ಅರಳಸುರಳಿಯ ಅನುಷಾ ಚಿನ್ನದ ಪದಕ ಬೇಟೆ! – ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ – ರಚನಾ ರಾಜೇಶ ನಾಯಕ್ ಗೆ ಮೊದಲ ರ‌್ಯಾಂಕ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಅರಳಸುರಳಿಯ ಅನುಷಾ ಎ.ಜಿ ಇವರು 2022-2023ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದವರು ನಡೆಸಿದ ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಜಾನಪದ ಸಾಹಿತ್ಯದಲ್ಲಿ ಅತೀ ಹೆಚ್ಚು ಅಂಕಗಳಿಸಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. 33ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ರಾಜ್ಯ ರಾಜ್ಯಪಾಲರಿಂದ ಎರಡು ಸ್ವರ್ಣ ಪದಕಗಳನ್ನು ನೀಡಿ ಗೌರವಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಗುಡ್ಡಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿಯಾಗಿದ್ದಾರೆ. ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಥಮ ರ್‍ಯಾಂಕ್ ಪಡೆದು ಕೊಡಚಾದ್ರಿ ಕಾಲೇಜಿಗೆ ಈ ಹಿಂದೆ ಕೀರ್ತಿ ತಂದಿದ್ದರು. ರಚನಾ ರಾಜೇಶ ನಾಯಕ್ ಗೆ ಮೊದಲ ರ‌್ಯಾಂಕ್ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 2022ರಲ್ಲಿ ನಡೆದ ಸ್ನಾತಕೋತ್ತರ ಬಯೋ ಕೆಮಿಸ್ಟ್ರಿ ಪದವಿ ಪರೀಕ್ಷೆಯಲ್ಲಿ…
Author: Nammur Express Admin
ತುಂಬಿದ ತುಂಗಾ ನದಿಗೆ ತಮಾಷೆಗೆ ಹಾರಿದ ಭೂಪ! – ಗಾಬರಿಗೊಂಡ ಜನರಿಂದ ಪೊಲೀಸರಿಗೆ ಫೋನ್ – ನೋಡ ನೋಡುತ್ತಲೇ ತುಂಬಿದ ನದಿಯಿಂದ ಎದ್ದು ಬಂದ! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗದಲ್ಲಿ ಮೈದುಂಬಿಕೊಂಡು ಹರಿಯುತ್ತಿರುವ ತುಂಗೆಗೆ ವ್ಯಕ್ತಿಯೋರ್ವ ತಮಾಷೆಗೆ ಹಾರಿ ಮತ್ತೆ ಎದ್ದು ಬರುವ ಮೂಲಕ ಸುದ್ದಿಯಲ್ಲಿದ್ದಾನೆ. ತುಂಬಿದ ತುಂಗಾ ನದಿಗೆ ತಮಾಷೆಗೆ ಹಾರಿದ ಭೂಪನ ನೋಡಿ ಗಾಬರಿಗೊಂಡ ಜನರಿಂದ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಆದರೆ ನೋಡ ನೋಡುತ್ತಲೇ ತುಂಬಿದ ನದಿಯಿಂದ ಎದ್ದು ಬಂದಿದ್ದು ಈಗ ಈ ಘಟನೆ ಭಾರೀ ಸುದ್ದಿಯಾಗಿದೆ. ಆತನ ಬಗ್ಗೆ ಪರಿಶೀಲಿಸಿದಾಗ ಈತ ಟೈಮ್ ಪಾಸ್ ಗೆ ಈ ರೀತಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಏನಿದು ಘಟನೆ?: ಶಿವಮೊಗ್ಗ ಪಟ್ಟಣದಲ್ಲಿ ತುಂಗಾ ನದಿ ತುಂಬಿ ಹರಿಯುತ್ತದೆ. 60 ಸಾವಿರ ಕ್ಯೂಸೆಕ್ ನೀರು ತುಂಗೆ ಹರಿದು ಬರುವ ವೇಳೆ ನದಿಗೆ ಹಾರಿದ್ದನ್ನ ಕಂಡು ಕೋಟೆ ಪೊಲೀಸರಿಗೆ ಮತ್ತು ಅಗ್ನಿಶಾಮಕದಳಕ್ಕೆ ಜನರು ಕರೆ ಮಾಡಿದ್ದಾರೆ. ಹಳೆ ಸೇತುವೆ ಬಳಿ ವ್ಯಕ್ತಿಯೋರ್ವ…
