ಕಾರ್ತಿಕ ಮಾಸ ಶುರು: ದೇವಸ್ಥಾನಗಳಲ್ಲಿ ದೀಪೋತ್ಸವ – ಕಾರ್ತಿಕ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಆಚರಣೆ ಹೇಗೆ? – ದೀಪೋತ್ಸವದ ವಿಶೇಷತೆ ಏನು? NAMMUR EXPRESS NEWS ಕಾರ್ತಿಕ ಮಾಸದ ಪ್ರಯುಕ್ತ ದೇವಸ್ಥಾನಗಳಲ್ಲಿ ನ.4ರಂದು ಕಾರ್ತೀಕ ಮಾಸ ಆರಂಭವಾಗಿದ್ದು, ಪ್ರತಿ ದಿನ ಸಂಜೆ ದೀಪೋತ್ಸವ ನೆರವೇರಲಿದೆ. ದೇವರಿಗೆ ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ದೀಪಾವಳಿಯ ನಂತರ ಕಾರ್ತಿಕ ಮಾಸ, ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ. ಕಾರ್ತಿಕ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಆಚರಣೆ ಹೇಗೆ? ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಈ…
Author: Nammur Express Admin
ರಾಜ್ಯದಲ್ಲಿ ಪಟಾಕಿ ಸಿಡಿತಕ್ಕೆ ಮೊದಲ ಬಲಿ – ಬೆಂಗಳೂರಲ್ಲಿ ಯುವಕ ಸಾವು, 6 ಜನರ ಬಂಧನ!- – ಮತ್ತೆ ವಾಯುಭಾರ ಕುಸಿತ – ಕರ್ನಾಟಕದ ಮುಂದಿನ 4 ದಿನದ ಹವಾಮಾನ ಮುನ್ಸೂಚನೆ – ಹಾಸನಾಂಬೆ ದೇವಾಲಯ ಹುಂಡಿ ಎಣಿಕೆ NAMMUR EXPRESS NEWS ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿಯ ದಿನ ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಬಳಿಕ ಆಸ್ಪತ್ರೆಗೆ ದಾಖಲಾದಗ ನವೆಂಬರ್ 2 ರಂದು ಯುವಕ ಸಾವನ್ನಪ್ಪಿದ್ದಾನೆ. ದೀಪಾವಳಿ ಹಬ್ಬದಂದು ರಾತ್ರಿ ವೇಳೆ ಪಟಾಕಿ ಹೊಡೆದಿದ್ದ ಶಬರೀಶ್ ಹಾಗೂ ಸ್ನೇಹಿತರು. ಡಬ್ಬಿಗೆ ಪಟಾಕಿ ಅಂಟಿಸಿ ಅದರ ಮೇಲೆ ಕೂರಲು ಚಾಲೆಂಜ್ ಮಾಡಿದ್ದರು. ಕುಡಿದ ಮತ್ತಿನಲ್ಲಿ ಶಬರೀಶ್ ಪಟಾಕಿಯ ಡಬ್ಬ ಇಟ್ಟು ಕುಳಿತಿದ್ದ. ಪಟಾಕಿ ಸಿಡಿದ ರಭಸಕ್ಕೆ ಶಬರೀಶ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ನವೆಂಬರ್ 2ರಂದು…
ವಕ್ಫ್ ಕಾಯ್ದೆ ವಿರುದ್ಧ ತೀರ್ಥಹಳ್ಳಿಯಲ್ಲಿ ಬಿಜೆಪಿ ಬೃಹತ್ ಹೋರಾಟ – ಶಾಸಕ ಆರಗ ಜ್ಞಾನೇಂದ್ರ ಸೇರಿ ಪ್ರಮುಖರು ಹಾಜರ್ – ರಾಜ್ಯ ಸರ್ಕಾರದ ವಿರುದ್ಧ ಆರಗ ಕೆಂಡಾಮಂಡಲ NAMMUR EXPRESS NEWS ತೀರ್ಥಹಳ್ಳಿ: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಅ. 4ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪ ಸರ್ಕಲ್ ಬಿಜೆಪಿ ಕಚೇರಿಯಿಂದ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೆಳ್ಳಿಗೆ 11-30 ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಗೃಹ ಸಚಿವರು, ಶಾಸಕರು ಆದ ಆರಗ ಜ್ಞಾನೇಂದ್ರ ಇವರು ಎಲ್ಲರೂ ವಿಶೇಷವಾದ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತೀರ್ಥಹಳ್ಳಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಕ್ಫ್ ಕಾಯ್ದೆ ವಿರುದ್ಧ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಇದು ಸಂವಿಧಾನವನ್ನು ಮೀರುವ ಅಧಿಕಾರವನ್ನು ಪಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಿಂದ ಈ ದೇಶ ಬಹಳ ದೊಡ್ಡ ಮಟ್ಟದಲ್ಲಿ ದಂಡ ಕಟ್ಟಬೇಕಾದ…
