರೆ ಸಹಕರಿಸಿದರು ಕೊಳೆತ ಶವವನ್ನು ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು. ಸಂಭಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು…

Read More

ಬಂಟ್ವಾಳದಲ್ಲಿ ಕಿಲ್ಲರ್ ಆಕ್ಸಿಡೆಂಟ್! – ಟೆಂಪೋ ಡಿಕ್ಕಿಯಾಗಿ 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು – ಬಸ್ ಚಾಲಕನ ಅತಿ ವೇಗದಿಂದ ಸ್ನೇಹಿತರಿಬ್ಬರು ಬಲಿ NAMMUR EXPRESS NEWS ಬಂಟ್ವಾಳ: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಂಟ್ವಾಳದ ಲೊರೆಟ್ಟೊಪದವು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಫರಂಗಿಪೇಟೆ ಸಮೀಪದ 10ನೇ ಮೈಲಿಗಲ್ಲು ನಿವಾಸಿ ದಿ.ಉನೈಸ್ ಎಂಬವರ ಪುತ್ರಿ ಆಶಿಕ (3) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮಗು ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ನಿಲ್ಲಿಸಿದ್ದ ಟೆಂಪೋವಿನ ಗೇರ್ ಅನ್ನು ಮಕ್ಕಳು ಎಳೆದಿದ್ದು, ಈ ವೇಳೆ ಟೆಂಪೊ ಚಲಿಸಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. – ಬಂಟ್ವಾಳ: ಬಸ್ ಚಾಲಕನ ಅತಿ ವೇಗದಿಂದ ಸ್ನೇಹಿತರಿಬ್ಬರು ಬಲಿ, ಬಂಟ್ವಾಳ: ತುಂಬೆಯ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ…

Read More

ರಾಜ್ಯದಲ್ಲಿ ಮತ್ತೆ ನಕ್ಸಲರ ಜಾಡು!? – ಪಶ್ಚಿಮ ಘಟ್ಟದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಸುದ್ದಿ ಚರ್ಚೆ – ನಕ್ಸಲರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸರು! NAMMUR EXPRESS NEWS ರಾಜ್ಯದಲ್ಲಿ ಮತ್ತೆ ನಕ್ಸಲರ ಪ್ರತ್ಯಕ್ಷವಾಗಿರುವ ಸುದ್ದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರಾವಳಿ ಹಾಗೂ ಮಲೆನಾಡ ಗಡಿ ಭಾಗದಲ್ಲಿ ನಕ್ಸಲರ ಓಡಾಟ ನಡೆಯುತ್ತಿದೆ ಎಂಬ ವದಂತಿ ಕೇಳಿ ಬಂದಿದೆ. ಕೇರಳದಿಂದ ನಕ್ಸಲರು ಮತ್ತೆ ಕರ್ನಾಟಕ ಕಡೆ ಮುಖ ಮಾಡಿದ್ದಾರೆ ಎಂಬ ವರದಿಗಳ ನಡುವೆ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ. ಮೊದಲು ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪ್ರತ್ಯಕ್ಷ! ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ಕಳೆದ ಮೂರು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಕಾರ್ಕಳ ತಾಲೂಕಿನ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಸ್ಥಳೀಯರು ಭಯಬೀತರಾಗಿದ್ದಾರೆ. ಸುಮಾರು 30ರಿಂದ 40 ವರ್ಷ ವಯಸ್ಸಿನ ಯುವಕರು…

