ಕರೋನಾ ನಡುವೆ ಸರಳ ಆಚರಣೆಗೆ ಸಿದ್ಧತೆ ನವ ದೆಹಲಿ: ದೇಶದೆಲ್ಲೆಡೆ ಶುಕ್ರವಾರ ಈದ್ ಮಿಲಾದ್ ಸಂಭ್ರಮವನ್ನು ಮುಸ್ಲಿಂ ಸಮುದಾಯದವರು ಆಚರಿಸಲಿದ್ದಾರೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಎಂದು ಸೂಫಿ ಅಥವಾ ಬರೇಲ್ವಿ ಚಿಂತನೆಯ ಮುಸ್ಲಿಂ ಅನುಯಾಯಿಗಳು ಈದ್ ಮಿಲಾದ್-ಅನ್-ನಬಿ ಅಥವಾ ಈದ್-ಎ-ಮಿಲಾದ್ ಎಂದು ಆಚರಿಸುತ್ತಾರೆ. ಈದ್ ಮಿಲಾದ್-ಅನ್-ನಬಿಯನ್ನು ಅರೇಬಿಕ್ ಆಡು ಭಾಷೆಯಲ್ಲಿ ನಬಿದ್ ಮತ್ತು ಮಾವ್ಲಿದ್ ಎಂದೂ ಕರೆಯುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೂರನೇ ತಿಂಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಪ್ರವಾದಿ ಮುಹಮ್ಮದ್ ಅವರ ಅನುಯಾಯಿಗಳು ಒಟ್ಟಾಗಿ ಆಚರಿಸುತ್ತಾರೆ. ಸಾರ್ವಜನಿಕ ಮಸೀದಿಗಳಲ್ಲಿ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಶುಭ ದಿನದಂದು ತಮ್ಮ ಪ್ರೀತಿ ಪಾತ್ರರಿಂದ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ. ಈಗಾಗಲೇ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಈದ್-ಎ ಮಿಲಾದ್ ದಿನ, ಜನರು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ಅಥವಾ ದರ್ಗಾದಲ್ಲಿ ಒಟ್ಟುಗೂಡುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಪ್ರೀತಿ ಪಾತ್ರರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ…
Author: Nammur Express Admin
ಇನ್ನು 30 ವರ್ಷದ ಬಳಿಕ ಚಂದ್ರ ಹೀಗೆ ಕಾಣ್ತಾನೆ ಚಂದ್ರ ನವ ದೆಹಲಿ: ಚಂದ್ರನ ಅಪರೂಪದ ದರ್ಶನ (ಬ್ಲೂ ಮೂನ್) ಅ.31ರಂದು ಆಗಲಿದೆ. ಬ್ಲೂ ಮೂನ್ ಅಂದ್ರೆ ಚಂದ್ರ ನೀಲಿ ಬಣ್ಣದಲ್ಲಿ ಕಾಣಿಸುತ್ತಾನೆ ಅಂತಲ್ಲ. ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರ ಎರಡನೇ ಹುಣ್ಣಿಮೆಯಂದು ಕಾಣಿಸುವುದಕ್ಕೆ ಬ್ಲೂ ಮೂನ್ ಎನ್ನುತ್ತಾರೆ. ಅ.1ರಂದು ಕಾಣಿಸಿದ್ದ ಹುಣ್ಣಿಮೆ ಚಂದ್ರ ಈಗ ಅ.31ರಂದು ಕಾಣಿಸಿಕೊಳ್ಳುತ್ತಿದೆ. 2007ರ ಜೂನ್ ತಿಂಗಳಲ್ಲಿ ಈ ರೀತಿಯ ಬ್ಲೂ ಮೂನ್ ಕಾಣಿಸಿಕೊಂಡಿತ್ತು, ಮುಂದಿನ ಬ್ಲೂಮೂನ್ 2050ರ ಸೆ.30 ರಂದು ಕಾಣಸಿಗುತ್ತದೆ. 2018 ರಲ್ಲಿ ಎರಡು ಬ್ಲೂ ಮೂನ್ ಗಳು ಕಾಣಿಸಿಕೊಂಡಿತ್ತು, ಜ.31 ರಂದು ಹಾಗೂ ಮಾ.31 ರಂದು ಬ್ಲೂ ಮೂನ್ ಕಾಣಿಸಿಕೊಂಡಿತ್ತು.
