Author: Nammur Express Admin

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ” ಪುನೀತ್ ನಮನ” – ಸಾಧಕ ಕಲಾವಿದರು, ಸೇವಕರಿಗೆ ಸನ್ಮಾನ: ಗೀತ- ಗಾಯನ – ಡಿವೈಎಸ್ಪಿ ಗಜಾನನ ವಾಮನ ಸುತಾರ, ತಹಶೀಲ್ದಾರ್ ರಂಜಿತ್ ಅವರಿಂದ ಪುನೀತ್ ಬಗ್ಗೆ ಮಾತು ತೀರ್ಥಹಳ್ಳಿ: ಪುನೀತ್ ಬ್ರಿಗೇಡ್, ವಿಶ್ವಮಾನವ ಕನ್ನಡ ವೇದಿಕೆ ಹಾಗೂ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಸಹಯೋಗದೊಂದಿಗೆ ತೀರ್ಥಹಳ್ಳಿಯ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಿಧನ ದಿನವಾದ ಅ.29ರಂದು ಅವರ ಸ್ಮರಣಾರ್ಥ ಪುನೀತ್ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹಾಗೂ ನೂತನ ತಹಶೀಲ್ದಾರ್ ರಂಜಿತ್ ಅವರು ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ತೀರ್ಥಹಳ್ಳಿಯ ಅನೇಕ ಯುವ ಕಲಾವಿದರು, ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಮಾರ್ಗದರ್ಶಕರು ಆದ ಸೂರ್ಯನಾರಾಯಣ ಚಿಡುವ, ವಿಶ್ವ ಮಾನವ ಕನ್ನಡ ವೇದಿಕೆಯ ಸಂಚಾಲಕರು ಹಾಗೂ ಪುನೀತ್…

Read More

ಬಡ ಕುಟುಂಬಗಳಿಗೆ ಮೋದಿ ಬಂಪರ್ ಉಡುಗೊರೆ! – 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ವಿಮೆ ವಿಸ್ತರಣೆ – ಯೋಜನೆಗೆ ಸೇರ್ಪಡೆಯಾಗಲು ಯಾವುದೇ ಆದಾಯ ಮಿತಿ ಇಲ್ಲ! NAMMUR EXPRESS NEWS ದೆಹಲಿ: ದೇಶದ ಬಡ ಕುಟುಂಬಗಳಿಗೆ 5 ಲಕ್ಷ .ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಹಿಂದೂಗಳ ಔಷಧ ದೇವರು ಧನ್ವಂತರಿಯ ಜನ್ಮದಿನ ಹಾಗೂ 9ನೇ ಆಯುರ್ವೇದ ದಿನದಂದೇ ದೇಶದ ವೃದ್ಧರಿಗೆ ಮೋದಿ ಅವರು ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತನ್ಮೂಲಕ, ವಿಮಾ ಸೌಕರ್ಯದಿಂದ ವಂಚಿತರಾಗಿದ್ದ ಬಹುತೇಕ ಜನರಿಗೆ ರಕ್ಷಣೆ ಒದಗಿಸಿದ್ದಾರೆ. ಇದೇ ವೇಳೆ, 12850 ಕೋಟಿ ರೂ.ವೆಚ್ಚದ ಆರೋಗ್ಯ ಮೂಲಸೌಕರ್ಯ ಯೋಜನೆಗಳಿಗೂ ಪ್ರಧಾನಿ ಶಂಕುಸ್ಥಾಪನೆ ಅಥವಾ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಡಿ 5 ಲಕ್ಷ ರು.ನ…

Read More

ಕನ್ನಡ ರಾಜ್ಯೋತ್ಸವಕ್ಕೆ ಎರಡು ಧ್ವಜ, ಎರಡು ಕಂಬ – ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷರರಿಗೆ ಸಂಕಷ್ಟ – ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಆಗಿರುವುದರಿಂದ ಕನ್ನಡ ರಾಜ್ಯೋತ್ಸವ ಕಡ್ಡಾಯವಾಗಿ ಆಚರಣೆ NAMMUR EXPRESS NEWS ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನ ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾಗೂ ನಾಡ (ಕನ್ನಡ) ಧ್ವಜಾರೋಹಣವನ್ನು ಪ್ರತ್ಯೇಕ ಕಂಬಗಳಲ್ಲಿ ನೆರವೇರಿಸಬೇಕು ಎನ್ನುವ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ತುಂಬಿರುವ ಕಾರಣ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು. ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಲಾಗಿದೆ. ಅಂದು ಬೆಳಿಗ್ಗೆ 8.30ರಿಂದ 9 ರ ಒಳಗೆ ಧ್ವಜಾರೋಹಣ ಮಾಡಬೇಕು. ಮೊದಲು ರಾಷ್ಟ್ರಧ್ವಜಾರೋಹಣ, ನಂತರ ಕನ್ನಡ ಧ್ವಜಾರೋಹಣ ಮಾಡಬೇಕು. ರಾಷ್ಟ್ರಧ್ವಜಕ್ಕಿಂತ ಕನ್ನಡ ಧ್ವಜ ಐದು…

