ಜೈನ ಮುನಿ ಮರ್ಡರ್ ಖಂಡಿಸಿ ತೀರ್ಥಹಳ್ಳಿಯಲ್ಲಿ ಮೆರವಣಿಗೆ – ರಾಜ್ಯದಲ್ಲಿ ಹದಗೆಟ್ಟಿದೆ ರಾಜ್ಯದ ಕಾನೂನು ಸುವ್ಯವಸ್ಥೆ – ತೀರ್ಥಹಳ್ಳಿಯಲ್ಲಿ ಬಿಜೆಪಿಯಿಂದ ಹೋರಾಟ NAMMUR EXPRESS NEWS ತೀರ್ಥಹಳ್ಳಿ: ಅತ್ಯಂತ ಸೌಮ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯವಾದ ಜೈನ ಧರ್ಮದ ಗುರುಗಳಾದ ಚಿಕ್ಕೋಡಿಯ ಶ್ರೀ ಕಾಮಕುಮಾರ ಮಹಾಮುನಿಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಾಗೂ ಹನುಮಜಯಂತಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಟಿ.ನರಸೀಪುರದ ಯುವಬ್ರಿಗೇಡ್ ಕಾರ್ಯಕರ್ತರಾದ ವೇಣುಗೋಪಾಲ್ ಎಂಬಾತನನ್ನು ಅತ್ಯಂತ ಹೀನಾಯವಾಗಿ ಕೊಲೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಧಾರ್ಮಿಕ ಮುಖಂಡರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೀವ ಅಪಾಯದಲ್ಲಿದೆ. ಈ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ತೀರ್ಥಹಳ್ಳಿ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು. ಪ್ರಮುಖರಾದ ಆರ್ ಮದನ್, ಪಕ್ಷದ ಅಧ್ಯಕ್ಷರಾದ ರಾಘವೇಂದ್ರ ಬಾಳೆಬೈಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಖರ್, ಶ್ರೀನಿವಾಸ್, ಎಲ್ಲಾ ಪ್ರಮುಖರು, ಕಾರ್ಯಕರ್ತರು ಹಾಗೂ ಸಮಸ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರು…
Author: Nammur Express Admin
ಗುತ್ತಿಗೆದಾರರ ಬಿಲ್ ಬಾಕಿ: ಕಿಮ್ಮನೆ ಮನವಿ ಪತ್ರ! – ಗ್ರಾಮೀಣ ಅಭಿವೃದ್ಧಿ ಸಚಿವರ ಭೇಟಿ ಮಾಡಿ ಮನವರಿಕೆ – ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖರ ಹಾಜರ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ 60ರಿಂದ 100 ಕೋಟಿ ಹಣ ಬಾಕಿ ಇದ್ದು ಕೂಡಲೇ ಹಣ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಪ್ರಮುಖರ ನಿಯೋಗ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿ ಗುತ್ತಿಗೆದಾರರ ಪರವಾಗಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗುತ್ತಿಗೆದಾರರ ಪರವಾಗಿ ಸಂಕಷ್ಟದಲ್ಲಿ ಇರುವ ಗುತ್ತಿಗೆದಾರರ ಪರವಾಗಿ ಕಿಮ್ಮನೆಯವರು ಪಕ್ಷಾತೀತವಾಗಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಹಲವೆಡೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಸಂಕಷ್ಟದಲ್ಲಿದ್ದು ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಲವು ಯೋಜನೆ ಮಾಡಿದ್ದು ಕಾಮಗಾರಿ ಅವ್ಯವಹಾರ ಹಿನ್ನೆಲೆ ಹೊಸ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ…