ನಿರೀಕ್ಷಿತ ನಷ್ಟಕ್ಕಿಂತ ಕಡಿಮೆ ನಷ್ಟ: ಕಂಪನಿ ಮಾಹಿತಿ ನವದೆಹಲಿ: ಕರೋನಾ ಸಂಕಷ್ಟದಿಂದ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾಗೆ(ಎಂಎಸ್ ಐ) ಈವರೆಗೆ 249 ಕೋಟಿ ರೂಪಾಯಿ ನಷ್ಟವಾಗಿದೆ.ಕಂಪನಿ ತ್ರೈಮಾಸಿಕ ವರದಿಯ ಪ್ರಕಟಿಸಿದ್ದು, 2020ರ ಮಾರ್ಚ್‍ನಿಂದ ಜೂನ್‍ವರೆಗೆ ಮಾರುತಿ ಸುಜುಕಿ ಕಂಪನಿಗೆ 249.ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಪೇಟೆ ವಿಶ್ಲೇಷಕರು 445 ಕೋಟಿ ರೂಪಾಯಿ ನಷ್ಟ ಎದುರಾಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಅದಕ್ಕಿಂತ ಕಡಿಮೆ ನಷ್ಟವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1,435.5 ಕೋಟಿ ಲಾಭ ಬಂದಿತ್ತು. ಏಪ್ರಿಲ್‍ನಿಂದ ಜೂನ್ ತ್ರೈಮಾಸಿಕದಲ್ಲಿ 76,599 ವಾಹನವನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 4,02,000 ವಾಹನ ಮಾರಾಟ ಆಗಿತ್ತು. ಮಾರುತಿ ಸುಜುಕಿ ಇಂಡಿಯಾ ಷೇರಿನ ಬೆಲೆಯು ಬುಧವಾರ 90.80 ರುಪಾಯಿ ಇಳಿಕೆಯಾಗಿದೆ. ಒಟ್ಟಿನಲ್ಲಿ ಕರೋನಾ ಕಾರಣ ಎಲ್ಲಾ ಕಂಪನಿಗಳು ನಷ್ಟದ ಹಾದಿ ಹಿಡಿದಿವೆ.
ಸರ್ಕಾರಗಳ ವರ್ಗಾವಣೆ ರಾಜಕೀಯಕ್ಕೆ ಮುನಿಸು?ಐಪಿಎಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ರಾಜೀನಾಮೆ ಪರ್ವ ಶುರುವಾಗಿದೆ. ಸರ್ಕಾರಗಳ ವರ್ಗಾವಣೆ ರಾಜಕೀಯಕ್ಕೆ ಮುನಿಸುಗೊಂಡ ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೊನ್ನೆ ತಾನೇ ಹಂಪಿ ಡಿವೈಎಸ್‍ಪಿ ಕಾಶೀಗೌಡ ರಾಜೀನಾಮೆ ನೀಡಿ ಸುದ್ದಿಯಾಗಿದ್ದರು. ಕಿರಿಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬುಧವಾರ ಬಡ್ತಿ ನೀಡಿದ ಹಿನ್ನೆಲೆಯಲ್ಲಿ ತೀವ್ರ ನೊಂದ ಅವರು ತಡರಾತ್ರಿ ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಡಿಜಿ ಭೇಟಿಯಾಗಲು ಅವಕಾಶ ದೊರಕದೇ ಇರುವುದರಿಂದ ಕಂಟ್ರೋಲ್ ರೂಂಗೆ ತೆರಳಿ ಅವರು ತ್ಯಾಗ ಪತ್ರ ಸಲ್ಲಿಸಿದ್ದಾರೆ.ಅಮರ್ ಕುಮಾರ್ ಪಾಂಡೆ ಅವರನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಪೆÇಲೀಸ್ ತರಬೇತಿ ವಿಭಾಗಕ್ಕೂ, ಟಿ.ಸುನೀಲ್ ಕುಮಾರ್ ಅವರನ್ನು ಎಸಿಬಿ ಎಡಿಜಿಪಿಯಿಂದ ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿಯೂ, ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ಎಡಿಜಿಪಿ ಪೆÇಲೀಸ್ ಸಂಪರ್ಕ ಸಂವಹನ ಹಾಗೂ ಅಧುನೀಕರಣ…
ಅನ್‍ಲಾಕ್ 5.0 ಮಾರ್ಗಸೂಚಿ ಬಳಿಕವೂ ಸರ್ಕಾರದ ಸ್ಪಷ್ಟನೆ ಬೆಂಗಳೂರು: ಕರೋನಾ ಅನ್‍ಲಾಕ್ 5.0 ಮಾರ್ಗಸೂಚಿ ನ.30ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ನಡುವೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಲಿವೆಯೇ ಎಂಬ ಬಗ್ಗೆ ಈಗ ಗೊಂದಲ ಮೂಡಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರಕ್ಕೆ ಬದ್ಧ ಎಂದಿದೆ. ಕರೋನಾ ಪರಿಸ್ಥಿತಿ ನೋಡಿಕೊಂಡು ಮತ್ತು ಶಿಷ್ಟಾಚಾರ ಪಾಲನೆ ಮಾಡಿಕೊಂಡು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಅದರಂತೆ ಕರ್ನಾಟಕ ಸರ್ಕಾರ ಪದವಿ ಕಾಲೇಜುಗಳನ್ನು ನವೆಂಬರ್ 17ರಂದು ತೆರೆಯಲಿದೆ ಎಂದು ಉನ್ನತ ಶಿಕ್ಷಣ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕಾಲೇಜುಗಳಲ್ಲಿ ಸಿದ್ಧತೆ ನಡೆದಿದೆ. ಹಾಸ್ಟೆಲ್ ನಿರ್ವಹಿಸುವುದು ಕಷ್ಟ. ವಿದ್ಯಾರ್ಥಿಗಳನ್ನು ಹೇಗೆ ಇರಿಸಿಕೊಳ್ಳುವುದು ಎಂಬ ಗೊಂದಲ ಇದೆ. ಇಲಾಖೆ ಆನ್‍ಲೈನ್ ಮತ್ತು ಆಫ್‍ಲೈನ್ ಎರಡೂ ವಿಧಗಳಲ್ಲಿ ತರಗತಿಗಳನ್ನು ನಡೆಸಲಿದೆ. ಹಾಸ್ಟೆಲ್‍ಗಳಲ್ಲಿ ಎಷ್ಟು ಮಂದಿ ದಾಖಲಾಗುತ್ತಾರೆ ಎಂದು ನೋಡಿಕೊಂಡು ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಬಸ್ಸು…
ಮಲ್ಲಿಕಾರ್ಜುನ ದೇವಸ್ಥಾನದ ಜಲಪಾತದಲ್ಲಿ ಘಟನೆದಕ್ಷಿಣ ಕನ್ನಡದ ಸುಳ್ಯ ಸಮೀಪದ ದೇವರ ಗುಂಡಿ ಮಂಗಳೂರು: ದೇವಸ್ಥಾನಕ್ಕೆ ಸೇರಿದ ದೇವರ ಗುಂಡಿ ಜಲಪಾತದ ಬಳಿ ರೂಪದರ್ಶಿಗಳು ಅರೆಬೆತ್ತಲೆ ಫೋಟೋ ಶೂಟ್ ನಡೆಸಿದ್ದು, ಇದೀಗ ಹಾಟ್ ಹಾಟ್ ಸುದ್ದಿಯಾಗಿದೆ. ಜೊತೆಗೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ತೋಡಿಕಾನ ಗ್ರಾಮದ ದೇವರಗುಂಡಿ ಜಲಪಾತದಲ್ಲಿ ಬೆಂಗಳೂರು ಮೂಲದ ಇಬ್ಬರು ರೂಪದರ್ಶಿಗಳು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೇವರಗುಂಡಿ ಜಲಪಾತವು ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದೆ. ಈ ಜಲಪಾತಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ಶಿವನು ಇಲ್ಲಿಗೆ ಸ್ನಾನಕ್ಕೆ ಬರುತ್ತಿದ್ದ ಎಂಬ ಇತಿಹಾಸವಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಸ್ಥಳೀಯರು ದೂರು ನೀಡಿದ್ದಾರೆ. ಆದರೆ ತಾವು ಇದಕ್ಕೆ ಅನುಮತಿ ನೀಡಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ವಿತ್ತ ಸಚಿವೆ 5 ರೂ. ಹರಾಜು… ಜೋಶಿ ಬಿಕರಿಯಾಗದೇ ಉಳಿದರು.. ಹುಬ್ಬಳ್ಳಿ: ಲೋಕಸಭಾ ಸದಸ್ಯ ಒಂದು ರೂ.