ಮಾರುತಿಯ ಅತಿ ದುಬಾರಿ ಕಾರು ಬಂತು ನೋಡಿ! – 3 ಮಾದರಿಯ ಇನ್ ವಿಕ್ಟೊ ಕಾರು ಮಾರುಕಟ್ಟೆಗೆ – ₹25-28 ಲಕ್ಷ ದರ: ಮಾರುತಿಯಲ್ಲಿ ಹೈಟೆಕ್ ಕಾರು NAMMUR EXPRESS NEWS ನವ ದೆಹಲಿ: ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಇದೇ ಮೊದಲ ಬಾರಿ 20 ಲಕ್ಷ ರೂ ಗಿಂತ ಹೆಚ್ಚಿನ ಬೆಲೆಯ ಕಾರು ಪರಿಚಯಿಸಿದೆ. ಇನ್ ವಿಕ್ಟೊ ಎಂಬ ಹೊಸ ಕಾರನ್ನು ಅದು ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಿದ್ದು, ಆರಂಭಿಕ 24.8 ಲಕ್ಷ ರೂ ನಿಂದ ( ಎಕ್ಸ್ ಶೋರೂಮ್ ) ಹಿಡಿದು ಗರಿಷ್ಠ 28.4 ಲಕ್ಷ ರೂ ವರೆಗೆ ದರ ನಿಗದಿ ಮಾಡಲಾಗಿದೆ. ಇದು ಮಾರುತಿಯ ಅತಿ ದುಬಾರಿ ಕಾರು ಎನಿಸಿಕೊಂಡಿದೆ. ಇನ್ ವಿಕ್ಟೊ ಬಿಡುಗಡೆ ಮೂಲಕ ಮಾರುತಿ ಇದೇ ಮೊದಲ ಬಾರಿಗೆ 20 ಲಕ್ಷ ರೂ ಗಿಂತ ಮೇಲ್ಪಟ್ಟ ದರದ ಪ್ರೀಮಿಯಂ ವಲಯವನ್ನು ಪ್ರವೇಶಿಸಿದಂತಾಗಿದೆ. ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಮಲ್ಟಿಪರ್ಪಸ್ ವೆಹಿಕಲ್…
Author: Nammur Express Admin
ಕಾವಲುಗಾರನಿಗೆ ಚಾಕು ಇರಿದು ಟೊಮ್ಯಾಟೋ ಕಳ್ಳತನ! – ಪೊಲೀಸ್ ಠಾಣೆಯ ಪಕ್ಕದ ತರಕಾರಿ ಅಂಗಡಿಯಲ್ಲಿ 40 ಕೆಜಿ ಟೊಮ್ಯಾಟೊ ಕಳ್ಳತನ – ಶಾಪಿಂಗ್ ಮಾಡಲು ಹಣ ದರೋಡೆ ಪ್ಲಾನ್! NAMMUR EXPRESS NEWS ಬೆಂಗಳೂರು : ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಕೀಲರೊಬ್ಬರ ಮೇಲೆ ಯುವಕ, ಯುವತಿ ಸುಖಾ ಸುಮ್ಮನೆ ಹಲ್ಲೆ ಮಾಡಿರುವ ಆಂತಕಕಾರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವಕೀಲ ಚಂದ್ರು ಎಂಬುವವರ ಮೇಲೆ ನಿಖಿತಾ ಮತ್ತು ಹರೀಶ್ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ಚಂದ್ರು ಅವರು ಓರಿಯನ್ ಮಾಲ್ ಮುಂಭಾಗ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಆರೋಪಿಗಳಿಬ್ಬರು ಬೈಕ್‌ನಲ್ಲಿ ಬಂದು ಚಂದ್ರು ಅವರ ಬೈಕ್ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಬಳಿಕ ಒಂದು ಲಕ್ಷ ರೂ. ಹಣ ಕೊಡಿ ಶಾಪಿಂಗ್ ಮಾಡಬೇಕು ಎಂದು ಕೇಳಿದ್ದಾರೆ. ವಕೀಲರಿಗೆ ಇಬ್ಬರು ಯಾವುದೇ ಪರಿಚಯವಿಲ್ಲ. ಅಲ್ಲದೇ ಒಂದು ಲಕ್ಷ ಹಣ ಕೇಳಿದ್ದನ್ನು ನೋಡಿ ಆಘಾತಕ್ಕೆ ಒಳಗಾದ ಚಂದ್ರು…