3 ದಿನ ಭಾರೀ ಮಳೆ ಅಲರ್ಟ್! – ಕರಾವಳಿ, ಮಲೆನಾಡು ಸೇರಿ ರಾಜ್ಯದಲ್ಲಿ ಭಾರೀ ಮಳೆ – ಶಾಲೆ, ಪಿಯು ಕಾಲೇಜಿಗೆ ರಜೆ: ಹಲವು ಮಂದಿ ಸಾವು – ನದಿಗಳ ನೀರು ಹೆಚ್ಚಳ: ರಾಜಧಾನಿಯಲ್ಲಿ ಮಳೆ NAMMUR EXPRESS NEWS ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಲ್ಲಿ ಭಾರೀ ಮಳೆ ಆಗುತ್ತಿದ್ದು ಅಪಾಯದತ್ತ ಕರುನಾಡು ತಲುಪಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ರಾಜ್ಯದಲ್ಲಿ ಮಳೆ ಕಾರಣ ಈವರೆಗೆ ಸುಮಾರು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಾವೇರಿಯಲ್ಲಿ ಸಿದ್ದರಾಮಯ್ಯ ನೆರೆ ವೀಕ್ಷಣೆ ಮಾಡಿದ್ದಾರೆ. ಮಲೆನಾಡಲ್ಲಿ ಭಾರೀ ಮಳೆ ಅವಾಂತರ! ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ, ಕೆಮ್ಮಣ್ಣು ಗುಂಡಿ ಭಾಗದಲ್ಲಿ ಹಲವು ಕಡೆ ಗುಡ್ಡ ಕುಸಿದಿದೆ. ಮೂಡಿಗೆರೆಯ ಸಾಲುಮನೆ ಶಿವಣ್ಣ ಎಂಬುವರ ಮನೆ ಕುಸಿದಿದೆ. ಶಿವಮೊಗ್ಗ ಜಿಲ್ಲೆ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ತುಂಗಾ, ವರದಾ, ಭದ್ರ, ಶರಾವತಿ ನದಿ ಅಪಾಯ ಮಟ್ಟದಲ್ಲಿ ಸುರಿಯುತ್ತಿದೆ. ಮಧ್ಯ ಕರ್ನಾಟಕದಲ್ಲಿ ಇಬ್ಬರು…
ಮಹಾ ಮಳೆಗೆ ಇಬ್ಬರು ಕಂದಮ್ಮಗಳ ಸಾವು! – ದಾವಣಗೆರೆ, ಹಾವೇರಿಯಲ್ಲಿ ಭಾರೀ ಮಳೆ ದುರಂತ – ಪುತ್ತೂರಲ್ಲಿ ಹೆಜ್ಜೇನು ಕಡಿದು ಓರ್ವ ಸಾವು – ರೈಲಿಗೆ ತಲೆಕೊಟ್ಟು ನಿವೃತ್ತ ಉಪನ್ಯಾಸಕ ಸಾವು NAMMUR EXPRESS NEWS ದಾವಣಗೆರೆ/ಹಾವೇರಿ: ಎಡಬಿಡದೇ ಸುರಿಯುತ್ತಿರುವ ಮಳೆಗೆ ಇಬ್ಬರು ಮಕ್ಕಳು ಸಾವಿಗೀಡಾಗಿರುವ ಘಟನೆ ದಾವಣಗೆರೆ, ಹಾವೇರಿಯಲ್ಲಿ ನಡೆದಿದೆ. ಮನೆಯೊಂದರ ಗೋಡೆ ಕುಸಿದ ಪರಿಣಾಮ 1 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರಿನಲ್ಲಿ ನಡೆದಿದೆ. ಕುಂಬಳೂರಿನ ಲಕ್ಷ್ಮಿ ಹಾಗೂ ಕೆಂಚಪ್ಪ ದಂಪತಿಯ ಪುತ್ರಿ ಸ್ಪೂರ್ತಿ ಮನೆಯ ಗೋಡೆ ಕುಸಿದು ಅದರಡಿ ಸಿಲುಕಿ ದಾರುಣ ಅಂತ್ಯ ಕಂಡಿದ್ದಾಳೆ. ಕಳೆದ 4-5 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ತಂದೆ-ತಾಯಿ ಜೊತೆ ಮಲಗಿದ್ದ ಬಾಲಕಿ ಮೇಲೆ ಗೋಡೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಬಾಲಕಿಯ ತಂದೆ-ತಾಯಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿಯಲ್ಲೂ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ…
