ಹಾಲಿನ ದರ ಪ್ರತಿ ಲೀಟರ್ ಗೆ 3 ರೂ ಹೆಚ್ಚಾಯ್ತು! – ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ – ಶೀಘ್ರದಲ್ಲಿ ಹೋಟೆಲ್ ಆಹಾರ ಕೂಡ ದುಬಾರಿ? ಬೆಂಗಳೂರು: ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ಹಾಲು ಒಕ್ಕೂಟಗಳು ನೀಡಿರುವಂತ ನಂದಿನಿ ದರ 5 ರೂ ಹೆಚ್ಚಳ ಪ್ರಸ್ತಾವನೆಯ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಿದರು. ಅಲ್ಲದೇ ನಂದಿನಿ ಹಾಲಿನ ಪುಡಿಯ ದರವನ್ನು ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಸಿಎಂ ನೇತೃತ್ವದ ಸಭೆಯಲ್ಲಿ ನಂದಿನಿ ಹಾಲಿನ ಪ್ರತಿ ಲೀಟರ್ ದರವನ್ನು ರೂ.3 ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಹಕಾರ ಇಲಾಖೆ…
Author: Nammur Express Admin
ಮಲೆನಾಡಲ್ಲಿ ಇನ್ನು ವಾಡಿಕೆ ಮಳೆ ಆಗಿಲ್ಲ! – 687.87 ಮಿಮಿ ವಾಡಿಕೆ ಮಳೆ ಆಗಬೇಕಿತ್ತು! – ಎರಡು ವರ್ಷದ ಹಿಂದೆ ಎಲ್ಲೆಡೆ ಬೆಟ್ಟ ಕುಸಿದಿತ್ತು NAMMUR EXPRESS NEWS ಮಲ್ನಾಡ್ : ಮಲೆನಾಡಲ್ಲಿ ಇನ್ನು ವಾಡಿಕೆ ಮಳೆ ಆಗಿಲ್ಲ!. ಜುಲೈ ತಿಂಗಳಲ್ಲಿ 687.87 ಮಿಮಿ ವಾಡಿಕೆ ಮಳೆ ಆಗಬೇಕಿತ್ತು. ಆದರೆ ಈವರೆಗೆ 323.90 ಮಿಮಿ ಮಳೆಯಾಗಿದೆ. ಎರಡು ವರ್ಷದ ಹಿಂದೆ ಅಂದರೆ 2021ರಲ್ಲಿ ತೀರ್ಥಹಳ್ಳಿ ಸೇರಿ ಎಲ್ಲೆಡೆ ಬೆಟ್ಟ ಕುಸಿದಿತ್ತು. ಎಲ್ಲಾ ಕಡೆ ನೀರು ತುಂಬಿ ಹೋಗಿತ್ತು. 2022ರಲ್ಲಿ ಜುಲೈ 14ಕ್ಕೆ ರಾಮ ಮಂಟಪ ಭರ್ತಿಯಾಗಿದ್ದು ತುಂಗೆಗೆ ಶಾಸಕ, ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಬಾಗಿನ ಅರ್ಪಿಸಿದ್ದರು. ಆದರೆ ಈಗ ಇನ್ನು ರಾಮ ಮಂಟಪ ಬುಡಕ್ಕೆ ನೀರು ಮುಟ್ಟಿದೆ ಅಷ್ಟೇ. 24 ಗಂಟೆ ಮಳೆ ಎಷ್ಟು ಆಗಿದೆ? ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 323.90 ಮಿಮಿ ಮಳೆಯಾಗಿದ್ದು, ಸರಾಸರಿ 46.27 ಮಿಮಿ ಮಳೆ ದಾಖಲಾಗಿದೆ. ಜುಲೈ…
ಭೀಕರ ಅಪಘಾತಕ್ಕೆ ನಾಲ್ವರು ಯುವಕರು ಬಲಿ! – ಬೆಂಗಳೂರು-ಮಂಗಳೂರು ಹೈವೇಯಲ್ಲಿ ಘಟನೆ – ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಯಲ್ಲಿ ದುರಂತ NAMMUR EXPRESS NEWS ಹಾಸನ: ಟಿಪ್ಪರ್ ಲಾರಿ ಹಾಗೂ ಇನೋವಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟರಿರುವ ಘಟನೆ ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯ ಸಮೀಪ ಈಶ್ವರಹಳ್ಳಿ ಕೂಡಿಗೆಯಲ್ಲಿ ಅಪಘಾತ ಸಂಭವಿಸಿದೆ. ಸಕಲೇಶಪುರ ಕಡೆಗೆ ಹೋಗುತ್ತಿದ್ದ ಇನೋವಾ ಕಾರಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರಿಗೆ ಸೇರಿದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಹಾಸನ ತಾಲೂಕಿನ ಕುಪ್ಪಳಿ ಗ್ರಾಮದ ಚೇತನ್, ಗುಟ್ಟೇನಹಳ್ಳಿ ಗ್ರಾಮದ ಅಶೋಕ್, ತಟ್ಟೆಕೆರೆ ಪುರುಷೋತ್ತಮ ಹಾಗೂ ಆಲೂರು ತಾಲ್ಲೂಕಿನ ಚಿಗಳೂರು ಗ್ರಾಮದ ದಿನೇಶ್ ಎಂದು ತಿಳಿದು ಬಂದಿದೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾಮಗಾರಿ ಮಂದಗತಿ ಸಾಗುತ್ತಿದ್ದು ಏಳೆಂಟು ವರ್ಷಗಳಿಂದ ನೂರಾರು ಅಮಾಯಕ ಪ್ರಯಾಣಿಕರು…
ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಶಾಕ್! – ಶಾಸಕ ಸ್ಥಾನ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ – ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಮತದಾರರಿಗೆ ಆಮಿಷವೊಡ್ಡಿರುವ ಆರೋಪ – ರಾಹುಲ್ ಗಾಂಧಿ ಕೇಸ್: ವಿಚಾರಣೆ ಆ.4ಕ್ಕೆ ಮುಂದೂಡಿಕೆ NAMMUR EXPRESS NEWS ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಮತದಾರರಿಗೆ ಆಮಿಷವೊಡ್ಡಿರುವ ಹಿನ್ನೆಲೆ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123 (1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಶಾಸಕ ಸ್ಥಾನದ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವಲ್ಲಿ ನೆರವಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಐದು ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು…
ಧರ್ಮಸ್ಥಳದ ಸೌಜನ್ಯ ಸಾವಿನ ಕಥೆ ಈಗ ಸಿನಿಮಾ! – ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ – ಇತ್ತ ಮರು ತನಿಖೆಗಾಗಿ ಕರಾವಳಿಯಲ್ಲಿ ಹೋರಾಟ? NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಸಾವು ಮತ್ತು ಅದರ ಕಥೆ ಆಧರಿಸಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಧರ್ಮಸ್ಥಳದ ಸೌಜನ್ಯ ಅವರನ್ನು ಅಪಹರಿಸಿ ಬಳಿಕ ಅವರ ಮೇಲೆ ಅತ್ಯಾಚಾರವೂ ನಡೆದಿತ್ತು. ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ 2012ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಧರ್ಮಸ್ಥಳದ ಸೌಜನ್ಯ ಅವರನ್ನು ಅಪಹರಿಸಲಾಯಿತು. ಅದೇ ದಿನ ರಾತ್ರಿ ಅವರ ಮಿಸ್ಸಿಂಗ್ ಕೇಸ್ ಕೂಡ ದಾಖಲಾಯಿತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಮಣ್ಣಸಂಖದಲ್ಲಿ ಅವರ ಶವ ಪತ್ತೆ ಆಯಿತು. ಸೌಜನ್ಯ ಅವರ ಮೇಲೆ ಅತ್ಯಾಚಾರವೂ ನಡೆದಿತ್ತು. ಆದರೆ ಈ ಕೇಸ್‌ಗೆ ಸಂಬಂಧಿಸಿದಂತೆ ಬಂದನಕ್ಕೊಳಗಾಗಿದ್ದ ಸಂತೋಷ್ ರಾವ್ ಅವರು…
