Author: Nammur Express Admin

ಮಲೆನಾಡಲ್ಲಿ ಕೊಡೆ ಅಮಾವಾಸ್ಯೆ ಆಚರಣೆ! – ಒಂದು ಕಡೆ ಭೀಮನ ಅಮಾವಾಸ್ಯೆ, ಇನ್ನೊಂದು ಕಡೆ ರೊಟ್ಟಿ ಹಬ್ಬ – ದೇವಸ್ಥಾನಗಳಲ್ಲಿ ಫುಲ್ ರಶ್: ಭಕ್ತಿಯ NAMMUR EXPRESS NEWS ತೀರ್ಥಹಳ್ಳಿ: ಭೀಮನ ಅಮಾವಾಸ್ಯೆ ಹಾಗೂ ಕೊಡೆ ಅಮಾವಾಸ್ಯೆಯನ್ನು ಮಲೆನಾಡಲ್ಲಿ ಜನ ಸೋಮವಾರ ಆಚರಣೆ ಮಾಡಿದರು. ಶ್ರೀರಾಮೇಶ್ವರ ದೇವಸ್ಥಾನ ಹಾಗೂ ಭೀಮನ ಕಟ್ಟೆಯ ಭೀಮೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಹೆಚ್ಚಾಗಿದ್ದು ಕಂಡು ಬಂತು. ಭೀಮನ ಅಮಾವಾಸ್ಯೆ ಸೋಮವಾರ ಬಂದಿರುವುದು ಈ ಸಾಲಿನ ವಿಶೇಷ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ ಹಾಗೂ ಭೀಮನ ಕಟ್ಟೆಯ ದೇವಸ್ಥಾನಕ್ಕೆ ಭಕ್ತಾದಿಗಳು ಬೆಳಗಿನಿಂದಲೇ ಸಾಕಷ್ಟು ಜನ ದೇವಸ್ಥಾನಕ್ಕೆ ಬಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇನ್ನು ಭೀಮನ ಅಮಾವಾಸ್ಯೆ ಅಂಗವಾಗಿ ಪತ್ನಿಯರು ತಮ್ಮ ಪತಿಗಳ ಪಾದಪೂಜೆ ಮಾಡಿದರು. ಶೃಂಗೇರಿ, ಹೊರನಾಡು ಸೇರಿ ಈಶ್ವರ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಭಕ್ತಾದಿಗಳು ಶ್ರೀರಾಮೇಶ್ವರ ನಿತ್ಯ ಅನ್ನ ಸಂರ್ಪಣ ಹಾಗೂ ಧಾರ್ಮಿಕ ಸೇವಾ…

Read More

ನಾಲ್ವರು ಉಗ್ರರ ಹೊಡೆದು ಉರುಳಿಸಿದ ಯೋಧರು! – ಪೂಂಚ್‌ನ ಸಿಂಧ್ರ ಪ್ರದೇಶದಲ್ಲಿ ನಡೆದ ಘಟನೆ – ಮೈಸೂರಲ್ಲಿ ಅಪಘಾತಕ್ಕೆ ಮೂವರು ಬಲಿ! – ಕಾಪು: ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ! NAMMUR EXPRESS NEWS ಸಿಂಧ್ರ: ಭಾರತದ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿರುವ ಘಟನೆ ಪೂಂಚ್‌ನ ಸಿಂಧ್ಯಾ ಪ್ರದೇಶದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ 11:30ರ ಸುಮಾರಿಗೆ ಭದ್ರತಾ ಪಡೆಗಳ ನಡುವೆ ಮೊದಲ ಸುತ್ತಿನ ಎನ್‌ಕೌಂಟರ್ ನಡೆದಿದ್ದು, ನಂತರ ಈ ಭಾಗದಲ್ಲಿ ಡ್ರೋನ್ ಕಣ್ಣಾವಲು ಇರಿಸಲಾಗಿತ್ತು ಎನ್ನಲಾಗಿದೆ. ಇನ್ನು ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಮುಂಜಾನೆ ಎನ್‌ಕೌಂಟರ್ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಸೇರಿತ್ತು. ಮೈಸೂರಲ್ಲಿ ಅಪಘಾತಕ್ಕೆ ಮೂವರು ಬಲಿ! ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ಸಮೀಪ…

Read More

ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ… – ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಎಚ್‌. ಎಂ ನಾಗರಾಜ ರಾವ್‌ ಕಲ್ಕಟ್ಟೆ NAMMUR EXPRESS NEWS ಕಾರ್ಕಳ: ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ ಎಂದು ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌. ಎಂ ನಾಗರಾಜ ರಾವ್‌ ಕಲ್ಕಟ್ಟೆ ನುಡಿದರು. ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮ-7 ರಲ್ಲಿ ಪಾಲ್ಗೊಂಡು “ಸಾಹಿತ್ಯ ಸಹವಾಸ ವ್ಯಕ್ತಿತ್ವ ವಿಕಸನ” ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿ, ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ…

