ಬಿಜೆಪಿಗೆ ಜಂಪ್ ವದಂತಿಗೆ ತೆರೆ ಎಳೆದ ಕುಲಕರ್ಣಿಮತ್ತೆ ಆಹ್ವಾನ ನೀಡಿದ ರಮೇಶ ಜಾರಕಿಹೊಳಿ! ಬೆಳಗಾವಿ: “ಬಿಜೆಪಿ ಸೇರಲು ತಮಗೆ ಆಹ್ವಾನ ಬಂದಿದ್ದು ನಿಜ. ಆದರೆ, ಅದನ್ನು ನಾನು ನಯವಾಗಿ ತೀರಸ್ಕರಿಸಿದ್ದೇನೆ” ಎಂದು ಹೇಳುವ ಮೂಲಕ ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹರಡುತ್ತಿರುವ ವದಂತಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ವಿರಾಮ ಹಾಕಿದರು. ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ವಿನಯ ಕುಲಕರ್ಣಿಯರಿಗೆ ವೇದಿಕೆ ಹಂಚಿಕೊಂಡಿದ್ದ ರಮೇಶ ಜಾರಕಿಹೊಳಿ, ಬಿಜೆಪಿಗೆ ಬರುತ್ತೀಯಲ್ಲ ಎಂದು ಆಹ್ವಾನ ನೀಡಿದ ಪ್ರಸಂಗ ನಡೆಯಿತು. ಇದೇ ಸಮಯದಲ್ಲಿ ಕುಲಕರ್ಣಿ, ಸಚಿವ ಜಾರಕಿಹೊಳಿ ಅವರಿಗೆ ಕೈ ಮುಗಿದು ಕುಳಿತುಕೊಂಡರು. ನಂತರ ಮಾತನಾಡಿದ ವಿನಯ ಕುಲಕರ್ಣಿ, ತಾವು ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚೆ ನಡೆಸಿಲ್ಲ. ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಆದರೆ, ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬ ಚರ್ಚೆ ನಡೆಯುತ್ತಿದೆ. ರಮೇಶ ಜಾರಕಿಹೊಳಿ ನನಗೆ ಬಿಜೆಪಿಗೆ ಬರುವಂತೆ ಹೇಳಿದರು. ಆದರೆ, ಎಲ್ಲರ…
Author: Nammur Express Admin
ದಕ್ಷಿಣ ಕನ್ನಡ, ಉಡುಪಿಯಲ್ಲಿ ಎಷ್ಟು ಕೇಸ್? ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಗಿಳಿದಿದೆ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 99 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 66 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ದಕ ಜಿಲ್ಲೆಯಲ್ಲಿ ಬುಧವಾರದಂದು 99 ಮಂದಿಯಲ್ಲಿ ಸೋಂಕು ಕಾಣಿಸಿದ್ದು, ಬುಧವಾರ ಮತ್ತೆ 161 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-251859 ಮಂದಿ, ಜಿಲ್ಲೆಯಲ್ಲಿ ಪತ್ತೆಯಾದ ನೆಗೆಟಿವ್ ಪ್ರಕರಣಗಳು-221945, ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-29914, ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು-27019, ಬುಧವಾರದಂದು ಸೋಂಕಿಗೆ ಬಲಿಯಾದವರು 3 ಮಂದಿ, ಜಿಲ್ಲೆಯಲ್ಲಿ ಒಟ್ಟು ಸೋಂಕಿಗೆ ಬಲಿಯಾದವರು-671 ಮಂದಿ, ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು-2224 ಮಂದಿ ಎಂಬ ಅಂಕಿಅಂಶ ಲಭ್ಯವಾಗಿದೆ.ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಬುಧವಾರದಂದು 66 ಮಂದಿಯಲ್ಲಿ ಪಾಸಿಟಿವ್ ಕಂಡಿದೆ. 125 ಮಂದಿ ಬುಧವಾರ ಗುಣಮುಖರಾಗಿದ್ದಾರೆ. ಒಟ್ಟು 20630 ಮಂದಿ ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು 181 ಮಂದಿ. 921…
