Author: Nammur Express Admin

ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ..!ಆಸ್ತಿ ಕಲಹದಿಂದ ಹತ್ಯೆ: ಚಿಕ್ಕೋಡಿಯಲ್ಲಿ ಘಟನೆ ಚಿಕ್ಕೋಡಿ: ಆಸ್ತಿ ಆಸೆಗೆ ಅಣ್ಣನ ಮಗನನ್ನೆ ಕೊಂದ ಚಿಕ್ಕಪ್ಪ ಇದೀಗ ಪೋಲೀಸ್ ಅತಿಥಿಯಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದಿದೆ. ಅಚ್ಚರಿ ಎಂದರೆ ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ್ದ. ಕಾಣೆಯಾದ ಯುವಕನ ಕುರಿತು ದೂರು ನೀಡಿದ ಆತನ ಚಿಕ್ಕಪ್ಪನೇ ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಠಾಣೆಯ ಪೆÇಲೀಸರು ಭೇದಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದ ವಿಶಾಲ ಅಲಿಯಾಸ್ ಅಪ್ಪಾಸೋ ಮಹೇಶ್ ಪಾಟೀಲ(25) ಕೊಲೆಯಾದ ಯುವಕ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ ಬೆನಾಡಿ ಗ್ರಾಮದ ಸತೀಶ್ ದಾದಾಸಾಹೇಬ ಪಾಟೀಲ(45), ಅಮೋಲ ಪ್ರಕಾಶ ವಡ್ಡರ(36), ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹೊನ್ನಳಿ ಗ್ರಾಮದ ದಿಲೀಪ ಪರಶುರಾಮ ವಡ್ಡರ(38), ಬಾಬಾಸಾಹೇಬ ಪಾಂಡುರಂಗ ಕಾಂಬಳೆ(47) ಮತ್ತು ಕರವೀರ ತಾಲೂಕಿನ ಖಬವಡೆ ಗ್ರಾಮದ ವಿಕಾಸ ವಕೀಲ ಪಾಟೀಲ(25) ಬಂಧಿತ ಆರೋಪಿತರು. ಕೊಲೆ ಆರೋಪದಡಿ ಐವರನ್ನು ಸದ್ಯ ನ್ಯಾಯಾಂಗ…

Read More

ಉತ್ತರ ಪ್ರದೇಶದಿಂದ ಬಂದು ಸರಗಳ್ಳತನ ಮಾಡಿ ಎಸ್ಕೇಪ್ ಶಿವಮೊಗ್ಗ: ಮಲೆನಾಡಿನಲ್ಲಿ ಕಳ್ಳತನ, ದರೋಡೆ ಹೆಚ್ಚಾಗುತ್ತಿದೆ. ಈ ನಡುವೆ ಶಿವಮೊಗ್ಗ ಕೋಟೆ ಪೊಲೀಸ್ ರು ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶ ಮೂಲದ 6 ಜನ ಕಳ್ಳರನ್ನು ಬಂಧಿಸಿದ್ದಾರೆ. ಫೈಸಲ್(25), ಸಲ್ಮಾನ್ (24), ಆಶೀಸ್ ಕುಮಾರ್ (36), ಮೆಹತಾಬ್ (35), ಸಲ್ಮಾನ್ (22) ಮತ್ತು ಮಹಮ್ಮದ್ ಚಾಂದ್ (23) ಬಂಧಿತ ಆರೋಪಿಗಳು. ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ಬಂದು ಸರಗಳ್ಳತನ ಮಾಡುತ್ತಿದ್ದರು. ಪೆÇಲೀಸರಿಗೆ ದೊರೆತ ಮಾಹಿತಿ ಆಧರಿಸಿ ಕಳ್ಳರನ್ನು ಬಂಧಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ ಉತ್ತರ ಪ್ರದೇಶ ಮೂಲದ ಬೈಕ್, 2 ಪಿಸ್ತೂಲ್, 12 ಜೀವಂತ ಗುಂಡು ಹಾಗೂ ಮಾರಕಾಸ್ತ್ರಗಳನ್ನು ಹಾಗೂ 9.30 ಲಕ್ಷ ರೂಪಾಯಿ ಬೆಲೆಬಾಳುವ ಸುಮಾರು ಕಾಲು ಕೆಜಿ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಇವರ ಬಂಧನದಿಂದಾಗಿ 2019ರಲ್ಲಿ ದಾಖಲಾದ 4 ಮತ್ತು 2020ರಲ್ಲಿ ದಾಖಲಾದ 1 ದರೋಡೆ ಹಾಗೂ 5 ಸರಗಳ್ಳತನ ಪತ್ತೆಯಾಗಿದೆ ಎಂದಿದ್ದಾರೆ.

Read More

ಕರೋನಾ ಸೋಂಕಿನ ಹೊಡೆತಕ್ಕೆ “ದೀಪಾವಳಿ ಬಂಪರ್”!ಬಡ, ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ? ನವ ದೆಹಲಿ: ಕರೋನಾದಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದಿದೆ. ಬಡವರ ಬದುಕು ಬೀದಿಪಾಲಾಗಿದೆ. ಈ ನಡುವೆ ಮೋದಿ ಸರ್ಕಾರ ಬಡವರ ಜನ್ ಧನ್ ಖಾತೆಗೆ 1500 ರೂ. ಹಾಕಲು ನಿರ್ಧರಿಸುತ್ತಿದೆ ಎನ್ನಲಾಗಿದೆ. ದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದ್ದವರು ಕೂಡ ಈಗ ಕರೋನಾದಿಂದ ಬಡವರಾಗಿ ಹೋಗಿದ್ದಾರೆ. ಹಾಗಾಗಿ ಮೋದಿ ಸರ್ಕಾರ ನವೆಂಬರ್‍ವರೆಗೆ ಬಡವರಿಗೆ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಿತ್ತು. ಈಗ ಅದನ್ನ ಮಾರ್ಚ್ 2021ರವರೆಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಡ ಮಹಿಳೆಯರ ಖಾತೆಗೆ ಮತ್ತೆ 1500 ರೂಪಾಯಿ ಸೇರಿಸಲಿದೆ. ಬಡ ಮತ್ತು ದುರ್ಬಲ ಕುಟುಂಬಗಳ ಜನರಿಗೆ 3ನೇ ಉತ್ತೇಜನ ಪ್ಯಾಕೇಜ್ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜನ್ ಧನ್ ಖಾತೆ ತೆರೆಯುವುದು ಹೇಗೆ..?: ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಶೂನ್ಯ ಬ್ಯಾಲೆನ್ಸ್ ನಲ್ಲಿ ಉಳಿತಾಯ ಖಾತೆ ತೆರೆಯಬಹುದು. ಇದರಲ್ಲಿ ಚೆಕ್…

Read More

ಸರಳ ರಾಜ್ಯೋತ್ಸವಕ್ಕೆ ರಾಜ್ಯ ಸಜ್ಜುಯಾವ ವಿಭಾಗದಲ್ಲಿ ಯಾರಿಗೆ ಪ್ರಶಸ್ತಿ?ಯುವ ಬ್ರಿಗೇಡ್‍ಗೂ ಪ್ರಶಸ್ತಿ ಹೆಮ್ಮೆ! ಬೆಂಗಳೂರು: ಬಹು ನಿರೀಕ್ಷಿತ 2020ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಿದ್ದು, ಸರಳ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲು ನಿರ್ಧರಿಸಲಾಗಿದೆ.65ನೇ ರಾಜ್ಯೋತ್ಸವ ಹಿನ್ನಲೆಯಲ್ಲಿ 65 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ 1 ಲಕ್ಷ ರೂ 25 ಗ್ರಾಂ ಚಿನ್ನ ಹೊಂದಿದೆ. ನ.7ರಂದು ಬೆಳಿಗ್ಗೆ 11ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಸರಳ ಕಾರ್ಯಕ್ರಮ ನಡೆಸಿ ಅಂದು ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.ಪ್ರಶಸ್ತಿ ಯಾರಿಗೆ?: ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡದ ಪೆÇ್ರ.ಸಿ.ಪಿ.ಸಿದ್ಧಾಶ್ರಮ, ಕೋಲಾರದ ವಿ. ಮುನಿ ವೆಂಕಟಪ್ಪ, ಗದಗದ ವಿಶೇಷ ಚೇತನ ವರ್ಗದ ರಾಮಣ್ಣ ಬ್ಯಾಟಿ, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜಾ, ಯಾದಗಿರಿಯ ಡಿ.ಎನ್. ಅಕ್ಕಿ,ಸಂಗೀತ ಕ್ಷೇತ್ರದಲ್ಲಿ ರಾಯಚೂರಿನ ಅಂಬಯ್ಯನೂಲಿ, ಬೆಳಗಾವಿಯ ಅನಂತ ತೇರದಾಳ, ಬೆಂಗಳೂರಿನವರಾದ ಬಿ.ವಿ. ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ್, ದಕ್ಷಿಣ ಕನ್ನಡದ…

