ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವವನ್ನು ತಪ್ಪಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತವೆ. ಇಂದು ಆರ್ಥಿಕ ಲಾಭದ ಸಾಧ್ಯತೆಗಳಿವೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ವ್ಯಾಪಾರ ಸುಧಾರಣೆಯಾಗಲಿದೆ. ಆದಾಯವೂ ಹೆಚ್ಚಲಿದೆ. ** ವೃಷಭ ರಾಶಿ : ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ, ಆದರೆ ಮನಸ್ಸು ಚಂಚಲವಾಗಬಹುದು. ತಾಳ್ಮೆಯಿಂದಿರಿ. ಶೈಕ್ಷಣಿಕ ಕೆಲಸಗಳತ್ತ ಗಮನ ಹರಿಸಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಬಗ್ಗೆ ಶಾಂತಿ…
Author: Nammur Express Admin
ನ್ಯಾಷನಲ್ ಗೋಲ್ಡ್ ಮಾಸಿಕ ಡ್ರಾ – ಬೆಂಗಳೂರು ನವ್ಯ ನಾಯ್ಕಗೆ 1 ಲಕ್ಷ ಬಹುಮಾನ – ಅನೇಕ ಗ್ರಾಹಕರಿಗೆ ವಿಶೇಷ ಬಹುಮಾನ NAMMUR EXPRESS NEWS ತೀರ್ಥಹಳ್ಳಿ: ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್‌ನ 15 ನೇ ವಾರ್ಷಿಕಾಚರಣೆಯ ಮಾಸಿಕ ಡ್ರಾ ಅಕ್ಟೋಬರ್ 25ರಂದು ಸಂಸ್ಥೆಯ ಶೋರೂಂನಲ್ಲಿ ಗ್ರಾಹಕರಾದ ರಂಜನ್, ಅಂಕಿತ ಶೆಟ್ಟಿ, ಅಲೀಮ್, ಹಬೀಬ್ ಅವರ ಸಮ್ಮುಖದಲ್ಲಿ ನೆರವೇರಿತು. ಸಂಸ್ಥೆಯ ಪಾಲುದಾರರಾದ ಮೊಯಿದ್ದೀನ್ ಕಬೀರ್, ಯೂಸುಫ್ ಹೈದರ್ ಇದ್ದರು. ಡ್ರಾ ವಿಜೇತರು: – ಪ್ರಥಮ ಬಹುಮಾನ: 1,00,000-ನಂ: 052185 ನವ್ಯ ಎಸ್.ನಾಯ್ಕ ಬೆಂಗಳೂರು – ದ್ವಿತೀಯ ಬಹುಮಾನ: 75,000 ನಂ: 045327 ಮೀರಾ, ಕೋಣಂದೂರು – ತೃತೀಯ ಬಹುಮಾನ : 50,000 ನಂ: 046476 ಆರೀಫಾ, ಚಿತ್ರದುರ್ಗ – 4ನೇ ಬಹುಮಾನ: 25,000 ನಂ: 053770 ಅರವಿಂದ್, ಕೊಪ್ಪ
ಕರಾವಳಿ ನ್ಯೂಸ್ – ಕಾಸರಗೋಡು: ದೀಪಾವಳಿ ಹಬ್ಬ ಮುನ್ನ,ಪಟಾಕಿ ಕಿಡಿಯಿಂದ 150ಕ್ಕೂ ಹೆಚ್ಚು ಮಂದಿ ಗಾಯ! – ಪುತ್ತೂರು: ಲವ್ ಜಿಹಾದ್ – ಸಮೀರ್’ಗೆ ಶಿಕ್ಷೆ ನೀಡುವಂತೆ, ಪತ್ರ ಕಾಣಿಕೆ ಹುಂಡಿಯಲ್ಲಿ ಪತ್ತೆ.!! – ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು NAMMUR EXPRESS NEWS ಕಾಸರಗೋಡು: ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ಕೆರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ದೇವಸ್ಥಾನವೊಂದರ ಉತ್ಸವ ವೇಳೆ ಕಳೆದ ಮಧ್ಯರಾತ್ರಿ ನಡೆದಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೇವಸ್ಥಾನದ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.…
ಕರಾವಳಿ ಟಾಪ್ ನ್ಯೂಸ್ – ರೈಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು!! – ಬಂಟ್ವಾಳ: ಬಸ್ಸಿನಲ್ಲಿ ಚಿನ್ನದ ಸರ ಕಳವು, ಮೂವರು ಕಳ್ಳಿಯರು ಅಂದರ್ – ಮಂಗಳೂರು: ಮಾದಕ ವಸ್ತು ಮಾರಾಟ – ಆರು ಮಂದಿ ಆರೋಪಿಗಳು ಅರೆಸ್ಟ್!! NAMMUR EXPRESS NEWS ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ಅವರು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅ. 28ರಂದು ತೀರ್ಪು ನೀಡಿದ್ದಾರೆ. ಬಂಟ್ವಾಳ ಬಿ. ಕಸಬಾ ಗ್ರಾಮ ನೆಹರೂ ನಗರದ ಅಬುತಾಹಿರ್ ಆಲಿಯಾಸ್ ಶಾಝಿಲ್(20) ಶಿಕ್ಷೆಗೊಳಗಾದ ಆರೋಪಿ. * ಬಂಟ್ವಾಳ: ಬಸ್ಸಿನಲ್ಲಿ ಚಿನ್ನದ ಸರ ಕಳವು, ಮೂವರು ಕಳ್ಳಿಯರು ಅಂದರ್ ಹರಿಪಾಡ್: ಬಸ್ ಹತ್ತುವಾಗ ಮಹಿಳೆಯ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮನ್ನರಸಲ…
ತುಂಗಾ ಕಲೋತ್ಸವದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ ಸಂಭ್ರಮ – ಸಾಂಸ್ಕೃತಿಕ ಸಂಗಮ ಏಕಪಾತ್ರಾಭಿನಯ, ಕಿರು ನಾಟಕದಲ್ಲಿ ಗೆಲುವು – ತೀರ್ಥಹಳ್ಳಿ ರೋಟರಿ ರಾಜ್ಯದಲ್ಲಿ ಬೆಸ್ಟ್ ಸಂಘಟನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ರೋಟರಿ ಜಿಲ್ಲೆ 3182 ಜೋನ್ 11 ಇದರ ವಾರ್ಷಿಕ ಸಾಂಸ್ಕೃತಿಕ ಮಿಲನ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಎರಡು ಪ್ರಥಮ ಬಹುಮಾನಗಳನ್ನು ಪಡೆದಿದೆ. ವಲಯ 11 ರಲ್ಲಿ , ಸೊರಬ, ಸಾಗರ ,ರಿಪ್ಪನ್ ಪೇಟೆ ,ಕೋಣಂದೂರು ಶಿವಮೊಗ್ಗ ಸೆಂಟ್ರಲ್, ಶಿವಮೊಗ್ಗ ಈಸ್ಟ್ ಮತ್ತು ತೀರ್ಥಹಳ್ಳಿ ರೋಟರಿ ಕ್ಲಬ್ ಒಳಗೊಂಡ “ಸಾಂಸ್ಕೃತಿಕ ಸಂಗಮ” ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ಕ್ಲಬ್ ಗೆ ಏಕಪಾತ್ರಭಿನಯ (ಮೋನೋ ಆಕ್ಟಿಂಗ್) ಹಾಗೂ ಕಿರು ನಾಟಕಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ. ಭಕ್ತ ಪ್ರಹಲ್ಲಾದನ ಕಥೆಯನ್ನೊಳಗೊಂಡ ಏಕಪಾತ್ರ ಅಭಿನಯಕ್ಕೆ ರೊ ರಾಘವೇಂದ್ರ ಆಚಾರ್ಯ ಗುಡ್ಡೇಕೊಪ್ಪ ಇವರಿಗೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ ,ಹಾಗೂ ತೀರ್ಥಹಳ್ಳಿಯ ರಂಗ ಕಲಾವಿದರೂ ನಟ ಮಿತ್ರರು…
