ಶಿವಮೊಗ್ಗ ಕಾಂಗ್ರೆಸ್ ಸೇವಾದಳದ ಸಹ ಸಂಚಾಲಕರಾಗಿ ಸುಭಾಷ ಕುಲಾಲ್ ತೀರ್ಥಹಳ್ಳಿ: ತೀರ್ಥಹಳ್ಳಿಯ ಸಮಾಜಪರ ಚಿಂತಕ, ಯುವ ನಾಯಕ, ಜನಪರ ಹೋರಾಟಗಾರ ಮೇಲಿನ ಕುರುವಳ್ಳಿಯ ಸುಭಾಷ್ ಕುಲಾಲ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.ತೀರ್ಥಹಳ್ಳಿಯ ಕ್ರಿಯಾಶೀಲ ಯುವ ಮುಖಂಡರಾಗಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮೂಲಕ ಪಕ್ಷದ ಸಂಘಟನೆಗೆ ಸೇವೆ ಸಲ್ಲಿಸುತ್ತಿರುವ ಸುಭಾಷ್ ಕುಲಾಲ್ ಅವರನ್ನು ನೇಮಿಸಿ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸೋಶಿಯಲ್ ಮಿಡಿಯಾ ಕೋ ಆರ್ಡಿನೇಟರ್ ಸುಭಾಷ್ ಬಾಬು ಆದೇಶ ಪ್ರಕಟಿಸಿದ್ದಾರೆ. ಸುಭಾಷ್ ಕುಲಾಲ್ ಅವರ ಸೇವೆ ಪರಿಗಣಿಸಿ ಅವಕಾಶ ಕಲ್ಪಿಸಿರುವ ರಾಷ್ಟ್ರೀಯ ನಾಯಕರನ್ನು ಯುವ ಕಾಂಗ್ರೆಸ್ ಪದಾಧಿಕಾರಿಗಳು ಅಭಿನಂದಿಸಿ ಕೃತಜ್ಞತೆ ಅರ್ಪಿಸಿದ್ದಾರೆ.ಸುಭಾಷ್ ಕುಲಾಲ್ ಕಳೆದ 5 ವರ್ಷದಿಂದ ತಾಲೂಕಿನಲ್ಲಿ ಸಮಾಜಪರ ಹೋರಾಟ, ಕ್ರಿಯಾಶೀಲ ಚಿಂತನೆ ಮೂಲಕ ಹೆಸರು ಮಾಡಿದ್ದಾರೆ. ಗ್ರಾಮ ಮಟ್ಟದಲ್ಲಿರುವ ಸಮಸ್ಯೆಗಳನ್ನು ತೋರಿಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ಹೆಸರು ಮಾಡಿರುವ ಕುಲಾಲ್ ಸರ್ಕಾರಿ ಕಾರ್ಯಕ್ರಮಗಳು,…
Author: Nammur Express Admin
ಶೋಭಾಯಾತ್ರೆ, ಧಾರ್ಮಿಕ ಸಭೆ ಈ ಸಲ ಇಲ್ಲ ಚಿಕ್ಕಮಗಳೂರು: ಶ್ರೀ ರಾಮ ಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನವನ್ನು ನ.22ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಶೋಭಾಯಾತ್ರೆ, ಧಾರ್ಮಿಕ ಸಭೆ ಮೊದಲಾದವನ್ನು ಕೈ ಬಿಡಲಾಗಿದೆ. ನ.23ರಂದು ದತ್ತಪೀಠ ಹಿಂದುಗಳಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಪ್ರತಿ ಮನೆಯಲ್ಲಿ ದೀಪೆÇೀತ್ಸವ ಹಮ್ಮಿಕೊಳ್ಳಲಾಗುವುದು. ನ.24ರಂದು 10 ಸಾವಿರ ಮಂದಿಯ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಗುವುದು. ನ.25ರಂದು ಪಡಿ ಸಂಗ್ರಹಿಸಿ ಕರೋನಾ ಮತ್ತು ಪ್ರವಾಹ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದರು. ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಉಪಾಧ್ಯಕ್ಷ ಮಹೇಶ್ ಕುಮಾರ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾ ಸೇನೆಯ ಜಿಲ್ಲಾಧ್ಯಕ್ಷ ಶಾರದಮ್ಮ ಇದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ “ಗ್ರೀನ್ ಸಿಗ್ನಲ್”ನ.11ರ ಒಳಗೆ ಚುನಾವಣೆ: ಅಧಿಕಾರ ಸ್ವೀಕಾರಇನ್ನೂ ಕೆಲವೆಡೆ ಚುನಾವಣೆ ಆಗಿಲ್ಲ: ಜನತೆಗೆ ಸಂಕಷ್ಟ ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಈ ಮೂಲಕ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದರ ಬೆನ್ನಲ್ಲೇ ನವೆಂಬರ್ 11ರೊಳಗೆ ಸ್ಥಳೀಯ ಸಂಸ್ಧೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆ ರಾಜ್ಯದ ಡಿಸಿ, ಎಸಿ, ತಹಶೀಲ್ದಾರ್ ಗಳಿಗೆ ಆದೇಶ ಹೊರಡಿಸಿದ್ದು, ಹೈಕೋರ್ಟ್ ಸೂಚನೆಯ ಮೇರೆಗೆ ನವೆಂಬರ್ 11ರ ಒಳಗೆ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಸೂಚಿಸಿದೆ.ಹೀಗಾಗಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಸಂಬಂಧ ನವೆಂಬರ್ 11ರ ಒಳಗೆ ಚುನಾವಣೆ ನಡೆಯಲಿದೆ. ಈ ಮೂಲಕ ಸದ್ಯದಲ್ಲಿಯೇ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮೇಲ್ವಿಚಾರಣಾ ಸಮಿತಿ ರಚನೆ: ಮುಂದಿನ ವಾರ ಮೊದಲ ಸಭೆಮುಜರಾಯಿ ವಶಕ್ಕೆ ಸಿಗಂದೂರು ದೇವಸ್ಥಾನ?! ಸಾಗರ: ಪ್ರಸಿದ್ಧ ಶಕ್ತಿಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಅರ್ಚಕರು ಮತ್ತು ಧರ್ಮದರ್ಶಿಗಳ ಶೀತಲಸಮರ ತಾರಕಕ್ಕೇರಿ ಇದೀಗ ನ್ಯಾಯಾಲಯದಲ್ಲಿ ಸಂಧಾನ ನಡೆದಿದೆ. ಈ ನಡುವೆ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಿತಿ ರಚಿಸಿದೆ. ದೇಗುಲದ ಆಡಳಿತಕ್ಕೆ ಸಲಹೆ ನೀಡಲು ಮತ್ತು ಮೇಲ್ವಿಚಾರಣೆಯ ಉದ್ದೇಶದಿಂದ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಮುಂದಿನ ವಾರ ಸಮಿತಿಯ ಮೊದಲ ಸಭೆ ನಡೆಯಲಿದೆ.ದೇವಸ್ಥಾನದ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ದೇವಸ್ಥಾನಲ್ಲಿ ಯಾವುದೆ ಗೊಂದಲ ಆಗಬಾರದು ಎಂದು ತಡೆಯುವುದು ಇದರ ಉದ್ದೇಶ ಎನ್ನಲಾಗಿದೆ. ಸಿಗಂದೂರು ದೇಗುಲವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂಬ ವಾದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಳೆದು ತೂಗಿ ಸಮಿತಿ ರಚಿಸಿ ಜಾಣ ಹೆಜ್ಜೆ ಇಟ್ಟಿದೆ.ಮುಜರಾಯಿ ವಶಕ್ಕೆ ಸಿಗಂದೂರು ದೇವಸ್ಥಾನ?: ಈಗಿನ ವಿದ್ಯಮಾನ ಹಾಗೂ ಸರ್ಕಾರದ ಕೆಲ ಮೂಲಗಳ ಮಾಹಿತಿ ಪ್ರಕಾರ ಶೀಘ್ರದಲ್ಲಿ ದೇವಸ್ಥಾನವನ್ನು ಮುಜರಾಯಿಗೆ ಹಸ್ತಾಂತರಿಸುವ…
