ಮುಂಜಾನೆಯಿಂದ ಸಂಜೆವರೆಗೆ ದಸರಾ ರಂಗುಕುಶಾವತಿಯಲ್ಲಿ ಬನ್ನಿ ಮುಡಿದು ಪೂಜೆಹುಲಿವೇಷ, ಟ್ಯಾಬ್ಲೋ, ಚಂಡೆ ಆಕರ್ಷಣೆ! ತೀರ್ಥಹಳ್ಳಿ: ದಸರಾ ಅಂಗವಾಗಿ ತೀರ್ಥಹಳ್ಳಿಯಲ್ಲಿ ಸರಳ ಹಾಗೂ ಸಂಭ್ರಮದ ದಸರಾ ಆಚರಣೆ ಮಾಡಲಾಯಿತು. ಸಾವಿರಾರು ಜನ ಈ ದಸರಾದಲ್ಲಿ ಭಾಗವಹಿಸಿದರು.ಮುಂಜಾನೆಯಿಂದಲೇ ರಾಮೇಶ್ವರ ದೇಗುಲದಲ್ಲಿ ಹೋಮ, ಹವನ ನೆರವೇರಿದ್ದು, ಭಕ್ತರು ಪೂಜೆ ಸಲ್ಲಿಸಿದರು. ಮಧ್ಯಾಹ್ನ ಚಂಡಿಕಾ ಹೋಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಡಾ.ಶ್ರೀಪಾದ್, ಸೊಪ್ಪುಗುಡ್ಡೆ ರಾಘವೇಂದ್ರ, ಲಯನ್ಸ್ ಪಾಂಡುರಂಗಪ್ಪ, ವಿಶ್ವನಾಥ ಶೆಟ್ಟಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಇದ್ದರು. ದೇವಾಲಯದಿಂದ 4 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಚಂಡೆ ಮತ್ತು ಕಲಾ ತಂಡಗಳೊಂದಿಗೆ ಪಟ್ಟಣದಲ್ಲಿ ಸಾಗಿತು. ಹುಲಿವೇಷ ಗಮನ ಸೆಳೆಯಿತು. ಜೊತೆಗೆ ಎಲ್ಲಾ ನಾಯಕರು ದಸರಾದಲ್ಲಿ ಭಾಗಿಯಾದರು. ಸಂಜೆ ಮೆರವಣಿಗೆಗೆ ಮಳೆಯ ಸಿಂಚನವಾಯಿತು. ತೀರ್ಥಹಳ್ಳಿ ಪಟ್ಟಣದ ಎರಡು ರಸ್ತೆಗಳ ಪಕ್ಕದಲ್ಲಿ ಜನ ನಿಂತು ದೇವರ ಪಲ್ಲಕ್ಕಿ ಉತ್ಸವ ವೀಕ್ಷಿಸಿ ಭಕ್ತಿಪರವಶರಾದರು. ಕುಶಾವತಿಯಲ್ಲಿ ಬನ್ನಿ ಮುಡಿಯುವ ಪೂಜೆ ಮತ್ತು ದೇವರ ಪೂಜೆ ನಡೆಯಿತು. ಸಾವಿರಾರು ಜನ ಭಾಗವಹಿಸಿ ಬನ್ನಿ ಕೊಟ್ಟು…
Author: Nammur Express Admin
ಮೈಸೂರಲ್ಲಿ ಅಂಬಾರಿ ಹೊತ್ತ ಅಭಿಮನ್ಯುರಾಜ್ಯದ ಎಲ್ಲಾ ಕಡೆ ಸರಳ ದಸರಾ ಆಚರಣೆ ಮೈಸೂರು/ಬೆಂಗಳೂರು: ನಾಡ ಹಬ್ಬ ದಸರಾವನ್ನು ರಾಜ್ಯದ ಎಲ್ಲೆಡೆ ಕರೋನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಯಿತು. ಆದರೂ ಜನ ಹಬ್ಬದ ಸಡಗರವನ್ನು ಸಂಭ್ರಮಿಸಿದರು.