ತೀರ್ಥಹಳ್ಳಿ ಟಾಪ್ ನ್ಯೂಸ್ ತೀರ್ಥಹಳ್ಳಿ ಪಟ್ಟಣದಲ್ಲಿ ಎರಡು ದಿನ ಕುಡಿವ ನೀರಿಲ್ಲ! – ನೀರು ಸರಬರಾಜು ಕೇಂದ್ರದಲ್ಲಿ ಹೂಳು ತೆಗೆಯುವ ಕೆಲಸ – ಜು.26ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಸಭೆ – ಪ್ರೊ ಕಬಡ್ಡಿ ಆಟಗಾರ ಗಗನ್ ಗೌಡಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ ಬಾಳೇಬೈಲಿನ ಪಟ್ಟಣ ಪಂಚಾಯತಿಯ ಕುಡಿಯುವ ನೀರು ಸರಬರಾಜು ಕೇಂದ್ರದ ಜಾಕ್ ವೆಲ್ ನಲ್ಲಿ ತುಂಬಿರುವ ಹೂಳನ್ನು ತೆಗೆಯುವ ಕಾರ್ಯಕ್ಕೆ ತೀರ್ಥಹಳ್ಳಿ ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ , ಉಪಾಧ್ಯಕ್ಷ ರಹಮತ್ತುಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ( ದತ್ತ) ಅವರು ಮಂಗಳವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ- ಉಪಾಧ್ಯಕ್ಷರು 2 ದಿನಗಳ ಕಾಲ ಪಟ್ಟಣದ ಜನರಿಗೆ ಕುಡಿಯುವ ನೀರಿನ ಲಭ್ಯತೆಯಿರುವುದಿಲ್ಲ. ಸಾರ್ವಜನಿಕರು 2-3 ದಿನಗಳಿಗಾಗುವಷ್ಟು ಕುಡಿಯುವ ನೀರನ್ನು ಸಂಗ್ರಹಿಸಿಕೊಳ್ಳುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ಕುರಿಯಾ ಕೋಸ್, ಆರೋಗ್ಯಾಧಿಕಾರಿ ರಮೇಶ್ ಮುಂತಾದವರು ಉಪಸ್ಥಿತರಿದ್ದರು. ರಾಜ್ಯ ಗಮನ ಸೆಳೆಯುತ್ತಿರುವ ಕಬಡ್ಡಿ ಆಟಗಾರ…
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ಶೀಘ್ರ ಫೈನಲ್?! – ಸಿ.ಟಿ.ರವಿ, ಬಸನಗೌಡ ಪಾಟೀಲ್, ವಿಜಯೇಂದ್ರ, ಅಶ್ವಥ್ನಾರಾಯಣ ನಾಲ್ವರಲ್ಲಿ ಯಾರಿಗೆ ಹುದ್ದೆ? NAMMUR EXPRESS NEWS ಬೆಂಗಳೂರು: ಚುನಾವಣೆ ಕಳೆದು ಹೊಸ ಸರ್ಕಾರ ಬಜೆಟ್ ಮಂಡನೆ ಮಾಡಿದರೂ ಇನ್ನೂ ಕೂಡ ಪ್ರತಿ ಪಕ್ಷ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನಾಗಲಿ, ವಿಪಕ್ಷ ನಾಯಕನನ್ನಾಗಲಿ ಆಯ್ಕೆ ಮಾಡಿಲ್ಲ. ಈ ವಿಷಯ ಇದೀಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಈ ಎರಡು ಸ್ಥಾನ ತುಂಬಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷರ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಸಿ.ಟಿ.ರವಿ ಹಾಗೂ ಸುನಿಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಇನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಡಿಸಿಎಂ ಡಾ.ಅಶ್ವಥನಾರಾಯಣ ಪೈಕಿ ಯಾರನ್ನಾದ್ರೂ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ. ಸಿ.ಟಿ.ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಯತ್ನಾಳ್ ಗೆ ವಿಪಕ್ಷ ಸ್ಥಾನ ನೀಡಬೇಕು ಎನ್ನುವ ಸಲಹೆಗಳು ರಾಜ್ಯ ನಾಯಕರಿಂದಲೂ ಬಂದಿವೆ. ಜೊತೆಗೆ…
