Author: Nammur Express Admin

ಸಾವಿರಾರು ಜನರಿಗೆ ಬದುಕು ಕೊಟ್ಟ ಸಿದ್ಧಾರ್ಥ ನೆನಪು ಮೂಡಿಗೆರೆ: ಕಾಫಿ ಡೇ ಮಾಲಿಕ ಸಿದ್ಧಾರ್ಥ ನೆನಪು ಮಾತ್ರ. ಆದರೆ ಅವರ ಬದುಕು, ಸಾಧನೆ ಅಮರ. ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಗ್ರಾಮದಲ್ಲಿರುವ ಕಾಫಿ ಡೇ ಮಾಲಿಕ ಸಿದ್ಧಾರ್ಥ ಸಮಾಧಿ ಬಳಿ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಬುದ್ಧ ಜಗತ್ತಿಗೆ ಬೆಳಕು ಕೊಟ್ಟ, ಈ ಸಿದ್ಧಾರ್ಥ ಸಾವಿರಾರು ಮಂದಿಗೆ ಬದುಕು ಕೊಟ್ಟ ಎಂದು ಹೇಳಿದರು. ಮೂಡಿಗೆರೆ ಭೇಟಿ ಮುನ್ನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಸಿದ್ಧಾರ್ಥ ತಾಯಿ ವಾಸಂತಿ ಹೆಗಡೆ ಮತ್ತು ಕುಟುಂಬದವರು ಹಾಜರಿದ್ದರು.

Read More

ಹೈಫೈ ಕಾರಲ್ಲಿ ಗೋ ಸಾಗಣೆ ಮಾಡಿದವರು ಈಗ ಅಂದರ್ ಶೃಂಗೇರಿ: ಮಲೆನಾಡಿನಲ್ಲಿ ಹೈಟೆಕ್ ಗೋ ಸಾಗಣೆ ನಡೆಯುತ್ತಿದೆ. ಇದಕ್ಕೆ ಈಗೊಂದು ಪುರಾವೆ ಸಿಕ್ಕಿದೆ. ನಮ್ಮೂರ್ ಎಕ್ಸ್‍ಪ್ರೆಸ್ ಕೂಡ ಈ ಬಗ್ಗೆ ಹಲವು ಬಾರಿ ವರದಿ ಮಾಡಿತ್ತು. ಇದೀಓಗ ಶೃಂಗೇರಿಯಲ್ಲಿ ಸೆ.13ರಂದು ಶ್ರೀಮಾತಾ ಹೋಟೆಲ್ ಬಳಿ ಮಲಗಿದ್ದ ಜಾನುವಾರಿಗಳನ್ನು ಹೈಟೆಕ್ ಕಾರಿನಲ್ಲಿ ಕದ್ದೊಯ್ದ ಘಟನೆಗೆ ಸಂಬಂಧ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಮಲೆನಾಡಿನ ಕೊಪ್ಪ, ಶೃಂಗೇರಿ, ಆಲ್ದೂರು, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಕಾರಿನಲ್ಲಿ ದನ ಕಳ್ಳತನ ಆಗಾಗ್ಗೆ ನಡೆಯುತ್ತಿದೆ.