Read More

ಸಿಂಚನಾ ಮುರುಗರಾಜ್ 4ನೇ ರ‌್ಯಾಂಕ್ – ಕುವೆಂಪು ವಿವಿ ಎಂ.ಎಸ್ಸಿ ಬಯೋ ಕೆಮಿಸ್ಟ್ರಿಯಲ್ಲಿ ಸಾಧನೆ – ಪತ್ರಕರ್ತರಾದ ಮುರುಗರಾಜ್, ನಾಗರತ್ನ ಮುರುಗರಾಜ್ ದಂಪತಿಗಳ ಪುತ್ರಿ NAMMUR EXPRESS NEWS ತೀರ್ಥಹಳ್ಳಿ: ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 2022ರಲ್ಲಿ ನಡೆದ ಸ್ನಾತಕೋತ್ತರ ಬಯೋ ಕೆಮಿಸ್ಟ್ರಿ ಪದವಿ ಪರೀಕ್ಷೆಯಲ್ಲಿ ನಾಲ್ಕನೆ ರ‌್ಯಾಂಕ್ ಗಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಸಿಂಚನಾ ಮುರುಗರಾಜ್ ಅವರಿಗೆ 4ನೇ ರ‌್ಯಾಂಕ್ ಬಂದಿದೆ. ಸಿಂಚನಾ ತೀರ್ಥಹಳ್ಳಿ ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕಿ ನಾಗರತ್ನಮುರುಗರಾಜ್ ಹಾಗೂ ಪತ್ರಕರ್ತರಾದ ಮುರುಗರಾಜ್ ಕೋಣಂದೂರು ಇವರ ಪುತ್ರಿಯಾಗಿದ್ದಾರೆ. ಇವರ ಸಾಧನೆಗೆ ವಿಶ್ವ ವಿದ್ಯಾಲಯದ ಬೋಧಕ ಸಿಬ್ಬಂದಿ, ಪೋಷಕರು, ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘ, ಸ್ನೇಹಿತರು ಶುಭಾಶಯ ಕೋರಿದ್ದಾರೆ. ಗ್ರಾಮಾಂತರ ಶಾಲಾ ಮಕ್ಕಳಿಗೆ ರೋಟರಿ ಕ್ಲಬ್ ಸಹಾಯ ಹಸ್ತ – ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ – ರೊ.ಭರತ್ ಕುಮಾರ್ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಸು,ಕಡೇಗದ್ದೆ ಮತ್ತು ಖಂಡಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ತೀರ್ಥಹಳ್ಳಿ…

Read More

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಇನ್ನಿಲ್ಲ! – ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ – ಪುತ್ರಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚೂರಿಯಿಂದ ಇರಿದ ತಂದೆ! – ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ! NAMMUR EXPRESS NEWS ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (79) ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಅವರು ಫೆಬ್ರುವರಿ 12ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 18ರಂದು ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ಸಾವನ್ನಪ್ಪಿರುವುದನ್ನು ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ನಟರಾಜ್​ನ್ ಟ್ವಿಟ್ಟರ್​ ಮೂಲಕ ಖಚಿತಪಡಿಸಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದರು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಶ್ರಮಿಸಿದ್ದ ಒಮ್ಮನ್ ಚಾಂಡಿಗೆ 2013 ರಲ್ಲಿ…

Read More

ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ! – ಬೆಂಗಳೂರಿನ ಅನೇಕಲ್ಲಿನಲ್ಲಿ ನಡೆದ ಘಟನೆ – ಕೋತಿ ಅಂತ್ಯ ಸಂಸ್ಕಾರ ಮಾಡಿದ ಜನ! NAMMUR EXPRESS NEWS ಆನೇಕಲ್: ದೇವಾಲಯದ ಬಾಗಿಲಿನಲ್ಲೇ ಮಂಗವೊಂದು ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿ ನಡೆದಿದೆ. ವೀರಾಂಜನೇಯ ಸ್ವಾಮಿ ದೇವಾಲಯದ ಮುಖ್ಯ ದ್ವಾರದ ಬಳಿಯೇ ಕೋತಿ ಪ್ರಾಣ ಬಿಟ್ಟಿದೆ. ಈ ಘಟನೆ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಕೊತ್ತೋಲು ಮುನಯ್ಯ ಎಂಬುವವರು ದಾನವಾಗಿ ನೀಡಿದ್ದ ಜಮೀನಿನಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವಿದೆ. ಕೋತಿ, ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು. ಸೋಮವಾರ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸಂಜೆ ದೇವಾಲಯದ ಬಾಗಿಲು ಹಾಕಿಕೊಂಡು ಅರ್ಚಕರು ಹೋಗಿದ್ದರು. ಇದೀಗ ಕೋತಿ ದೇವಾಲಯದ ಮುಖ್ಯದ್ವಾರದ ಬಳಿಯೇ ತಲೆ ಇಟ್ಟು ಕೊನೆಯುಸಿರೆಳೆದಿದೆ. ಈ ವಿಸ್ಮಯಕಾರಿ ಘಟನೆ ತಿಳಿದ ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಜನರು ದೇವಾಲಯದ ಬಳಿ ಜಮಾಯಿಸುತ್ತಿದ್ದಾರೆ. ಇದನ್ನೂ ಓದಿ :…

Read More

ವಿಶ್ವ ಕುಂದಾಪ್ರ ಕನ್ನಡ ದಿನದ ರಂಗು! – ಕುಂದಾಪ್ರ ಕನ್ನಡ, ಭಾಶಿ ಅಲ್ದ ಬದ್ಕ್ – ಕುಂದಾಪುರ ಸೇರಿ ಎಲ್ಲೆಡೆ ಕುಂದಾಪ್ರ ದಿನ ಆಚರಣೆ – ಜು.23ಕ್ಕೆ ಬೆಂಗಳೂರಿನಲ್ಲಿ ಕುಂದಾಪುರದವರ ಸಮಾಗಮ NAMMUR EXPRESS NEWS ಭಾರತ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಸಂಸ್ಕೃತಿ ಪದ್ಧತಿಯಿಂದ ಹಿಡಿದು ಭಾಷೆಯವರೆಗೆ ತುಂಬಾ ಭಿನ್ನವಿದೆ. ವೈವಿಧ್ಯಮಯವಿದೆ. ಈಗ ಹೇಳ ಹೊರಟಿರೋ ಸ್ಟೋರಿ ನಮ್ಮೂರ್ ಕುಂದಾಪುರದ್ದು…! ಕರಾವಳಿಯ ಒಂದು ಪುಟ್ಟ ತಾಲ್ಲೂಕು ಕುಂದಾಪುರ. ಅಲ್ಲಿನ ಕನ್ನಡ ಮಂಗಳೂರು ಕನ್ನಡಕ್ಕೆ ಹೋಲಿಸಿದರೆ ತುಂಬಾ ಭಿನ್ನವಾಗಿದೆ. ಕುಂದಾಪುರ ತಾಲೂಕಿನ ಶೇ.85ರಷ್ಟು ಮಂದಿ ಕುಂದಾಪುರ ಕನ್ನಡ ಭಾಷೆಯನ್ನೇ ಬಳಸುತ್ತಾರೆ. ಕುಂದಾಪುರ ಕನ್ನಡ ಒಂದು ಉಪ ಭಾಷೆ ಆಗಿದ್ದು ಸೊಗಸಾದ ಕನ್ನಡವನ್ನು ಉಳಿಸಿ ವಿಶ್ವಕ್ಕೆ ಕುಂದಾಪುರ ಕನ್ನಡದ ಸೋಗಸನ್ನು ಸಾರುವ ಉದ್ದೇಶದಿಂದ “ಕುಂದಾಪುರ ಕನ್ನಡ ದಿನ”ವನ್ನು ಆಚರಿಸಲಾಗುತ್ತದೆ. ತಮ್ಮ ಆಡು ಭಾಷೆಯನ್ನಾಗಿ ಬಳಸುವ ಭಾಷೆ ಕುಂದಾಪುರಿಗರ ಬದುಕಿನ ಭಾಷೆಯೂ ಹೌದು ಎಂಬುದನ್ನು ವಿಶ್ವಕ್ಕೆ…

Read More

ಜು.20ರವರೆಗೆ ಮಳೆ ಹೈ ಅಲರ್ಟ್! – ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಮಲೆನಾಡಲ್ಲಿ ಮುಂಗಾರು ಚುರುಕು NAMMUR EXPRESS NEWS ಉಡುಪಿ/ ಮಂಗಳೂರು: ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ವರುಣನ ಕೃಪೆ ಮುಂದುವರೆದಿದೆ. ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಮಲೆನಾಡಲ್ಲಿ ಮಳೆ ಕಳೆದ ಎರಡು ದಿನಗಳಿಂದ ಶುರುವಾಗಿದೆ. ಜುಲೈ 20ರವರೆಗೆ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಲೆನಾಡು ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹಲವು ಕಡೆಗಳಲ್ಲಿ ರೈತರು ಭತ್ತ ನಾಟಿ ಮಾಡಲು ಆರಂಭಿಸಿದ್ದಾರೆ. ಭಾನುವಾರ ಕೂಡ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಶೃಂಗೇರಿ, ಹೊರನಾಡು, ಕೊಪ್ಪ, ಮೂಡಿಗೆರೆ, ಮಾವಿನಕಾಡು, ಕಾರವಾರ, ಗೋಕರ್ಣ, ಧರ್ಮಸ್ಥಳ, ಉಡುಪಿ, ಮಲ್ಪೆ, ಪಣಂಬೂರು, ಕಾಪು, ಶಿರಸಿ, ಸಾಗರ, ಶಿವಮೊಗ್ಗ, ಕಾರ್ಗಲ್ ಸೇರಿದಂತೆ…