ಇಂದೇ ‘ಗೃಹಜ್ಯೋತಿ ನೋಂದಣಿ’ಗೆ ಕೊನೇ ದಿನ.! – ಜುಲೈ ತಿಂಗಳ ಬಿಲ್ ಫ್ರೀ ಪಡೆಯಲು ನೋಂದಣಿ ಕಡ್ಡಾಯ – ಯೋಜನೆಗೆ ಕೊನೆ ದಿನ ಅಲ್ಲ, ಈ ತಿಂಗಳ ಯೋಜನೆ ಪಡೆಯಲು ಕೊನೆಯ ದಿನ NAMMUR EXPRESS NEWS ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಗ್ಯಾರಂಟಿಯಡಿ ಮೊದಲ ತಿಂಗಳು ಸುಮಾರು ಶೇ.60ರಷ್ಟು ಗ್ರಾಹಕರು ಫಲಾನುಭವಿಗಳಾಗಲಿದ್ದಾರೆ. ಜುಲೈ ತಿಂಗಳ ಉಚಿತ ವಿದ್ಯುತ್ ಬಿಲ್ ಪಡೆಯಲು ಜುಲೈ 25 ಕೊನೆಯ ದಿನಾಂಕ ಆಗಿದೆ. 1.92 ಕೋಟಿ ಗೃಹ ಬಳಕೆದಾರರಿದ್ದು, ಇದರಲ್ಲಿ ಶೇ.90ಕ್ಕೂ ಅಧಿಕ ಜನ ಮಾಸಿಕ ಸರಾಸರಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಾಗಿದ್ದಾರೆ ಎಂದು ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಮಾಹಿತಿ ನೀಡಿವೆ. ಇವರಲ್ಲಿ ಇದುವರೆಗೆ ಅಂದಾಜು 1.18 ರಿಂದ 1.20 ಕೋಟಿ ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದವರು ಇನ್ನೂ ನೋಂದಣಿ ಮಾಡಿ ಕೊಂಡಿಲ್ಲ. ಜುಲೈ ಅಂದರೆ ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ ಕೊನೆಯ…
ವಾಯುಪಡೆಯಲ್ಲಿ 3,500 ಅಗ್ನಿವೀರ ಹುದ್ದೆ ಭರ್ತಿ! – ಪರೀಕ್ಷೆಗಾಗಿ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನ – ಏನಿದು ಪರೀಕ್ಷೆ… ಅರ್ಜಿ ಸಲ್ಲಿಸೋದು ಹೇಗೆ? NAMMUR EXPRESS NEWS ಭಾರತೀಯ ವಾಯುಪಡೆಯು ಅಗ್ನಿವೀರವಾಯು ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಆನ್‌ಲೈನ್ ನೋಂದಣಿ ಜುಲೈ 27 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 17 ರಂದು ಮುಕ್ತಾಯಗೊಳ್ಳುತ್ತದೆ 2023ರ ಅಕ್ಟೋಬರ್ 13 ರಿಂದ ಆಯ್ಕೆ ಪರೀಕ್ಷೆ ನಡೆಯಲಿದೆ. ಆನ್‌ಲೈನ್ ನೋಂದಣಿ ಜು. 27ರಂದು ಪ್ರಾರಂಭವಾಗಲಿದ್ದು, ಆ. 17 ರಂದು ಕೊನೆಗೊಳ್ಳುತ್ತದೆ. 27 ಜೂನ್ 2003 ಮತ್ತು 27 ಡಿಸೆಂಬರ್ 2006ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ತೇರ್ಗಡೆಯಾದರೆ, ದಾಖಲಾತಿಯ ದಿನಾಂಕದಂದು ಅವರ ಗರಿಷ್ಠ ವಯಸ್ಸಿನ ಮಿತಿ 21 ವರ್ಷ ದಾಟಿರಬಾರದು. ಅರ್ಹತೆ: ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೋಂದಣಿಗೆ…
ಮಲೆನಾಡಲ್ಲಿ ಈಗ ಮದ್ರಾಸ್ ಐ ಕಾಟ! – ಮಲೆನಾಡಿನಲ್ಲಿ ಕಣ್ಣು ರೋಗ ರೋಗ ಹೆಚ್ಚಳ: ಅರೋಗ್ಯ ಇಲಾಖೆ ಹುಷಾರ್ – ಕಣ್ಣು ಕೆಂಪಾಗುವ ಈ ರೋಗ ನಿರ್ಲಕ್ಷ್ಯ ಮಾಡದಿರಿ NAMMUR EXPRESS NEWS ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಮದ್ರಾಸ್ ಐ ಕಾಟ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಈ ರೋಗ ಬಾಧೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮದ್ರಾಸ್ ಐ, ಕೋಳಿ ಕಣ್ಣು, ಕಣ್ಣು ಕುಟ್ಲೆ ಹೀಗೆ ಹಲವು ಹೆಸರಿನಿಂದ ಕರೆಯುವ ಈ ಕಣ್ಣು ಕಾಯಲೆ ಈಗ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ನಡುವೆ ಮದ್ರಾಸ್ ಐನ ಆತಂಕ ಹೆಚ್ಚಾಗುತ್ತಿದೆ. ಸಾಗರ, ತೀರ್ಥಹಳ್ಳಿ , ಹೊಸನಗರ ಸೇರಿದಂತೆ ಶಿವಮೊಗ್ಗ ನಗರದಲ್ಲಿ ಮದ್ರಾಸ್ ಐ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಸೋಂಕು ತಗುಲಿದ ವ್ಯಕ್ತಿಗೆ ಐದು ದಿನ ಸಮಸ್ಯೆ ಮಾಡುತ್ತಿದೆ. ಹಲವು ಕಡೆ ಶಾಲೆಗಳಲ್ಲಿ ಮದ್ರಾಸ್ ಐ ಆತಂಕದಿಂದ ರಜೆ ನೀಡಲಾಗುತ್ತಿದೆ. ಮತ್ತು ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ತಿರುವುದು…
ಚುನಾವಣಾ ರಾಜಕೀಯಕ್ಕೆ ಸೋನಿಯಾ ಗಾಂಧಿ ಗುಡ್‌ಬೈ?! – ಕರ್ನಾಟಕದಿಂದಲೇ ರಾಜ್ಯಸಭೆಗೆ ಸ್ಪರ್ಧೆ? – ಅನಾರೋಗ್ಯ ಕಾರಣ ನೇರ ಸ್ಪರ್ಧೆ ಡೌಟು NAMMUR EXPRESS NEWS ಕರ್ನಾಟಕದಲ್ಲಿ ಎಳೆಂಟು ತಿಂಗಳಲ್ಲಿ ನಾಲ್ಕು ಸ್ಥಾನಗಳಿಗೆ ರಾಜ್ಯ ಸಭಾ ಚುನಾವಣೆ ನಡೆಯಬೇಕಿದೆ. ಈ ಬಾರಿ ಮೇಲ್ಮನೆಗೆ ರಾಜ್ಯದಿಂದ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ತಿರ್ಮಾನಿಸಿರುವ ಸೋನಿಯಾ ಗಾಂಧಿ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗುವಂತೆ ಸಿದ್ದರಾಮಯ್ಯರವರು ಮನವಿ ಮಾಡಿದ್ದಾರೆ ಎಂಬ ಮಾತು ರಾಜಕೀಯವಾಗಿ ಕೇಳಿಬರುತ್ತಿದೆ. ಕರ್ನಾಟಕದ ಮೂರು ಮಂದಿ ರಾಜ್ಯ ಸಭಾ ಸದಸ್ಯರ ಅವಧಿ ಮುಂದಿನ 2024ರ ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ಹೀಗಾಗಿ ಈ ಮೂರೂ ಸ್ಥಾನಗಳಿಗೆ ಪುನಃ ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಇದೀಗ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಎಲ್ಲಾ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ಅವಕಾಶವಿದೆ. ಸೋನಿಯಾ ಗಾಂಧಿ ಅವರೊಂದಿಗೆ ಉತ್ತರ ಪ್ರದೇಶ ಮೂಲದ ಎಐಸಿಸಿ ವಕ್ತಾರೆ…