ಶಿವಮೊಗ್ಗದವರೇ ಸೇರಿ ಸಿನಿಮಾ ಮಾಡಿದ್ರು! – ಜು.14ಕ್ಕೆ ತೆರೆಗೆ ನಮಸ್ತೆ ಗೋಸ್ಟ್ ಎಂಬ ಹಾರರ್ ಸಿನಿಮಾ – ಅತ್ಯುತ್ತಮ ಕಥೆ, ನಟನೆ ಮೂಲಕ ಈಗಾಗಲೇ ಟ್ರೆಂಡ್ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಕಲಾತಂಡದವರೇ ನಿರ್ಮಿಸಿ ನಿರ್ದೇಶಿಸಿರುವ ಬಹು ನಿರೀಕ್ಷಿತ ನಮಸ್ತೆ ಗೋಸ್ಟ್ ಸಿನಿಮಾ ರಾಜ್ಯದ ಹಲವೆಡೆ ತೆರೆಕಂಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಿವಮೊಗ್ಗದವರೇ ಆದ ನಟ ಹರೀಶ್ ಪ್ರಮುಖ ಪಾತ್ರ ಮಾಡಿದ್ದಾರೆ. ಇದು ಭಯಾನಕ ಮತ್ತು ಹಾಸ್ಯ ಮಿಶ್ರಿತ ಚಿತ್ರವಾಗಿದೆ. ಇಯರ್ ಫೋನ್ ಬಳಕೆಯಿಂದ ಏನಾಗಬಹುದು ಎಂಬ ಸಂದೇಶ ಕೂಡ ಇದರಲ್ಲಿದೆ. ಯುವಕರನ್ನು ಹೆಚ್ಚಾಗಿ ಇದು ಆಕರ್ಷಿಸುತ್ತದೆ, ಮುಖ್ಯ ಪಾತ್ರದಲ್ಲಿ ನಿರ್ದೇಶಕ ಭರತ್ ನಂದ, ನಾಯಕಿಯಾಗಿ ವಿದ್ಯಾ ರಾಜ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಹರೀಶ್ ಸೇರಿದಂತೆ ಬಾಲರಾಜ್ ವಾಡಿ, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ. ತಂತ್ರಜ್ಞಾನದಲ್ಲೂ ಕೂಡ ಶಿವಮೊಗ್ಗದವರೇ ಹೆಚ್ಚಾಗಿದ್ದು ರೂಪ ಹರೀಶ್ ಪ್ರಸಾದನ ಕೆಲಸ ಮಾಡಿದ್ದಾರೆ ಮಧುಸೂದನ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಸಿನಿಮಾದಲ್ಲಿ ಶೇ.80 ಎಷ್ಟು ಶಿವಮೊಗ್ಗದವರೇ…
ಆನ್ ಲೈನ್ ಗೇಮಿಂಗ್ ವಂಚನೆಗೆ ಮೂಗುದಾರ?! – ಯುವ ಜನತೆ, ವಿದ್ಯಾರ್ಥಿಗಳ ಬದುಕು ಹಾಳು – ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ ಕೇಂದ್ರ ಸರ್ಕಾರ ಕೂಡಲೇ ಎಲ್ಲಾ ಆನ್ಲೈನ್ ಜೂಜು ಗೇಮ್ ರದ್ದು ಪಡಿಸಲಿ: ಭಾರೀ ಅಭಿಯಾನ NAMMUR EXPRESS NEWS ಬೆಂಗಳೂರು: ಆನ್ ಲೈನ್ ಗೇಮಿಂಗ್ ಆ್ಯಪ್ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇವುಗಳ ಬಗ್ಗೆ ತನಿಖೆ ಕೈಗೊಂಡು, ಇಂತಹ ಚಟುವಟಿಕೆಗಳನ್ನು ರದ್ದು ಪಡಿಸುವಂತೆ ಕೋರಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಡಿ.ಎಸ್ ಸರ್ಕಾರದ ಗಮನ ಸೆಳೆದಿದ್ದು ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದೆ. ಗೃಹ ಸಚಿವರ ಪರವಾಗಿ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆನ್ ಲೈನ್ ಗೇಮ್ ಗಳಾದ ಡ್ರೀಮ್ 11. ಮೈ ಸರ್ಕಲ್ ಮುಂತಾದ ಆ್ಯಪ್ ಗಳಿಂದ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಯುವ ಸಮುದಾಯದವರು ಆನ್ ಲೈನ್ ಗೇಮ್ ಆಡುವ ಹವ್ಯಾಸಿಗಳಾಗಿದ್ದು, ಇವರು ತಮ್ಮ ಉದ್ಯೋಗದ…
ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕರಿಬ್ಬರನ್ನೇ ಕೊಂದ! – ಬೆಂಗಳೂರಲ್ಲಿ ಕಂಪನಿ ಮಾಲೀಕರ ಬರ್ಬರ ಹತ್ಯೆ – ಉಡುಪಿ, ಮಣಿಪಾಲದಲ್ಲಿ ಸರಣಿ ಅಪಘಾತ NAMMUR EXPRESS NEWS ಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿಯ ಕಂಪನಿಯೊಂದರಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದ್ದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿ ಮ್ಯಾನೇಜಿಂಗ್ ಫಣೀಂದ್ರ ಹಾಗೂ ಸಿಇಒ ವಿನಯ್ ಕುಮಾರ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು ಕಂಪನಿ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡಿದ ಫೆಲಿಕ್ಸ್ ರಿವೆಂಜಿನ ಹಿನ್ನಲೆಯಲ್ಲಿ ಈ ಕೃತ್ಯ ಎಸಗಿರಬಹುದೆಂದು ಆನುಮಾನಿಸಲಾಗಿದೆ. ಅಪಘಾತ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಲಾರಿಯೊಂದು ಎರಡು ಬಸ್ಸು ಸೇರಿದಂತೆ ಇತರ 5 ವಾಹನಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತಿದ್ದ ಯುವತಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಉಜಿರೆ ಕಡೆಯಿಂದ ಮರಳು ತುಂಬಿದ ಲಾರಿ ಬೆಳ್ತಂಗಡಿ ಸೇತುವೆ ಬಳಿ ಬಸ್ಸಿಗೆ ಡಿಕ್ಕಿ…
ಹ್ಯಾಪಿ ಬರ್ತ್ ಡೇ ಶಿವಣ್ಣ…! – ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಜನ್ಮ ದಿನದ ಸಂಭ್ರಮ! – ರಾಜ್ಯದ ಅಭಿಮಾನಿಗಳಿಂದ ಶುಭಾಶಯಗಳು – ಸರಳತೆ, ಸಜ್ಜನಿಕೆಯ ಮೂಲಕ ಹೆಸರು ಮಾಡಿದ ನಟ NAMMUR EXPRESS NEWS ಕನ್ನಡದ ಖ್ಯಾತ ನಟ, ತನ್ನ ಹೃದಯವಂತಿಕೆ ಮೂಲದ ಕರುನಾಡ ಜನರ ಮನ ಗೆದ್ದ ಡಾ. ಶಿವರಾಜ್‌ಕುಮಾರ್ ಅವರಿಗೆ ಜನ್ಮ ದಿನದ ಸಂಭ್ರಮ. ಕನ್ನಡದ ಚಿತ್ರನಟ. ಡಾ.ರಾಜ್‌ಕುಮಾರ್ ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‌ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು. ಶಿವರಾಜ್‌ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‌ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‌ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು. ಮುಂಬೈನಲ್ಲಿ ಅಭಿನಯದ…
