ಆಭರಣ ಪ್ರಿಯರಿಗೆ ಬಿಗ್ ಶಾಕ್! – ಚಿನ್ನದ ಬೆಲೆಯಲ್ಲಿ ಏರಿಕೆ: ಬಂಗಾರದ ಬೆಲೆ ಎಷ್ಟು? – ಚಿನ್ನಾಭರಣಕ್ಕೆ ಡಿಮ್ಯಾಂಡ್: ಚಿನ್ನದಂಗಡಿಗೆ ಜನ NAMMUR EXPRESS NEWS ಬೆಂಗಳೂರು: ಅಷಾಢ ಮಾಸ ಮುಗಿಯುತ್ತಿದ್ದಂತೆ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು ನಡೆಯುವುದ ಕಡಿಮೆ. ಹೀಗಾಗಿ ಚಿನ್ನ ಬೆಳ್ಳಿ ದರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇದೀಗ ಆಷಾಢ ಮುಗಿದಿದ್ದು ಈ ಬೆನ್ನಲ್ಲೆ ಆಭರಣಪ್ರಿಯರಿಗೆ ಕಹಿಸುದ್ದಿ ಸಿಕ್ಕಿದ್ದು ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ ಇಳಿಕೆಯಾಗುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ ಇಳಿಕೆಯ ಆಧಾರದ ಮೇಲೂ ಆಭರಣ – ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ ದರ ಹೇಗಿದೆ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದಿನ ಚಿನ್ನ ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ.. ಒಂದು ಗ್ರಾಂ ಚಿನ್ನ : 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ…
Author: Nammur Express Admin
ರಿಯಲ್ ಲೈಫ್ ಲವ್ ಸ್ಟೋರಿ ಪ್ರಿಯಕರನ ಜತೆ ಪತ್ನಿ ಮದುವೆ ಮಾಡಿಸಿದ ಪತಿ! – ತಡ ರಾತ್ರಿ ಪ್ರಿಯಕರನ ಜತೆ ಸಿಕ್ಕಿ ಬಿದ್ದ ಬಳಿಕ ನಿರ್ಧಾರ – ಪ್ರಿಯಕರನಿಗೆ ಈಗಾಗಲೇ ಮದುವೆ: ಮೂರು ಮಕ್ಕಳಿದ್ದಾರೆ…! NAMMUR EXPRESS NEWS ಪ್ರಿಯಕರನ ಜತೆ ಪತ್ನಿ ಮದುವೆ ಮಾಡಿಸಿ ಆತನ ಮನೆಗೆ ಕಳುಹಿಸಿದ ಪ್ರಕರಣವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಅಚ್ಚರಿ ಎಂದರೆ ತಡ ರಾತ್ರಿ ಪ್ರಿಯಕರನ ಜತೆ ಸಿಕ್ಕಿ ಬಿದ್ದ ಬಳಿಕ ಈ ನಿರ್ಧಾರ ಮಾಡಿದ ಪತಿಯ ನಡೆ ಈಗ ಸದ್ದು ಮಾಡಿದೆ. ಪ್ರಿಯಕರನಿಗೆ ಈಗಾಗಲೇ ಮದುವೆ: ಮೂರು ಮಕ್ಕಳಿದ್ದಾರೆ. 1999ರಲ್ಲಿ ತೆರೆಕಂಡ ‘ಹಮ್ ದಿಲ್ ದೇ ಚುಕಿ ಸನಮ್ ಹಿಂದಿ ಸಿನಿಮಾ ಮಾದರಿಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ. ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಮಹಿಳೆಯನ್ನು ಭೇಟಿಯಾಗಲು ಆಕೆಯ ಪ್ರಿಯಕರ ತಡರಾತ್ರಿ ಮನೆಗೆ ಬಂದಿದ್ದ, ಆಗ ಕುಟುಂಬದವರ…
