Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? – ದೀಪಾವಳಿ ಮುನ್ನ ಹೇಗಿದೆ ನಿಮ್ಮ ಭವಿಷ್ಯ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಅನೇಕ ಯೋಜನೆಗಳ ಜವಾಬ್ದಾರಿಯನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನವಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಕೌಟುಂಬಿಕ…

Read More

ಭಾರತದ 10 ಶುದ್ಧ ಗಾಳಿ ನಗರಗಳಲ್ಲಿ ಕಾಫಿ ನಾಡಿಗೆ ಸ್ಥಾನ! – ಚಿಕ್ಕಮಗಳೂರಿಗೆ 8ನೇ ಸ್ಥಾನ: ಆದ್ರೂ ಮಾಲಿನ್ಯ ಹೆಚ್ಚಳ – ಪ್ರವಾಸೋದ್ಯಮದ ತವರು ಆತಂಕದತ್ತ..! NAMMUR EXPRESS NEWS ಚಿಕ್ಕಮಗಳೂರು: ಪ್ರಸ್ತುತ ಭಾರತ ದೇಶದ ಸಾಕಷ್ಟು ಪ್ರದೇಶಗಳು ವಾಯು ಮಾಲಿನ್ಯ ಕಲುಷಿತ ವಾತವರಣದ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಶುದ್ಧಗಾಳಿ ಮತ್ತು ಅತೀ ಕಲುಷಿತ ಗಾಳಿ ಹೊಂದಿರುವ ನಗರಗಳ ಪಟ್ಟಿಯನ್ನು ಭಾರತದ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ. ಅಕ್ಟೋಬರ್ 24ರ ಗುರುವಾರ ಶುದ್ಧ ಗಾಳಿಯನ್ನು ಹೊಂದಿರುವ ದೇಶದ 10 ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಮೂರು ಜಿಲ್ಲೆಗಳು ಸೇರಿವೆ, ಕಾಫಿನಾಡು ಚಿಕ್ಕಮಗಳೂರು ದೇಶದ ಶುದ್ಧ ಗಾಳಿಯ ನಗರಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ. ಚಿಕ್ಕಮಗಳೂರು (ಎಕ್ಯೂಐ) ಶುದ್ಧ ಗಾಳಿಯ ಗುಣಮಟ್ಟದ ಮೌಲ್ಯ 30ಅನ್ನು ಪಡೆದಿದೆ. ಹಾಗೆಯೇ ಕರ್ನಾಟಕದ ಚಿಕ್ಕಬಳ್ಳಾಪುರ 5ನೇ ಸ್ಥಾನದಲ್ಲಿ ಹಾಗು ಮಡಿಕೇರಿ ನಗರ 6ನೇ ಸ್ಥಾನದಲ್ಲಿ ಇದೆ. ಈ…

Read More

ಪಟಾಕಿ ಸಿಡಿಸಲು ಕೇವಲ 2 ಗಂಟೆ ಅವಕಾಶ?! * 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ, ಹೊಗೆ, ರಾಸಾಯನಿಕ ಪಟಾಕಿ ನಿಷೇಧ * ಪಟಾಕಿ ಸಿಡಿಸಲು ನಿಯಮ ಏನೇನು? NAMMUR EXPRESS NEWS ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸ್ತಿದೆ. ಸಂಭ್ರಮ-ಸಡಗರದಿಂದ ಹಬ್ಬ ಆಚರಿಸಲು ಭಾರೀ ತಯಾರಿ-ತಾಲೀಮು ನಡೆಯುತ್ತಿದೆ. ಪಟಾಕಿ ಹೊಡೆಯಲು ಯುವಕರು ಕಾತರದಿಂದ ಕಾಯ್ತಿದ್ದಾರೆ. ಈ ನಡುವೆ ಪಟಾಕಿ ಸಿಡಿಸಲು ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ಸಹ ಹೊರಡಿಸಿದೆ. ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಈಗಾಗಲೇ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಹೊಸ ಡ್ರೆಸ್ ಹಾಕಿ ಮಿಂಚೋಕೆ ಎಲ್ಲರೂ ತಯಾರಿ ನಡೆಸಿದ್ದಾರೆ. ಮಾತ್ರವಲ್ಲದೇ ಹಬ್ಬಕ್ಕೆ ಹಣತೆಗಳು ಸೇರಿದಂತೆ ತರಹೇವಾರಿ ಸಂಭ್ರಮ ದ್ವಿಗುಣಗೊಳಿಸುವಂತ ಎಲ್ಲ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇತ್ತ ಯುವಕರು ಪಟಾಕಿ ಸಿಡಿಸಲು ಕಾತರದಿಂದ ಕಾಯ್ತಿದ್ದಾರೆ. ಸರ್ಕಾರ ಈ ಸಂಭ್ರಮಕ್ಕೆ ಕೊಂಚ ಕಡಿವಾಣ ಹಾಕಿದೆ. ಪಟಾಕಿ ಸಿಡಿಸಲು ಗೈಡ್‌ಲೈನ್ಸ್ ಹೇಗಿದೆ? • ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ • ಪರಿಸರಕ್ಕೆ…