Read More

ಕೊಪ್ಪದ ಜಯಪುರ ಬಳಿ ಯುವಕರ ಅಟ್ಟಾಡಿಸಿದ ಕಾಡುಕೋಣ ಸಾಗರ: ಕಾಡುಕೋಣವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಮಂಕಳಲೆ ಗ್ರಾಮ ವ್ಯಾಪ್ತಿಯ ನೀರಕೋಡ್ ಬಡಾವಣೆ ನೀಲಗಿರಿ ತೋಪಿನೊಳಗೆ ಸೋಮವಾರ ನಡೆದಿದೆ. ಅರಣ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ತಿಮ್ಮಪ್ಪ ಮೃತಪಟ್ಟ ಕಾಡುಕೋಣದ ಶವಪರೀಕ್ಷೆ ನಡೆಸಿದ್ದಾರೆ.ಸಾವಿಗೆ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಕಾಡುಕೋಣ ಶವಪರೀಕ್ಷೆ ನಡೆಸಿ ಅಂಗಾಂಗವನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ವರದಿ ನಂತರ ಗೊತ್ತಾಗಲಿದೆ. ಶವಪರೀಕ್ಷೆ ನಂತರ ಕಾಡುಕೋಣದ ಅಂತ್ಯಸಂಸ್ಕಾರ ನಡೆಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಕಾರಿ ಶ್ರೀಧರ್, ವಲಯ ಅರಣ್ಯಾಕಾರಿ ಡಿ.ಆರ್. ಪ್ರಮೋದ್, ಸಹಾಯಕ ವಲಯ ಅರಣ್ಯಾಕಾರಿ ಅಶೋಕ್, ಮುತ್ತಣ್ಣ, ಅರಣ್ಯ ರಕ್ಷಕ ಸತೀಶ್ ಗ್ರಾಮಸ್ಥರು ಹಾಜರಿದ್ದರು. ಕಾಡುಕೋಣ ಅಟ್ಯಾಕ್?: ಕೊಪ್ಪ ತಾಲೂಕು ಜಯಪುರದ ಕೂಳೂರು ಬಳಿ ಧರೆಕೊಪ್ಪ ಎಂಬಲ್ಲಿ ಗದ್ದೆ ಬಳಿ ಇದ್ದ ಕಾಡುಕೋಣವನ್ನು ರೇಗಿಸಿದ ಯುವಕರ ಗುಂಪನ್ನು ಕಾಡುಕೋಣ ಅಟ್ಟಿಸಿಕೊಂಡು ಬಂದ ಪರಿಣಾಮ ಗುಂಪು ಅಂಗಡಿಯೊಳಗೆ ಓಡಿ ರಕ್ಷಣೆ ಪಡೆದ ಘಟನೆ ನಡೆದಿದೆ.…

Read More

ಬೆಳಗಾವಿತಲ್ಲಿ ಘಟನೆ: ಲಘು ಲಾಠಿ ಪ್ರಹಾರ ನಮ್ಮೂರ್ ಎಕ್ಸ್‍ಪ್ರೆಸ್ ನ್ಯೂಸ್ ನೆಟ್‍ವರ್ಕ್ಬೆಳಗಾವಿ: ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ರೌಡಿ ಶೀಟರ್‍ಗೆ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಿಗ್ಗಾಮಗ್ಗಾ ಹೊಡೆದು ಕೊಲೆಗೈದ ಘಟನೆ ನಗರದಲ್ಲಿ ಸೋಮವಾರ ಸಂಭವಿಸಿದೆ. ರೌಡಿಶೀಟರ್ ಶಹಬಾಜ್ ಎಂಬುವನೇ ಹತ್ಯೆಯಾದವ. ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ಶಹಬಾಜನ ಮೇಲೆ ಹತ್ತಕ್ಕೂ ಹೆಚ್ಚು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದರಿಂದ ಆತ ಕ್ಷಣಾರ್ಧದಲ್ಲಿ ರಕ್ತದ ಮಡವಿನಲ್ಲಿ ಬಿದ್ದುಕೊಂಡಿದ್ದ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಮಾರಣಾಂತಿಕ ಗಾಯಗೊಂಡಿದ್ದ ರೌಡಿಶೀಟರ್‍ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ. ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಯುವಕರ ತಂಡ ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿತು. ಯುವಕರನ್ನು ಚದುರಿಸಲು ಪೆÇಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗವೂ ನಡೆಯಿತು. ಕೊಲೆಗೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಹತ್ಯೆಯಾದ ರೌಡಿಶೀಟರ್ ಹಲವರೊಂದಿಗೆ ದ್ವೇಷಕಟ್ಟಿಕೊಂಡಿದ್ದನಲ್ಲದೆ, ಸಣ್ಣಪುಟ್ಟ ಪ್ರಕರಣಗಳು ಭಾಗಿಯಾಗಿ ದುಂಡಾರ್ವತನೆ ಪ್ರದರ್ಶಿಸುತ್ತಿದ್ದ ಎಂದು ಹೇಳಲಾಗಿದೆ.

