Author: Nammur Express Admin

‘ಗೃಹಲಕ್ಷ್ಮಿ’ಗೂ ಸರ್ವರ್ ಪ್ರಾಬ್ಲಮ್! – ಅರ್ಜಿ ಸಲ್ಲಿಸಲು ಮಹಿಳೆಯರ ಪರದಾಟ – ಪ್ರತಿ ಊರಲ್ಲೂ ಮಹಿಳೆಯರ ಕ್ಯೂ! – ಏನಿದು ಯೋಜನೆ..?, ನೋಂದಣಿ ಹೇಗೆ? ಮನೆಗೆ ಬಂದು ನೋಂದಣಿ ಮಾಡ್ತಾರಾ? NAMMUR EXPRESS NEWS ಬೆಂಗಳೂರು: ಮನೆಯ ಯಜಮಾನಿಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಹಲವಡೆ ಸರ್ವರ್ ಸಮಸ್ಯೆ ಎದುರಾಗಿದ್ದು, ಮಹಿಳೆಯರು ಪರದಾಡುವಂತಾಗಿದೆ. ಇನ್ನು ಅರ್ಜಿ ಸಲ್ಲಿಸಲು ಎಲ್ಲಾ ಕಡೆ ಮಹಿಳೆಯರ ಕ್ಯೂ ಕಂಡು ಬರುತ್ತಿದೆ. ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸರ್ವರ್ ಸಮಸ್ಯೆ ಕಾಡಿದೆ. ಆದರೂ ಎಲ್ಲಾ ತಾಲೂಕು ಕೇಂದ್ರ, ಹೋಬಳಿ ಕೇಂದ್ರದಲ್ಲಿ ಮಹಿಳೆಯರು ಹಾಗೂ ಅವರ ಕುಟುಂಬದವರು ಸೌಲಭ್ಯಕ್ಕಾಗಿ ಸ್ಥಳೀಯ ಕೇಂದ್ರಗಳಲ್ಲಿ ಕ್ಯೂ ನಿಂತಿದ್ದಾರೆ. ಒಂದು ಕಡೆ ಮಳೆ, ಇನ್ನೊಂದು ಕಡೆ ಸರ್ವರ್ ಸಮಸ್ಯೆ ನಡುವೆಯೂ ಮಹಿಳೆಯರು ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಮೊಬೈಲ್ ಗಳಿಗೆ ಸಂದೇಶ ಬಾರದಿದ್ದರೂ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು…

Read More

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತಳ ರೇಪ್! – ಹೊಸನಗರ: ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ: ಅರೆಸ್ಟ್ – ಭದ್ರಾವತಿ: ರೌಡಿಶೀಟರ್​ ಮನೆ ಮುಂದೆಯೇ ಮರ್ಡರ್ – ಸೊರಬದಲ್ಲಿ ಸಾಲದ ಶೂಲಕ್ಕೆ ರೈತ ಆತ್ಮಹತ್ಯೆ – ಮಗನ ಬರ್ತಡೇ ದಿನವೇ ತಂದೆ ಬರ್ಬರ ಹತ್ಯೆ NAMMUR EXPRESS NEWS ಹೊಸಗರ ತಾಲೂಕಿನ ನಗರ ಹೋಬಳಿಯ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತಳ ಮೇಲೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿದ ಮಾಡಿದ ಯುವಕನ ವಿರುದ್ಧ ನೊಂದ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಪೋಕ್ಸ್ ಕೇಸ್ ದಾಖಲಾಗಿದೆ. ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಪೋಷಕರು ಕೂಲಿ ಕೆಲಸ ಮಾಡುವವರಾಗಿದ್ದರು. ನಗರದಲ್ಲಿ ವೇಲ್ಡಿಂಗ್ ಕೆಲಸ ಮಾಡುತ್ತಿರುವ ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಮಹಮ್ಮದ್ ಮುಜಾಪುರ್ (28) ಎಂಬ ಯುವಕ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ ನಡೆಸುತ್ತಿದ್ದನು. ನೊಂದ ಬಾಲಕಿ ಈಗ ಗರ್ಭಿಣಿಯಾಗಿದ್ದು ನಂತರ ಆಕೆಯನ್ನು ತನ್ನ…

