Author: Nammur Express Admin

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್! – ಗೃಹಲಕ್ಷ್ಮೀ ನೋಂದಣಿಗೆ ಎಸ್.ಎಂ.ಎಸ್ ಕಾಯಬೇಕಾಗಿಲ್ಲ – ಎಸ್‌ಎಂಎಸ್‌ ಇಲ್ಲದೇ ನೋಂದಣಿ ಮಾಡಲು ಅವಕಾಶ NAMMUR EXPRESS NEWS ಬೆಂಗಳೂರು: ಸರ್ಕಾರ ಪ್ರತೀ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಇಷ್ಟು ದಿನ ಎಸ್‌ಎಂಎಸ್‌ಗಾಗಿ ಕಾಯಬೇಕಾಗಿತ್ತು. ಆದರೆ ರಾಜ್ಯ ಸರಕಾರ ಹೊಸ ರೂಲ್ಸ್‌ ಜಾರಿಗೆ ತಂದಿದ್ದು, ಎಸ್‌ಎಂಎಸ್‌ ಇಲ್ಲದೇ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ. ಗೃಹಲಕ್ಷ್ಮೀ ಯೋಜನೆ ರಾಜ್ಯದಲ್ಲಿ ಈಗಾಗಲೇ ಜಾರಿಗೆ ಬಂದಿದೆ. ರೇಷನ್‌ ಕಾರ್ಡ್‌ನಲ್ಲಿ ಮನೆಯೊಡತಿ ಎಂದು ನಮೂದಾಗಿರುವ ಮಹಿಳೆಯ ಬ್ಯಾಂಕ್‌ ಖಾತೆಗೆ ರಾಜ್ಯ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ 2000 ರೂಪಾಯಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಿದೆ. ಇಷ್ಟು ದಿನ ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಬಂದ ನಂತರವಷ್ಟೇ ಯೋಜನೆಗೆ ನೋಂದಣಿ ಮಾಡಲು ಅವಕಾಶವಿತ್ತು. ಆದ್ರೀಗ ಹೊಸ ನಿಯಮದ ಪ್ರಕಾರ ಎಲ್ಲರೂ ನೇರವಾಗಿ ತಮಗೆ…

Read More

ಉಡುಪಿಯ ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ : ಕೇಸ್! – ಮೂವರು ವಿದ್ಯಾರ್ಥಿನಿಯರಿಂದ ಚಿತ್ರೀಕರಣ – ಸ್ವಯಂ ಪ್ರೇರಿತ ಕೇಸ್!.. ವಿಡಿಯೋ ಹುಚ್ಚು ತಂದ ಸಂಕಟ! NAMMUR EXPRESS NEWS ಉಡುಪಿ: ಉಡುಪಿ ನಗರದ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಘಟನೆಗೆ ಸಂಬಂಧಪಟ್ಟಂತೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ಈಗ ಭಾರೀ ಸದ್ದು ಮಾಡಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ವಿಡಿಯೋ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫಿಯಾ, ಅಲೀಮಾ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ ಡಿಲಿಟ್ ಆದ ಬಗ್ಗೆ ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜು ಆಡಳಿತ ಮಂಡಳಿಯವರ ವಿರುದ್ಧ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಕೃತ್ಯ, ವ್ಯಕ್ತಿಯ ಖಾಸಗಿ ಚಿತ್ರವನ್ನು ಚಿತ್ರೀಕರಿಸುವ ಕೃತ್ಯ, ಮಾಹಿತಿಯನ್ನು ಮತ್ತು ದಸ್ತಾವೇಜನ್ನು ಹಾಜರುಪಡಿಸಲು ತಪ್ಪುವ ಕೃತ್ಯದ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ…