ಗೆ ಹರಾಜಾದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಮತ್ತಿತರ ಲೋಕಸಭಾ ಸದಸ್ಯರು ಬಿಕರಿಯಾಗದೇ ಉಳಿದರು…ಇದೇನಿದು ತಮಾಸೆ ಎಂದು ಹುಬ್ಬೇರಿಸಬೇಡಿ. ಈ ಹರಾಜು ಪ್ರಕ್ರಿಯೆ ನಡೆದಿದ್ದು ವಾಣಿಜ್ಯನಗರಿ ಹೃದಯ ಭಾಗವಾಗಿರುವ ಕಿತ್ತೂರ ಚೆನ್ನಮ್ಮ ಸರ್ಕಲ್‍ನಲ್ಲಿ. ಹರಾಜು ಪ್ರಕ್ರಿಯೆ ನಡೆಸಿಕೊಟ್ಟವರು ವಾಟಾಳ್ ನಾಗರಾಜ್.ಹೌದು, ಕರ್ನಾಟಕದಿಂದ ಆಯ್ಕೆಗೊಂಡ ಲೋಕಸಭಾ ಸದಸ್ಯರಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವ ಮೂಲಕ ವಾಟಾಳ್ ನಾಗರಾಜ್ ನಡೆಸಿದ ವಿನೂತನ ಪ್ರತಿಭಟನೆಯಿದು.ಉತ್ತರ ಕರ್ನಾಟಕ ಪ್ರವಾಹ, ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಉತ್ತರ ಕರ್ನಾಟಕ ಹಾಗೂ ಸಮಸ್ತ ಕರ್ನಾಟಕವನ್ನು ಲೋಕಸಭಾ ಸದಸ್ಯರು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕದಿಂದ ಆಯ್ಕೆಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮರನ್ನು ಒಂದು ರೂಪಾಯಿಗೆ ಹರಾಜು ಪ್ರಕ್ರಿಯೆ ಆರಂಭಿಸಿದ ವಾಟಾಳ್, ಐದು ರೂಪಾಯಿಗೆ ಎನ್.ಎಚ್. ಪಾಟೀಲ್ ಖರೀದಿಸಿದರು. ಒಂದು ರೂಪಾಯಿಗೆ ಕರಡಿ ಸಂಗಣ್ಣರನ್ನು ಬಾಲಕನೊಬ್ಬ ಖರೀದಿಸಿದ.…
ಕೊಪ್ಪಳದ ಕುಷ್ಟಗಿಯಲ್ಲಿ ಮನ ನೊಂದು ಸಾವುಡೆತ್‍ನೋಟ್ ಪತ್ತೆ: ಅಂತ್ಯ ಕಂಡ ಗಂಗಾ ಬದುಕು ಕೊಪ್ಪಳ: ಖ್ಯಾತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಕೆ. ಕಲ್ಯಾಣ ದಂಪತಿಗಳಲ್ಲಿ ವಿರಸಕ್ಕೆ ಕಾರಣವಾಗಿದ್ದ ಗಂಗಾ ಎಂಬ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸುವುದಾಗಿ ಸಂತೋಷ ಕುಲಕರ್ಣಿ ಎಂಬುವರಿಂದ 3 ಲಕ್ಷ ರೂ. ಪಡೆದಿದ್ದ ಗಂಗಾ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣೆಗಾಗಿ ಗುರುವಾರ ಗಂಗಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ನ್ಯಾಯಾಲಯದ ಆವರಣದಲ್ಲೇ ಗಂಗಾ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾದರೂ, ಉಪಚಾರ ಫಲಿಸದೇ ಸಾವನ್ನಪ್ಪಿದ್ದಾರೆ. ಆಪ್ತೆಯಾಗಿದ್ದಳು…: ಮೂಲತಃ ಬಾಗಲಕೋಟ ಜಿಲ್ಲೆಯ ಗಂಗಾ ಕುಲಕರ್ಣಿ ಉರ್ಫ್ ಜ್ಯೋತಿ, ಗೀತರಚನೆಕಾರ ಕೆ.ಕಲ್ಯಾಣ ಕುಟುಂಬದ ಆಪ್ತೆಯಾಗಿದ್ದಳು. ಅಲ್ಲದೇ, ಅವರ ಕುಟುಂಬವನ್ನು ಬೇರ್ಪಡಿಸಿದ ಆರೋಪ ಕೂಡ ಈಕೆಯ ಮೇಲಿತ್ತು. ಮೂಲತಃ ಬಾಗಲಕೋಟ ಜಿಲ್ಲೆಯವಳಾಗಿದ್ದ ಗಂಗಾ, ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದ…
