“ಚಕ್ರವ್ಯೂಹ” ಎಂಬ ಯಕ್ಷಗಾನ ಇಂದು ಪ್ರದರ್ಶನ! – ತೀರ್ಥಹಳ್ಳಿ ನಟಮಿತ್ರರು ಕಲಾವಿದರಿಂದ ಪ್ರದರ್ಶನ – ಮಹಾ ಭಾರತದ ಕಥೆಯ ಅನಾವರಣ NAMMUR EXPRESS NEWS ತೀರ್ಥಹಳ್ಳಿ: ಹವ್ಯಾಸಿ ಕಲಾ ಸಂಘ ನಟ ಮಿತ್ರ ಕಲಾವಿದರು ಪ್ರಸ್ತುತ ಪಡಿಸುವ ” ಚಕ್ರವ್ಯೂಹ” ಎಂಬ ಯಕ್ಷಗಾನ ಪ್ರದರ್ಶನ ಜು.23ರ ಭಾನುವಾರದಂದು ಸಂಜೆ 6:30 ಕ್ಕೆ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ. ರಂಗಾಯಣ ಮಾಜಿ ನಿರ್ದೇಶಕರಾದ ಸಂದೇಶ್ ಜವಳಿ, ನಟ ಮಿತ್ರರು ಪ್ರಮುಖರಾದ ಮಾಹಿತಿ ನೀಡಿ, ನಿರಂತರವಾಗಿ ನಟಮಿತ್ರರು ತಂಡ ಇಲ್ಲಿಯವರೆಗೂ ಸಾಂಸ್ಕೃತಿಕ ಚಟುವಟಿಕೆ ಮಾಡಿಕೊಂಡು ಬರುತ್ತಿದೆ. ಯಕ್ಷಗಾನ ಎಂಬುದು ಪ್ರಾಚೀನ ಕಲೆ. ಸಾಹಿತ್ಯ, ಅಭಿನಯ, ನೃತ್ಯ, ವೇಷ ಭೂಷಣ ಯಕ್ಷಗಾನದಲ್ಲಿ ಪಾತ್ರವಾಗಿರಲಿದೆ. ಈ ಎಲ್ಲಾ ಕಾರಣಗಳಿಂದ ಯಕ್ಷಗಾನ ಮೂಡಿಬರುತ್ತಿದೆ ಎಂದರು. ಮಹಾಭಾರತದ ಕಥೆಯಾಗಿರುವ ಚಕ್ರವ್ಯೂಹ ಎಂಬ ಕಥಾ ಭಾಗವನ್ನು ಬಡಗು ತಿಟ್ಟಿನ ಕಥೆಯಲ್ಲಿ ಯಕ್ಷ ಪ್ರೇಮಿಗಳಿಗೆ ಉಣ ಬಡಿಸಲಿದ್ದೇವೆ. ಈ ಕಥೆಯ ನಿರ್ದೇಶನವನ್ನು ತೀರ್ಥಹಳ್ಳಿ ತಾಲೂಕಿನ ಶೇಡ್ಡಾರ್ ನ ಶೈಲೇಶ್ ಹಾಗೂ ರೋಹಿತ್ ತೀರ್ಥಹಳ್ಳಿಯವರು…
Author: Nammur Express Admin
ಸೌಜನ್ಯ ಕೊಲೆ ಕೇಸ್: ನೈಜ ಆರೋಪಿ ಪತ್ತೆಗೆ ಸಿಎಂ ಭೇಟಿ – ಸಿದ್ದರಾಮಯ್ಯ ಭೇಟಿ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ NAMMUR EXPRESS NEWS ಬೆಂಗಳೂರು: ಧರ್ಮ ಸ್ಥಳ ಸಮೀಪದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕುಮಾರಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಲಯ ದೋಷ ಮುಕ್ತ ಗೊಳಿಸಿದೆ. ಇದು ಬೆಳ್ತಂಗಡಿಯ ಸಜ್ಜನ ಜನತೆಗೆ ಬಹಳ ನೋವು ಉಂಟು ಮಾಡಿದ್ದು, ನೈಜ ಆರೋಪಿಗಳು ಇನ್ನೂ ಬಂಧನವಾಗಿಲ್ಲ ಎಂಬ ವಾದ ಬೆಳ್ತಂಗಡಿ ಜನತೆಯದ್ದಾಗಿದ್ದು ಈ ಬಗ್ಗೆ ಈ ಪ್ರಕರಣವನ್ನು ಮರು ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ಮುಖ್ಯಮಂತ್ರಿಗೆ ಮಾನ್ಯ ಶಾಸಕ ಹರೀಶ್ ಪೂಂಜಾ ಮನವಿ ಮಾಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ಜೊತೆಗಿದ್ದರು. ಇದನ್ನೂ ಓದಿ…
ಹೋಟೆಲ್ ತಿಂಡಿ-ತಿನಿಸು ಇನ್ಮುಂದೆ ದುಬಾರಿ?! – ತರಕಾರಿ, ಹಾಲು ಬಳಿಕ ಈಗ ಹೋಟೆಲ್ ದರ ಏರಿಕೆ – ಆ.1ರಿಂದ ನೂತನ ದರ ಜಾರಿ: ಹೋಟೆಲ್ ಸಂಘ – ಕಾಫಿ-ಟೀ ದರವೂ ಹೆಚ್ಚಳಕ್ಕೆ ನಿರ್ಧಾರ NAMMUR EXPRESS NEWS ಬೆಂಗಳೂರು: ತರಕಾರಿ, ಹಾಲು ಬಳಿಕ ಈಗ ಹೋಟೆಲ್ ಊಟ ತಿಂಡಿ, ಕಾಫಿ ಟೀ ಕೂಡ ದುಬಾರಿ ಆಗಲಿದೆ ಮ್ ಈ ಮೂಲಕ ಜನತೆಗೆ ಮತ್ತೊಂದು ಬರೆ ಬಿದ್ದಿದೆ. ಆಗಸ್ಟ್ 1ರಿಂದ ಹಾಲಿನ ದರ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿ-ತಿನಿಸು ದರ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿಕೆ ನೀಡಿದ್ದಾರೆ. ತಿಂಡಿ ಜೊತೆಗೆ ಕಾಫಿ-ಟೀ ದರವೂ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಕನಿಷ್ಟ ಶೇ.10ರಷ್ಟು ದರ ಏರಿಕೆ ನಿರ್ಧರಿಸಲಾಗಿದೆ. ಕೆಲ ಹೋಟೆಲ್ ನವರು ಶೇ. 