Read More

ಎಟಿಎಂ ಕಳ್ಳತನಕ್ಕೆ ಜೆಸಿಬಿಯನ್ನೇ ತಂದ! – ಹಣದ ಮಿಷನನ್ನೇ ಎತ್ತಿಕೊಂಡು ಹೋಗುವ ವಿಫಲ ಯತ್ನ – ಶಿವಮೊಗ್ಗ ಎಟಿಎಂನಲ್ಲಿ ನಡೆದ ಘಟನೆ: ಭಲೇ ಕಳ್ಳ! NAMMUR EXPRESS NEWS ಶಿವಮೊಗ್ಗ: ಏಟಿಎಂ ಕದಿಯೋದನ್ನು ನೋಡಿದ್ದೇವೆ… ಕೇಳಿದ್ದೇವೆ.. ಆದರೆ ಇಲ್ಲೊಬ್ಬ ಏಟಿಎಂ ಕಡಿಯಲು ಜೆಸಿಬಿಯನ್ನೇ ತಂದ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಎಟಿಎಂನಲ್ಲಿರುವ ಹಣದ ಮಿಷಿನ್ ಅನ್ನು ಜೆಸಿಬಿಯಿಂದ ಎತ್ತಿಕೊಂಡು ಹೋಗುವ ವಿಫಲ ಯತ್ನ ನಡೆದಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ವಿನೋಬನಗರ ಇಂದಿರಾ ಕ್ಯಾಂಟೀನ್ ಮುಂಭಾಗದ ಪೆಟ್ರೋಲ್ ಬಂಕ್ ಬಳಿ ಜೆಸಿಬಿ ನಿಲ್ಲಿಸಲಾಗಿತ್ತು. ಅನಾಥವಾಗಿ ನಿಂತಿದ್ದ ಜೆಸಿಬಿಯನ್ನ ಚಲಾಯಿಸಿಕೊಂಡು ಬಂದ ಅಪರಿಚತ ವ್ಯಕ್ತಿ ಶಿವಾಲಯದ ಬಳಿಯ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ತಂದು ನಿಲ್ಲಿಸಿದ್ದಾನೆ. ಏಟಿಎಂ ಶೆಟರ್ ಅನ್ನು ಜೆಸಿಬಿಯಿಂದಲೇ ಎತ್ತಿದ್ದಾನೆ. ಎಟಿಎಂ ಮಿಷನ್ ಕೀಳಲು ಸಿದ್ಧ ಮಾಡಿಕೊಂಡ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಬರುವುದನ್ನ ಕಂಡು ಜೆಸಿಬಿ ಬಿಟ್ಟು ಪರಾರಿಯಾಗಿದ್ದಾನೆ. ಜೆಸಿಬಿಯನ್ನು ವಿನೋಬ ನಗರ ಠಾಣೆಗೆ ತಂದಿಡಲಾಗಿದೆ. ಎಟಿಎಂಗೆ ಭದ್ರತಾ ಸಿಬ್ಬಂದಿಗಳನ್ನ…

Read More

ಕರಾವಳಿಯಲ್ಲಿ ಪುತ್ತಿಲ ಪರಿವಾರದ ಸದ್ದು! – ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು – ಆರ್ಯಾಪು ಮರು ಚುಣಾವಣೆಯಲ್ಲಿ ಪುತ್ತಿಲ ಪರಿವಾರ್ ಬೆಂಬಲಿತ ಅಭ್ಯರ್ಥಿ ಜಯಭೇರಿ NAMMUR EXPRESS NEWS ಪುತ್ತೂರು: ರಾಜಕಾರಣ ಏನು ಬೇಕಾದ್ರೂ ಆಗಬಹುದು ಎಂಬುದಕ್ಕೆ ಪುತ್ತೂರು ನಿದರ್ಶನ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧೆ ಮಾಡಿ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಅರುಣ್ ಪುತ್ತಿಲ ಅವರ ಪುತ್ತಿಲ ಪರಿವಾರ ಈಗ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಕಾಡೆ ಮಲಗಿಸಿದ ಪುತ್ತಿಲ ಪರಿವಾರ್ ಪುತ್ತಿಲ ಪರಿವಾರ್ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸುವ ಮೂಲಕ ಪುತ್ತೂರು ತಾಲೂಕಿನಲ್ಲಿ ಪುತ್ತಿಲ ಪರಿವಾರಕ್ಕೆ ಮೊದಲ ಜಯವನ್ನು ತಂದುಕೊಟ್ಟಿದ್ದಾರೆ. ವಾರ್ಡ್‌ ನಂ-2 ಹಿಂದುಳಿದ ವರ್ಗ-ಎ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯ ದಿವಂಗತ ರುಕ್ಕಯ್ಯ ಮೂಲ್ಯರವರ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಒಟ್ಟು 1237 ಮತಗಳ ಪೈಕಿ 999 ಮತಗಳು…