Read More

ಅಡಿಕೆ ದರ ಎಷ್ಟಿದೆ? – ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS ಸರಕು 57269-72000-87500 ಬೆಟ್ಟೆ 46100-54200-56429 ರಾಶಿ 43090-49500-50599 ಗೊರಬಲು 18269-31700-32529

Read More

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ – ಅಧ್ಯಕ್ಷರಾಗಿ ಯುವ ಮುಂದಾಳು ಪಣತ ಶ್ರೀಕಾಂತ್ ಉಪಾಧ್ಯಕ್ಷರಾಗಿ ಶ್ವೇತ ನವೀನ್ ಆಯ್ಕೆ – ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರಾಗಿ ಆಯ್ಕೆಯಾಗಿರುವವರಿಗೆ ಅಜಿತ್ ಅಣ್ಣುವಳ್ಳಿ ಶುಭ ಹಾರೈಕೆ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಯುವ ಮುಂದಾಳು ಪಣತ ಶ್ರೀಕಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ವೇತ ನವೀನ್, ಹಾಗೆಯೇ ಸದಸ್ಯರಾಗಿ ಮನೋಹರ್ ತೋಟದ ಮನೆ, ರಂಜಿತಾ ನವೀನ್, ಸಂಗೀತ ಅಜಿತ್ ಅಣ್ಣುವಳ್ಳಿ, ರಾಘವೇಂದ್ರ ಶಿರೂರು, ಮಂಜುನಾಥ್ ಕೋಳಿಗೆ, ಸುಕನ್ಯಾ ಪ್ರವೀಣ್, ಶಬ್ಬೀರ್, ಕಿಶೋರ್ ದೊಡ್ಡಿನ್ ಮನೆ, ಮಹೇಶ್, ಆಶಾ, ಸಾನಿಯಾ, ರೇವತಿ, ಸುಮಾ ವಿಜಯ್, ಯೋಗೇಂದ್ರ ಪಡುವಳ್ಳಿ, ಸುದರ್ಶಿನಿ ರಾಘವೇಂದ್ರ ಹಲಗೇರಿ, ಇವರುಗಳು ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ, ಆಯ್ಕೆಯಾದ ಎಲ್ಲರಿಗೂ ಮುಖ್ಯೋಪಾಧ್ಯಾಯರಾದ ಸುಮಾ ಹಾಗೂ ಎಲ್ಲ ಶಿಕ್ಷಕರು ಪೋಷಕರು…

Read More

ಕರಾವಳಿ ನ್ಯೂಸ್ – ಮಂಗಳೂರು: ಉಪಕರಣಗಳ ಸಹಿತ ಮೊಬೈಲ್‌ ಟವರ್‌ ಕಳವು – ಕುಂದಾಪುರ : ಮಗುವಿನ ಮೇಲೆ ಹಲ್ಲೆ; ತಾಯಿ,ಪ್ರಿಯಕರನಿಗೆ ನ್ಯಾಯಾಂಗ ಬಂಧನ! – ಅಜೆಕಾರ್: ಪತಿಯ ಹತ್ಯೆ, ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ NAMMUR EXPRESS NEWS ಮಂಗಳೂರು: ಮಂಗಳೂರು ತಾಲೂಕು ತಿರುವೈಲು ಗ್ರಾಮದಲ್ಲಿ ನಿರ್ಮಿಸಿದ್ದ ಮೊಬೈಲ್‌ ಟವರ್‌ ಅನ್ನು ಉಪಕರಣಗಳ ಸಹಿತ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮುಂಬಯಿಯ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಟಿ.ಎಲ್‌. ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿ ಲಿ.ನವರು ಮೊಬೈಲ್‌ ಟವರ್‌ ನಿರ್ಮಾಣ ಮಾಡಿದ್ದರು. ಇತ್ತೀಚೆಗೆ ಟವರ್‌ನ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಟೆಕ್ನೀಷಿಯನ್‌ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಮೊಬೈಲ್‌ ಟವರ್‌ ಮತ್ತು ಟವರ್‌ನ ಉಪಕರಣಗಳು ಸೇರಿದಂತೆ ಒಟ್ಟು ಸುಮಾರು 19 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ. * ಕುಂದಾಪುರ : ಮಗುವಿನ ಮೇಲೆ ಹಲ್ಲೆ;…

