ಆಟಿ ಅಮಾವಾಸ್ಯೆಸಂಭ್ರಮ! – ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಣೆ – ಸಂಪ್ರದಾಯದ ಹಬ್ಬದಲ್ಲಿ ಜನರ ಅರೋಗ್ಯ ಕಾಳಜಿ – ದೇವರೇ ತಂದು ಔಷಧಿ ಮರದಲ್ಲಿ ಇಡುವ ನಂಬಿಕೆ! NAMMUR EXPRESS NEWS ಉಡುಪಿ/ಮಂಗಳೂರು: ಉಡುಪಿ, ದಕ್ಷಿಣ ಕನ್ನಡದಲ್ಲಿ ವಿಶೇಷ ಆಟಿ ಅಮಾವಾಸ್ಯೆಯ ಸಂಭ್ರಮ ಕಂಡು ಬಂದಿತು.ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಪಾಲೆ ಮರ (ಹಾಲೆ ಮರ) ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದ ಬಳಿಕ ಬಳಿಕ ಕಹಿ ರಸವನ್ನು ತುರಿ ಹಾಕಿದ ಗಂಜಿಯನ್ನಾಗಿ ತಯಾರಿಸಿ ಮನೆಮಂದಿ ಎಲ್ಲರೂ ಹಬ್ಬದಂತೆ ಅಚರಿಸುವುದು ವಾಡಿಕೆ. ಈ ಹಬ್ಬವನ್ನು ಎಲ್ಲೆಡೆ ಮನೆ ಮಂದಿಯೆಲ್ಲಾ ಸೇರಿ ಆಚರಣೆ ಮಾಡಿದರು. ಉಡುಪಿ ,ದಕ್ಷಿಣ ಕನ್ನಡದಲ್ಲಿ ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ)ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ…
Author: Nammur Express Admin
ಮೇಗರವಳ್ಳಿ ಬಳಿ ಬಸ್-ಕಾರು ಆಫಘಾತ! – ಹಾಲಾಡಿ ಮೂಲದ ಓರ್ವನಿಗೆ ಗಾಯ – ಕೌರಿ ಬೈಲು ಬಳಿ ಹುಲಿ ಪ್ರತ್ಯಕ್ಷ !: ಜನತೆಗೆ ಭಯ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಮೇಗರವಳ್ಳಿ ಸಮೀಪದ ಕೊಳಿಗೆ ಬಳಿ ಸೋಮವಾರ ಬೆಳಗ್ಗೆ ಬಸ್ ಮತ್ತು ಕಾರು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಹಾಲಾಡಿ ಮೂಲ ಕುಟುಂಬ ಶಿವಮೊಗ್ಗ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿರುವಾಗ ತೀರ್ಥಹಳ್ಳಿಯಿಂದ ಬಿದಿರು ಗೋಡು ಕಡೆಗೆ ಹೋಗುತ್ತಿರುವ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಮಂಡಗದ್ದೆ ಬಳಿ ಬಸ್, ಕಾರು ಅಪಘಾತ ಆಗಿ ಇಬ್ಬರು ಕರಾವಳಿ ಮೂಲದವರು ಮೃತಪಟ್ಟಿದ್ದರು. ಕೌರಿಬೈಲಿನಲ್ಲಿ ಹುಲಿ ಪ್ರತ್ಯಕ್ಷ!? ಹೊಸನಗರ ಮತ್ತು ತೀರ್ಥಹಳ್ಳಿಯ ಗಡಿ ಭಾಗದ ಕೌರಿಬೈಲಿನಲ್ಲಿ ಸೋಮವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಮಾಹಿತಿಯನ್ನು ಕೊಟ್ಟಿದ್ದಾರೆ. ಹುಲಿ ಅಥವಾ ಚಿರತೆ…
ಪಿಯು ಕಾಲೇಜಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನಲ್ ಮಾರ್ಕ್ಸ್! – 100 ಅಂಕಗಳಲ್ಲಿ 20 ಅಂಕಗಳನ್ನು ಆಂತರಿಕ ಅಂಕಗಳಾಗಿ ಪರಿಗಣಿಸಿ ಸರ್ಕಾರದ ಆದೇಶ – ಏನಿದು ಹೊಸ ಪ್ರಸ್ತಾವನೆ.. ವಿದ್ಯಾರ್ಥಿಗಳು, ಕಾಲೇಜುಗಳಿಗೆ ಏನು ಆದೇಶ..? NAMMUR EXPRESS NEWS ಬೆಂಗಳೂರು: ಪಿಯು ಅಥವಾ ಪದವಿ ಪೂರ್ವ ಕಾಲೇಜುಗಳಲ್ಲಿ ಆಂತರಿಕ ಅಂಕಗಳ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಪ್ರಸ್ತಾವನೆಯನ್ನು