Author: Nammur Express Admin

ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!? – ಕಿಮ್ಮನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಖ್ಯಾತ ಚಾನಲ್ ನಿರೂಪಕ? – ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಜತೆ ಹೆಸರು ತಳಕು ಹಾಕಿದ್ದಕ್ಕೆ ಕಿಡಿ NAMMUR EXPRESS NEWS ಶಿವಮೊಗ್ಗ: ಸುಳ್ಳು ವರದಿ ಪ್ರಸಾರ ಮಾಡಿದ ಖಾಸಗಿ ಚಾನಲ್ ಒಂದರ ನಿರೂಪಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಐದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಖಾಸಗಿ ಚಾನಲ್ ಒಂದರ ನಿರೂಪಕ ಅಜಿತ್ ಹನುಮಕ್ಕನವರ್ ತಮ್ಮ ಮೇಲೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ತಾವು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಚೇರಿಯನ್ನು ವ್ಯಕ್ತಿಯೊಬ್ಬರಿಂದ ಹಲವು ವರ್ಷಗಳ ಹಿಂದೆಯೇ ಬಾಡಿಗೆಗೆ ಪಡೆದಿದ್ದೆವು. ಈ ಬಾಡಿಗೆಗೆ ಸಂಬಂಧಿಸಿದಂತೆ ಎಲ್ಲಾ ಒಪ್ಪಂದಗಳನ್ನು ನೊಂದಣಿ ಕೂಡ ಮಾಡಿಸಲಾಗಿದೆ. ಈಗ ಕುಕ್ಕರ್ ಬ್ಲಾಸ್ಟ್ ಘಟನೆಗೆ ಸಂಬಂಧಿಸಿದಂತೆ ನನ್ನನ್ನು ಆರೋಪಿಯೊಂದಿಗೆ ಸಂಬಂಧವಿದೆ ಮತ್ತು ವ್ಯವಹಾರವಿದೆ ಎಂದು ಸುದ್ದಿಯಲ್ಲಿ…

Read More

ಕಾಂಗ್ರೆಸ್ ಸರ್ಕಾರ ಬೀಳಿಸಲು ಪ್ಲಾನ್ ಮಾಡಲಾಗ್ತಿದೆಯಾ? – ಕುಮಾರಸ್ವಾಮಿ ಮೇಲೆ ಡಿಕೆಶಿ ಡೌಟ್ ಏನು? – ಸಿಂಗಾಪುರದಿಂದ ಸೀಕ್ರೆಟ್ ಆಪರೇಷನ್? NAMMUR EXPRESS NEWS ಬೆಂಗಳೂರು: ವಿದೇಶದಲ್ಲಿ ಕುಳಿತು ಕರ್ನಾಟಕದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಸಿಂಗಾಪುರದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಅವರೇನೋ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಡುವುದು ಬಿಟ್ಟು ಹೊರಗೆ ತಂತ್ರ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಈಗ ಭಾರೀ ಸದ್ದು ಮಾಡಿದೆ. ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರ. ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕೂತು…

Read More

ಕರಾವಳಿ ಜಿಲ್ಲೆಗೆ ಮತ್ತೆ ರಜೆ! – ಜು.25ರಂದು 2 ಜಿಲ್ಲೆಗೆ ಶಾಲೆ, ಪಿಯು ಕಾಲೇಜಿಗೆ ರಜೆ ಘೋಷಣೆ – ಮುಗಿಯದ ಮಳೆ ಅಬ್ಬರ: ಹೊನ್ನಾವರದಲ್ಲಿ ಓರ್ವ ನೀರಲ್ಲಿ ಕೊಚ್ಚಿ ಹೋಗಿ ಸಾವು NAMMUR EXPRESS NEWS ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಜುಲೈ 25ರಂದು ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 25ರಂದು ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಜುಲೈ 25ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆಗೆ ದ.ಕ ಜಿಲ್ಲಾದ್ಯಾಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ನಾಳೆ ಮಂಗಳವಾರ ಅಂಗನವಾಡಿ, ಶಾಲಾ ಪಿಯು ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿ…