ಬೆಂಗಳೂರಲ್ಲಿ ಉಗ್ರರ ದಾಳಿಗೆ ಮಾಸ್ಟರ್ ಪ್ಲಾನ್! – ಸಿಸಿಬಿ ಪೊಲೀಸರಿಂದ ಐವರು ಶಂಕಿತ ಉಗ್ರರ ಬಂಧನ – ರಾಜ್ಯದ ಹಲವೆಡೆ ಉಗ್ರ ಕೃತ್ಯಕ್ಕೆ ತಯಾರಿ..? NAMMUR EXPRESS NEWS ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತರ ಉಗ್ರರನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್, ಜಾಹೀದ್ ಎಂದು ತಿಳಿದುಬಂದಿದೆ. ಐವರು 2007ರ ಅಕ್ಟೋಬರ್ ನಲ್ಲಿ ಮೂವರ ಕಿಡ್ನಾಪ್ ಹಾಗೂ ಓರ್ವನ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು ಎನ್ನಲಾಗಿದೆ. ಅಲ್ಲದೇ ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒಗ್ಗೂಡಿಸುತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ, ಸಿಸಿಬಿ ಮಾಹಿತಿ ಸಂಗ್ರಹ ಮಾಡಿತ್ತು. ಮಾಹಿತಿ ಅನ್ವಯ ಸಿಸಿಬಿ ಜೊತೆಗೆ ಕಾರ್ಯಾಚರಣೆ…
ತೀರ್ಥಹಳ್ಳಿಯಲ್ಲಿ ಒತ್ತುವರಿ ಪ್ರಕರಣದಲ್ಲಿ ಜೈಲು! – ಆಗುಂಬೆ ಬಳಿ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ – ಮಲೆನಾಡಲ್ಲಿ ಮತ್ತೆ ಅರಣ್ಯ ಇಲಾಖೆ ಸಂಘರ್ಷ – ತೀರ್ಥಹಳ್ಳಿ ಕುರುವಳ್ಳಿ ಬಳಿ ಅಪಘಾತ – ಭಾರೀ ಮಳೆ: ನೂರಾರು ಕಡೆ ಮರ ಧರೆಗೆ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಲ್ಲಿ ಮತ್ತೆ ಶುರುವಾಯ್ತಾ ಅರಣ್ಯ ಇಲಾಖೆ -ರೈತರ ನಡುವಿನ ಸಂಘರ್ಷ. ಇದಕ್ಕೆ ಪುಷ್ಠಿ ನೀಡಿದೆ ಈ ಪ್ರಕರಣ. ಅರಣ್ಯ ಅಧಿಕಾರಿಗಳ ಕೆಲಸಕ್ಕೆ ಅಡ್ಡಬಂದು, ಅವರನ್ನ ತಳ್ಳಾಡಿ ನೂಕಾಡಿದ ಪ್ರಕರಣ ಸಂಬಂಧ ಕೋರ್ಟ್ ವೊಂದು ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಆರೋಪಿಗಳಿಗೆ 3 ವರ್ಷ ಶಿಕ್ಷೆ ವಿಧಿಸಿದೆ. ಏನಿದು ಪ್ರಕರಣ?: ದಿನಾಂಕ: 28/01/2021 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಗೇರಿ ಗ್ರಾಮದಲ್ಲಿ ಭದ್ರಪ್ಪ ಮತ್ತು ರಕ್ಷಿತ್ ಅರಣ್ಯ ಜಾಗವನ್ನು ಒತ್ತುವರಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಆಗುಂಬೆ ವಲಯದ ಉಪವಲಯ ಅರಣ್ಯಾಧಿಕಾರಿಯಾದ ಕಿರಣ ಕುಮಾರ್ ಮತ್ತು ಅರಣ್ಯ ರಕ್ಷಕರಾದ…