ಟಾಪ್ ನ್ಯೂಸ್ ಮಲ್ನಾಡ್ – ಮೃತ ಆನೆ ದೇಹವನ್ನು ನೋಡಲು ಬಂದ ಆನೆಗಳು! – ಚಿಕ್ಕಮಗಳೂರು ಹೆಬ್ಬೆ ಅರಣ್ಯದಲ್ಲಿ ನಡೆದ ಘಟನೆ ಈಗ ವೈರಲ್ – ತೀರ್ಥಹಳ್ಳಿ: ಅಪಘಾತದಲ್ಲಿ ತಂದೆ ಸಾವು : ಮಗ ಗಂಭೀರ – ಶಿವಮೊಗ್ಗ : ಉದ್ಯೋಗ ಕೊಡಿಸುವುದಾಗಿ ಹೇಳಿ 58 ಲಕ್ಷ ವಂಚನೆ – ಹೊಸನಗರ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ರೂ.4.5 ನಷ್ಟ – ಶಿವಮೊಗ್ಗ: ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಶುರು NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌರಿಹಕ್ಕಲು ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ನಂಟೂರು ಗ್ರಾಮದ ನಿವಾಸಿ ರಘುರಾಮ್ (35) ಮೃತಪಟ್ಟವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಘುರಾಮ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ರಘುರಾಮ್ ಅವರ ಪುತ್ರ…
ಜಿಲ್ಲಾಮಟ್ಟದ ದಿಶಾ ಸಮಿತಿಗೆ ರಮೇಶ್ ಕೆ.ಎನ್ ಆಯ್ಕೆ! – ಆಯ್ಕೆಯಾಗಿರುವ ರಮೇಶ್ ಕೆ.ಎನ್ ಅವರಿಗೆ ಅಭಿನಂದನೆಗಳು! – ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆಯ್ಕೆ ಮಾಡಿರುವ ಲೋಕಸಭಾ ಸದಸ್ಯರಿಗೆ ಅಭಿನಂದನೆ!! NAMMUR EXPRESS NEWS ತೀರ್ಥಹಳ್ಳಿ: ಜಿಲ್ಲಾಮಟ್ಟದ ದಿಶಾ ಸಮಿತಿಗೆ ನಮ್ಮ ಹಣಗೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನು ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆಯ್ಕೆ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀಯುತ ಬಿ.ವೈ ರಾಘವೇಂದ್ರರವರಿಗೆ ಹಾಗೂ ನಮ್ಮ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹಸಚಿವರೂ ಆದ ಶ್ರೀಯುತ ಆರಗ ಜ್ಞಾನೇಂದ್ರರವರಿಗೆ ಹಣಗೆರೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ಹಾಗೂ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಹಣಗೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಮೇಶ್ ಕೆ.ಎನ್ ರವರಿಗೆ ಅಭಿನಂದನೆ ಹಾಗೂ ಶುಭಕೋರುವವರು ಹಣಗೆರೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಹಾಗೂ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು.
