ಟಾಪ್ ನ್ಯೂಸ್ ಮಲ್ನಾಡ್ ಹಬ್ಬದ ವೇಳೆ ಏನೇನ್ ಆಯ್ತು! – ಸೊರಬ: ಬೈಕ್ ಮತ್ತು ಕಾರಿನ ಡಿಕ್ಕಿ: ಓರ್ವ ಸಾವು – ಹೊಸನಗರ : ಕಾಡು ಹಂದಿ ಬೇಟೆಗಾರರ ಬಂಧನ – ಹುಂಚ : ಕಲ್ಲು ಕ್ವಾರೆಯಲ್ಲಿ ನಿಗೂಢ ಸಾವು – ಶಿವಮೊಗ್ಗ: ಮುಂದುವರೆದ ಕಾಡಾನೆಗಳ ಹಾವಳಿ NAMMUR EXPRESS NEWS ಸೊರಬ: ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕೋಡೂರು ಮೂಲದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಬಳಿ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಲೋಜರ್ ಗುಡ್ಡ ಗ್ರಾಮದ ನಿವಾಸಿ ಸುದರ್ಶನ ಬಂದಿಗೇರ್ (22) ಮೃತಪಟ್ಟ ಯುವಕನಾಗಿದ್ದಾನೆ. ಸುದರ್ಶನ ತನ್ನ ಅತ್ತೆ ಬೆಳ್ಳಮ್ಮ ಪುಟ್ಟಪ್ಪ (65) ಜೊತೆಯಲ್ಲಿ ಬೈಕ್ ನಲ್ಲಿ ಹೊಸನಗರದಿಂದ ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮಕ್ಕೆ…
Author: Nammur Express Admin
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮೊದಲ ಕಾರ್ತಿಕ ಸೋಮವಾರ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆದಾಗ್ಯೂ, ವಿರೋಧಿಗಳು ಸಹ ಸಕ್ರಿಯವಾಗಿ ಉಳಿಯುತ್ತಾರೆ. ಇದರಿಂದ ಸ್ವಲ್ಪ ತೊಂದರೆಯಾಗಲಿದೆ. ನೀವು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಇದು ನಿಮ್ಮ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಸಹೋದರ ಮತ್ತು ಸಹೋದರಿಯ ನಡುವೆ ನಡೆಯುತ್ತಿರುವ ಹಣಕಾಸಿನ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ** ವೃಷಭ ರಾಶಿ : ಇಂದು ಕಚೇರಿಯಲ್ಲಿ ತುಂಬಾ ಬಿಡುವಿಲ್ಲದ ಕೆಲಸವಿರುತ್ತದೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ.…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವೃತ್ತಿ ಜೀವನದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಸಂಪತ್ತಿನಿಂದ ಉತ್ತಮ ಆದಾಯವನ್ನು ಪಡೆಯುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆಸಕ್ತಿದಾಯಕ ವ್ಯಕ್ತಿ ನಿಮ್ಮ ಪ್ರೀತಿಯ ಜೀವನವನ್ನು ಪ್ರವೇಶಿಸುತ್ತಾನೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಹೊಸ ಹೂಡಿಕೆ ಅವಕಾಶಗಳು ಸಿಗಲಿವೆ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಇದರಿಂದ ಮಾನಸಿಕ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಹಳೆಯ ಆಸ್ತಿಯನ್ನು…
ಈ ದಿನದ ರಾಶಿ ಭವಿಷ್ಯ ಹೇಗಿದೆ? * ಯಾವ ರಾಶಿಗೆ ಅಶುಭ ಯಾವ ರಾಶಿಗೆ ಶುಭ? NAMMUR EXPRESS NEWS ಮೇಷ : ಇಂದು ನೀವು ಅನೇಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತೀರಿ. ಇದರೊಂದಿಗೆ ಸಾಮಾಜಿಕ ಗಡಿಗಳೂ ಹೆಚ್ಚಾಗುತ್ತವೆ. ಎಲ್ಲಿಂದಲಾದರೂ ನಿಮ್ಮ ಇಚ್ಛೆಯಂತೆ ಪಾವತಿಯನ್ನು ಪಡೆಯುವುದು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಧಾರ್ಮಿಕ ಸಂಸ್ಥೆಗಳಲ್ಲಿ ಸೇವಾ ಸಂಬಂಧಿತ ಚಟುವಟಿಕೆಗಳಲ್ಲಿ ಗಮನಾರ್ಹ ಕೊಡುಗೆ ಇರುತ್ತದೆ. ವೃಷಭ: ಮಹತ್ವದ ಕೆಲಸವೊಂದು ಪೂರ್ಣಗೊಳ್ಳುವುದರಿಂದ ಸಮಾಧಾನದ ಸ್ಥಿತಿ ಇರುತ್ತದೆ. ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೆಲಸಗಳತ್ತ ಗಮನ ಹರಿಸಿದರೆ ಹೊಸ ಯಶಸ್ಸು ಸಿಗುತ್ತದೆ. ಮನೆಯ ಹಿರಿಯರ ಕಡೆಗೂ ಗಮನ ಕೊಡಿ. ವ್ಯವಹಾರದಲ್ಲಿ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಮಿಥುನ : ಇತರರ ನೋವು ಮತ್ತು ಸಂಕಟದಲ್ಲಿ ಸಹಾಯ ಮಾಡುವುದು ನಿಮ್ಮ ಸ್ವಭಾವವಾಗಿದೆ. ಆದ್ದರಿಂದ ನೀವು ಸಮಾಜದಲ್ಲಿ ಗೌರವವನ್ನು ಪಡೆಯುತ್ತಿದ್ದೀರಿ ಮತ್ತು ಸಂಪರ್ಕಗಳ ವ್ಯಾಪ್ತಿಯು ಸಹ ಹೆಚ್ಚಾಗುತ್ತದೆ. ಅದು ಭವಿಷ್ಯದಲ್ಲಿ ನಿಮ್ಮನ್ನು ಆರ್ಥಿಕವಾಗಿ ಸಕ್ರಿಯಗೊಳಿಸುತ್ತದೆ. ಕಟಕ : ನೀವು ಇಂದು…
ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ – ಮೂರು ಜನರಿಗೆ ಗೌರವ: ಮಕ್ಕಳ ಶಿಸ್ತಿನ ಮೆರವಣಿಗೆ – ಕನ್ನಡ ಉಳಿಸಲು ಕರೆ ನೀಡಿದ ನಾಯಕರು NAMMUR EXPRESS NEWS ತೀರ್ಥಹಳ್ಳಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಅದ್ದೂರಿ 69ನೇಯ ಕನ್ನಡ ರಾಜ್ಯೋತ್ಸವ ಇಂದು ಬೆಳಗ್ಗೆ ಶಾಲಾ ಮಕ್ಕಳ ಮತ್ತು ಗಣ್ಯರು ಕನ್ನಡ ರಾಜ್ಯೋತ್ಸವದ ಮೆರವಣಿಗೆಯನ್ನು ನಡೆಸಿ ನಂತರ ಮೆರವಣಿಗೆಯು ಜೂನಿಯರ್ ಕಾಲೇಜ್ ಮೈದಾನಕ್ಕೆ ಬಂದು ತಲುಪಿ, ಗಣ್ಯರಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು. ತಾಲೂಕು ಪಂಚಾಯಿತಿಯ ದಂಡಾಧಿಕಾರಿ ರಂಜಿತ್ ಎಸ್ ಅವರು ಕನ್ನಡ ಧ್ವಜದ ಸಂದೇಶವನ್ನು ನೀಡಿದರು. ನಂತರ ಯು. ಆರ್. ಅನಂತಮೂರ್ತಿ ಶಾಲೆಯ ಸಭಾಂಗಣದಲ್ಲಿ, ಸಭಾ ಕಾರ್ಯಕ್ರಮವನ್ನು ಕ್ಷೇತ್ರ ಶಾಸಕರಾದ ಆರಗ ಜ್ಞಾನೇಂದ್ರ, ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಶ್ರೀಮತಿ ಉಮಾದೇವಿ ಊರಾಳ್, ಮತ್ತು ತೀರ್ಥಹಳ್ಳಿ ಸಾರ್ವಜನಿಕ, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ದಯಾನಂದ್, ಹಾಗೂ ಗೃಹರಕ್ಷಕ ದಳದಲ್ಲಿ ಸೇವೆ…
ದೀಪಾವಳಿಗೆ ಮಳೆ ಅಡ್ಡಿ! – ಮೂರು ದಿನ ಮಳೆ: ಹಲವೆಡೆ ಮಳೆ ಆರ್ಭಟ – ಏನಿದು ಮಳೆ ಬಿಡೋದು ಯಾವಾಗ ದೇವ್ರೇ? NAMMUR EXPRESS NEWS ಬೆಂಗಳೂರು: ರಾಜ್ಯದ ಕೆಲವೆಡೆ ದೀಪಾವಳಿಗೆ ಮಳೆ ಅಡ್ಡಿ ಆಗಿದೆ. ಇನ್ನೂ ಮೂರು ದಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಸೇರಿ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. ಇದು ದೀಪಾವಳಿ ಸಂಭ್ರಮಕ್ಕೆ ನೀರೆರಚಿದೆ. ಮೂರು ದಿನ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ನ.3ರವರೆಗೆ ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗದಲ್ಲಿ ವ್ಯಾಪಕ ಮಳೆಯಾಗಲಿದ್ದು, ಯೆಲ್ಲೊ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ವಿಜಯನಗರ ಜಿಲ್ಲೆಯ ಹರಪನ ಹಳ್ಳಿಯಲ್ಲಿ 5, ಸೆಂ. 2, ಹಾವೇರಿ ಜಿಲ್ಲೆಯ ಹಾವೇರಿ ಯಲ್ಲಿ 4 ಸೆಂ.ಮೀ, ಧಾರವಾಡ, ಚಿಕ್ಕಮಗಳೂರು…
ತೀರ್ಥಹಳ್ಳಿಯ ಡಾ.ಹೆಚ್.ಎಸ್.ಕೃಷ್ಣಪ್ಪ ಅವರಿಗೆ ರಾಜ್ಯ ಪ್ರಶಸ್ತಿ – ಹೊಳೆಕೊಪ್ಪ ಮೂಲದ ಡಾ.ಹೆಚ್.ಎಸ್ ಕೃಷ್ಣಪ್ಪ ಅವರ ಸೇವೆಗೆ ಸಂದ ಫಲ – ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕಾರ: ಶುಭಾಶಯಗಳು NAMMUR EXPRESS NEWS ತೀರ್ಥಹಳ್ಳಿ: ಕರ್ನಾಟಕ ಸರ್ಕಾರವು ಕೊಡುವ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ತೀರ್ಥಹಳ್ಳಿ ತಾಲ್ಲೂಕು ಹೊಳೆಕೊಪ್ಪದ ಡಾ.ಹೆಚ್.ಎಸ್ ಕೃಷ್ಣಪ್ಪ ಆಯ್ಕೆಯಾಗಿದ್ದು,ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 69 ಮಂದಿ ಸಾಧಕರನ್ನು ಗುರುತಿಸಲಾಗಿದೆ. ನ.1ರಂದು ಪ್ರಶಸ್ತಿ ಸ್ವೀಕರಿಸಿದರು. ಕುರುನಾಡು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷದ ಸವಿ ನೆನಪಿನಲ್ಲಿ ಸುಮಾರು 50 ಮಂದಿ ಮಹಿಳೆಯರು ಹಾಗೂ 50 ಮಂದಿ ಪುರುಷರಿಗೆ ಕೊಡ ಮಾಡುವ ಪ್ರತಿಷ್ಠಿತ ಕರ್ನಾಟಕ ಸುವರ್ಣ 50ರ ರಾಜ್ಯ ಪ್ರಶಸ್ತಿಗೆ ತೀರ್ಥಹಳ್ಳಿ ತಾಲ್ಲೂಕು ಕಟ್ಟೆಹಕ್ಕಲು ಸಮೀಪದ, ಹೊಳೆಕೊಪ್ಪದ ಡಾ. ಹೆಚ್.ಎಸ್ ಕೃಷ್ಣಪ್ಪ ಭಾಜನರಾಗಿದ್ದಾರೆ. ಹೊಳೆಕೊಪ್ಪ ಡಾ. ಹೆಚ್.ಎಸ್ ಕೃಷ್ಣಪ್ಪ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟಿಹಕ್ಕಲು ಸಮೀಪದ ಹೊಳೆಕೊಪ್ಪದ ಸುಬ್ಬಯ್ಯ ಗೌಡ ಹಾಗೂ ಚಿನ್ನಮ್ಮ ದಂಪತಿಗಳ ಪುತ್ರರಲ್ಲಿ ಒಬ್ಬರು.…
ತೀರ್ಥಹಳ್ಳಿ ತಾಲೂಕಲ್ಲಿ ಅದ್ದೂರಿ ಲಕ್ಷ್ಮಿ ಪೂಜೆ – ಅಂಗಡಿಗಳ ಪೂಜೆಗಳಲ್ಲಿ ಸಂಭ್ರಮದಿಂದ ಮಿಂದೆದ್ದ ಜನತೆ – ಪ್ರತಿ ಅಂಗಡಿಗಳಿಗೂ ಅಲಂಕಾರ, ಪಟ್ಟಣದಲ್ಲಿ ಬೆಳಕಿನ ಅಲಂಕಾರ – ಸರ್ಕಾರಿ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳ ಝಲಕ್ NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಸಡಗರದಿಂದ ಆಚರಣೆಯಾಗುತ್ತಿದೆ. ಈ ನಡುವೆ ಲಕ್ಷ್ಮಿ ಪೂಜೆಯನ್ನು ತಮ್ಮ ತಮ್ಮ ವಾಹನಗಳು ಹಾಗೂ ಅಂಗಡಿಗಳನ್ನು ಪೂಜೆ ಮಾಡುವ ಮೂಲಕ ಜನರು ಸಂಭ್ರಮದಿಂದ ಪೂಜೆ ಮಾಡಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಕೆಲವು ಕಡೆ ಲಕ್ಷ್ಮಿ ಪೂಜೆ ಮಾಡಲಾಗುತ್ತಿದೆ. ಈಗಾಗಲೇ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಜನ ಕಳೆಯುತ್ತಿದ್ದಾರೆ. – ಪಟಾಕಿ ಅಂಗಡಿಗಳಲ್ಲೂ ಕೂಡ ಮುಗಿಬಿದ್ದ ಜನತೆ ತೀರ್ಥಹಳ್ಳಿ ಸರ್ಕಾರಿ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ಕೂಡ ಜನರಿಂದ ಫುಲ್ ರಶ್ ಆಗಿದ್ದೆ. ದೀಪಾವಳಿ ಹಬ್ಬಕ್ಕೆ ಈಗಾಗಲೇ ಪಟಾಕಿ ಖರೀದಿಸಿದ್ದು, ಇನ್ನೂ ಕೂಡ ಖರೀದಿ ಜೋರಾಗಿದೆ. ಪಟ್ಟಣದ ಪಾಪಣ್ಣ ಸೌಂಡ್ಸ್, ಚಾಮುಂಡೇಶ್ವರಿ ಪಟಾಕಿ ಅಂಗಡಿ,…
