Author: Nammur Express Admin

ಚನ್ನಪಟ್ಟಣದಲ್ಲಿ ಆರ್.ಎಂ, ಕಿಮ್ಮನೆ ಪ್ರಚಾರ! – ಪಟಾಕಿ ಹೊಡೆದು ಮಂಜುನಾಥ ಗೌಡರ ಸ್ವಾಗತಿಸಿದ ಕಾರ್ಯಕರ್ತರು – ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಯೋಗೇಶ್ವರ್ ಪರ ಕಿಮ್ಮನೆ ಮತ ಪ್ರಚಾರ NAMMUR EXPRESS NEWS ಚನ್ನಪಟ್ಟಣ ಉಪಚುಣಾವಣೆ ಸಹಕಾರ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ರಾಜ್ಯ ಸಹಕಾರ ನಾಯಕರು ಆದ ಡಾ. ಆರ್.ಎಂ.ಮಂಜುನಾಥ ಗೌಡ ಚನ್ನಪಟ್ಟಣಕ್ಕೆ ಭೇಟಿ ನೀಡಿ ಮತ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಂಗನೂರು ಹೋಬಳಿ ಪ್ರಚಾರ ಸಭೆಯ ಪೂರ್ವಭಾವಿಯಾಗಿ ಸಭೆ ನಡೆಸಿದ ಡಾ ಆರ್ ಎಂ ಮಂಜುನಾಥ ಗೌಡ ಅವರು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಹಾರ ಹಾಕಿ ಗೌರವಿಸಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಗೆಲುವಿಗೆ ಶ್ರಮವಹಿಸೊಣ ಎಂದರು. ಚನ್ನಪಟ್ಟಣದ ಮುಖ್ಯ ದ್ವಾರದಲ್ಲಿ ಪಟಾಕಿ ಸಿಡಿಸಿ ಡಾ ಆರ್ ಎಂ ಮಂಜುನಾಥ ಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾರಹಾಕಿ ಸ್ವಾಗತಿಸಿದರು. ರಾಜ್ಯ ಕಾಂಗ್ರೆಸ್ ಪ್ರಮುಖರಾದ…

Read More

ಡೊನಾಲ್ಡ್ ಟ್ರಂಪ್ ಮತ್ತೆ ಅಮೇರಿಕಾ ಸಾರಥಿ!. – ಕಮಲಾ ಹ್ಯಾರೀಸ್ ನಿರಾಸೆ+ ಟ್ರಂಪ್ ಭರ್ಜರಿ ಗೆಲುವು – 2ನೇ ಬಾರಿಗೆ ಅಧಿಕಾರದ ಜೊತೆಗೆ 4 ವರ್ಷ ಅಮೆರಿಕಾ ಅಧ್ಯಕ್ಷ – ಟ್ರಂಪ್ ಗೆಲುವಿಗೆ ಅಭಿನಂದಿಸಿದ ಪ್ರಧಾನಿ ಮೋದಿ NAMMUR EXPRESS NEWS ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ. ಈ ಮೂಲಕ ಅಮೆರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್​​​ ಆಯ್ಕೆಯಾಗಿದ್ದಾರೆಬೆಳಗ್ಗೆಯಿಂದಲೇ ಮತ ಎಣಿಕೆ ಬಿರುಸಿನಿಂದ ನಡೆದಿದ್ದು, ಆರಂಭಿಕ ಹಂತದಿಂದಲೇ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್​ ಅವರು ಮುನ್ನಡೆ ಸಾಧಿಸಿದ್ರು. ಒಂದೆಡೆ ಡೊನಾಲ್ಡ್‌ ಟ್ರಂಪ್​ ಮುನ್ನಡೆ ಸಾಧಿಸಿದ್ರೆ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರಿಗೆ ಭಾರೀ ಹಿನ್ನಡೆ ಆಗಿದೆ. ಡೊನಾಲ್ಡ್​ ಟ್ರಂಪ್​​ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಮುಂದಿನ 4 ವರ್ಷಗಳ ಕಾಲ ಅಮೆರಿಕಾ…

Read More

ಕ್ರಷರ್ ಕಲ್ಲುಪುಡಿ ಘಟಕದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು! – ಬಿದರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ – ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ – ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಅಕ್ರಮ: ಗ್ರಾಮಸ್ಥರ ಶಂಕೆ – ಪಶ್ಚಿಮ ಘಟ್ಟದ ತಪ್ಪಲಲ್ಲಿ ಮತ್ತೆ ಕಲ್ಲು ಗಣಿಗಾರಿಕೆ? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಬಿದರಗೋಡು ಗ್ರಾಮದ ಸ.ನಂ.73ರಲ್ಲಿನ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿ ಗುತ್ತಿಗೆ ಮತ್ತು ಸ್ಟೋನ್ ಕ್ರಷರ್ ಕಲ್ಲುಪುಡಿ ಘಟಕಕ್ಕೆ ಮಂಜೂರು ಮಾಡುವ ವಿಚಾರದಲ್ಲಿ ಗ್ರಾಮಸ್ಥರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ. ನ.6ರಂದು ತಾಲ್ಲೂಕು ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಮನವಿ ನೀಡಿ ಈ ಗಣಿ ಗಾರಿಕೆ ಮತ್ತು ಕೃಷರ್ ನಮ್ಮ ಗ್ರಾಮಕ್ಕೆ ಬೇಡ ಎಂದು ಪಟ್ಟು ಹಿಡಿದ್ದಾರೆ. ಉದ್ಯಾನವನ ಮತ್ತು ಆಗುಂಬೆ ಮಳೆ ಕಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪಶ್ಚಿಮ ಘಟ್ಟ ಪ್ರದೇಶದ ಪಕ್ಕದಲ್ಲಿದ್ದು, ಜನರ ಜೀವನ ಜೊತೆಗೆ ಜೀವ ವೈವಿಧ್ಯತೆಗಳಿಗೆ ತೊಂದರೆ ಉಂಟಾಗುತ್ತಿದೆ. ಈ…

