ಕರ್ನಾಟಕದಲ್ಲಿ 20,000 ಉದ್ಯೋಗ ಸೃಷ್ಟಿ..?10,255 ಕೋಟಿ ಬಂಡವಾಳ ಹೂಡಿಕೆ: ಸಿಎಂ ಟ್ವೀಟ್ ಬೆಂಗಳೂರು: ಕರೋನಾದಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಕಳೆದುಕೊಳ್ಳುತ್ತಾರೆ. ಹಳ್ಳಿ ಹಳ್ಳಿಗಳಲ್ಲೂ ಉದ್ಯೋಗ ಕಡಿತ ಭೀತಿ ಶುರುವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. 3 ತಿಂಗಳಲ್ಲಿ ಕರ್ನಾಟಕದಲ್ಲಿ 10,255 ಕೋಟಿ ಬಂಡವಾಳ ಹೂಡಿಕೆಯಾಗಿದ್ದು ಇದರಿಂದ ಸುಮಾರು 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ, ಕರ್ನಾಟಕ ಹೂಡಿಕೆದಾರರಿಗೆ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿ ಮುಂದುವರೆದಿದ್ದು 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್ಡಿಐ) ಆಕರ್ಷಿಸಿದೆ. ಕೊರೋನಾ ಸಾಂಕ್ರಾಮಿಕದ ಸವಾಲುಗಳ ನಡುವೆಯೂ, ಈ 3 ತಿಂಗಳಲ್ಲಿ ರಾಜ್ಯದಲ್ಲಿ 10,255 ಕೋಟಿ ರೂ. ಹೂಡಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Author: Nammur Express Admin
ಅದಾನಿ ಗ್ರೂಪ್ ಸೇರಿದ ಬಜಪೆ ವಿಮಾನ ನಿಲ್ದಾಣತಿಂಗಳಾಂತ್ಯದಿಂದ ನಿರ್ವಹಣೆ, ಅಭಿವೃದ್ಧಿ ಹೊಣೆ ಹೊಸದಿಲ್ಲಿ: ಮಂಗಳೂರು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಅ.31ರಂದು ಅದಾನಿ ಗ್ರೂಪ್ ಕೈಗೆತ್ತಿಕೊಳ್ಳಲಿದೆ.ನ.2 ಮತ್ತು 11ರಂದು ಕ್ರಮವಾಗಿ ಲಖನೌ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣದ ನಿರ್ವಹಣೆಯೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅದಾನಿ ಕಂಪನಿಗೆ ಹಸ್ತಾಂತರವಾಗಲಿದೆ.ಮೂರು ವಿಮಾನ ನಿಲ್ದಾಣಗಳ ಆಡಳಿತವನ್ನು ವಹಿಸಿಕೊಳ್ಳಲು ಅದಾನಿ ಗ್ರೂಪ್ಗೆ ನವೆಂಬರ್ 12ರ ಗಡುವು ನೀಡಲಾಗಿತ್ತು. 