Author: Nammur Express Admin

2 ಜಿಬಿವರೆಗಿನ ಫೈಲ್ ಕಳುಹಿಸುವ ಸೌಲಭ್ಯ ಲಭ್ಯ ಸೋಶಿಯಲ್ ಮೆಸೇಜಿಂಗ್ ಆಪ್ ವಾಟ್ಸ್‍ಪ್ ಈಗ ಜಗತ್ಪ್ರಸಿದ್ಧ. ಆದರೆ ಇದರ ಪ್ರತಿಸ್ಪರ್ಧಿ ಟೆಲಿಗ್ರಾಮ್ ಕೂಡ ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದರಲ್ಲೂ ಅತೀ ಹೆಚ್ಚು ಸ್ಟೋರೇಜ್ ಡಾಟಾ ಕೂಡ ಇಲ್ಲಿಂದ ಕಳುಹಿಸಬಹುದಾಗಿದೆ. ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್‍ನಲ್ಲಿ ಹಲವು ಸೌಲಭ್ಯಗಳನ್ನು ಟೆಲಿಗ್ರಾಂ ನೀಡಿದೆ. profile ವಿಡಿಯೋ ಅಪ್ ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು, 2 ಜಿಬಿವರೆಗಿನ ಫೈಲ್‍ಗಳನ್ನು ಕಳಿಸುವ ಸೌಲಭ್ಯ ನೀಡಲಾಗಿದೆ.ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5 ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್‍ಗಳು ಬರುತ್ತಿದ್ದರೆ ಪ್ರೈವೆಸಿ ಹಾಗೂ ಸೆಕ್ಯುರಿಟಿ ಸೆಟಿಂಗ್ಸ್ ಮೂಲಕ ಸ್ವಯಂಚಾಲಿತವಾಗಿ ಅವುಗಳನ್ನು ತಡೆಯುವ ಅಥವಾ ಮ್ಯೂಟ್ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ 500 ಸದಸ್ಯರಿರುವ ಗ್ರೂಪ್‍ನ ಸದಸ್ಯರು ಗ್ರೂಪ್ ಸ್ಟಾಟ್ಸ್‍ಗಳನ್ನು ನೋಡಬಹುದಾಗಿದೆ. ಇನ್ನು ಹಲವಾರು ತಂತ್ರಜ್ಞಾನ ಬದಲಾವಣೆ ಸಾಧ್ಯತೆ ಇದೆ.

Read More

ಆನಂದಪುರ-ಶಿಕಾರಿಪುರ ಹೆದ್ದಾರಿಯ ಶಿವಗಂಗೆಯಲ್ಲಿ ಸಿಗುತ್ತೆ ಶಿವಮೊಗ್ಗ: ಕ್ಯಾನ್ಸರ್ ಔಷಧ ಎಂದೇ ಜನರಿಂದ ಪ್ರಸಿದ್ಧವಾಗಿರುವ ನರಸೀಪುರದ ನಾಟಿ ಔಷಧಿ ಶಿವಗಂಗೆಯಲ್ಲಿ ಇದೀಗ ಲಭ್ಯವಾಗಲಿದೆ. ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದ ಶಿವಮೊಗ್ಗದ ವೈದ್ಯ ನರಸೀಪುರ ನಾರಾಯಣ ಮೂರ್ತಿ ವಿಧವಶರಾಗಿದ್ದಾರೆ. ಅವರ ಬಳಿ ಕ್ಯಾನ್ಸರ್‍ಗೆ ಚಿಕಿತ್ಸೆಗೆ ಔಷಧಿ ಪಡೆಯಲು ದೇಶದ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದರು. ಆದರೆ ಕರೋನಾ ಬಳಿಕ ನರಸೀಪುರದಲ್ಲಿ ಹೊರಗಿನ ಜನರ ಪ್ರವೇಶಕ್ಕೆ ಅಪಸ್ವರ ಎತ್ತಿದ್ದರು. ನಾರಾಯಣ ಮೂರ್ತಿ ಅವರ ಕುಟುಂಬಸ್ಥರು ಇನ್ನು ಶಿವಗಂಗೆಯ ನಿರ್ಜನ ಪ್ರದೇಶದಲ್ಲಿ ದಿ.ನಾರಾಯಣ ಮೂರ್ತಿ ಅವರ ಕುಟುಂಬದವರು ಔಷಧಿಯನ್ನು ನೀಡಲಿದ್ದಾರೆ. ಗುರುವಾರ ನೂರಾರು ಜನರು ಇಲ್ಲಿಗೆ ಆಗಮಿಸಿ ಮೊದಲ ಬಾರಿಗೆ ಔಷಧಿ ಪಡೆದುಕೊಂಡಿದ್ದಾರೆ. ಶಿವಗಂಗೆ ಗ್ರಾಮಕ್ಕೆ ಔಷಧ ವಿತರಣಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ಆನಂದಪುರ-ಶಿಕಾರಿಪುರ ಹೆದ್ದಾರಿಯಿಂದ 3 ಕಿ. ಮೀ. ದೂರದ ಮಲ್ಲಂದೂರು ಮತ್ತು ಹೊಸಕೊಪ್ಪ ನಡುವಿನ ನಿರ್ಜನ ಪ್ರದೇಶದಲ್ಲಿ ಗೋದಾಮು ನಿರ್ಮಾಣ ಮಾಡಲಾಗಿದ್ದು, ಇಲ್ಲಿಯೇ ಇನ್ನು ಮುಂದೆ ಔಷಧಿ ದೊರೆಯಲಿದೆ. ನರಸೀಪುರ ಗ್ರಾಮದಲ್ಲಿ ಔಷಧ ವಿತರಣೆಗೆ ಜನರು…