Read More

ಮಂಗಳೂರಿನಲ್ಲಿ ಧಾರುಣ ಘಟನೆ ಮಂಗಳೂರು: ರಸ್ತೆ ಅಪಘಾತವೊಂದರಲ್ಲಿ ನವ ದಂಪತಿಗಳು ಮೃತಪಟ್ಟ ಧಾರುಣ ಘಟನೆ ಮಂಗಳೂರಲ್ಲಿ ಮಂಗಳವಾರ ಸಂಭವಿಸಿದೆ. ಮಂಗಳೂರಿನ ತೊಕ್ಕೊಟ್ಟು ಓವರ್ ಬ್ರಿಡ್ಜ್‍ನಲ್ಲಿ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿನಾಮ ಬಜಾಲ್ ನಿವಾಸಿ ರಯಾನ್ ಫನಾರ್ಂಡಿಸ್ ಮತ್ತು ಪ್ರಿಯಾ ಫನಾರ್ಂಡಿಸ್ ಮೃತಪಟ್ಟಿದ್ದಾರೆ. ಉಳ್ಳಾಲ ಬಂಗೇರಲೇನ್‍ನಲ್ಲಿ ಬಾಡಿಗೆ ಮನೆಯಲ್ಲಿದ್ದ ಇವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ದಂಪತಿಗಳಿದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದ್ದ ಪರಿಣಾಮ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ರಯಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮರಣ ಹೊಂದಿದ್ದಾರೆ.

Read More

ಪಡುಕೋಣೆ ವ್ಯವಸ್ಥಾಪಕಿಗೆ ವಿಚಾರಣಾ ಸಮನ್ಸ್ ಮುಂಬೈ: ಡ್ರಗ್ಸ್ ಹಗರಣದ ಸುಳಿ ಎತ್ತ ಎತ್ತಲೋ ತಿರುಗುತ್ತಿದೆ. ಬಾಲಿವುಡ್, ಸ್ಯಾಂಡಲ್‍ವುಡ್ ನಟಿಯರ ಸುತ್ತ ಗಿರಕಿ ಹೊಡೆಯುತ್ತಿರುವ ಹಗರಣ ಈಗ ಮತ್ತೆ ದೀಪಿಕಾ ಪಡಕೋಣೆ ಬಳಿ ಬಂದಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ (ಮ್ಯಾನೇಜರ್) ಕರಿಷ್ಮಾ ಪ್ರಕಾಶ್ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ(ಎನ್.ಸಿ.ಬಿ.) ವಿಚಾರಣೆಗೆ ಕರೆದಿದೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ. ಮಂಗಳವಾರ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಅವರ ಮುಂಬೈ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಎನ್,ಸಿ,ಬಿ, ಸಮನ್ಸ್ ಕೊಟ್ಟಿದೆ.ನಟಿಯರಾದ ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಕಳೆದ ತಿಂಗಳು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ತನಿಖೆಯಲ್ಲಿ ಏಜನ್ಸಿ ವಿಚಾರಣೆ ನಡೆಸಿತ್ತು. ಈಗಾಗಲೇ ಕನ್ನಡದ ನಟಿಯರಾದ ಸಂಜನಾ, ರಾಗಿಣಿ ಜೈಲಲ್ಲಿದ್ದಾರೆ.

