ಪತ್ನಿಗೆ ಕರೆ ಮಾಡಿ ಕಿರಿಕ್: ಡಿಶ್ ರಿಪೇರಿಯವನಿಗೆ ಧರ್ಮದೇಟು! – ಕೊಪ್ಪದ ಜಯಪುರದಲ್ಲಿ ಘಟನೆ – ಉಡುಪಿಯಲ್ಲಿ ಪ್ಲಾಸ್ಟಿಕ್ ಮೇಲೆ ದಾಳಿ – ಕಾರ್ಕಳದಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ – ಪುತ್ತೂರಲ್ಲಿ ಪತ್ರಕರ್ತನ ಮೇಲೆ ದಾಳಿ: ಆರೋಪಿಗಳಿಗೆ ಶಿಕ್ಷೆ ನೀಡಲು ಪಟ್ಟು – ಸರ್ಕಾರಿ ಶಾಲೆಯ ಶಿಕ್ಷಕಿ ನೇಣಿಗೆ ಶರಣು NAMMUR EXPRESS NEWS ಕೊಪ್ಪ: ತನ್ನ ಪತ್ನಿಯನ್ನು ಪೀಡಿಸಿ ಕರೆ ಮಾಡುವಂತೆ ನಂಬರ್ ಕೊಟ್ಟಿದ್ದ ಕಾಮುಕನಿಗೆ ಪತಿ ಅಟ್ಟಾಡಿಸಿಕೊಂಡು ಹೊಡೆದ ಘಟನೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮನೆಯಲ್ಲಿ ನಡೆದಿದೆ. ಜೀವನಕ್ಕಾಗಿ ಡಿಶ್ ರಿಪೇರಿ ಮಾಡುತ್ತಿದ್ದ ಬಶೀರ್ ಎಂಬಾತ ರಮೇಶ್ ಎಂಬುವವರ ಪತ್ನಿಗೆ ಕರೆ ಮಾಡುವಂತೆ ಪೀಡಿಸುತ್ತಿದ್ದ. ಮುಂದುವರೆದು ನಂಬರ್ ಕೂಡಾ ನೀಡಿ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಸಿಟ್ಟಿಗೆದ್ದ ರಮೇಶ್ ನಡುರಸ್ತೆಯಲ್ಲಿ ಈತನಿಗೆ ಥಳಿಸಿದ್ದಾರೆ. ವಿಷಯ ತಿಳಿದ ಸ್ಥಳೀಯರು ಈತನಿಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಪ್ರಕರಣದಿಂದ ಇವನ ವಿಲಕ್ಷಣ ಚಾಳಿ ಬೆಳಕಿಗೆ ಬಂದಿದ್ದು, ಹಲವಾರು ಮಹಿಳೆಯರಿಗೆ ಈತ…
Author: Nammur Express Admin
ಟೋಮ್ಯಾಟೋ ಬೆಳೆದು ಕೋಟ್ಯಾಧಿಪತಿಯಾದ! – ಪುಣೆಯಲ್ಲಿ ಸತತ ನಷ್ಟ ಅನುಭವಿಸಿದ್ದ ರೈತ ಕುಬೇರ – ಜೈಲಲ್ಲೇ ಕೊಲೆ ಆರೋಪಿಗಳಿಗೆ ಲವ್: ಅಲ್ಲೇ ಮದುವೆ! NAMMUR EXPRESS NEWS ಪುಣೆ: ಟೋಮ್ಯಾಟೋ ಬೆಳೆದ ರೈತನೊಬ್ಬ ಒಂದೇ ತಿಂಗಳಿನಲ್ಲಿ ಬಡ ರೈತ ಕೋಟ್ಯಾಧಿಪತಿಯಾಗಿದ್ದಾನೆ. ಕೆಲ ದಿನಗಳ ಹಿಂದೆ ಕರ್ನಾಟಕದ ಕೋಲಾರದ ರೈತನೊಬ್ಬ 2000 ಕ್ರೇಟ್ ಟೋಮ್ಯಾಟೋ ಮಾರಿ 38 ಲಕ್ಷ ಗಳಿಸಿದ್ದು ಸುದ್ದಿಯಾಗಿತ್ತು. ಇದನ್ನು ಮೀರಿಸಿರುವ ಮಹಾರಾಷ್ಟ್ರದ ಪುಣ್ಯ ರೈತನೊಬ್ಬ ಈಗ ರಾಷ್ಟ್ರದ ಚರ್ಚೆಯ ಕೇಂದ್ರ ಬಿಂದುವಾಗಿದ್ದಾನೆ. ಒಂದೇ ತಿಂಗಳಿನಲ್ಲಿ 13000 ಕ್ರೇಟ್ ಟೋಮ್ಯಾಟೋ ಮಾರಿರುವ ತುಕಾರಾಂ ಭಾಗೋಜಿ ಗಾಯಕರ ಎಂಬ ರೈತ ಒಂದೂವರೆ ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾನೆ. ತಿಂಗಳುಗಳ ಹಿಂದೆ ಬಿತ್ತಿದ್ದ ಟೊಮೆಟೊ ಬೀಜಗಳು, ಈತನಿಗೆ ಜಾಕ್ಪಾಟ್ ತಂದುಕೊಟ್ಟಿವೆ. 18 ಎಕರೆ ಜಮೀನು ಹೊಂದಿರುವ ತುಕಾರಾಂ ಈ ಬಾರಿ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಟೊಮ್ಯಾಟೋ ಕೃಷಿಯಲ್ಲಿ ಪುತ್ರ ಮತ್ತು ಸೊಸೆ ಕೂಡ ಇವರಿಗೆ ನೆರವು ನೀಡುತ್ತಿದ್ದಾರೆ. ಇಲ್ಲಿವರೆಗೆ ಹಲವು…