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ನ.5 ಬೆಳಿಗ್ಗೆ 10:00ಕ್ಕೆ ಬಂಡಿಮಠ ಬಸ್ ನಿಲ್ದಾಣದಲ್ಲಿ ಹೋರಾಟ – ಜನ ವಿರೋಧಿ ನೀತಿಗಳನ್ನು ಖಂಡಿಸುವ ಸಲುವಾಗಿ ಪ್ರತಿಭಟನೆ NAMMUR EXPRESS NEWS ಕಾರ್ಕಳ: ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ರೈತರ, ದಲಿತರ, ಮಠ ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಸ್‌ಬೋರ್ಡ್‌ನ ಲ್ಯಾಂಡ್ ಜಿಹಾದ್ ಖಂಡಿಸಿ ಸಿದ್ದರಾಮಯ್ಯ ನೇತೃತ್ವದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ 05 ನವೆಂಬರ್ 2024, ಮಂಗಳವಾರ ಬೆಳಿಗ್ಗೆ 10:00ಕ್ಕೆ ಬಂಡಿಮಠ ಬಸ್ ನಿಲ್ದಾಣ, ಕಾರ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮತೀಯ ಓಲೈಕೆ, ಜನ ವಿರೋಧಿ ನೀತಿಗಳನ್ನು ಖಂಡಿಸುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ. ಕ್ಷೇತ್ರದ ಶಾಸಕರು ಸೇರಿದಂತೆ ಮುಖಂಡರು, ಪ್ರಮುಖರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಹಿಲಿಕೆರೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಕನ್ನಡ ನುಡಿ ಜಾತ್ರೆ – ಸರ್ಕಾರಿ ಶಾಲೆಯ ವಾಟಗಾರು ಬಣ್ಣಗಳಿಂದ ಸಿಂಗಾರ – ನ.6 ವಿಶೇಷ ಕಾರ್ಯಕ್ರಮ: ಸರ್ವರಿಗೂ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಟಗಾರು, ತೀರ್ಥಹಳ್ಳಿ ಈ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕನ್ನಡ ನುಡಿ ಜಾತ್ರೆ ಕಾರ್ಯಕ್ರಮಕ್ಕೆ ಸಜ್ಜುಗೊಂಡಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳು ಹಿರಿಯ ವಿದ್ಯಾರ್ಥಿ ಮಿತ್ರರ ಕೊಡುಗೆಗಳ ಅನಾವರಣ ಕೂಡ ನೆರವೇರುತ್ತದೆ. ಈಗಾಗಲೇ ಶಾಲೆಯನ್ನು ಅತ್ಯಂತ ಸುಂದರವಾಗಿ ಬಣ್ಣ ಹಾಗೂ ಸಿಂಗಾರ ಮಾಡಲಾಗಿದೆ. ಚಿನ್ನರ ಕಲರವ, ಕನ್ನಡದ ತೇರು, ಕನ್ನಡ ನುಡಿ ಜಾತ್ರೆ, ಮಹಾದ್ವಾರಗಳು,ಪ್ರದರ್ಶಿನಿ, ಸ್ತಬ್ಧ ಚಿತ್ರಗಳು, ಕಾಮಗಾರಿಗಳ ಲೋಕಾರ್ಪಣೆ, ಕಲಾಮೇಳಗಳು, ಮಕ್ಕಳ ವೇಷಭೂಷಣ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ರಸ ಸಂಜೆ, ವೈವಿಧ್ಯಮಯ ಕೊಡುಗೆ, ನೆನಪಿನ ಕಾಣಿಕೆಗಳು ನೀಡಿಕೆ ಕಾರ್ಯಕ್ರಮ ನೆರವೇರಲಿದೆ. ದಿನವಿಡೀ ಕಾರ್ಯಕ್ರಮಕ್ಕೆ ಸಿದ್ಧತೆ ಬೆಳಗ್ಗೆ 9ಕ್ಕೆ ಜಾನಪದ ಮೇಳ ದೇವಂಗಿ ಮಾನಪ್ಪ ವೃತ್ತದಿಂದ ರಾಷ್ಟ್ರಕವಿ ಕುವೆಂಪು ಮಹಾದ್ವಾರದ ಮೂಲಕ ಸಾಗಿ ಹಿಲಿಕೆರೆ…