20ರಷ್ಟು ಹೆಚ್ಚಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ. ದರ ಹೆಚ್ಚು ಮಾಡಿದರೆ ಗ್ರಾಹಕರಿಗೂ ಕಷ್ಟ ಆಗಲಿದೆ. ಇದೇ ಜುಲೈ 25ರಂದು ಹೋಟೆಲ್…
2 ಟನ್ ಟೊಮೆಟೋ ಹೊತ್ತೊಯ್ದಿದ್ದ ಕಳ್ಳರು! – ನಾಲ್ವರು ಟೊಮೆಟೋ ಕಳ್ಳರ ಬಂಧನ: ಏನಿದು ಘಟನೆ? – ಕುಡಿಯಲು ಹೋಗಿದ್ದಾಗ ಕಳ್ಳರು ವಾಹನ ಸಮೇತ ಕಳ್ಳತನ NAMMUR EXPRESS NEWS ಬೆಂಗಳೂರು: 2 ಟನ್ ಟೊಮೆಟೋ ಹೊತ್ತೊಯ್ದಿದ್ದ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಟೊಮೇಟೋ ಕಳ್ಳರನ್ನು ಬಂಧಿಸುವಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ದಿನಾಂಕ ಜುಲೈ 10ರಂದು ರೈತರು ಚಿತ್ರದುರ್ಗದಿಂದ ಆರ್.ಎಂ.ಸಿ ಯಾರ್ಡ್‍ಗೆ ಟೊಮೆಟೋ ಲೋಡ್ ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾಗ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೋ ಹೊತ್ತೊಯ್ದಿದ್ದರು.ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು. ಟೊಮೆಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್.ಎಂ.ಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್ ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್ ಲೈನ್…
ಶಾಲಾ ಮಕ್ಕಳಿಗೆ ಮತ್ತೆ ಸೈಕಲ್ ಭಾಗ್ಯ?! – ಸಿಎಂ ಸಿದ್ದರಾಮಯ್ಯ ಭರವಸೆ: ಮಕ್ಕಳಿಗೆ ಸಂತಸ – 8ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ NAMMUR EXPRESS NEWS ಬೆಂಗಳೂರು: ನಾಲ್ಕು ವರ್ಷ ಗಳಿಂದ ಸ್ಥಗಿತಗೊಂಡಿರುವ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಯೋಜನೆಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆಗಳಿವೆ. ಈ ಸುದ್ದಿ ಮಕ್ಕಳಲ್ಲಿ ಹೊಸ ಸಂತಸಕ್ಕೆ ಕಾರಣ ಆಗಿದೆ. ಹೌದು. ಶಾಲಾ ಮಕ್ಕಳಿಗೆ ಸೈಕಲ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ವಿಧಾನಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು,”ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಶಾಲೆ ಯಿಂದ ದೂರ ಉಳಿದ ಮಕ್ಕಳನ್ನು ಸೆಳೆಯಲು ಅನುಕೂಲ ಆಗುವ ಸೈಕಲ್ ವಿತರಣೆ ಯೋಜನೆ ಹಲವು ವರ್ಷ ಗಳಿಂದ ಸ್ಥಗಿತಗೊಂಡಿದೆ. ಯೋಜನೆ ಪುನಾರಂಭಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು. 2006-07ರಲ್ಲಿ ಆರಂಭಗೊಂಡ ಈ ಯೋಜನೆಯಡಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಸರಕಾರಿ ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ…