Read More

ಅಂತೂ ಎಣ್ಣೆ ದರ ಏರಿಕೆ ಆಯ್ತು! – ಇಂದಿನಿಂದ ಮದ್ಯದ ದರ ಶೇ.20ರಷ್ಟು ಹೆಚ್ಚಳ – ಬಿಯರ್ 10%, ಇತರ ಮದ್ಯಗಳ ಬೆಲೆ 20%ರಷ್ಟು ಏರಿಕೆ NAMMUR EXPRESS NEWS ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಶೇ.20ರಷ್ಟು ಏರಿಕೆ ಆಗಿದೆ. ರಾಜ್ಯದಲ್ಲಿ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಮದ್ಯದ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಮದ್ಯದ ಬೆಲೆಯನ್ನು ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬರಲಿದೆ. ಆದರೆ, ರಾಜ್ಯದ ಕೆಲ ಜಿಲ್ಲೆಗಳ ರಿಟೇಲ್‌ ಮದ್ಯ ಮಾರಾಟದ ಬಾರ್ ಆ್ಯಂಡ್ ರೆಸ್ಟೋರೆಂಟ್‌ ಗಳಲ್ಲಿ ಗುರುವಾರ ರಾತ್ರಿಯೇ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ. ಸರ್ಕಾರ ಬಜೆಟ್‌ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟು ಏರಿಕೆ ಹಾಗೂ ಬಿಯ‌ರ್ ಮೇಲಿನ ಅಬಕಾರಿ…

Read More

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ?! – ತುಂಗಾ ನದಿಯಲ್ಲಿ ನೀರು ಏರಿಕೆ: ಹಲವೆಡೆ ಅಪಾಯದ ಹಂತ – ತೀರ್ಥಹಳ್ಳಿಯಲ್ಲಿ ಹಲವೆಡೆ ನೀರು ನುಗ್ಗಿ ಜಲಾವೃತ NAMMUR EXPRESS NEWS ತೀರ್ಥಹಳ್ಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ನೀರು ನುಗ್ಗಿದೆ. ತಾಲೂಕಿನ ಹಲವು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತೀರ್ಥಹಳ್ಳಿಯಲ್ಲಿ ಹಲವೆಡೆ ನೀರು ನುಗ್ಗಿ ಜಲಾವೃತಗೊಂಡಿದೆ. ಬಾಳೇಬೈಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳಿ ನೀರು ತುಂಬಿದೆ. ತಾಲೂಕಿನ ವಿವಿಧ ಕಡೆ ಸುಮಾರು 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ತೀರ್ಥಹಳ್ಳಿ ತಾಲೂಕಿನಲ್ಲಿ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬುಧವಾರ ಮತ್ತು ಗುರುವಾರ ಮಳೆಯ ಜೊತೆ ಭಾರಿ ಪ್ರಮಾಣದ ಗಾಳಿ ಬೀಸುತ್ತಿದೆ, ಹೀಗೆ ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಸರಾಸರಿ ಇದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ವಿದ್ಯುತ್, ಮೊಬೈಲ್ ಸಂಪರ್ಕ ಇಲ್ಲದಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ…

Read More

ಸಿ.ಎ, ಸಿ.ಎಸ್‌.ಇ.ಇ.ಟಿಯಲ್ಲಿ ವಿಫುಲ ಅವಕಾಶ – ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರ NAMMUR EXPRESS NEWS ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ನಡೆದ ಸಿ.ಎ, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಲವು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು. 17.07.2023 ಮತ್ತು 19.07.2023ರಂದು ನಡೆದ ಸಿ.ಎ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋಫೆಸರ್‌ ರಾಜ್‌ ಗಣೇಶ್‌ ಕಾಮತ್‌ ಆಗಮಿಸಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್‌ ಅನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕರದ ಅಶ್ವತ್ ಎಸ್.ಎಲ್‌ ಹಾಗೂ ಗಣಪತಿ ಭಟ್‌ ಕೆ.ಎಸ್‌ ವಿದ್ಯಾರ್ಥಿಗಳಿಗೆ ಕೋರ್ಸ್‌ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು.…

Read More

ಹೈಸ್ಕೂಲ್ ಹುಡುಗರ ಕೈಯಲ್ಲಿ ಚೂರಿ! – ಮಂಗಳೂರಲ್ಲಿ ಸಂಬಾರು ಚೆಲ್ಲಿದ್ದಕ್ಕೆ ಸಹಪಾಠಿಗೆ ಚೂರಿ ಎಸೆದ 9ನೇ ತರಗತಿ ವಿದ್ಯಾರ್ಥಿ – ಗುದ್ದಲಿಯಿಂದ ಹೊಡೆದು ಮಗಳಿಂದ ಅಪ್ಪನ ಕೊಲೆ – ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೋ ದೂರು – ಬಕೆಟ್ ಒಳಗೆ ಬಿದ್ದು ಮಗು ದುರ್ಮರಣ NAMMUR EXPRESS NEWS ಮಂಗಳೂರು: ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಬಟ್ಟೆಗೆ ಸಾಂಬಾರು ಚೆಲ್ಲಿದ ಕಾರಣಕ್ಕೆ ಸಣ್ಣ ವಿವಾದ ತಾರಕಕ್ಕೇರಿ ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಚೂರಿ ಎಸೆದು ಗಾಯಗೊಳಿಸಿದ ಘಟನೆ ಮಂಗಳೂರು ಬಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಒಬ್ಬ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದಕ್ಕೆ ಪ್ರತಿಯಾಗಿ ಬಟ್ಟೆಯಲ್ಲಿ ಕಲೆ ಆಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿ ಅಲ್ಲಿಂದ ಮುಂದೆ ಹೋಗುತ್ತಿರುವಾಗ ಪೆಟ್ಟು ತಿಂದ…