2019ರ ಫೆಬ್ರವರಿಯಲ್ಲಿ ಹರಾಜಿನ ಮೂಲಕ ಈ ಮೂರು ವಿಮಾನ ನಿಲ್ದಾಣಗಳು ಸೇರಿ 6 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ ಗೆದ್ದುಕೊಂಡಿತ್ತು. ಆದರೆ ಕರೋನಾ ಕಾರಣಕ್ಕೆ ಇದರಲ್ಲಿ ಮೂರು ಏಪೆರ್Çೀಟ್ರ್ಗಳ ನಿರ್ವಹಣೆಯನ್ನು ನಿಗದಿತ ಸಮಯಕ್ಕೆ ಗೌತಮ್ ಅದಾನಿ ಒಡೆತನದ ಕಂಪನಿ ವಹಿಸಿಕೊಂಡಿರಲಿಲ್ಲ. ಈಗಾಗಲೇ ಗುವಾಹಟಿ, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ನಿರ್ವಣೆಯನ್ನು ಅದಾನಿ ಗ್ರೂಪ್ ನಡೆಸುತ್ತಿದೆ. ಇದರ ಜೊತೆಗೆ ಮುಂಬಯಿ ವಿಮಾನ ನಿಲ್ದಾಣದ ನಿರ್ವಹಣೆಯನ್ನೂ ತನ್ನ ವಶಕ್ಕೆ ಪಡೆದುಕೊಳ್ಳಲು…
40,000 ರೂ.ದಾಟಿದ ಕ್ವಿಂಟಾಲ್ ಬಿಳಿ(ಚಾಲಿ) ಅಡಿಕೆಮಳೆ, ಕರೋನಾದಿಂದ ಈ ಸಲ ಅಡಿಕೆ ಕೊಯ್ಲು ಸಂಕಟ! ಮಂಗಳೂರು: ಕಳೆದ 2-3 ದಿನಗಳಿಂದ ಅಡಕೆ ಮಾರುಕಟ್ಟೆಯಲ್ಲಿ ಚಾಲಿ (ಬಿಳಿ) ಅಡಕೆಯ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಶಿ ಅಡಕೆಗಿಂತಲೂ (ಕೆಂಪು ಅಡಕೆ) ಚಾಲಿ ಅಡಕೆ ಧಾರಣೆ ಹೆಚ್ಚಾಗಿರುವುದು ಅಡಕೆ ಬೆಳಗಾರರ ವಲಯದಲ್ಲಿ ಸಂಚಲನ ಮೂಡಿಸಿದೆ.ಅಡಿಕೆಯ ಪ್ರಮುಖ ಅಡಕೆ ಮಾರುಕಟ್ಟೆಯಾದ ಯಲ್ಲಾಪುರದಲ್ಲಿ ಉತ್ತಮ ಚಾಲಿ ಅಡಕೆ ದರ ಕ್ವಿಂಟಾಲಿಗೆ ಸರಾಸರಿ 39 ಸಾವಿರ ರೂ. ಆಸುಪಾಸಿನಲ್ಲಿ ಇದೆ. ಇದೇ ರೀತಿಯ ದರ ಏರಿಕೆಯು ಶಿರಸಿ ಹಾಗೂ ಸಾಗರ, ಮಂಗಳೂರು ಮುಂತಾದ ಅಡಕೆ ಮಾರುಕಟ್ಟೆಗಳಲ್ಲೂ ಇದೆ.400 ಗಡಿ ದಾಟಿದ ಹೊಸ ಅಡಕೆ: ಚಾಲಿ ಅಡಕೆಯಲ್ಲಿ ಹಳೆಯ ಅಡಕೆ ದರ ಕೆಲ ದಿನಗಳ ಹಿಂದೆಯೇ ಕೆಜಿಗೆ 400 ರೂಪಾಯಿ ಆಸುಪಾಸಿಗೆ ತಲುಪಿತ್ತು. ಇದೀಗ ಕಳೆದ ಸೋಮವಾರ ಬಂಟ್ವಾಳದಲ್ಲಿ ಹಳೆ ಅಡಕೆ ದರ 410 ರೂ.ವರೆಗೆ ಏರಿಕೆಯಾಗಿದ್ದರೆ, ಶುಕ್ರವಾರವೇ ಬೆಳ್ತಂಗಡಿಯಲ್ಲಿ ಹಳೆ ಅಡಕೆ ರೂ.…
ಚಿನ್ನಾಭರಣ ಕದ್ದು ಪರಾರಿಯಾಗುವ ವೇಳೆ ಘಟನೆಮಹಿಳೆ ಆಸ್ಪತ್ರೆಗೆ ದಾಖಲು: ರಾಯಚೂರಲ್ಲಿ ಪ್ರಕರಣ ರಾಯಚೂರು: ಕಳ್ಳತನಕ್ಕೆ ಬಂದ ತಂಡ ಚಿನ್ನಾಭರಣ ಕಳವು ಮಾಡಲು ಮಹಿಳೆಯೊಬ್ಬಳ ಕಿವಿಯನ್ನೇ ಕತ್ತರಿಸಿದ ಅಪರೂಪದ ಘಟನೆ ರಾಯಚೂರು ತಾಲೂಕಿನ ಕುಕುನುರು ಗ್ರಾಮದಲ್ಲಿ ನಡೆದಿದೆ. ಕಳ್ಳತನಕ್ಕೆ ಆಗಮಿಸಿದ್ದ ಮೂವರು ಖದೀಮರು ನಗದು ಚಿನ್ನಾಭರಣ ಕಳವು ಮಾಡಿದ್ದು, ಇದಕ್ಕೆ ಅಡ್ಡಿಪಡಿಸಲು ಬಂದ ಮಹಿಳೆ ಕಿವಿಯನ್ನೇ ಕತ್ತರಿಸಿದ್ದಾರೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಳೆ ಸುರಿದ ಪರಿಣಾಮ ವಿದ್ಯುತ್ ಕಡಿತಗೊಂಡಿದ್ದ ವೇಳೆ ಕಳ್ಳರು