‘ಹೆಬ್ಬುಲಿ’ ಹೇರ್ ಸ್ಟೈಲ್ ಈಗ ವಿವಾದದತ್ತ! – ಸಲೂನ್ ಮಾಲೀಕರಿಗೆ ಮುಖ್ಯ ಶಿಕ್ಷಕರಿಂದ ಮನವಿ – ವೈರಲ್ ಆಯ್ತು ಪತ್ರ: ಏನಿದು ಹೇರ್ ಸ್ಟೈಲ್ NAMMUR EXPRESS NEWS ಬಾಗಲಕೋಟೆ : ಹೆಬ್ಬುಲಿ ಹೇರ್ ಸ್ಟೈಲ್ ಎಲ್ಲಾ ಕಡೆ ಫೇಮಸ್ ಆದ ಹೇರ್ ಸ್ಟೈಲ್. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಸಲೂನ್ ಮಾಲೀಕರಿಗೆ ಶಾಲಾ ಮುಖ್ಯಶಿಕ್ಷಕರು ಮನವಿ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ. ವಿದ್ಯಾರ್ಥಿಗಳ ‘ಹೆಬ್ಬುಲಿ’ ಹೇರ್ ಸ್ಟೈಲ್ ನೋಡಿ ಶಿಕ್ಷಕರು ಬೇಸತ್ತು ಹೋಗಿದ್ದು, ಆ ರೀತಿ ಕಟಿಂಗ್ ಮಾಡದಂತೆ ಮನವಿ ಪತ್ರ ಬರೆದಿದ್ದಾರೆ. ಶಿವಾಜಿ ನಾಯಕ ಎಂಬ ಮುಖ್ಯೋಪಾಧ್ಯಾಯರು ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಈ ರೀತಿಯಾಗಿ ಪತ್ರ ಬರೆದಿದ್ದಾರೆ. ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿ ಅಥವಾ ಇದೇ ತರಹದ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಕಡೆ ಕೂದಲು ಬಿಟ್ಟು, ಇನ್ನೊಂದು ಕಡೆ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.…
10 ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಕೆಲಸ.! – ಯಾರು ಅರ್ಜಿ ಸಲ್ಲಿಸಬಹುದು… ಇಲ್ಲಿದೆ ಡೀಟೇಲ್ಸ್ – 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ NAMMUR EXPRESS NEWS ಭಾರತೀಯ ರೈಲ್ವೆ ಇಲಾಖೆಯು ಉದ್ಯೋಗ ಹುಡುಕಾಟದಲ್ಲಿದ್ದವರಿಗೆ ಸಿಹಿಸುದ್ದಿ ನೀಡಿದ್ದು, ಆಗ್ನೆಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 820 ಅಸಿಸ್ಟೆಂಟ್ ಲೋಕೋ ಪೈಲಟ್, 132 ಟೆಕ್ನಿಷಿಯನ್, 64 ಜೂನಿಯರ್ ಎಂಜಿನಿಯ ಹುದ್ದೆಗಳು ಖಾಲಿ ಇವೆ. ಇನಯ ಖಾಲಿ ಇರುವ ಹುದ್ದೆಗಳಿಗೆ ಜುಲೈ 22 ರಿಂದ ಅರ್ಜಿ ಪ್ರಾರಂಭವಾಗಿದೆ. ಎಲ್ಲಾ ನೇಮಕಾತಿಗಳನ್ನು ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ (ಜಿಡಿಸಿಇ) ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಅರ್ಹತೆಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 42 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಯ ಅಂತಿಮ ಆಯ್ಕೆ ದಾಖಲೆ…