ತೀರ್ಥಹಳ್ಳಿಯ ಗುಡ್ಡೇಕೇರಿ ಶಾಲೆಯಲ್ಲಿ ಕನ್ನಡ ಡಿಂಡಿಮ! – ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕೊಳಲು ವಾದನ, ನೃತ್ಯ – ಹಳ್ಳಿ ಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ! – ತೀರ್ಥಹಳ್ಳಿ: ಹಿರಿಯ ಪತ್ರಕರ್ತ ಶ್ರೀ ಪಾದ ಭಟ್ ಅವರಿಗೆ ಬ್ರಾಹ್ಮಣ ಸಂಘದಿಂದ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆಯಾಗಿರುವ ಗುಡ್ಡೇಕೇರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಮೊದಲು ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಗೀತೆ, ನಾಡಗೀತೆ ಹಾಡಿ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣವನ್ನು ಶಾಲೆಯಲ್ಲೇ ಓದಿರುವ ಬಿ,ಇಡಿ ವಿದ್ಯಾರ್ಥಿ ಸಂದೇಶ್ ಕಲ್ಕೋಡ್ ನೇರವೇರಿಸಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್.ಪಿ ಧ್ವಜಾರೋಹಣ ನೇರವೇರಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ, ಅಮಿತ್ ನಾಡಿಗ್, ಭರತನಾಟ್ಯ ಪ್ರವೀಣೆ, ನಿವೇದಿತಾ ನಾಡಿಗ್, ಪುತ್ರಿ ಸಾಹಿತ್ಯ ನಾಡಿಗ್, ಹಾಗೂ ಅಂತರಾಷ್ಟ್ರೀಯ ಕಥಕ್ಕಳಿ ನೃತ್ಯ ಪ್ರತಿಭೆ, ಮಾನಸ ಜೋಶಿ ( ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಮಹೇಶ್ ಜೋಶಿ ಅವರ ಸುಪುತ್ರಿ ) ಹಾಗೂ ಶಂಕರ್…
ಕರಾವಳಿ ನ್ಯೂಸ್ – ಬೈಂದೂರು: ಸ್ಕೂಟಿ, ಮಣ್ಣು ತುಂಬಿದ ಲಾರಿ ಡಿಕ್ಕಿ ಮಣ್ಣಿನಡಿ ಸಿಲುಕಿದ ಮಹಿಳೆ! – ಪುತ್ತೂರು: ಕೋಳಿ ಅಂಕಕ್ಕೆ ಖಾಕಿ ರೇಡ್ : ಐವರು ಅಂದರ್ – ಕುಂದಾಪುರ: ದೋಣಿ ಮಗುಚಿ ಮೀನುಗಾರ ಸಾವು ಬೈಂದೂರು: ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು, ಲಾರಿ ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿ ಅದೃಷ್ಟವಶಾತ್ ಪಾರಾದ ಘಟನೆ ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದು ಬಂದಿದೆ. ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಸ್ಕೂಟರಲ್ಲಿದ್ದ ಮಹಿಳೆ ಮೇಲೆ ಬಿದ್ದು ಮಣ್ಣಿನ ಅಡಿಯಲ್ಲಿ ಮಹಿಳೆ ಸಿಲುಕಿ ಕೊಂಡ ಸಂದರ್ಭ ಅಲ್ಲೇ ಸ್ಥಳದಲ್ಲಿ ಇದ್ದ ಸಮಾಜ ಸೇವಕ, ಆಪತ್ಬಾಂಧವ ಕೋಡಿ ಅಶೋಕ ಪೂಜಾರಿ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. – ಪುತ್ತೂರು:…