ದಿಶಾ ಸಮಿತಿ ಸದಸ್ಯರಾಗಿ ಯಶೋಧ ಮಂಜುನಾಥ್ ಆಯ್ಕೆ – ತೀರ್ಥಹಳ್ಳಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ – ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಶಿವಮೊಗ್ಗ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ತೀರ್ಥಹಳ್ಳಿ ಮಾಜಿ ತಾಲೂಕು ಪಂಚಾಯ್ತಿ ಉಪಾಧಕ್ಷೆ ಶ್ರೀಮತಿ ಯಶೋಧ ಮಂಜುನಾಥ ದಿಂಡ ಅವರನ್ನು ನೇಮಕ ಮಾಡಲಾಗಿದೆ. ಶ್ರೀಮತಿ ಯಶೋಧ ಮಂಜುನಾಥರವರು ಈ ಹಿಂದೆ ಮೇಗರವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿ ನಂತರ ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ತೀರ್ಥಹಳ್ಳಿ ತಾಲೂಕು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಹೊಸಳ್ಳಿ ಗಾಮ ಪಂಚಾಯ್ತಿ ಮಾಜಿ ಸದಸ್ಯರು ಹಾಲಿ ತೀರ್ಥಹಳ್ಳಿ ಮಂಡಲ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ರಾದ ದಿಂಡ ಮಂಜುನಾಥರವರ ಪತ್ನಿ. ಇವರಿಂದ ತಾಲೂಕಿನ ಅಭಿವೃದ್ಧಿ ಪ್ರಗತಿ ಪಥದತ್ತ ಸಾಗಲಿ.ಜಿಲ್ಲಾ ಮಟ್ಟದ…
Author: Nammur Express Admin
ಮೂರು ದಿನ ದೀಪಾವಳಿ ಆಚರಣೆ ಸಂಭ್ರಮ – ತೈಲಾಭ್ಯಂಗ, ಮನೆಮನೆಗಳಲ್ಲಿ ಸಿದ್ಧತೆ – ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ – ಪಟಾಕಿ ಬೆಲೆ ಕೈಸುಡುವಂತಿದೆ!: ಬೆಳಕಿನ ಹಬ್ಬದ ಸಡಗರ NAMMUR EXPRESS NEWS ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಆರಂಭಗೊಂಡಿದೆ. ಮನೆಮನೆಗಳಲ್ಲಿ ಆಚರಿಸುವ ಹಬ್ಬದಲ್ಲಿಮುಂದಿನ ಮೂರು ದಿನಗಳ ಕಾಲ ವಿಶೇಷ ವಿಧಿಗಳನ್ನು ಆಚರಿಸಲಾಗುತ್ತಿದೆ. ಗ್ರಾಮೀಣ, ನಗರ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿದೆ. ಮೂರು ದಿನಗಳಲ್ಲಿ ದೀಪೋತ್ಸವ, ವಿಶೇಷಪೂಜೆಗಳು, ಬಲಿಪಾಡ್ಯಮಿ, ಗೋಪೂಜೆ, ಅಂಗಡಿಪೂಜೆ, ಲಕ್ಷ್ಮೀ ಪೂಜೆ ಇತ್ಯಾದಿಗಳು ಮನೆ ಹಾಗೂ ದೇವಸ್ಥಾನಗಳಲ್ಲಿ ನಡೆಯಲಿದೆ. ಹಬ್ಬದ ಸಾಮಗ್ರಿಗಳು, ಪೂಜಾ ಸಾಮಗ್ರಿ ಸಹಿತ ಮಾರಾಟ, ಖರೀದಿ ಭರ್ಜರಿಯಾಗಿ ನಡೆಯಿತು. ಅಂಗಡಿ, ಮುಂಗಟ್ಟು ಮಳಿಗೆಗಳಲ್ಲಿ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದರು. ನಗರದ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಜಂಕ್ಷನ್‌ನಲ್ಲಿ ಹೂವು ಮಾರಾಟಗಾರರು ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದು ಸಾಲುದ್ದಕ್ಕೂ ಹೂವಿನ ವ್ಯಾಪಾರಿಗಳು ಕಂಡು ಬಂದರು. – ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ ಕನ್ನಡ ರಾಜ್ಯೋತ್ಸವ…
ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಭೋಜರಾಜ್, ವೀರೇಶ್ ಆಯ್ಕೆ – ತೀರ್ಥಹಳ್ಳಿಯ ಇಬ್ಬರು ಶಿಕ್ಷಕರ ಆಯ್ಕೆ ಮಾಡಿದ ಶಿಕ್ಷಕರು – ಇಬ್ಬರಿಗೂ ಶುಭಾಶಯಗಳು NAMMUR EXPRESS NEWS ತೀರ್ಥಹಳ್ಳಿ: ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಗೆ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರಗ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಭೋಜರಾಜ್ ಬಿ ಟಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಹೆದ್ದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭೋಜರಾಜ್ ಬಿ ಟಿ ಆರಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಪುನರುಜ್ಜೀವನಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಧ್ಯಾಪಕರು ಮತ್ತು ಸ್ಥಳೀಯರ ಜೊತೆ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸಿದ್ದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಬೋಜರಾಜ್ ಬಿ ಟಿ ಜಿಲ್ಲೆಯ ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಮುಖ ರಾಗಿದ್ದು ಇವರ ಆಯ್ಕೆಗೆ ಆರಗ…
ದೀಪಾವಳಿ ಹಬ್ಬಕ್ಕೆ ಪಟ್ಟಣಗಳು ಫುಲ್: ಎಲ್ಲೆಡೆ ಭರ್ಜರಿ ಖರೀದಿ! * ಮಾರುಕಟ್ಟೆಗಳಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನ ಸಂದಣಿ * ಹೂವು, ಹಣ್ಣು, ಹಣತೆ, ಅಂಗಡಿಪೂಜೆಗೆ ಸಾಮಗ್ರಿ ಕೊಳ್ಳಲು ಗಡಿಬಿಡಿ NAMMUR EXPRESS NEWS ಬೆಂಗಳೂರು: ವರ್ಷದ ದೊಡ್ಡಹಬ್ಬದ ಸಂಭ್ರಮ ಶುರುವಾಗಿದೆ. ಒಂದು ವಾರಗಳ ಕಾಲ ದೀಪಾವಳಿ ಸಡಗರ ಮನೆ ಮಾಡಲಿದೆ. ಬುಧವಾರ ರಾತ್ರಿಯೇ ಪದ್ದತಿಯಂತೆ ನೀರು ತುಂಬುವ ಆಚರಣೆ ಕೈಗೊಳ್ಳಲಾಗಿದೆ. ಗುರುವಾರ ಎಣ್ಣೆ ಸ್ನಾನ ಮಾಡಲಾಗಿದ್ದು, ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯು ಜೋರಾಗಿ ನಡೆದಿದೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ದಾವಣಗೆರೆ, ಹುಬ್ಬಳಿ ಸೇರಿದಂತೆ ಪ್ರತಿ ಜಿಲ್ಲಾ, ತಾಲೂಕು, ಪಟ್ಟಣಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರು ನಗರದಲ್ಲಿ ಎಲ್ಲೆಲ್ಲೂ ಮಾರುಕಟ್ಟೆ ರಶ್ ಆಗಿದೆ. ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಅಲಂಕಾರ ವಸ್ತುಗಳ ಅಂಗಡಿ, ಹೂವು ಹಣ್ಣು ತರಕಾರಿ ಅಂಗಡಿಗಳು ಜನರಿಂದ ತುಂಬಿ ಹೋಗಿವೆ. ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಮತ್ತು ಲಾಲ್ ಬಾಗ್ ನಲ್ಲಿ ದಿನ ಕಾಲಿಡಲು ಸಹ ಜಾಗವಿಲ್ಲ…