ಮೈಸೂರಲ್ಲಿ ಅಂಬಾರಿ ಮೆರವಣಿಗೆ ಈ ಸಲ ನೆಡೆಯಿತು. ರಾಜ್ಯದ ಪ್ರಮುಖ ದೇವಾಲಯಗಳಾದ ಶೃಂಗೇರಿ, ಕೊಲ್ಲೂರು, ಕುದ್ರೋಳಿ ಸೇರಿದಂತೆ ಅಮ್ಮನವರ ಶಕ್ತಿಪೀಠಗಳಲ್ಲಿ ಸಂಭ್ರಮದ ದಸರಾ ನಡೆಯಿತು. ದಸರಾಕ್ಕೆ ಅಲ್ಲಲ್ಲಿ ವರುಣನ ಸಿಂಚನವಾಯಿತು. ರಾಜಧಾನಿಯಲ್ಲಿ ಕೂಡ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಲಕ್ಷಾಂತರ ಭಕ್ತರು ಕರೋನಾ ಸಂಕಷ್ಟ ದೂರ ಮಾಡುವಂತೆ ಪ್ರಾರ್ಥನೆ ಮಾಡಿದರು. ಮೈಸೂರಲ್ಲಿ ಸರಳ ಜಂಬೂ ಸವಾರಿ!: ಐತಿಹಾಸಿಕ ಮೈಸೂರು ಜಂಬೂ ಸವಾರಿ ಈ ಬಾರಿ ಸರಳವಾಗಿ ನಡೆಯಿತು. ಸಿಎಂ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದು, ಅರಮನೆ ಆವರಣಕ್ಕೆ ಸೀಮಿತಗೊಂಡ ಈ ಬಾರಿಯ ಜಂಬೂ ಸವಾರಿಯಲ್ಲಿ…
ವಿಜಯ ದಶಮಿ ವಿಶೇಷ ಪೂಜೆಮುಂಜಾನೆಯಿಂದ ಹೋಮ ಹವನ ತೀರ್ಥಹಳ್ಳಿ: ಇತಿಹಾಸ ಪ್ರಸಿದ್ಧ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ದಸರಾ ಅಂಗವಾಗಿ ವಿಶೇಷ ಪೂಜೆ ನಡೆಯುತ್ತಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಚಂಡಿಕಾ ಹೋಮ, ರುದ್ರ ಹೋಮ ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಮಧ್ಯಾಹ್ನ 4 ಗಂಟೆಯಿಂದ ಉತ್ಸವ ನಡೆಯಲಿದೆ.
ಕೊಪ್ಪ ತಾಲೂಕಿನ ದೇವಾಲಯವಿಜಯದಶಮಿ ಅಂಗವಾಗಿ ಹೋಮ, ಪೂಜೆ ಕೊಪ್ಪ: ದಸರಾ ಅಂಗವಾಗಿ ಕೊಪ್ಪ ತಾಲೂಕಿನ ಬೊಮ್ಮಲಾಪುರ ತ್ರಿಪುರಾಂತಕಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.ಇಡೀ ದೇವಾಲಯದಲ್ಲಿ ಸರಳ ತೋರಣ ಅಲಂಕಾರ ಮಾಡಲಾಗಿದೆ. ಮುಂಜಾನೆಯಿಂದಲೇ ಹೋಮ, ವಿಶೇಷ ಪೂಜೆ ನಡೆಯಿತು.ದೇವಿಯ ಭಕ್ತರು, ಸ್ಥಳೀಯರು ಆಗಮಿಸಿ ಪೂಜೆ ಮಾಡಿಸಿದರು.ದೇವಾಲಯ ಆಡಳಿತ ಮಂಡಳಿ ಸದಸ್ಯರು ಇದ್ದರು.
