ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿದ್ದ ಶ್ರೀಪಾದ್ ಅವರಿಗೆ ಮಹತ್ವದ ಸ್ಥಾನ – ರಾಜ್ಯ ಉಪ ಸಭಾಪತಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಕ NAMMUR EXPRESS NEWS ಬೆಂಗಳೂರು/ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿ ಕರೋನಾ ಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ತಾಲೂಕಿನ ಜನರ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಡಾ. ಶ್ರೀಪಾದ ಎಸ್ ಬಿ ಅವರನ್ನು ರಾಜ್ಯ ಉಪ ಸಭಾಪತಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಮಾಡಿದೆ. ಡಾ. ಶ್ರೀಪಾದ ಎಸ್.ಬಿ, ಕೆ.ಎ.ಎಸ್, ಅಪರ ಪ್ರಾದೇಶಿಕ ಆಯುಕ್ತರು, ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ದಿನಾಂಕ:06.07.2023 ರಿಂದ ಅನ್ವಯವಾಗುವಂತೆ ಮಾನ್ಯ ಉಪ ಸಭಾಪತಿಗಳು, ಕರ್ನಾಟಕ ವಿಧಾನ ಸಭೆ ಇವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಮುಂದಿನ ಆದೇಶದವರೆಗೆ ಅಥವಾ ಮಾನ್ಯ ಉಪ ಸಭಾಪತಿಗಳ ಸದಾವಧಿಯವರೆಗೆ ವರ್ಗಾಯಿಸಿ ನೇಮಿಸಲಾಗಿದೆ. ಅತ್ಯಂತ ಸರಳ ಸ್ವಭಾವದ ಡಾ.ಶ್ರೀಪಾದ್ ಅವರು ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುವಾಗ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕರೋನಾ ಅವಧಿಯಲ್ಲಿ ಜನರ…
Author: Nammur Express Admin
ವಿಶ್ವ ಮಟ್ಟದಲ್ಲಿ ರಾಜ್ಯದ ಅಂಧ ಓಟಗಾರ್ತಿ ಸಾಧನೆ! – ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ ರಾಜುಗೆ 5ನೇ ಸ್ಥಾನ – ಮಲೆನಾಡಿನ ಕೊಟ್ಟಿಗೆಹಾರದ ಆಟಗಾರ್ತಿ – ಇನ್ನಷ್ಟು ಸೌಲಭ್ಯ ಸಿಕ್ಕರೆ ಸಾಧನೆ ಸಾಧ್ಯತೆ NAMMUR EXPRESS NEWS ಕೊಟ್ಟಿಗೆಹಾರ( ಮೂಡಿಗೆರೆ): ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾ ರಾಜು ಪ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಜುಲೈ6ರಿಂದ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ನಲ್ಲಿ ಭಾರತ ಪ್ರತಿನಿಧಿಸಿ 5ನೇ ಸ್ಥಾನ ಪಡೆದಿದ್ದಾರೆ. ಕೀನ್ಯಾ, ರಷ್ಯಾ, ಪೋಲೆಂಡ್, ಚೀನಾ, ಭಾರತ ಕ್ರೀಡಾಪಟುಗಳು ಭಾಗವಹಿಸಿದ್ದು ಜು.8 ರಂದು ಶನಿವಾರ ನಡೆದ ಮಹಿಳೆಯರ 1500ಮೀ ಕ್ರೀಡಾಕೂಟದಲ್ಲಿ ರಕ್ಷಿತಾರಾಜು ಟಿ11ವಿಭಾಗದಲ್ಲಿ ( 5:26.47ಸೆಕೆಂಡುಗಳಲ್ಲಿ )ಮೂರನೇ ಸ್ಥಾನ ಪಡೆದು ಪೈನಲ್ ಗೆ ಪ್ರವೇಶಿಸಿದ್ದರು. ಆದರೆ ಜು10 ಸೋಮವಾರದಂದು ನಡೆದ 1500ಮೀ ಓಟದಲ್ಲಿ (5:24.95 ಸೆಕೆಂಡುಗಳಲ್ಲಿ)ರಕ್ಷಿತಾ 5 ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರ ಕೋಚ್ ರಾಹುಲ್ ಬಾಲಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ…
ಎರಡು ಹೊತ್ತು 90 ಬಾಟಲ್ ಉಚಿತ ಮದ್ಯ ಯೋಜನೆ ಮಾಡಲು ಪಟ್ಟು! – ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ ಮದ್ಯಪ್ರಿಯರು – ಸಾಮಾಜಿಕ ಜಾಲತಾಣಗಳ ಮೇಲೆ ಮಂಗಳೂರು ಪೊಲೀಸರ ಕಣ್ಣು – ಕುಡುಕ ಗಂಡದ ಕಿರುಕುಳಕ್ಕೆ ಕುಟುಂಬ ಬಲಿ – ಕಾರ್ಕಳ: ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ NAMMUR EXPRESS NEWS ಉಡುಪಿ: ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡಿದ ಹಿನ್ನಲೆಯಲ್ಲಿ ಇದೀಗ ಮದ್ಯಪ್ರಿಯರು ಮದ್ಯ ಮಾರಾಟ ನಿಲ್ಲಿಸಿ ಇಲ್ಲವಾದಲ್ಲಿ ಮದ್ಯವನ್ನು ಉಚಿತವಾಗಿ ನೀಡಿ ಎನ್ನುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು. ನಾಗರಿಕ ಸಮಿತಿ ಸದಸ್ಯರಾದ ನಿತ್ಯಾನಂದ ಒಳಕಾಡು ಹಾಗೂ ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ…
ಮೊದಲ ಸಿನಿಮಾದಲ್ಲೇ ಗಮನ ಸೆಳೆದ ಪ್ರೇರಣಾ ಗೌಡ! – ” ಡೇರ್ ಡೆವಿಲ್ ಮುಸ್ತಫಾ” ಸಿನಿಮಾದ ರಮಾಮಣಿ – ತೇಜಸ್ವಿ ಕಥೆಗೆ ತೇಜಸ್ವಿ ಊರಿನ ಹುಡುಗಿಯೇ ನಾಯಕಿ – ಪ್ರೇರಣಾ ತೀರ್ಥಹಳ್ಳಿಯ ಮೊಮ್ಮಗಳು! NAMMUR EXPRESS NEWS ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಕ್ರಿಯಾಶೀಲತೆ ಮತ್ತು ಅತ್ಯುತ್ತಮ ಕಥೆಯ ಮೂಲಕ ಜನರ ಗಮನ ಸೆಳೆದಿರುವ ” ಡೇರ್ ಡೆವಿಲ್ ಮುಸ್ತಫಾ” ಸಿನಿಮಾದ ಮೂಲಕ ಎಂಟ್ರಿಯಾದ ನಟಿ ಪ್ರೇರಣಾ ಗೌಡ ಇದೀಗ ತಮ್ಮ ಕಲೆ ಮೂಲಕ ಗಮನ ಸೆಳೆದಿದ್ದಾರೆ. ರಮಾಮಣಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರು ಯುವನಟಿ ಸಿಕ್ಕಿದ್ದಾರೆ. ಈಕೆ ತೀರ್ಥಹಳ್ಳಿ ಮೂಲದ ಅಕೌಂಟೆಂಟ್ ರಮ್ಯ ರಾಣಿ ಹಾಗೂ ಇಂಜಿನಿಯರ್ ಶಿವಪ್ಪ ಇವರ ಪುತ್ರಿ. ಶಿವಪ್ಪ ವೃತ್ತಿಯಲ್ಲಿ ಇಂಜಿನಿಯರ್. ಪ್ರೇರಣಾ ಗೌಡ ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು ಶೇಕಡ 96 ಫಲಿತಾಂಶದೊಂದಿಗೆ ಪೂರ್ಣಗೊಳಿಸಿದ್ದು ವೈದ್ಯಳಾಗುವ ಕನಸನ್ನು ಕೂಡ ಹೊಂದಿದ್ದಾರೆ. ಈಕೆ ಡೇರ್ ಡೆವಿಲ್ ಮುಸ್ತಫಾದ ಸಿನಿಮಾದಲ್ಲಿ ರಮಾಮಣಿ ಪಾತ್ರದ ಮೂಲಕ…