ಅನುಸರಿಸಿ, ಒಂದು ವಿಷಯದಲ್ಲಿ ಒಟ್ಟು 100 ಅಂಕಗಳಲ್ಲಿ 20 ಅಂಕಗಳನ್ನು ಆಂತರಿಕ ಅಂಕಗಳಾಗಿ ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಿಪಿಯುಇಯ ಅಧಿಸೂಚನೆಯ ಪ್ರಕಾರ, ಸಮಗ್ರ ಮೌಲ್ಯಮಾಪನದ ಭಾಗವಾಗಿ ಆಂತರಿಕ ಅಂಕಗಳನ್ನು ಪರಿಚಯಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಸಪ್ರಶ್ನೆಗಳು ಮತ್ತು ಮಧ್ಯಾವಧಿಯ ಪರೀಕ್ಷೆಗಳ ಗಂಭೀರತೆಯನ್ನು ಹೆಚ್ಚಿಸುತ್ತದೆ. ಆಂತರಿಕ ಮೌಲ್ಯಮಾಪನಗಳು ಪರೀಕ್ಷಾ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಗಳ ಅವಲೋಕನಗಳು ನಿರಂತರವಾಗಿರುತ್ತವೆ ಮತ್ತು ಕಲಿಕೆಯನ್ನು ಸುಧಾರಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಆಂತರಿಕ ಅಂಕಗಳು…
ಐಟಿ ಫೈಲಿಂಗ್‌ಗೆ ಜುಲೈ 31ರ ಗಡುವು – ನಿಮ್ಮ ಆದಾಯ ತೆರಿಗೆ ಫೈಲ್ ಮಾಡಿ.. – ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ NAMMUR EXPRESS NEWS ನವದೆಹಲಿ: ವಯುಕ್ತಿಕ ತೆರಿಗೆ 2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಐಟಿಆರ್ ಫೈಲಿಂಗ್ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ಇಲಾಖೆ ಹೇಳಿದೆ. ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರ ನಂತರ ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲದಿರುವುದರಿಂದ ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗನೆ ಐಟಿಆರ್ ಫೈಲಿಂಗ್ ಮುಗಿಸಿಕೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ. ಐಟಿ ರಿಟರ್ನ್ ಫೈಲ್ ಮಾಡಲು ಇದೇ ಜುಲೈ 31 ಕೊನೆಯ ದಿನವಾಗಿದೆ. ಈ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆಗಳು ಕಡಿಮೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ.…
ಬಿಜೆಪಿ ನಾಯಕ ಅನಂತ್ ಕುಮಾರ್ ಪತ್ನಿ ಕಾಂಗ್ರೆಸ್ ಬರ್ತಾರಾ? – ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಶೆಟ್ಟರ್ ಆಹ್ವಾನ – ಬಿಜೆಪಿ ಜೊತೆ ಸ್ನೇಹಕ್ಕೆ ಜೆಡಿಎಸ್ ಪಕ್ಷದಲ್ಲೇ ಅಪಸ್ವರ! – ರಾಜ್ಯಸಭೆಗೆ ಅಣ್ಣಾಮಲೈ ಆಯ್ಕೆ ಸಾಧ್ಯತೆ NAMMUR EXPRESS NEWS : ಬಿಜೆಪಿ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಈಗ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಎಂ ಎನ್ ಸಿ ಜಗದೀಶ್ ಶೆಟ್ಟರ್ ಆಹ್ವಾನ ನೀಡಿದ್ದು ರಾಜಕೀಯ ಕ್ಷೇತ್ರದಲ್ಲಿ ಕುತೂಹಲವನ್ನು ಮೂಡಿಸಿದೆ. ಬಿಜೆಪಿ ಜೊತೆ ಸ್ನೇಹಕ್ಕೆ ಜೆಡಿಎಸ್ ಪಕ್ಷದಲ್ಲೇ ಅಪಸ್ವರ! ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಬಿಜೆಪಿ ಜೊತೆ ಸ್ನೇಹಕ್ಕೆ ಮುಂದಾಗಿರುವ ಜೆಡಿಎಸ್ ಪಕ್ಷದ ನಡೆಗೆ ಜೆಡಿಎಸ್ ಪಕ್ಷದ ವಲಯದಲ್ಲಿ ಅಪಸ್ವರ ವ್ಯಕ್ತವಾಗಿದೆ. ಶಾಸಕಿಯರಾದ ಶಿವಮೊಗ್ಗ ಗ್ರಾಮಾಂತರದ ಶಾರದಾ ಪೂರ್ಯ ನಾಯಕ್ ಹಾಗೂ ದೇವದುರ್ಗದ ಶಾಸಕಿ ಕರಿಯಮ್ಮ ಇವರು ಅಪಸ್ವರ ವ್ಯಕ್ತಪಡಿಸಿದ್ದು ಈ ಬಗ್ಗೆ…
ತಾಲೂಕು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ವಿಜಯಪುರ ಲೋಕಾಯುಕ್ತ ಡಿ.ವೈ.ಎಸ್.ಪಿ ಅರುಣ ನಾಯಕ – ಸಿಂದಗಿ ತಾಲ್ಲೂಕಿನಿಂದಲೇ ಅತಿ ಹೆಚ್ಚು ದೂರು – ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಲು ಸೂಚನೆ – ಅಧಿಕಾರಿಗಳ ಸಭೆ ನಡೆಸಿದ ವಿಜಯಪುರ ಲೋಕಾಯುಕ್ತ ತಂಡ ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ದೂರುಗಳು ಬರುವುದು ತಾಲೂಕು ಎಂದರೇ ಅದು ಸಿಂದಗಿ. ತಾಲೂಕಿನ ಜನತೆಯ ಜೊತೆ ಇಲ್ಲಿನ ಅಧಿಕಾರಿಗಳ ಸ್ಪಂದನೆ ಸರಿಯಾಗಿ ಇರುವುದಿಲ್ಲ ಎಂದು ಲೋಕಾಯುಕ್ತ ಡಿ.ವೈ.ಎಸ್.ಪಿ ಅರುಣ ನಾಯಕ ಹೇಳಿದರು. ಪಟ್ಟಣದ ತಾಲೂಕು ಸಭಾಂಗಣದಲ್ಲಿ ಹಮ್ಮಿಕೊಂಡ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮತ್ತು ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ವಿವಿಧ ಇಲಾಖೆಗಳ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಸೂಚಿಸಿದರು. ಅಕ್ಷರ ದಾಸೋಹದ ಆಹಾರ ಧಾನ್ಯಗಳು ವಾಹನ ಸಂಚಾರ ಬಿಸಿಯೂಟಕ್ಕೆ ತಲುಪಬೇಕಾದ ಶಾಲೆ ಬಿಟ್ಟು ಎಲ್ಲಲ್ಲೋ ತಿರುಗುತ್ತಿರುತ್ತವೆ ಅದನ್ನು ಹಿಡಿದು ದೂರು ದಾಖಲು ಮಾಡಿ ಎಂದು ಪಿ.ಎಸ್.ಆಯ್ ಸೊಮೇಶ ಗೆಜ್ಜಿ ಅವರಿಗೆ ಸೂಚಿಸಿದರು. ಕೃಷಿ ಇಲಾಖೆ: ಅಧಿಕಾರಿ ಎಚ್.ವಾಯ್.ಸಿಂಗೆಗೋಳ ಮಾಹಿತಿ…
ಮತ್ತೆ ಏರಿಕೆಯತ್ತ ಅಡಿಕೆ ದರ! ತೀರ್ಥಹಳ್ಳಿಯಲ್ಲಿ ಅಡಿಕೆ ದರ ಎಷ್ಟಿದೆ? – ಗರಿಷ್ಠ ದರ ತಲುಪಿದ ಸರಕು – ಯಾವುದಕ್ಕೆ ಎಷ್ಟು ದರ ಇದೆ ಇಲ್ಲಿದೆ ಡೀಟೇಲ್ಸ್! NAMMUR EXPRESS NEWS ಸರಕು – 60009 – 83540 ಬೆಟ್ಟೆ – 53509 – 55199 ರಾಶಿ – 50009 – 55599 ಗೊರಬಲು – 41009 – 42309 ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ! HOW TO APPLY : NEET-UG COUNSELLING 2023
