Author: Nammur Express Admin

ಮಹಿಳೆ ಆತ್ಮಹತ್ಯೆ ಪ್ರಕರಣದ ಆರೋಪಿ ಶವ ಪತ್ತೆ! – ಕಾರ್ಕಳದ ಕಚೇರಿಯಲ್ಲೇ ನಡೆದಿದ್ದ ಆತ್ಮಹತ್ಯೆ ಪ್ರಕರಣ – ಅಪ್ರಾಪ್ತ ಮಗ ಬೈಕ್ ಓಡಿಸಿದ್ದಕ್ಕೆ ಅಪ್ಪನಿಗೆ ದಂಡ! – ಮಂಗಳೂರು: ಜ್ಯುವೆಲರ್ಸ್ ಮಾಲೀಕ ಆತ್ಮಹತ್ಯೆ – ಬಾಲಕಿಯರಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್ NAMMUR EXPRESS NEWS ಕಾರ್ಕಳ: ಮಹಿಳೆಯೋರ್ವರು ಬ್ಯಾಂಕ್ ನಲ್ಲಿಯೇ ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂತೋಷ್ ಯಾನೆ ಹರಿತನಯ ದೇವಾಡಿಗ ಹೊಸ್ಮಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರದಿಂದ ನಾಪತ್ತೆಯಾಗಿದ್ದ ಸಂತೋಷ್ ಈದುವಿನ ಮನೆಯೊಂದರ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡು ಎರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸಂತೋಷ್ ಯಾನೆ ಹರಿತನಯ ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾನೆ. ಪ್ರಮೀಳಾ ಆತ್ಮಹತ್ಯೆ ಬಳಿಕ ಆಕೆಯ ಸಹೋದರ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿತ್ತು. ಅಪ್ರಾಪ್ತ ಮಗ ಬೈಕ್ ಓಡಿಸಿದ್ದಕ್ಕೆ ಅಪ್ಪನಿಗೆ ದಂಡ! ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಪ್ಪನೊಬ್ಬ ಮಗನಿಗೆ…

Read More

ಯಡಿಯೂರಪ್ಪ ಇನ್ನು ಮುಂದೆ ಡಾಕ್ಟರ್! – ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಗೌರವ ಡಾಕ್ಟರೇಟ್ – ಜು.21 ರಂದು ಘಟಿಕೋತ್ಸವ ಸಂಭ್ರಮ – ರಾಜ್ಯ ಕಂಡ ಅಪರೂಪದ ಜನ ನಾಯಕನಿಗೆ ಗೌರವ NAMMUR EXPRESS NEWS ಶಿವಮೊಗ್ಗ: ರಾಜ್ಯ ಕಂಡ ಸರಳ ನಾಯಕ, ಜನಪರ ವ್ಯಕ್ತಿತ್ವದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನು ಮುಂದೆ ಡಾ.ಬಿ.ಎಸ್.ಯಡಿಯೂರಪ್ಪ ಅಗಲಿದ್ದಾರೆ. ಹೌದು. ಜು.21ರಂದು ನಡೆಯುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಘಟಿಕೋತ್ಸವದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ. ಈ ಕುರಿತು ವಿವಿಯ ಕುಲಪತಿಗಳು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಜು.21 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಂಭ್ರಮ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭವನ್ನು ಜು.21 ರ ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯ ಮುಖ್ಯ ಆವರಣ, ಇರುವಕ್ಕಿ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ ಎಂದು…

Read More

ಚಿಕ್ಕಮಗಳೂರಲ್ಲಿ ಮಳೆ ಆರ್ಭಟ: ಹಲವೆಡೆ ಅವಾಂತರ! – ಮೂಡಿಗೆರೆಯಲ್ಲಿ ಭತ್ತದ ಗದ್ದೆಯಲ್ಲಿ ವೃದ್ದೆ ಸಾವು – ಹಲವೆಡೆ ಅಪಘಾತ: ವಾಹನಗಳ ಅಪಘಾತ – ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ NAMMUR EXPRESS NEWS ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಎಲ್ಲೆಡೆ ಮಳೆಯಿಂದ ಮರಗಳು ಧರೆಗೆ ಉರುಳಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಾಲು ಜಾರಿ ಬಿದ್ದು ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಬಳಿ ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ಹೇಮಾವತಿ ನದಿಯಲ್ಲಿ ಬಿದ್ದ ವೃದ್ಧೆಯ ಶವ ಪತ್ತೆಯಾಗಿದೆ. ವೃದ್ಧೆಯು ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಮೃತರನ್ನು ದಾರದಹಳ್ಳಿ ಗ್ರಾಮದ ದೇವಮ್ಮ (61) ಎಂದು ಗುರುತಿಸಲಾಗಿದೆ. ಲಾರಿ ಮೇಲೆ ಬಿದ್ದ ಮರ: ಹಲವೆಡೆ ಧರೆ ಕುಸಿತ! ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕಳಸ, ಶೃಂಗೇರಿ, ಜಯಪುರ, ಚಿಕ್ಕಮಗಳೂರು, ಮೂಡಿಗೆರೆ ಸೇರಿ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೆರೆ ಕಟ್ಟೆಯಲ್ಲಿ ಲಾರಿ ಮೇಲೆ ಬೃಹತ್ ಮರವೊಂದು…