Read More

ಆಗುಂಬೆ ಬಳಿ ಕಾಡಾನೆ ದಾಳಿ! – ಅಪಾರ ಅಸ್ತಿ ಪಾಸ್ತಿ ಹಾನಿ: ರೈತರ ಕಣ್ಣೀರು – 10 ವರ್ಷದ ಕಾಡಾನೆ ಸಮಸ್ಯೆಗೆ ಪರಿಹಾರ ಇಲ್ಲ – ಮಳೆಗಾಲದಲ್ಲಿ ಮತ್ತೆ ಕಾಡಾನೆ ಉಪಟಳ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದ ಅಗಸರಕೋಣೆ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕಳೆದ 10 ವರ್ಷಗಳಿಂದ ಮಲ್ಲ0ದೂರು, ಅಗಸರಕೋಣೆ ಭಾಗದಲ್ಲಿ ಕಾಡಾನೆ ನಡುವೆಯೇ ಜನ ಬದುಕುತ್ತಿದ್ದಾರೆ. ಆದರೆ ಆನೆ ಭಾನುವಾರ ರಾಜು ಮೇಲಿನಮನೆ ಎಂಬುವರ ತೋಟ, ಬಾಳೆ ಮರ ತಿಂದು ಹಾನಿ ಮಾಡಿದೆ. ಆನೆ ದಾಳಿಯಿಂದ ಬೆಳೆ, ಫಸಲು ಎಲ್ಲಾ ಹಾನಿಯಾಗಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಗಮನ ವಹಿಸುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ. ಆನೆ ಹಾವಳಿ ಬಗ್ಗೆ ಮತ್ತು ಅಲ್ಲಿನ ಗ್ರಾಮಸ್ಥರ ಜೀವನದ ಬಗ್ಗೆ ಯಾರಿಗೆ ಬೇಡವಾಗಿದೆ. 10 ವರ್ಷದ ಹಿಂದೆ ಧರ್ಮಪ್ಪ ಎಂಬ ರೈತ ಈ ಆನೆ ದಾಳಿಗೆ ಬಲಿಯಾಗಿದ್ದಾನೆ. ಇನ್ನು ಪ್ರತಿ ಮನೆಯ…

Read More

ಟಾಯ್ಲೆಟಲ್ಲೇ 8ನೇ ಕ್ಲಾಸ್ ವಿದ್ಯಾರ್ಥಿನಿ ರೇಪ್! – ಅತ್ಯಾಚಾರ ಮಾಡಿ, ಬೀಗ ಹಾಕಿದ ಕಿರಾತಕ ಶಿಕ್ಷಕ – ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನ ವೇಶ್ಯವಾಟಿಕೆ! – ಪಾದಚಾರಿಗೆ ಡಿಕ್ಕಿ: ವ್ಯಕ್ತಿ ಮೃತಪಟ್ಟರೂ ನೋಡಿ ವಾಹನ ಪರಾರಿ! NAMMUR EXPRESS NEWS ಶಿಕ್ಷಕರೊಬ್ಬರು ಶಾಲೆಯ ಶೌಚಾಲಯದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ನೀಚ ಘಟನೆ ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿಯ ಬಳಿ ಈ ವಿಷಯವನ್ನು ಹೊರಗಡೆ ಹೇಳಬಾರದು ಎಂದು ಹೇಳಿ ಸರಿಯಾಗಿ ಥಳಿಸಲಾಗಿದೆ ಎಂದು ಕೂಡಾ ಆರೋಪ ಮಾಡಲಾಗಿದೆ. ವಿದ್ಯಾರ್ಥಿನಿ ಬಹಳ ಹೊತ್ತಿನವರೆಗೆ ಕಾಣದೇ ಇರುವುದನ್ನು ಕಂಡು ಹುಡುಕಾಟ ಮಾಡಿದಾಗ, ಶೌಚಾಲಯದ ಬಾಗಿಲಿನ ಹೊರಗೆ ಬೀಗ ನೇತಾಡುತ್ತಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಕೂಡಲೇ ಅನುಮಾನಗೊಂಡು ಬಾಗಿಲು ತೆರೆದು ವಿದ್ಯಾರ್ಥಿನಿಯನ್ನು ಶೌಚಾಲಯದಿದ ಹೊರಗೆ ಕರೆತಂದು ರಕ್ಷಣೆ ಮಾಡಲಾಗಿದೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ಜುಲೈ 21 ರಂದು ಈ ಘಟನೆ ನಡೆದಿದೆ. ಬಾಲಕಿ ಶಾಲೆಯ ಶೌಚಾಲಯಕ್ಕೆ ಹೋಗಿದ್ದಳು. ಅಲ್ಲಿದ್ದ…

