ಡಿಗ್ರಿ ಕಾಲೇಜು ಬೋಧಕ ಸಿಬ್ಬಂದಿಗೆ ವರ್ಗಾವಣೆ ಭಾಗ್ಯ! – ಪದವಿ ಕಾಲೇಜು ಬೋಧಕ ಸಿಬ್ಬಂದಿ ವರ್ಗಕ್ಕೆ ಅಧಿಸೂಚನೆ ಹೊರಡಿಸಿದ ಇಲಾಖೆ – ಏನಿದು ಅಧಿಸೂಚನೆ: ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿಯ ವರ್ಗಾವಣೆಗೆ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಇದು 15 ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ವರ್ಗಾವಣೆ ಪ್ರಕ್ರಿಯೆ. ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ಕ್ರೀಡಾ ನಿರ್ದೇಶಕರ ವರ್ಗಾವಣೆಗೆ 2021ರವರೆಗೂ ಸೂಕ್ತ ನಿಯಮಗಳನ್ನೇ ರೂಪಿಸಿರಲಿಲ್ಲ. 2009ರ ನಂತರ ವರ್ಗಾವಣಾ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದ್ದವು. 2021ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆಗೆ ನಿಯಮಗಳನ್ನು ರೂಪಿಸಿ, ಜಾರಿಗೊಳಿಸಲಾಯಿತಾದರೂ ಆ ವರ್ಷ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರಲಿಲ್ಲ. 2022ರ ಏಪ್ರಿಲ್‌ನಲ್ಲಿ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ನಂತರ ಅದೇ ವರ್ಷದ ಡಿಸೆಂಬರ್‌ನಲ್ಲಿ ಮತ್ತೊಂದು ಸುತ್ತಿನ ವರ್ಗವಣೆ ಮಾಡಲಾಯಿತು. ಇದೇ ತಿಂಗಳು ಮತ್ತೆ ಬೋಧಕ ಸಿಬ್ಬಂದಿಯ…
Author: Nammur Express Admin
ವರದಿಯ ಫಲಶೃತಿ ಕಲ್ಯಾಣ ನಗರ ಕಲ್ಯಾಣ ಅಭಿವೃದ್ಧಿ ಆಯ್ತು! – ಕಲ್ಯಾಣ ನಗರದ ಚರಂಡಿ ಸ್ವಚ್ಛಗೊಳಿಸಿದ ಪುರಸಭೆ ಅಧಿಕಾರಿಗಳು – ಚರಂಡಿಯ ನೀರು ರಸ್ತೆಗೆ ಬಾರದಂತೆ ಸ್ವಚ್ಛತೆ ಮಾಡಿಸಿದ ಪುರಸಭೆ ಅಧಿಕಾರಿಗಳು NAMMUR EXPRESS NEWS ಸಿಂದಗಿ ಪಟ್ಟಣದ 20ನೇ ವಾರ್ಡಿನಲ್ಲಿ ಚರಂಡಿ ನೀರು ರಸ್ತೆಗೆ ಬಂದ ಕಾರಣ ನಮ್ಮೂರ್ ಎಕ್ಸ್ ಪ್ರೆಸ್ ಮಾದ್ಯಮದಲ್ಲಿ “ಕಲ್ಯಾಣ ನಗರದಲ್ಲಿ ಚರಂಡಿ ನೀರು ರಸ್ತೆಗೆ” ಶೀರ್ಷಿಕೆಯಡಿ ವರದಿಯನ್ನು ಪ್ರಕಟಗೊಳಿಸಿತ್ತು ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ತ್ಯಾಜ್ಯದಿಂದ ತುಂಬಿ ಬ್ಲಾಕ್ ಆದ ಚರಂಡಿಯನ್ನು ಪೌರಕಾರ್ಮಿಕರ ಮೂಲಕ ಸ್ವಚ್ಚಗೊಳಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ವರದಿಗೆ ಸ್ಪಂದಿಸಿದ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾದುದ್ದು. ನಮ್ಮೂರ್ ಎಕ್ಸ್ ಪ್ರೆಸ್ ಸಾಮಾಜಿಕ ಸುದ್ದಿ , ವರದಿಗಳಿಗೆ ಸ್ಥಳೀಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ? HOW TO APPLY : NEET-UG COUNSELLING 2023