Read More

ಕಾರ್ಗಿಲ್ ಯುದ್ಧ ನಡೆದಿದ್ದು ಹೇಗೆ..? – ಕಾರ್ಗಿಲ್ ವಿಜಯ್ ಯಾತ್ರೆಯಲ್ಲಿ ಪಾಕ್ ಮಾಡಿದ್ದೇನು? – ದೇಶಕ್ಕಾಗಿ ಜೀವ ಕೊಟ್ಟ 527 ಸೈನಿಕರು ಹುತಾತ್ಮರಾಗಿದ್ದು ಹೇಗೆ..? NAMMUR EXPRESS NEWS – ವಿಶೇಷ ವರದಿ: ಮನಿಷಾ ನವದೆಹಲಿ : ದೇಶದ ಗಡಿ ಭಾಗದಲ್ಲಿ ತಮ್ಮಪ್ರಾಣದ ಹಂಗು ತೊರೆದು ದೇಶಕ್ಕಾಗಿ ತಮ್ಮ ಜೀವ ಬಲಿಕೊಟ್ಟ ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಅಧ್ಯಾಯವಾಗಿ ನಿಂತಿದೆ. ರಾಷ್ಟ್ರದ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ, ಜುಲೈ 26 ರಂದು, ಭಾರತವು ಈ ವಿಜಯವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಸ್ಮರಿಸುತ್ತದೆ. ಏನಿದು ಕಾರ್ಗಿಲ್ ವಿಜಯ್ ದಿವಸ್! ಭಾರತ ಶಾಂತಿ ಪ್ರಿಯ ದೇಶ. ತಾನಾಗಿ ತಾನು ಯಾರ ಮೇಲು ದಾಳಿ ಮಾಡಿದ ಇತಿಹಾಸ ಇಲ್ಲ. ಆದ್ರೆ ವಿನಾಕಾರಣ ಯುದ್ದ ಮಾಡಲು ಬಂದ್ರೆ ಹಿಡಿಮುಡಿ ಕಟ್ಟಿರುವ ಇತಿಹಾಸವೇ ಹೆಚ್ಚು. ಅದರಲ್ಲಿ…

Read More

ಬರಲಿದ್ದಾರೆ ರೋಬೋಟ್ ಟೀಚರ್! – ಶಿಕ್ಷಕರ ಕೆಲಸಕ್ಕೂ ಬೀಳುತ್ತೆ ಇನ್ಮುಂದೆ ಕತ್ತರಿ!? – ಎಐಗಳೇ ಮಕ್ಕಳಿಗೆ ಓದಲು, ಬರೆಯಲು ಹೇಳಿಕೊಡುತ್ತೆ – ಮೀಡಿಯಾ ಕ್ಷೇತ್ರದ ಬಳಿಕ ಈಗ ಶಿಕ್ಷಣ ಕ್ಷೇತ್ರ NAMMUR EXPRESS NEWS ವಾಷಿಂಗ್ಟನ್‌ ಡಿಸಿ :ಕೃತಕ ಬುದ್ದಿಮತ್ತೆ ಅಥವಾ ಎಐ ಹಲವು ವೃತ್ತಿಗಳಲ್ಲಿ ತನ್ನ ಪ್ರಭಾವ ಬೀರುತ್ತಿದ್ದು, ಅನೇಕ ಜನರ ಕೆಲಸವನ್ನೇ ಕಿತ್ತುಕೊಳ್ಳುತ್ತಿದೆ. ಇನ್ಮುಂದೆ ಕೃತಕ ಬುದ್ಧಿಮತ್ತೆಗಳು ಶಿಕ್ಷರ ವೃತ್ತಿಯನ್ನೂ ಕಸಿದುಕೊಳ್ಳುತ್ತವೆ ಎನ್ನಲಾಗಿದೆ. ಬಿಲಿಯನೇರ್ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸ್ಯಾನ್ ಡಿಯಾಗೋದಲ್ಲಿ ಮಂಗಳವಾರ ನಡೆದ ASU+GSV ಶೃಂಗಸಭೆಯಲ್ಲಿ ಮುಖ್ಯ ಭಾಷಣದಲ್ಲಿ AI ಚಾಟ್‌ಬಾಟ್‌ಗಳು 18 ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಓದಲು ಮತ್ತು ಬರವಣಿಗೆಯ ಕೌಶಲ್ಯ ಕಲಿಸಿಕೊಡಲು ಮಕ್ಕಳಿಗೆ ಸಹಾಯ ಮಾಡಬಹುದು ಎಂದು ಹೇಳಿದರು. “AI ಗಳು ಆ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ, ಯಾವುದೇ ಮಾನವರು ಎಂದಿಗೂ ಸಾಧ್ಯವಾಗದಷ್ಟು ಉತ್ತಮ ಬೋಧಕರಾಗುತ್ತಾರೆ’’ ಎಂದೂ ಅವರು ಹೇಳಿದ್ದಾರೆ. AI ಚಾಟ್‌ಬಾಟ್‌ಗಳಿಂದ ನಂಬಲಾಗದಷ್ಟು ಪ್ರಭಾವಿತರಾಗಿರುವ ಬಿಲ್‌ ಗೇಟ್ಸ್‌, ತಂತ್ರಜ್ಞಾನವು ಹಿಂದೆಂದೂ ಸಾಧ್ಯವಾಗದ…