ಪಶ್ಚಿಮ ಪದವೀಧರ ಕದನ ಜೋರುನಮ್ಮೂರ್ ಎಕ್ಸ್‍ಪ್ರೆಸ್ ಗ್ರೌಂಡ್ ರಿಪೋರ್ಟ್..! ಹುಬ್ಬಳ್ಳಿ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ದಿನಗಳು ಬಾಕಿ ಇರುವಾಗ ಕೈ, ಕಮಲ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ಫೈಟ್ ಭರ್ಜರಿಯಾಗಿ ಕಂಡು ಬರುತ್ತಿದ್ದು, ಚುನಾವಣಾ ಅಖಾಡ ರಂಗೇರ ತೊಡಗಿದೆ.ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಕಣದಲ್ಲಿದ್ದರೂ ಪಕ್ಷದ ವರಿಷ್ಠರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದರ ಪರಿಣಾಮ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಿಸಿದೆ.ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ಹೊಂದಿರುವ ಬಸವರಾಜ ಗುರಿಕಾರ ಈ ಬಾರಿ ಗೆಲುವು ತಮ್ಮದೇ ಎನ್ನುತ್ತಿದ್ದಾರೆ.ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ, ಎರಡನೇ ಬಾರಿ ಅದೃಷ್ಟವನ್ನು ಪಣಕ್ಕೊಡಿದ್ದು, ಮೊದಲ ಅವಧಿಯ ಆರು ವರ್ಷಗಳ ಕಾಲ ಸರಕಾರಿ ನೌಕರರಿಗೆ ಹಾಗೂ ನಿರುದ್ಯೋಗ ಪದವೀಧರರಿಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಮತದಾರರ ಮನವೊಲಿಕೆ ಮುಂದಾಗಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ.ಕುಬೇರಪ್ಪ ಈ ಕ್ಷೇತ್ರದಲ್ಲಿ ಮೂರು ಬಾರಿ ಸೋಲುಂಡಿದ್ದು ಈ ಬಾರಿ…
ಶಿವಮೊಗ್ಗದ ಸಕ್ರೇಬೈಲಿನ ಆನೆ ಸಾವು ಶಿವಮೊಗ್ಗ: ಕಾಡಾನೆ ಸಲಗವೊಂದು ತಿವಿದ ಪರಿಣಾಮ ಸಾಕಾನೆಯೊಂದು ಶಿವಮೊಗ್ಗದ ಸಕ್ರೇಬೈಲಿನ ಬಳಿ ಕಾಡಲ್ಲಿ ಮೃತಪಟ್ಟಿದೆ.35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದಲ್ಲಿದ್ದು, ಶುಕ್ರವಾರ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡಾನೆಯೊಂದು ಏಕಾಏಕಿ ರಂಗ ಆನೆಯ ಮೇಲೆರಗಿದೆ. ಸರಪಳಿಯಿಂದ ಕಟ್ಟಿ ಹಾಕಿದ್ದರಿಂದ ಪ್ರತಿರೋಧ ತೋರಲಾಗದೆ ರಂಗ ಸುಮ್ಮನೆ ನಿಂತಿದೆ. ಇದರಿಂದ ದಂತ ತಿವಿತಕ್ಕೆ ಬಲಿಯಾಗಿದೆ.
ಕೊಲೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ಕೊಲೆ…! ಮಂಗಳೂರು: ಮಂಗಳೂರಿನ ಬಿ.ಸಿ.ರೋಡ್‍ನ ಫ್ಲ್ಯಾಟ್ ಒಂದರಲ್ಲಿ ನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೆÇಲೀಸ್ ಮೂಲಗಳ ಪ್ರಕಾರ ಬಂಟ್ವಾಳ ಸತೀಶ ಕುಲಾಲ್ ಹಾಗೂ ಕಿನ್ನಿಗೋಳಿಯ ಗಿರೀಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರು ಕೇರಳದಿಂದ ಬಂಟ್ವಾಳಕ್ಕೆ ಬರುತ್ತಿರುವ ಮಾಹಿತಿ ಪಡೆದ ಪೆÇಲೀಸರು ಮುಡಿಪು ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. 3 ದಿನಗಳ ಹಿಂದೆ ಬಂಟ್ವಾಳದ ಅಪಾರ್ಟಮೆಂಟ್‍ನಲ್ಲಿ ಸುರೇಂದ್ರ ಬಂಟ್ವಾಳ ಕೊಲೆಯಾಗಿತ್ತು. ನಂತರ ಸುರೇಂದ್ರ ಬಂಟ್ವಾಳನ ಆಪ್ತ ಎನ್ನಲಾದ ಸತೀಶ್ ಎಂಬಾತ ಅಡಿಯೊ ಕಳುಹಿಸಿದ್ದು, ಸುರೇಂದ್ರ ಬಂಟ್ವಾಳ ಕೊಲೆ ಮಾಡಿರುವುದು ನಾನೇ. ಇದು ಉಡುಪಿಯ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ಎಂದು ತಿಳಿಸಿದ್ದ. ಆದಾದ ನಾಲ್ಕು ದಿನದ ಬಳಿಕ…
ಎಲ್ಲೆಲ್ಲೂ ನೀರು: ಐಟಿ ಸಿಟಿಗೆ ಕಂಟಕಪ್ಲಾನ್ ಇಲ್ಲದ ಸಿಟಿ ಎಷ್ಟು ಸೇಫ್..? ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಎಲ್ಲರೂ ಸೇಫ್ ಅಂತಾರೆ..ಆದರೆ ಸ್ಮಾರ್ಟ್ ಸಿಟಿ ಬೆಂಗಳೂರು ಒಂದು ಕಡೆ ಕರೋನಾ ಇನ್ನೊಂದು ಕಡೆ ಮಳೆಯಿಂದ ನಲಗುತ್ತಿದೆ. ಬೆಂಗಳೂರು ಹೆಸರು ಕೂಡ ನೀರಿನಲ್ಲಿ ಕೊಚ್ಚಿ ಹೋಗುತತ್ತಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಂತೆ ಬೆಂಗಳೂರಲ್ಲೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದೆ. ಎಲ್ಲಾ ಕಡೆ ನರಕದರ್ಶನವಾಗುತ್ತಿದೆ. ಗಲೀಜು, ಕೊಳೆ ಕಾಣುತ್ತಿದೆ. ಮಳೆಗಾಲದಲ್ಲಿ ತೀವ್ರ ಮಳೆಗೆ, ಪ್ರವಾಹ ಉಂಟಾದರೆ ಏನು ಮಾಡಬೇಕು, ಯಾವ ರೀತಿ ಸಜ್ಜಾಗಬೇಕು ಎಂದು ಅಧಿಕಾರಿಗಳು, ಸರ್ಕಾರ ಯೋಚಿಸಿ ಅದರಂತೆ ನಡೆದುಕೊಂಡರೆ ನಿಜವಾದ ಸ್ಮಾರ್ಟ್ ಸಿಟಿಯಾಗುತ್ತದೆ. ಆದರೆ ಎಲ್ಲಾ ಕಡೆ ಕಟ್ಟಡ, ರಾಜಕಾಲುವೆ ಒತ್ತುವರಿ ಇದೀಗ ನಗರವನ್ನೇ ನುಂಗುವ ಹಂತಕ್ಕೆ ತಂದು ನಿಲ್ಲಿಸಿದೆ.ಬಟ್ಟೆಬರೆ, ಆಹಾರ ಪದಾರ್ಥಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.ನಮ್ಮಲ್ಲೀಗ ಏನೂ ಉಳಿದಿಲ್ಲ, ಸರ್ಕಾರ ಏನು ಮಾಡುತ್ತದೆ, ಅಕ್ರಮ ಲೇ ಔಟ್‍ಗಳು ಕಟ್ಟುವಾಗಲೇ ಸರ್ಕಾರ ಅಂಥವರ…