Read More

ವಿಜಯಪುರದಲ್ಲೊಂದು ವಿಚಿತ್ರ ಆತ್ಮಹತ್ಯೆನೀಡಿಗೆ ನಾಣ್ಯ ಎಸೆಯುಲು ಹೋದವಳು ಶವವಾಗಿ ಬಂದಳು ನಮ್ಮೂರ್ ಎಕ್ಸ್‍ಪ್ರೆಸ್ ನ್ಯೂಸ್ ನೆಟ್‍ವರ್ಕ್ವಿಜಯಪುರ: ನದಿಗೆ ನಾಣ್ಯ ಎಸೆದು ಮನದಿಚ್ಛೆ ಬೇಡಿಕೊಂಡು ಬರುವುದಾಗಿ ಹೇಳಿ ಕಾರಿನಿಂದ ಕೆಳಗಿಳಿದು ಹೋಗಿದ್ದ ಯುವತಿಯೊಬ್ಬಳು, ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ದೇವಣಗಾಂವ್ -ಅಫಜಲಪುರ ಮಧ್ಯದ ಸೇತುವೆ ಬಳಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯ ಶವ 2 ದಿನಗಳ ನಂತರ ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಐಶ್ವರ್ಯ ಶ್ರೀಪಾಲ ಕಬ್ಬಿನ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಂಡಿಯಲ್ಲಿ ವಾಸವಾಗಿರುವ ತನ್ನ ಸಹೋದರಿ ಮನೆಗೆ ತೆರಳಿದ್ದ ಐಶ್ಚರ್ಯ ನಂತರ ಕುಟುಂಬದವರೊಂದಿಗೆ ಕಾರಿನಲ್ಲಿ ಕಲಬುರ್ಗಿ ಜಿಲ್ಲೆಯ ಗಾಣಗಾಪುರಕ್ಕೆ ತೆರಳುತ್ತಿದ್ದಳು. ಇದೇ ಸಂದರ್ಭದಲ್ಲಿ ಏನೋ ನೆನಪು ಮಾಡಿಕೊಂಡಂತೆ ಹರಕೆಯ ನಾಣ್ಯ ನದಿಯಲ್ಲಿ ಹಾಕಿಬರುವ ಇಚ್ಛೆಯನ್ನು ಕುಟುಂಬದ ಸದಸ್ಯರ ಬಳಿ ವ್ಯಕ್ತಪಡಿಸಿದ್ದಳು. ಆಕೆಯ ಇಚ್ಛೆಯಂತೆ ಸೇತುವೆ ಬಳಿ ಕಾರು ನಿಲ್ಲಿಸಿದ ಕುಟುಂಬಸ್ಥರು ಕೈಗೆ ನಾಣ್ಯ ನೀಡಿ ಕಳುಹಿಸಿದ್ದರು. ನಾಣ್ಯ ಎಸೆಯುವ ನೆಪವೊಡ್ಡಿದ ಯುವತಿ…

Read More

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ನಿಯ ಕಂಪನಿಹುಬ್ಬಳ್ಳಿಯಲ್ಲಿ ನಡೆದ ಘಟನೆ: ಕಾರ್ಮಿಕರು ಪಾರು! ನಮ್ಮೂರ್ ಎಕ್ಸ್‍ಪ್ರೆಸ್ ನ್ಯೂಸ್ ನೆಟ್‍ವರ್ಕ್ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪತ್ನಿ ಸೇರಿದಂತೆ ನಾಲ್ವರು ಪಾಲುದಾರಿಕೆಯ ಹುಬ್ಬಳ್ಳಿಯ ವಿಭವ ಇಂಡಸ್ಟ್ರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 3 ಕೋಟಿ ರೂ. ಹೆಚ್ಚು ಮೌಲ್ಯದ ನಷ್ಟ ಉಂಟಾಗಿದೆ.ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ವಿಭವ ಇಂಡಸ್ಟ್ರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ. ಕೇಂದ್ರದ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ಸಹೋದರ ನಂದಕುಮಾರ್, ಅಚುತ್ ಲಿಮ್ಹೆ, ಉದಯ ಬಾಡಕ ಸೇರಿದಂತೆ ಕೇಂದ್ರ ಸಚಿವ ಜೋಶಿಯವರ ಪತ್ನಿ ಜ್ಯೋತಿ ಜೋಶಿಯವರು ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ಅಂದಾಜು 10 ಸಾವಿರ ಚದರ ಅಡಿಯಲ್ಲಿ ಹಬ್ಬಿರುವ ಈ ಕಾರ್ಖಾನೆಯ ಗೋದಾಮಿನಲ್ಲೇ ಸಂಭವಿಸಿದ್ದ ಬೆಂಕಿ ಅನಾಹುತದಲ್ಲಿ ಕಚ್ಚಾ ವಸ್ತುಗಳಿಗೆ ಮೊದಲು ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗಳು ಬೃಹತ್ ಪ್ರಮಾಣದ ಪಸರಿಸಿಕೊಂಡು ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಕಸಬರಗಿ, ಫಿನಾಯಲ್ ಸೇರಿದಂತೆ ಮತ್ತಿತರ…