15 ಲಕ್ಷ ಕುಟುಂಬಕ್ಕೆ ಸಿಕ್ಕಲ್ಲ ಅನ್ನಭಾಗ್ಯ ಗ್ಯಾರಂಟಿ ಹಣ! – ನಿಷ್ಕ್ರಿಯ ಬ್ಯಾಂಕ್ ಖಾತೆ, ಆಧಾರ್ ಲಿಂಕ್, ಇ-ಕೆವೈಸಿ ಸರಿ ಇಲ್ಲ – ನಿಮ್ಮ ಎಲ್ಲಾ ದಾಖಲೆ ಸರಿ ಇದ್ಯಾ ಚೆಕ್ ಮಾಡ್ಕೊಳಿ! – ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರ ಅರ್ಹರು?! NAMMUR EXPRESS NEWS ಬೆಂಗಳೂರು: ನಿಷ್ಕ್ರಿಯ ಬ್ಯಾಂಕ್ ಖಾತೆ, ತಪ್ಪಾದ ಆಧಾರ್ ಸಂಖ್ಯೆ ಹಾಗೂ ಇ-ಕೆವೈಸಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದ 15 ಲಕ್ಷಕ್ಕೂ ಅಧಿಕ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಗಳು ‘ಅನ್ನಭಾಗ್ಯ’ ಹಣ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಹೌದು. ಇನ್ನು ಹಳ್ಳಿ ಹಳ್ಳಿಗಳಲ್ಲಿ ಈ ಬಗ್ಗೆ ಆಡಳಿತ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಜನ ಇನ್ನು ದಾಖಲೆ ಸರಿ ಮಾಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಏನಿದು ಯೋಜನೆ?: ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ ಈಗಾಗಲೆ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇನ್ನುಳಿದ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ 170…
4 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ – ಕರಾವಳಿ, ಮಲೆನಾಡಲ್ಲಿ ಮಳೆ ಅಲರ್ಟ್ – 3 ದಿನಗಳಿಂದ ತುಸು ವಿಶ್ರಾಂತಿ ಪಡೆದ ಮಳೆ NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಮಳೆ ತುಸು ವಿಶ್ರಾಂತಿ ಪಡೆದಿದ್ದು, 4 ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ 1 ವಾರದ ಮಳೆಯ ಆಗಮನದಿಂದ ರೈತರು ಸಂತಸಗೊಂಡಿದ್ದು, ಕೆಲವೊಂದು ಕಡೆ ಮಳೆಯಿಂದಾಗಿ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮುಂದಿನ 4 ದಿನಗಳವರೆಗೂ ಭಾರಿ ಮಳೆಯಾಲಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ, ದಕ್ಷಿಣಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡುಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಅತೀಯಾದ ಮಳೆಯಿಂದ ಉಂಟಾಗುವ ತೊಂದರೆಗಳ ಬಗೆ ಎಚ್ಚರಿಕೆ ಇರುವಂತೆ ಮುನ್ಸೂಚನೆ ನೀಡಲಾಗಿದೆ. ಹಲವು ಜೀವ ಹಾನಿ!: ವರುಣನ ಆರ್ಭಟದಿಂದಾಗಿ ನೆರೆ ಪ್ರವಾಹದಿಂದ ಹಳ್ಳ…