ಮೊದಲ ದಿನವೇ ಗ್ರಾಹಕರ ಜಾತ್ರೆ: ಖರೀದಿಗೆ ಫುಲ್‍ರಷ್ಆಗುಂಬೆ ರಸ್ತೆಯಲ್ಲಿ ಉದ್ಘಾಟನೆ: ವಿಭಿನ್ನ ಚಿನ್ನಾಭರಣ ಬ್ಯುಸಿನೆಸ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ತೀರ್ಥಹಳ್ಳಿ: ದೇಶದ ಹೆಸರಾಂತ ಚಿನ್ನಾಭರಣಗಳ ಮಳಿಗೆ ಆಭರಣ ಜ್ಯುವೆಲ್ಲರ್ಸ್ ತೀರ್ಥಹಳ್ಳಿಯಲ್ಲಿ ಶನಿವಾರ ಆರಂಭಗೊಂಡಿದೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣ ಸಮೀಪದ ಎಚ್‍ಡಿಎಫ್‍ಸಿ ಬ್ಯಾಂಕ್ ಮುಂಭಾಗದ ಕಣ್ಮಣಿ ಕಟ್ಟಡದಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಮಳಿಗೆ ಗ್ರಾಹಕರಿಂದ ತುಂಬಿ ಹೋಗಿತ್ತು. ದಸರಾ ಹಾಗೂ ವಿಜಯ ದಶಮಿ ಹಬ್ಬದ ಅಂಗವಾಗಿ ಜನತೆ ಚಿನ್ನ ಖರೀದಿಗೆ ಆಗಮಿಸಿದ್ದರು. ಉಡುಪಿ, ಶಿವಮೊಗ್ಗ, ಮಂಗಳೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಬೈಂದೂರು, ಬ್ರಹ್ಮಾವರ, ಚಿಕ್ಕಮಗಳೂರು, ಪಡುಬಿಡ್ರಿ, ಕುಮಟಾ, ಬೆಳ್ತಂಗಡಿ, ಸಾಗರ, ಪಣಜಿ ಬಳಿಕ 15ನೇ ಮಳಿಗೆ ಇದಾಗಿದೆ. ಆಭರಣ ನೂತನ ಮಳಿಗೆಯು ರಾಧಾ ಎಂ.ಕಾಮತ್, ಮಧುಕರ ಎಸ್ ಕಾಮತ್, ದಯಾನಂದ ಕಾಮತ್ ಮಾರ್ಗದರ್ಶನದಲ್ಲಿ ನಡೆಯಿತು. ಸಂಸ್ಥೆಯ ಆಡಳಿತ ವರ್ಗದ ಪ್ರಮುಖರಾದ ಸುಭಾಷ್ ಎಂ ಕಾಮತ್, ಮಹೇಶ್ ಎಂ ಕಾಮತ್, ಸಂಧ್ಯಾ ಎಸ್ ಕಾಮತ್, ವೀಣಾ ಕಾಮತ್ ಇದ್ದರು. ಡಾ.ಅರುಣ್ ಕುಡ್ವ, ಕ್ಷಮಾ ಅರುಣ್…
ಗುಂಡಿಯಲ್ಲಿ ಬಿದ್ದ 3 ವಿದ್ಯಾರ್ಥಿಗಳ ಶವಪತ್ತೆ!ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ದುರ್ಘಟನೆ ಹಾವೇರಿ: ಸರ್ಕಾರ ಮತ್ತು ಕಾಮಗಾರಿ ಹಿಡಿದವನ ನಿರ್ಲಕ್ಷ್ಯದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ. ಬ್ಯಾಡಗಿ ಪಟ್ಟಣದ ಎರಡನೇ ನಂಬರ ಶಾಲೆಯ ಕಾಮಗಾರಿ ಪ್ರಗತಿ ಹಂತದಲ್ಲಿತ್ತು. ಅಲ್ಲಿಯೇ ದೊಡ್ಡದೊಂದು ಗುಂಡಿಯನ್ನು ಅಗೆಯಲಾಗಿತ್ತು. ಕರೋನಾದ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗದೇ ಇರುವ ಹಿನ್ನೆಲೆಯಲ್ಲಿ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದ ಗುಂಡಿಯಲ್ಲಿ ಬಿದ್ದಿದ್ದರು. ಹತ್ತು ಅಡಿಗೂ ಹೆಚ್ಚು ಆಳವಾದ ಗುಂಡಿಯಿದ್ದ ಕಾರಣ ಮಕ್ಕಳು ಸಾವನ್ನು ಕಂಡಿದ್ದಾರೆ. ಆಳೆತ್ತರದ ಗುಂಡಿ ನಿರಂತರ ಮಳೆಯಿಂದಾಗಿ ತುಂಬಿ ತುಳುಕುತ್ತಿದ್ದು ಅದರಲ್ಲೇ ಮಕ್ಕಳು ಬಿದ್ದಿದ್ದಾರೆ. ಶಾಲೆಯ ಮೈದಾನದಲ್ಲಿ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಗುತ್ತಿಗೆದಾರರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಮಕ್ಕಳಲ್ಲಿ ಇಬ್ಬರು ಹಾವೇರಿಯವರಾಗಿದ್ದು, ಒಬ್ಬರು ಬ್ಯಾಡಗಿಯರಾಗಿದ್ದಾರೆ. ಸರ್ಕಾಋ ತಲಾ 5…