ಇತಿಹಾಸದ ಪುಟ ಸೇರಿದ “ಗೊರಬು”! – ನಾಟಿ ಮಾಡಲು ಬಳಸುತ್ತಿದ್ದ ಹೊದಿಕೆ – ಕರಾವಳಿ, ಮಲೆನಾಡಲ್ಲಿ ಗೊರಬು ಮಾಯ NAMMUR EXPRESS NEWS ಕಾರ್ಕಳ/ಹೆಬ್ರಿ: ಎರಡು ದಶಕಗಳ ಹಿಂದೆ ಮಳೆಗಾಲ ಬಂತೆಂದರೆ ಗೊರಬಿಗೆ ಭಾರಿ ಡಿಮಾಂಡ್. ಕೃಷಿ ಸಮಯದಲ್ಲಿ ಗದ್ದೆ ನಾಟಿ ಹಾಗೂ ಉಳುಮೆ ವೇಳೆಯಲ್ಲಿ ಗೊರಬು ಹಿಡಿದು ಕೆಲಸ ಮಾಡುವುದೇ ಚಂದ. ಧಾರಾಕಾರವಾಗಿ ಮಳೆ ಸುರಿದರೂ ಚಳಿಯು ಆಗದೆ ಬಿಸಿಯಾಗಿ ಇಡುವ ಗೊರಬು ಮಲೆನಾಡು ಹಾಗೂ ಕರಾವಳಿಗರ ಪ್ರೀತಿಯ ವಸ್ತುವಾಗಿತ್ತು. ಹೆಂಗಸರು ಗೊರಬು ಇಲ್ಲದೆ ನಾಟಿ ಕೆಲಸಕ್ಕೆ ಹೊರಡುತ್ತಿರಲಿಲ್ಲ. ಆದ್ರೆ ಕಾಲ ಬದಲಾಗಿದೆ. ಗೊರಬು ಬದಲು ಪ್ಲಾಸ್ಟಿಕ್ ಬಂದಿದೆ. ಇನ್ನು ಹೈಟೆಕ್ ಜರ್ಕಿನ್ ವಸ್ತುಗಳು ಗೊರಬನ್ನು ಗೊಬ್ಬರದ ಗುಂಡಿಗೆ ಎಸೆಯುವಂತೆ ಮಾಡಿದೆ. ತುಳುವಿನಲ್ಲಿ ಗೊರಬಿಗೆ ಕೊರಂಬು, ಪನೋಲಿ ಎನ್ನುವುದು ವಾಡಿಕೆ ಕನ್ನಡದಲ್ಲಿ ಗೊರಬು , ಮಂಗಳೂರು ಭಾಗಗಳಲ್ಲಿ ಪನೋಲಿ ಎಂದು ಕರೆಯುವುದು ಜನಜನಿತ. ಇದೀಗ ಗೊರಬು ಕಾಣೆಯಾಗಿದೆ. ಗೊರಬು ಹೆಣೆಯುವ ಕಲೆಯೇ ರೋಚಕ! ಕಾಡಿನಿಂದ ಅಯ್ದುಕೊಂಡು ಬರುವ ಬಿದಿರನ್ನು ಕಡ್ಡಿಗಳನ್ನು ತ್ರಿಭುಜ…
ಮಗನಿಗಾಗಿ ಜೀವವನ್ನೇ ಬಲಿ ಕೊಟ್ಟ ತಾಯಿ! – ಮಗನ ಓದಿಗಾಗಿ ಬಸ್ ಅಡಿ ಸಿಲುಕಿ ಪ್ರಾಣ ಬಿಟ್ಟ ತಾಯಿ! – ಮೃತಪಟ್ಟ ಯಜಮಾನಿಗಾಗಿ ಕಾದು ಕುಳಿತ ನಾಯಿ! – ಮಂತ್ರವಾದಿ ಮಾತು ಕೇಳಿ ಬಾಲಕಿ ಹೃದಯ ತೆಗೆದರು! – ಉಡುಪಿಯಲ್ಲಿ ದೋಣಿ ಮುಳುಗಡೆ: ಐವರು ಪಾರು! NAMMUR EXPRESS NEWS ಸೇಲಂ: ಮಗನ ವಿದ್ಯಾಭ್ಯಾಸಕ್ಕಾಗಿ ಬಸ್ ಅಡಿಗೆ ಬಿದ್ದು ತಾಯಿ ಮೃತಪಟ್ಟ ದುರಂತಮಯ ಘಟನೆ ತಮಿಳುನಾಡಿನ ಸೇಲಂ ಅಲ್ಲಿ ಇತ್ತೀಚಿಗೆ ನಡೆದಿದ್ದು ಈ ಘಟನೆ ಈಗ ದೇಶದಲ್ಲಿ ಸದ್ದು ಮಾಡಿದೆ. ತನ್ನ ಮಗನ ಕಾಲೇಜು ಹಣ ಕಟ್ಟಲು ಸಾಧ್ಯವಾಗದ ಕಾರಣ ತಾನೂ ಮೃತಪಟ್ಟರೆ ಪರಿಹಾರದ ಹಣದಲ್ಲಿ ಮಗ ಓದಲಿ ಎಂದು ರಸ್ತೆಯಲ್ಲಿ ನಡೆದು ಹೋಗುವಂತೆ ನಾಟಕ ಮಾಡಿ ಅಲ್ಲೇ ಬಸ್ ಅಡಿ ಸಿಲುಕಿ ಸಾವನ್ನು ಕಂಡಿದ್ದಳು. ಮೊದಲು ಈ ಸಾವು ಆಕಸ್ಮಿಕ ಎನ್ನಲಾಗಿತ್ತು. ತಾಯಿಯೊಬ್ಬಳ ಈ ನಿರ್ಧಾರ ಇಡೀ ವಿಶ್ವದ ಮನ ಕಲುಕಿದೆ. ತನ್ನ ಮಗನ ಶಾಲಾ ಶುಲ್ಕ 45 ಸಾವಿರ…