ತೀರ್ಥಹಳ್ಳಿಯಲ್ಲಿ ಕುಡಿದು ಲಾಂಗ್ ಬೀಸಿದರು! – ಕುಡುಕರ ಗಲಾಟೆಗಿಲ್ಲ ಬ್ರೇಕ್: ಏನಿದು ಗಲಾಟೆ? – ಶಿವಮೊಗ್ಗದಲ್ಲಿ ಸಾಲ ಬಾಧೆಗೆ ಉದ್ಯಮಿ ಆತ್ಮಹತ್ಯೆ NAMMUR EXPRESS NEWS ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಭರಣ ಜ್ಯುವೆಲ್ಲರಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮದ್ಯ ರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ್ದು ಇಬ್ಬರಿಗೆ ಗಾಯ ಆಗಿದೆ ಎಂದು ತಿಳಿದು ಬಂದಿದೆ. ಕಮ್ಮರಡಿಯ ಯುವಕ ರಸ್ತೆ ದಾಟುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ನಾಲ್ವರು ಸೀನಿಮಿಯ ರೀತಿಯಲ್ಲಿ ರಸ್ತೆಯಲ್ಲೇ ತಲ್ವಾರ್ ಹಿಡಿದು ಗಲಾಟೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮದ ಸೋಲು ಸಾವಿಗೆ ತಳ್ಳಿತು! ವ್ಯವಹಾರದಲ್ಲಿ ನಷ್ಟವಾಗಿ ಸಾಲಬಾದೆ ತಾಳಲಾರದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಂಪನಿಯ ಉತ್ಪನ್ನಗಳ ಮಾರಾಟಕ್ಕೆ ಅಂಗಡಿ ಇಟ್ಟಿದ್ದ ಸ್ಚಾಮಿ ನಾಥನ್ ಎಂಬ 48…
ಹಾಡು ಹಗಲೇ ರೌಡಿಶೀಟರ್ ಬರ್ಬರ ಹತ್ಯೆ – ಮತ್ತೆ ಭೀಮಾತೀರದಲ್ಲಿ ಹರಿದ ನೆತ್ತರ – ರಕ್ತದ ಮಡುವಿನಲ್ಲಿ ಬಿದ್ದ ಮಾಳಪ್ಪ ಮೇತ್ರಿ – ಮತ್ತೆ ಭೀಮಾ ತೀರದಲ್ಲಿ ಆತಂಕದ ವಾತಾವರಣ ಸಿಂದಗಿ/ಆಲಮೇಲ: ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ರಕ್ತದ ನೆತ್ತರು ಹರಿದಿದೆ. ಜುಲೈ11ರಂದು ಮಧ್ಯಾಹ್ನ 2ಗಂಟೆಗೆ ಅಲಮೇಲ ತಾಲೂಕಿನ ದೇವರನಾದಗಿ ಗ್ರಾಮದ ಹತ್ತಿರ ರೌಡಿಶೀಟರ್ ಮಾಳಪ್ಪ ಯಮನಪ್ಪ ನಾಯ್ಕೋಡಿ ಮೇತ್ರಿ (40) ಸಾ. ಆಲಮೇಲ ಎಂಬ ವ್ಯಕ್ತಿಗೆ ಮಾರಕಾಸ್ತ್ರಗಳಿಂದ ತೆಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ ಯಾರು ? ಯಾವುದೇ ಉದ್ದೇಶಕ್ಕಾಗಿ ? ಈ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ ಡಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ…