ತೀರ್ಥಹಳ್ಳಿಯಲ್ಲಿ ಮಳೆ ಕಡಿಮೆ: ಅಡಿಕೆ ಔಷಧ ಚುರುಕು! – ಅಡಿಕೆ ಬೆಳೆಗಾರರ ಮನೆಯಲ್ಲಿ ಕೆಲಸ – ಭತ್ತದ ನಾಟಿ ಕೆಲಸ ಶುರು: ಮತ್ತೆ ನೀರು ಕಡಿಮೆಯಾಯ್ತು NAMMUR EXPRESS NEWS ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯು ಸೇರಿದಂತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ. ಕಳೆದ 3-4 ದಿನಗಳಿಂದ ಜಿಟಿ ಜಿಟಿ ಮಳೆ ಆಗುತ್ತಿದೆ. ತುಂಗಾ, ಭದ್ರ, ಮಾಲತಿ ಸೇರಿ ಎಲ್ಲಾ ನದಿಗಳ ನೀರು ಕಡಿಮೆಯಾಗಿದೆ. ಕಳೆದೊಂದು ವಾರದಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಕರಾವಳಿಯಲ್ಲೂ ಮಳೆ ಕೊಂಚ ಕಡಿಮೆ ಆಗಿದೆ. ಕೃಷಿ ಚುರುಕು: ಅಡಿಕೆ ಭತ್ತದ ಕೃಷಿ ಚಟುವಟಿಕೆ ಶುರುವಾಗಿದೆ. ಭತ್ತದ ನಾಟಿಗಳಲ್ಲಿ ಕೃಷಿ ಶುರುವಾಗಿದೆ. ಅಡಿಕೆ ಔಷಧಿ ಕೆಲಸ ನಡೆಯುತ್ತಿದೆ. ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ! HOW TO APPLY : NEET-UG COUNSELLING 2023
ಸಿಟಿ ವಿದ್ಯಾರ್ಥಿಗಳ ಹಳ್ಳಿ ಲೈಫು! – ಕಾರ್ಕಳಕ್ಕೆ ಬಂದು ನಾಟಿ ಮಾಡಿದ ಕಾಲೇಜು ವಿದ್ಯಾರ್ಥಿಗಳು – ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಗದ್ದೆ ನಾಟಿ NAMMUR EXPRESS NEWS ಕಾರ್ಕಳ: ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಕೃಷಿಗೂ ಸೈ… ಓದೋಕೂ ಸೈ ಎಂದಿದ್ದಾರೆ. ಕಾರ್ಕಳದ ಪರಪ್ಪು ರಸ್ತೆಯಲ್ಲಿರುವ ಜಗನ್ನಾಥ ಪೈ ಅವರ ಗದ್ದೆಗೆ ಬೆಂಗಳೂರಿನ ಆರ್ ಸಿ ಕಾಲೇಜು ,ಎಂ ಇ ಎಸ್ ಕಾಲೇಜು ಮಲ್ಲೇಶ್ವರಂ , ಬೆಂಗಳೂರು ಆರ್ಟ್ಸ್ ಕಾಲೇಜು, ಜಿ.ಎಫ್ ಜಿ.ಸಿ ರಾಜಾಜಿನಗರ,ಶೇಷಾದ್ರಿ ಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಎಂ ಇ ಎಸ್ ಕೆ ಕೆ ಪಿಯು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ಮತ್ತು ರೊವರ್ಸ್ ರೇಂಜರ್ಸ್, ಬೆಂಗಳೂರಿನ ಉತ್ತರ ಜಿಲ್ಲೆಯ ಒಟ್ಟು 82 ವಿದ್ಯಾರ್ಥಿಗಳು ಸೇರಿ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ನಾಟಿ ಮಾಡಿ ಖುಷಿ ಪಟ್ಟರು. ಅಲ್ಲದೆ ಹಳ್ಳಿಯ ಬದುಕಿನ ಕೃಷಿ ಸೊಗಡು ಅನುಭವಿಸಿದರು. ಪದವಿ ಹಾಗು ಪಿಯುಸಿ ವಿದ್ಯಾರ್ಥಿಗಳು…
ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ತೊಟ್ಟ ಗಂಡು! – ಸೈಟು, ಮನೆ, ಹೆಂಡತಿ, ಮಕ್ಕಳು ಇದ್ರು – ಮಂಗಳ ಮುಖಿಯರ ಗ್ಯಾಂಗ್ ಸೇರಿ ಭಿಕ್ಷೆ..! – ಸಿಕ್ಕಿಬಿದ್ದಿದ್ದು ಹೇಗೆ… ಪೊಲೀಸರು ಏನು ಮಾಡಿದ್ರು? NAMMUR EXPRESS NEWS ಬೆಂಗಳೂರು: ನೀವೂ ಏನ್ ಏನ್ ನ್ಯೂಸ್ ನೋಡಿರ್ತೀರಿ…ಕೇಳಿರ್ತೀರಿ… ಆದರೆ ಇಲ್ಲೊಂದು ಸುದ್ದಿ ಭಾರೀ ಅಚ್ಚರಿ ಮೂಡಿಸಿದೆ. ಐಷಾರಾಮಿ ಜೀವನಕ್ಕಾಗಿ ಗಂಡು ವ್ಯಕ್ತಿಯೊಬ್ಬ ಹೆಣ್ಣಿನ ವೇಷ ತೊಟ್ಟು ಭಿಕ್ಷಾಟನೆ ನಡೆಸಿ ಅನೇಕರಿಗೆ ಕಿರುಕುಳ ನೀಡುತ್ತಿದ್ದ ಘಟನೆ ವರದಿಯಾಗಿದೆ. ಈತ ಪತ್ನಿ, ಇಬ್ಬರು ಮಕ್ಕಳ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ. ಒಳ್ಳೆ ಪ್ಲಾನ್ ಮಾಡಿ ಹಣ, ಆಸ್ತಿ ಮಾಡಲು ಮಂಗಳಮುಖಿಯರ ಜತೆ ಟೀಮ್ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ಚೇತನ್‌ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರೇ ಹಿಡಿದು ಪೊಲೀಸರಿಗೆ ಕೊಟ್ಟರು! ಬಾಗಲಗುಂಟೆ ನಿವಾಸಿ ಚೇತನ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ. ಇದಕ್ಕೆ ಹಣ ಹೊಂದಿಸಲು ಹೆಣ್ಣಿನ…
ಬಂತು ಹ್ಯುಂಡೈ ಎಕ್ಸ್ಟರ್ ಎಸ್ ಯುವಿ! – ತೀರ್ಥಹಳ್ಳಿಯ ರಾಹುಲ್ ಹ್ಯುಂಡೈ ಶೋ ರೂಂ ಅಲ್ಲಿ ಲಾಂಚ್ NAMMUR EXPRESS NEWS ಹ್ಯುಂಡೈ ಮೋಟಾರ್ಸ್ ಇಂಡಿಯಾ ತನ್ನ ಹೊಸ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಎಕ್ಸ್ ಶೋರೂಮ್‌ನಲ್ಲಿ ಈ ಎಸ್ ಯುವಿ ಬೆಲೆ 5,99,900 ರೂಪಾಯಿಯಿಂದ ಆರಂಭವಾಗಲಿದೆ. ಹ್ಯುಂಡೈ ಎಕ್ಸ್ಟರ್ 3 ವರ್ಷ ಅನಿಯಮಿತ ಕಿಲೋಮೀಟರ್ ವಾರಂಟಿ ಸಿಗುತ್ತದೆ. ಇದರ ಜೊತೆಗೆ ಗ್ರಾಹಕರು 7 ವರ್ಷಗಳ ವಿಕೃತ ವಾರಂಟಿಯನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಹ್ಯುಂಡೈ ಗ್ರಾಂಡ್ ಐ10, ಔರಾ ಸೆಡಾನ್‌ನಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹ್ಯುಂಡೈ ಎಕ್ಸ್ಟರ್ ಸಿದ್ಧವಾಗಿದ್ದು, ಇದು ವಿಶೇಷವಾದ ಬಾಹ್ಯ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿದೆ. 5 ವೆರಿಯೆಂಟ್ ಕಾರುಗಳು ಲಭ್ಯ! ಹ್ಯುಂಡೈ ಎಕ್ಸ್ಟರ್ ಐದು ರೂಪಾಂತರಗಳಲ್ಲಿ ಲಭ್ಯವಿರಲಿದೆ. EX, S, SX, SX(0) ಮತ್ತು SX(0) ಕನೆಕ್ಟ್ ಎಂಬ ಹ್ಯುಂಡೈ ಎಕ್ಸ್‌ಟರ್ ವೆರಿಯೆಂಟ್‌ಗಳು ಲಭ್ಯವಿರಲಿದೆ. ಹೊಸ ಎಕ್ಸ್ಟರ್ ಹ್ಯುಂಡೈ ಇಂಡಿಯಾದ ಅತ್ಯಂತ…
ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ! – ಸ್ನಾನಕ್ಕೆ ಇಳಿದಾಗ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಅಜ್ಜಿ – ಚಿರತೆ ಹಿಡಿದು ಬೈಕಿಗೆ ಕಟ್ಟಿಕೊಂಡು ಹೋದ ಶೂರ! – ಎಸ್‌ಪಿ ಕಚೇರಿಯಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ NAMMUR EXPRESS NEWS ನದಿಯಲ್ಲಿ ಕೊಚ್ಚಿ ಹೋಗಿ ಬದುಕುಳಿದ 78ರ ವೃದ್ದೆಯ ಜೀವ ಉಳಿಸಿಕೊಳ್ಳುವ ಸಾಹಸ ಇದೀಗ ಭಾರೀ ಸುದ್ದಿ ಮಾಡಿದೆ. ವೃದ್ಧೆಯೊಬ್ಬರು ನದಿಯಲ್ಲಿ ಕೊಚ್ಚಿ ಹೋದರು ರಾತ್ರಿಯಿಡೀ ನೀರಿನಲ್ಲೇ ಜೀವ ಕೈಯಲ್ಲಿ ಹಿಡಿದು ನಿಂತು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆ ಕೇರಳದಲ್ಲಿ ನಡೆದಿದೆ. ಪುನೂರು ನದಿಗೆ, ಅನಕ್ಕಯಂ ನಿವಾಸಿಯಾಗಿರುವ ಕಮಲಾಕ್ಷಿ (78) ಅವರು ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ನದಿಯಲ್ಲಿ ನೀರಿನ ರಭಸಕ್ಕೆ ವೃದ್ಧೆ ಕಮಲಾಕ್ಷಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಕಮಲಾಕ್ಷಿ ಅವರು ನೀರಿನ ರಭಸದ ನಡುವೆ ಗಿಡಗಳ ಗೆಲ್ಲುಗಳನ್ನು ಹಿಡಿದು ನಿಂತಿದ್ದಾರೆ. ಕಮಲಾಕ್ಷಿ ಅವರ ಕತ್ತಿನವರೆಗೆ ನೀರು ಇದ್ದರೂ , ಅವರು ರಾತ್ರಿಯಿಡೀ ನೀರಿನಲ್ಲೇ ಜೀವ ಕೈಯಲ್ಲಿ…
ನೀವೂ ಈಗ ವಿಮಾನದಲ್ಲಿ ಹಾರಬಹುದು! – ಶಿವಮೊಗ್ಗದಿಂದ ವಿಮಾನ ಟಿಕೆಟ್ ಬುಕ್ಕಿಂಗ್! – ಆಗಸ್ಟ್ 11ರಂದು ಆರಂಭ: ಜುಲೈ 20ರಿಂದ ವಿಮಾನ ಟಿಕೆಟ್ ಬುಕ್ಕಿಂಗ್ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ದಿನಗಣನೆ ಆರಂಭವಾಗಿದ್ದು ವಿಮಾನ ಹಾರಾಟ ಆರಂಭಕ್ಕೆ 21 ದಿನಗಳ ಮುಂಚಿತವಾಗಿಯೇ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜುಲೈ 20ರಿಂದ ವಿಮಾನ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿಯ ಮುಖ್ಯಸ್ಥ ಮನೋಜ್ ಪ್ರಭು ತಿಳಿಸಿದ್ದಾರೆ. ಯಾವಾಗ ಯಾವ ಸಮಯಕ್ಕೆ ವಿಮಾನ? ವಿಮಾನ ಪ್ರತಿದಿನ ಬೆಳಿಗ್ಗೆ 9ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ 10:30ಕ್ಕೆ ಬರಲಿದೆ. ಮಧ್ಯಾಹ್ನ 12ಕ್ಕೆ ವಾಪಸ್ ತೆರಳಲಿದೆ. ಮಧ್ಯಾಹ್ನ 1:30ಕ್ಕೆ ಬೆಂಗಳೂರು ತಲುಪಲಿದೆ. ಸಧ್ಯ ದಿನಕ್ಕೆ ಒಂದು ವಿಮಾನ ಹಾರಾಟ ನಡೆಸಲಿದ್ದು, ಪ್ರಯಾಣಿಕರ ಸ್ಪಂದನೆಗೆ ಅನುಗುಣವಾಗಿ ಬೇರೆ ಸ್ಥಳಗಳಿಗೂ ವಿಮಾನ ಹಾರಾಟ ನಡೆಸುವ…