ದಕ್ಷಿಣ ಕನ್ನಡದಲ್ಲೊಂದು ಶಾಕಿಂಗ್ ಘಟನೆ!! – ಮರದಲ್ಲಿ ಮಹಿಳೆಯ ತಲೆ ಬುರುಡೆ, ಎಲುಬು ಪತ್ತೆ – ಮನೆಯ ಎದುರಿನ ಗುಡ್ಡದ ತುದಿಯ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿ NAMMUR EXPRESS NEWS ಮಂಗಳೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ತಲೆ ಬುರುಡೆ ಹಾಗೂ ಎಲುಬುಗಳು ಪುತ್ತೂರಿನ ಒಳಮೊಗ್ರು ಗ್ರಾಮದ ಉರ್ವದಲ್ಲಿ ಪತ್ತೆಯಾಗಿದೆ. ಮೃತರನ್ನು ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ ಗೊತ್ತಾಗಿದೆ. ಉರ್ವ ನಿವಾಸಿ ಸಂಜೀವ ಎಂಬವರು ಕನ್ಯಾನದಿಂದ ನಳಿನಿ ಎಂಬವರನ್ನು ಒಂದೂವರೆ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡಿದ್ದರು. ನಳಿನಿಯವರು ಆಗಾಗ ತನ್ನ ತಾಯಿ ಮನೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಜೀವರವರು ಅಕ್ಟೋಬರ್ 8ರಂದು ಸಂಪ್ಯ ಪೊಲೀಸ್ ಠಾಣೆಗೆ ತೆರಳಿ…
ಕರಾವಳಿ ಕ್ರೈಂ ನ್ಯೂಸ್ * ಮಂಗಳೂರು: ಕೃಷಿಕನ ಮೇಲೆ ಚಿರತೆ ದಾಳಿ, ಜೀವ ಉಳಿಸಿಕೊಂಡ! * ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸೆರೆ * ಕಾಪು: ಟ್ಯಾಂಕರ್-ಬೈಕ್ ನಡುವೆ ಭೀಕರ ಅಪಘಾತ: ಸವಾರ ಮೃತ್ಯು * ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ * ಬಂಟ್ವಾಳ: ಬಸ್ ಬೈಕ್‌ಗೆ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು! * ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ NAMMUR EXPRESS NEWS ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ಕೃಷಿಕನೋರ್ವನ ಮೇಲೆ ಚಿರತೆ ದಾಳಿ ನಡೆಸಿದೆ. ನ.3 ಬೆಳಗ್ಗೆ ಈ ಘಟನೆ ನಡೆದಿದ್ದು ದನಗಳಿಗೆ ಹುಲ್ಲು ತರಲು ತೆರಳಿದ್ದ ಕೃಷಿಕನ ಮೇಲೆ ಚಿರತೆ ದಾಳಿ ಮಾಡಿದೆ.ಕಲ್ಕರೆ ನಿವಾಸಿ ಲಿಗೋರಿ ಪಿರೇರಾ (65) ಚಿರತೆ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಎಳತ್ತೂರು ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು ಚಿರತೆ ದಾಳಿಗೆ ಹೆದರದೆ ಲಿಗೋರಿ ಅವರು ಕೈಯಲ್ಲಿದ್ದ ಕೋಲನ್ನು ಚಿರತೆ ಮೇಲೆ…
ಇತಿಹಾಸ ಸೃಷ್ಟಿಯತ್ತ ಕಾಂತಾರ-2! – 125 ಕೋಟಿ ವೆಚ್ಚದಲ್ಲಿ ಸಿನಿಮಾ: 2025ಕ್ಕೆ ತೆರೆಗೆ – ಬಲ್ಗೇರಿಯಾದಿಂದ ಕುಂದಾಪುರಕ್ಕೆ ಬಂದ ಹಾಲಿವುಡ್ ಸಾಹಸ ನಿರ್ದೇಶಕ – ಕಾಂತಾರ ದಾಖಲೆ ಮುರಿಯುತ್ತಾ ಈ ಸಿನಿಮಾ..? NAMMUR EXPRESS NEWS ಕನ್ನಡ ಸಿನಿಮಾ ಜಗತ್ತನ್ನು ರಾಷ್ಟ್ರ ಮಟ್ಟದಲ್ಲಿ ಮಿನುಗಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಕನ್ನಡ ಸಿನಿಮಾ ಕೂಡ ಭಾರತ ಸಿನಿಮಾ ಜಗತ್ತಲ್ಲಿ ಹೊಸತನ್ನು ಮಾಡಬಲ್ಲದು ಎಂಬುದನ್ನು ತೋರಿಸಿದ್ದಾರೆ. 175 ಕೋಟಿ ಹಣ ಗಳಿಕೆ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡದ ಸಿನಿಮಾ ಎಂಬ ಖ್ಯಾತಿ ಗಳಿಸಿದ್ದ ಕಾಂತಾರ 2 ಮತ್ತೊಂದು ಮೋಡಿ ಮಾಡಲು ಸಜ್ಜಾಗಿದೆ. ಭಾರತದ ಎಲ್ಲಾ ಭಾಷೆ ಸಿನಿಮಾ ಪ್ರಿಯರು ಕನ್ನಡದತ್ತ ನೋಡುವತ್ತ ಕಾಂತಾರ ಸಿನಿಮಾ ಮಾಡಿದೆ. ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ತಂಡ ಕೆಲಸ ಮಾಡುತ್ತಿದೆ. ಸುಮಾರು 125 ಕೋಟಿ ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್ ಕಾಂತಾರ 2 ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುತೇಕ ಕಾಂತಾರ ತಂಡವೇ ಇದ್ದರೂ ಅನೇಕ…