Read More

ದೀಪಾವಳಿಗೆ ಮಳೆ ಅಡ್ಡಿ! * ದೀಪಾವಳಿ ಅವಧಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ! * ಮುಂದಿನ ಏಳು ದಿನ ನಿರಂತರ ಮಳೆ? NAMMUR EXPRESS NEWS ಬೆಂಗಳೂರು: ದೀಪಾವಳಿ ಅವಧಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನವೆಂಬರ್ ಬಂದರೂ ಚಳಿಗಾಲ ಸದ್ಯಕ್ಕೆ ಇಲ್ಲ. ಕೆಲವು ರಾಜ್ಯಗಳಲ್ಲಿ ರಾತ್ರಿ ವೇಳೆ ವಾತಾವರಣ ತಂಪಾಗಿದ್ದರೂ, ಬಿಸಿಲಿನ ಅಬ್ಬರ ಜೋರಾಗಿರಲಿದೆ. ಅನೇಕ ರಾಜ್ಯಗಳಲ್ಲಿ ಮಳೆ ಎಚ್ಚರಿಕೆಯಿದ್ದು ದೀಪಾವಳಿ ಹಬ್ಬಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೆಹಲಿ, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಹವಾಮಾನ ಸದ್ಯ ಯೋಗ್ಯವಾಗಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗದದಲ್ಲೂ ಚಂಡಮಾರುತ ಇದೆ. * ಯಾವೆಲ್ಲ ರಾಜ್ಯದಲ್ಲಿ ಮಳೆ? ಅಕ್ಟೋಬರ್ 31ರಿಂದ ನವೆಂಬರ್ 1ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಕರಾವಳಿ ಲಕ್ಷದ್ವೀಪ ಮತ್ತು ದಕ್ಷಿಣ…

Read More

ದರ್ಶನ್ ಅವರಿಗೆ ಕೊನೆಗೂ ಸಿಕ್ತು ಜಾಮೀನು – ಬೇಲ್‌ ಸಿಕ್ರು ಬೆಂಗಳೂರಿಗೆ ಬರಲ್ಲ ದರ್ಶನ್‌..? – ನಟ ದರ್ಶನ್‌ ಗೆ ಅನಾರೋಗ್ಯದ ಹಿನ್ನೆಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು NAMMUR EXPRESS NEWS ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬಳ್ಳಾರಿ ಜೈಲಿನಲ್ಲಿ ವಿಲವಿಲ ಎನ್ನುವಂತಾಗಿದೆ. ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ಮೇಲೆ ನಟ ದರ್ಶನ್‌ಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾದಂತಹ ವಿಶ್ವಜೀತ್ ಶೆಟ್ಟಿ ಅವರ ಪೀಠದಲ್ಲಿ ನಡೆಯಿತು. ನಟ ದರ್ಶನ್ ಅವರ ಆರೋಗ್ಯದ ಕುರಿತು ದರ್ಶನ್‌ ಪರ ವಕೀಲರಾದ ಸಿ ವಿ ನಾಗೇಶ್ ಅವರು ವಾದ ಮಂಡಿಸಿದ್ದು, ಅನಾರೋಗ್ಯದ ಕಾರಣದಿಂದಾಗಿ ಮಧ್ಯಂತರ ಜಮೀನು ನೀಡುವಂತೆ ದರ್ಶನ್‌ ಪರ ವಕೀಲರಾದ ಸಿ ವಿ ನಾಗೇಶ್ ಕೇಳಿಕೊಂಡಿದ್ದು, ಮಧ್ಯಂತರ ಜಮೀನು ನೀಡಿದ್ರೆ, ದರ್ಶನ್‌ ಅವರು ಮೈಸೂರಿನಲ್ಲಿರುವ ರೀಗ್‌…