ಧರ್ಮಸ್ಥಳ ಸಂಸ್ಥೆ ಹಾಗೂ ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ವರದಿ ಮಾಡುವ ಹಾಗಿಲ್ಲ! – ಮಾಧ್ಯಮ, ಸಾಮಾಜಿಕ ಜಾಲ ತಾಣದಲ್ಲಿ ಧರ್ಮಸ್ಥಳ ಹೆಸರು ಬಳಕೆ ಮಾಡಬಾರದು ಎಂದು ಆದೇಶ NAMMUR EXPRESS NEWS ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಾಡುತ್ತಿರುವ ಆರೋಪಗಳ ಕುರಿತು ನ್ಯಾಯಾಲಯವು ನಿರ್ಬಂಧಕಾಜ್ಞೆ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಡಾ. ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಬೆಳಹೊಂಗಳ, ಸೋಮನಾಥ್ ನಾಯಕ್, ಬಿ.ಎಂ. ಭಟ್, ವಿಠಲ್ ಗೌಡ ಮತ್ತುಇತರರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ನ್ಯಾಯಾಲಯವು ಧರ್ಮಸ್ಥಳದ ದೇವಸ್ಥಾನ ಮತ್ತು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ…
ಕರಾವಳಿ ಪ್ರಮುಖ ಸುದ್ದಿಗಳು ಮಣಿಪಾಲ ಬಳಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ! – ಮೂವರು ವಶ: ಪ್ರಕರಣ ದಾಖಲು ಭಜರಂಗ ದಳದ ಮೂವರಿಗೆ ಗಡಿಪಾರು ನೋಟಿಸ್ – ಕರಾವಳಿಯಲ್ಲಿ ಸಿಡಿದೆದ್ದ ಹಿಂದೂ ಸಂಘಟನೆಗಳು! NAMMUR EXPRESS NEWS ಮಣಿಪಾಲ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದ ಘಟನೆ ಮಣಿಪಾಲ ಸಮೀಪದ ಹೆರ್ಗ ಗ್ರಾಮದ ಲಾಡ್ಜ್‌ವೊಂದರಲ್ಲಿ ನಡೆದಿದೆ. ಪೊಲೀಸರು ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಡ್ಜ್ ಮೇಲೆ ದಾಳಿ ನಡೆಸಿ ಬಂಧಿತ ಆರೋಪಿಗಳ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಲಾಡ್ಜ್‌ನ ಮ್ಯಾನೇಜರ್ ಸಂಪತ್ ಕುಮಾರ್ ಮತ್ತು ರೂಮ್ ಬಾಯ್ ದಿನೇಶ್ ಲಾಡ್ಜ್‌ನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪ ಹೊತ್ತಿದ್ದಾರೆ. ಎರಡು ಪ್ರತ್ಯೇಕ ಕೊಠಡಿಗಳಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿದ್ದ ಭಜರಂಗದಳದ ಮೂವರು…
ಶೀಘ್ರವೇ ಕಡಿಮೆಯಾಗಲಿದೆ ಟೊಮೆಟೊ ಬೆಲೆ! – ಮಾರುಕಟ್ಟೆಯಲ್ಲಿ 100 ರೂ.ಕೆಜಿಗೆ ಮಾರಾಟ – ವಿವಿಧ ರಾಜ್ಯಗಳಿಂದ ಬೆಳೆ ಪೂರೈಕೆ NAMMUR EXPRESS NEWS ನವದೆಹಲಿ: ಟೊಮ್ಯಾಟೊಗಳ ಚಿಲ್ಲರೆ ಬೆಲೆಯಲ್ಲಿ ಏರಿಕೆಯಾದ ನಂತರ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಿಂದ ಹೊಸ ಬೆಳೆಗಳ ಪೂರೈಕೆಯಲ್ಲಿ ಹೆಚ್ಚಳವನ್ನು ನೋಡಿ ಟೊಮ್ಯಾಟೊಗಳ ಚಿಲ್ಲರೆ ಬೆಲೆಗಳು ಕುಸಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ಶುಕ್ರವಾರ ಪ್ರಕಟಿಸಿದೆ. “ಮಹಾರಾಷ್ಟ್ರದ ನಾಸಿಕ್, ನಾರಾಯಣ ಮತ್ತು ಔರಂಗಾಬಾದ್ ಬೆಲ್ಟ್ ಮತ್ತು ಮಧ್ಯಪ್ರದೇಶದಿಂದ ಹೊಸ ಬೆಳೆಯ ಆಗಮನದ ಹೆಚ್ಚಳದೊಂದಿಗೆ ಟೊಮೆಟೊ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ” ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಟೊಮೆಟೊ ಬೆಲೆ ಏರಿಕೆಯ ನಂತರ, ಆರಂಭದಲ್ಲಿ ಪ್ರತಿ ಕೆ.ಜಿ.ಗೆ 90 ರೂ.ಗಳ ಚಿಲ್ಲರೆ ದರದಲ್ಲಿ ವಿಲೇವಾರಿ ಮಾಡಲಾಯಿತು, ಇದನ್ನು ಜುಲೈ 16 ರಿಂದ ಪ್ರತಿ ಕೆ.ಜಿ.ಗೆ 80 ರೂ.ಗೆ ಮತ್ತು ಜುಲೈ 20 ರಿಂದ ಪ್ರತಿ ಕೆ.ಜಿ.ಗೆ…