ಶೃಂಗೇರಿ ಜೆಸಿಐಗೆ ನೂತನ ಅಧ್ಯಕ್ಷರಾಗಿ ವಿಎಸ್‌ಎ ಅಶೋಕ್ ಆಯ್ಕೆ..!! * ಕ್ರಿಯಾಶೀಲ ಜೆಸಿಐ ಸದಸ್ಯನಿಗೆ ಒಲಿದ ಅಧ್ಯಕ್ಷ ಸ್ಥಾನ * ವಿಎಸ್ಎ ಸೌಂಡ್ಸ್ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತ NAMMUR EXPRESS NEWS ಶೃಂಗೇರಿ: ತಾಲೂಕಿನ ಜೆಸಿಐ ಸಂಸ್ಥೆಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದ್ದು, ತಾಲೂಕಿನ ವಿದ್ಯಾರಣ್ಯಪುರ ಗ್ರಾಮದ ಅಶೋಕ್‌ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಶೋಕ್ ಜೆಸಿಐನ ಸಕ್ರೀಯ ಸದಸ್ಯರಾಗಿ ಹಲವು ವರ್ಷಗಳಿಂದ ಸಂಸ್ಥೆಯಲ್ಲಿದ್ದಾರೆ. ತಾಲೂಕಿನಲ್ಲಿ ವಿಎಸ್ಎ ಸೌಂಡ್ಸ್ ಮೂಲಕ ಚಿರಪರಿಚಿತರಾಗಿದ್ದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರಿಗೆ ಜೆಸಿಐನ ಪದಾಧಿಕಾರಿಗಳು ಹಾಗೂ ಸ್ನೇಹಿತರು ಶುಭಾಶಯ ಕೋರಿದ್ದಾರೆ.
ಆಗುಂಬೆ ಎವಿಎಂ ಶಾಲೆ ಸಮಿತ್ ರಾಜ್ಯ ಮಟ್ಟಕ್ಕೆ ಆಯ್ಕೆ * ಪ್ರೌಢ ಶಾಲಾ ಕ್ರೀಡಾಕೂಟದ ಜಾವಲಿನ ಸ್ಪರ್ಧೆಯಲ್ಲಿ ಗೆಲುವು * ಸಮಿತ್ ಎಚ್.ಎಂ.ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಮತ್ತು ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ ಆಶ್ರಯದಲ್ಲಿ ಅ.29 ಮತ್ತು 30 2024ರಂದು ಶಿವಮೊಗ್ಗ ಜಿಲ್ಲಾ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಿತ್ ಎಚ್.ಎಂ . ಇವರು ಎ.ವಿ.ಎಂ ಆಗುಂಬೆ ಶಾಲೆಯ ವಿದ್ಯಾರ್ಥಿಯಾಗಿದ್ದು, ತಂದೆ ಮಂಜುನಾಥ್, ತಾಯಿ ಸ್ಮಿತಾ ಹರಳಿಮಠದವರಾಗಿರುತ್ತಾರೆ.ಇವರು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದ ಜಾವಲಿನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಹಿರಿಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಈ ದಿನದ ರಾಶಿ ಭವಿಷ್ಯ ಹೇಗಿದೆ? – ದೀಪಾವಳಿ ಹಬ್ಬ, ಈ ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ! – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ** ವೃಷಭ ರಾಶಿ : ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ…
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೂವರು ನಾಮ ನಿರ್ದೇಶನ – ಕಾಂಗ್ರೆಸ್ ನಾಯಕರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಆಯ್ಕೆ – ಸರ್ಕಾರದಿಂದ ನಾಮ ನಿರ್ದೇಶನ: ಶುಭಾಶಯಗಳು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಸರ್ಕಾರ ಮೂವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಯುವ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಮಾರ್ಟೀಸ್ ಅವರನ್ನು ಆಯ್ಕೆ ಮಾಡಿದ್ದು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಮೂವರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಮೂವರಿಗೆ ಮಹತ್ವದ ಹುದ್ದೆ ಸಿಕ್ಕಿದೆ. 