ಗ್ರಾಮದ ಹನುಮಂತ್ರಾಯ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದು ಹಣ ನಗದು ಸೇರಿದಂತೆ ಕೆಲ ದಾಖಲೆಗಳನ್ನು ಕದಿದ್ದಾರೆ. ಈ ವೇಳೆ ಅಡ್ಡಬಂದ ಮಹಿಳೆಯ ಕವಿ ಕತ್ತರಿಸಿದ್ದಾರೆ. ಸ್ಥಳೀಯರೆಲ್ಲರೂ ಸೇರಿ ಕಳ್ಳರ ಗುಂಪಿನಲ್ಲಿದ್ದ ಅದೇ ಗ್ರಾಮದ ಮನೋಜ್ ಎನ್ನುವ ಯುವಕನನ್ನು ಹಿಡಿದ ಗ್ರಾಮಸ್ಥರು ಗಿಡಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆ ಪೆÇಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.
ರಾಯಚೂರು ಜಿಲ್ಲೆಯೊಬ್ಬಳು ಗಟ್ಟಿಗಿತ್ತಿ ಕೃಷಿ ಸಾಧಕಿಕುಂಟೆ ಹೊಡೀತಾಳೆ…ಬಿತ್ತನೆ ಮಾಡ್ತಾಳೆ ಈಕೆ.. ಲಿಂಗಸುಗೂರು(ರಾಯಚೂರು): ಹೆಣ್ಣೊಂದು ಕಲಿತರೆ ಊರೇ ಕಲಿತಂತೆ ಎಂಬ ಗಾದೆಯೊಂದಿತ್ತು. ಆದರೆ ಈಗ ಓದು ಕಲಿತವರೇ ಹೆಚ್ಚು. ಆದರೆ ಜೀವನ ಕೌಶಲ್ಯ, ಧೈರ್ಯ, ಛಲ ಮಾತ್ರ ಕಡಿಮೆ. ಇನ್ನು ಇತ್ತ ಮನೆಯಲ್ಲಿ ಹೊಲಗಳಿದ್ದರೂ ಮಾಡುವವರೇ ಇಲ್ಲ. ಕೃಷಿ ಕಾರ್ಯಕ್ಕೆ ಯಾರೂ ಸಿಗುವುದೇ ಇಲ್ಲ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಂಡಸಾಗರ ಗ್ರಾಮದ ಮಹಿಳೆಯೊಬ್ಬಳು ಗಂಡಸರನ್ನೂ ಮೀರಿಸುವಂತೆ ಕೃಷಿ ಕೆಲಸದಲ್ಲಿ ತೊಡಗಿದ್ದಾಳೆ. ಈ ಮೂಲಕ ಹೆಣ್ಣು ಎಲ್ಲದಕ್ಕೂ ಸೈ ಎಂದು ತೋರಿಸಿದ್ದಾಳೆ.ಗುಂಡಸಾಗರ ಗ್ರಾಮದ ಲಕ್ಷ್ಮವ್ವ ಪುರುಷರು ಹುಬ್ಬೇರಿಸುವಂತೆ ಕೃಷಿ ಕಾರ್ಯದಲ್ಲಿ ಸಾಧನೆ ಮಾಡಿದ್ದಾಳೆ. ಗಂಡನ ಮನೆಯವರು ಇವಳನ್ನು ಮನೆಯಿಂದ ಹೊರ ಹಾಕಿದ್ದರು. ಅಣ್ಣಂದಿರು ಕೂಡಾ ಆಸರೆ ನೀಡದಿದ್ದಾಗ ತಾಯಿ ಆಸರೆಯಲ್ಲಿ ಬದುಕು ಸಾಗಿಸುತ್ತಿರುವ ಈಕೆ ತನ್ನ ತಾಯಿ ಹೆಸರಿನಲ್ಲಿರುವ 2 ಎಕರೆ ಭೂಮಿಯಲ್ಲಿ ಯಾರ ಸಹಕಾರ ಇಲ್ಲದೇ ಸ್ವತಃ ಕೃಷಿಗೆ ನಿಂತಿದ್ದಾಳೆ. ಕೃಷಿ ಕಾರ್ಯಗಳಾದ ಮಡಿಕೆ, ಕುಂಟೆ, ಎಡೆ, ಬಿತ್ತನೆ, ರಾಶಿ ಮಾಡಿ…