Read More

ಯಾರನ್ನೂ ಕಡೆಗಣಿಸುವುದಿಲ್ಲ: ಮೋದಿ ಭರವಸೆ ನವ ದೆಹಲಿ: ದೇಶದ ಪ್ರತಿಯೊಬ್ಬರಿಗೂ ಕರೋನಾ ಲಸಿಕೆ ಪೂರೈಕೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಯಾರನ್ನೂ ಕಡೆಗಣಿಸದೆ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ,”ಲಸಿಕೆ ಲಭ್ಯವಾದ ತಕ್ಷಣ ನಾವು ಎಲ್ಲರಿಗೂ ಲಸಿಕೆ ಒದಗಿಸಲಿದ್ದೇವೆ. ಯಾರನ್ನೂ ಮರೆಯುವುದಿಲ್ಲ..ಕಡೆಗಣಿಸುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ. ಮೊದಲು ಕರೋನಾ ವಾರಿಯರ್ಸ್ ಲಸಿಕೆ ನೀಡಲು ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಪೂರೈಕೆ ಕಾರ್ಯದಲ್ಲಿ “ರಾಷ್ಟ್ರೀಯ ತಜ್ಞರ ತಂಡ” ರಚಿಸಲಾಗಿದ್ದು, ಅವರು ಆದ್ಯತೆಯನ್ನು ನಿರ್ಧರಿಸಲಿದ್ದಾರೆ. ದೇಶದ ದೂರದ ಮೂಲೆಗಳಲ್ಲಿರುವವರಿಗೆ ಲಸಿಕೆ ಲಭ್ಯವಾಗುವಂತೆ ಸಂಗ್ರಹಿಸಲು, 28,000 ಕೋಲ್ಡ್ ಚೈನ್ ಪಾಯಿಂಟ್‍ಗಳನ್ನು ಸ್ಥಾಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಸಮರ್ಪಿತ ಕಾರ್ಯಕರ್ತರ ತಂಡ, ತನ್ನ ಕಾರ್ಯವನ್ನು ಪಾರದರ್ಶಕ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಲಿದೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ತಜ್ಞರ ತಂಡ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ…

Read More

ಪುತ್ತೂರಿನಲ್ಲಿ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಪುತ್ತೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ರೆಸಪ್ಷನಿಸ್ಟ್ ಆಗಿದ್ದ ಯುವತಿಗೆ ತನ್ನ ಮಾಜಿ ಪ್ರಿಯಕರ ಕಿರುಕುಳ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ. ವಿವಾಹಿತ ಹಾಗೂ ಮಾಜಿ ಪ್ರಿಯಕರ ದೇವಿಕಿರಣ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆಯಿಂದ ಮನನೊಂದು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಮಧುಶ್ರೀ (26) ಎಂಬ ಅವಿವಾಹಿತ ಯುವತಿಯೊಬ್ಬಳು ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿದೆ. ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಮಧುಶ್ರೀ ಕಳೆದ ನಾಲ್ಕು ವರ್ಷದಿಂದ ಖಾಸಗಿ ಅಸ್ಪತ್ರೆಯೊಂದರಲ್ಲಿ ದುಡಿಯುತ್ತಿದ್ದು, ರಾತ್ರಿ ಆಸ್ಪತ್ರೆಯ ಹಾಸ್ಟೆಲ್‍ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದು ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಮಧುಶ್ರೀ ಆತ್ಮಹತ್ಯೆಗೆ ದೇವಿಕಿರಣ್ ಕಿರುಕುಳವೇ ಕಾರಣ ಎಂದು…