ಕುಡಿದ ನಶೆಯಲ್ಲಿ ಮಚ್ಚು ಬೀಸಿದ ಪ್ರಮುಖ ಆರೋಪಿ ಹೆಂಡ್ತಿ ಮನೆಯಲ್ಲಿ ಅರೆಸ್ಟ್! – ಹಾವೇರಿಯಲ್ಲಿ ಪತ್ನಿ ಮನೆಯಲ್ಲಿ ಕದ್ದು ಕುಳಿತಿದ್ದ – ಶಿವಮೊಗ್ಗದಲ್ಲಿ ಮತ್ತೊಂದು ವೇಶ್ಯಾವಾಟಿಕೆ ಪ್ರಕರಣ ಬಯಲು – ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎರಡನೇ ಬಾರಿ ನೋಟಿಸ್! NAMMUR EXPRESS NEWS ತೀರ್ಥಹಳ್ಳಿ: ಕುಡಿದ ನಶೆಯಲ್ಲಿ ಪಟ್ಟಣದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ತಲ್ವಾರ್ ಬೀಸಿ ಹಲ್ಲೆ ನಡೆಸಿದ್ದ ಘಟನೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಇದೀಗ ಹಾವೇರಿಯಲ್ಲಿ ತೀರ್ಥಹಳ್ಳಿ ಪೊಲೀಸರಿಗೆ ತನ್ನ ಪತ್ನಿ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಲಾಂಗ್ ಬೀಸಿದ ಪ್ರಕರಣದ ಕಿಂಗ್ ಪಿನ್ ಚೋರ್ ಸಮೀರ್ ತೀರ್ಥಹಳ್ಳಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಒಮ್ಮೆ ಅರೆಸ್ಟ್ ಆಗಿದ್ದ. ಏನಿದು ಘಟನೆ?: ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಮಧ್ಯಾಹ್ನ 1-30 ರ…
ಆಗುಂಬೆ ಘಾಟಿಯಲ್ಲಿ 30 ಅಡಿ ಪ್ರಪಾತಕ್ಕೆ ಬಿದ್ದ! – ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್ – ಹಿಂದೂ ಜಾಗರಣೆ ವೇದಿಕೆಯ ಸದಸ್ಯರಿಂದ ರಕ್ಷಣೆ – ಮೇಗರವಳ್ಳಿಯಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ. ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದು ಈಗ ಅವರ ಕೆಲಸ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ. ಈ ವೇಳೆ ಹಾಳಾಗಿದ್ದ ಗಾಡಿಯನ್ನು ಟ್ರ್ಯಾಕ್ಟರ್ ಅಲ್ಲಿ ಟೋಯಿಂಗ್ ಮಾಡ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ. ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಮಹಮ್ಮದ್ ಪಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ…
ಮಗಳ ಅರೋಗ್ಯಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಿದ ಕುಟುಂಬ! – ಹೊಸನಗರ ಪೊಲೀಸರಿಂದ ಮಾನವೀಯ ಸೇವೆ – ದುಡಿದ ದುಡ್ಡೆಲ್ಲ ಚಿಕಿತ್ಸೆಗೆ ಖಾಲಿ… ಸಹಾಯ ಮಾಡಿ.. ಮಾನವೀಯತೆ ಉಳಿಯಲಿ ಅಭಿಯಾನ NAMMUR EXPRESS NEWS ಹೊಸ ನಗರ: ಸುಮಾರು 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಗವಟೂರಿನ ಬಡ ಕುಟುಂಬದ ನೋವಿಗೆ ಹೊಸ ನಗರ ಪಟ್ಟಣದ ಪೊಲೀಸರು ಹೆಗಲು ಕೊಟ್ಟಿದ್ದಾರೆ. ಹೊಸನಗರ ಪಟ್ಟಣದ ಗವಟೂರು ನಿವಾಸಿ ಆಟೋ ದೇವಪ್ಪಗೌಡ ಅವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು. ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು. ಈ ಬಗ್ಗೆ ಮಾಹಿತಿಯನ್ನರಿತ ಪಟ್ಟಣದ ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ಹೊನ್ನಾಳ್ (ಹೆಚ್ ಸಿ) ,ನವೀನ್, ತ್ರಿವೇಣಿ ತಕ್ಷಣ ರಿಪ್ಪನ್‌ಪೇಟೆಯ ನೂತನ ಪಿಎಸ್‌ಐ ಎಸ್ ಪಿ…