ಉತ್ತರ ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗ ಆತಂಕಕಾಳಜಿ ಕೇಂದ್ರ ಕ್ಲೀನ್ ಕ್ಲೀನ್: ಪ್ರತಿಯೊಬ್ಬರಿಗೂ ಟೆಸ್ಟ್ ಉತ್ತರ ಕರ್ನಾಟಕ: ಮಳೆಯಿಂದ ಉಂಟಾಗಿರುವ ಪ್ರವಾಹದ ಬಳಿಕ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳನ್ನು ತಡೆ ಹಾಗೂ ಕರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಇದೀಗ ಸರ್ಕಾರಕ್ಕೆ ತಲೆನೋವಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಮಳೆ ನಿಲ್ಲುತ್ತಿಲ್ಲ. ಸಾವಿರಾರು ಜನ ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಇತ್ತ ಕರೋನಾ ಕಾಟ ಈಗ ಸರ್ಕಾರಕ್ಕೆ ಸಂಕಷ್ಟ ತಂದಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇತ್ತೀಚೆಗೆ ವಿಧಾನಸೌಧದಲ್ಲಿ ಪ್ರವಾಹಪೀಡಿತ ಬಾಗಲಕೋಟೆ, ವಿಜಯಪುರ, ಕಲುಬುರಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಮಾತನಾಡಿ, ಪ್ರವಾಹದಲ್ಲಿ ಸಿಲುಕಿದ್ದ, ಹಾನಿಗೊಳಗಾದ 55 ಗ್ರಾಮಗಳ 23,250 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 155, ವಿಜಯಪುರ ಜಿಲ್ಲೆಯಲ್ಲಿ 27 ಗ್ರಾಮ ಜಲಾವೃತವಾಗಿವೆ. ವಿಜಯಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಕಾಳಜಿ ಕೇಂದ್ರದಲ್ಲಿ ಶುದ್ಧವಾದ ಕುಡಿಯುವ ನೀರು, ನೀರಿನ ಘಟಕ ಇಲ್ಲದ ಕಡೆ ಬಿಸಿನೀರು ಕೊಡಲು…
ಮಹಾ ಮಳೆ ತಂದ ನಷ್ಟ: ಸರ್ಕಾರಕ್ಕೆ ಕಷ್ಟ ಕಷ್ಟಯಾದಗಿರಿ ಒಂದು ಜಿಲ್ಲೆಯಲ್ಲೇ 200 ಕೋಟಿ ನಷ್ಟ ಯಾದಗಿರಿ: ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ 15 ಸಾವಿರ ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಒಂದೇ ವರ್ಷದಲ್ಲಿ 3 ಬಾರಿ ಪ್ರವಾಹ ಬಂದು ಈ ಭಾಗದ ರೈತರನ್ನು ಹೈರಾಣಾಗಿಸಿದೆ. 5 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.ಬೆಳೆ ನಷ್ಟ ಮತ್ತು ಮನೆ ಬಿದ್ದಿರುವ ಕುರಿತು ಸಮೀಕ್ಷೆ ನಡೆದಿದೆ. ಪ್ರವಾಹ ನಿಂತ ನಂತರ ಹಾನಿ ಕುರಿತು ಸ್ಪಷ್ಟ ವರದಿ ಕೈಸೇರಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂದಾಜು ಮಾಹಿತಿ ನೀಡಿದ್ದಾರೆ. ಈ ವರದಿ ಅಂತಿಮವಲ್ಲ. ಸರ್ವೆ ನಂತರ ಹೆಚ್ಚಾಗಬಹುದು ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಸೇರಿದಂತೆ ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ…
ಹಳೆ ಕೃಷಿಗೆ ತಂತ್ರಜ್ಞಾನದ ತಳಕು…ರೈತರಿಗೆ ಹೊಸ ಬೆಳಕು!ಚಿತ್ರದುರ್ಗ, ರಾಯಚೂರು, ವಿಜಯಪುರದಲ್ಲಿ ಹೊಸ ಪ್ರಯತ್ನ ವಿಶೇಷ ವರದಿ: ಗುರುರಾಜ ಮಠ( ಉತ್ತರ ಕರ್ನಾಟಕ)ತಾಳಿಕೋಟೆ(ವಿಜಯಪುರ): ಟೆಕ್ನಾಲಜಿ ಬರೀ ಐಟಿಬಿಟಿ ಕಂಪನಿಗಳಿಗೆ ಅಷ್ಟೆ ಸೀಮಿತ ಅಲ್ಲ. ಅದೇ ತರಹ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡನೆ ಮಾಡುವ ಮೂಲಕ ಹೊಸ ಪ್ರಯೋಗ ಮಾಡಲಾಯಿತು.ಡ್ರೋನ್ ಮೂಲಕ ತಾಳಿಕೋಟಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಕೃಷಿ ಇಲಾಖೆ ವಿಜಯಪುರ, ವರ್ಷ ಅಸೋಶಿಯೇಶನ್ ಚಿತ್ರದುರ್ಗ ಹಾಗೂ ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರ ಸಹಯೋಗದಲ್ಲಿ ಡ್ರೋನ್ ಮೂಲಕ ಜಮೀನಿಗೆ ಔಷಧಿ ಸಿಂಪಡಿಸುವ ವಿಧಾನದ ಮಾಹಿತಿ ಮತ್ತು ಪ್ರಾತ್ಯಕ್ಷಿಕತೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಗ್ರಾಮದ ರೈತರಿಗೆ ತಿಳಿಸಿದರು. ಈ ಮೂಲಕ ತಂತ್ರಜ್ಞಾನದ ಬಳಕೆ ಜಾಗೃತಿ ಮೂಡಿಸಿದರು. ಡ್ರೋನ್ ಮೂಲಕ ಔಷದ ಸಿಂಪಡಣೆ ವಿಧಾನ ಹೇಗೆ?: ಒಂದು ಡ್ರೋನ್ 10, 15&20 ಲೀಟರ್ ಸಾಮಥ್ರ್ಯ ಹೊಂದಿದ್ದು, ಸಣ್ಣ ಕಣದಲ್ಲಿ ಸಿಂಪಡಣೆ ಆಗುತ್ತದೆ, 1 ಎಕರೆ ಜಮೀನಿಗೆ ಸುಮಾರು…
ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ಸಾರ್ಥಕ ಕೆಲಸರಂಗ ಕಲಾವಿದರು ಅಪ್‍ಡೇಟ್ ಆಗದಿದ್ದರೆ ಕಷ್ಟ ಕಟ್ಟಿಟ್ಟಬುತ್ತಿ ವರದಿ: ಮಹೇಂದ್ರಹುಬ್ಬಳ್ಳಿ: ಕರೋನಾ ಮತ್ತು ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಂಗಭೂಮಿ ಕಲಾವಿದರಿಗೆ ನೆರವಾಗಲು ರಂಗಕರ್ಮಿ ಹಾಗೂ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ವೀರ್ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಈ ಕಲಾವಿದರ ನೆರವಿಗೆ ಬರಬೇಕೆಂಬ ಕೂಗಿನ ನಡುವೆ ಸುಷ್ಮಾ ಅವರ ಈ ಹಾದಿ ಕಲಾವಿದರಿಗೆ ಬಲ ತಂದಿದೆ.ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜತೆ ಇತ್ತೀಚೆಗೆ ಮಾತನಾಡಿದ ಸುಷ್ಮಾ ಕೋವಿಡ್‍ನಿಂದಾಗಿ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದಿದೆ. ಅನೇಕರಿಗೆ ಸರ್ಕಾರ ನೆರವಾಗಿದೆ. ಎಲ್ಲರಿಗೂ ಸರ್ಕಾರವೇ ನೆರವಾಗಬೇಕು ಎಂದು ಕಾಯುತ್ತಿದ್ದರೆ ಆಗುವುದಿಲ್ಲ. ಆದ್ದರಿಂದ ಸ್ವಂತ ಖರ್ಚಿನಿಂದ ಕಲಾವಿದರಿಗೆ ನೆರವಾಗುತ್ತಿದ್ದೇನೆ. ರಾಜ್ಯದಲ್ಲಿ 600ರಿಂದ 700 ಕಲಾವಿದರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಅರೋಗ್ಯದ ಸಂಪೂರ್ಣ ಖರ್ಚು ನಾನು ನೋಡಿಕೊಳ್ಳುತ್ತಿದ್ದೇನೆ. ಅವರಿಗೆ ಆರೋಗ್ಯ ಕಾರ್ಡ್ ನೀಡುತ್ತೇವೆ’ ಎಂದಿದ್ದಾರೆ. ಈ ಮೂಲಕ ಎಲ್ಲಾ ಕಲಾವಿದರಿಗೂ ಮಾದರಿಯಾಗಿದ್ದಾರೆ.ನಾನು ಕೋಟಿ ಕೋಟಿ ಇಟ್ಟಿಲ್ಲ!: ಎಲ್ಲರಿಗೂ ನೆರವು…
ವರ್ಷವಾದರೂ ಪತ್ತೆಯಾಗದ ಸ್ಫೋಟದ ಆರೋಪಿಗಳು”ನೋ ಬಿಜೆಪಿ, ನೋ ಆರ್‍ಎಸ್‍ಎಸ್” ಬರೆದಿದ್ದ ಬರಹ ಪತ್ತೆ! ಹುಬ್ಬಳ್ಳಿ: ಹುಬ್ಬಳ್ಳಿ ನಗರದ ರೈಲು ನಿಲ್ದಾಣದ ಮೊದಲ ಪ್ಲಾಟ್ ಫಾರ್ಮ್‍ನಲ್ಲಿ ನಿಗೂಢ ವಸ್ತು ಸ್ಪೋಟಗೊಂಡು ಅ.21ಕ್ಕೆ ಒಂದು ವರ್ಷವಾದರೂ ಆರೋಪಿಗಳ ಪತ್ತೆಯಾಗಿಲ್ಲ. ಸ್ಫೋಟಕ ವಸ್ತು ಇದ್ದ ಪ್ಲಾಸ್ಟಿಕ್ ಬಕೆಟ್ ಮೇಲೆ “ನೋ ಬಿಜೆಪಿ, ನೋ ಆರ್‍ಎಸ್‍ಎಸ್” ಎಂದು ಬರೆಯಲಾಗಿತ್ತು. ಸ್ಪೋಟದಿಂದ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಲಗೈ ಸುಟ್ಟು ಕರಕಲಾಗಿತ್ತು. ಆದರೂ ಈಕಡಿಮೆ ತೀವ್ರತೆಯ ಸ್ಫೋಟಕ ಹೊಂದಿದ್ದ, ಹಂದಿಗಳ ಹಾವಳಿ ತಪ್ಪಿಸಲು ಬಳಸುವ ಫೀಲ್ಡ್ ಬಾಂಬ್ ಸ್ಫೋಟವಾಗಿತ್ತು ಎನ್ನುವುದು ತನಿಖೆಯ ಬಳಿಕ ಪತ್ತೆಯಾಗಿತ್ತು. ಆದರೆ, ಘಟನೆಗೆ ಕಾರಣರಾದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಇನ್ನೂ ಆಗಿಲ್ಲ.ರೈಲ್ವೆ ಪೆÇಲೀಸ್ ವರಿಷ್ಠಾಧಿಕಾರಿ ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಸ್ಫೋಟದ ತನಿಖೆಗಾಗಿ ನಮ್ಮ ತಂಡ ಹಲವು ಬಾರಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದೆ. ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಕೈಬಿಟ್ಟಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ’ ಎಂದಿದ್ದಾರೆ.