Read More

ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ.? – ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್ – ಗೃಹ ಲಕ್ಷ್ಮೀ ಯೋಜನೆಗೆ ಯಜಮಾನಿ ನಮೂದು ಕಡ್ಡಾಯ NAMMUR EXPRESS NEWS ಬೆಂಗಳೂರು: ರಾಜ್ಯ ಸರ್ಕಾರ ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ರೂ. ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದು ದಾಖಲಾಗಿರಬೇಕು. ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಅವರಲ್ಲಿ 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಇದ್ದಾರೆ. ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ. ಕೂಡಲೇ ನೀವು ಕೂಡ ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ರೇಷನ್‌ ಕಾರ್ಡ್‌ಲ್ಲಿ ಮುಖ್ಯಸ್ಥರ ಹೆಸರು ಬದಲಾವಣೆಗೆ ಏನು ಮಾಡಬೇಕು ಇಲ್ಲಿದೆ ಡೀಟೇಲ್ಸ್ ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.  ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು…

Read More

ರಸ್ತೆ ಬದಿಯಲ್ಲಿ ನೋಟಿನ ಕಂತೆ ಕಂತೆ! – ರಾಜಧಾನಿಯ ಕನಕಪುರ ರಸ್ತೆಯಲ್ಲಿ ಘಟನೆ – 2000 ನೋಟು ಬದಲಾವಣೆಗೆ ಗಡುವು ವಿಸ್ತರಣೆ ಇಲ್ಲ – ಅಧಿಕಾರಿಗಳಿಗೆ ಹೆದರಿ ನೋಟುಗಳನ್ನೇ ನುಂಗಿದ ಭೂಪ! NAMMUR EXPRESS NEWS ಬೆಂಗಳೂರು: ರಸ್ತೆ ಬದಿಯಲ್ಲಿ ಎರಡು ಸಾವಿರ ಮುಖಬೆಲೆಯ ನೋಟಿನ ಕಂತೆಗಳು ಪತ್ತೆಯಾದ ಘಟನೆ ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ನಡೆದಿದೆ. 2,000 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ವಾಪಸ್ ಪಡೆದಿದೆ. ಸೆ.30ರ ತನಕ ನೋಟುಗಳನ್ನು ಬ್ಯಾಂಕಿನಲ್ಲಿ ಬದಲಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ನೋಟು ಎಸೆದವರು ಯಾರು ಎಂಬುವುದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 2000 ನೋಟು ಬದಲಾವಣೆಗೆ ಗಡುವು ವಿಸ್ತರಣೆ ಇಲ್ಲ ಈ ವರ್ಷ ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳ…

Read More

ಕರಾವಳಿ ಶಾಲೆ-ಕಾಲೇಜುಗಳಿಗೆ ಮುಂದುವರಿದ ರಜೆ! – ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜಿಗೆ ರಜೆ – ದಿನ ದಿನವೂ ಹೆಚ್ಚಾಗುತ್ತಿರುವ ಮಳೆ ಅಬ್ಬರ – ಬರಲಾಗದ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ NAMMUR EXPRESS NEWS ಉಡುಪಿ/ ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಬುಧವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಜಿಲ್ಲಾಧಿಕಾರಿಕಾರಿಗಳು ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ಕಳೆದ ಎರಡು ದಿನಗಳಿಂದಲೂ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಉಡುಪಿ ತಾಲೂಕುಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 28ರ ವರೆಗೆ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.…

Read More

ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದವ ಸಾವು! – ಟ್ರ್ಯಾಕ್ಟರ್ ಪಲ್ಟಿಯಾಗಿ ಹೊಲದಲ್ಲೇ ರೈತ ಮರಣ – ಮಂಗಳೂರಲ್ಲಿ ಅಪಘಾತ: ಜೀವಾಪಾಯದಿಂದ ಪಾರು – ಕಾಡು ಹಂದಿಯನ್ನು ಬೇಟೆ: 7 ಮಂದಿ ಅರೆಸ್ಟ್! NAMMUR EXPRESS NEWS ಚಾಮರಾಜನಗರ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಿದ್ದರಾಜು (40)ಎಂಬಾತ ಜುಲೈ 23ರಂದು ರಾತ್ರಿ ಕುಡಿದ ಮತ್ತಿನಲ್ಲಿ ನೀರು ಎಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್‌ಗೆ ಬಳಸುವ ಆ್ಯಸಿಡ್ ಕುಡಿದಿದ್ದಾನೆ. ಬಳಿಕ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಜುನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಜುಲೈ 24 ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು! ಮಾವು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ನಡೆದಿದೆ. ಇಂದಿರಾನಗರ ನಿವಾಸಿ ಶಫಿ(35) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ…

Read More