Read More

ಅಯೋಧ್ಯಾ ರಾಮಜನ್ಮಭೂಮಿಯಲ್ಲಿ ಮೊದಲ ವರ್ಷದ ದೀಪಾವಳಿಯ ಸಂಭ್ರಮ!! – ಎಷ್ಟು ಲಕ್ಷ ದೀಪಗಳು ಬೆಳಗಲಿವೆ ಗೊತ್ತಾ? – ಲಕ್ಷ ದೀಪೋತ್ಸವ ಆಚರಣೆಗೆ ಯೋಗಿ ಸರ್ಕಾರ ಸಿದ್ಧ! NAMMUR EXPRESS NEWS ದೆಹಲಿ: ಅಯೋಧ್ಯಾ ರಾಮಜನ್ಮಭೂಮಿಯಲ್ಲಿ ಮೊದಲ ವರ್ಷದ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ಸಿದ್ಧತೆಗಳು ಕೂಡ ಜೋರಾಗಿಯೇ ನಡೆದಿವೆ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗಾಗಿ ಐನೂರು ವರ್ಷಗಳ ಕಾಲ ಕಾಯ್ದಿದ್ದ ರಾಮಭಕ್ತರಿಗೀಗ ಸಂಭ್ರಮದ ಕಾಲ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾದ ಮೇಲೆ ಮೊದಲ ಬಾರಿ ರಾಮಮಂದಿರದಲ್ಲಿ ಆಚರಿಸಲಾಗುತ್ತಿರುವ ದೀಪಾವಳಿಯನ್ನು ಬೇರೆಯದ್ದೇ ಸಂಭ್ರಮದಲ್ಲಿ ಆಚರಿಸಲು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಿರಿಸಿದೆ.ಉತ್ತರಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೀಪಾವಳಿಯಂದು ಸರಯೂ ನದಿ ತೀರದಲ್ಲಿ ಹಿಂದೆಂದೂ ಕಾಣದ ದೀಪಗಳ ಬೆಳಕು ಹೊಮ್ಮಲಿದೆಯಂತೆ. ಯೋಗಿ ಸರ್ಕಾರ ಹೇಳುವ ಪ್ರಕಾರ ದೀಪಾವಳಿಯಂದು ಹೊಸ ಜಗತ್ತೇ ರಾಮಮಂದಿರದ ಅಂಗಳದಲ್ಲಿ ಹಾಗೂ ಸರಯೂ ನದಿ ತೀರದಲ್ಲಿ ಸೃಷ್ಟಿಯಾಗಲಿದೆಯಂತೆ ಸುಮಾರು 25 ರಿಂದ 28 ಲಕ್ಷ ದೀಪಗಳನ್ನು ಬೆಳಗಿ ಹೊಸ ದಾಖಲೆಯ…

Read More

ಆನ್ಲೈನ್ ಹೊಡೆತಕ್ಕೆ ದೇಶದಲ್ಲಿ ಒಂದೇ ವರ್ಷ 2 ಲಕ್ಷ ಕಿರಾಣಿ ಅಂಗಡಿ ಬಂದ್‌! – ಆನ್ಸೆನ್ ಶಾಪಿಂಗ್, ರಿಯಾಯಿತಿಗಳಿಗೆ ಜನ ಮರುಳು – ಸಣ್ಣ ವ್ಯಾಪಾರಿಗಳ ಮರೆಯಿತೇ ಸರ್ಕಾರ? NAMMUR EXPRESS NEWS ನವದೆಹಲಿ : ದೇಶದಲ್ಲಿ ಇ-ಕಾಮರ್ಸ್‌ ಸಂಸ್ಕೃತಿ ವೃದ್ಧಿಯಾಗಿ ಜನತೆ ಆನ್‌ಲೈನ್‌ ಶಾಪಿಂಗ್‌ ಕಡೆ ಮುಖ ಮಾಡುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ ಬೀಗ ಬಿದ್ದಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.4 ಲಕ್ಷಕ್ಕೂ ಅಧಿಕ ವಿತರಕರ ಸಂಘಟನೆಯಾಗಿರುವ ‘ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆದಾರರ ಸಂಘಟನೆ’ ನಡೆಸಿದ ಈ ಅಧ್ಯಯನ ದೇಶದಲ್ಲಿ ಇ-ಕಾಮರ್ಸ್‌ ಉದ್ಯಮ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಗೊಂಡ ಬಳಿಕ ನಡೆದ ಮೊದಲ ಸಮಗ್ರ ಅಧ್ಯಯನ ಎನ್ನಲಾಗಿದೆ. ಅಧ್ಯಯನ ವರದಿ ಅನ್ವಯ, ಮಹಾನಗರಗಳಲ್ಲಿ ಮಾಸಿಕ ಸರಾಸರಿ 5.5 ಲಕ್ಷ ರೂಪಾಯಿ ವಹಿವಾಟು ನಡೆಸುವ 17 ಲಕ್ಷ ಅಂಗಡಿಗಳಿದ್ದು, ಇವುಗಳಲ್ಲಿ ಶೇ.45ರಷ್ಟು ಮುಚ್ಚಿವೆ. ಅತ್ತ ಮಾಸಿಕ…

Read More