ತೀರ್ಥಹಳ್ಳಿಯ ಅಡಿಕೆಯೇ ದೇಶದಲ್ಲಿ ನಂ.1 ತಳಿ! – ದೇಶದಲ್ಲಿ ಬೆಳೆಯುವ ಅಡಿಕೆಗಳಲ್ಲಿ ತೀರ್ಥಹಳ್ಳಿ ಅಡಿಕೆ ಉತ್ತಮ – ಅಡಿಕೆಯ ರುಚಿ,ವಾಸನೆ ಮತ್ತು ಅದರ ಗುಣಮಟ್ಟ ತುಂಬಾ ಪ್ರಸಿದ್ಧಿ NAMMUR EXPRESS NEWS ಮಲೆನಾಡಿನಲ್ಲಿ ಬೆಳೆಯುವ ಅಡಿಕೆ ಬೆಳೆ ತುಂಬಾ ಫೇಮಸ್. ಇದೀಗ ಶಿವಮೊಗ್ಗದ ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆಗೆ ಮತ್ತೊಂದು ಗರಿಮೆ ಲಭ್ಯವಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರವು ನಡೆಸಿದಂತಹ ಅಧ್ಯಯನದಲ್ಲಿ ತೀರ್ಥಹಳ್ಳಿಯ ಅಡಿಕೆ ದೇಶದಲ್ಲಿ ಬೆಳೆಯುವ ತಳಿಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯಾಗಿ ಹೊರಹೊಮ್ಮಿದೆ. ಅಡಿಕೆಯ ಪ್ರತಿ ತಳಿಯಲ್ಲಿ ಅದರ ರುಚಿಯಾಗಿರಬಹುದು, ಅದರ ವಾಸನೆಯನ್ನು ಕಂಡುಹಿಡಿವುದಕ್ಕೆ ಒಂದು ಸಂಶೋಧನೆ ತಂಡವನ್ನೇ ರಚನೆ ಮಾಡಲಾಗಿದ್ದು ತೀರ್ಥಹಳ್ಳಿ ಅಡಿಕೆಗೆ ಮೊದಲ ಗರಿಮೆ ಸಿಕ್ಕಿದೆ ಎಂಬುದು ಫಲಿತಾಂಶ ಹೊರಬಂದಿದೆ. ಗ್ರಾಹಕರು, ವ್ಯಾಪಾರಿಗಳು, ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಬೆಳೆಗಾರರನ್ನು ಒಳಗೊಂಡ ಗುಂಪು ವಿಶ್ಲೇಷಣೆಯಲ್ಲಿ ಪ್ರಶ್ನಾವಳಿಗೆ ಉತ್ತರಿಸುವ ಮೊದಲು ಕಾಯಿಗಳನ್ನು ಸ್ಪರ್ಶಿಸಲು ಮತ್ತು ರುಚಿ ನೋಡಲು ಅವರಿಗೆ ಅವಕಾಶ ನೀಡಲಾಯಿತು. ನೋಟ…
Author: Nammur Express Admin
ಬೆಳಕಿನ ಹಬ್ಬದ ಜತೆಗೆ ಎಲ್ಲೆಲ್ಲೂ ಕನ್ನಡ ಹಬ್ಬ! – ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು – ಕನ್ನಡ ರಾಜ್ಯೋತ್ಸವ ಆಗಲಿ ಪ್ರತಿ ಮನೆಯ ಉತ್ಸವ – ಕನ್ನಡ ರಾಜ್ಯೋತ್ಸವದ ಆಚರಣೆ ನವೆಂಬರ್ ಸೀಮಿತ ಬೇಡ! ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ ನಮ್ಮ ತಾಯಿ ಭಾಷೆ ಕನ್ನಡ..! ಸರ್ವರಿಗೂ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಇಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ರಾಜ್ಯ ಸರ್ಕಾರವು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಆಚರಣೆಗೆ ಮಾಡುತ್ತಿದೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇನ್ನು ಎಲ್ಲಾ ಸಂಸ್ಥೆಗಳಲ್ಲೂ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲು ಕರೆ ಕೊಡಲಾಗಿದೆ. ಕನ್ನಡ ನಾಡು ಹಲವು ವೈವಿಧ್ಯಗಳ ಬೀಡು, ಕವಿ ಸಾಹಿತಿಗಳ ಸೂರು. ಕರ್ನಾಟಕ ರಾಜ್ಯ ಉದಯವಾದ ದಿನವಾಗಿದ್ದು, ನಮ್ಮ ಕನ್ನಡ ನಾಡು ಎಂಬುದು…
ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ದೇವರಾಜ್ ಅವಿರೋಧ ಆಯ್ಕೆ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದಿಂದ ಸರ್ಕಾರಿ ನೌಕರರ ಸಂಘಕ್ಜೆ ಅವಿರೋದ ಆಯ್ಕೆಯಾದ ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವರಾಜ್ ಅವರಿಗೆ ಅಭಿನಂದನೆಗಳು. – ಉಪನ್ಯಾಸಕರು, ಸ್ನೇಹಿತರು,ತೀರ್ಥಹಳ್ಳಿ ತಾಲೂಕು
ಈ ದಿನದ ರಾಶಿ ಭವಿಷ್ಯ ಹೇಗಿದೆ? – ದೀಪಾವಳಿ ಅಮಾವಾಸ್ಯೆ, ಈ ರಾಶಿಗೆ ಲಕ್ಷ್ಮಿ ಕೃಪಾಕಟಾಕ್ಷ! – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ದೂರದ ಬಂಧುಗಳಿಂದ ಶುಭವಾರ್ತೆಯನ್ನು ಕೇಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮವಾದ ಏಳಿಗೆಯನ್ನು ಕಾಣಲಿದ್ದೀರಿ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿಯಾಗಲಿದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ” ಏಳಿಗೆಯಾಗಲಿದೆ. ಅದೃಷ್ಟದ ಸಂಖ್ಯೆ : 3 ಅದೃಷ್ಟದ ಬಣ್ಣ: ಮಾಣಿಕ್ಯ ವರ್ಣ ಪರಿಹಾರ : ಶ್ರೀ ಧನಲಕ್ಷ್ಮಿ ಸ್ತೋತ್ರ ಪಠಣ ** ವೃಷಭ ರಾಶಿ : ಆಪ್ತ ಮಿತ್ರರೊಂದಿಗೆ ಸೇರಿ ನೂತನ ಕೆಲಸವನ್ನು ಆರಂಭಿಸಲಿದ್ದೀರಿ. ನಿಮ್ಮ ಆಸೆ ಆಕಾಂಕ್ಷಿಗಳು ಈಡೇರುವ ಶುಭದಿನವಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ತಕ್ಕಮಟ್ಟಿಗೆ ವಿಮುಕ್ತರಾಗಲಿದ್ದೀರಿ. ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಉತ್ತಮ…
ತೀರ್ಥಹಳ್ಳಿ ಟೀಚರ್ ಸೊಸೈಟಿಯಲ್ಲಿ ಲಕ್ಷ್ಮಿ ಪೂಜೆ – ಕುವೆಂಪು ಬಡಾವಣೆಯ ನೂತನ ಕಚೇರಿಗೆ ಸ್ಥಳಾಂತರ – ಟಿ. ಎಸ್. ಟಿ ಸೂಪರ್ ಮಾರ್ಕೆಟ್ ಅಲ್ಲೂ ಪೂಜೆ NAMMUR EXPRESS NEWS ತೀರ್ಥಹಳ್ಳಿ: ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಕಚೇರಿಯನ್ನು ಗುರುವಾರ ಪೂಜೆ ನಡೆಸಿ ಬಸ್ ನಿಲ್ದಾಣ ಸಮೀಪದ ಕಚೇರಿಯಿಂದ ಶುಭ ದಿನದಂದು ಸ್ಥಳಾಂತರ ಮಾಡಿ ಪೂಜೆ ನೆರವೇರಿಸಲಾಯಿತು. ಪೂಜೆಯಲ್ಲಿ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ, ಉಪಾಧ್ಯಕ್ಷರಾದ ತಿಮ್ಮಪ್ಪ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು. ಆಗುಂಬೆ ಬಸ್ ನಿಲ್ದಾಣ ಸಮೀಪ ಮತ್ತು ಕುವೆಂಪು ಬಡಾವಣೆಯ ಹೈಪರ್ ಮಾರ್ಟ್ ಅಲ್ಲೂ ಪೂಜೆ ನಡೆಯಿತು. ದೀಪಾವಳಿ ಅಂಗವಾಗಿ ವಿಶೇಷ ಆಫರ್, ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.
ಕ್ರಿಯೇಟಿವ್ ಕಾಲೇಜಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ – ಒಂದು ಸಾವಿರಕ್ಕೂ ವಿದ್ಯಾರ್ಥಿಗಳು, ಬರಹಗಾರರ ಸಮಾಗಮ – ಪ್ರಕಾಶ್ ಬೆಳವಾಡಿ, ಎಸ್ ಎನ್ ಸೇತುರಾಮ್, ಪ್ರತಾಪ್ ಸಿಂಹ ಸೇರಿ ಗಣ್ಯರ ಹಾಜರ್ : ಐದು ಹೊಸ ಪುಸ್ತಕಗಳ ಲೋಕಾರ್ಪಣೆ NAMMUR EXPRESS NEWS ಕಾರ್ಕಳ: ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮ ಸಾಹಿತ್ಯ ಲೋಕದಲ್ಲಿ ಹೊಸ ಭರವಸೆ ಸೃಷ್ಟಿ ಮಾಡಿತು.ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಮಾಜಿ ಸಚಿವರು, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಉದ್ಘಾಟನಾ ಭಾಷಣದಲ್ಲಿ ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್…
ತೀರ್ಥಹಳ್ಳಿಯಲ್ಲಿ ದೀಪಾವಳಿ ಆಚರಣೆ ಬಲು ಜೋರು!! – ಮಳೆ ಮಧ್ಯೆ ಖರೀದಿಗಾಗಿ ಮುಗಿ ಬಿದ್ದಿರುವ ಜನ!! – ಪಟ್ಟಣ ಪೂರ್ತಿ ರಶ್ ರಶ್! NAMMUR EXPRESS NEWS ತೀರ್ಥಹಳ್ಳಿ: ಎಲ್ಲರೂ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದು, ಹಬ್ಬದಲ್ಲಿ ಅಗತ್ಯ ವಸ್ತುಗಳ ಖರೀದಿಯೂ ಜೋರಾಗಿದೆ. ಸುಮಾರು ಒಂದು ವಾರದಿಂದಲೇ ಹಬ್ಬದ ಸಂಭ್ರಮ ನಗರದಲ್ಲಿ ಮನೆ ಮಾಡಿದ್ದು, ಮನೆ ಮತ್ತು ಅಂಗಡಿಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿವೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನಸಾಗರವೇ ಹರಿದು ಬರುತ್ತಿದೆ. ಹೂವು, ಹಣ್ಣು, ಹಣತೆ, ಆಭರಣ, ಪಟಾಕಿ,ಬಟ್ಟೆ,ಗೂಡು ದೀಪ ಅಲಂಕಾರಿಕ ವಸ್ತುಗಳು ಸೇರಿ ಎಲ್ಲ ವಸ್ತುಗಳ ಖರೀದಿಗಾಗಿ ಜನರು ಕುಟುಂಬ ಸಮೇತರಾಗಿ ಆಗಮಿಸಿ ಬಟ್ಟೆ, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಪಟ್ಟಣದಲ್ಲಿ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ತೆರೆದಿದ್ದು, ಪಟಾಕಿ ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ. ಬಣ್ಣ ಬಣ್ಣದ ತರಹೇವಾರಿ ಆಕಾಶ ಬುಟ್ಟಿಗಳು, ಲೈಟಿನ ಸರ, ಬಗೆ ಬಗೆಯ ಹಣತೆಗಳು, ತೋರಣಗಳು ಮಾರುಕಟ್ಟೆಗೆ…
ದೀಪಾವಳಿಗೆ ಪಟಾಕಿ ಸಿಡಿಸುವಾಗ ಎಚ್ಚರ..! – ಹಬ್ಬದ ಸಂಭ್ರಮ ಓಕೆ, ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ಇರಲಿ – ಪಟಾಕಿ ಅಂಗಡಿಯ ಮಾಲೀಕರಿಗೆ ಕೆಲವು ಸೂಚನೆ – ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್ – ಕಣ್ಣುಗಳ ಬಗ್ಗೆ ಹುಷಾರು: ಭಾರೀ ಶಬ್ದದ ಪಟಾಕಿ ಬೇಡ NAMMUR EXPRESS NEWS ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಳಕಿನ ಹಬ್ಬಕ್ಕೆ ಪಟಾಕಿಯೇ ರಂಗು. ಆದರೆ ಪಟಾಕಿ ಸಿಡಿಸುವಾಗ ಎಚ್ಚರ ಇರಲಿ. ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಗಮನಿಸಬೇಕಿದೆ. ಪಟಾಕಿ ಅನಾಹುತ ತಡೆಯಲು ಇಲಾಖೆ ಪ್ಲಾನ್ ಹಬ್ಬದ ಸಂದರ್ಭ ಅಗ್ನಿ ಅವಘಡ ತಪ್ಪಿಸಲು ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಸೋಮವಾರವಷ್ಟೇ ಕಾಸರಗೋಡಿನ ನೀಲೇಶ್ವರದಲ್ಲಿ ಸಂಭವಿಸಿದ ಅಗ್ನಿ ಅವಘಡ, ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆ, ಹಾವೇರಿಯಲ್ಲಿ ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರಂತೆ ಎಲ್ಲಾ ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ ಕೂಡಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿವೆ. ವಾಹನಗಳನ್ನು ಸಜ್ಜಾಗಿಟ್ಟುಕೊಳ್ಳುವುದು, ನೀರು…
ಕರಾವಳಿ ಟಾಪ್ ನ್ಯೂಸ್ – ಸಿಮೆಂಟ್ ಲಾರಿ ಪಲ್ಟಿಯಾಗಿ ಚಾಲಕ ಸಾವು!! – ಮಂಗಳೂರು: ಅಧಿಕ ಲಾಭದ ಆಮಿಷ; ವ್ಯಕ್ತಿಗೆ ಬರೋಬ್ಬರಿ 43 ಲಕ್ಷ ಪಂಗನಾಮ! – ಬಂಟ್ವಾಳ: ರಸ್ತೆ ಅಪಘಾತದಲ್ಲಿ ಸಂಭವಿಸಿದ ವ್ಯಕ್ತಿ ಮೃತ್ಯು ಬೈಂದೂರು : ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಝಾರ್ಖಂಡ್ ಮೂಲದ ಚಾಲಕ ದಾಮೋದರ ಯಾದವ್ (55) ಮೃತಪಟ್ಟವರು. ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. * ಮಂಗಳೂರು: ಅಧಿಕ ಲಾಭದ ಆಮಿಷ; ವ್ಯಕ್ತಿಗೆ ಬರೋಬ್ಬರಿ 43 ಲಕ್ಷ ಪಂಗನಾಮ! ಮಂಗಳೂರು : ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಲಕ್ಷಾಂತರ ವಂಚಿಸಿದ ಆರೋಪದ ಮೇಲೆ ಆನ್‌ಲೈನ್ ಖದೀಮರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೋ ಅಪರಿಚತ ವ್ಯಕ್ತಿ ಮಂಜು ಪಚಿಸಿಯಾ ಎಂಬ ಹೆಸರಿನಿಂದ ವಾಟ್ಸ್ಆಪ್ ಮುಖಾಂತರ ಪರಿಚಯಿಸಿಕೊಂಡು ತಾನು IIFL SECURITIES LIMITEDನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ…
ಕರಾವಳಿ ನ್ಯೂಸ್ – ನಿರ್ಸಗಧಾಮ: ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ!! – ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ! – ಕಾಸರಗೋಡು: ಪ್ರೇಯಸಿಯ ಕೊಂದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ! NAMMUR EXPRESS NEWS ಮಂಗಳೂರು: ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾದ ಘಟನೆ ಅ. 30ರಂದು ಬೆಳಗ್ಗೆ ಸಂಭವಿಸಿದೆ. ಚಾರ್ಜ್‌ಗೆಂದು ಶೆಡ್‌ನಲ್ಲಿ ಇಡಲಾಗಿದ್ದ ವಾಹನಕ್ಕೆ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ತಗಲಿ ಅನಂತರ ಅದು ಇನ್ನೊಂದು ವಾಹನಕ್ಕೂ ಹಬ್ಬಿರುವ ಸಾಧ್ಯತೆ ಇದೆ. ಎರಡು ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದು ಸ್ಥಳಕ್ಕೆ ತೆರಳಿದ್ದ ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಶೆಡ್‌ನಲ್ಲಿ ಒಟ್ಟು 16 ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ಉಳಿದ ವಾಹನಗಳನ್ನು ಶೆಡ್‌ನಿಂದ ಹೊರಕ್ಕೆ ತಂದು ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಈ ಎಲೆಕ್ಟ್ರಿಕ್ ವಾಹನಗಳನ್ನು (ಬಗ್ಗೀಸ್) ನಿಸರ್ಗಧಾಮದಲ್ಲಿ ಪ್ರವಾಸಿಗರು ಸುತ್ತಾಡಲು ಬಳಕೆ ಮಾಡಲಾಗುತ್ತಿತ್ತು.…