Read More

ಕರಾವಳಿ ಟಾಪ್ ನ್ಯೂಸ್ ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ – ಜಬ್ಬಾರ್ ಅರೆಸ್ಟ್.! * ಪುತ್ತೂರು: 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಪ್ರಕರಣ! * ಪುತ್ತೂರು : ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ! NAMMUR EXPRESS NEWS ಉಡುಪಿ : ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್‌ಶಿಪ್ ಬಳಿ ಬಂಧಿಸಿದ್ದಾರೆ.ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಬಂಧಿತ ಆರೋಪಿ. ಈತನಿಂದ ಒಟ್ಟು 3,04,610ರೂ. ಮೌಲ್ಯದ 2 ಕೆ.ಜಿ 344 ಗ್ರಾಂ ಗಾಂಜಾ, ಸ್ಕೂಟರ್, 5810 ರೂ. ನಗದು, ಮೊಬೈಲ್ ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಪನಿರೀಕ್ಷಕ ಪವನ್ ನಾಯಕ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್‌ ರಾಜ್ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿದೆ.…

Read More

ಹೊದಲ ಗ್ರಾಪಂ ಸದಸ್ಯರ ಹೇಳಿಕೆಗೆ ಸತೀಶ್, ನಿಶ್ಚಿತಾ ಪತ್ರಿಕಾ ಹೇಳಿಕೆ – ಅನಿತಾ ಶ್ರೀಧರ್‌ರವರು ಹಣ ಮತ್ತು ಅಧಿಕಾರದ ಆಸೆಗೆ ಪಕ್ಷ ಬದಲಾವಣೆ – ಮನೆ ವಂಚಿತರಿಗೆ ಮನೆ ಕೊಡಿಸುವ ಕೆಲಸ ಹಾಗೂ ಅಭಿವೃದ್ಧಿ ಬಗ್ಗೆ ವಿನಾಯಕ ತುಪ್ಪದಮನೆ ಚರ್ಚೆ ಮಾಡಿದ್ದಾರೆ NAMMUR EXPRESS NEWS ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕರವರು ಎಲ್ಲೂ ಕೂಡ ವೈಯಕ್ತಿಕವಾಗಿ ಅನುದಾನ ಅಥವಾ ಕಾರ್ಯಕ್ರಮವನ್ನು ಕೇಳಲಿಲ್ಲ. ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಅನುದಾನಗಳನ್ನು ಮತ್ತು ಕಾರ್ಯಕ್ರಮಗಳನ್ನು ಕೇಳಿರುವುದು. ನಮ್ಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಈ ಹಕ್ಕು ಇದೆ ಎಂದು ಭಾವಿಸಿರುತ್ತೇನೆ. ಕಾಂಗ್ರೆಸ್ ಪಕ್ಷದ ವಿಚಾರದ ಬಗ್ಗೆ ನಮ್ಮ ನಾಯಕರುಗಳು ನೋಡಿಕೊಳ್ಳುತ್ತಾರೆ. ಒಂದು ಕಡೆ ವಿನಾಯಕರವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಬೆಂಬಲಿಸಿದ್ದರು ಎನ್ನುತ್ತೀರಿ. ಇನ್ನೊಂದು ಕಡೆ ಮೋದಿಯವರನ್ನು ಟೀಕಿಸಿರುತ್ತಾರೆ ಎನ್ನುತ್ತೀರಿ. ಮೋದಿಯವರನ್ನು ಟೀಕಿಸುವವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತಾರಾ ಎಂಬ ಸಾಮಾನ್ಯ ಜ್ಞಾನವು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್‌ರವರಿಗೆ ಇಲ್ಲದೆ ಗೊಂದಲದಲ್ಲಿ…