Read More

ನೀವೂ ಸೇನೆ ಸೇರಬೇಕೇ? ಉಡುಪಿಯಲ್ಲಿ ನೇಮಕಾತಿ! – ಜು.25ರವರೆಗೆ ಅಗ್ನಿಪಥ್ ಸೇನಾ ನೇಮಕಾತಿ – ಕರಾವಳಿಯಲ್ಲೇ ಸೇನೆ ಸೇರಲು ಯುವ ಜನತೆ ನಿರುತ್ಸಾಹ NAMMUR EXPRESS NEWS ಉಡುಪಿ: ಅಗ್ನಿಪಥ್ ಸೇನಾ ನೇಮಕಾತಿಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಜು 17ರಿಂದ ಜು.25ರ ವರೆಗೆ ನಡೆಯಲಿರುವ ಅಗ್ನಿಪಥ್ ನೇಮಕಾತಿಗೆ ಉಡುಪಿ ಜಿಲ್ಲಾಡಳಿತ ಮೊದಲ ಬಾರಿಗೆ ಆತಿಥ್ಯವಹಿಸಿದೆ. ಅಡಿಷನಲ್‌ ಮೇಜರ್ ಜನರಲ್ ಅರ್. ಆರ್. ರೈನಾ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್ ಅನುಜ್ ಗುಪ್ತ, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದು ಚಾಲನೆ ನೀಡಿದರು. ಸಾವಿರಾರು ಯುವಕರು ಆಗಮಿಸಿದ್ದರು. ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ ಇದಕ್ಕಾಗಿ ಸಜ್ಜುಗೊಂಡಿದ್ದು, ಉಡುಪಿಯ ಯುವಕರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಉಡುಪಿಯಲ್ಲಿ ಇದು ಮೂರನೇ ಬಾರಿಗೆ ನಡೆಯುತ್ತಿರುವ ಸೇನಾ ನೇಮಕಾತಿ ಕ್ಯಾಂಪ್. , 2013, 2020 ಇದೀಗ ಅಗ್ನಿಪಥ್ ನೇಮಕಾತಿ ಸೇರಿ ಮೂರನೇ ಸೇನೆ ನೇಮಕಾತಿ ಉಡುಪಿಯಲ್ಲಿ ನಡೆಯುತ್ತಿದೆ. ಉಡುಪಿ,…

Read More

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ! – ಜುಲೈ 19ರಿಂದ ನೋಂದಣಿ ಪ್ರಕ್ರಿಯೆ – ಯಾರಿಗೆಲ್ಲ ಯೋಜನೆ ಲಾಭ?… ಅರ್ಜಿ ಹಾಕೋದು ಹೇಗೆ? NAMMUR EXPRESS ಬೆಂಗಳೂರು: ಕಾಂಗ್ರೆಸ್‌ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಆಗಲಿದೆ. ಈ ಯೋಜನೆಯು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರಕಾರದ ನಾಲ್ಕನೇ ಭರವಸೆಯಾಗಿದ್ದು, ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ ರೂ 2,000 ನಗದು ಸಹಾಯವನ್ನು ಭರವಸೆ ನೀಡುತ್ತದೆ. ಈ ಯೋಜನೆ ಭಾರೀ ಮಹತ್ವ ಪಡೆದಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಈ ಯೋಜನೆಯ ಮೂಲಕ 12.8 ಮಿಲಿಯನ್ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಈ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಅವರು ಹೇಳಿದರು. “ಜುಲೈ 19 ರಂದು ಯೋಜನೆ ಪ್ರಾರಂಭವಾದ ನಂತರ ಅರ್ಜಿಗಳ ಸಲ್ಲಿಕೆ ಪ್ರಾರಂಭವಾಗುತ್ತದೆ. ಈ ಯೋಜನೆಯಡಿ ನೋಂದಣಿ ಪ್ರಕ್ರಿಯೆಯು ಉಚಿತವಾಗಿದೆ ಮತ್ತು ಇದು…

Read More