ಪ್ರೊ ಕಬಡ್ಡಿಗೆ ಗಗನ್ ಗೌಡ! – ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಯ ಸಾಧನೆ – ಹೊಸನಗರ ತಾಲೂಕಿನ ಹುಡುಗ ಈಗ ಸ್ಟಾರ್ ಆಟಗಾರ NAMMUR EXPRESS NEWS ಉಜಿರೆ: ಕರಾವಳಿ ಕ್ರೀಡಾಪಟುವೊಬ್ಬ ಇದೀಗ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಕರಾವಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಎಸ್.ಡಿ. ಎಂ ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ. ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನವರಾಗಿದ್ದು, ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ಕಬ್ಬಡಿ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ನೇರವಾಗಿ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಯಲ್ಲಿ ಯುಪಿ ಯೋಧ ತಂಡದ ಸ್ಟಾರ್ ಆಟಗಾರರಾಗಿ…
ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು! – ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ! – ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ – ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ NAMMUR EXPRESS NEWS ಬೆಂಗಳೂರು: ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು!. ಇನ್ನು ಕರ್ನಾಟಕ ಡಿಸಿಎಂ ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ದೇಶದ ಮೊದಲ 3 ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಟಾಪ್ 20 ಮಂದಿ ಪೈಕಿ 12 ಮಂದಿ ಇಲ್ಲಿಯವರೇ ಆಗಿದ್ದಾರೆ. ಈ ಮೂಲಕ ಕರ್ನಾಟಕ ಶ್ರೀಮಂತಿಕೆಯಲ್ಲೂ ಮುಂದಿದೆ. ಏನಿದು ವರದಿ?: ಎಡಿಆರ್ ಮತ್ತು ಎನ್ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ ದೇಶದ ಶಾಸಕರ ಆಸ್ತಿಪಾಸ್ತಿ, ಸಾಲ ಇತ್ಯಾದಿ ವಿವರ ಬಹಿರಂಗವಾಗಿದೆ. ಈ ವರದಿ ಪ್ರಕಾರ ಸಚಿವ ಡಿ.ಕೆ ಶಿವಕುಮಾರ್ ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 100 ಕೋಟಿ ದಾಟಿದವರು…
ಗುಳಿಗ ದೈವದ ಶಕ್ತಿ ಕಳ್ಳನನ್ನೇ ಹುಡುಕಿ ಕೊಟ್ಟಿತು! – ಹುಂಡಿ ಕಳವು ಮಾಡಿದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸೆರೆ – ಗುಳಿಗ ದೈವದ ಪವಾಡಕ್ಕೆ ಭಕ್ತರಲ್ಲಿ ಮೂಡಿತು ಸಂತಸ NAMMUR EXPRESS NEWS ಕೊರಗಜ್ಜ, ಗುಳಿಗ, ಪಂಜುರ್ಲಿ ಪವಾಡಗಳನ್ನು ನಾವು ಕೇಳಿದ್ದೇವೆ. ಅಂತಹದ್ದೇ ಒಂದು ಪವಾಡ ಘಟನೆ ಇದೀಗ ಚಿಕ್ಕಮಗಳೂರು ಜಿಲ್ಲೆ ಬಣಕಲ್ ಎಂಬಲ್ಲಿ ವರದಿಯಾಗಿದೆ. ಬಣಕಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ ಘಟನೆ ನಡೆದು ಕೆಲವೇ ಗಂಟೆಯಲ್ಲಿ ಕಳ್ಳನ ಪತ್ತೆಯಾಗಿರುವುದು ದೈವಶಕ್ತಿಗೆ ಸಾಕ್ಷಿಯಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿದ್ದ ಮಹಾಮ್ಮಾಯಿ ಯುವಕಸಂಘದ ಸದಸ್ಯ ಅರುಣ್ ಪೂಜಾರಿ ಅವರು ಗುಳಿಗ ದೈವದ ಬಳಿ ಕೈ ಮುಗಿದು ಕಳ್ಳತನ ಮಾಡಿದವನಿಗೆ ದೈವ ಶಕ್ತಿ ಏನೆಂದು ತೋರಿಸಬೇಕು ಎಂದು ಬೇಡಿಕೊಂಡಿದ್ದರು.