Read More

ಅಡಕೆ ಕಾರ್ಯಪಡೆ ರಚನೆಗೆ ಆರಗ ಜ್ಞಾನೇಂದ್ರ ಪಟ್ಟು! – ರಾಜ್ಯ ಅಡಕೆ ಬೆಳೆಗಾರರ ಹಿತರಕ್ಷಣೆಗೆ 10 ಕೋಟಿ ಅನುದಾನ ಬೇಕು – ರಾಜಧಾನಿಯಲ್ಲಿ ನಡೆಯಿತು ಅಡಿಕೆ ಸಭೆ! NAMMUR EXPRESS NEWS ತೀರ್ಥಹಳ್ಳಿ: ಅಸ್ತಿತದಲ್ಲಿದ್ದ ರಾಜ್ಯ ಅಡಕೆ ಕಾರ್ಯಪಡೆ ರಚಿಸಿ, ಬೆಳೆ ಸಂಶೋಧನೆಗೆ, ರಾಜ್ಯ ಸರಕಾರ ತಕ್ಷಣ ಹತ್ತು ಕೋಟಿ ರೂಪಾಯಿಗಳಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರೂ ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರನ್ನು ವಿನಂತಿಸಿದ್ದಾರೆ. ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ, ಸಹಕಾರ ಮಹಾಮಂಡಳದ ವತಿಯಿಂದ, ಆಯೋಜಿಸಲಾದ, ಅಡಕೆ ಬೆಳೆ, ಬೆಳೆಯುವ ಪ್ರದೇಶದ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಭೆಯನ್ನುದ್ದೇಶಿಸಿ, ಮಾತನಾಡುತ್ತಿದ್ದರು. ರಾಜ್ಯದ, ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಗಳಲ್ಲಿ, ಅಡಕೆ ಬೆಳೆ ಬೆಳೆಯಲಾಗುತ್ತಿದ್ದು, ರೈತರ ಆರ್ಥಿಕ ಶಕ್ತಿಯಾಗಿರುವ ಅಡಕೆ ಬೆಳೆ ಇಂದು ಹತ್ತು ಹಲವು ಸಂಕಷ್ಟ ಗಳನ್ನೂ ಎದುರಿಸುತ್ತಿದೆ, ರೈತರ ಹಾಗೂ ಅಡಕೆ ಬೆಳೆಯ ಹಿತಾಸಕ್ತಿ ಕಾಯುವ,…

Read More

ಹುಟ್ಟು ಹಬ್ಬವನ್ನು ವಿಶೇಷ ಚೇತನ ಮಕ್ಕಳ ಜತೆ ಆಚರಣೆ! – ಜಾನಪದ ಪರಿಷತ್ತಿನ ಅಧ್ಯಕ್ಷರಾದಂತಹ ಟಿ ಎನ್ ಮಂಜುನಾಥ್ ಶಿರುಪತಿ, ವಿದ್ಯಾರ್ಥಿನಿ ಟಿ ಆರ್ ಮಾಲಿನಿ ಹುಟ್ಟು ಹಬ್ಬ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಶಿರುಪತಿ ಶಾಲೆಯ ವಿದ್ಯಾರ್ಥಿನಿ ಟಿ ಆರ್ ಮಾಲಿನಿ ಹಾಗೂ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದಂತಹ ಟಿ ಎನ್ ಮಂಜುನಾಥ್ ಶಿರುಪತಿ ಅವರು ತಮ್ಮ ಹುಟ್ಟು ಹಬ್ಬವನ್ನು ತೀರ್ಥಹಳ್ಳಿ ಸೊಪ್ಪುಗುಡ್ಡೆ ವಿಶೇಷ ಚೇತನ ಶಾಲಾ ಮಕ್ಕಳ ಜತೆ ಆಚರಣೆ ಮಾಡಿದರು. ಶಿರುಪತಿ ರಾಘವೇಂದ್ರ ಮತ್ತು ಕವಿತಾ ದಂಪತಿಗಳ ಪುತ್ರಿ ಮಾಲಿನಿ ಹಾಗೂ ತೀರ್ಥಹಳ್ಳಿ ತಾಲೂಕಲ್ಲಿ ಜಾನಪದ ಕಲೆ ಉಳಿಸುವ ಕೆಲಸ ಮಾಡುತ್ತಿರುವ ಮಂಜುನಾಥ್ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ಜತೆ ಆಚರಣೆ ಮಾಡಿದರು. ಕುಮಾರ್ ಸರ್ ಮತ್ತು ಶಿಕ್ಷಕ ವೃಂದದವರು ನೇತೃತ್ವದಲ್ಲಿ ಎಸ್ ಟಿ ಎಂ ಸಿ ಎ ಅಧ್ಯಕ್ಷರು ಮತ್ತು ಸದಸ್ಯರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಮುಖ್ಯ ಅತಿಥಿಗಳು ಶಾಲೆಯ…