Read More

ಕರಾವಳಿ ಟಾಪ್ ನ್ಯೂಸ್ ಪಿಲಿಕುಳದಲ್ಲಿ ನ.17ರಿಂದ ಕಂಬಳ? – ಈ ಬಾರಿ ಬೆಂಗಳೂರಲ್ಲಿ ಇಲ್ವಾ ಕಂಬಳ? – ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ಆಗಮನ NAMMUR EXPRESS NEWS ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನ.17ಕ್ಕೆ ಕಂಬಳ ನಡೆಯಲಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ಪೀಪಲ್ ಫಾರ್ ದಿ ಎಥಿಕಲ್ ಟ್ರೇಟ್‌ಮೆಂಟ್ ಆಫ್ ಅನಿಮಲ್ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಬಿ. ವಿನೋದ್ ಕುಮಾರ್ ವಾದ ಮಂಡಿಸಿ ಅರ್ಜಿ ಸಂಬಂಧ ತಮ್ಮ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ,…

Read More

ಪಾಂಡಿಚೇರಿ ವಿವಿಯಲ್ಲಿ ತೀರ್ಥಹಳ್ಳಿ ಕಲಾವಿದನ ತರಬೇತಿ – ಶೈಲೇಶ್ ತೀರ್ಥಹಳ್ಳಿ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ತರಬೇತಿ – ರಾಜ್ಯ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಪ್ರಸಿದ್ಧಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯೂನಿವರ್ಸಿಟಿಯಲ್ಲಿ ಯಕ್ಷಗಾನ‌ ತರಬೇತಿ ನಡೆಯಿತು. ಶೈಲೇಶ್ ತೀರ್ಥಹಳ್ಳಿಯವರ ನೇತೃತ್ವದ ತೀರ್ಥಹಳ್ಳಿಯ ಯಕ್ಷಭೂಮಿ(ರಿ) ಯಕ್ಷಗಾನ ಕೇಂದ್ರದಿಂದ ಪಾಂಡಿಚೇರಿ ಯುನಿವರ್ಸಿಟಿಯ ಎಂ.ಎ ರಂಗಭೂಮಿ ವಿದ್ಯಾರ್ಥಿಗಳಿಗೆ ಒಂದು ವಾರದ ಯಕ್ಷಗಾನ ಹೆಜ್ಜೆ, ವೇಷಭೂಷಣ, ಬಣ್ಣಗಾರಿಕೆಯ ಪರಿಚಯ ಮಾಡಿಕೊಡಲಾಯಿತು. ಅಭ್ಯಾಸಮಾಡಿದ ವಿದ್ಯಾರ್ಥಿಗಳು ಕೊನೆಯದಿನ 30 ನಿಮಿಷಗಳ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕೆಲವು ವರ್ಷಗಳಿಂದ ಯಕ್ಷಭೂಮಿ(ರಿ) ಸಂಸ್ಥೆಯ ಗುರುಗಳಿಂದ ತೀರ್ಥಹಳ್ಳಿಯ ಆಸಕ್ತರಿಗೆ ಹಾಗೂ ನೀನಾಸಂ ಹೆಗ್ಗೋಡು, ರಂಗಾಯಣ, ಸಾಣೇಹಳ್ಳಿ ರಂಗಶಾಲೆ, ಎನ್ ಎಸ್ ಡಿ ಬೆಂಗಳೂರು, ಲಕ್ನೋ, ಗುಜರಾತ್ ಮುಂತಾದ ಕಡೆಗಳಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ.