ಉಡುಪಿಯ ರಕ್ಷಿತಾ ಆತ್ಮಹತ್ಯೆ ಪ್ರಕರಣದ ರೋಚಕ ಕಥೆ ಉಡುಪಿ: ಓದುವ ವಯಸ್ಸಲ್ಲಿ ಮನೆ ಬಿಟ್ಟು ಫ್ಯಾಷನ್, ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿದ್ದ ಕುಕ್ಕೆಹಳ್ಳಿ ರಕ್ಷಿತಾ ನಾಯಕ್ ಸಂಶಯಾಸ್ಪದ ಸಾವಿಗೆ ವಿವಾಹಿತ ಪ್ರಿಯಕರ ಪ್ರಶಾಂತ್ ಕುಂದರ್ ತನ್ನ ಪತ್ನಿಯನ್ನು ತೊರೆದು ತನ್ನ ಜತೆ ವಾಸ ಮಾಡಿಲ್ಲ ಎಂಬುದೇ ಕಾರಣ ಎಂದು ಹೇಳಲಾಗಿದೆ. ತೀವ್ರ ಅಸ್ವಸ್ಥಳಾಗಿದ್ದ ರಕ್ಷಿತಾಳನ್ನು ಆಸ್ಪತ್ರೆ ಸೇರಿಸಿ ಪರಾರಿಯಾಗಿದ್ದ ಪ್ರಶಾಂತ್‍ನನ್ನು ವಶಕ್ಕೆ ಪಡೆದ ಉಡುಪಿ ಪೆÇಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಇದೀಗ ಹದಿ ಹರೆಯದ ಜೀವನದ ಮೋಜಿಗೆ ಪಾಲಕರು ಪಶ್ಚಾತಾಪ ಪಡುವಂತಾಗಿದೆ. ಏನಿದು ಘಟನೆ?: ಶನಿವಾರ ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಅಂಬಾಗಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಮುನ್ನ, ಪ್ರಿಯಕರ ಪ್ರಶಾಂತ್ ಕುಂದರ್‍ಗೆ ಫೆÇೀನ್ ಮಾಡಿ, ತನ್ನ ಜತೆ ಸಂಸಾರ ಮಾಡಬೇಕು, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಸಂಭಾಷಣೆ ಕಡಿತಗೊಳಿಸಿದ್ದಳು. ಪ್ರಶಾಂತ್ ಆಕೆಯಿದ್ದ ಬಾಡಿಗೆ ಮನೆಗೆ ದೌಡಾಯಿಸಿದ್ದು, ಅಷ್ಟರಲ್ಲಿ ಆಕೆ ನೇಣು…
ಕಿರಿಕ್ ಪಾರ್ಟಿ ಹುಡುಗಿಗೆ ಭಾರೀ ಡಿಮ್ಯಾಂಡ್ ಹೈದರಾಬಾದ್: ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದ ಕೊಡಗಿನ ನಟಿ ರಷ್ಮಿಕಾ ಮಂದಣ್ಣ ಇದೀಗ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಭಾರಿ ಸಂಭಾವನೆಗಾಗಿ ಮತ್ತೆ ಸುದ್ದಿಯಾಗಿದ್ದಾರೆ. ಅಂದಾಜು ಪ್ರಕಾರ ಒಂದು ಸಿನಿಮಾಗೆ ರಷ್ಮಿಕಾ 1 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಹೊಸ ಸಿನಿಮಾ ಆಡಲ್ಲು ಮೀಕು ಜೋಹರ್ಲು ಚಿತ್ತ್ರಕ್ಕೆ ರಶ್ಮಿಕಾ ಮಂದಣ್ಣ ಸಹಿ ಮಾಡಿದ್ದು, ಚಿತ್ರ ಅಧಿಕೃತವಾಗಿ ತಿರುಮಲದಲ್ಲಿ ಮುಹೂರ್ತ ಮುಗಿಸಿ ಸೆಟ್ಟೇರಿದೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ರಶ್ಮಿಕಾಗೆ ಒಂದು ಕೋಟಿಗೂ ಅಧಿಕ ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ತೆಲುಗು ನಟ ಶಾರ್ವಾನಂದ್ ನಾಯಕರಾಗಿರುವ ಈ ಚಿತ್ರಕ್ಕೆ ಮೊದಲು ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದರು. ಸಾಯಿ ಪಲ್ಲವಿ ಸಿನಿಮಾದಿಂದ ಹೊರನಡೆದಿದ್ದಾರೆ. ಪಲ್ಲವಿ ಜಾಗಕ್ಕೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಬಹುನಿರೀಕ್ಷೆಯ…
ಕನ್ನಡದಿಂದ ತೆಲುಗಿಗೆ ಜಿಗಿದ ರಚಿತಾ ರಾಮ್ ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಈಗ 10ಕ್ಕೂ ಹೆಚ್ಚು ಚಿತ್ರಗಳಿವೆ. ಬಹುತೇಕ ಸ್ಟಾರ್ ನಟಿಯಾಗಿರುವ ಡಿಂಪಿ ಈಗ ಪಕ್ಕದ ತೆಲುಗಿಗೂ ಜಿಗಿದಿದ್ದಾರೆ. ಇತ್ತ ಕನ್ನಡದಲ್ಲಿ ಕೂಡ ಬ್ಯುಸಿಯಿದ್ದಾರೆ. ಈ ನಡುವೆ ಮತ್ತೊಂದು ಹೊಸ ಸಿನಿಮಾ ಪಂಕಜ ಕಸ್ತೂರಿಗೆ ಸಹಿ ಮಾಡಿದ್ದಾರೆ. ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ರಚಿತಾ ರಾಮ್ ಈ ಮೊದಲು ರಿಷಭಪ್ರಿಯ ಎನ್ನುವ ಕಿರುಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇನ್ನು ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “100” ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಈಗಾಗಲೇ ಸೆನ್ಸಾರ್ ಸಹ ಮುಗಿಸಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 15ರ ಬಳಿಕ ಸಿನಿಮಾ ತೆರೆಕಾಣಬಹುದು. ತೆಲುಗಿನಲ್ಲೂ ಕಲ್ಯಾಣ್ ದೇವ್ ನಟನೆಯ ‘ಸೂಪರ್ ಮಚ್ಚಿ’ ಚಿತ್ರದಲ್ಲಿ ರಚ್ಚು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಲಿ ವಾಸು ಈ ಚಿತ್ರ ನಿರ್ದೇಶಿಸಿದ್ದು, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ವಿಜಯ್ ಎಸ್ ಗೌಡ ನಿರ್ದೇಶನ…
ಮಲೆನಾಡು, ಕರಾವಳಿ, ಉ.ಕರ್ನಾಟಕದಲ್ಲಿ ಮಳೆ ಬೆಂಗಳೂರು: ಕರ್ನಾಟಕದ ವಿವಿಧೆಡೆ ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು,ಕೊಡಗು, ಶಿವಮೊಗ್ಗದಲ್ಲಿ ಅಕ್ಟೋಬರ್ 31ರಂದು ಮಳೆಯಾಗಲಿದೆ. ರಾಜ್ಯದಲ್ಲಿ ತಿಂಗಳಾಂತ್ಯಕ್ಕೆ ಮತ್ತೆ ಮಳೆ ಮರಳಲಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ತಮಿಳುನಾಡು ಹಾಗೂ ಕೇರಳದತ್ತ ಸಾಗಲಿದೆ. ಇದರಿಂದಾಗಿ ಈ ಎರಡೂ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಹಾಗೂ ಶನಿವಾರ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ,ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಮಳೆಯಾಗಲಿದೆ ಅ.30ರಿಂದ ನಿರೀಕ್ಷಿಸಲಾಗಿರುವ ಮಳೆಯು ಕರಾವಳಿ ಹಾಗೂ ಮಲೆನಾಡು ಒಳಗೊಂಡಿರುವ ದಕ್ಷಿಣ ಒಳನಾಡಿಗೆ ಸೀಮಿತವಾಗಲಿದೆ. ಆದರೆ, ಹಿಂದಿನಷ್ಟು ಬಿರುಸು ಮಳೆ ಬಾರದಿದ್ದರೂ, ಸಾಧಾರಣ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ ಕಾಟ ಇರದು. ಆ ಜಿಲ್ಲೆಗಳ ಸೀಮಿತ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಮಳೆ…
ಬ್ಯಾಂಕ್‍ಗಳಿಗೆ ಯಾವಾಗ ರಜೆ..ದೀಪಾವಳಿಯಲ್ಲಿ ಸತತ 3ದಿನ ರಜೆ ನವ ದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ರಜೆ ಇದ್ದಿದ್ದರಿಂದ 21 ದಿನ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಿದ್ದು, 10 ದಿನಗಳಿಗೂ ಅಧಿಕ ರಜೆ ಸಿಕ್ಕಿತ್ತು. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ, ದೀಪಾವಳಿ ಹಬ್ಬ,ಗುರು ನಾನಕ್ ಜಯಂತಿ ರಜೆ ಇದೆ. ಸಾರ್ವತ್ರಿಕ ರಜಾ ದಿನ, ನಿಬರ್ಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ. 2020ನೇ ಸಾಲಿನ ನವೆಂಬರ್ ತಿಂಗಳ ರಜೆ ಪಟ್ಟಿ ನವೆಂಬರ್ 1: ಭಾನುವಾರ (ಕನ್ನಡ ರಾಜ್ಯೋತ್ಸವ) ನವೆಂಬರ್ 8: ಭಾನುವಾರ ನವೆಂಬರ್ 14: ಎರಡನೇ ಶನಿವಾರ/ ದೀಪಾವಳಿ ನವೆಂಬರ್ 15: ಭಾನುವಾರ ನವೆಂಬರ್ 16: ಬಲಿಪಾಡ್ಯಮಿ/ ದೀಪಾವಳಿ ನವೆಂಬರ್ 22: ಭಾನುವಾರ ನವೆಂಬರ್ 28: ನಾಲ್ಕನೇ ಶನಿವಾರ ನವೆಂಬರ್ 29: ಭಾನುವಾರ ನವೆಂಬರ್ 30: ಗುರು ನಾನಕ್ ಜಯಂತಿ
ಆಧಾರ್ ಆಧಾರಿತ ಬಯೋಮೆಟ್ರಿಕ್ ಪದ್ಧತಿಆರೋಗ್ಯ ಇಲಾಖೆಯಲ್ಲಿ ನ.1ರಿಂದ ಕಡ್ಡಾಯ ಬೆಂಗಳೂರು: ಸರ್ಕಾರದ ನೌಕರರು ಕೆಲಸ ಮಾಡುವುದೇ ಕಡಿಮೆ ಎಂಬ ಆರೋಪ ಎಲ್ಲಾ ಕಡೆ ಕೇಳಿ ಬರುತ್ತಿದೆ. ಈ ನಡುವೆ ನ.1ರಿಂದ ಆರೋಗ್ಯ ಇಲಾಖೆಯ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.ಕರೋನಾ ವೈರಸ್ ಹಿನ್ನೆಲೆಯಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಇಲ್ಲಿಯವರೆಗೆ ಸ್ಥಗಿತಗೊಳಿಸಲಾಗಿತ್ತು. ಸಮಯ ಪಾಲನೆಯ ದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎನ್‍ಹೆಚ್‍ಎಂ, ನಿರ್ದೇಶನಾಲಯ ಸೇರಿದಂತೆ ಎಲ್ಲಾ ಕಚೇರಿ, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ತರಬೇತಿ ಕೇಂದ್ರಗಳಲ್ಲಿ ನ.1ರಿಂದ ಕಡ್ಡಾಯವಾಗಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ನಮೂದಿಸಲು ಆರೋಗ್ಯ ಇಲಾಖೆಯ ನೌಕರರಿಗೆ ತಿಳಿಸಿದೆ.