Read More

ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡಮ್ಮನ ರಥಯಾತ್ರೆ – 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಚಾರ – ಕನ್ನಡ ಹಬ್ಬದ ಸಂಭ್ರಮಕ್ಕೆ ತೀರ್ಥಹಳ್ಳಿಯಲ್ಲಿ ಅದ್ದೂರಿ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಜ್ಯೋತಿ ತೀರ್ಥಹಳ್ಳಿಗೆ ಆಗಮಿಸಿದ್ದು, ಅದ್ದೂರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಸ್ವಾಗತಿಸಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಡಿಸೆಂಬರ್ 20 21 22 ಮೂರು ದಿನಗಳ ಕಾಲ ನಡೆಯಲಿದೆ.ಇದು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವಾಗಿದ್ದು, ಇದರ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಉಂಗುರವನ್ನು ಹೊತ್ತಂತಹ ಕನ್ನಡ ಜ್ಯೋತಿಯ ರಥ ಅಕ್ಟೋಬರ್ 27ರಂದು ದಾವಣಗೆರೆ ಜಿಲ್ಲೆಯ ಮೂಲಕ ಶಿಕಾರಿಪುರಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರು ಸ್ವಾಗತವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದರು ಕೂಡ ಭಾಗಿಯಾಗಿದ್ದು ಅಕ್ಟೋಬರ್ 27ರಂದು ಸಾಗರದಲ್ಲಿ ಸಂಜೆ ಅದ್ದೂರಿಯಾಗಿ ಬರಮಾಡಿಕೊಂಡರು. ತೀರ್ಥಹಳ್ಳಿಯಲ್ಲಿ ಶಾಸಕರು, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿಯ…

Read More

ಈಡಿಗ ಹಾಗೂ 26 ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ – ಅ.25ರಿಂದ ಅರ್ಜಿ ಅಹ್ವಾನ: ನೀವೂ ಅರ್ಜಿ ಹಾಕಬಹುದು – ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವವರಿಗೆ ಅವಕಾಶ NAMMUR EXPRESS NEWS ಶ್ರೀ. ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ (JPNP) ವತಿಯಿಂದ 2024- 2025ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಮತ್ತು B.Ed ವ್ಯಾಸಂಗ ಮಾಡುತ್ತಿರುವ ಆರ್ಯ ಈಡಿಗ ಮತ್ತು 26 ಪಂಗಡಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 25ನೇ ಅಕ್ಟೋಬರ್ 2024 ರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೆಬ್ಸೈಟ್ ಮೂಲಕ ಆನ್ ‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10ನೇ ನವೆಂಬರ್ 2024. ವೆಬ್ಸೈಟ್ ವಿಳಾಸ Jpnp.org.in ಆದಷ್ಟು ಕರ್ನಾಟಕದ ಎಲ್ಲಾ ಮೂಲೆ ಮೂಲೆಯಲ್ಲಿ ಇರುವ ಕಟ್ಟ ಕಡೆಯ ಅರ್ಹ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನ ತಲುಪಿಸುವ ಗುರಿ ಹೊಂದಲಾಗಿದೆ. ಶಿವು ಹೊದಲ ಸಂಚಾಲಕರು ಶ್ರೀ J P ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು.…