Read More

ರಮೇಶ್ ಆಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿನ.1ರಂದು ತೀರ್ಥಹಳ್ಳಿಯಲ್ಲಿ ಪೌರ ಸನ್ಮಾನ ತೀರ್ಥಹಳ್ಳಿ: ತೀರ್ಥಹಳ್ಳಿ ಮಣ್ಣೇ ಅಂತದ್ದು. ಕಲೆ, ಸಾಹಿತ್ಯ, ಸಾಧನೆ, ನವೋದ್ಯಮ..ಹೀಗೆ ಹತ್ತಾರು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ತಾಲೂಕಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಗರಿ ಸೇರಿದೆ.ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಅವರದು ತೀರ್ಥಹಳ್ಳಿ ತಾಲ್ಲೂಕು ಮುತ್ತೂರು ಹೋಬಳಿ ಕಟ್ಟೆಹಕ್ಕಲು ಬಳಿಯ ಆಲ್ಮನೆ. ಐದನೇ ತರಗತಿ ಓದುವಾಗಲೇ ಯಕ್ಷಗಾನದತ್ತ ವಾಲಿದ್ದರು. ಯಕ್ಷಗಾನ ರಂಗದಲ್ಲಿ 57 ವರ್ಷ ಸೇವೆ ಸಲ್ಲಿಸಿದ್ದಾರೆ. ಧರ್ಮಸ್ಥಳ, ಸುರತ್ಕಲ್, ತೀರ್ಥಹಳ್ಳಿ, ಸೋಮವಾರ ಸಂತೆ ಮೊದಲಾದ ಯಕ್ಷಗಾನ ಮಂಡಳಿಗಳಲ್ಲಿ ಕಲಾವಿದರಾಗಿ, ಪದ್ಯ ರಚನಾಕಾರ, ನಿರ್ದೇಶಕ, ತಾಳಮದ್ದಲೆ ಅರ್ಥದಾರಿಯಾಗಿ ಪಾಂಡಿತ್ಯ ಹೊಂದಿದ್ದಾರೆ. ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯೋತ್ಸವದಂದು ಗೌರವ!: ರಮೇಶ್ ಆಚಾರ್ಯರವರಿಗೆ ನ.1ರಂದು ತೀರ್ಥಹಳ್ಳಿಯಲ್ಲಿ ಅದ್ದೂರಿ ಪೌರ ಸನ್ಮಾನದೊಂದಿಗೆ ಗೌರವಿಸಲು ತಾಲೂಕು ಕಛೇರಿಯಲ್ಲಿ ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನ.1ರಂದು ಬೆಳಿಗ್ಗೆ…

Read More

ಡ್ರಗ್ಸ್ ದಂಧೆಕೋರರಿಗೆ ಹಣ ಪೂರೈಕೆ ಆರೋಪದಲ್ಲಿ ಅರೆಸ್ಟ್ ಬೆಂಗಳೂರು: ಕೇರಳದ ಮಾಜಿ ಗೃಹ ಸಚಿವ, ಸಿಪಿಐ (ಎಂ) ಕಾರ್ಯದರ್ಶಿ ಕೊಡಿಯೇರಿ ಅವರ ಮಗ ಬಿನೀಶ್ ಕೊಡಿಯೇರ್‍ನನ್ನುಇಡಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಫೆಡ್ಲರ್ ಮೊಹಮ್ಮದ್, ಅನೂಪ್‍ಗೆ ಐವತ್ತು ಲಕ್ಷ ಹಣದ ವ್ಯವಹಾರ ನಡೆಸಿದ ಪ್ರಕರಣ ಕುರಿತು ನಾಲ್ಕು ಗಂಟೆಗಳ ವಿಚಾರಣೆ ಬಳಿಕ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಅ.6ರಂದು ವಿಚಾರಣೆಗೆ ಒಳಗಾಗಿದ್ದ ಬಿನೀಶ್ ಸ್ನೇಹಿತನ ಮೂಲಕ ಡ್ರಗ್ ಫೆಡ್ಲರ್ ಅನೂಫ್ ಹಣ ನೀಡಿದ್ದನ್ನು ಇಡಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ. ಈ ಕುರಿತು ದಾಖಲೆಗಳ ಸಮೇತ ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಬಿನೀಶ್ ಶಾಂತಿನಗರದ ಇಡಿ ಕಚೇರಿಗೆ ಗುರುವಾರ ಬೆಳಗ್ಗೆ ಹಾಜರಾಗಿದ್ದರು. ಈ ವೇಳೆ ಹಲವು ಗಂಟೆಗಳ ವಿಚಾರಣೆ ಬಳಿಕ ವಶಕ್ಕೆ ಪಡೆಯಲಾಗಿದೆ. ಸೆಷನ್ಸ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ನಾಲ್ಕು ದಿನ ಇಡಿ ವಶಕ್ಕೆ ನೀಡಲಾಗಿದೆ. ಈ ಹಿಂದೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್‍ನಲ್ಲಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬಂಧಿಸಲಾಗಿತ್ತು.…