Read More

ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್! – ಮಣಿಪುರದಲ್ಲಿ ನಡೆದ ಘಟನೆ: ಭಾರತದಲ್ಲಿ ಏನಾಗ್ತಿದೆ? – ಸಾಮಾಜಿಕ ಜಾಲತಾಣದಲ್ಲಿ ವೈರಲ್… ಏನಿದು ಘಟನೆ? NAMMUR EXPRESS NEWS ಮಣಿಪುರದಲ್ಲಿ ನಡೆದ ಹಿಂಸಾಚಾರ, ಗಲಭೆ, ದಾಳಿಗೆ ಬಹುತೇಕ ರಾಜ್ಯವೇ ಸುಟ್ಟು ಕರಕಲಾಗಿದೆ.ಅನೇಕರು ಪ್ರಾಣ ಕಳೆದುಕೊಂಡಿದ್ದು ಇದೀಗ ಮತ್ತೊಂದು ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ಇದೀಗ ಮೇ 4 ರಂದು ನಡೆದಿರುವ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ, ವ್ಯಾಟ್ಸ್ಆ್ಯಪ್‌ಗಳಲ್ಲಿ ಹರಿದಾಡಲು ಆರಂಭಿಸಿದೆ. ಇದರಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭಗೊಂಡಿದೆ. ಇಬ್ಬರು ಮಹಿಳೆಯರನ್ನು ಕಿಡಿಗೇಡಿಗಳ ಗುಂಪು ಬೆತ್ತಲೇ ಮೆರವಣಿಗೆ ಮಾಡಿಸಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಇದೀಗ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಕಾರಣವಾಗಿದೆ. ಇಂಪಾಲ್‌ನಿಂದ 35 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯನ್ನು ಆಕ್ರೋಶಿತ ಹಾಗೂ ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿದೆ.…

Read More

ವಿಧಾನ ಸೌಧದಲ್ಲೇ ಕುಸಿದು ಬಿದ್ದ ಯತ್ನಾಳ್! – ಆಸ್ಪತ್ರೆಗೆ ರವಾನೆ: ಏನಾಯ್ತು ಯತ್ನಾಳ್ ಅರೋಗ್ಯ? NAMMUR EXPRESS NEWS ಬೆಂಗಳೂರು: ಶಾಸಕರನ್ನು ವಿಧಾನ ಸಭೆಯಿಂದ ಅಮಾನತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊರ ಹಾಕುವ ವೇಳೆ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರಿನಲ್ಲಿ ಕುಸಿದು ಬಿದ್ದಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ವಿಧಾನ ಸಭಾ ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದು, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಬಿಪಿಯಲ್ಲಿ ಏಳಿರಿಳಿತವಾಗಿ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ! HOW TO APPLY : NEET-UG COUNSELLING 2023

Read More

ಸುನಿಲ್ ಕುಮಾರ್, ಆರಗ ಸೇರಿ 10 ಶಾಸಕರ ಅಮಾನತು! – ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲ – ಅಮಾನತುಗೊಂಡ ಶಾಸಕರು ಯಾರು ಯಾರು? NAMMUR EXPRESS NEWS ಬೆಂಗಳೂರು: ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಸುನೀಲ್ ಕುಮಾರ್ ಸೇರಿದಂತೆ 10 ಸದಸ್ಯರ ಅಮಾನತು ಮಾಡಲಾಗಿದೆ. ವಿಧಾನಸಭೆಯಲ್ಲಿ ಬುಧವಾರ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆ ಸದನದ ಸ್ಪೀಕರ್ ಯುಟಿ ಖಾದರ್ ಅವರು 318 ನಿಯಮದ ಹಕ್ಕನ್ನು ಚಲಾಯಿಸಿ 10 ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಅರವಿಂದ ಬೆಲ್ಲದ್, ಸುನಿಲ್ ಕುಮಾರ್, ಉಮಾನಾಥ್ ಕೋಟ್ಯನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಸೇರಿ 10 ಸದಸ್ಯರನ್ನು ಸ್ಪೀಕರ್ ಖಾದರ್ ಅಮಾನತು ಮಾಡಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಭಾರೀ ಹೈಡ್ರಾಮಾ ನಡೆದಿದ್ದು, ಸ್ಪೀಕರ್ ಪೀಠವನ್ನು ಅಲಂಕರಿಸಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಯನ್ನು ಹರಿದು ಬಿಸಾಡಿದ ಪ್ರಸಂಗ ನಡೆಯಿತು. ಈ ಹಿನ್ನೆಲೆ ಗದ್ದಲ ಸೃಷ್ಟಿಸಿದ ಶಾಸಕರನ್ನು ಸಸ್ಪೆಂಡ್…