Read More

ಮಲೆನಾಡಲ್ಲಿ ತಾರಕಕ್ಕೇರಿದ ಭೂ ಸಂಘರ್ಷ! – ಅರಣ್ಯ ಜಮೀನು ಸರ್ವೆ ಆರಂಭ: ರೈತರ ಬದುಕಲ್ಲಿ ತಲ್ಲಣ – ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಠಿಣ ನಿಯಮ ಜಾರಿ? NAMMUR EXPRESS NEWS ಶಿವಮೊಗ್ಗ : ಹಲವು ವರ್ಷಗಳ ಅರಣ್ಯ ಜಮೀನು ಸಾಗುವಳಿ ಪ್ರದೇಶದಿಂದ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಇದೀಗ ಕಟ್ಟುನಿಟ್ಟಾಗಿ ಭೂ ಸರ್ವೆ ಕಾರ್ಯಾಚರಣೆ ಆರಂಭಿಸಿದೆ. ಒತ್ತುವರಿ ಪ್ರದೇಶವನ್ನು ನಿಖರವಾಗಿ ಗುರುತಿಸಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕೃತವಾಗಿ ಕಾನೂನು ಕ್ರಮಕ್ಕೆ ಹಾಕಿದೆ. ಆರಂಭದಲ್ಲಿ ಅರಣ್ಯ ಇಲಾಖೆ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿ ಭೂ ಸರ್ವೆ ಆರಂಭಿಸಿದೆ. ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರದ ಬಿಗಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಸರ್ವೆ ಕಾರ‍್ಯಕ್ಕೆ ತ್ವರಿತ ಚಾಲನೆ ನೀಡಿದೆ. ಸರ್ವೆ ಕಾರ‍್ಯಕ್ಕೆ ರೈತರು, ಅರಣ್ಯ ವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮದ ಕಾಡಿಗೆ ಅರಣ್ಯ ಇಲಾಖೆ ಕಾವಲು ಬೇಡ ಎಂದು ಸಭೆ ಸೇರಿ ನಿರ್ಣಯಿಸುವ ಹಂತಕ್ಕೆ ರೈತರು ಮುಂದಾಗಿದ್ದು…

Read More

ಕೆಸುವಿನ ಎಲೆಗೆ ಈಗ ವಿದೇಶದಲ್ಲೂ ಡಿಮ್ಯಾಂಡ್! – ಮಲೆನಾಡು ಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ತಿನಿಸು – ಕೆಸುವಿನ ಎಲೆ, ಗೆಡ್ಡೆಗಳಿಗೆ ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಬೇಡಿಕೆ – ಆರೋಗ್ಯದ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲೂ ಕೂಡ ಪ್ರಸಿದ್ಧಿ NAMMUR EXPRESS NEWS ಕೆಸುವಿನ ಎಲೆ ಎಲ್ಲರಿಗೂ ಕೂಡ ಚಿರಪರಿಚಿತ. ಎಲ್ಲಾ ಜನರೂ ಕೂಡ ಹೆಚ್ಚಾಗಿ ಕೆಸುವಿನ ಎಲೆಯ ವಿವಿಧ ಅಡುಗೆ ಮಾಡುತ್ತಲೇ ಇರುತ್ತಾರೆ. ಮಳೆಗಾಲದಲ್ಲಂತೂ ಈ ಎಲೆಯ ಅಡುಗೆ ಹೆಚ್ಚಾಗಿರುತ್ತೆ. ಈ ಎಲೆ ತಿನ್ನೋದರಿಂದ ತುಂಬಾನೆ ಪ್ರಯೋಜನಗಳಿವೆ. ಗ್ರಾಮೀಣ ಭಾಗದಲ್ಲಂತೂ ಕೂಡ ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಋತುವಿರಲಿ ಎಲ್ಲಾ ಸಮಯದಲ್ಲೂ ಕೂಡ ಕೆಸುವಿನ ಎಲೆಯ ಪಲ್ಯವನ್ನು ಮಾಡುತ್ತಾರೆ,ಇದು ತುಂಬಾ ರುಚಿಯಾದದ್ದು ಮತ್ತು ಆರೋಗ್ಯಕ್ಕೂ ತುಂಬಾ ಒಳಿತು. ಕೆಸುವಿನ‌ ಸೊಪ್ಪಿನ ರುಚಿಯು ಇತರೆ ಸೊಪ್ಪು ಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಹಸಿ ಸೊಪ್ಪುನ್ನ ಯಾರೂ ಕೂಡ ಸೇವಿಸುವುದಿಲ್ಲ ಏಕೆಂದರೆ ತಿಂದರೆ ಗಂಟಲು ಕೆರತ ಉಂಟುಗುತ್ತದೆ. ಜೊತೆಗೆ ಇದರಿಂದ ಬರುವ ರಸವು ಕೂಡಾ ಮೈ…

Read More