Read More

ಟಾಯ್ಲೆಟ್ ಗುಂಡಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ! – ಚಪ್ಪಲಿ ಕದ್ದೋಯ್ದಿದ್ದಕ್ಕೆ ದೂರು ಕೊಟ್ಟ!.. ಆಮೇಲ್ ಏನಾಯ್ತು…? – ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಬಾಲಕಿ! NAMMUR EXPRESS NEWS ಮಂಗಳೂರು: ಮನೆಯ ಹಿಂದಿನ ಟಾಯ್ಲೆಟ್ ಗುಂಡಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಗುಂಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮಹಿಳೆ ನಾಗಮ್ಮ ಕಳೆದ 4 ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಅನುಮಾನಕ್ಕೆ ಕಾರಣವಾಗಿದ್ದು ಕೊಲೆಯೋ ಆತ್ಮಹತ್ಯೆಯೋ ತಿಳಿದು ಬರಬೇಕಿದೆ. ಚಪ್ಪಲಿ ಕದ್ದೋಯ್ದಿದ್ದಕ್ಕೆ ದೂರು ಕೊಟ್ಟ! ವ್ಯಕ್ತಿಯೊಬ್ಬ ತನ್ನ ಚಪ್ಪಲಿ ಕಳವುಗೈದಿದ್ದಾರೆ ಎಂದು ಪೊಲೀಸರ ತುರ್ತು ಸ್ಪಂದನಾ ನಂಬರಾದ 112 ಕರೆ ಮಾಡಿ ಪೊಲೀಸರು ಬಳಿ ದೂರನ್ನು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಮಂಗಳೂರು…

Read More

ಕರಾವಳಿಯಲ್ಲಿ ಕೊರಗಜ್ಜನ ಪವಾಡ.! – ನಿದ್ದೆಗಣ್ಣಲ್ಲಿ ನಡು ರಾತ್ರಿ ಮಗುವನ್ನು ಕಾಪಾಡಿತು ಶಕ್ತಿ – ಕುಂದಾಪುರದ ದಬ್ಬೆಕಟ್ಟೆ ಎಂಬಲ್ಲಿ ನಡೆದ ಘಟನೆ NAMMUR EXPRESS NEWS ಕುಂದಾಪುರ: ನಡು ರಾತ್ರಿ 3 ಗಂಟೆಗೆ ನಿದ್ದೆಗಣ್ಣಲ್ಲೇ ಮನೆಯಿಂದ ಹೊರಬಿದ್ದ ಮಗುವೊಂದು ರಸ್ತೆಗೆ ಬಂದಿದ್ದು, ಅದನ್ನು ಕೊರಗಜ್ಜನೇ ಅಪಾಯದಿಂದ ಪಾರು ಮಾಡಿದ್ದಾನೆ ಎಂದು ನಂಬಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರಿನ ದಬ್ಬೆಕಟ್ಟೆ ಎಂಬಲ್ಲಿ ಇರುವ ಕಾರಣಿಕದ ಕೊರಗಜ್ಜ ಕ್ಷೇತ್ರದ ಸಮೀಪ ಈ ಪವಾಡ ನಡೆದಿದೆ. ಮಗು ಮನೆಯಿಂದ ಸುಮಾರು 3 ಕಿಮಿ ನಡೆದು ಬಳಿಕ ಕೊರಗಜ್ಜ ದೇವಾಲಯದ ಬಳಿ ನಿಂತಿದ್ದು ಚಾಲಕನೊಬ್ಬ ಬಾಲಕಿಯನ್ನು ರಕ್ಷಿಸಿದ್ದಾನೆ. ನಡೆದಿದ್ದೇನು..? ಮನೆಯೊಂದರ ಐದು ವರ್ಷದ ಪುಟ್ಟ ಹೆಣ್ಣುಮಗು ರಾತ್ರಿ ಮೂರು ಗಂಟೆಯ ಹೊತ್ತಿಗೆ ಮನೆಯಿಂದ ಹೊರಬಂದು ರಾತ್ರಿ ನಿದ್ದೆಗಣ್ಣಿನಲ್ಲಿ ನಡೆದು ಕೊರಗಜ್ಜ ದೇಗುಲದ ಬಳಿ ಸಾಗಿದೆ. ಈ ಮಗು ಮನೆಯಿಂದ ಅದು ಹೇಗೆ ಹೊರಬಿತ್ತೋ ಗೊತ್ತಿಲ್ಲ. ಅಪ್ಪ ಅಮ್ಮನಿಗೆ ಗೊತ್ತಾಗದಂತೆ, ಯಾರಿಗೂ ಸಣ್ಣ…