ನಿಮ್ಮ ಮತ್ತು ನಿಮ್ಮೂರ್ ಜತೆ ನಮ್ಮೂರ್ ಎಕ್ಸ್‍ಪ್ರೆಸ್ ಪ್ರತಿಯೊಬ್ಬರಿಗೂ ಅವರು ಹುಟ್ಟಿ ಬೆಳೆದು ಆಡಿ ಕಲಿತ ಊರು ಅಂದ್ರೆ ಇಷ್ಟ!. ಜೊತೆಗೆ ಅಲ್ಲಿನ ಸಂಬಂಧ ಬಿಡಿಸಲಾರದ್ದು. ಅಲ್ಲಿನ ಬಂಧ ಜನ್ಮ ಜನ್ಮದ ಅನುಬಂಧದಂತೆ. ಹೀಗಿರುವಾಗ ನಮ್ಮ ಊರು ನಮಗೆ ಯಾವಾಗಲೂ ಹೆಮ್ಮೆ. ಹೀಗಾಗಿ ನಿಮ್ಮೂರ್ ವಿಭಾಗದಲ್ಲಿ ನಿಮ್ಮ ಊರಿನ ಹಿರಿಮೆ, ಗರಿಮೆ, ಇತಿಹಾಸ, ಮಹತ್ವದ ಅಂಶ, ಸಾಧಕರ ಪುಟಗಳು, ಪ್ರತಿಭೆಗಳಿಗೆ ವೇದಿಕೆ, ಕಷ್ಟದಲ್ಲಿರುವವರಿಗೆ ನೆರವು, ಉದ್ಯೋಗಕ್ಕೆ ಸಹಾಯ, ಬದುಕಿಗೆ ಊರುಗೋಲು ಕೊಡುವ ಸಣ್ಣ ಪ್ರಯತ್ನ ಇದು. ಹೀಗಾಗಿ ಈ ಕಾಲಂ ನಮ್ಮೂರ್ ಎಕ್ಸ್‍ಪ್ರೆಸ್ ಮಾಧ್ಯಮ ಸಂಸ್ಥೆಯ ಕನಸಿನ ಕೂಸು.ಗ್ರಾಮೀಣ ಭಾಗವೇ ದೇಶದ ಆಸ್ತಿ. ಇದು ರಾಜಕಾರಣಿಗಳ ಬರೀ ಭಾಷಣಕ್ಕೆ ಸೀಮಿತವಾಗಿದೆ. ನಾವೆಲ್ಲಾ ಸೇರಿ ನಮ್ಮೂರ್ ಅಭಿವೃದ್ಧಿಗೆ ಕೈಜೋಡಿಸೋಣ. ಇದು ನಮ್ಮೂರ್ ಎಕ್ಸ್‍ಪ್ರೆಸ್ ನಿಮ್ಮೂರ್ ಅಭಿಯಾನ!. ನಿಮ್ಮ ಊರಿನ ಬಗ್ಗೆ ಪ್ರತಿಯೊಬ್ಬರು ಬರೆಯಬಹುದು, ದುಡಿಯಬಹುದು, ಗಳಿಸಬಹುದು, ಹೇಗೆ..? ಶೀಘ್ರದಲ್ಲಿ ನಿರೀಕ್ಷಿಸಿ..!