2 ವರ್ಷದಿಂದ ನಾಮಕರಣವಾಗಿರಲಿಲ್ಲ ಸರ್ಕಾರ ರಚನೆಯಾಗಿ ಕಳೆದ 2 ವರ್ಷಗಳಿಂದ ನಾಮನಿರ್ದೇಶನ ಸದಸ್ಯರ ನೇಮಕ ಗೊಂಡಿರಲಿಲ್ಲ. 15 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 3 ನಾಮನಿರ್ದೇಶನ ಸದಸ್ಯರ ಆಯ್ಕೆಗೆ ಅವಕಾಶ ಇತ್ತು. ಬಿ.ಆರ್. ರಾಘವೇಂದ್ರ ಶೆಟ್ಟಿ ಸಾಕಷ್ಟು ಸಮಯದ ಹಿಂದೆ ಬಾಳೇಬೈಲು ವಾರ್ಡ್‌ನಿಂದ ಸದಸ್ಯರಾಗಿ ಆಯ್ಕೆಯಾಗಿದ್ದರೆ . ಡಾ.ಅನಿಲ್ ಕಾಂಗ್ರೆಸ್ ಕಟ್ಟಾಳುವಾಗಿಯೇ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ…
ತೀರ್ಥಹಳ್ಳಿ ವಕೀಲರ ಸಂಘಕ್ಕೆ ನೂತನ ಸಾರಥಿಗಳು – ಅಧ್ಯಕ್ಷರಾಗಿ ಹಿರಿಯ ವಕೀಲ ಎಂ. ಎನ್. ರಮೇಶ್ ಆಯ್ಕೆ – ಕಾರ್ಯದರ್ಶಿಯಾಗಿ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್ ತೀರ್ಥಹಳ್ಳಿ: ತೀರ್ಥಹಳ್ಳಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಂ. ಎನ್. ರಮೇಶ್, ಕಾರ್ಯದರ್ಶಿಯಾಗಿ ಯುವ ವಕೀಲರಾದ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್ ಆಯ್ಕೆ ಆಗಿದ್ದಾರೆ. ಅ.30ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಈ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಶುಭಾಶಯಗಳು ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಐಸಿಎಸ್‌ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕೇಂದ್ರೀಯ ಶಾಲಾ ಮಕ್ಕಳ ಮೇಲುಗೈ! – ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ಈ ಕ್ರೀಡಾಕೂಟ ನೆರವೇರಿತು. – ಶಾಲೆಯ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ NAMMUR EXPRESS NEWS ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ನಡೆದ ಐಸಿಎಸ್‌ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಮಕ್ಕಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿರುತ್ತಾರೆ. 17 ವರ್ಷ ವಯೋಮಿತಿ ಒಳಗಿನ ಸಮಗ್ರ ಚ್ಯಾಂಪಿಯನ್‌ಶಿಪ್ ನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು, 10ನೇ ತರಗತಿಯ ರಿತೇಶ್ ಎಂ. ಅಥ್ಲೆಟಿಕ್ ವಿಭಾಗದಲ್ಲಿ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಹಾಗೂ 8ನೇ ತರಗತಿಯ ಸಮನ್ಯು ಎನ್. 14 ವರ್ಷ ವಯೋಮಿತಿ ಒಳಗಿನ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಹಾಗೂ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಈ ಕೆಳಕಂಡಂತೆ ವಿದ್ಯಾರ್ಥಿಗಳು ಸಾಧನೆಗೈದಿರುತ್ತಾರೆ. 1) ರಿತೇಶ್ ಎಂ…