ಮಂಡ್ಯ ಜಿಲ್ಲೆಯ ಲಿಂಗಪಟ್ಟಣದಲ್ಲಿ ಘಟನೆ ಮಳವಳ್ಳಿ: ಚಾಮರಾಜ ನಗರದ ದೇವಾಲಯವೊಂದರಲ್ಲಿ ಪ್ರಸಾದ ತಿಂದು ಭಕ್ತರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯ ಲಿಂಗಪಟ್ಟಣ ಗ್ರಾಮದ ಮಾರಮ್ಮ ದೇವಸ್ಥಾನವೊಂದರಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.ದೇವಾಲಯದಲ್ಲಿ ಪ್ರಸಾದ ಸೇವಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70ಕ್ಕೂ ಹೆಚ್ಚು ಭಕ್ತಾಧಿಗಳು ಅಸ್ವಸ್ಥಗೊಂಡಿರುವ ಘಟನೆ ಬುಧವಾರ ನಡೆದಿದೆ. ಪ್ರಸಾದ ಸೇವಿಸಿದ ಭಕ್ತಾಧಿಗಳು ವಾಂತಿ ಮಾಡಿಕೊಂಡು ಅಸ್ವಸ್ತಗೊಂಡಿದ್ದಾರೆ. ಅಸ್ವಸ್ಥಗೊಂಡ ಭಕ್ತಾಧಿಗಳನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಳವಳ್ಳಿ ಲಿಂಗಪಟ್ಟಣ ಗ್ರಾಮದ ನಡುವೆ ಇರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರತೀ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ನಂತರ ಪೆÇಂಗಲ್ ಹಾಗೂ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ಬುಧವಾರ ಸಹ ಇದೇ ರೀತಿ ಪ್ರಸಾದ ವಿತರಿಸಿದ್ದು ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.
ಜನ ವಸತಿ ಪ್ರದೇಶದಲ್ಲೇ ಹುಲಿ ಸಾವು: ಹಲವು ಅನುಮಾನ! ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಜನವಸತಿ ಪ್ರದೇಶದಲ್ಲೇ ಹುಲಿ ಸಾವು ಕಂಡಿದ್ದು ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ತೇಗೂರು ಗುಡ್ಡದ ಬಳಿ ಸುಮಾರು 5 ರಿಂದ 6 ವರ್ಷ ಪ್ರಾಯದ ಹೆಣ್ಣು ಹುಲಿ ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಹುಲಿಯ ಸಾವಿಗೆ ನಿಜವಾದ ಕಾರಣ ಏನೆಂದು ತಿಳಿದು ಬರಲಿದೆ. ಆಕಸ್ಮಿಕವಾಗಿ ಸಾವನ್ನಪ್ಪಿರುವ ಹೆಣ್ಣು ಹುಲಿಯನ್ನ ನೋಡಲು ಸ್ಥಳೀಯ ಜನರು ಹಾಗೂ ಅರಣ್ಯ ಸಿಬ್ಬಂದಿಗಳು ಬಂದಿದ್ದರು. ಜನವಸತಿ ಇರುವ ಪ್ರದೇಶದಲ್ಲಿ ಹುಲಿ ಸಾವು ಭೀತಿಯನ್ನು ಹುಟ್ಟಿಸಿದೆ. ಸಾಗರದಲ್ಲಿ ಕಾಡು ಕೋಣವೊಂದು ಸಾವನ್ನಪ್ಪಿದ್ದು ಇದೀಗ ಮಲೆನಾಡಿನಲ್ಲಿ ನಡೆದ ಈ ಘಟನೆ ಅಚ್ಚರಿ ಮೂಡಿಸಿದೆ.