ಕುಡಿತದ ಚಟ, ಕರೋನಾ ಎಫೆಕ್ಸ್: ನೇಣಿಗೆ ಶರಣು ಬೆಳಗಾವಿ: ಹಬ್ಬ ಆಚರಿಸಲು ಹಣ ನೀಡುವಂತೆ ಕೇಳಿದ ಪತ್ನಿಯ ಮಾತಿನಿಂದ ಬೇಸತ್ತ ಪತಿ ಮಹಾಶಯನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದಲ್ಲಿ ನಡೆದಿದೆ. ಶಹಾಪೂರದ ಹೊಸೂರಿನ ಬಸವನಗಲ್ಲಿ ನಿವಾಸಿ ರಾಹುಲ್ ಸಹದೇವ ಸೈನೂಚೆ (30) ಎಂಬುವನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚಿಗೆ ಕೆಲದಿನಗಳ ಮದ್ಯದ ಸೇವನೆ ಅಭ್ಯಾಸ ಮಾಡಿಕೊಂಡಿದ್ದ ರಾಹುಲ್, ಸಂಪಾದಿಸಿದ ಹಣವನ್ನೆಲ್ಲ ಮದ್ಯ ಸೇವನೆಯಲ್ಲಿ ಕಳೆದುಕೊಳ್ಳುತ್ತಿದ್ದ. ದಸರಾ ಹಬ್ಬ ಆಚರಣೆಗೆ ಹಣ ಬೇಕು. ಮದ್ಯ ಸೇವನೆ ಬಿಟ್ಟುಬಿಡು ಎಂದು ಪತ್ನಿ ಒತ್ತಾಯಿಸಿದ್ದರಿಂದ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ.ಇದರಿಂದ ಬೇಸತ್ತ ಪತಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಂತೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿ ಹಚ್ಚಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಉತ್ತರ ಕರ್ನಾಟಕದವ್ರೆ ಸಿಎಂ ಆಗಲು ಪ್ಲಾನ್? ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗುತ್ತಿದ್ದಂತೆಯೇ ಮತ್ತೊಂದೆಡೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಂಗಳವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆದ ರಾಜ್ಯ ನಾಯಕರುಗಳ ರಹಸ್ಯ ಸಭೆಯಲ್ಲಿ ನಡೆದ ಕಾವೇರಿದ ಚರ್ಚೆಯಲ್ಲಿಬೆಳಗಾವಿಯ ರಾಜಕಾರಣ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪನವರ ಬದಲಾವಣೆ ಕುರಿತಂತೆ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆದಿದ್ದು ಗಟ್ಟಾಗಿ ಏನೂ ಉಳಿದಿಲ್ಲ. ಮುಂದಿನ ಸಿಎಂ ಉತ್ತರ ಕರ್ನಾಟಕದವರೇ ಆಗಬೇಕೆಂಬ ದನಿಗೆ ನಗರದಲ್ಲಿ ನಡೆದ ರಹಸ್ಯ ಸಭೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಡಿಸಿಪಿ ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಾಲಚಂದ್ರ ಜಾರಕಿಹೋಳಿ, ಉಮೇಶ…