Read More

ಕರಾವಳಿಯಲ್ಲಿ ಮಹಾ ಮಳೆಗೆ ಇಬ್ಬರು ಸಾವು! – ಹೆಬ್ರಿ, ಬ್ರಹ್ಮಾವರದಲ್ಲಿ ನೀರಿಗೆ ಬಿದ್ದು ದುರ್ಮರಣ – ಕಾರ್ಕಳದಲ್ಲಿ ಬಸ್, ಟಿಪ್ಪರ್ ನಡುವೆ ಆಕ್ಸಿಡೆಂಟ್ – ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಆತಂಕ NAMMUR EXPRESS NEWS ಹೆಬ್ರಿ: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಸಾವನ್ನು ಕಂಡಿರುವ ಘಟನೆ ನಡೆದಿದೆ. ಜು.23ರಂದು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಬಡಬೈಲು ದರಕಾಸು ನಿವಾಸಿ ಕು. ರಚನಾ ಪ್ರಭಾಕರ ಶೆಟ್ಟಿ (ವಯಸ್ಸು 12 ವರ್ಷ) ಹರಿಯುತ್ತಿದ್ದ ಹೊಳೆಗೆ ಬಿದ್ದು ಮೃತಳಾಗಿದ್ದಾಳೆ. ಇನ್ನು ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ನಿವಾಸಿ ಗೋಕುಲದಾಸ್ ಪ್ರಭು (53 ವರ್ಷ) ಇವರು ಜು.24 ರಂದು ಬ್ರಹ್ಮಾವರ ತಾಲೂಕಿನ ಕರ್ಕುಂಜೆ ಗ್ರಾಮದ ನೀರಿನ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಅವಳಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹಲವಾರು ಮನೆಗಳಿಗೆ ಹಾನಿಯಾಗಿರುವ ವರದಿಗಳಾಗಿವೆ. ಇನ್ನಷ್ಟೇ ಹಲವೆಡೆ ಹಾನಿ ವರದಿ ಬರಬೇಕಿದೆ. ಕಾರ್ಕಳದಲ್ಲಿ ಬಸ್, ಟಿಪ್ಪರ್ ನಡುವೆ ಅಪಘಾತ ಬಸ್ಸು ಹಾಗೂ ಟಿಪ್ಪರ್ ನಡುವೆ ಅಪಘಾತ…

Read More

ಕೆಲಸಕ್ಕೆ ಸರಿಯಾದ ಟೈಮಿಗೆ ಬಾರದವರ ವಿರುದ್ಧ ಆರಗ ಗರಂ! – ತೀರ್ಥಹಳ್ಳಿ ತಾಲೂಕು ಕಚೇರಿ ನೌಕರರಿಗೆ ಫೋನಲ್ಲೇ ಅಧಿಕಾರಿಗಳು, ನೌಕರರಿಗೆ ಚಾರ್ಜ್ – ಬಯೋಮೆಟ್ರಿಕ್ ಇಲ್ಲ.. ಹೇಳೋರು ಕೇಳೋರು ಇಲ್ಲ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕಚೇರಿ ನೌಕರರು ಕೆಲಸಕ್ಕೆ ಸರಿಯಾದ ಟೈಮಿಗೆ ಬಾರದವರ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕಚೇರಿಗೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದ ನೌಕರರ ಚಾಳಿ ಇದೀಗ ಶಾಸಕರ ಸಿಟ್ಟಿಗೆ ಕಾರಣ ಆಗಿದೆ. ಮಳೆ ಬಗ್ಗೆ ತುರ್ತು ಸಭೆಗೆ ತಹಸೀಲ್ದಾರ್ ಕಚೇರಿಗೆ ಹೋಗಿದ್ದ ವೇಳೆ ಕೆಲವು ನೌಕರರು ತಮ್ಮ ಕುರ್ಚಿಯಲ್ಲಿ ಇಲ್ಲದ ಕಾರಣ ಫೋನಲ್ಲೇ ಅಧಿಕಾರಿಗಳು, ನೌಕರರಿಗೆ ಚಾರ್ಜ್ ತೆಗೆದುಕೊಂಡ ಆರಗ ಜ್ಞಾನೇಂದ್ರ ಅವರು ಕೆಲಸದ ಸಮಯದ ಬಗ್ಗೆ ಪಾಠ ಮಾಡಿದರು. 11 ಗಂಟೆ ಆದ್ರೂ ಕಚೇರಿಗೆ ಸಿಬ್ಬಂದಿ ಬರಲಿಲ್ಲ ತೀರ್ಥಹಳ್ಳಿ ತಾಲೂಕು ಕಚೇರಿ ಅಧಿಕಾರಿಗಳಿಂದ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬ ದೂರಿನ ಹಿನ್ನೆಲೆ ಫೋನಲ್ಲೇ ಕೆಂಡ ಮಂಡಲರಾದ…