ಕರಾವಳಿಯಲ್ಲಿ ಹೆಚ್ಚಾಯ್ತು ಅನಾಹುತ, ದುರಂತ! – ಕಾರ್ಕಳ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು – ಕಚೇರಿಯಲ್ಲೇ ನೇಣಿಗೆ ಶರಣಾದ ಮಹಿಳೆ – ಮಂಗಳೂರಲ್ಲಿ ಅಪಘಾತ: ಮೂವರು ಪಾರು – ಸುರತ್ಕಲ್: ಮೀನು ಹಿಡಿಯಲು ಹೋದವ ನೀರುಪಾಲು NAMMUR EXPRESS NEWS ಕಾರ್ಕಳ: ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬಿಹಾರ ಮೂಲದ ಸೌರವ್ ಕುಮಾರ್ (20) ಮೃತ ಯುವಕ. ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದ ಇವರು ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಗರದ ಮಾರ್ಕೆಟ್ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಎಂದು ಗುರುತಿಸಲಾಗಿದೆ. ಕಾರ್ಕಳ ಪೇಟೆಯ ಮಾರ್ಕೆಟ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬಂದಿ ಬೆಳಗ್ಗೆ ಕರ್ತವ್ಯಕ್ಕೆ…
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ?! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಸದ್ದು – ಜೆಡಿಎಸ್ ಮೊರೆ ಹೋಯ್ತಾ ಬಿಜೆಪಿ? NAMMUR EXPRESS NEWS ಚಿಕ್ಕಮಗಳೂರು: ರಾಜ್ಯದಲ್ಲಿ ಮೂರು ಪಕ್ಷಗಳು ಸಂಸತ್ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿವೆ. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಸೋತು ಮುಖ ಭಂಗ ಅನುಭವಿಸಿರುವ ಬಿಜೆಪಿ ಈಗ ಜೆಡಿಎಸ್ ಜತೆಗೆ ಲೋಕಸಭಾ ಚುನಾವಣೆ ಎದುರಿಸಲು ಸಜ್ಜುಗೊಂಡಿದೆ ಎನ್ನಲಾಗಿದೆ. ಈ ನಡುವೆ ನಾಯಕರ ಹೇಳಿಕೆ ಈಗ ರಾಜಕೀಯವಾಗಿ ಚರ್ಚೆ ಮೂಡಿಸಿದೆ. ಶೋಭಾ ಹೇಳಿದ್ದೇನು?: ಜೆಡಿಎಸ್ ಮೈತ್ರಿ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು. ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್‌ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಆಡಳಿತ ಎಲ್ಲಾರೂ ಮೆಚ್ಚುವಂತದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ಮಿತ್ರರಾಷ್ಟ್ರಗಳು…