ಕರಾವಳಿ ಟಾಪ್ ನ್ಯೂಸ್ – ನಿವೃತ್ತ ಅಧಿಕಾರಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ! – ಮಣಿಪಾಲದಲ್ಲಿ ನಡೆದ ಘಟನೆ: ತನಿಖೆ ಶುರು – ಉಡುಪಿಯ ಟೈಲ್ಸ್ ಅಂಗಡಿಗೆ ದಂಡ – 2 ಕಿ ಮೀ ಕಾರನ್ನೇ ಎಳೆದೊಯ್ದ ಟಿಪ್ಪರ್! – ಕುಂದಾಪುರ: 9ನೇ ತರಗತಿಯ ವಿದ್ಯಾರ್ಥಿ ನಾಪತ್ತೆ – ಬ್ರಹ್ಮಾವರ: ಬಸ್ಸಿನಲ್ಲೇ ಬಟ್ಟೆ ಒಣಗಲು ಹಾಕಿದ ಪ್ರಯಾಣಿಕರು! NAMMUR EXPRESS NEWS ಮಣಿಪಾಲ: ಕೇಂದ್ರ ಇಲಾಖೆಯ ನಿವೃತ್ತ ಅಧಿಕಾರಿಯೋರ್ವರ ಶವವು ಕೊಳೆತ ಸ್ಥಿತಿಯಲ್ಲಿದೆ. ಮೃತರನ್ನು ಪೆರ್ಡೂರು ನಿವಾಸಿ 83 ವರ್ಷದ ಗೋಪಾಲ ನಾಯಕ್ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಮೂರು ದಿನಗಳು ಕಳೆದಿರಬಹುದೆಂಬ ಶಂಕೆ ಇದೆ. ಮೃತರು ದಶರಥ ನಗರದ ವರಸಿಂಗ ದೇವಸ್ಥಾನದ ಬಳಿ ಒಂಟಿಯಾಗಿ ವಾಸವಾಗಿದ್ದರು. ಮಣಿಪಾಲ ಪೋಲಿಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಾದರು. ಟೈಲ್ಸ್ ಅಂಗಡಿ, ಕಂಪೆನಿಗೆ 1ಲಕ್ಷ ರೂ.ದಂಡ…
ಮಲೆನಾಡ ಸಮಸ್ಯೆಗೆ ಸಿಗುತ್ತಾ ಮುಕ್ತಿ? – ಶರಾವತಿ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಚರ್ಚೆ – ಅರಣ್ಯ, ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ – ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರು ಹಾಜರ್ NAMMUR EXPRESS NEWS ಬೆಂಗಳೂರು: ವಿಧಾನಸೌಧದಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ, 94 ಸಿ, 94 ಸಿಸಿ ಸೇರಿ ಮಲೆನಾಡು ಭಾಗದ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಯಾ ಇಲಾಖೆಗಳ ಸಂಪುಟ ಸಹೋದ್ಯೋಗಿಗಳು ಹಾಗೂ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಯಿತು. ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ, ಯುವಜನ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಾದ ಬಿ.ನಾಗೇಂದ್ರ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂ ಎ ಪೊನ್ನಣ್ಣ ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸಕರು ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಭಾಗವಹಿಸಿದರು.…
ಮಹಿಳೆಯರಿಗೆ ಮಾತ್ರ ಯಾಕೆ..ಗಂಡಸರಿಗೂ 2 ಸಾವಿರ ರೂಪಾಯಿ ಕೊಡಲು ಪಟ್ಟು! – ಯಜಮಾನಿಗೆ 2 ಸಾವಿರ ಬಂದರೆ ಯಜಮಾನನ ಕಥೆ ಏನು? – ಸರ್ಕಾರಕ್ಕೆ ವಾಟಾಳ್ ನಾಗರಾಜ್ ಅಗ್ರಹ ಏನು? NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2000 ಹಣ ನೀಡುವ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದೆ. ಈ ನಡುವೆ ಮಹಿಳೆಯವರಿಗೆ ಮಾತ್ರ 2000 ಕೊಡುವುದಲ್ಲ, ಪುರುಷರಿಗೂ ಕೊಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮನೆ ಯಜಮಾನಿಗೆ 2000 ರೂಪಾಯಿ ಸರ್ಕಾರ ನೀಡುವ ಮೂಲಕ ಯಜಮಾನ ಯಜಮಾನಿಗೆ ಜಗಳ ತಂದಿಡೋದು ಸರಿಯಲ್ಲ. ಪುರುಷರಿಗೂ ಗೃಹಲಕ್ಷ್ಮೀ ಕೊಡಬೇಕು ಅಂತ ಹೇಳಿದ್ದಾರೆ. ಗೌರವಯುತವಾಗಿ ಕೇಳ್ತೀನಿ ಯಜಮಾನನಿಗೂ ಕೊಡಬೇಕು, ಅವರನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಯಜಮಾನಿಗೆ 2 ಸಾವಿರ ಬಂದರೆ ಯಜಮಾನನ ಕಥೆ ಏನು ಎಂದು ಪ್ರಶ್ನಿಸಿದ ಅವರು, ಬಜೆಟ್ ಮೇಲಿನ…
ತೀರ್ಥಹಳ್ಳಿಯಲ್ಲಿ ಭಾರಿ ಗಾಳಿ, ಮಳೆ! – ಹಲವೆಡೆ ವಿದ್ಯುತ್ ವ್ಯತ್ಯಯ: ತಂಡಿ ಗಾಳಿ ಸಹಿತ ಮಳೆ – ರೈತರಲ್ಲಿ ಕಾಡುತ್ತಿದೆ ಕೊಳೆ ರೋಗದ ಭೀತಿ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಭಾರಿ ಗಾಳಿ ಮಳೆ ಸುರಿಯುತ್ತಿದ್ದು ಹಲವು ಕಡೇ ಮರ ಉರುಳಿ ವಿದ್ಯುತ್ ಹಾಗೂ ಮೊಬೈಲ್ ಸೌಲಭ್ಯ ಸ್ಥಗಿತಗೊಂಡಿದೆ. ಕಳೆದ ಎರಡು ದಿನಗಳಿಂದ ಭಾರಿ ಗಾಳಿಗೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಿದೆ. ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಹಲವು ಕಡೆ ತಂಡಿ ಗಾಳಿ ಸಹಿತ ಮಳೆ ಸುರಿದಿದೆ. ಇನ್ನು ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕೊಳೆ ರೋಗ ಭೀತಿ!: ಮಳೆ ಹೀಗೆ ಮುಂದುವರೆದರೆ ಅಡಿಕೆ ಗಿಡಗಳಿಗೆ ರೋಗ ಬರುವ ಸಾಧ್ಯತೆ ಹೆಚ್ಚಾಗಿದ್ದು ರೋಗದ ಭೀತಿ ರೈತರನ್ನು ಕಾಡುತ್ತಿದೆ. ಕಳೆದ ವರ್ಷ ಎಲೆಚುಕ್ಕಿ ರೋಗ ಇಡೀ ಮಲೆನಾಡ ರೈತರನ್ನು ಆತಂಕಕ್ಕೆ ತಳ್ಳಿತ್ತು. ಇದೀಗ ಹಲವೆಡೆ ಎಲೆ ಚುಕ್ಕಿ ರೋಗ ಕಾಣುತ್ತಿದೆ. ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕಿದೆ. ಇದನ್ನೂ ಓದಿ : ಗೃಹ…