Read More

ರಸ್ತೆಬದಿ ರಾಸಾಯನಿಕ ವಿಷಪೂರಿತ ಕಸದ ರಾಶಿ ಜನರಿಗೆ ಆತಂಕ! – ಬೀದಿ ನಾಯಿಗಳ ಕಾಟ ಜೋರು – ದೂರು ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ?? NAMMUR EXPRESS NEWS ತೀರ್ಥಹಳ್ಳಿ: ಹುಣಸವಳ್ಳಿ ಮತ್ತು ಮೇಲಿನ ಕುರುವಳ್ಳಿ ಗ್ರಾಮದಲ್ಲಿ ರಾಸಾಯನಿಕ ಕಸಗಳನ್ನು ರಸ್ತೆಬದಿ ಹಾಕುವುದರಿಂದ ಜನರ ಆರೋಗ್ಯಕ್ಕೆ ಹಾಗೂ ದನಕರುಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಹಿಂದೆಯೂ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ವಿಷಪೂರಿತ ರಾಸಾಯನಿಕ ವಸ್ತು , ಕಸ ಹಾಗೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಚೆಲ್ಲುವ ಜನರಿಂದ ತೊಂದರೆ ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಆ ವೇಳೆ ಭರವಸೆ ನೀಡಿದ್ದರೂ ಈ ವರೆಗೆ ಕಾರ್ಯಗತವಾಗಿಲ್ಲ. ನೂತನ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಹುಣಸವಳ್ಳಿ ಮತ್ತು ಮೇಲಿನ ಕುರುವಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. – ಬೀದಿ ನಾಯಿಗಳ ಕಾಟ ಜೋರು ಹುಣಸವಳ್ಳಿ ಮತ್ತು ಮೇಲಿನ ಕುರುವಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ.…

Read More

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್…! – ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆ..! NAMMUR EXPRESS NEWS ನವದೆಹಲಿ: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಜಗತ್ತಿನಾದ್ಯಂತ ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳಿಗೆ ಅವಶ್ಯಕವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನ. ಈ ಎರಡು ಇಂಧನಗಳಿಲ್ಲದಿದ್ದರೆ ಜಗತ್ತು ನಿಂತೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇಂದಿಗೂ ನಾವು ಆ ಇಂಧನಗಳ ಮೇಲೆ ಅವಲಂಬಿತರಾಗಿದ್ದೇವೆ. ಮೂಲತಃ ತೈಲ ನಿಕ್ಷೇಪಗಳಿಂದ ದೊರೆಯುವ ಕಚ್ಚಾತೈಲದಿಂದ ಉತ್ಪಾದಿಸಲಾಗುವ ಪೆಟ್ರೋಲ್ ಅಥವಾ ಡೀಸೆಲ್ ನವೀಕರಿಸಲಾಗದ ಶಕ್ತಿಯ ರೂಪಗಳಾಗಿದ್ದು ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಇಂಧನ ಶಕ್ತಿಗಳಾಗಿವೆ. ಅಲ್ಲದೆ, ಕಚ್ಚಾತೈಲ ತನ್ನದ ಆದ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಅದರ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತವೆ. ಇನ್ನು, ಈ ಇಂಧನಗಳ ಬೆಲೆ ಡೈನಾಮಿಕ್…

Read More

ಟಾಪ್ ನ್ಯೂಸ್ ಶಿವಮೊಗ್ಗ: ವಿದ್ಯುತ್‌ ಶಾಕ್‌ನಿಂದ ಆನೆ ಸಾವು,ಇಬ್ಬರು ಆರೋಪಿಗಳ ಸೆರೆ – ಶಿವಮೊಗ್ಗ: ದೇವಸ್ಥಾನದ ಹತ್ತಿರ ಬಂದು ಬೋನಿಗೆ ಬಿದ್ದ ಕರಡಿ – ಶಿವಮೊಗ್ಗ : ಬಸ್‌ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ – ಭದ್ರಾವತಿ: ಮನೆಗಳ್ಳತನದ ಆರೋಪಿಯ ಬಂಧನ – ಶಿರಾಳಕೊಪ್ಪ : ಆನ್‌ಲೈನ್ ವಂಚನೆಯಿಂದ 74 ಲಕ್ಷ ಕಳೆದುಕೊಂಡ ವ್ಯಾಪಾರಿ NAMMUR EXPRESS NEWS ಶಿವಮೊಗ್ಗ : ಆಯನೂರಿನ ಬಳಿಯ ವೀರಗಾರನ ಬೈರನ ಕೊಪ್ಪದಲ್ಲಿ ಜೋಳದ ಹೊಲಕ್ಕೆ ತೋಡಿರುವ ಕಂದಕಕ್ಕೆ ಆನೆಯೊಂದು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆದಿದೆ. ನಾಲ್ವರು ಪಶುವೈದ್ಯರು, ಅರಣ್ಯ ವನ್ಯ ಜೀವಿ ವಿಭಾಗದ ಡಿಎಫ್ ಒ ಪ್ರಸನ್ನ ಪಟಗಾರ್ ಮತ್ತು ಲಯನ್ ಸಫಾರಿಯ ಡಿಎಫ್ ಒ ಆಮರಾಕ್ಷರ್, ತಹಶೀಲ್ದಾರ್ ಗಿರೀಶ್ ಮತ್ತು ಗ್ರಾಮಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಆನೆಯ ಪೋಸ್ಟ್ ಮಾರ್ಟಂ ನಡೆದಿದೆ. ಆನೆ ಸತ್ತು ಮೂರು ದಿನಗಳ ನಂತರ ಮರಣೋತ್ತರ ಪರೀಕ್ಷೆ ನಡೆದಿದ್ದು ಆನೆಯ…