ಕರ್ನಾಟಕ ಟಾಪ್ ನ್ಯೂಸ್ – ಬಳ್ಳಾರಿ: ದರ್ಶನ್‌ಗೆ ಪಾರ್ಶ್ವವಾಯು ಆಗಬಹುದು: ವೈದ್ಯಕೀಯ ವರದಿ! – ಎಣ್ಣೆ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್ – ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ! NAMMUR EXPRESS NEWS ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ. 29ರಂದು ವಿಚಾರಣೆ ನಡೆಸಿದ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ನಟ ದರ್ಶನ್ ಅವರ ಬೆನ್ನು ನೋವಿನ ವರದಿಯನ್ನು ಸಲ್ಲಿಸಲಾಗಿದೆ. ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆಗೆ ವೈದ್ಯಕೀಯ ವರದಿಯಲ್ಲಿ ಸ್ಪೋಟಕ ವಿಷಯ ಬಹಿರಂಗವಾಗಿದೆ. ದರ್ಶನ್ ಅವರ ಬೆನ್ನು ಮೂಳೆಯ L5 ಹಾಗೂ S1 ನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಜೊತೆಗೆ ಬೆನ್ನಿನಲ್ಲಿಯೂ ಸಹ ಕಂಡುಬಂದಿದೆ. ಇದೆ ರೀತಿ ಮುಂದುವರೆದರೆ ನಟ ದರ್ಶನ್ ಅವರಿಗೆ ಪ್ಯಾಲಿಸಿಸ್ ಆಗುವ ಸಾಧ್ಯತೆ ಇದೆ.ಅ. 29ರಂದು ನಟ ದರ್ಶನ್ ಅವರ ಆರೋಗ್ಯದ ಕುರಿತು ವೈದ್ಯಕೀಯ…
ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ – ನ.1 ರಿಂದ ರಾಜ್ಯದ ಕೆಲವೆಡೆ ಮತ್ತೆ ಮಳೆ ಅಬ್ಬರಿಸುವ ಸಾಧ್ಯತೆ – ಯೆಲ್ಲೋ ಅಲರ್ಟ್ ಅನ್ನ ಹವಾಮಾನ ಇಲಾಖೆ ಪೋಷಣೆ NAMMUR EXPRESS NEWS ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ, ನ.1ರಿಂದ ರಾಜ್ಯದ ಕೆಲವೆಡೆ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. – ಎಲ್ಲೆಲ್ಲಿ ಮಳೆಯಾಗಲಿದೆ? ನ.1 ರಿಂದ ಎರಡು ದಿನ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು, ನ.2ರಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉಳಿದೆಡೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ರಾಜ್ಯದಲ್ಲಿ ವಾಡಿಕೆಗಿಂತಲು ಹೆಚ್ಚು ಮಳೆ : ಇನ್ನು, ಅ.1ರಿಂದ 28ರವರೆಗೆ ರಾಜ್ಯಾದ್ಯಂತ ವಾಡಿಕೆಗಿಂತಲು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 120 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 181 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.51 ಅಧಿಕ ವರ್ಷಧಾರೆಯಾಗಿದೆ.…
ಪುನೀತ್ ನೆನಪಿನ ದಿನ: ಮತ್ತೆ ಹುಟ್ಟಿ ಬನ್ನಿ ಅಪ್ಪು..! – ಪುನೀತ್ ನಿಧನರಾಗಿ ಇಂದಿಗೆ 3 ವರ್ಷ – ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಅಪ್ಪು ಜೀವಂತ NAMMUR EXPRESS NEWS ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಲೋಕೋಪಕಾರಿ, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅ. 29ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಸೇವಾ ಕಾರ್ಯಗಳು ಇಂದು ನೆನಪಾಗಿ ಉಳಿದಿದೆ. ಸದಾ ಹಸನ್ಮುಖಿಯಾಗಿ ಸಮಾಜಕ್ಕೆ ಒಳಿತು ನೀಡುವ ಚಿತ್ರಗಳ ಸಂದೇಶವನ್ನು ನೀಡುತ್ತಾ ಎಲ್ಲರ ನೆಚ್ಚಿನ ಮನೆಯ ಮಗನಾಗಿ ಹೊರಹೊಮ್ಮಿದ್ದರು. ಆದರೆ ವಿಧಿ ತಮ್ಮ 46ನೇ ವರ್ಷದಲ್ಲಿ ಕರೆದುಕೊಂಡಿತು. ಸಮಾಜ ಸೇವೆ ಮೂಲಕ ರಿಯಲ್ ಹೀರೋ! ಕೋಟ್ಯಾಂತರ ಕನ್ನಡಿಗರ ಆಸ್ತಿಯಾಗಿದ್ದ ಕರುನಾಡ ‘ಕಿರುನಗೆ’ ಕಣ್ಮರೆಯಾದರೂ ಅಪ್ಪು ಮೊಗದಲ್ಲಿನ ನಗು ಎಂದಿಗೂ ಶಾಶ್ವತ. ಕರುನಾಡಿಗೆ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ , ಕಟು ಸತ್ಯವಾದರು ಜನ ನಂಬಲು ಸಾಧ್ಯವಿರಲಿಲ್ಲ. ಆದರೆ ನಂಬದೇ…