Read More

ಇನ್ನುಂದೆ ಒಂದು ಐಡಿಗೆ ಕೇವಲ 4 ಸಿಮ್ ಕಾರ್ಡ್! – ಕೇಂದ್ರದಿಂದ ಮಹತ್ವದ ನಿರ್ಧಾರ: ಏನಿದು ಹೊಸ ನಿಯಮ? – ಶೀಘ್ರದಲ್ಲೇ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ NAMMUR EXPRESS NEWS ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಸಿಮ್ ಕಾರ್ಡ್ ಬಳಸಿ ಜನರಿಗೆ ಟೋಪಿ ಹಾಕುವ ವಂಚಕರು ಸಾಕಷ್ಟಿದ್ದಾರೆ. ಹೀಗಾಗಿ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಲ್ಲಿಯವರೆಗೆ, ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿತ್ತು. ಇನ್ನುಂದೆ ಒಂದು ಐಡಿಯಲ್ಲಿ ಕಂಡುಬರುವ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು 9 ರಿಂದ 4ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರವು ಆನ್ ಲೈನ್ ವಂಚನೆ ತಡೆಯಲು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಸಿಮ್ ಕಾರ್ಡ್ ಗಳ ಸಂಖ್ಯೆನ್ನು 9 ರ ಬದಲು 4 ಕ್ಕೆ ಇಳಿಸಲು ಸರ್ಕಾರ ಯೋಜಿಸುತ್ತಿದೆ. ಏಕೆಂದರೆ ಇದು ವಂಚಕರಿಗೆ ಒಂದೇ ಐಡಿಯಲ್ಲಿ ಅನೇಕ ಸಿಮ್ ಕಾರ್ಡ್…

Read More

ಅಡಿಕೆ ರೇಟ್ ದಿಢೀರ್ ಕುಸಿತ! – ರಾಶಿ ಕ್ವಿಂಟಲ್ ಮೇಲೆ ಸುಮಾರು 2000 ರೂ. ಕುಸಿತ – ಅಡಿಕೆ ರೋಗ ಹತ್ತಿಕ್ಕಲು ಕೇಂದ್ರ ಸರ್ಕಾರ ವಿಫಲ – ಡಾ. ಆರ್. ಎಂ. ಮಂಜುನಾಥ ಗೌಡ ಹೇಳಿದ್ದೇನು..? NAMMUR EXPRESS NEWS ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಐವತ್ತೈದು ಸಾವಿರದ ಗಡಿ ದಾಟಿ ಮುಂದಕ್ಕೆ ಹೋಗಿದ್ದ ಅಡಿಕೆ ಧಾರಣೆ, ಕಳೆದ ಮೂರು ದಿನಗಳಿಂದ ದಿಢೀರ್ ಕುಸಿದಿದೆ. ಅಡಿಕೆ ಬೆಲೆ ದಿಢೀರ್ ಕುಸಿತದ ಹಿಂದೆ, ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕೈವಾಡವಿದೆ ಎಂದು ಗಂಭೀರ ಸಹಕಾರಿ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ದಿನಗಳಲ್ಲಿ 56 ಸಾವಿರಕ್ಕೇರಿದ್ದ ಅಡಿಕೆ ಧಾರಣ 54 ಸಾವಿರಕ್ಕೆ ಇಳಿದಿದೆ. ನಾವೆಲ್ಲರೂ ಅಡಿಕೆ ದರ ಆರವತ್ತು ಸಾವಿರ ಕ್ವಿಂಟಾಲ್‌ಗೆ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕುತಂತ್ರದಿಂದ ಬೆಲೆಯಲ್ಲಿ ದಿಢೀರ್ ಕಡಿಮೆಯಾಗಿರಬಹುದು…

Read More