ಅನುದಾನಿತ ಪ್ರೌಢಶಾಲೆ, ಪಿಯು ಬೋಧಕ ಹುದ್ದೆ ಭರ್ತಿ – 306 ಪ್ರೌಢಶಾಲೆಗಳ ಉನ್ನತೀಕರಣಕ್ಕೆ ಸರ್ಕಾರದ ಪ್ಲಾನ್: ಮಧು ಬಂಗಾರಪ್ಪ – ವಸತಿ ಶಾಲೆಗಳಲ್ಲಿ ಪಿಯುಸಿ ಆರಂಭ NAMMUR EXPRESS NEWS ಬೆಂಗಳೂರು: ಆರ್ಥಿಕ ಇಲಾಖೆಯ ಸಹಮತಿ ಪಡೆದು 306 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸೋಮವಾರ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಪ್ರಶ್ನೆಗೆ, “”667 ಸರಕಾರಿ ಪ್ರೌಢಶಾಲೆ ಗಳನ್ನು ಪಿಯು ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿ ಸುವ ಪ್ರಸ್ತಾವನೆ ಇದೆ. ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ 361 ಪ್ರೌಢಶಾಲೆಗಳಿಗೆ ಇದು ಸಾಧ್ಯವಿಲ್ಲ. 2 ವರ್ಷ ಮುಂದೂಡುವಂತೆ ಆರ್ಥಿಕ ಅಭಿಪ್ರಾಯಿಸಿದೆ,” ಎಂದು ತಿಳಿಸಿದರು. ಇಲಾಖೆ ಆರ್ಥಿಕ ಇಲಾಖೆ ಕೆಲ ಮಾಹಿತಿ ಕೋರಿದ್ದು ಅದನ್ನು ಕ್ರೋಢೀಕರಿಸಲಾಗುತ್ತಿದೆ. 2023 – 24ನೇ ಸಾಲಿನಲ್ಲಿ 8 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲಾಗಿದೆ. ಪ್ರೌಢಶಾಲೆ ಅಗತ್ಯ ವಿರುವ ಕಡೆಗಳಲ್ಲೂ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಹೊಸ ಸರಕಾರಿ…
ಎಲ್ಲೆಂದರಲ್ಲಿ ಪೂಲಾಗುತ್ತಿರುವ ಕುಡಿಯುವ ನೀರು – ನಿವಾಸಿಗಳ ಮನೆಗಳಿಗೆ ಪೂರೈಕೆಯಾಗದ ನೀರು – ರಸ್ತೆ ಪಾಲಾಗುತ್ತಿರುವ ಕುಡಿಯುವ ನೀರು : ಸಾರ್ವಜನಿಕರ ಆಕ್ರೋಶ – 15 ದಿನಗಳಿಂದ ಪಟ್ಟಣದ ಹಲವಾರು ಮನೆಗಳಿಗೆ ನೀರು ಪೂರೈಕೆ ಸ್ಥಗಿತ – ಸಂಕಷ್ಟದಲ್ಲಿ ಸ್ಥಳೀಯ ನಿವಾಸಿಗಳು NAMMUR EXPRESS ಸಿಂದಗಿ : ಪಟ್ಟಣದ ನಿವಾಸಿಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಪುರಸಭೆ ವತಿಯಿಂದ ಮನೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರು ರಸ್ತೆ ಪಾಲಾಗುತ್ತಿದ್ದು . ಮೊದಲೇ 15 ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಬರುತ್ತಿದ್ದು ಆ ನೀರು ಸಹ ರಸ್ತೆ ಪಾಲಾಗುತ್ತಿದೆ. ಈ ಕುರಿತು ಸ್ಥಳೀಯ ನಿವಾಸಿಗಳು ಪುರಸಭೆ ಆಡಳಿತದ ಕೆಂಡಾಮಂಡಲವಾಗಿದ್ದ್ದಾರೆ. ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಿಂದಗಿ ಕೆರೆಯಲ್ಲಿ ನೀರಿನ ಮಟ್ಟವು ಮಳೆಯಾಗದ ಹಿನ್ನಲೆ ಕಡಿಮೆಯಾಗುತ್ತಿದೆ. ಇಷ್ಟೆಲ್ಲದರ ನಡುವೆ ಅಲ್ಪ ಸ್ವಲ್ಪ ಪೂರೈಕೆಯಾಗುವ ನೀರು ರಸ್ತೆ ಪಾಲಾಗುತ್ತಿದೆ. ಕಾರಣ ಸಾರ್ವಜನಿಕರು ಪುರಸಭೆ ಆಡಳಿತ ವೈಪೈಲ್ಯ ಕುರಿತು ಟೀಕಾ ಪ್ರಹಾರ ನಡೆಸಿದ್ದಾರೆ.…