ಕಲ್ಯಾಣ ನಗರದಲ್ಲಿ ಚರಂಡಿ ನೀರು ರಸ್ತೆಗೆ – ದಿನಂಪ್ರತಿ ಚರಂಡಿ ನೀರನ್ನು ದಾಟಿ ಶಾಲೆಗೆ ಹೋಗುವ ವಿಧ್ಯಾರ್ಥಿಗಳು – 20 ವಾರ್ಡಿನಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿ – ಕಣ್ಣು ಮುಚ್ಚಿ ಕುಳಿತ ಪುರಸಭೆ ಅಧಿಕಾರಿಗಳು – ಸಾಂಕ್ರಾಮಿಕ ರೋಗ ಉಲ್ಭಣ ಭೀತಿ : ಸ್ಥಳೀಯ ನಿವಾಸಿಗಳ ಆಕ್ರೋಶ ಸಿಂದಗಿ : ಪಟ್ಟಣದ 20 ನೆಯ ವಾರ್ಡಿನ ಕಲ್ಯಾಣ ನಗರದ ಪ್ರಮುಖ ರಸ್ತೆಯು ಕಳೆದ ಕೆಲ ದಿನಗಳಿಂದ ಜಲಾವೃತವಾಗಿದ್ದು ಚರಂಡಿ ನೀರು ರಸ್ತೆ ತುಂಬಾ ಹರಡಿಕೊಂಡು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ಬಾರದ ಪರಸ್ಥಿತಿ ಎದುರಾಗಿದೆ. ಹಲವು ದಿನಗಳಿಂದ ಈ ರಸ್ತೆ ಚರಂಡಿ ನೀರಿನಿಂದ ತುಂಬಿದ್ದು ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಕಷ್ಟದ ಪರಸ್ಥಿತಿ ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಪುರಸಭೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಜನ ಪ್ರತಿನಿಧಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಈ ರೀತಿ ರಸ್ತೆಯ ಮೇಲೆ ಪ್ರತಿ ದಿನ ತುಂಬಿ ಹರಿಯುವ ಚರಂಡಿ ನೀರಿನಿಂದ ಕಲ್ಯಾಣ ನಗರದ…
ಭಾರತದ ಹೆಮ್ಮೆಯ ‘ಚಂದ್ರಯಾನ-3’ಕ್ಕೆ ಕೌಂಟ್ ಡೌನ್! – ಚಂದ್ರನ ಅಂಗಳದಲ್ಲಿ ಲ್ಯಾಂಡರ್, ರೋವರ್ ಇಳಿಸಿದ ನಾಲ್ಕನೇ ದೇಶ ಆಗುತ್ತಾ ಭಾರತ? – ಕೋಟಿ ಕೋಟಿ ಭಾರತೀಯರ ಶುಭಾಶಯ NAMMUR EXPRESS NEWS ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ ‘ಚಂದ್ರಯಾನ-3’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಪೂರ್ವನಿಗದಿಯಂತೆ ಎಲ್ಲವೂ ನಡೆದರೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಚಂದ್ರಯಾನ-3ರ ಉಪಗ್ರಹವನ್ನು ಹೊತ್ತ ಎಲ್‌ಎಂವಿ-3 ರಾಕೆಟ್ ನಭದತ್ತ ಜಿಗಿಯಲಿದೆ. ಚಂದ್ರನ ಅಂಗಳದಲ್ಲಿ ‘ವಿಕ್ರಂ ಲ್ಯಾಂಡರ್’ ಮತ್ತು ‘ರೋವ’ ಬಂಡಿಯನ್ನು ಇಳಿಸುವ ಈ ಕಾರ್ಯಾಚರಣೆಯು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. 2019ರಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ನೌಕೆಯನ್ನು ಇಳಿಸುವ ಚಂದ್ರಯಾನ-2 ಕಾರ್ಯಚಾರಣೆಯು ಭಾಗಶಃ ಯಶಸ್ವಿಯಾಗಿತ್ತು. ಚಂದ್ರನ ಪರಿಭ್ರಮಣ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ, ಚಂದ್ರನ ನೆಲಮುಟ್ಟುವಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು, ಎರಡನೇ ಹಂತದ ಕಾರ್ಯಾಚರಣೆ ವಿಫಲವಾಗಿತ್ತು. ಆ ಕಾರ್ಯಾಚರಣೆಯಲ್ಲಿ ಎದುರಾಗಿದ್ದ ತೊಡಕುಗಳನ್ನು ನಿವಾರಿಸುವ ಕಾರ್ಯತಂತ್ರವನ್ನು ಚಂದ್ರಯಾನ-3ರಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್…
2 ದಿನ ಮಲೆನಾಡಲ್ಲಿ ಮಳೆ ಅಲರ್ಟ್! – ಗುಡುಗು, ಮಿಂಚು, ಬಿರುಗಾಳಿ ಜೊತೆ ಮಳೆ ಎಚ್ಚರಿಕೆ – ಕರಾವಳಿಯಲ್ಲೂ ಭಾರೀ ಮಳೆ ಸಾಧ್ಯತೆ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯು ಸೇರಿದಂತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗದಲ್ಲಿ ಶುಕ್ರವಾರ ಮತ್ತು ಶನಿವಾರ ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಇನ್ನೂ ಬಾರಿ ಮಳೆಯ ಜೊತೆಗೆ ಗುಡುಗು ಮಿಂಚು ಬಿರುಗಾಳಿಯ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಶಿವಮೊಗ್ಗವಷ್ಟೆ ಅಲ್ಲದೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಿರುಗಾಳಿಯ ವೇಗವು ಗಂಟೆಗೆ 40-45 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದೊಂದು ವಾರದಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಕರಾವಳಿಯಲ್ಲೂ ಮಳೆ ಕೊಂಚ ಕಡಿಮೆ ಆಗಿದೆ. ಆದ್ರೂ ನದಿ, ಹಳ್ಳಗಳು ತುಂಬಿ ಹರಿಯುತ್ತವೆ. ಇದನ್ನೂ ಓದಿ : ಅಡಿಕೆ ದರ…
ಶಕ್ತಿ ಯೋಜನೆ ಬಗ್ಗೆ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ! – ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ: ಪತ್ರದಲ್ಲಿ ಮೆಚ್ಚುಗೆ NAMMUR EXPRESS NEWS ಧರ್ಮಸ್ಥಳ: ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮುಖ್ಯಮತ್ರಿ ಸಿದ್ದರಾಮಯ್ಯ ಅವರ ಬಜೆಟ್ ಗೆ ಮೆಚ್ಚುಗೆ ಸೂಚಿಸಿ ಪತ್ರ ಬರೆದಿದ್ದಾರೆ. ‘ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ’ಮುಖ್ಯಮತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್ಟನ್ನು ಶ್ಲಾಘಿಸಿದ್ದು ಅಲ್ಲದೆ ಶಕ್ತಿ ಯೋಜನೆಗೆ ಸಿಕ್ಕಿರುವ ಜನಮನ್ನಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಜೈನ ಸಮುದಾಯಕ್ಕೆ…
ಸೆಕೆಂಡ್ ಹ್ಯಾಂಡ್ ಕಾರ್ ಕದ್ದ ಕಳ್ಳರು! – ಸುರತ್ಕಲ್ ಶೋ ರೂಂನಿಂದ ಎರಡು ಕಾರು ಕಳ್ಳತನ – ಇನ್ಸ್ಟಾಗ್ರಾಮ್ ಪರಿಚಯ ಜೀವ ತೆಗೆಯಿತು! – ಸಾಲದ ಬಾಧೆಗೆ ದಂಪತಿ ಆತ್ಮಹತ್ಯೆಗೆ ಶರಣು – ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆ NAMMUR EXPRESS NEWS ಸುರತ್ಕಲ್: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಕಾರುಗಳನ್ನು ಕಳವು ಮಾಡಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಜಂಕ್ಷನ್ ಬಳಿ ಬುಧವಾರ ತಡರಾತ್ರಿ ನಡೆದಿದ್ದು ವಾಹನ ಸವಾರರಿಗೆ ತಲೆನೋವಾಗಿದೆ. ಅಬಿದ್ ಅಹಮ್ಮದ್ ಸುರಲ್ಪಾಡಿ ಮಾಲಿಕತ್ವದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮುಂಬಾಗಿಲ ಮೂಲಕ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ತಡರಾತ್ರಿ ಕಚೇರಿಗೆ ಒಳನುಗ್ಗಿದ ಕಳ್ಳರು ಕಚೇರಿಯಲ್ಲಿ ಹುಡುಕಾಡಿ ಡ್ರಾವರ್ ನಲ್ಲಿದ್ದ ಕಾರುಗಳ ಕೀ ಪಡೆದು ಹಾಗೂ ಕಾರಿನ ಕಾಗದ ಪತ್ರದ ಜೊತೆಗೆ ಎರಡು ಕಾರುಗಳನ್ನು ಕಳವುಗೈದಿದ್ದಾರೆ. 6 ಲಕ್ಷ ಮೌಲ್ಯದ…
ಕುಡಿದ ನಶೆಯಲ್ಲಿ ಮಚ್ಚು ಬೀಸಿದವರು ಅರೆಸ್ಟ್! – ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದ್ದ ಘಟನೆ – 5 ಮಂದಿ ಸೆರೆ: ಪ್ರಮುಖ ಆರೋಪಿ ನಾಪತ್ತೆ NAMMUR EXPRESS NEWS ತೀರ್ಥಹಳ್ಳಿ: ಕುಡಿದ ನಶೆಯಲ್ಲಿ ಪಟ್ಟಣದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ತಲ್ವಾರ್ ಬೀಸಿ ಹಲ್ಲೆ ನಡೆಸಿದ್ದ ಘಟನೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಚೋರ್ ಸಮೀರ್ ಇನ್ನು ಪತ್ತೆಯಾಗಿಲ್ಲ. ಏನಿದು ಘಟನೆ? ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಮಧ್ಯಾಹ್ನ 1-30 ರ ವೇಳೆಯಲ್ಲಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾರಿಗೆ ಹೋಗಿದ್ದಾರೆ.ಬಾರ್ ನಿಂದ ಈ ನಾಲ್ವರು ಹೊರ ಬರುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಬಂದ ಸಮೀರ್ ಮತ್ತು ಆತನ ಸ್ನೇಹಿತರು ಅಫ್ರೋಜ್ ಗೆ ಅವ್ಯಾಚ್ಯ ಶಬ್ದಗಳೊಂದಿಗೆ ಬೈದು ಜಗಳವಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ…
ಜು.14 ರಂದು ಉಡುಪಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ – ಕೇಂದ್ರ ಸರಕಾರದ 9 ವರ್ಷಗಳ ಸಾಧನೆ ಕಾರ್ಯಕ್ರಮ – ಉಡುಪಿ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ಪ್ಲಾನ್ NAMMUR EXPRESS NEWS ಉಡುಪಿ: ಉಡುಪಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಜು.14ರಂದು ಬೆಳಿಗ್ಗೆ 11 ಗಂಟೆಗೆ ಮಣಿಪಾಲಕ್ಕೆ ಆಗಮಿಸಲಿದ್ದಾರೆ. ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆ ಮತ್ತು ಪ್ರಬುದ್ಧರ ಗೋಷ್ಠಿಯನ್ನುದ್ದೇಶಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಲಿದ್ದಾರೆ. ಈಗಾಗಲೇ ಪಕ್ಷದ ಸೂಚನೆಯಂತೆ ಮಹಾ ಸಂಪರ್ಕ ಅಭಿಯಾನದಡಿ ಮಂಡಲ ವ್ಯಾಪ್ತಿಯ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಿಗಳ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸುವ ಜೊತೆಗೆ ಪ್ರಧಾನಿ ಮೋದಿ ಆಡಳಿತದ 9 ವರ್ಷಗಳ ಸಾಧನೆಗಳನ್ನು ಪ್ರಚುರಪಡಿಸಲು ಮನೆ ಮನೆ ಭೇಟಿ, ಮಂಡಲ ವ್ಯಾಪ್ತಿಯಲ್ಲಿ 100 ಮಂದಿ ವೃತ್ತಿಪರರು ಮತ್ತು ಸಾಮಾಜಿಕ ಪ್ರಮುಖರ ತಂಡ ರಚನೆ, ಬೂತ್ ವಾರು 100…
ಆನ್‌ಲೈನ್ ಲೋನ್ ಹೆಚ್ಚಾದ ಸಾವು! – ಟಾರ್ಚರ್ ತಾಳಲಾರದೇ ಟಾಪ್ ವಿದ್ಯಾರ್ಥಿ ಆತ್ಮಹತ್ಯೆ – ರಾಜ್ಯದಲ್ಲಿ ಆಪ್ ಸಾಲ, ಆಪ್ ಆಟಕ್ಕೆ ಯುವ ಜನತೆ ಸಾವು – 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ: ಚಿನ್ನದ ಜತೆ ಪರಾರಿಯಾದ ಲೇಡಿ! NAMMUR EXPRESS NEWS ಬೆಂಗಳೂರು: ವಿದ್ಯಾರ್ಥಿಯೋರ್ವ ಆನ್‌ಲೈನ್‌ನಲ್ಲಿ ಪಡೆದ ಸಾಲವನ್ನು ಹಿಂದುಗುಗಿಸಲು ಆಗದೆ ಅವರ ಟಾರ್ಚರ್ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಸ್ನೇಹಿತರಿಗೆ ಸಹಾಯ ಮಾಡಲು ಸಾಲ ಪಡೆದು ಸಾಲದ ಸುಳಿಗೆ ಸಿಲುಕಿದ್ದ. ತೇಜಸ್ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೇಜಸ್ ಸ್ನೇಹಿತ ಮಹೇಶನಿಗಾಗಿ ಕೆಲವರಿಂದ ಆನೈನ್ ಮೂಲಕ ಲೋನ್ ಪಡೆದಿದ್ದನು. ಅನಿವಾರ್ಯ ಕಾರಣದಿಂದ ಕಳೆದ 1 ವರ್ಷದಿಂದ ಸ್ನೇಹಿತ ಮಹೇಶ ಸಾಲದ ಇಎಂಐ ಕಟ್ಟಿರಲಿಲ್ಲ. ಇಎಂಐ ಕಟ್ಟದ ಹಿನ್ನೆಲೆಯಲ್ಲಿ ಲೋನ್ ನೀಡಿದವರು ತೇಜಸ್ಸಿಗೆ ಟಾರ್ಚರ್ ನೀಡಿದ್ದು, ಇದರಿಂದ ಮನನೊಂದು ಡೆತ್‌ನೋಟ್…