Read More

ರಾಜ್ಯದಲ್ಲಿ ಕರೋನಾ ಲಸಿಕೆ ವಿತರಣೆಗೆ ಸಿದ್ಧತೆಕರೋನಾ ಕೇಸ್, ಸಾವು ಸಂಖ್ಯೆಯಲ್ಲಿ ಇಳಿಕೆ ಬೆಂಗಳೂರು: 2021ರ ಆರಂಭದಲ್ಲಿ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸುತ್ತಿದೆ. ರಾಜ್ಯದಲ್ಲಿ ಕರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನ ಸೌಧದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪುಣೆಯ ಸೇರಂ ಸಂಸ್ಥೆ ಜೊತೆ ಆಸ್ಟ್ರಾಜೆನೆಕಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡು ಮಾತನಾಡಿ, ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಮೈಸೂರಿನ ಜೆ.ಎಸ್.ಎಸ್ ಸಂಸ್ಥೆ ಜೊತೆಗೂ ಒಪ್ಪಂದವಾಗಿದೆ. 56 ದಿನಗಳ ಹಿಂದಷ್ಟೇ ಒಂದನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಇನ್ನು 2 ಹಾಗೂ 3 ನೇ ಹಂತದಲ್ಲಿ ದೇಶದ 1,600 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ.…

Read More

ಹಿಜ್ಬುಲ್ ಮುಖ್ಯಸ್ಥ ಸೇರಿ 18 ಮಂದಿ ಪಟ್ಟಿಗೆ ನವ ದೆಹಲಿ: 1993 ಮುಂಬೈ ಸರಣಿ ಬಾಂಬ್ ಸ್ಫೋಟ, 1999ರ ಕಂದಹಾರ್ ವಿಮಾನ ಹೈಜಾಕಿಂಗ್, 2008ರ ಮುಂಬೈ ಉಗ್ರ ದಾಳಿ ಘಟನೆ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದರೆನ್ನಲಾದ 18 ಭಯೋತ್ಪಾದಕರನ್ನು ಯುಎಪಿಎ ಅಡಿ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಕಾನೂನುಬಾಹಿರ ಕ್ರಮಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಉಗ್ರರ ಪಟ್ಟಿಗೆ 18 ಮಂದಿಯನ್ನು ಸೇರಿಸಲಾಗಿದೆ. ಈ 18 ಉಗ್ರರು ದೇಶದ ವಿವಿಧೆಡೆ ವಿವಿಧ ಕಾಲಘಟ್ಟಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ, 1999ರ ಕಂದಹಾರ್ ವಿಮಾನ ಹೈಜಾಕ್ ಘಟನೆ, 2008ರ ಮುಂಬೈ ಉಗ್ರ ದಾಳಿ, ಪುಲ್ವಾಮಾ ದಾಳಿ, ಪಠಾಣಕೋಟ್ ದಾಳಿ, ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯ ಇತ್ಯಾದಿ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ.ಭಟ್ಕಳ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್, ದಾವೂದ್ ಬಂಟರಾದ ಛೋಟಾ ಶಕೀಲ್, ಟೈಗರ್ ಮೆಮೋನ್, ಜಾವೇದ್ ಚಿಕನಾ, ಐಎಸ್‍ಐ ಬೆಂಬಲಿತ ಉಗ್ರ ಸಾಜಿದ್ ಮೀರ್ ಮೊದಲಾದವರು ಈ…

Read More

ತೀರ್ಥಹಳ್ಳಿ ಮೂಲದ ಪೊಲೀಸ್ ಅಧಿಕಾರಿ ರಾಜೀನಾಮೆ ಶಿವಮೊಗ್ಗ: ಪೊಲೀಸ್ ಇಲಾಖೆಯಲ್ಲಿ ಮತ್ತೆ ರಾಜೀನಾಮೆ ಪರ್ವ ಶುರುವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕೆಲಸ ಪ್ರಾರಂಭಿಸಿದ ಹಂಪಿ ಡಿವೈಎಸ್‍ಪಿ ಎಸ್.ಎಸ್ ಕಾಶೀಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ಮತ್ತೆ ಸದ್ದು ಮಾಡತೊಡಗಿದೆ. ಬಳ್ಳಾರಿ ರೇಂಜ್ ಐಜಿಪಿ ನಡೆಸಿದ ಡಿವೈಎಸ್‍ಪಿಗಳ ಸಭೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಇನ್ನಿತರ ಅಕ್ರಮಗಳ ಬಗ್ಗೆ ಈ ವಿಷಯದಲ್ಲಿ ಪೆÇಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಚರ್ಚೆಯಾಗುತ್ತಿರುವಾಗ ಐಜಿಪಿ ಹಾಗೂ ಡಿವೈಎಸ್‍ಪಿ ಕಾಶೀ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ನೊಂದ ಡಿವೈಎಸ್‍ಪಿ ಕಾಶಿ ಸಭೆಯಿಂದ ಹೊರಬಂದವರೇ ನೇರವಾಗಿ ಬಳ್ಳಾರಿ ಎಸ್‍ಪಿ ಕಛೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ. ಡಿವೈಎಸ್‍ಪಿ ಎಸ್.ಎಸ್ ಕಾಶೀಗೌಡ ತೀರ್ಥಹಳ್ಳಿ ಮೂಲದವರಾಗಿದ್ದು, ದೇವಂಗಿ ಸಮೀಪ ಹಿಲೀಕೆರೆ ನಿವಾಸಿಯಾಗಿದ್ದು ಹಿಲೀಕೆರೆ ದಿವಂಗತ ಜಮೀಲ್ದಾರ್ ಶ್ರೀನಿವಾಸಗೌಡರ ಪುತ್ರ ಹಾಗೂ ಸವ್ಯಸಾಚಿರವರ ಸಹೋದರರಾಗಿದ್ದು, ತೀರ್ಥಹಳ್ಳಿ ತುಂಗಾಕಾಲೇಜು ವಿದ್ಯಾರ್ಥಿಯಾಗಿದ್ದರು. 25 ವರ್ಷಗಳ ಹಿಂದೆ ಸಬ್ ಇನ್ಸ್‍ಪೆಕ್ಟರ್ ಆಗಿ ರಾಯಚೂರಿನಲ್ಲಿ ಸೇವೆ ಪ್ರಾರಂಭಿಸಿ 25 ವರ್ಷಗಳ ಅವಧಿಯಲ್ಲಿ…

Read More

ನಿಧಾನಕ್ಕೆ ಚೇತರಿಕೆಯಾಗುತ್ತಿರುವ ಪ್ರವಾಸೋದ್ಯಮದೇಗುಲಗಳು, ತಾಣಗಳು, ಪಟ್ಟಣಗಳಲ್ಲಿ ಜನ ಚಿಕ್ಕಮಗಳೂರು/ಶಿವಮೊಗ್ಗ: ದಸರಾ ಅಂಗವಾಗಿ ಸರಣಿ ರಜೆ ಹಿನ್ನೆಲೆ ಮತ್ತು ಕರೋನಾ ಕಂಟಕ ಕೊಂಚ ಕಡಿಮೆಯಾದ ಕಾರಣ ಮಲೆನಾಡಿನ ಪ್ರವಾಸಿ ತಾಣಗಳು ಜನರಿಂದ ತುಂಬಿ ಹೋಗಿದ್ದವು. ಸೌಂದರ್ಯದ ಬೀಡು, ಧಾರ್ಮಿಕರ ಕ್ಷೇತ್ರಗಳ ತವರೂರಾಗಿರುವ ಕಾಫಿನಾಡಿನಲ್ಲಿ ಸತತ ಮೂರು ದಿನಗಳ ಕಾಲ ಸರಕಾರಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳು ಹಾಗೂ ಧಾರ್ಮಿಕ ಯಾತ್ರಾ ಸ್ಥಳಗಳು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ತುಂಬಿ ತುಳುಕುತ್ತಿದ್ದವು. ಮಂಗಳವಾರ ಕೂಡ ಪ್ರವಾಸಿಗರ ಸಂಖ್ಯೆ ಕಂಡು ಬಂತು. ಶನಿವಾರದಿಂದ ಸೋಮವಾರದವರೆಗೆ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಾದ್ಯಂತ ಹಬ್ಬದ ಸಡಗರ ಕಂಡುಬರುತ್ತಿದ್ದು, ಸಾಲು ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳ ಪ್ರವಾಸಿಗರು ಆಗಮಿಸಿದ್ದರಿಂದ ಭಾರೀ ಜನಜಂಗುಳಿ, ವಾಹನಗಳ ಸಾಲು ಕಂಡು ಬಂತು. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ, ಮೈದಾಡಿ, ಸಿರಿಮನೆ ಫಾಲ್ಸ್, ಸಗೀರ್ ಫಾಲ್ಸ್, ಚಾರ್ಮಾಡಿ ಘಾಟ್, ಕುದುರೆಮುಖ, ಕಳಸ, ಶೃಂಗೇರಿ, ಹೊರನಾಡಿನಂತಹ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರ ಆಗಮನ ಹೊಸ ಭರವಸೆ…

Read More