Read More

ಆಳ್ವಾಸ್ ಕಾಲೇಜಲ್ಲಿ ಓದಿದ್ದ ಯಶಾ ಶಿವಕುಮಾರ್ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಪಯಣ..! ಬೆಂಗಳೂರು: ಕರಾವಳಿ ಚೆಲುವೆಯರು ಇಡೀ ಚಿತ್ರರಂಗ ಆಳುತ್ತಿದ್ದಾರೆ. ಐಶ್ವರ್ಯ, ಅನುಶ್ಕಾ, ದೀಪಿಕಾ, ರಾಧಿಕಾ ಹೀಗೆ ಸ್ಟಾರ್ ನಟಿಯರು ಕರಾವಳಿ ಮೂಲದವರಾಗಿದ್ದಾರೆ. ಇದೀಗ ಆ ಸಾಲಿಗೆ ಇನ್ನೊಬ್ಬಳು ಬೆಡಗಿ ಸೇರ್ಪಡೆಯಾಗಲು ಸಿದ್ಧಳಾಗಿದ್ದಾಳೆ.ಈಗಾಗಲೇ “ಪದವಿಪೂರ್ವ” ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿ ಪೂರ್ವ” ಚಿತ್ರಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿಯಾಗಿದ್ದಾಳೆ. ಯಶಾ ಶಿವಕುಮಾರ್ ಈಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕಿ. ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇವರು. 2019ರಲ್ಲಿ ಫ್ಯಾಶನ್ ಎಬಿಸಿಡಿ ಸಂಸ್ಥೆ ಆಯೋಜಿಸಿದ್ದ “ಮಿಸ್ ಬೆಂಗಳೂರು 2019 ” “ಮಿಸ್ ಕರ್ನಾಟಕ ಇಂಟನ್ರ್ಯಾಷನಲ್ 2019” ಹಾಗೂ ಮುಂಬೈನಲ್ಲಿ ನಡೆದ “ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019” ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ಭರತನಾಟ್ಯ…

Read More

ಬಂಗಾರಪ್ಪ ಹುಟ್ಟು ಹಬ್ಬದ ನೆನಪಲ್ಲಿ ಹೊಸ ಯೋಜನೆಬಂಗಾರಪ್ಪ ಸಾಧನೆ ಹಾಡಿ ಹೊಗಳಿದ ಯಡಿಯೂರಪ್ಪ ಸೊರಬ: ಸಮಾಜಮುಖಿ ಚಿಂತನೆಯ ನಾಯಕ ಎಸ್ ಬಂಗಾರಪ್ಪನವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 87ನೇ ಜನ್ಮದಿನಾಚರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್‍ಲೈನ್ ಸಮಾರಂಭದ ಮೂಲಕ ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ರಾಜ್ಯದಲ್ಲಷ್ಟೇ ಅಲ್ಲದೇ, ದೇಶದಲ್ಲಿಯೇ ತಮ್ಮ ಛಾಪು ಮೂಡಿಸಿದ್ದರು. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ತಂದ ದೂರದೃಷಿ ಯೋಜನೆಯಿಂದಾಗಿ ಅವರು ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ.ಸೊರಬ ಪಟ್ಟಣದಲ್ಲಿ ಬಂಗಾರಪ್ಪನವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ಸೊರಬ ಪಟ್ಟಣದಲ್ಲಿ ಉದ್ಘಾಟಿಸಲಾಗಿರುವ ಉದ್ಯಾನವನ್ನು ಪಟ್ಟಣ ಪಂಚಾಯತ್ ಆಡಳಿತ…