Read More

ಮಧ್ಯವರ್ತಿಗಳ ಆಟಕ್ಕೆ ಬ್ರೇಕ್: ಜನತೆಗೆ ಸಲೀಸು ಬೆಂಗಳೂರು: ಇನ್ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆ ಸಲೀಸಾಗಲಿದೆ. ಜತೆಗೆ ಮಧ್ಯವರ್ತಿಗಳ ಆಟಕ್ಕೂ ಬ್ರೇಕ್ ಬೀಳಲಿದೆ. ಹೌದು. ಆಸ್ತಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಸರ್ಕಾರ ಆಸ್ತಿ ನೊಂದಣಿಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲು ಯೋಜನೆ ರೂಪಿಸಿದೆ. ಕೆಲವು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆನ್ಲೈನ್ ನೋಂದಣಿ ಕಾರ್ಯ ನವೆಂಬರ್ 2ರಿಂದ ಆರಂಭವಾಗಲಿದೆ. ಈಗಾಗಲೇ ಪ್ರಾಯೋಗಿಕವಾಗಿ 3 ಕಚೇರಿಗಳಲ್ಲಿ ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದು ನಂತರದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ. ಆಸ್ತಿ ನೋಂದಣಿಗೆ ಬೇಕಾದ ದಾಖಲೆಗಳನ್ನು ಅಪೆÇ್ಲೀಡ್ ಮಾಡಿ ನೋಂದಣಿ, ಮುದ್ರಾಂಕ ಶುಲ್ಕ ಆನ್ಲೈನ್‍ನಲ್ಲಿ ಪಾವತಿಸಬೇಕು. ನಂತರದಲ್ಲಿ ನೀಡುವ ಸಮಯದಲ್ಲಿ ಆಸ್ತಿ ನೋಂದಣಿ ಮಾಡಿಸಬೇಕು ಎಂದು ಹೇಳಲಾಗಿದೆ. ಇದು ಎಷ್ಟು ಅನುಷ್ಠಾನವಾಗಲಿದೆ ಎಂಬುದು ಮಾತ್ರ ಕಾದು ನೋಡಬೇಕಿದೆ.

Read More

ಕೇಂದ್ರದ ಆದೇಶ: ಶಿಕ್ಷಣ ಸಂಸ್ಥೆಗಳಿಗೆ ಶಾಕ್ ನವದೆಹಲಿ: ಕೇಂದ್ರ ಸರ್ಕಾರ ಕರೋನಾ ಹೆಚ್ಚುತ್ತಿರುವ ಹಿನ್ನಲೆ ನವೆಂಬರ್ ಅಂತ್ಯದವರೆಗೆ ಅನ್ ಲಾಕ್ 5.0 ವಿಸ್ತರಣೆ ಮಾಡಿದೆ. ಜತೆಗೆ ಈ ಅವಧಿಯಲ್ಲಿ ಕಡ್ಡಾಯವಾಗಿ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ ಶಾಲೆ ಶುರು ಮಾಡಲು ಸಜ್ಜಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ಶಾಕ್ ಎದುರಾಗಿದೆ.ಸೆಪ್ಟೆಂಬರ್ 30ರಂದು ಹೊರಡಿಸಲಾದ ಮಾರ್ಗಸೂಚಿ ಅಕ್ಟೋಬರ್ 31ರವರೆಗೆ ಜಾರಿಯಲ್ಲಿದ್ದು, ಈ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸುವಂತೆ ಗೃಹ ಸಚಿವಾಲಯ ಗುರುವಾರ ಹೊಸ ಆದೇಶ ಹೊರಡಿಸಿದೆ. ಆದರೆ ಪದವಿ, ಸ್ನಾತಕೋತ್ತರ ತರಗತಿಗಳು ನ.17ರಿಂದ ಶರತ್ತುಬದ್ಧವಾಗಿ ಆರಂಭವಾಗುವ ಸಾಧ್ಯತೆಗಳಿವೆ.ಮೆಟ್ರೊ ರೈಲು, ಮಾಲ್‍ಗಳು, ಹೋಟೆಲ್‍ಗಳು, ಧಾರ್ಮಿಕ ಸ್ಥಳಗಳು ಮುಂತಾದ ಬೃಹತ್ ಪ್ರಮಾಣದ ಸಭೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪುನರಾರಂಭಿಸಲು ಕೆಲವು ನಿಬರ್ಂಧಗಳೊಂದಿಗೆ ಅನುಮತಿ ನೀಡಲಾಗಿದೆ.