ಶೃಂಗೇರಿ ಶಾಸಕ ರಾಜೇಗೌಡರಿಗೆ ಮಹತ್ವದ ಸ್ಥಾನ? – ಸರ್ಕಾರದ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ಹುದ್ದೆ ಸಾಧ್ಯತೆ – ಡಾ.ಅಂಶುಮಂತ್ ಅವರಿಗೂ ಮಹತ್ವದ ಸ್ಥಾನ NAMMUR EXPRESS NEWS ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆದು ಇದೀಗ ಹೊಸ ಸರ್ಕಾರ ಬಂದಿದೆ. ಅನೇಕ ಅರ್ಹ ಶಾಸಕರು ತಮ್ಮ ಸಾಮಾಜಿಕ ಸೇವೆ ಮತ್ತು ಪಕ್ಷ ನಿಷ್ಠೆಯಿಂದ ಮತ್ತೆ ಗೆದ್ದು ಬಂದಿದ್ದಾರೆ. ಅಂತಹ ಶಾಸಕರಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಒಬ್ಬರು. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಜತೆಗೆ ರಾಜೇಗೌಡ ಅವರು ಎರಡನೇ ಬಾರಿಗೆ ವಿಧಾನ ಸಭೆ ಪ್ರವೇಶ ಮಾಡಿದ್ದಾರೆ. ಎಲ್ಲಿಯೂ ಅವರು ಹುದ್ದೆ ಬಯಸಿದವರಲ್ಲ. ಆದರೂ ಜಿಲ್ಲೆ ಪ್ರಾತಿನಿಧ್ಯ ಬಂದಾಗ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ ಅವರ ಪಕ್ಷ ನಿಷ್ಠೆ ಮತ್ತೊಮ್ಮೆ ತಾವು ಎಲ್ಲಿಯೂ ಸ್ಥಾನಕ್ಕಾಗಿ ಲಾಭಿ ನಡೆಸಿಲ್ಲ. ಇದೀಗ ಸರ್ಕಾರದ ಮುಂದಿನ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಜತೆಗೆ…
ಇದು ವಂಚನೆ ಕಾಲವಯ್ಯಾ! – ನಕಲಿ ಸಿಮ್ ಬಳಸಿ 72 ಲಕ್ಷ ಡ್ರಾ!: ಇದೊಂದು ಹೈಟೆಕ್ ಮೋಸ! – ಸಿಮ್ ಕಾರ್ಡ್ ಬ್ಲಾಕ್ ಮಾಡಿ ಹಣ ದೋಚಿದ ವಂಚಕರು – ಸಿಮ್ ಆಕ್ಟಿವೇಷನ್ ಪ್ರಕ್ರಿಯೆ ಹೆಸರಲ್ಲೂ ವಂಚನೆ NAMMUR EXPRESS NEWS ಬೆಂಗಳೂರು: ಜೆರಾಕ್ಸ್ ಅಂಗಡಿಯೊಂದರ ಮಾಲೀಕರ ಸಿಮ್ ಕಾರ್ಡ್ ಸ್ಥಗಿತ (ಬ್ಲಾಕ್) ಮಾಡಿಸಿದ್ದ ಸೈಬರ್ ವಂಚಕರು, ನಕಲಿ ದಾಖಲೆಗಳ ಮೂಲಕ ವಹಿವಾಟು ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ 1 2 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ. ಹಣ ಕಳೆದುಕೊಂಡಿರುವ ಮಾಲೀಕ ಶಿವಕುಮಾರ್ ಅವರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ‘ಚಿಕ್ಕಸಂದ್ರದ ನಿವಾಸಿ ಶಿವಕುಮಾರ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ಮೊಬೈಲ್ ನೆಟ್‌ವರ್ಕ್ ಏಕಾಏಕಿ ಬಂದ್ ಆಗಿತ್ತು. ಈ ಬಗ್ಗೆ ಮೊಬೈಲ್ ಸೇವಾ ಕಂಪನಿ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದ್ದರು. ಹಳೇ ಸಿಮ್‌ಕಾರ್ಡ್ ಬ್ಲಾಕ್ ಆಗಿದ್ದು, ಹೊಸ ಸಿಮ್‌ಕಾರ್ಡ್ ಖರೀದಿಸುವಂತೆ ಪ್ರತಿನಿಧಿ ಸಲಹೆ ನೀಡಿದ್ದರು’ ಎಂದು ಪೊಲೀಸರು ಹೇಳಿದರು. ಹೊಸ ಸಿಮ್ ಕಾರ್ಡ್…