ಮುಖ್ಯಮಂತ್ರಿ ಚಂದ್ರುಗೆ ಆಮ್ ಆದ್ಮಿ ಚುಕ್ಕಾಣಿ! – ರಾಜ್ಯ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ – ದೆಹಲಿಯಿಂದ ಆದೇಶ: ರಾಷ್ಟ್ರ ಸಂಘಟನೆಗೆ ರೆಡ್ಡಿ NAMMUR EXPRESS NEWS ಬೆಂಗಳೂರು: ರಾಜ್ಯದ ಹೆಸರಾಂತ ರಂಗಭೂಮಿ, ಚಲನಚಿತ್ರ ಕಲಾವಿದ, ಮಾಜಿ ಶಾಸಕರು ಹಾಗೂ ಹಿರಿಯ ರಾಜಕಾರಣಿಗಳಾದ ಮುಖ್ಯಮಂತ್ರಿ ಚಂದ್ರು ಅವರು ಕರ್ನಾಟಕದ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಚಂದ್ರು ಅವರಿಗೆ ದೊಡ್ಡ ಹೊಣೆಗಾರಿಕೆ ಸಿಕ್ಕಿದೆ. ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ ಘೋಷಣೆ ಮಾಡಿದ್ದಾರೆ. ಇವರೊಂದಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ರವರುಗಳನ್ನು ನೇಮಿಸಲಾಗಿದೆ. ಕಳೆದ ಅವಧಿಯಲ್ಲಿ ಚಂದ್ರು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಚುನಾವಣೆಗಾಗಿ ಪ್ರತಿ ರಾಜ್ಯ ಸುತ್ತಿದ್ದರು. ಪಕ್ಷದ ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ರವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. 2023ರ…
ಡಾ.ಆರ್.ಎಂ.ಮಂಜುನಾಥ ಗೌಡರಿಗೆ ಮತ್ತೆ ಹುದ್ದೆ? – ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಗ್ರೀನ್ ಸಿಗ್ನಲ್? – ಮುಂದೇನಾಗುತ್ತೆ ಎಂಬುದೇ ಸಸ್ಪೆನ್ಸ್ NAMMUR EXPRESS NEWS ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಿಶ್ವಾಸ ನಿರ್ಣಯಕ್ಕೆ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಸಲ್ಲಿಸಿದ ಅರ್ಜಿ ಪುರಸ್ಕಾರಗೊಂಡಿದೆ. ಈ ಹಿನ್ನೆಲೆ ರಾಜಕೀಯ ಗರಿಗೆದರಿದೆ. ಏನಿದು ಆವಿಶ್ವಾಸ?: ಜು.6ರಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿಯವರ ನೇತೃತ್ವದಲ್ಲಿ 13 ಜನ ನಿರ್ದೇಶಕರಲ್ಲಿ 6 ಜನರ ನೇತೃತ್ವದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ಅವರಿಗೆ ಮನವಿ ಸಲ್ಲಿಸಿತ್ತು. ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಚನ್ನವೀರಪ್ಪನವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಮಯ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಎಂಡಿಯವರು ಬೆಂಗಳೂರಿನ ಕೇಂದ್ರ ಬ್ಯಾಂಕ್ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಪತ್ರ ರವಾನಿಸಿದ್ದರು. ಸಮಕ್ಷಮ ಪ್ರಾಧಿಕಾರದ ಅಧಿಕಾರಿಗಳು ಜು.28 ರಂದು…
ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗ್ರಾಪಂ ಭ್ರಷ್ಟಾಚಾರ! – ಯಾವುದಕ್ಕೋ ಇಟ್ಟ ಹಣ ಇನ್ಯಾವುದಕ್ಕೋ ದುರ್ಬಳಕೆ – ಕಾಮಗಾರಿ ನಡೆಸದೇ ಸುಮಾರು ₹2.61 ಲಕ್ಷ ಹಣ ದುರುಪಯೋಗ? – ಸಚಿವ ಪ್ರಿಯಾಂಕಾ ಖರ್ಗೆಗೆ ದೂರು: ಶೀಘ್ರದಲ್ಲಿ ತನಿಖೆ? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು, ಯಾವುದಕ್ಕೋ ಇಟ್ಟ ಹಣವನ್ನು ಇನ್ಯಾವುದಕ್ಕೋ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಸಧ್ಯ ಸ್ಥಳೀಯ ಮಟ್ಟದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ದೂರೊಂದು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಕಛೇರಿ ತಲುಪಿದೆ. ತೀರ್ಥಹಳ್ಳಿ ತಾಲ್ಲೂಕಿನ ಹೆಚ್ಚು ಉತ್ಪತ್ತಿ ಬರುವ ಮತ್ತು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲೊಂದು. ಇಲ್ಲಿ ಅಧಿಕಾರ ಹಿಡಿಯಲು ಸ್ಥಳಿಯ ಮಟ್ಟದಲ್ಲಿ ಅದೆಷ್ಟು ಲಾಭಿ ನಡೆಯುತ್ತದೆ ಎಂದರೆ ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದ ಚುನಾವಣೆಯಲ್ಲೇ ವಿಧಾನಸಭಾ ಚುನಾವಣೆಯನ್ನೂ ನಾಚುವಂತೆ ಲಕ್ಷಗಟ್ಟಲೆ ಹಣವನ್ನು…
ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ? – ಸರಕು ದರ ಈಗ ಸರಕು- 83,330 ರೂ.ಕ್ವಿಂಟಲ್ – ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ದರ ಎಷ್ಟು? NAMMUR EXPRESS NEWS ತೀರ್ಥಹಳ್ಳಿ; ಬೆಟ್ಟೆ- 55,300/- ಇಡಿ- 54,510/- ಗೊರಬಲು- 40,510/- ರಾಶಿ ಅಡಿಕೆ- 54,700/- ಸರಕು- 83,330/ ಸಿಪ್ಪೆಗೋಟು -19,020/- ಶಿವಮೊಗ್ಗ; ಬೆಟ್ಟೆ- 55,382/- ಗೊರಬಲು- 42,399/- ರಾಶಿ ಅಡಿಕೆ- 56,299/- ಸರಕು- 82,496/- ಕೊಪ್ಪ: ಬೆಟ್ಟೆ-53,700/- ಗೊರಬಲು-37,500/- ರಾಶಿ ಅಡಿಕೆ -50,700/- ಸರಕು -81,363/ ಚಿತ್ರದುರ್ಗ: ಬೆಟ್ಟೆ-38,079/- ಕೆಂಪುಗೋಟು-30,099/- ರಾಶಿ ಅಡಿಕೆ -48,969/- ಸಾಗರ; ಬಿಳಿಗೋಟು- 35,099/- ಚಾಲಿ-39,339/- ಕೆಂಪುಗೋಟು-42,899/- ರಾಶಿ ಅಡಿಕೆ- 55,599/- ಸಿಪ್ಪೆಗೋಟು- 22,060/- ಹೊಸನಗರ: ಬಿಳಿಗೋಟು-30,609/- ಚಾಲಿ-37,929/- ಕೆಂಪುಗೋಟು-40,500/- ರಾಶಿ ಅಡಿಕೆ-54,400/- ಸಿಪ್ಪೆಗೋಟು -18,600/- ಚನ್ನಗಿರಿ; ರಾಶಿ ಅಡಿಕೆ- 56,299/- ಹೊನ್ನಾಳಿ; ರಾಶಿ ಅಡಿಕೆ- 53,300/- ಸಿದ್ದಾಪುರ; ಬಿಳಿಗೋಟು- 35,099/- ಚಾಲಿ-40,009/- ಹಳೇ ಚಾಲಿ -39,388/- ಕೆಂಪುಗೋಟು- 34,699/- ರಾಶಿ ಅಡಿಕೆ- 53,499/- ತಟ್ಟಿಬೆಟ್ಟೆ-…
ತೀರ್ಥಹಳ್ಳಿಯ ಇಬ್ಬರೂ ಮಾಜಿ ಸಚಿವರು ಪವರ್ ಫುಲ್! – ಅಡಿಕೆ ರೈತರ ಪರ ನಿಲ್ಲುವಂತೆ ಸಿಎಂಗೆ ಆರಗ ಮನವಿ – ಬೆಂಗಳೂರಲ್ಲಿ ಕೇಂದ್ರದ ವಿರುದ್ಧ ಧರಣಿ ಕುಳಿತ ಕಿಮ್ಮನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಇಬ್ಬರು ಮಾಜಿ ಸಚಿವರು ಇದೀಗ ರಾಜ್ಯ ಮಟ್ಟದಲ್ಲಿ ತಮ್ಮದೇ ಸಂಘಟನೆ, ಮಾತು, ಹೋರಾಟದ ಮೂಲಕ ಸದ್ದು ಮಾಡುತ್ತಿದ್ದಾರೆ. ಮಾಜಿ ಗೃಹ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು, ಅಡಿಕೆ ಬೆಳೆಗಾರರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಅಡಿಕೆಗೆ ಬೆಲೆ, ಗೌರವ ತರುವಲ್ಲಿ ಇವರ ಪಾತ್ರ ಹಿರಿದು. ಎಲೆಚುಕ್ಕಿ ರೋಗ ತಡೆಗೆ ವಿಶೇಷ ಅಧ್ಯಯನ ತಂಡವನ್ನು ಕೇಂದ್ರದಿಂದ ಕರೆಸಿ ಸಂಶೋಧನೆ ನಡೆಸಿದ್ದರು,ಅಲ್ಲದೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಿ ಅಡಿಕೆ ಬೆಳೆಗಾರರ ಸಮಸ್ಯೆ ಅರ್ಥ ಮಾಡಿಸಿದ್ದರು. ಬಳಿಕ ಮಂಡಿಸಿದ…
“ಡೇರ್ ಡೆವಿಲ್ ಮುಸ್ತಫಾ” ಹಾಫ್ ಸೆಂಚುರಿ ಸಂಭ್ರಮ! – ತೇಜಸ್ವಿಯವರ ಸಣ್ಣ ಕಥೆ ಸಿನಿಮಾವಾಗಿ ಗೆದ್ದಿತು – 50 ದಿನ ಪೂರೈಸಿದ ಚಿತ್ರತಂಡಕ್ಕೆ ಪಲಾವ್ ಪಾರ್ಟಿ! – ಡಾಲಿ ಧನಂಜಯ ಹೊಸ ಪ್ರಯೋಗ NAMMUR EXPRESS NEWS ಬೆಂಗಳೂರು: ಒಳ್ಳೆ ಕಥೆ, ಒಳ್ಳೆಯ ಸಿನಿಮಾಗಳು ತೆರೆ ಕಂಡಾಗ ಖಂಡಿತ ಕರ್ನಾಟಕ ಗೆಲ್ಲಿಸುತ್ತದೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಿನಿಮಾದ ಗೆಲುವು ಸಾಕ್ಷಿಯಾಗಿದೆ. ಜನರ ಉತ್ತಮ ಪ್ರಶಂಸೆಯಿಂದಲೇ ಗೆದ್ದ ಚಿತ್ರ ಡೇರ್ ಡೆವಿಲ್ ಮುಸ್ತಫಾ. ಈ ಸಿನಿಮಾ ಮೇ 19ಕ್ಕೆ ತೆರೆ ಕಂಡಿದ್ದು 50 ದಿನ ಪೂರೈಸಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ…