ನಿವೃತ್ತ ಪ್ರಾಂಶುಪಾಲನ ಕೊಲೆ: ಹುಬ್ಬಳ್ಳಿಯಲ್ಲಿ ಘಟನೆಪತಿ ಬಿಟ್ಟು ತಂದೆ ಮನೆಗೆ ಪತ್ನಿ ಬಂದಿದ್ದಕ್ಕೆ ರೋಷಾವೇಷ ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನು ಕೊಚ್ಚಿ ಕೊಲೆಗೈದ ಘಟನೆ ಶನಿವಾರ ಬೆಳಗಿನ ಜಾವ ವಿದ್ಯಾನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಲಿಂಗರಾಜನಗರದ ಕಟ್ಟಿಮಂಗಳಮ್ಮ ದೇವಸ್ಥಾನ ಬಳಿವಿರುವ ನಿವಾಸದಲ್ಲಿ ನಡೆದಿದೆ.ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾಗಿದ್ದ ಎಸ್.ಎಸ್. ಮುಶಣ್ಣವರ ಕೊಲೆಯಾದ ದುರ್ದೈವಿ. ಗದಗಿನ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಹುಬ್ಬಳ್ಳಿಯಲ್ಲಿ ಬಂದು ನೆಲೆಸಿದ್ದರು. ಮುಶಣ್ಣವರ ಅವರ ಮಗಳ ಪತಿ ಸಂತೋಷ ಜಿ.ಎಸ್. ಎಂಬುವನೇ ಹತ್ಯೆಗೈದ ಆರೋಪಿ. ಸದ್ಯ ಸಂತೋಷನನ್ನು ಬಂಧಿಸಿರುವ ಪೆÇಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕುಟುಂಬವನ್ನೇ ಕೊಲ್ಲುವ ಬೆದರಿಕೆ!: ಸಂತೋಷ ಜಿ.ಎಸ್., ತನ್ನ ಪತ್ನಿಯೊಂದಿಗೆ ಆಗಾಗ ಜಗಳ ಕಾಯುತ್ತಿದ್ದ. ಇದರಿಂದ ಬೇಸತ್ತು ಆಕೆ, ಗಂಡನ ಮನೆ ತೋರೆದು ತವರು ಮನೆಯಲ್ಲಿ ವಾಸವಾಗಿದ್ದಳೆನ್ನಲಾಗಿದೆ. ಪತ್ನಿ ಹಾಗೂ ಮಕ್ಕಳು ತನ್ನೊಟ್ಟಿಗೆ ಇರದಿದ್ದರಿಂದ ರೊಚ್ಚಿಗೆದಿದ್ದ ಸಂತೋಷ, ತನ್ನ ಸಂಸಾರ ಹಾಳು ಆಗಲು ಪತ್ನಿಯ ತವರು ಮನೆಯವರೇ ಕಾರಣ ಎಂದು…
Author: Nammur Express Admin
ಮನೆ ಬಿಡಿಸಲು ಬಂದ ಅರಣ್ಯ ಅಧಿಕಾರಿಗೆ ಥಳಿತಮೂಡಿಗೆರೆಯಲ್ಲಿ ತಾರಕಕ್ಕೇರಿದ ಅರಣ್ಯ-ಮಾನವ ಸಂಘರ್ಷ ಚಿಕ್ಕಮಗಳೂರು: ಮಲೆನಾಡಿನಲ್ಲಿ ರೈತ ಹೋರಾಟ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ ಈಗ ಅಹಿಂಸಾರೂಪ ತಾಳುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಾಣ ಮಾಡಿದ್ದಾರೆಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುಡಿಸಲು ತೆರವಿಗೆ ಮುಂದಾಗಿದ್ದ ವೇಳೆ ಇಲಾಖೆಯ ಸಿಬ್ಬಂದಿಗಳ ಮೇಲೆ ಕುಟುಂಬಸ್ಥರು ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆಯವರು ಗುಡಿಸಲು ತೆರವಿಗೆ ಮುಂದಾಗಿದ್ದಾರೆ. ಆ ಜಾಗ ಅರಣ್ಯ ವ್ಯಾಪ್ತಿಗೆ ಸೇರಿದೆ ಅನ್ನೋ ವಾದ ಅರಣ್ಯ ಇಲಾಖೆಯದಾದರೆ, ಕುಟುಂಬಸ್ಥರು ಅದು ತಮಗೆ ಸೇರಿದ್ದೆಂದು ವಾದಿಸುತ್ತಿದ್ದಾರೆ. ಬಾಳೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೆÇಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಮತ್ತು ಜನರ ಬದುಕಿನ ಹೋರಾಟ ತಾರಕಕ್ಕೇರುವ ಸಾಧ್ಯತೆ ಇದೆ. ಇತ್ತ ಕಸ್ತೂರಿ ರಂಗನ್ ವರದಿ, ಜೈವಿಕ ಅರಣ್ಯ ಯೋಜನೆಗಳು ಮತ್ತಷ್ಟು ಕಂಗೆಡಿಸಿವೆ.
ರಾಜ್ಯದ ವಿವಿಧೆಡೆ ಮಳೆ: ಜನತೆ ತತ್ತರರಾಜಧಾನಿಯಲ್ಲಿ ಹಲವು ಕಡೆ ನೀರು ಬೆಂಗಳೂರು: ಬೆಂಗಳೂರು, ರಾಮನಗರ, ತುಮಕೂರು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಶನಿವಾರ ಬೆಂಗಳೂರು, ಹಾಸನ, ರಾಮನಗರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲೆಗಳಲ್ಲಿ ಭಾನುವಾರದವರೆಗೂ ವ್ಯಾಪಕ ಮಳೆಯಾಗಲಿದೆ. ಅ. 26, ಸೋಮವಾರದಂದು ರಾಜ್ಯದೆಲ್ಲೆಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅ.27ರಂದು ರಾಜ್ಯದ ಕೆಲವೆಡೆ ಮಾತ್ರ ಮಳೆಯಾಗಲಿದೆ. ಅಂದು ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಡಾ.ಸಿ.ಎಸ್ ಪಾಟೀಲ್ ಹೇಳಿದ್ದಾರೆ.ಕಳೆದ ಎರಡು ದಿನಗಳಿಂದ ಕರ್ನಾಟಕದ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಯಾದಗಿರಿ, ಬಾಗಲಕೋಟೆ, ಬೆಳಗಾವಿ ಮುಂತಾದೆಡೆ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾಸನದಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಈ ವಾರ ಕೂಡ ಬೆಂಗಳೂರಿನಲ್ಲಿ…
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕೊಚ್ಚಿ ಕೊಚ್ಚಿ ಕೊಲೆಕರಾವಳಿಯಲ್ಲಿ ಮತ್ತೆ ಹೆಚ್ಚಾದ ಕೊಲೆ: ಜನತೆಗೆ ಭಯ..! ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ಮತ್ತೋರ್ವ ರೌಡಿ ಶೀಟರ್ ಕೊಲೆಯಾಗಿದ್ದಾನೆ. ಬುಧವಾರ ಮಧ್ಯಾಹ್ನವಷ್ಟೆ ಬಂಟ್ವಾಳದ ರೌಡಿ ಶೀಟರ್, ನಟ ಸುರೇಂದ್ರ ಬಂಟ್ವಾಳ ಎಂಬಾತನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಘಟನೆ ಮಾಸುವ ಮುನ್ನವೇ ಎರಡನೇ ದಿನದಲ್ಲಿ ಕಲ್ಲಡ್ಕದ ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (27) ಎಂಬಾತನ ಕೊಲೆಯಾಗಿದ್ದು ಜನ ಆತಂಕಗೊಳ್ಳುವಂತೆ ಮಾಡಿದೆ. ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಸೇತುವೆ ಬಳಿ ಫಾರೂಕ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಘಾತ ನಡೆಸಿ ಬಳಿಕ ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕಡಿದು ಕೊಲೆ ನಡೆಸಿ ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ದುಷ್ಕರ್ಮಿಗಳು ಕೈ, ಕಾಲು, ಹೊಟ್ಟೆ, ಕುತ್ತಿಗೆ ಭಾಗಗಳಿಗೆ ಯದ್ವಾತದ್ವಾ ಕಡಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಉಮರ್ ಫಾರೂಕ್‍ನನ್ನು ಸುದ್ದಿ ತಿಳಿದು…
ಹಂತ ಹಂತವಾಗಿ ನಡೆಸಲು ಕೋರ್ಟ್ ಆದೇಶ ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಗ್ರಾ.ಪಂ.ಗಳಿಗೆ ಹಂತಹಂತವಾಗಿ ಚುನಾವಣೆ ನಡೆಸಲು ಸರ್ಕಾರವೇ ಮುಂದೆ ಬರಬೇಕಿತ್ತು. ಅದನ್ನು ಬಿಟ್ಟು ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಸರ್ಕಾರ ಕೇಳುತ್ತಿರುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ಸದ್ಯ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದ್ದು, ಕಡಿಮೆ ಪ್ರಕರಣಗಳಿರುವ ಜಿಲ್ಲೆ ಅಥವಾ ತಾಲೂಕುಗಳನ್ನು ಆಯ್ದುಕೊಂಡು ಹಂತ ಹಂತವಾಗಿ ಚುನಾವಣೆ ನಡೆಸಬಹುದು. ಸರ್ಕಾರ ಹಲವು ಶಾಲಾ ಕಾಲೇಜುಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಹೀಗಿರುವಾಗ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ? ಚುನಾವಣೆ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲವೇ? ಎಂದು ಕೋರ್ಟ್ ಪ್ರಶ್ನಿಸಿತು. ರಾಜ್ಯದಲ್ಲಿ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ವಿಧಾನಪರಿಷತ್ ಸದಸ್ಯ ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸಿಜೆ ಓಕ್ ನೇತೃತ್ವದ ವಿಭಾಗೀಯ ಪೀಠ, ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಅರ್ಜಿದಾರರ ವಾದ-ಪ್ರತಿವಾದ ಆಲಿಸಿ ತೀರ್ಪು…
ಭಾಷೆ, ಟೆಕ್ನಾಲಜಿ, ಜಾಣ್ಮೆ ಗೊತ್ತಿದ್ದವನೇ ಈಗ ಗುರುಕರೋನಾ ತುರ್ತು ಕಾರಣ ಆನ್‍ಲೈನ್ ಶಿಕ್ಷಣಕ್ಕೆ ಮಾರುಕಟ್ಟೆ ಕರೋನಾ ತುರ್ತು ಸಮಯದಲ್ಲಿ ಮಕ್ಕಳಿಗೆ ಟ್ಯೂಷನ್, ಎಜುಕೇಶನ್, ಸ್ಕಿಲ್ಸ್, ಹೊಸ ಕೋಸ್ರ್ಗಳ ಕಲಿಕೆ ಇತ್ಯಾದಿಗಳಿಗೆ ಆನ್ಲೈನ್ ಕ್ಲಾಸ್ ಮೊರೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಕಲಿಕೆ ಹಂಬಲ ಇದೆ. ಆದ್ದರಿಂದ ಹೊಸ ಮಾದರಿಯ ಶಿಕ್ಷಣ ಮತ್ತು ತರಬೇತಿ ಶುರುವಾಗುತ್ತಿದೆ.ಇದರಿಂದ ಸಹಜವಾಗಿ ಆನ್ಲೈನ್ ಟ್ಯೂಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವ ಅವಕಾಶ ದೊರಕುವುದರಿಂದ ಗೃಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾಟ್ಟೈರ್ಂ ಉದ್ಯೋಗವಾಗುತ್ತದೆ. ಈಗ ಆನ್ಲೈನ್ನಲ್ಲಿ ಹೊಸ ಹೊಸ ಕೋಸ್ರ್ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್ಲೈನ್ ಟ್ಯೂಟರ್ಗಳಿಗೆ ಉದ್ಯೋಗವಕಾಶ ಹೆಚ್ಚಾಗುತ್ತಿದೆ. ಆನ್ಲೈನ್ ಕೋರ್ಸ್ ನೀಡುವ ವಿವಿಧ ತಾಣಗಳಲ್ಲಿಜನರು ಹೊಸ ಹೊಸ ಕೋಸ್ರ್ಗಳನ್ನು ಕಲಿಯುತ್ತಿದ್ದಾರೆ. ಕೆಲವರು ಯೂಟ್ಯೂಬ್ ಟ್ಯುಟೋರಿಯಲ್ಗಳಿಗೆ ಭೇಟಿ ನೀಡುತ್ತಾರೆ. ಇನ್ನು ಕೆಲವರು ಲೈವ್ ಆನ್ಲೈನ್ ಕ್ಲಾಸ್ಗಳಲಿ ್ಲಕಲಿಯುತ್ತಾರೆ.ಕಲಿಕೆಗೆ ಇಂಟರ್ನೆಟ್ ಅನ್ನು ಅವಲಂಬಿಸುವವರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಲ್ಲಿ ಬೋಧನೆ ಮಾಡುವ…
ರೆಸ್ಯೂಮ್‍ನಲ್ಲೇ ನಿಮ್ಮ ಮಾಹಿತಿ ಸ್ಪಷ್ಟವಾಗಿರಬೇಕುಅನುಭವ, ಕೌಶಲ್ಯ ಬರೆಯಬೇಕು..ಕಾಟಾಚಾರದ ರೆಸ್ಯೂಮ್ ವೇಸ್ಟ್! ಮದುವೆ ಮಾಡಿ ನೋಡು…ಮನೆ ಕಟ್ಟಿ ನೋಡು…ಎಂಬ ಗಾದೆ ಹಿಂದಿತ್ತು. ಆದರೆ ಈಗ ಒಂದು ಕೆಲಸ ಪಡೆದು ನೋಡು ಎಂಬಂತಾಗಿದೆ.ಉದ್ಯೋಗ ದೇಶದ ದೊಡ್ಡ ಸಮಸ್ಯೆಯಾಗಿರುವಾಗ ಉದ್ಯೋಗ ಹುಡುಕಾಟ ರೆಸ್ಯೂಮ್ನಿಂದ ಆರಂಭವಾಗುತ್ತದೆ. ನೇಮಕಾತಿದಾರರು ಮೊದಲು ಪರಿಗಣಿಸುವ ದಾಖಲೆ ಎಂದರೆ ಅದು ರೆಸ್ಯೂಮ್. ಇನ್ನೂ ಸಂದರ್ಶನಕ್ಕೆ ಆಯ್ಕೆಯಾದ ನಂತರ ಕಾನ್ಫಿಡೆನ್ಸ್, ಸಂವಹನ ಕೌಶಲ್ಯ ಮತ್ತು ಇತರೆ ಕೌಶಲ್ಯಗಳು ಉದ್ಯೋಗಕ್ಕೆ ಆಯ್ಕೆಮಾಡಲು ಸಜ್ಜುಗೊಳಿಸುವ ಇತರೆ ಪ್ಲಸ್ ಪಾಯಿಂಟ್ಸ್!.ಉದ್ಯೋಗ ಗಿಟ್ಟಿಸುವ ವೇಳೆ ಅಭ್ಯರ್ಥಿಗಳು ತಮ್ಮನ್ನು ಉತ್ತಮ ಬ್ರ್ಯಾಂಡ್ ಮಾಡಿಕೊಳ್ಳುವುದು ಹೇಗೆ?, ಸ್ಟೇಟ್ಮೆಂಟ್ ಶಾರ್ಟ್ ಮತ್ತು ಆಕರ್ಷಕವಾಗಿರಬೇಕು. ಇದು ಇತರೆ ಅಭ್ಯರ್ಥಿಗಳಿಗಿಂತ ನಿಮ್ಮನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಅಣಿಗೊಳಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಕೆಲಸಕ್ಕೆ ಸಂಬಂಧಪಟ್ಟಂತೆ ಅಥವಾ ಮುಂದಿನ ಭವಿಷ್ಯದ ಗುರಿ ಸಂಬಂಧಪಟ್ಟಂತೆ ಅನನ್ಯವಾದ ವಾಕ್ಯವನ್ನು ರೆಸ್ಯೂಮ್ನಲ್ಲಿ ಬರೆಯಬೇಕು. ಶಿಕ್ಷಣ ಪಡೆಯುವ ಹಂತದಲ್ಲೇ ಅಥವಾ ಶಿಕ್ಷಣ ಮುಗಿಸಿದ ನಂತರವಾದರೂ ಸರಿ, ಕುಳಿತು ಒಂದು ಉತ್ತಮ ಪ್ಲಾನ್ ಅನ್ನು ಸಿದ್ಧತೆಗೊಳಿಸಬೇಕು. ಅಂದರೆ ಮುಂದೆ…
ಹೊಸ ತಂತ್ರಜ್ಞಾನ, ಕಾರ್ಯಕ್ಷಮತೆ, ಕೌಶಲ್ಯ ಇದ್ದವರಿಗೆ ಕೆಲಸದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಕಿಲ್ ಟ್ರೈನಿಂಗ್ ನವ ದೆಹಲಿ: ಒಂದ್ ಒಳ್ಳೆ ಕಂಪನಿಯಲ್ಲಿ ಕೆಲಸ ಬೇಕಾ…?. ಬರೀ ಮಾಕ್ರ್ಸ್, ರ್ಯಾಂಕ್ ಇದ್ರೆ ಸಾಲದು. ಹೊಸ ತಂತ್ರಜ್ಞಾನ, ಕಾರ್ಯಕ್ಷಮತೆ, ಕೌಶಲ್ಯ ಇರಬೇಕು. ಕಂಪನಿಯ ಟಾರ್ಗೆಟ್ ಜಾಣ್ಮೆಯಿಂದ ನಿಭಾಯಿಸಬೇಕು. ಉದಯೋನ್ಮುಖ ಟ್ರೆಂಡ್ ತಕ್ಕಂತೆ ಕೆಲಸ ಮಾಡಬೇಕು. ಇದು ಈಗ ಕಂಪನಿಗಳ ಬೇಡಿಕೆ.ಹೌದು. ಆಕ್ಸೆಂಚರ್, ಇನ್ಫೋಸಿಸ್, ಕಾಗ್ನಿಜೆಂಟ್, ಟೆಕ್ ಮಹೀಂದ್ರಾ, ಎಂಫಾಸಿಸ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಭವಿಷ್ಯದ ತಂತಜ್ಞಾನಕ್ಕೆ ತಕ್ಕಂತೆ ಸಜ್ಜುಗೊಳಿಸುತ್ತಿವೆ. ಗ್ಲೋಬಲ್ ಟೆಕ್ನಾಲಜಿ ಕಂಪನಿ ಆಕ್ಸೆಂಚರ್ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಶಾಖೆಯಲ್ಲಿ ಶೇ.85ರಷ್ಟು ಉದ್ಯೋಗಿಗಳ ಕೌಶಲವನ್ನು ಮೇಲ್ದರ್ಜೆಗೇರಿಸಿದೆ. ಆಕ್ಸೆಂಚರ್ ಉದ್ಯೋಗಿಗಳು ಡಿಜಿಟಲ್, ಕ್ಲೌಡ್, ಸೆಕ್ಯೂರಿಟ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಂತಹ ಹೊಸ ಐಟಿ ಸ್ಕಿಲ್ಸ್ ಕಲಿಯುತ್ತಿದ್ದಾರೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಉಳಿತಾಯವನ್ನು ಸ್ಕಿಲ್ ಕಲಿಕೆ ಮೇಲೆ ಹೂಡುವುದನ್ನು ಐಟಿ ಕಂಪನಿಗಳು ಅನುಸರಿಸುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಉದ್ಯೋಗ ಸಾಕಷ್ಟು ಪ್ರಶ್ನೆ ಹುಟ್ಟು…
ಕಂಪನಿಗಳಲ್ಲಿ ಇನ್ಮುಂದೆ ಆನ್‍ಲೈನ್ ಇಂಟರ್‍ವ್ಯೂ ಶುರುಗ್ರಾಮೀಣ ಭಾಗದ ಉದ್ಯೋಗಾಂಕ್ಷಿಗಳಿಗೆ ಹಿನ್ನಡೆ ಸಾಧ್ಯತೆ ನವ ದೆಹಲಿ: ಕರೋನಾ ವೈರಸ್ ಭಾರತದಲ್ಲಿ ಸುಮಾರು ಹತ್ತಾರು ಕೋಟಿಗೂ ಹೆಚ್ಚು ಉದ್ಯೋಗಕ್ಕೆ ಕುತ್ತು ತಂದಿದೆ. ವೈರಸ್ ಸೋಂಕಿನ ಅನಿಶ್ಚಿತತೆ ಮುಂದುವರೆದಿರುವುದರಿಂದ ಬಹುತೇಕ ಕಂಪನಿಗಳು ತಮ್ಮ ನೇಮಕಾತಿ ಕಾರ್ಯತಂತ್ರ ಬದಲಾಯಿಸುತ್ತಿವೆ. ಇದೀಗ ಕಂಪನಿಗಳು ಇಂಟಲಿಜೆಂಟ್ ಆಟೋಮೇಟೆಡ್ ಸಿಸ್ಟಮ್ಗಳನ್ನು ಬಳಸಲು ಆರಂಭಿಸಿದ್ದು, ರೆಸ್ಯೂಮ್ ಪರಿಶೀಲನೆ ಮತ್ತು ಸಂದರ್ಶನದ ಅನುಭವ ಬದಲಾಯಿಸಿವೆ. ನೇರ ಸಂದರ್ಶನಕ್ಕೆ ಬದಲಾಗಿ ದೂರದಿಂದಲೇ ಸಂದರ್ಶನ ನಡೆಸುವುದು ಸೇರಿದಂತೆ ಹಲವು ನೂತನ ಕಾರ್ಯತಂತ್ರಗಳನ್ನು ಕಂಪನಿಗಳು ಅನುಸರಿಸುತ್ತವೆ. ಇದು ಗ್ರಾಮೀಣ ಭಾಗದ ಉದ್ಯೋಗಾಂಕ್ಷಿಗಳಿಗೆ ಹಿನ್ನಡೆ ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಕಂಪನಿಗಳು ತುಂಬಾ ಸೀರಿಯಸ್ ಆಗಿ ಪರಿಗಣಿಸಿವೆ ಮತ್ತು ತಮ್ಮ ಉದ್ಯೋಗಿಗಳ ಆರೋಗ್ಯದ ಕುರಿತೂ ಹೆಚ್ಚಿನ ಕಾಳಜಿ ವಹಿಸುತ್ತಿವೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣದಿಂದ ಕಂಪನಿಗಳು ತಮ್ಮ ಒಟ್ಟಾರೆ ನೇಮಕ ಕಾರ್ಯತಂತ್ರವನ್ನು ವಚ್ರ್ಯುವಲ್ ವಿಧಾನಕ್ಕೆ ಬದಲಿಸಿವೆ. ಹೀಗಾಗಿ ಇನ್ಮುಂದೆ ನೇರ ಸಂದರ್ಶನಗಳು ಒಂದು ವರ್ಷಗಳ ಕಾಲ…
ಕೌಶಲ್ಯಾಧಾರಿತ ಉನ್ನತ ಹುದ್ದೆಗಳಿಗೆ ವೀಸಾ ನಕಾರಟೆಕ್ಕಿ, ರಿಸರ್ಚರ್, ಡಾಕ್ಟರ್ ಹುದ್ದೆಗಳು ಇನ್ನು ಡೌಟು? ವಾಷಿಂಗ್ಟನ್: ಕರೋನಾ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ನಷ್ಟದ ಹಿನ್ನೆಲೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರಕಾರ ತನ್ನ ವೀಸಾ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಉನ್ನತ ಮಟ್ಟದ ಕೌಶಲ್ಯದ ಅಗತ್ಯ ಇರುವ ಹುದ್ದೆಗಳಿಗೆ ಎಚ್-1ಬಿ ವೀಸಾವನ್ನು ನಿರಾಕರಿಸಲು ಪ್ರಸ್ತಾಪಿಸಿದೆ.ಮುಖ್ಯವಾಗಿ ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ಇದರಿಂದ ಸಮಸ್ಯೆಯಾಗಬಹುದು. ಸಾವಿರಾರು ಮಂದಿ ಭಾರತೀಯರ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕನ್ನರಿಗೆ ಉದ್ಯೋಗಗಳನ್ನು ಉಳಿಸಿಕೊಡುವ ನಿಟ್ಟಿನಲ್ಲಿ ವೀಸಾ ನೀತಿಯನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಟ್ರಂಪ್ ಸರಕಾರ ತಿಳಿಸಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಎರಡು ವಾರ ಬಾಕಿ ಇರುವಂತೆ ಈ ಘೋಷಣೆ ಹೊರಬಿದ್ದಿದೆ. ಅಮೆರಿಕದಲ್ಲಿ ಎಚ್-1ಬಿ ಸ್ಪೆಷಾಲಿಟಿ ಒಕ್ಯುಪೇಶನ್ಸ್ ಪದ್ಧತಿಯಡಿಯಲ್ಲಿ ವಿದೇಶಿಯರು ತಾತ್ಕಾಲಿಕ ಅವಧಿಗೆ ಅಮರಿಕದಲ್ಲಿ ಸೇವೆ ಸಲ್ಲಿಸಬಹುದು. ಭಾರತೀಯ ಕಂಪನಿಗಳು ಬಿ-1 ವೀಸಾ ಅಡಿಯಲ್ಲಿ ಅಮೆರಿಕಕ್ಕೆ ತಾತ್ಕಾಲಿಕವಾಗಿ ತಮ್ಮ ಉದ್ಯೋಗಿಗಳನ್ನು ಕಳಿಸಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದವು. ಈ ಬದಲಾವಣೆಯಿಂದ ಎಚ್-1 ಬಿ…