ಹಾಸನಾಂಬೆ ದರ್ಶನೋತ್ಸವಕ್ಕೆ ಅದ್ದೂರಿ ತೆರೆ! – 20 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ – 9. 69 ಕೋಟಿ ಆದಾಯ: ಎಲ್ಲರಿಗೂ ಧನ್ಯವಾದ ಹೇಳಿದ ಜಿಲ್ಲಾಡಳಿತ NAMMUR EXPRESS NEWS ಹಾಸನ: ಹಾಸನಾಂಬೆ ದೇವಿ ದರ್ಶನವು ಅಕ್ಟೋಬರ್ 24ಕ್ಕೆ ಬಾಗಿಲು ತೆಗೆದು ನವೆಂಬರ್ 3ರ ಭಾನುವಾರದಂದು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯಾಹ್ನ 12:34ಕ್ಕೆ ಬಾಗಿಲು ಮುಚ್ಚುವ ಮೂಲಕ 2024ರ ದರ್ಶನೋತ್ಸವಕ್ಕೆ ತೆರೆ ಎಳೆಯಲಾಯಿತು. ಸುಮಾರು 20 ಲಕ್ಷಕ್ಕೂ ಹೆಚ್ಚು ಭಕ್ತರು ಈ ವರ್ಷ ದೇವಿ ದರ್ಶನ ಪಡೆದಿದ್ದಾರೆ. 9. 69 ಕೋಟಿ ಆದಾಯ ಹಾಸನಾಂಬೆ ದೇವಾಲಯದ ಬಾಗಿಲು ಹಾಕುವ ವೇಳೆ ಕೆಲ ಸಮಯದಲ್ಲಿ ನೆರೆದಿರುವ ಭಕ್ತರಿಗೆ ದೇವಿ ದರ್ಶನವನ್ನು ಕಲ್ಪಿಸಿದರು. ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆಗೊಂಡರು ಆದರೂ ಭಕ್ತರು ದರ್ಶನಕ್ಕಾಗಿ ಕಾದು ಕುಳಿತು ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ…
ಬಾಬಾ ಬುಡನ್ ಗಿರಿ ದತ್ತಮಾಲಾ ಅಭಿಯಾನ ಶುರು! – ಇಂದಿನಿಂದ ನ.10ರವರೆಗೆ ದತ್ತಮಾಲೆ – ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲೆ – ನ.10 ಕ್ಕೆ ಧರ್ಮ ಸಭೆ,ಶೋಭಾಯಾತ್ರೆ,ಧಾರ್ಮಿಕ ಕಾರ್ಯಕ್ರಮ NAMMUR EXPRESS NEWS ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲಾ ಅಭಿಯಾನ ಶುರುವಾಗಿದೆ. ಸಾವಿರಾರು ಭಕ್ತರು ದತ್ತ ಪೀಠಕ್ಕೆ ಆಗಮಿಸುತ್ತಿದ್ದಾರೆ. ನ.4ರಿಂದ 10ರವರೆಗೆ ದತ್ತಮಾಲೆ ಅಭಿಯಾನ ಶುರುವಾಗಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ನ.4ರಂದು ನಗರದ ಶಂಕರ ಮಠದಲ್ಲಿ ದತ್ತಮಾಲೆ ಧಾರಣೆ ನಡೆಯಲಿದ್ದು, ನ.7ರಂದು ಶಂಕರ ಮಠದಲ್ಲಿ ಸಂಜೆ 7 ಗಂಟೆಗೆ ದತ್ತ ದೀಪೋತ್ಸವ ನಡೆಯಲಿದ್ದು ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೀಪೋತ್ಸವ ನಡೆಯಲಿದೆ. ನ.9ರಂದು ನಗರದಲ್ಲಿ ಪಡಿ ಸಂಗ್ರಹ ಹಾಗೂ 10ರಂದು ಶಂಕರ ಮಠದ ಮುಂಭಾಗದಲ್ಲಿ ಧರ್ಮಸಭೆ ನಡೆಯಲಿದ್ದು ನಂತರ ಆಜಾದ್ ಪಾರ್ಕ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಸಾವಿರಾರು ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ. ಬಳಿಕ ಶ್ರೀರಾಮಸೇನೆ ಕಾರ್ಯಕರ್ತರು ಸೇರಿದಂತೆ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ…