Author: Nammur Express Admin

ಇನ್ಮುಂದೆ ಬೈಕಲ್ಲಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ! – ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರದ ನಿಯಮ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತದೆ ದಂಡ: ಏನೇನು ನಿಯಮ? NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ 4 ವರ್ಷದ ಒಳಗಿನ ಮಕ್ಕಳನ್ನು ಶಾಲೆ ಅಥವಾ ಇತರೆ ಕೆಲಸಗಳಿಗೆ ಹಿಂದೆ, ಮುಂದೆ ಕೂರಿಸಿಕೊಂಡು ಬೈಕ್ ಚಲಾವಣೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ. 4 ವರ್ಷ ಒಳಗಿನ ಮಕ್ಕಳನ್ನು ಬೈಕ್‌ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕದಿದ್ದರೆ ಕೇಸ್ ಹಾಗೂ ದಂಡವನ್ನು ಸಾರಿಗೆ ಇಲಾಖೆ ಹಾಕುತ್ತಿದೆ. ಮಕ್ಕಳಿಗೆ ಸೇಫ್ಟಿ ಬೆಲ್ಟ್ ಹಾಕದ ಪೋಷಕರಿಗೆ 1,000 ರೂ. ದಂಡ ಹಾಕುತ್ತಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಧಾರಣೆ…

Read More

ಸಚಿವ ಜಮೀರ್‌ ವಿರುದ್ಧ ಕಾಂಗ್ರೇಸ್‌ನಲ್ಲೇ ಅಸಮಾಧಾನ..!!? * ಎಐಸಿಸಿಗೆ ಪತ್ರ ಬರೆದರಾ ಕಾಂಗ್ರೇಸ್‌ನ ಶಾಸಕರು * ಯಾಕೆ ಅಸಮಾಧಾನ,ಪತ್ರದಲ್ಲೇನಿದೆ NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಸರ್ಕಾರದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಪಕ್ಷೀಯರೇ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ವಕ್ಫ್ ವಿಚಾರದಲ್ಲಿ ಜಮೀರ್ ಅವರ ಹೇಳಿಕೆಗಳು ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಜಮೀರ್ ಅಹ್ಮದ್ ಸ್ವಪಕ್ಷ, ಪ್ರತಿಕ್ಷಗಳ ಕೆಂಗಣ್ಣಿಗೆ ಗುರಿಯಾದಂತಾಗಿದೆ. ಒಂದೆಡೆ, ವಕ್ಫ್ ವಿಚಾರವಾಗಿ ಜಮೀರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದೀಗ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಸಮಾಧಾನ ಹೊರಹಾಕಿ ಪತ್ರ ಬರೆದಿದ್ದಾರೆ. ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜಮೀರ್ ವಿರುದ್ಧ ಸಮರ ಸಾರಿದ್ದಾರೆ. ಸಿಎಂ…

Read More

ಹಣ್ಣು ಈಗ ರಾಸಾಯನಿಕ ಮುಕ್ತ ಅಲ್ಲ! * ಯಥೇಚ್ಛವಾಗಿ ಬಳಕೆಯಾಗುತ್ತಿದೆ ರಾಸಾಯನಿಕ * ಆರೋಗ್ಯದ ಮೇಲೆ ಪರಿಣಾಮ ಗ್ಯಾರಂಟಿ NAMMUR EXPRESS NEWS ಬೆಂಗಳೂರು: ಬಣ್ಣಬಣ್ಣದ ಆಕರ್ಷಕ ಹಣ್ಣುಗಳು, ಕಣ್ಣಿಗೆ ಖುಷಿ ಕಾಣುತ್ತದೆ, ಹೊಟ್ಟೆಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಣ ಕೊಟ್ಟು ಖರೀದಿಸಿ ಮನೆಗೆ ತಂದು ತಿನ್ನುತ್ತೇವೆ. ಬೆಂಗಳೂರಿನಂತಹ ನಗರದ ಮಾರುಕಟ್ಟೆಗಳಲ್ಲಿ ಆಕರ್ಷಕವಾದ ಹಣ್ಣುಗಳು ಜನರನ್ನು ಆಕರ್ಷಿಸುವುದು ಹೆಚ್ಚು. ಕಾಯಿಲೆ ಬಂದಾಗ ವೈದ್ಯರು ಚೆನ್ನಾಗಿ ಹಣ್ಣು-ತರಕಾರಿ ತಿನ್ನಿ ಎಂದು ಹೇಳುತ್ತಾರೆ ಎಂದು ದಿನಕ್ಕೊಂದು ಬಗೆಯ ಹಣ್ಣನ್ನು ಖರೀದಿಸಿ ತರುತ್ತೇವೆ. ಆದರೆ ಇವುಗಳಲ್ಲಿ ಹಲವು ಹಣ್ಣುಗಳು ಸ್ವಾಭಾವಿಕವಾಗಿ ಹಣ್ಣಾಗಿರುವುದಿಲ್ಲ, ಕೃತಕವಾಗಿ ಹಣ್ಣು ಮಾಡಲಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಎಚ್ಚರಿಸಿದ್ದಾರೆ. ರಾಜ್ಯದಾದ್ಯಂತ ಎಫ್‌ಎಸ್‌ಎಸ್‌ಎಐ ಅನುಮತಿಸಿದ ಸಸ್ಯ ಬೆಳವಣಿಗೆ ನಿಯಂತ್ರಕವಾದ ‘ಎಥೆಫೋನ್’ ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಇದನ್ನು ಪುಡಿ ರೂಪದಲ್ಲಿ ಬಳಸಿ ಕಾಯಿ ಹಣ್ಣಾಗಲು ಎಥಿಲೀನ್ ಅನಿಲ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನಗರಗಳಲ್ಲಿ ಅನೇಕ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು. ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ. ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿರುವುದಿಲ್ಲ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಿರುತ್ತದೆ. ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಪ್ರೇಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ…

Read More

ನ.10ಕ್ಕೆ ತೀರ್ಥಹಳ್ಳಿಯಲ್ಲಿ ಡಾನ್ಸ್ ಹಬ್ಬ! – ಡ್ಯಾನ್ಸ್ ಪ್ಯಾಲೇಸ್ ತೀರ್ಥಹಳ್ಳಿ ವತಿಯಿಂದ ಆಯೋಜನೆ. – ವರ್ಲ್ಡ್ ಡ್ಯಾನ್ಸ್ ಸೆಲೆಬ್ರೇಶನ್ 2024-25 – ದೇಶ ವಿದೇಶದ ಪ್ರಸಿದ್ಧ ಡ್ಯಾನ್ಸ್ ಕಲಾವಿದರ ಸಮಾಗಮ – ಮಲೆನಾಡಲ್ಲಿ ಮೊದಲ ಬಾರಿಗೆ ಪ್ರಯೋಗ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರ ಸಹಯೋಗದಲ್ಲಿ ವರ್ಲ್ಡ್ ಡ್ಯಾನ್ಸ್ ಸೆಲೆಬ್ರೇಶನ್ ನವೆಂಬರ್ 10ನೇ ತಾರೀಕು ಭಾನುವಾರ ಸಂಜೆ 6.00ಕ್ಕೆ ಯು.ಆರ್.ಅನಂತಮೂರ್ತಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಮುಖ್ಯಸ್ಥ ಭರತ್ ಅವರ ಕನಸಿನ ಕೂಸು ಈ ಕಾರ್ಯಕ್ರಮ. ಜತೆಗೆ ರಾಜ್ಯದಲ್ಲೇ ಇಂತಹ ಕಾರ್ಯಕ್ರಮ ಎಲ್ಲೂ ನಡೆದಿಲ್ಲ. ದೇಶ ವಿದೇಶದ ನೃತ್ಯಗಳು, ದೇಶದ ಪ್ರಸಿದ್ಧ ಡ್ಯಾನ್ಸ್ ತಾರೆಯರು ಈ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗರ್ತಿಕೆರೆ ರಾಘಣ್ಣ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಭರತ್ ವಡೆಗದ್ದೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಮಾಲೀಕರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರಗ ಜ್ಞಾನೇಂದ್ರ,…

Read More

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದ ಮಾದರಿ ದೀಪಾವಳಿ! – ಹೊಸ ಬೆಳಕು ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ – ಆಶ್ರಮ ವಾಸಿಗಳ ಜತೆಗೆ ಪಟಾಕಿ ಸಿಡಿಸಿ ಸಂಭ್ರಮ NAMMUR EXPRESS NEWS ಕಾರ್ಕಳ: ದೀಪಾವಳಿ ಬೆಳಕಿನ ಹಬ್ಬ. ಎಲ್ಲರ ಮನೆಯಲ್ಲಿ ಹಬ್ಬ ಆಚರಣೆಯಂತೆ ಕಾರ್ಕಳದ ಹೊಸ ಬೆಳಕು ಆಶ್ರಮವಾಸಿಗಳೊಂದಿಗೆ ಬಿಜೆಪಿ ಮಹಿಳಾ ಪ್ರಮುಖರು ದೀಪಾವಳಿ ಆಚರಣೆ ಮೂಲಕ ಮಾದರಿಯಾದರು. ದೀಪಾವಳಿ ಹಬ್ಬದ ಪ್ರಯುಕ್ತ ಹಬ್ಬದ ವಿಶೇಷ ಖಾದ್ಯ ಅರಿಶಿನ ಎಲೆ ಸಿಹಿ ಕಡುಬನ್ನು ಮಹಿಳಾ ಮೋರ್ಚಾ ಸದಸ್ಯರು ಮನೆಮನೆಗಳಲ್ಲಿ ತಯಾರಿಸಿ ಆಶ್ರಮ ವಾಸಿಗಳಿಗೆ ನೀಡಿ ಸಹಭೋಜನದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಕತೆ, ಕವನ, ಬರಹಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಆಶ್ರಮವಾಸಿ ಆಗಿರುವ ಪ್ರಕಾಶ್ ಪಡಿಯಾರ್ ಅವರನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಹಿಳಾ ಮೋರ್ಚಾ ವತಿಯಿಂದ ಅಭಿನಂದಿಸಲಾಯಿತು. ಕ್ಷೇತ್ರಧ್ಯಕ್ಷರಾದ ನವೀನ್ ನಾಯಕ್, ರವೀಂದ್ರ ಕುಮಾರ್, ವಿಕ್ರಂ ಹೆಗ್ಡೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.…

Read More

ಕಾಫಿನಾಡು ಪ್ರವಾಸಿ ತಾಣಗಳು 3 ದಿನ ಬಂದ್ – ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ – ನ. 9ರ ಬೆಳಿಗ್ಗೆ 6ಗಂಟೆಯಿಂದ ನ.11ರ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ NAMMUR EXPRESS NEWS ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ಇದೀಗ ಆರಂಭವಾಗಿದೆ. ದತ್ತಮಾಲಾಧಾರಿಗಳು 7 ದಿನಗಳ ಕಾಲ ವ್ರತದಲ್ಲಿದ್ದು, ನವೆಂಬರ್ 10ರಂದು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಚಿಕ್ಕಮಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಿದೆ. ನವೆಂಬರ್ 10 ರಂದು ದತ್ತಪೀಠದಲ್ಲಿ ಹೋಮ-ಹವನ, ವಿಶೇಷ ಪೂಜೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ನವೆಂಬರ್ 9ರ ಬೆಳಿಗ್ಗೆ 6ಗಂಟೆಯಿಂದ ನವೆಂಬರ್ 11ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ನವೆಂಬರ್ 10ರಂದು ದತ್ತಾಮಾಲಾಧಾರಿಗಳು ಶ್ರೀಗುರುದತ್ತಾತ್ರೇಯ…

Read More

ಟಾಪ್ ನ್ಯೂಸ್ ಮಲ್ನಾಡ್ – ತೀರ್ಥಹಳ್ಳಿ ತುಂಗಾ ನದಿಯಲ್ಲಿ ತೇಲಿ ಬಂದ ಶವ! – ಸಾಗರ: ಮನೆ ಮೇಲೆ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಹಾನಿ – ಶಿವಮೊಗ್ಗ : 4 ಕೆ.ಜಿಗೂ ಹೆಚ್ಚು ಗಾಂಜಾ ವಶ: ಆರೋಪಿಗಳು ಅರೆಸ್ಟ್ – ತೀರ್ಥಹಳ್ಳಿ : ವೈದ್ಯರು ಮಾಡಿದ ಎಡವಟ್ಟಿನಿಂದ ರೋಗಿಗೆ ಕುತ್ತು – ತೀರ್ಥಹಳ್ಳಿ: ಟರ್ಪನ್ ಟಯಿಲ್ ಕುಡಿದ ಮಗು: ಅಪಾಯದಿಂದ ಪಾರು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ತುಂಗಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ 3:30 ರ ಸಮಯದಲ್ಲಿ ಮೃತದೇಹವೊಂದು ತೇಲಿ ಬಂದಿದ್ದು ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದ ಸ್ಥಳೀಯರು ನೋಡಿ ವಿಷಯ ತಿಳಿಸಿದ್ದಾರೆ. ಮೃತದೇಹವನ್ನು ಅಪರಿಚಿತ ಶವ ಎಂದು ಹೇಳಲಾಗಿದ್ದು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – ಸಾಗರ: ಮನೆ ಮೇಲೆ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಹಾನಿ ಸಾಗರ : ತಾಲೂಕು ತುಮರಿ ಸಮೀಪದ ಕುದರೂರು ಗ್ರಾಮದ…

Read More

ಹೆಬ್ರಿ ಅಮೃತ ಭಾರತಿಯಲ್ಲಿ ರಾಜ್ಯೋತ್ಸವ ಸಂಭ್ರಮ – ಪುಟಾಣಿಗಳಿಂದ ಕನ್ನಡ ನಾಡು ನುಡಿಯ ನೃತ್ಯ ಪ್ರದರ್ಶನ – ಶಿಕ್ಷಕರು, ಮಕ್ಕಳಿಂದ ಕನ್ನದಾಂಬೆಗೆ ನಮನ NAMMUR EXPRESS NEWS ಹೆಬ್ರಿ: ಹೆಬ್ರಿ ಪಾಂಡುರಂಗ ರಮಣ ನಾಯಕ್ ಸೇವಾಸಂಗಮ ಅಮೃತಭಾರತಿ ಶಿಶುಮಂದಿರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಮೃತಭಾರತಿ ವಿದ್ಯಾಲಯದ ಕನ್ನಡ ಶಿಕ್ಷಕ ಮಹೇಶ್ ಹೈಕಾಡಿ ಮಾತನಾಡಿ ಕನ್ನಡ ಭಾಷೆ, ಸಾಹಿತ್ಯ , ಸಂಸ್ಕೃತಿ , ಕಲೆಯೊಂದಿಗೆ ಸಮೃದ್ಧವಾಗಿದೆ ಎಂದು ನುಡಿದರು. ಅಮೃತ ಭಾರತಿ ಸೇವಾಸಂಗಮ ಶಿಶುಮಂದಿರದ ಸಭಾಗೃಹದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತಮಾತೆ ಮತ್ತು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಶಿಶು ಮಂದಿರದ ಮುಖ್ಯ ಶಿಕ್ಷಕಿ ಪ್ರತಿಮಾ ಹಾಗೂ 41 ಪುಟಾಣಿಗಳು ಉಪಸ್ಥಿತರಿದ್ದರು. ಪುಟಾಣಿಗಳಿಂದ ಕನ್ನಡ ನಾಡು ನುಡಿಯ ಕುರಿತಾದ ನೃತ್ಯ ಪ್ರದರ್ಶನ ನಡೆಯಿತು. ಮಾತಾಜಿಯವರಾದ ಅನಿತಾ ಸ್ವಾಗತಿಸಿ, ಮಲ್ಲಿಕಾ ವಂದಿಸಿದರು.

Read More