Read More

ಇನ್ಮುಂದೆ ಬೈಕಲ್ಲಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ! – ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರದ ನಿಯಮ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತದೆ ದಂಡ: ಏನೇನು ನಿಯಮ? NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ 4 ವರ್ಷದ ಒಳಗಿನ ಮಕ್ಕಳನ್ನು ಶಾಲೆ ಅಥವಾ ಇತರೆ ಕೆಲಸಗಳಿಗೆ ಹಿಂದೆ, ಮುಂದೆ ಕೂರಿಸಿಕೊಂಡು ಬೈಕ್ ಚಲಾವಣೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ. 4 ವರ್ಷ ಒಳಗಿನ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕದಿದ್ದರೆ ಕೇಸ್ ಹಾಗೂ ದಂಡವನ್ನು ಸಾರಿಗೆ ಇಲಾಖೆ ಹಾಕುತ್ತಿದೆ. ಮಕ್ಕಳಿಗೆ ಸೇಫ್ಟಿ ಬೆಲ್ಟ್ ಹಾಕದ ಪೋಷಕರಿಗೆ 1,000 ರೂ. ದಂಡ ಹಾಕುತ್ತಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಧಾರಣೆ…

Read More

ಸಚಿವ ಜಮೀರ್‌ ವಿರುದ್ಧ ಕಾಂಗ್ರೇಸ್‌ನಲ್ಲೇ ಅಸಮಾಧಾನ..!!? * ಎಐಸಿಸಿಗೆ ಪತ್ರ ಬರೆದರಾ ಕಾಂಗ್ರೇಸ್‌ನ ಶಾಸಕರು * ಯಾಕೆ ಅಸಮಾಧಾನ,ಪತ್ರದಲ್ಲೇನಿದೆ NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಸರ್ಕಾರದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಪಕ್ಷೀಯರೇ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ವಕ್ಫ್ ವಿಚಾರದಲ್ಲಿ ಜಮೀರ್ ಅವರ ಹೇಳಿಕೆಗಳು ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಜಮೀರ್ ಅಹ್ಮದ್ ಸ್ವಪಕ್ಷ, ಪ್ರತಿಕ್ಷಗಳ ಕೆಂಗಣ್ಣಿಗೆ ಗುರಿಯಾದಂತಾಗಿದೆ. ಒಂದೆಡೆ, ವಕ್ಫ್ ವಿಚಾರವಾಗಿ ಜಮೀರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದೀಗ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಸಮಾಧಾನ ಹೊರಹಾಕಿ ಪತ್ರ ಬರೆದಿದ್ದಾರೆ. ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜಮೀರ್ ವಿರುದ್ಧ ಸಮರ ಸಾರಿದ್ದಾರೆ. ಸಿಎಂ…

Read More

ಹಣ್ಣು ಈಗ ರಾಸಾಯನಿಕ ಮುಕ್ತ ಅಲ್ಲ! * ಯಥೇಚ್ಛವಾಗಿ ಬಳಕೆಯಾಗುತ್ತಿದೆ ರಾಸಾಯನಿಕ * ಆರೋಗ್ಯದ ಮೇಲೆ ಪರಿಣಾಮ ಗ್ಯಾರಂಟಿ NAMMUR EXPRESS NEWS ಬೆಂಗಳೂರು: ಬಣ್ಣಬಣ್ಣದ ಆಕರ್ಷಕ ಹಣ್ಣುಗಳು, ಕಣ್ಣಿಗೆ ಖುಷಿ ಕಾಣುತ್ತದೆ, ಹೊಟ್ಟೆಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಣ ಕೊಟ್ಟು ಖರೀದಿಸಿ ಮನೆಗೆ ತಂದು ತಿನ್ನುತ್ತೇವೆ. ಬೆಂಗಳೂರಿನಂತಹ ನಗರದ ಮಾರುಕಟ್ಟೆಗಳಲ್ಲಿ ಆಕರ್ಷಕವಾದ ಹಣ್ಣುಗಳು ಜನರನ್ನು ಆಕರ್ಷಿಸುವುದು ಹೆಚ್ಚು. ಕಾಯಿಲೆ ಬಂದಾಗ ವೈದ್ಯರು ಚೆನ್ನಾಗಿ ಹಣ್ಣು-ತರಕಾರಿ ತಿನ್ನಿ ಎಂದು ಹೇಳುತ್ತಾರೆ ಎಂದು ದಿನಕ್ಕೊಂದು ಬಗೆಯ ಹಣ್ಣನ್ನು ಖರೀದಿಸಿ ತರುತ್ತೇವೆ. ಆದರೆ ಇವುಗಳಲ್ಲಿ ಹಲವು ಹಣ್ಣುಗಳು ಸ್ವಾಭಾವಿಕವಾಗಿ ಹಣ್ಣಾಗಿರುವುದಿಲ್ಲ, ಕೃತಕವಾಗಿ ಹಣ್ಣು ಮಾಡಲಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಎಚ್ಚರಿಸಿದ್ದಾರೆ. ರಾಜ್ಯದಾದ್ಯಂತ ಎಫ್‌ಎಸ್‌ಎಸ್‌ಎಐ ಅನುಮತಿಸಿದ ಸಸ್ಯ ಬೆಳವಣಿಗೆ ನಿಯಂತ್ರಕವಾದ ‘ಎಥೆಫೋನ್’ ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಇದನ್ನು ಪುಡಿ ರೂಪದಲ್ಲಿ ಬಳಸಿ ಕಾಯಿ ಹಣ್ಣಾಗಲು ಎಥಿಲೀನ್ ಅನಿಲ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನಗರಗಳಲ್ಲಿ ಅನೇಕ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು. ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ. ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿರುವುದಿಲ್ಲ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಿರುತ್ತದೆ. ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಪ್ರೇಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ…

Read More