ಹಿಂದೂಗಳ ರಕ್ಷಣೆಗಾಗಿ ಹೋರಾಟ! – ಸಿಂದಗಿಯಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ NAMMUR EXPRESS SINDAGI ಸಿಂದಗಿ: ಜು. ೮ ರಂದು ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸದಸ್ಯ ವೇಣು ಗೋಪಾಲರವರನ್ನು ಹಾಗೂ ಕಳೆದ ೩ ದಿನದ ಹಿಂದೆ ಚಿಕ್ಕೋಡಿಯಲ್ಲಿ ಜೈನ ಮುನಿಗಳ ಬರ್ಬರ ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಹಿಂದೂಗಳ ರಕ್ಷಣೆಗಾಗಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಯುವಾ ಬ್ರಿಗೇಡ್ ಸಂಚಾಲಕ ರಾಜು ಪಾಟೀಲ ಅಹಿಂಸೆಯೇ ನನ್ನ ಧರ್ಮ ಎನ್ನುವ ಜೈನ ಮುನಿಯನ್ನು ಹತ್ಯೆ ಮಾಡಿದ್ದು ಬಹು ದೊಡ್ಡ ಅಪರಾಧ ಪೋಲಿಸ್ ಪ್ರಕರಣದಲ್ಲಿ ದುಡ್ಡಿನ ವ್ಯವಹಾರ ಎಂದು ಹೇಳಲಾಗುತ್ತಿದೆ. ಅಲ್ಲಿನ ಶಾಸಕರು ಹೇಳುವ ಹಾಗೆ ಜೈನ ಮುನಿಗಳು ಯಾವುದೇ ರೀತಿಯ ವ್ಯವಹಾರ ಇಟ್ಟುಕೊಂಡಿಲ್ಲ ಈ ಕುರಿತು ಸೂಕ್ತ ತನಿಖೆ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಹನುಮ ಜಯಂತಿ ಆಚರಿಸಿ ಹಿಂದೂ ಕಾರ್ಯಕರ್ತನನ್ನು ಬಾಟಲಿಯಿಂದ…
ತೀರ್ಥಹಳ್ಳಿ ಪಟ್ಟಣ ಇನ್ನು ಹಸಿರು ಹಸಿರು! – ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗಿಡ ನೆಡುವ ಯೋಜನೆ – ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದು ಪಟ್ಟಣದಲ್ಲಿ ಸುಮಾರು 1000 ಗಿಡ ನೆಡುವ ಯೋಜನೆಗೆ ಚಾಲನೆ ಸಿಕ್ಕಿದೆ. ರೋಟರಿ, ಲಯನ್ಸ್ ಕ್ಲಬ್, ಜೆಸಿಐ, ಇನ್ನರ್ ವೀಲ್, ಮಲ್ನಾಡ್ ಕ್ಲಬ್, ಸಾಹಿತ್ಯ ಪರಿಷತ್ ಮತ್ತು ಬೇರೆ ಬೇರೆ ಸಂಘಟನೆಗಳ ಸಹಯೋಗದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ಸಿಕ್ಕಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಉಪಾಧ್ಯಕ್ಷರಾದ ಅಸಾದಿ, ಸದಸ್ಯರಾದ ಗೀತಾ ರಮೇಶ್, ಶಬನಮ್, ಜಯಪ್ರಕಾಶ್ ಶೆಟ್ಟಿ, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ್ ಶೆಟ್ಟಿ, ರವೀಶ್, ನವೀನ್, ಮಂಜುಳಾ ನಾಗೇಂದ್ರ, ಜ್ಯೋತಿ ಗಣೇಶ್, ನಮ್ರತ್, ಮುಖ್ಯ ಅಧಿಕಾರಿ ಕುರಿಯಾ ಕೋಸ್, ಎಲ್ಲಾ ಸಿಬ್ಬಂದಿ ತೀರ್ಥಹಳ್ಳಿಯ ಕುಶಾವತಿ ಪಾರ್ಕಲ್ಲಿ ಯೋಜನೆಗೆ ಚಾಲನೆ ನೀಡಿದರು. ತೀರ್ಥಹಳ್ಳಿ…