ಅದನ್ನು ಸ್ನೇಹಿತರಲ್ಲೂ ಹೇಳಿಕೊಂಡಿದ್ದರು. ಕಾಕತಾಳಿಯ ಎಂಬಂತೆ ದೈವದ ಬಳಿ ಬೇಡಿಕೊಂಡ ವ್ಯಕ್ತಿಯ ಕೈಗೆ ರಾತ್ರಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕಳ್ಳತನ ನಡೆದ ಬಳಿಕ ರಾತ್ರಿ 9:30ರ ಸುಮಾರಿಗೆ ಎಂದಿನಂತೆ ಮನೆಗೆ ಹೋಗುತ್ತಿದ್ದಾಗ ಸುಭಾಷ್…
ರಾಜ್ಯದಲ್ಲಿ ವಿಜಯೇಂದ್ರ ಅವರಿಗೆ ಮಹತ್ವದ ಹುದ್ದೆ?! – ಅಮಿತ್ ಶಾ ಜತೆ ದೆಹಲಿಯಲ್ಲಿ 1 ಗಂಟೆ ಚರ್ಚೆ – ಬಿಜೆಪಿ ಅಧ್ಯಕ್ಷ ಸ್ಥಾನವೋ?, ವಿರೋಧ ಪಕ್ಷದ ನಾಯಕ ಸ್ಥಾನವೋ? NAMMUR EXPRESS NEWS ನವ ದೆಹಲಿ: ಕೇಂದ್ರ ಗೃಹ ಸಚಿವ, ಬಿಜೆಪಿಯ ಕಿಂಗ್ ಮೇಕರ್ ಅಮಿತ್ ಶಾ ಅವರನ್ನು ನವ ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನವೂ ಖಾಲಿ ಇದೆ. ಇನ್ನು ವಿರೋಧ ಪಕ್ಷದ ನಾಯಕ ಸ್ಥಾನವೂ ಖಾಲಿ ಇದೆ. ಅಲ್ಲದೆ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಸಂಸದ ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಚರ್ಚೆಯೂ ಇದೆ. ಈ ನಡುವೆ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಬೇಕಿದೆ. ಈ ಹಿನ್ನೆಲೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ವಿಜಯೇಂದ್ರ ಅವರಿಗೆ ಮಹತ್ವದ…
ಡ್ರಗ್ಸ್ ಮಿಶ್ರಿತ ಚಾಕಲೇಟ್. ಹುಷಾರ್..! – ಕರಾವಳಿಯಲ್ಲೂ ಮಾದಕ ದ್ರವ್ಯ ದಂಧೆ – ಯುವ ಸಮುದಾಯ, ವಿದ್ಯಾರ್ಥಿಗಳಿಗೆ ಟಾರ್ಗೆಟ್ – ಮಹಾಶಕ್ತಿ ಮುನಕ್ಕಾ, ಬಮ್ ಬಮ್ ಮುನಕ್ಕಾ ಹೆಸರು!… ಮಲೆನಾಡಿನಲ್ಲೂ ಮಾರಾಟ – ವೆಬ್ ಸೀರೀಸ್… ಸಿನಿಮಾ ಪ್ರೇರಣೆ ಆಗ್ತಿದೆಯಾ? NAMMUR EXPRESS NEWS ಮಂಗಳೂರು: ಮಂಗಳೂರಿನಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಡ್ರಗ್ಸ್ ಮಾಫಿಯಾ ತನ್ನ ಕರಾಳ ಮುಖ ಅನಾವರಣ ಮಾಡಿದೆ. ಮಂಗಳೂರಿನ ಎರಡು ಅಂಗಡಿಗಳಲ್ಲಿ ಮಾದಕ ಚಾಕಲೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ, ಉತ್ತರ ಪ್ರದೇಶ ಮೂಲದ ಬೆಚನ್ ಸೋಲ್ಕರ್ (45), ಹಾಗೂ ಗುಜರಾತ್ ಮೂಲದ ಮನೋಹರ್ ಶೇಟ್ (49) ಎಂಬುವವರನ್ನು ಬಂಧಿಸಲಾಗಿದೆ. ಈ ಖದೀಮ ಸೋಲ್ಕರ್, ಫಳೀರಿನ ಹೈಲ್ಯಾಂಡ್ ಆಸ್ಪತ್ರೆ ಬಳಿ ಗೂಡಂಗಡಿಯಲ್ಲಿ ಗಾಂಜಾ ತುಂಬಿದ ಚಾಕಲೇಟ್ ಮಾರುತ್ತಿದ್ದ. ಅದೇ ಮನೋಹರ್ ಶೇಟ್ ಕಾರ್ ಸ್ಟ್ರೀಟ್ ಬಳಿಯಲ್ಲಿ ಮಾರುತ್ತಿದ್ದ ಎನ್ನಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ, ಮಲೆನಾಡು ಭಾಗದಲ್ಲಿ ಡ್ರಗ್ಸ್…