Read More

ಸ್ನೇಹಿತೆ ಜತೆ ಕೊಲ್ಲೂರಲ್ಲಿ ಸರಳ ವಿವಾಹ ಕೊಲ್ಲೂರು: ಕನ್ನಡ ಚಿತ್ರರಂಗದಲ್ಲಿ ಮಲೆನಾಡಿನ ಹಳ್ಳಿಯೊಂದರಿಂದ ಹೋಗಿ ಉತ್ತಮ ಭರವಸೆ ಮೂಡಿಸುತ್ತಿರುವ ನಟ ಗೌರಿ ಶಂಕರ್ ತಮ್ಮ ಗೆಳಿತಿ ಅರುಣಾ ಜತೆ ಕೊಲ್ಲೂರು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ರಾಜಹಂಸ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ನಟರಾಗಿ ಪರಿಚಯವಾದ ಗೌರಿ ಶಂಕರ್ ತಮ್ಮ ಬಹು ಕಾಲದ ಗೆಳತಿ ಅರುಣಾ ಅವರನ್ನು ಗುರುವಾರ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಬಾಳಾ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಸದ್ಯದ ವಾತಾವರಣಕ್ಕೆ ಪೂರಕವಾಗಿ ಸರಳ ಮತ್ತು ಶಾಸ್ತ್ರೋಕ್ತವಾಗಿ ಮದುವೆ ಕಾರ್ಯಕ್ರಮ ನಡೆದಿದೆ. ವಿವಾಹ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬದ ಸದಸ್ಯರು, ಆತ್ಮೀಯರು ಪಾಲ್ಗೊಂಡಿದ್ದರು. ಕೋಣಂದೂರು ಬಳಿಯ ಶಂಕರಹಳ್ಳಿಯ ರಾಜಶೇಖರ್ ಅವರ ಪುತ್ರ ಗೌರಿ ಶಂಕರ್ ನಟನೆ, ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ನಮ್ಮೂರ್ ಎಕ್ಸ್‍ಪ್ರೆಸ್ ತಂಡ ದಂಪತಿಗಳಿಗೆ ಶುಭ ಕೋರುತ್ತದೆ.

Read More

ಫೋಟೋ ಗ್ರಫಿ, ವಿಡಿಯೋಗ್ರಫಿ ಉಚಿತ ತರಬೇತಿಯ ಮಣಿಪಾಲ: ಉದ್ಯೋಗ ಇಲ್ಲದೆ ಕುಳಿತವರಿಗೆ ಸಿಹಿ ಸುದ್ದಿ. ಬದುಕಲು ದುಡಿಮೆಗೆ ಒಂದು ಕಲೆ ಬೇಕು. ಕೌಶಲ್ಯವೂ ಬೇಕು. ಈ ಹಿನ್ನೆಲೆ ಸ್ವ ಉದ್ಯೋಗದ ಕನಸು ನನಸು ಮಾಡಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI) ಮಣಿಪಾಲ ಇವರು ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ 09 ನವೆಂಬರ್-2020ರಿಂದ 30 ದಿನಗಳ ಫೋಟೋ ಗ್ರಫಿ ಹಾಗೂ ವಿಡಿಯೋಗ್ರಫಿ ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ 18 ರಿಂದ 45 ರೊಳಗಿನ ವಯೋಮಾನದ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ಸಂಬಂಧಿಸಿದ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ,…

Read More