Read More

ನಿರ್ಮಲಾನಂದ ಸ್ವಾಮೀಜಿ ಜನ್ಮ ದಿನದ ಸಂಭ್ರಮ! – ಆದಿಚುಂಚನಗಿರಿ ಮಠದ ಶ್ರೀಗಳ ಸಮಾಜ ಸೇವೆಗೆ ನಮನ… ಶ್ರೀಗಳ ಸಾಧನೆ ಇಲ್ಲಿದೆ ನೋಡಿ – ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀಗಳಿಗೆ ಗುರುವಂದನೆ NAMMUR EXPRESS NEWS ನಾಗ ಮಂಗಲ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಮಠಾಧೀಶರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜನ್ಮ ದಿನವನ್ನು ರಾಜ್ಯದ ಎಲ್ಲಾ ಕಡೆ ಆಚರಣೆ, ಶುಭಾಶಯಗಳ ಮೂಲಕ ಆಚರಣೆ ಮಾಡಲಾಯಿತು. ತುಮಕೂರು ಜಿಲ್ಲೆ ಗುಬ್ಬಿಯಲ್ಲಿ 1967 ಜುಲೈ 20ರಂದು ಜನಿಸಿರುವ ಶ್ರೀಗಳು ನಾಡಿನ ಹೆಸರಾಂತ ಸಂತರಲ್ಲಿ ಒಬ್ಬರು. ಆದಿಚುಂಚನಗಿರಿ ಮಠದ ಬಾಲಗಂಗಾಧರ ಶ್ರೀಗಳ ಬಳಿಕ ಸಮಾಜ ಸೇವೆ, ಶಿಕ್ಷಣ ಸೇವೆ, ದಾಸೋಹ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು ನಾಡಿನ ಪ್ರಮುಖ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದಾರೆ. ಶ್ರೀ ಆದಿಚುಂಚನಗಿರಿ ಮಠವು 500ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಿದೆ. ಇವರು ಜಗದ್ಗುರು ಪದ್ಮಭೂಷಣ ಪುರಸ್ಕೃತರಾದ ಶ್ರೀ ಶ್ರೀ ಶ್ರೀ ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದೀಕ್ಷೆ ಪಡೆದ…

Read More

ತೀರ್ಥಹಳ್ಳಿಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ – ಜು.19ಕ್ಕೆ ಎಲ್ಲೆಡೆ ಚಾಲನೆ: ಅರ್ಜಿ ಹಾಕುವ ಪ್ರಕ್ರಿಯೆ ಶುರು – ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲಾ ಶೆಟ್ಟಿ ಚಾಲನೆ NAMMUR EXPRESS NEWS ತೀರ್ಥಹಳ್ಳಿ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಪಂಚ ಯೋಜನೆಗಳ ಪೈಕಿ ಒಂದಾದಂತ ಗೃಹಲಕ್ಷ್ಮಿಯೋಜನೆಯ ಚಾಲನೆಯನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೋಪಾಲಗೌಡರ ರಂಗಮಂದಿರದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಪಟ್ಟಣ ಪಂಚಾಯತಿ ಸದಸ್ಯರಾದ ರತ್ನಾಕರ ಶೆಟ್ಟಿ, ರಾಘವೇಂದ್ರ ಸೊಪ್ಪುಗುಡ್ಡೆ, ಶಬ್ನಂ, ಸಂದೇಶ್ ಜವಳಿ ಮಂಜುಳಾ ಹಾಗೂ ಮುಖ್ಯ ಅಧಿಕಾರಿ ಉಪಸ್ಥಿತರಿದ್ದರು. ಏನಿದು ಗೃಹ ಲಕ್ಷ್ಮೀ ಯೋಜನೆ? ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯ ವಾಗಿದೆ. ಇದರ ಜೊತೆಗೆ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಮೊಬೈಲ್ ತರಬೇಕು. ಗಂಡ ಜೀವಂತವಾಗಿದ್ದಲ್ಲಿ ಗಂಡನ ಆಧಾರ್ ಕಾರ್ಡ್…

Read More