ಹಿಂದೂ ಸಮಾಜದ ಮೇಲೆ ದೌರ್ಜನ್ಯ ವಿರೋಧಿಸಿ ಹೋರಾಟ! – ಶಿಕಾರಿಪುರ ಪಟ್ಟಣ ಸ್ವಯಂ ಪ್ರೇರಿತ ಬಂದ್ ಯಶಸ್ವಿ – ಆಕ್ರಮ ಗೋಮಾಂಸ ಮತ್ತು ಚರ್ಮದ ಸಾಗಾಣಿಕೆಗೆ ವಿರೋಧ NAMMUR EXPRESS NEWS ಶಿಕಾರಿಪುರ: ಹಿಂದೂ ಸಮಾಜದ ಮೇಲೆ ನಡೆಯುತ್ತಿರು ದೌರ್ಜನ್ಯ ಖಂಡಿಸಿ ಜಾಗೃತ ನಾಗರೀಕ ವೇದಿಕೆ ಕರೆಗೆ ಶಿಕಾರಿಪುರ ಪಟ್ಟಣದ ವ್ಯಾಪಾರಿಗಳು ಸಾರ್ವಜನಿಕರು ಬೆಂಬಲ ನೀಡಿದ್ದು ಸ್ಬಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಇತ್ತೀಚಿಗೆ ತಾಲೂಕಿನ ಮಳಲಿಕೊಪ್ಪ ಗ್ರಾಮದ ಬಳಿ ಆಕ್ರಮ ಗೋಮಾಂಸ ಮತ್ತು ಚರ್ಮದ ಸಾಗಾಣಿಕೆ ವಿಚಾರ ಎರಡು ಕೋಮುಗಳ ನಡುವೆ ಗದ್ದಲ ಶುರುವಾಗಿದ್ದು ಪೋಲಿಸ್ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ವಿಷಯ ಎರಡು ಎಫ್ ಐಆರ್ ದಾಖಲಾಗಿತ್ತು. ಈ ವಿಷಯವಾಗಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಜಾಗೃತ ನಾಗರೀಕ ವೇದಿಕೆ ಗೋ ಹತ್ಯೆ- ಹಿಂದುಗಳ ಮೇಲೆ ಹಲ್ಲೆ ಸುಳ್ಳು ಕೇಸ್ ದಾಖಲು ಖಂಡಿಸಿ ಸ್ವಯಂ ಪ್ರೇರಿತ ಬಂದ್ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದರು. ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತ…
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರಿಗೆ ಶ್ರೀಲಂಕಾದಲ್ಲಿ ಹೃದಯಾಘಾತ! – ಭಾರತಕ್ಕೆ ಹೆಚ್ಚಿನ ಚಿಕಿತ್ಸೆಗೆ ರವಾನೆ NAMMUR EXPRESS NEWS ನವದೆಹಲಿ: ಇಸ್ರೋ ಮಾಜಿ ಅಧ್ಯಕ್ಷ ಮತ್ತು ಹೊಸ ಶಿಕ್ಷಣ ನೀತಿಯ ಕರಡು ಸಮಿತಿಯ ಮುಖ್ಯಸ್ಥ ಕೆ.ಕಸ್ತೂರಿರಂಗನ್ ಅವರಿಗೆ ಶ್ರೀಲಂಕಾದಲ್ಲಿ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ವಿಮಾನದ ಮೂಲಕ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. 83ರ ವರ್ಷದ ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹಾಗೂ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ರಾಜ್ಯಸಭೆಯ ಮಾಜಿ ಸದಸ್ಯರೂ ಹೌದು. ಏಪ್ರಿಲ್ 2004ರಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‌ನ ನಿರ್ದೇಶಕರಾಗಿದ್ದರು. ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ? HOW TO APPLY : NEET-UG COUNSELLING 2023