Read More

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ‘ಪಿಎಂ ವಿದ್ಯಾಲಕ್ಷ್ಮಿ’ – ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಖಾತ್ರಿರಹಿತ ಶಿಕ್ಷಣ ಸಾಲ ಭಾಗ್ಯ – 10 ಲಕ್ಷ ರು.ವರೆಗೆ ಶಿಕ್ಷಣ ಸಾಲ ನೀಡಲು ಸಂಪುಟ ಅಸ್ತು NAMMUR EXPRESS NEWS ನವದೆಹಲಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌, ‘ಆರ್ಥಿಕ ಸಮಸ್ಯೆಗಳಿಂದಾಗಿ ದೇಶದ ಯುವಕರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲು ಈ ಯೋಜನೆ ರೂಪಿಸಲಾಗಿದೆ’ ಎಂದರು. ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಕ್ಯುಎಚ್‌ಇಐ) ಪ್ರವೇಶ ದೊರೆತ ವಿದ್ಯಾರ್ಥಿಗಳಿಗೆ, ತಮ್ಮ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಕೃಪೆಯಿಂದಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ದೀರ್ಘಕಾಲದ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಆದರೆ ಕೆಲವರು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಯೋಜಿಸಿ. ಇದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ. ಇಂದು ಭೂಮಿ ಅಥವಾ ವಾಹನ ಖರೀದಿಗೆ ಶುಭ ದಿನವಾಗಿದೆ. ** ವೃಷಭ ರಾಶಿ : ಇಂದು ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅನೇಕ ಆದಾಯದ…

Read More

ಚನ್ನಪಟ್ಟಣದಲ್ಲಿ ಆರ್.ಎಂ, ಕಿಮ್ಮನೆ ಪ್ರಚಾರ! – ಪಟಾಕಿ ಹೊಡೆದು ಮಂಜುನಾಥ ಗೌಡರ ಸ್ವಾಗತಿಸಿದ ಕಾರ್ಯಕರ್ತರು – ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಯೋಗೇಶ್ವರ್ ಪರ ಕಿಮ್ಮನೆ ಮತ ಪ್ರಚಾರ NAMMUR EXPRESS NEWS ಚನ್ನಪಟ್ಟಣ ಉಪಚುಣಾವಣೆ ಸಹಕಾರ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ರಾಜ್ಯ ಸಹಕಾರ ನಾಯಕರು ಆದ ಡಾ. ಆರ್.ಎಂ.ಮಂಜುನಾಥ ಗೌಡ ಚನ್ನಪಟ್ಟಣಕ್ಕೆ ಭೇಟಿ ನೀಡಿ ಮತ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಂಗನೂರು ಹೋಬಳಿ ಪ್ರಚಾರ ಸಭೆಯ ಪೂರ್ವಭಾವಿಯಾಗಿ ಸಭೆ ನಡೆಸಿದ ಡಾ ಆರ್ ಎಂ ಮಂಜುನಾಥ ಗೌಡ ಅವರು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಹಾರ ಹಾಕಿ ಗೌರವಿಸಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಗೆಲುವಿಗೆ ಶ್ರಮವಹಿಸೊಣ ಎಂದರು. ಚನ್ನಪಟ್ಟಣದ ಮುಖ್ಯ ದ್ವಾರದಲ್ಲಿ ಪಟಾಕಿ ಸಿಡಿಸಿ ಡಾ ಆರ್ ಎಂ ಮಂಜುನಾಥ ಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾರಹಾಕಿ ಸ್ವಾಗತಿಸಿದರು. ರಾಜ್ಯ ಕಾಂಗ್ರೆಸ್ ಪ್ರಮುಖರಾದ…

Read More