Read More

ರಾಷ್ಟ್ರೀಯ ತನಿಖಾ ದಳದಲ್ಲಿ ಉದ್ಯೋಗವಕಾಶ ನವ ದೆಹಲಿ: ರಾಷ್ಟ್ರೀಯ ತನಿಖಾ ದಳ ಡೆಪ್ಯೂಟೇಷನ್ ಆಧಾರದ ಮೇಲೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಇನ್ಸ್ ಪೆಕ್ಟರ್ 29, ಸಬ್ ಇನ್ಸ್ ಪೆಕ್ಟರ್ 31, ಸಹಾಯಕ ಸಬ್ ಇನ್ಸ್ ಪೆಕ್ಟರ್ 29 ಹುದ್ದೆಗಳಿಗೆ ಎನ್‍ಐಎ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 8 ಕೊನೆಯ ದಿನವಾಗಿದೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿವಿಯಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.nia.gov.in ವೆಬ್ ಸೈಟ್‍ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Read More

ಕರಾವಳಿ, ರಾಜಧಾನಿಯಲ್ಲಿ “ದಸರಾ ಸೊಬಗು”ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಾಲು ಸಾಲುಬೆಂಗಳೂರಿನ ಎಲ್ಲಾ ಕಡೆ ದಸರಾ ಸಡಗರ..! ಮಂಗಳೂರು/ಬೆಂಗಳೂರು/ಹುಬ್ಬಳ್ಳಿ: ದಸರಾ ಹಬ್ಬವನ್ನು ಕರಾವಳಿ ಮತ್ತು ಬೆಂಗಳೂರು ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಕರಾವಳಿಯ ಕೊಲ್ಲೂರು, ಕುದ್ರೋಳಿ, ಆನೆಗುಡ್ಡೆ ಸೇರಿದಂತೆ ಎಲ್ಲಾ ಕಡೆ ದಸರಾವನ್ನು ಆಚರಣೆ ಮಾಡಲಾಯಿತು.ಬೆಂಗಳೂರಿನ ಬನ ಶಂಕರಿ ದೇವಾಲಯ ಸೇರಿದಂತೆ ಎಲ್ಲಾ ದೇಗುಲಗಳು ಮುಂಜಾನೆಯಿಂದ ರಾತ್ರಿವರೆಗೆ ಫುಲ್ ಆಗಿದ್ದವು. ಪ್ರತಿ ಮನೆ ಮನೆಯಲ್ಲೂ ದಸರಾ ಹಬ್ಬ ಆಚರಣೆ ಮಾಡಲಾಯಿತು. ಉತ್ತರ ಕರ್ನಾಟಕದ ಬಹುತೇಕ ಕಡೆ ಗೊಂಬೆಗಳ ಪ್ರದರ್ಶನ, ಮನೆಯಲ್ಲೂ ಗೊಂಬೆಗಳ ಕೂರಿಸಲಾಗಿತ್ತು. ಪ್ರತಿ ಊರಲ್ಲೂ ದಸರಾ ಮೆರವಣಿಗೆ ಮಾಡಲಾಯಿತು. ಎಲ್ಲಾ ಕಡೆ ಕರೋನಾ ಜಾಗೃತಿ ಮೂಡಿಸಲು ಟ್ಯಾಬ್ಲೋ ಮಾಡಲಾಯಿತು. ಅದರಲ್ಲಿ ಕರೋನಾ ಕುರಿತ ಜಾಗೃತಿ ಮೂಡಿಸಲಾಯಿತು. ಮೈಸೂರು ದಸರಾದಲ್ಲೂ ಕೂಡ ಈ ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು. ಪ್ರತಿ ತಾಲೂಕಲ್ಲೂ ಈ ಕರೋನಾ ಜಾಗೃತಿ ಟ್ಯಾಬ್ಲೋ ಪ್ರದರ್ಶನ ಮಾಡಲಾಯಿತು. ರಾಜ್ಯದಲ್ಲಿ ಎಲ್ಲೂ ದಸರಾ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

Read More