Read More

ಮಹಾ ಮಳೆಗೆ ನಾಲ್ವರು ಬಲಿ! – ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರ ಸಾವು.! – ನೋಡ ನೋಡುತ್ತಾ ಜಲಪಾತದಲ್ಲಿ ಕೊಚ್ಚಿ ಹೋದ – ಹಾಸನದಲ್ಲಿ ಓರ್ವ ಸಾವು: ನದಿಗೆ ಬಿದ್ದ ಎರಡು ಕಾರು! – ಶೃಂಗೇರಿ- ಮಂಗಳೂರು ಸಂಪರ್ಕಿಸುವ ಹೈವೇ ಕುಸಿತ NAMMUR EXPRESS NEWS ಬೆಂಗಳೂರು: ಮಹಾ ಮಳೆಗೆ ನಾಲ್ವರು ಬಲಿಯಾಗಿದೆ. ಇನ್ನು ಹಲವರು ಮೃತಪಟ್ಟ ಘಟನೆ ನಡೆದಿದೆ. ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರ ಸಾವು ತುಮಕೂರಲ್ಲಿ ನಡೆದಿದೆ. ಕರಾವಳಿಯಲ್ಲಿ ನೋಡ ನೋಡುತ್ತಾ ಜಲಪಾತದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನು ಹಾಸನದಲ್ಲಿ ಓರ್ವ ಬಸ್ ಮರಕ್ಕೆ ಡಿಕ್ಕಿ ಹೊಡೆದು ಸಾವನ್ನು ಕಂಡಿದ್ದಾನೆ. ಚಿಕ್ಕಮಗಳೂರಲ್ಲಿ ಅಪಘಾತದಲ್ಲಿ ಎರಡು ಕಾರು ಹಾನಿಗೀಡಾಗಿವೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬದ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವನ್ನಪ್ಪಿದ ದುರ್ದೈವಿ ಯುವಕರನ್ನು ಹರೀಶ್(31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಇವರು ಗುಬ್ಬಿ ತಾಲ್ಲೂಕಿನ…

Read More

ಕೆಸರು ಗದ್ದೆಗಳಾದ ಪಟ್ಟಣದ ಪ್ರಮುಖ ರಸ್ತೆಗಳು – ಬಹುತೇಕ ಕಡೆ ಸಂಚಾರ ಸ್ಥಗಿತ – ಜಿಟಿ ಜಿಟಿ ಮಳೆ ಎಫೆಕ್ಟ್ – ಸಾರ್ವಜನಿಕರ ಸಂಚಾರ ಅಸ್ಥವ್ಯೆಸ್ಥ ಸಿಂದಗಿ  : ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಎಲ್ಲಡೆ ದೇವರ ಮೊರೆ ಹೋಗುವುದು ಕಪ್ಪೆಗೆ ಮದುವೆ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಸಿಂದಗಿ ಪಟ್ಟಣದ ಸ್ಥಳೀಯ ನಿವಾಸಿಗಳಿಗೆ ಮಳೆಯೇ ಕಂಟಕವಾಗಿ ನಿಂತಿದೆ. ಸತತ 4 ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಬಹುತೇಕ ಪ್ರಮುಖ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಗ್ರಾಮೀಣ ಭಾಗದ ರೈತರಿಗೆ ಈ ಮಳೆ ವರವಾಗಿ ಪರಿಣಮಿಸಿದರೆ ಪಟ್ಟಣದ ಜನತೆಗೆ ಶಾಪವಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದೆ ಈ ಹಿನ್ನಲೆ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ನಿಂತಿದ್ದು ಸಾರ್ವಜನಿಕರ ಸಂಚಾರಕ್ಕೆ ಅಸ್ಥವ್ಯಸ್ಥವಾಗಿದೆ. ಇನ್ನೂ ಬಹುತೇಕ ಕಡೆ ಸಂಚಾರವೇ ಸ್ಥಗಿತವಾಗಿದೆ. ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತ ರಸ್ತೆ, ಮಾರುಕಟ್ಟೆ ರಸ್ತೆ, ಆನಂದ ಚಿತ್ರ ಮಂದಿರಕ್ಕೆ ಹೋಗುವ ರಸ್ತೆ…

Read More

ಕರಾವಳಿಯಲ್ಲಿ ಮಳೆಗೆ ಬದುಕು ತತ್ತರ! – ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಣೆ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಿತಿ ನೋಡಿ ರಜೆ ಘೋಷಣೆ! – ಎಲ್ಲಾ ತಾಲೂಕು ತಹಸೀಲ್ದಾರ್‌ಗಳಿಗೆ ಡಿಸಿ ಆದೇಶ – ಜು.28ರವರೆಗೆ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾನಿ ಹೆಚ್ಚು! NAMMUR EXPRESS NEWS ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾ‌ರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಜು.28ರವರೆಗೆ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ ಹಾಗೂ ದಕ್ಷಿಣ…

Read More