ನೀವೂ ಕಳುಹಿಸಿ..ನಿಮ್ಮವರಿಗೂ ತಿಳಿಸಿ..!ನಿಮ್ಮ ಸಮಸ್ಯೆಗೆ ನಮ್ಮೂರ್ ಎಕ್ಸ್‍ಪ್ರೆಸ್ ದನಿಸುದ್ದಿಯ ಜತೆಗಾರನಾಗಿ ನಿಮ್ಮ ಜೊತೆ ನಾವಿದ್ದೇವೆ… ನಮ್ಮೂರ್ ಎಕ್ಸ್‍ಪ್ರೆಸ್. ಕಳೆದ 3 ವರ್ಷದಿಂದ ಕರ್ನಾಟಕ ಗ್ರಾಮೀಣ ಮಾಧ್ಯಮ ಕ್ಷೇತ್ರದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆ. 25,000ಕ್ಕೂ ಅಧಿಕ ಸುದ್ದಿಗಳನ್ನು ಈವರೆಗೆ ಪ್ರಕಟ ಮಾಡಿದೆ. ಸಾವಿರಾರು ಸುದ್ದಿಗಳ ಮೂಲಕ ಜನರ ಸಮಸ್ಯೆಗೆ ದನಿಯಾಗಿದೆ. ನೂರಾರು ಸಾಧಕರು, ಪ್ರತಿಭೆಗಳ ಜತೆ ಜತೆಗೆ ಕೈಹಿಡಿದು ನಡೆದುಕೊಂಡು ಬಂದಿದೆ. ಆರ್ಥಿಕ ಸಮಸ್ಯೆ, ಕರೋನಾ ಎಫೆಕ್ಟ್ ನಡುವೆಯೂ ಒಂದು ದಿನವೂ ಎದೆಗುಂದದೆ ಸಂಸ್ಥೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತನ್ನ ಕೆಲಸ ಮಾಡಿದೆ. ಈಗ ಮುಂದಿನ ದಿನಗಳಲ್ಲಿ ನಿಮ್ಮ ದನಿಯಾಗಿ ಕೆಲಸ ಮಾಡಲು ಪ್ರತಿ ಜಿಲ್ಲೆಗೆ ಬಂದಿದ್ದೇವೆ. ಸುದ್ದಿ ಅಂದರೆ ಬರೀ ರಾಜಕೀಯ ಅಲ್ಲ. ಜನರ ದನಿಯಾಗಬೇಕು ಎಂಬ ಹಂಬಲದೊಂದಿಗೆ ಪತ್ರಿಕೋದ್ಯಮ, ನವೋದ್ಯಮ ಹಾಗೂ ಇತರೆ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ಯುವ ಸಮುದಾಯ ಕಟ್ಟಿದ ಸಂಸ್ಥೆ ನಮ್ಮೂರ್ ಎಕ್ಸ್‍ಪ್ರೆಸ್.ನಿಮ್ಮೂರ್ ಎಂಬ ಕಾಲಂನಲ್ಲಿ ನೀವೂ ನಿಮ್ಮ ಊರಿನ ಸಮಸ್ಯೆ, ಅಭಿವೃದ್ಧಿ,…
ಜಂಬೂ ಸವಾರಿಗೆ ಸಾಂಸ್ಕøತಿಕ ನಗರಿ ಸಜ್ಜುಮೈಸೂರು ಸೇರಿ ಎಲ್ಲೆಡೆ ಆಯುಧ ಪೂಜೆ ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯನ್ನು ಭಾನುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕವಾಗಿ ನೆರವೇರಿಸಿದ್ದು, ಸೋಮವಾರದ ದಸರಾ ಮೇಲೆ ಇಡೀ ನಾಡಿನ ಕಣ್ಣು ಇದೆ.ಕರೋನಾ ಹಿನ್ನೆಲೆ ಸರಳ ದಸರಾ ಆಚರಣೆ ಮಾಡಲಿದ್ದು, ಇಷ್ಟು ವರ್ಷದಂತೆ ರಂಗು ಇರಲ್ಲ. ಭಾನುವಾರ ಮುಂಜಾನೆ ಅರಮನೆಯ ಆಯುಧಗಳನ್ನು ರಥ ವಾಹನದಲ್ಲಿ ಆನೆ, ಕುದುರೆ, ಒಂಟೆ ಮತ್ತು ಹಸುವಿನೊಡನೆ ಸೋಮೇಶ್ವರ ದೇವಾಲಯಕ್ಕೆ ತರಲಾಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಾಜ ಮಹಾರಾಜರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳು, ಕಾರುಗಳು ಸೇರಿದಂತೆ ಆನೆ, ಕುದುರೆ, ಒಂಟೆ, ಹಸುವಿಗೂ ಪೂಜೆ ಸಲ್ಲಿಸಿದರು. ಮಂಗಳವಾದ್ಯ ಹಾಗೂ ಪೆÇಲೀಸ್ ಬ್ಯಾಂಡ್ ಸಂಗೀತದ ಹಿಮ್ಮೇಳದಲ್ಲಿ ಯದುವೀರ್ ಅವರು ಆಯುಧ ಪೂಜೆ ನೆರವೇರಿಸಿದರು. ಜನರಿಗೆ ಎದುರಾಗಿರುವ ಕೊರೋನಾ ಸಂಕಷ್ಟದಿಂದ ಮುಕ್ತ ಮಾಡಿ ಸುಖ, ಸಮೃದ್ಧಿ ನೆಲೆಸಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮೈಸೂರು:ದಸರಾಕ್ಕೆ ಸಜ್ಜು!: ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ…
ಒಂದು ದಿನದಲ್ಲಿ 32 ಮಂದಿ ಕೊರೋನಾಗೆ ಬಲಿಬೆಂಗಳೂರು ಒಂದರಲ್ಲೇ 2,468 ಹೊಸ ಪ್ರಕರಣ! ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ 8 ಲಕ್ಷದ ಗಡಿ ದಾಟಿದೆ. ಭಾನುವಾರ 4,439 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಕೊರೋನಾ ವೈರಸ್‍ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 2468 ಮಂದಿ ಸೇರಿದಂತೆ ರಾಜ್ಯದಲ್ಲಿ 4439 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,02817ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 32 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,905ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,468 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,25,773ಕ್ಕೆಕ್ಕೆ ಏರಿಕೆಯಾಗಿದೆ. ನಗರದಲ್ಲಿ ಭಾನುವಾರ 20 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.10,106 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 7,10,843ಕ್ಕೆ ಏರಿಕೆಯಾಗಿದೆ. 81,050 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ…
ಕರೋನಾ ನಿಯಮ ಪಾಲನೆ ಕಡ್ಡಾಯಆಡಳಿತಕ್ಕೆ ಸರ್ಕಾರದ ಗೈಡ್‍ಲೈನ್ ಬೆಂಗಳೂರು: ಶಾಲಾ-ಕಾಲೇಜು ಕರೋನಾ ವೈರಸ್ ಭೀತಿಯಿಂದ ಬಂದ್ ಬಳಿಕ ನವೆಂಬರ್ 17ರಿಂದ ಎಲ್ಲಾ ಡಿಗ್ರಿ ಕಾಲೇಜುಗಳು ಆರಂಭವಾಗಲಿದೆ. ಇದಕ್ಕೆ ಈಗಾಗಲೇ ಸರ್ಕಾರದ ಕಡೆಯಿಂದ ಸಿದ್ಧತೆ ನಡೆದಿದೆ. ಜತೆಗೆ ಎಲ್ಲಾ ಆಡಳಿತ ಮಂಡಳಿಗಳಿಗೂ ಸರ್ಕಾರ ನಿಯಮ ಪಾಲನೆ ಕಡ್ಡಾಯಗೊಳಿಸಿದೆ. ಸರ್ಕಾರ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಪ್ರಾರಂಭ ಮಾಡುವುದಾಗಿ ನಿರ್ಣಯಿಸಲಾಗಿದೆ. ಮಾರ್ಗಸೂಚಿ ಪಾಲನೆಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹೆಗಲಿಗೆ ಹಾಕಲಾಗಿದೆ. ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ನವೆಂಬರ್ 17ರಿಂದ ಎಂಜಿನಿಯರಿಂಗ್, ಡಿಪೆÇ್ಲಮಾ, ಪದವಿ ಕಾಲೇಜು ಪ್ರಾರಂಭ ಮಾಡವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಆನ್ ಲೈನ್, ಆಫ್ ಲೈನ್ ತರಗತಿ ಪಡಿಯೋ ಅವಕಾಶ ವಿದ್ಯಾರ್ಥಿಗೆ ಬಿಟ್ಟಿದ್ದಾಗಿದೆ. ಕಾಲೇಜಿಗೆ ಬರೋರು ರಿಜಿಸ್ಟರ್ ಮಾಡಿಕೊಳ್ಳಬೇಕು. ಅಲ್ಲದೆ ಪೆÇೀಷಕರ ಒಪ್ಪಿಗೆ ಕಡ್ಡಾಯವಾಗಿದೆ. ಕಾಲೇಜು ಬರೋರಿಗೆ ಇಲಾಖೆ ವ್ಯವಸ್ಥೆ ಮಾಡುತ್ತೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮದ ವ್ಯವಸ್ಥೆ ಮಾಡುವುದಾಗಿ ಸರ್ಕಾರದ ಮಟ್ಟದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಜಿಸಿ…
ಆಯುಧ ಪೂಜೆ ಮಾಡಿ ಪೂಜಿಸಿದ ಜನದೇವಾಲಯದಲ್ಲಿ ಪೂಜೆ: ಸರಳ ಮೆರವಣಿಗೆಹುಲಿವೇಷ ಮಾತ್ರ ರಂಗು: ಕರೋನಾ ಗುಂಗು ತೀರ್ಥಹಳ್ಳಿ: ಕರೋನಾ ಹಿನ್ನೆಲೆ ಈ ಸಲ ದಸರಾ ಹಬ್ಬ ಸಂಭ್ರಮ ಕಳೆದುಕೊಂಡಿದೆ. ಎಲ್ಲೆಡೆ ಸರಳ ದಸರಾ ಆಚರಣೆ ಮಾಡಲಾಗುತ್ತದೆ. ಈ ನಡುವೆ ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಈ ಸಲ ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಪ್ರಾರ್ಥನೆ, ದೇವಸ್ಥಾನದಲ್ಲಿ ಪಂಚಾಮೃತ, ರಾಮೇಶ್ವರನಿಗೆ ರುದ್ರಾಭಿಷೇಕ ನಡೆಯಲಿದೆ.12 ಗಂಟೆಗೆ ಮಹಾ ಮಂಗಳಾರತಿ, ಚಂಡಿಕಾಹೋಮದ ಪೂರ್ಣಾಹುತಿ, ಸಂಜೆ 4 ಗಂಟೆಗೆ ದೇಗುಲದಿಂದ ಪಲ್ಲಕ್ಕಿ ಉತ್ಸವ, ಹುಲಿವೇಷ, ಚಂಡೆ ವಾದ್ಯದ ಮೆರವಣಿಗೆಯೊಂದಿಗೆ ಸಂಜೆ 6ಕ್ಕೆ ಕುಶಾವತಿ ತಲುಪಲಿದೆ. ಈ ಅಲ್ಲಿ ಪೂಜೆ ಬಳಿಕ ಬನ್ನಿ ಮುಡಿಯಲಾಗುತ್ತದೆ.ಆಯುಧ ಪೂಜೆ ಸಂಭ್ರಮ: ತೀರ್ಥಹಳ್ಳಿಯ ಪಟ್ಟಣ ಸೇರಿ ಹಳ್ಳಿ ಹಳ್ಳಿಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಸರಳವಾಗಿ ಆಚರಣೆ ಮಾಡಲಾಯಿತು. ಪ್ರತಿಯೊಂದು ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಪೂಜೆ ನಡೆಯಿತು. ಅಲಂಕಾರ, ದೀಪಾಲಂಕಾರದ ಮೂಲಕ ಸಿಟಿ ರಂಗೇರಿತ್ತು. ಧರ್ಮಸ್ಥಳ ಸಂಘದ ಕಚೇರಿ ಸೇರಿ ಎಲ್ಲಾ…